ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)
ಕನ್ನಡದ ಚಂದನ (ಕಿರುತೆರೆ ವಾಹಿನಿ)ಯಲ್ಲಿ ೧,೫೦೦ ಕಂತುಗಳನ್ನು ದಾಟಿ, ಹೆಜ್ಜೆಹಾಕುತ್ತಾ ಮುಂದೆಮುಂದೆ ಸಾಗುತ್ತಿರುವ, ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮ, ಭಾರತದ ದೂರದರ್ಶನದ ಇತಿಹಾಸದಲ್ಲೇ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದೆ. ರಸಪ್ರಶ್ನೆ ಕಾರ್ಯಕ್ರಮದ ರುವಾರಿಯಾಗಿ, ಡಾ. ನಾ. ಸೋಮೇಶ್ವರ, ಅತ್ಯಂತ ಉತ್ಸಾಹ ಹಾಗೂ ಕ್ರಮಬದ್ಧತೆಯ ಶಿಸ್ತಿನಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಉತ್ಕೃಷ್ಟ ಕಾರ್ಯಕ್ರಮದ ವಿಶೇಷತೆಯೆಂದರೆ, ಕನ್ನಡನಾಡಿನ ಒಳ-ಹೊರೆಗುಗಳ, ಸುತ್ತಮುತ್ತಲಿನ ಜನಪದ ಪರಂಪರೆಯನ್ನು ಚೆನ್ನಾಗಿ ಉಳಿಸಿ-ಬೆಳಸುವ ನಿಟ್ಟಿನಲ್ಲಿ ಕನ್ನಡಿಗನೊಬ್ಬ ಹೇಗೆ ನಿರ್ವಹಿಸಬಹುದೆನ್ನುವುದನ್ನು ಎಲ್ಲರಿಗೂ ಮನದಟ್ಟುಮಾಡಿ ತೋರಿಸಿಕೊಟ್ಟಿದ್ದಾರೆ. ಈಗಾಗಲೇ ಹಿಂದಿ, ಇಂಗ್ಲೀಷ್, ಮುಂತಾದ ಭಾಷೆಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳು ಅದೆಷ್ಟೋ ಬಂದು ಹೋಗಿವೆ. ಆದರೆ ಕನ್ನಡದಲ್ಲಿ ಅದು ನಿರಂತರವಾಗಿ ಸಾಗಿದೆ ಎಂಬ ಹಿಗ್ಗಿದೆ. ಅದನ್ನಾದರೂ ಡಾ. ನಾ. ಸೋಮೇಶ್ವರ ಎಷ್ಟೊಂದು ಅಚ್ಚುಕಟ್ಟಾಗಿ ಹುಟ್ಟುಹಾಕಿದ್ದಾರೆ.
ಕನ್ನಡದ 'ಪ್ರಥಮ ಸಮರ್ಥ ರಸಪ್ರಶ್ನೆ ಕಾರ್ಯಕ್ರಮ'ವೆಂದು ಹೇಳಬಹುದಾದದ್ದು [ಬದಲಾಯಿಸಿ]
ಸನ್, ೨೦೦೪ ರಲ್ಲಿ ಆಗಿನ 'ಬೆಂಗಳೂರು ದೂರದರ್ಶನದ ಡೈರೆಕ್ಟರ್' ಆಗಿದ್ದ 'ಶ್ರೀ. ವೆಂಕಟೇಶ್ವರಲು' ರವರ ಕಾಲದಲ್ಲಿ ಈ ಕಾರ್ಯಕ್ರಮ ಪಾದಾರ್ಪಣೆ ಮಾಡಿದ್ದು, ಇಂದಿನವರೆಗೂ ಅದೇ ಕೌತುಕ ಹಾಗೂ ಸಂಭ್ರಮಗಳನ್ನು ಉಳಿಸಿಕೊಂಡು ಬಂದಿದೆ.