ಪ್ರೊ. ರಾಬರ್ಟ್ ಎಡ್ವರ್ಡ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Robert-G-Edwards.jpg
'ಪ್ರೊ. ರಾಬರ್ಟ್ ಎಡ್ವರ್ಟ್ಸ್'

'ಪ್ರನಾಳ ಶಿಶು ತಂತ್ರಜ್ಞಾನ'ದಲ್ಲಿ ಮಹತ್ವದ ಸಾದನೆಮಾಡಿದ ಬ್ರಿಟನ್ ನ ’ಪ್ರೊ. ರಾಬರ್ಟ್ಸ್ ಎಡ್ವರ್ಡ್ಸ್’ ಅವರಿಗೆ ವೈದ್ಯಕೀಯ ಶಾಸ್ತ್ರರಲ್ಲಿ '೨೦೧೦ ರ ನೋಬೆಲ್ ಪ್ರಶಸ್ತಿ'ಯನ್ನು ನೀಡಲಾಗಿದೆ. ಅವರ ಈ ಸಾಧನೆಯು ವಿಶ್ವದಾದ್ಯಂತ ಲಕ್ಷಾಂತರ ಮಂದಿ 'ಕೃತಕ ಗರ್ಭಧಾರಣೆ'ಯಿಂದ ಮಕ್ಕಳನ್ನು ಪಡೆಯಲು ನೆರವಾಗಿದೆ. ’ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ೮೫ ರ ಹರೆಯದ ಪ್ರೊಫೆಸರ್ ರಾಬರ್ಟ್ ಎಡ್ವರ್ಡ್ಸ್' ರವರು, ’ಇನ್ ವಿಟ್ರೊ ಫರ್ಟಿಲೈಸರ್’ಐವಿಎಫ್ ತಂತ್ರಜ್ಞಾನ’ ವನ್ನು ಬಳಸಿ ಯಶಸ್ಸನ್ನು ಹಾಸಿಲ್ ಮಾಡಿದ್ದಾರೆ. 'ಪ್ರೊ. ರಾಬರ್ಟ್ ಎಡ್ವರ್ಡ್ಸ್' ಸ್ವಲ್ಪಕಾಲದಿಂದ ಅಸ್ವಸ್ಥರಾಗಿದ್ದುದರಿಂದ ಅವರಿಗೆ ಮಾಧ್ಯಮದ ಜೊತೆ ಮಾತನಾಡಲು ಸಾಧ್ಯವಾಗಿರಲಿಲ್ಲ.

’ಐವಿಎಫ್ ತಂತ್ರಜ್ಞಾನ’[ಬದಲಾಯಿಸಿ]

ಚಿತ್ರ:First Test tube baby.jpg
'ವಿಶ್ವದ ಮೊಟ್ಟಮೊದಲ ಟೆಸ್ಟ್ ಟ್ಯೂಬ್ ಮಗು'

'ಐವಿಎಫ್ ತಂತ್ರಜ್ಞಾನ' ದ, ಪ್ರಯೋಗವನ್ನು 'ಪ್ರೊ. ಎಡ್ವರ್ಡ್ಸ್' ಮತ್ತು 'ಪ್ಯಾಟ್ರಿಕ್ ಸ್ಟೆಪ್ಟೋ' ೧೯೫೦ ರ ದಶಕದಲ್ಲಿಯೇ ಆರಂಭಿಸಿ, ಈ ತಂತ್ರವನ್ನು 'ಪ್ರಸೂತಿ ತಜ್ಞ'ರಾದ ’ಪ್ಯಾಟ್ರಿಕ್ ಸ್ಟೆಪ್ಟೋ’ ರವರ ಜೊತೆಗೂಡಿ ಕಂಡುಹಿಡಿದಿದ್ದರು. ಆದರೆ 'ಪ್ಯಾಟ್ರಿಕ್ ಸ್ಟೆಪ್ಟೋ' ರವರು, ೧೯೮೮ ರಲ್ಲಿ ನಿಧನ ಹೊಂದಿದ್ದರು. ಇದುವರೆವಿಗೂ, ನೋಬೆಲ್ ಪಾರಿತೋಷಕವನ್ನು ವ್ಯಕ್ತಿಯ ಮರಣಾನಂತರ ಕೊಡುವ ಪದ್ಧತಿಯಿಲ್ಲದಿರುವುದರಿಂದ ಪ್ರೊ ಎಡ್ವರ್ಡ್ಸ್ ರವರಿಗೇ ೨೦೧೦ ರ '೧.೫ ಮಿಲಿಯನ್ ಡಾಲರ್ ಪ್ರಶಸ್ತಿ'ಪೂರ್ತಿಯಾಗಿ ದೊರೆಯಲಿದೆ.

