ನಂದಿನಿ ವಿಠಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಟಿ. ಎನ್. ಸೀತಾರಾಂ' ನಿರ್ದೇಶಿತ, ಟೆಲಿವಿಶನ್ ಪ್ರಸಾರಿತ 'ಮುಕ್ತಾ ಮುಕ್ತಾ' ಕನ್ನಡ ಧಾರಾವಾಹಿಯಲ್ಲಿ 'ದೇವಯಾನಿ' ಅಭಿನಯಿಸಿ 'ನಂದಿನಿ ವಿಠಲ್' ಹೆಸರಾಗಿದ್ದಾರೆ. ಮೊದಲನೆಯ ದೇವಯಾನಿಯ ಪಾತ್ರಧಾರಿ ಬಿಟ್ಟು ಹೋದಮೇಲೆ ನಿರ್ವಹಿಸಲು ಬಂದು ಸಮರ್ಪಕವಾಗಿ ಅಭಿನಯಿಸಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. 'ಶಾಂತಲಾ ಕಾಮತ್' ಆ ಪಾತ್ರಕ್ಕೆ ಹೇಳಿಮಾಡಿಸಿದಂತ್ತಿದ್ದರು. ಸಕಾರಾತ್ಮಕ ಪಾತ್ರಗಳಿಗೆ ಹೊಂದಬಹುದಾದ ನಂದಿನಿ ವಿಠಲ್ ರ ಮುಖ ಭಾವ, ಕೆಟ್ಟ ಹೆಂಗಸಿನ ಪಾತ್ರಕ್ಕೆ ಸರಿಹೋಗುವ ಬಗ್ಗೆ ಆತಂಕವಿತ್ತು. ಆದರೆ ಟೆಲಿವಿಶನ್ ವೀಕ್ಷಕರು ಬೇಗ ಹೊಸ ಪಾತ್ರಧಾರಿಯನ್ನು ಸ್ವೀಕರಿಸಿದರು. ಮೊದಲು ಮುಕ್ತಾ ಮುಕ್ತಾ ಧಾರಾವಾಹಿಗೆ ಪಾದಾರ್ಪಣೆ ಮಾಡಿದಾಗ ನಿರ್ದೇಶಕ ಸೀತಾರಾಂರವರಿಂದ ಹೇಳಿಸಿಕೊಳ್ಳುವ ಪ್ರಮೇಯ ಒದಗಿತು. ಕ್ರಮೇಣ ನಟನೆಯಲ್ಲಿ ನಂದಿನಿ ವಿಠಲ್ ಪ್ರಭುತ್ವವನ್ನು ಗಳಿಸಿಕೊಂಡು ನಿರ್ದೇಶಕರ ನಂಬಿಕೆಗೆ ಪಾತ್ರರಾದರು.

ಧಾರಾವಾಹಿಗಳಲ್ಲಿ ಚಲನಚಿತ್ರಗಳಲ್ಲಿ ಅಭಿನಯ[ಬದಲಾಯಿಸಿ]

  • 'ಮುಂಬೆಳಕು,' ಧಾರಾವಾಹಿ.
  • 'ಮುಂಜಾವು,' ಧಾರಾವಾಹಿ.
  • 'ಮಣಿಕಂಠ ಮಹಿಮೆ'-ಚಲನಚಿತ್ರ.
  • 'ದುರ್ಗಾಪೂಜೆ'-ಚಲನಚಿತ್ರ.

'ಅಮ್ಮ ನಿನಗಾಗಿ', ಧಾರಾವಾಹಿಯಲ್ಲಿ 'ಪ್ರಜ್ಞಾ' ಎಂಬ ಹುಡುಗಿಯ ಸಂಕೀರ್ಣ ಪಾತ್ರ ದೊರೆತಿದೆ ಸಂಜೆ ೬-೩೦ಕ್ಕೆ ಪ್ರಸಾರವಾಗುವ ಈ ಧಾರಾವಾಹಿ ಮಹಿಳೆಯರಿಗೆ ಬಹಳ ಪ್ರಿಯವಾಗಿದೆ ಆದರೆ ೯-೩೦ ರ ಪ್ರಮುಖ ಸಮಯದಲ್ಲಿ ಮುಕ್ತ ಪ್ರಸಾರವಾಗುತ್ತಿದ್ದುದರಿಂದ ಮಹಿಳೆಯರಲ್ಲಿ ಬೇರೆ ವರ್ಗದ ವೀಕ್ಷರೂ ನೋಡಲು ಅವಕಾಸವಿತ್ತು. ಅದೊಂದು 'ಮಾಸ್ ಧಾರವಾಹಿ' ಎನ್ನುವ ಅಭಿಪ್ರಾಯ ಬಂದಿತ್ತು. ಅದರ ಮರುಪ್ರಸಾರ ರಾತ್ರಿ ೧೧ ರ ಬಳಿಕ ಮತ್ತು ಸಂಜೆ ಇರುತ್ತಿತ್ತು. 'ಚಿತ್ರಲೇಖ' ವೆನ್ನುವ ಮತ್ತೊಂದು ಧಾರಾವಾಹಿ ಕೆಲವೇ ದಿನ ಪ್ರಸಾರವಾದರೂ ಒಳ್ಳೆಯ ಪಾತ್ರವಾಗಿತ್ತು.

