ನಿರ್ದೇಶಿಸುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪೀಠಿಕೆ[ಬದಲಾಯಿಸಿ]

ನಿರ್ದೇಶನವು ನಿರ್ವಹಣೆಯ ಮತ್ತೊಂದು ಪ್ರಮುಖ ಅಂಶವಾಗಿದೆ.ಇದು ನಿರ್ವಹಣೆಯ ಸಮಗ್ರ ಪರಿಶ್ರಮವಾಗಿದ್ದು,ಪೂರ್ವನಿರ್ಧರಿತ ಉದ್ದೇಶಗಳ ಈಡೇರಿಕೆಗೆ ಸಂಸ್ಥೆಯನ್ನು ಕೊಂಡೊಂಯ್ಯುತ್ತದೆ.ಇದು ನಿರ್ವಹಣೆಯ ಪ್ರತಿಯೊಂದು ಕಾರ್ಯಗಳಿಗೆ ಬಹುಮುಖ್ಯವಾಗಿದೆ.ನಿರ್ವಾಹಕನು ಸೂಕ್ತ ಮಾರ್ಗದರ್ಶನ ನೀಡುವ ತನಕ ಸಂಸ್ಥೆಯ ಕಾರ್ಯಗಳು ಪ್ರಾರಂಭವಾಗುವುದಿಲ್ಲಾ.ಅಧೀನರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಮತ್ತು ಅವರ ಕಾರ್ಯವೈಖರಿಯನ್ನು ಮೇಲ್ವಿಚಾರಣೆ ನಡೆಸುವುದು ನಿರ್ದೇಶನದ ಭಾಗವಾಗಿದೆ.

ಅರ್ಥ[ಬದಲಾಯಿಸಿ]

ನಿರ್ದೇಶಿಸುವುಕೆಯು ನಿರ್ವಹಣೆಯ ಪ್ರಮುಖ ಕಾರ್ಯವಾಗಿದ್ದು,ಸಂಸ್ಥೆಯ ಸದಸ್ಯರ ನಿರ್ವಹಣೆಗೆ ಸಂಬಂದಿಸಿದೆ.ಯೋಜಿಸುವಿಕೆ,ಸಂಘಟಿಸಿವಿಕೆ ಮತ್ತು ಸಿಬ್ಬಂದಿ ನೇಮಕಾತಿ ಜೊತೆಗೆ ನಿರ್ವಾಹಕನು ತನ್ನ ಅಧೀನ ಅಧಿಕಾರಿಗಳನ್ನು ನಿರ್ದೇಶಿಸಬೇಕು.ಆದ್ದರಿಂದ ನಿರ್ದೇಶಿಸುವುಕೆಯ ಕಾರ್ಯಪ್ರಧಾನ ಮತ್ತು ನೇತೃತ್ವದ ಕಾರ್ಯವಾಗಿದೆ.

ವ್ಯಾಖ್ಯೆಗಳು[ಬದಲಾಯಿಸಿ]

  • ಕೂಂಟ್ಜ್ ಮತ್ತು ಒ'ಡೊನೆಲ್ ಅವರ ಪ್ರಕಾರ "ನಿರ್ದೇಶನವು ಅಧೀನ ಅಧಿಕಾರಿಗಳಲ್ಲಿ ತಿಳುವಳಿಕೆ ಮೂಡಿಸುವುದು ಮತ್ತು ಅತ್ಯಂತ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುವ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡಿದೆ."

ನಿರ್ದೇಶಿಸುವುಕೆಯ ಪ್ರಾಮುಖ್ಯತೆ[ಬದಲಾಯಿಸಿ]