'ಭ್ರೂಣ ಕೋಶಗಳನ್ನು' ದೇಹದಿಂದ ಹೊರಗೆ 'ಫಲವಂತಿಕೆ'ಗೊಳಿಸುವ ಅನನ್ಯ ವಿಧಾನ[ಬದಲಾಯಿಸಿ]

ಈ ವಿಧದಲ್ಲಿ 'ಭ್ರೂಣ ಕೋಶಗಳನ್ನು' ದೇಹದಿಂದ ಹೊರಗೆ 'ಫಲವಂತಿಕೆ' ಗೊಳಿಸಲಾಗುತ್ತದೆ. ಬಳಿಕ ಅವುಗಳನ್ನು ಗರ್ಭದಲ್ಲಿ ಇರಸಲಾಗುತ್ತದೆ. ಜುಲೈ, ೨೫, ೧೯೭೮ ರಲ್ಲಿ 'ಬ್ರಿಟನ್ ನ ಲೂಯಿಸ್ ಬ್ರೌನ್',(Louise Brown), 'ಪ್ರನಾಳ ಶಿಶು ತಂತ್ರಜ್ಞಾನದ ಮೂಲಕ ಜನಿಸಿದ ಮೊದಲ ಮಗುವಾಗಿದ್ದಾರೆ'. ಅವರಿಗೆ ಈಗ ಒಂದು ಮಗು ಹುಟ್ಟಿದೆ. ಆರೋಗ್ಯವಾಗಿದೆ. ಇದು 'ಗರ್ಭಧಾರಣೆಯ ಚಿಕಿತ್ಸೆಯಲ್ಲಿ ಕ್ರಾಂತಿಯನ್ನೇ ಮಾಡಿತು'.

ಮಕ್ಕಳಿಲ್ಲದ ದಂಪತಿಗಳಿಗೆ ಸಂತಸ[ಬದಲಾಯಿಸಿ]

ವಿಶ್ವದ ದಂಪತಿಗಳಲ್ಲಿ ಶೇ. ೧೦% ರಷ್ಟು ಇರುವ ಬಂಜೆತನಕ್ಕೆ ಚಿಕಿತ್ಸೆ ನೀಡುವುದನ್ನು 'ಎಡ್ವರ್ಡ್ಸ್' ರವರ ಯಶಸ್ಸು ಸಾಧ್ಯವಾಗಿಸಿದೆ, ಎಂದು 'ನೋಬೆಲ್ ಪ್ರಶಸ್ತಿ ಸಮಿತಿ' ತಿಳಿಸಿದೆ. ಎಡ್ವರ್ಡ್ಸ್ ರವರ ಈ ಪ್ರಯತ್ನಗಳು ಆಧುನಿಕ ವೈದ್ಯಕೀಯ ವಲಯದಲ್ಲಿ ಒಂದು ಮೈಲುಗಲ್ಲೆಂದು ಪರಿಗಣಿಸಲಾಗಿದೆ. ಪ್ರೊ. ಎಡ್ವರ್ಡ್ಸ್ ರವರಿಗೆ ತಮ್ಮ ಕೆಲಸದಲ್ಲಿ ಸಮಾಧಾನ ಹುಟ್ಟಿದೆ ಮತ್ತು ಅವರ ಹಲವು ವರ್ಷಗಳ ಕನಸು ನನಸಾಗಿದೆ. ಒಟ್ಟಿನಲ್ಲಿ ಈ ಹೊಸ 'ತಂತ್ರಜ್ಞಾನ', ವಿಶ್ವದ ಮಕ್ಕಳಿಲ್ಲದ ದಂಪತಿಗಳಿಗೆ ಸಂತಸ ತಂದಿದೆ.