ವಿಷಯಕ್ಕೆ ಹೋಗು

ದೇವಿತಾ ಸರಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವಿತಾ ಸರಫ್

ಭಾರತದ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು. ಇವರು ವಿಯು. ತಂತ್ರಜ್ಞಾನದ ಸ್ಥಾಪನೆಗೆ ಹೆಸರುವಾಸಿ.ಅಲ್ಲಿ ಅವರು ಸಿ.ಇ.ಒ.ಮತ್ತು ವಿನ್ಯಾಸರಚನ ಮುಖ್ಯಾಸ್ಥರಾಗಿದ್ದರು. ಅಲ್ಲದೆ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಝೆನಿತ್ ಗಣಕತಂತ್ರ ಮತ್ತು ಇನ್ಫೊಟೆಕ್ ಲಿಮಿಟೆಡ್ ನ ಪ್ರಾಯೋಜಕರಾಗಿದ್ದರು.

ಪ್ರಾರಂಭಿಕ ಜೀವನ

[ಬದಲಾಯಿಸಿ]

ಸರಫ್ ಅವರು ಮುಂಬೈಯ ವಾಣಿಜ್ಯ ಕುಟುಂಬದಲ್ಲಿ ಜನಿಸಿದರು.ಅವರ ತಂದೆ ರಾಜಕುಮಾರ ಸರಫ್ ಝೆನಿತ್ ಗಣಕತಂತ್ರದಲ್ಲಿ ಅದ್ಯಕ್ಷರಾಗಿದ್ದರು[]. ಅವರು ಮುಂಬೈ Archived 2018-10-05 ವೇಬ್ಯಾಕ್ ಮೆಷಿನ್ ನಲ್ಲಿ. ನ ಕ್ವೀನ್ ಮೇರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಶಣವನ್ನು ಮುಗಿಸಿದರು[]. ನಂತರ ಎಚ್. ಆರ್. ವಾಣಿಜ್ಯ ಮತ್ತು ಆರ್ಥಿಕ ಕಾಲೇಜಿನಲ್ಲಿ ಶಿಕ್ಶಣ ಮುಗಿಸಿದರು.ದಕ್ಶಿಣದ ಕ್ಯಾಲಿರ್ಫೋನಿಯಾ ವಿಶ್ವವಿದ್ಯಾನಿಲಯದಲ್ಲಿ ಬ್ಯಾಚುಲರ್ ಆಫ್ ವ್ಯವಹಾರ ಆಡಳಿತದಲ್ಲಿ ಪದವಿ ಪಡೆದರು[].


ವೃತ್ತಿ ಜೀವನ

[ಬದಲಾಯಿಸಿ]

ಝೆನಿತ್

[ಬದಲಾಯಿಸಿ]

ಸರಫ್ ತಮ್ಮ ೧೬ನೇ ವಯಸ್ಸಿನಲ್ಲಿ ತಂದೆಯ ಮಾರ್ಗದರ್ಶನದಲ್ಲಿ ಝೆನಿತ್ ಗಣಕತಂತ್ರದಲ್ಲಿ ವೃತ್ತಿ ಬದುಕನ್ನು ಪ್ರಾರಂಭಿಸಿದರು.ಅಲ್ಲಿ ೨೧ ವಯಸ್ಸಿಗೆ ಮಾರ್ಕೆಟಿಂಗ್ ನಿರ್ದೇಶಕ ಆದರು.೨೦೦೬ದ ಇಸವಿಯಲ್ಲಿ ಮಾರ್ಕೆಟಿಂಗ್ ಸಿ. ಇ.ಒ. ಆಗಿ ಕಾರ್ಯ ನಿರ್ವಹಿಸಿದರು. ಕುಮಾರಿ ಸರಫ್, ಅವಳ ತಂದೆ ಹಾಗೂ ಝೆನಿತ್ ಇನ್ಫೊಟೆಕ್ ಲಿಮಿಟೆಡ್ ಕಂಪೆನಿಯ ಎಲ್ಲ ಪ್ರಾಯೋಜಕರ ಮೇಲೆ ಬ್ಯಾಂಕ್ ಆಫ್ ನ್ಯೂಯಾರ್ಕ್, ಮೆಲಾನ್ ಇವರು ಬೊಂಬಾಯಿ (ಈಗಿನ ಮುಂಬೈ) ಉಚ್ಛ ನ್ಯಾಯಲಯದಲ್ಲಿ ಹೂಡಿದ ಮೊಕದ್ದಮೆಯಲ್ಲಿ ಕಂಪೆನಿಯ ನಿಧಿಯನ್ನು ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿದ ಬಗ್ಗೆ ದೋಷಿಗಳನ್ನಾಗಿಸಿ, ಇವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಬಿ.ಐ.ಎಫ್.ಆರ್.(ಬೋರ್ಡ್ ಆಫ್ ಇಂಡಸ್ಟ್ರಿಯಲ್ ರಿಕನ್ಸ್ಟ್ರಕ್ಷನ್, ಭಾರತ ಸರ್ಕಾರ) ಇವರಿಗೆ ನಿರ್ದೇಶಿಸಿದೆ.[]

