ದೇವನಹಳ್ಳಿ
| ದೇವನಹಳ್ಳಿ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬೆಂಗಳೂರು ಗ್ರಾಮೀಣ |
| ನಿರ್ದೇಶಾಂಕಗಳು | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
23,190 - /ಚದರ ಕಿ.ಮಿ. |
ದೇವನಹಳ್ಳಿ (ಹಳೆಯ ಹೆಸರುಗಳು ದೇವನದೊಡ್ಡಿ, ದೇವನಪುರ ಮತ್ತು ಯುಸುಫಾಬಾದ್) ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಪಟ್ಟಣ. ಇದು ಬೆಂಗಳೂರು ನಗರದಿಂದ ೩೦ ಕಿ.ಮಿ ದೂರದಲ್ಲಿದೆ.
ಪರಿವಿಡಿ |
[ಬದಲಾಯಿಸಿ] ಬೆಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣ
ಬೆಂಗಳೂರು ಗ್ರಾಮಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದಾಗಿ ವಿಶ್ವದ ವಿಮಾನಸಾರಿಗೆ ಸಾಗಾಣಿಕೆಯ ನಕ್ಷೆಯಲ್ಲಿ ಮೂಡಿಬಂದಿದೆ. ೨೦೦೮ ರ ಮೇ ೨೩ ರಂದು ಕರ್ನಾಟಕ ರಾಜ್ಯದ ಪ್ರಪ್ರಥಮ ಅಂತಾ-ರಾಷ್ಟ್ರೀಯ ವಿಮಾನನಿಲ್ದಾಣ' ದ ಉದ್ಘಾಟನೆಯಾಯಿತು. ಬೆಂಗಳೂರು ನಗರದಿಂದ ಸುಮಾರು ೩೨ ಕಿ. ಮೀ ದೂರದಲ್ಲಿರುವ ಈ ಸಾರಿಗೆ ವಿಮಾನ ನಿಲ್ದಾಣಕ್ಕೆ ಸಂಪರ್ಕರಸ್ತೆಗಳು ಸರಿಯಾಗಿವೆ. 'ಎಕ್ಸ್ಪ್ರೆಸ್ ವೇ' ಮತ್ತು 'ಹೈಸ್ಪೀಡ್ ರೈಲ್ವೆ' ಲೈನಿನ ಯೋಜನೆಯ 'ನೀಲನಕ್ಷೆ' ತಯಾರಾಗಿದೆ. ಟ್ಯಾಕ್ಸಿ ಸೇವೆ, ಮತ್ತು ಕೆ. ಎಸ್. ಆರ್. ಟಿ. ಸಿ ಹವಾನಿಯಂತ್ರಿತ ಬಸ್ ಗಳು ಪ್ರತಿ ೧೫ ನಿಮಿಷಕ್ಕೆ ಒಂದರಂತೆ ಸಂಚಾರಕ್ಕೆ ವ್ಯವಸ್ಥೆಮಾಡಲಾಗಿದೆ. ಬೆಂಗಳೂರಿನ ಯಾವಮೂಲೆಯಿಂದಲಾದರೂ ಹೊರಟು ವಿಮಾನನಿಲ್ದಾಣವನ್ನು ಸುಮಾರು ಒಂದರಿಂದ ಒಂದೂವರೆ ಗಂಟೆಗಳಲ್ಲಿ ತಲುಪುವ ವ್ಯವಸ್ಥೆ ಗಮನಾರ್ಹವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 'ಬಿ ಐ ಎ ಎಲ್ ಸಹಾಯವಾಣಿ' ಯ ಸೌಲಬ್ಯವಿದೆ. ವಿಮಾನನಿಲ್ದಾಣಕ್ಕೆ ಸಂಪರ್ಕಮಾರ್ಗ, ಸಾರಿಗೆ ಸೌಲಬ್ಯಗಳ ವಿವರಗಳು, ಮತ್ತು ಸಾಮಾನ್ಯ ಮಾಹಿತಿಗಳನ್ನು ದೂರವಾಣಿಯ ಮೂಲಕ ಕೂಡಲೆ ಪಡೆಯಬಹುದು. ಸಹಾಯವಾಣಿ ಸಂಖ್ಯೆ : ೪೦೫೮೧೧೧೧. ವಿಮಾನವೇರುವ ಮೊದಲು ನಡೆಸುವ 'ಭದ್ರತಾ ತಪಾಸಣೆಯ ವಿಧಿ' ಯಲ್ಲಿ ಪ್ರಯಾಣಿಕರು 'ಹಲವು ಕ್ಯೂ' ಗಳಲ್ಲಿ ಕಾದು ಮುಂದುವರೆಯುವ ಬದಲು, 'ಒಂದೇಹಂತದ ತಪಾಸಣಾ ವ್ಯವಸ್ಥೆ' ಯನ್ನು ನಿರೂಪಿಸಲಾಗಿದೆ. ೫೩ 'ಚೆಕ್-ಇನ್ ಕೌಂಟರ್' ಗಳು, ಹಾಗೂ ೧೮ 'ಸ್ವಯಂ ತಪಾಸಣಾಯಂತ್ರ' ಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಉಪಚಾರ ಹಾಗೂ ಆರೋಗ್ಯ-ಸೇವೆಗೆ (ಔಷಧಾಲಯ, ಡಯಾಪರ್ ಬದಲಾವಣೆ, ಹಾಲುಕುಡಿಸುವಿಕೆ ಇತ್ಯಾದಿಗಳಿಗೆ) ಪ್ರತ್ಯೇಕ ಜಾಗವಿದೆ.