'ಮುಕ್ತಾ ಮುಕ್ತಾ' ಧಾರವಾಹಿಯ ಜನಪ್ರಿಯತೆ[ಬದಲಾಯಿಸಿ]

'ದೇವಯಾನಿಯ ಪಾತ್ರ'ವನ್ನು ನೋಡಿದ ಗುಂಗಿನಲ್ಲಿರುವ ಜನ ಬೇರೆ ಪಾತ್ರಗಳನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಅದಕ್ಕಾಗಿ ನಂದಿನಿ, ಹೆಚ್ಚು ಧಾರಾವಾಹಿಗಳಿಗೆ ಸಹಿ ಹಾಕಿಲ್ಲ. ಪ್ರಭಾವೀ ಪಾತ್ರಗಳು ಕಡಿಮೆ ಸಂಖ್ಯೆಯಲ್ಲಿ ದೊರೆತರೂ ಸರಿ. 'ನಂದಿನಿ ವಿಠಲ್' ಈಗ ಮದುವೆಯಾಗಿದ್ದಾರೆ. ಸಧ್ಯಕ್ಕೆ ಅವರ ಪ್ರಮುಖ ಆದ್ಯತೆ, ಕುಟುಂಬದ ಕಡೆ ಹೆಚ್ಚು ಗಮನ ಕೊಡುವುದು.

ಪರಿವಾರ[ಬದಲಾಯಿಸಿ]

ತಂದೆ, 'ವಿಠಲ್', ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಅಧಿಕಾರಿ. ತಾಯಿ. 'ಇಂದ್ರಾಣಿ', ನಟಿ, ಹಾಗೂ ಲೇಖಕಿ. 'ನಂದಿನಿ ವಿಠಲ್', ಹೆಸರಾಂತ ಸಾಹಿತಿ, 'ವಿಜಯ ನಾರಸಿಂಹ'ರ ಮೊಮ್ಮಗಳು. ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿ ಶಾಲಾ ಕಾಲೇಜ್ ಗಳಲ್ಲಿ ಕೆಲವು ಬಾರಿ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ತೆರೆಯಮೇಲೆ ಬಂದಾಗ ಕಲಿತದ್ದು ಹೆಚ್ಚು. ಪತಿ 'ವಲ್ಲಿಶ್', ವೃತ್ತಿಯಲ್ಲಿ ಇಂಜಿನಿಯರ್ ಅತ್ಯಂತ ವಿಶಾಲ ಮನೋಭಾವವುಳ್ಳ ವರು. ಅವರ ಸಹಕಾರದಿಂದನಂದಿನಿಯವರ ಅಭಿನಯ ಕೃಷಿ, ಮುಂದುವರೆದಿದೆ

ಆರ್ಕೆಸ್ಟ್ರಾ ಗಳಲ್ಲಿ ಪಾಲ್ಗೊಂಡಿದ್ದರು[ಬದಲಾಯಿಸಿ]

ಟೆಲಿವಿಶನ್ ನಲ್ಲಿ ಕಾಣಿಸಿಕೊಳ್ಳುವ ಮೊದಲು, ವೃತ್ತಿ ಗಾಯನ ತಂಡಗಳಲ್ಲಿ (Orchestra) ಹಾಡಲು ಹೋಗುತ್ತಿದ್ದರು. ಈಗ ಅತಿಥಿ ಹಾಡುಗಾರಳಾಗಿ ಹೋಗುವ ಅವಕಾಶ ಒದಗಿದೆ 'ಮಿಮಿಕ್ರಿ' ಮಾಡುವ ಕಲೆಯೂ ಗೊತ್ತಿದೆ ; ಕೆಲವು ನಟಿಯರಿಗೆ ಕಂಠದಾನವನ್ನೂ ಮಾಡಿದ ಅನುಭವವಿದೆ.