೧. ಕ್ರಿಯಾ ಪ್ರಾಧಾನ್ಯತೆ ನಿರ್ದೇಶಿಸುವಿಕೆಯು ಕಾರ್ಯ ಪ್ರಧಾನವಾಗಿದೆ.ಇದು ಅಧಿಕಾರ ನೀಡುವ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸುವುದನ್ನು ಒಳಗೂಂಡಿದೆ. ೨. ಪರಿಶ್ರಮ/ಪ್ರಯತ್ನಗಳನ್ನು ಒಗ್ಗೂಡಿಸುವುದು ನಿರ್ದೇಶಿಸುವಿಕೆಯು ಸರಿಯಾದ ಅಧಿಕಾರ ನೀಡುವಿಕೆ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸುವ ಮೂಲಕ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರ ಪ್ರಯತ್ನಗಳನ್ನು ಒಗ್ಗೂಡಿಸುತ್ತದೆ.ಇದು ಸಂಸ್ಥೆಯ ಧ್ಯೇಯಗಳನ್ನು ಸಾಧಿಸಲು ಸಹಾಯವಾಗುತ್ತದೆ. ೩. ಸಂಪನ್ಮೂಲಗಳ ಸದ್ಬಳಕೆ ನಿರ್ದೇಶಿಸುವುಕೆಯು ಕಾರ್ಯನಿರ್ವಹಿಸಲು ಸರಿಯಾದ ವಿಧಾನಗಳನ್ನು ಜಾರಿಗೊಳಿಸುತ್ತದೆ.ಇದರಿಂದಾಗಿ ಸಂಪನ್ಮೂಲಗಳನ್ನು ಸರಿಯಾಗಿ ಮತ್ತು ಹೆಚ್ಚು ದಕ್ಷತೆಯಿಂದ ಬಳಕೆ ಮಾಡಲು ಸಹಾಯವಾಗುತ್ತದೆ. ೪. ಅವಶ್ಯಕ ಅಂಶ ನಿರ್ದೇಶಿಸುವುಕೆಯು ಪರಿಣಾಮಕಾರಿ ಮೇಲ್ವಿಚಾರಣೆ,ಪ್ರೋತ್ಸಾಹ,ನಾಯಕತ್ವ ಮತ್ತು ಸಂವಹನಗಳಿಗೆ ಅವಶ್ಯಕವಾಗಿದೆ. ೫. ದಕ್ಷತೆ ಸೂಕ್ತ ನಿರ್ದೇಶನವು ಅತ್ಯುತ್ತಮವಾಗಿ ಕೆಲಸ ನಿರ್ವಹಿಸಲು ಸಹಾಯವಾಗುತ್ತದೆ.ನಿರ್ದೇಶನವು ಕೆಲಸದ ಬಗ್ಗೆ ಸ್ಪಷ್ಟತೆಯನ್ನು ಹೊಂದಿರುವುದರಿಂದ ದಕ್ಷತೆಯನ್ನು ಸಾಧಿಸಬಹುದು. ೬. ನಮನೀಯತೆ ನಿರ್ದೇಶಿಸುವಿಕೆಯು ಸಂಸ್ಥೆಯಲ್ಲಿ ನಮ್ಯತೆಯನ್ನು ತರಲು ಸಹಕರಿಸುತ್ತದೆ.ನಿರ್ವಹಣೆಯು,ಭವಿಷ್ಯದಲ್ಲಿ ಜಾರಿಗೊಳಿಸುವ ಬದಲಾವಣೆಗಳನ್ನು ಒಪ್ಪಿಕೊಳ್ಳುವಂತೆ ಅಧೀನರನ್ನು ಮನವೊಲಿಸುತ್ತದೆ. ೭. ಸ್ಪಷ್ಟತೆ ನಿರ್ದೇಶಿಸಿವಿಕೆಯು ಅಧಿಕಾರ ಮತ್ತು ಜವಾಬ್ದಾರಿಗಳ ನಡುವೆ ಸ್ಪಷ್ಟತೆ ಮೂಡಿಸುತ್ತದೆ.ಇದರಿಂದಾಗಿ ಕೆಲಸದಲ್ಲಿ ಅಸ್ಪಷ್ಟತೆಯನ್ನು ಕನಿಷ್ಠಗೊಳಿಸಬಹುದು. ೮. ಶಿಸ್ತು ಸಂಸ್ಥೆಯ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯಲು ಅನುಕೂಲವಾಗುವ ರೀತಿಯಲ್ಲಿ ಶಿಸ್ತನ್ನು ಕಾಪಾಡಬಹುದು. ೯. ಸಮನ್ವಯತೆ ನಿರ್ದೇಶನವು ಸಂಸ್ಥೆಯ ವಿವಿಧ ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತದೆ. ೧೦. ಉತ್ತಮ ನಾಯಕರ ಸೃಷ್ಟಿ ಉತ್ತಮ ನಿರ್ದೇಶನವು ಉತ್ತಮ ನಾಯಕರುಗಳನ್ನು ಸೃಷ್ಟಿಸುತ್ತದೆ.

ನಿರ್ದೇಶನದ ಅಂಶಗಳು[ಬದಲಾಯಿಸಿ]

  1. ಅಧಿಕಾರ ನೀಡಿಕೆ
  2. ಮೇಲ್ವಿಚಾರಣೆ
  3. ನಾಯಕತ್ವ
  4. ಪ್ರೇರೇಪಣೆ
  5. ಸಂವಹನ
  6. ಸಮನ್ವಯತೆ