ವಿ.ಯು. ತಂತ್ರಜ್ಞಾನ

[ಬದಲಾಯಿಸಿ]

೨೪ನೇ ವಯಸ್ಸಿಗೆ,ವಿ.ಯು. ತಂತ್ರಜ್ಞಾನ ಪ್ರಾರಂಭಿಸಿದರು.ಅದು ಉನ್ನತ ಮಟ್ಟದ ಎಲ್.ಇ.ಡಿ ಟಿವಿ ಅನ್ನು ಮಾರಟಮಾಡುವ ಸಂಸ್ಥೆ. ಝೆನಿತ್ ಒಂದು ಸಾಮೂಹಿಕ ತಂತ್ರನದಲ್ಲಿ ಗಮನ ಸೆಳೆದಿದೆ. ವಿ.ಯು. ನವನವೀನವಾದ ದುಬಾರಿ ಬೆಲೆಯ ವಸ್ತು ಮಾರಟಮಾಡುತ್ತದೆ.[]


ಸರಫ಼್ ಯುವ ನಾಯಕರ ಫೋರಮ್ ನ ಭಾರತೀಯ ಚೇಂಬರ್ ಆಫ್ ವಾಣಿಜ್ಯಾ ಮತ್ತು ಉದ್ಯಮ ಫೆಡೆರೇಶನ್ ನಲ್ಲಿ ಸಹ-ಅದ್ಯಷ ಮತ್ತು ಎಕ್ಸಿಕ್ಯೂಟಿವ್ ಸಮಿತಿಯ ಸದಸ್ಯರಾಗಿದ್ದಾರೆ[]. ಅವರು ೨೦೧೬ ರ ಮಹಿಳಾ ಉದ್ಯಮಿಯಾಗಿ ಜಯ ಸಾದಿಸಿದ್ದಾರೆ[].

ಉಲ್ಲೇಖಗಳು

[ಬದಲಾಯಿಸಿ]
  1. https://www.bloomberg.com/profiles/people/3133875-rajkumar-jugalkishore-saraf
  2. "ಆರ್ಕೈವ್ ನಕಲು". Archived from the original on 2018-03-28. Retrieved 2018-04-08.
  3. http://in.zapmetasearch.com/ws?q=college%20of%20california&de=c&asid=in_ba_gc3_05
  4. http://www.moneycontrol.com/india/stockpricequote/computers-hardware/zenithcomputers/ZC
  5. "ಆರ್ಕೈವ್ ನಕಲು". Archived from the original on 2018-05-18. Retrieved 2018-04-08.
  6. https://www.bing.com/search?q=federation+of+indian+chamber+of+commerce&src=IE-SearchBox&FORM=IESR4A&pc=EUPP_UE14
  7. https://yourstory.com/2017/01/devita-saraf-vu-flipkart/