[ಬದಲಾಯಿಸಿ] ಅಂತಾರಾಷ್ಟ್ರೀಯ ಗುಣಮಟ್ಟವನ್ನು 'ಬೆಂಗಳೂರು ವಿಮಾನನಿಲ್ದಾಣ' ಹೊಂದಿಲ್ಲವೆಂಬ ದೂರಿದೆ
ಕರ್ನಾಟಕ ಸರ್ಕಾರದ ಗಮನಕ್ಕೆ ಇದು ಆಗಲೇ ಬಂದಿದ್ದು ಸರ್ಕಾರ ಒಂದು ' 'ಜಂಟಿ ಸದನ ಸಮಿತಿ' ಯನ್ನು ರಚಿಸಿ, ಅದರ ವರದಿಗಾಗಿ ಕಾದಿದೆ. ದೇವನಹಳ್ಳಿ ಜಿಲ್ಲೆಯ ಭೂಮಿಯ ಬೆಲೆ ಗಗನಕ್ಕೇರಿದೆ. 'ರಿಯಲ್ ಎಸ್ಟೇಟ್' ಉದ್ಯಮ, ರೈತರ ಬೆಳೆಬೆಳೆಯುವ ಹೊಲಗಳನ್ನು ಆಕ್ರಮಿಸಿದೆ. ದೇವನಹಳ್ಳಿ, 'ಟಿಪ್ಪೂ ಸುಲ್ತಾನ' ನ ಹುಟ್ಟೂರು ಸಹಿತ. 'ಟಿಪ್ಪೂ ಸುಲ್ತಾನನ ಕೋಟೆ' ಯೂ ಪರ್ಯಟಕರ ಗಮನ ಸೆಳೆಯುತ್ತದೆ. 'ಡೀವಿಜಿ' ಯವರು ವಾಸಿಸುತ್ತಿದ್ದ ಹಳೆಯ ಮನೆ ಇಲ್ಲಿದೆ. ದುಬೈ, ಶಾರ್ಜಾಗಳಿಗೆ ರಫ್ತಾಗುವ, 'ಚಕ್ಕೋತನೆ ಹಣ್ಣು' ಗಳಿಗೆ ದೇವನಹಳ್ಳಿ ಪ್ರಸಿದ್ಧಿಯಾಗಿದೆ. ಸಭೆ-ಸಮಾರಂಭಗಳಲ್ಲಿ ನಮ್ಮ ಜನ, ನಿಂಬೆಹಣ್ಣನ್ನು ಕೊಟ್ಟು ಅತಿಥಿಗಳ ದಣಿವಾರಿಕೆಯನ್ನು ವ್ಯವಸ್ಥೆ ಮೊದಲಿಂದ ಇದೆ. ಆದರೆ, ದೇವನಹಳ್ಳಿಯಲ್ಲಿ 'ಚಕ್ಕೋತನೆಹಣ್ಣು' ನಿಂಬೆಹಣ್ಣಿನ ಜಾಗವನ್ನು ಆಕ್ರಮಿಸಿದೆ.
[ಬದಲಾಯಿಸಿ] ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ನಡೆಯುವ 'ಲಕ್ಷದೀಪೋತ್ಸವ'
ವೇಣುಗೋಪಾಲಸ್ವಾಮಿ ದೇವಸ್ಥಾನ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಗಳಿವೆ. ಪ್ರತಿದೀಪಾವಳಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ನಡೆಯುವ 'ಲಕ್ಷದೀಪೋತ್ಸವ' ನೋಡುವುದೇ ಕಣ್ಣಿಗೆ ಹಬ್ಬ. ಪುರಾತನ 'ಶ್ರೀನಗರೇಶ್ವರ ದೇವಾಲಯ,' ಹತ್ತಿರದ ವಿಜಯಪುರದಲ್ಲಿದೆ. ಊರ ನಾಲ್ಕೂ ದಿಕ್ಕಿನಲ್ಲಿ ೩೦೦ ವರ್ಷಗಳ ಹಿಂದಿನ ಕಲ್ಯಾಣಿಗಳು ಇನ್ನೂ ಇವೆ. 'ಬೆಂಗಳೂ ಬ್ಲೂ ದ್ರಾಕ್ಷಿ' ಯಿಂದ ದ್ರಾಕ್ಷಾರಸವನ್ನು ತಯಾರಿಸುತ್ತಾರೆ. ದೇವನಹಳ್ಳಿಯ ಆಡಳಿತ ದೃಷ್ಟಿಯಿಂದ ವಿಜಯಪುರ ಹಾಗೂ ದೇವನಹಳ್ಳಿ ನಗರಸಭೆಗಳು ಇರುವುದನ್ನು ನಾವು ಕಾಣಬಹುದು.