ತೊಂಡೆಕಾಯಿ
ತೊಂಡೆಕಾಯಿ | |
---|---|
Ivy gourd | |
Ivy gourd cross section | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. grandis
|
Binomial name | |
Coccinia grandis |
ತೊಂಡೆ (ಕಾಕ್ಸಿನಿಯಾ ಗ್ರ್ಯಾಂಡಿಸ್) ಒಂದು ಉಷ್ಣವಲಯದ ಹಂಬು. ಅದರ ಸ್ಥಳೀಯ ವ್ಯಾಪ್ತಿ, ಭಾರತ, ಫಿಲಿಪೀನ್ಸ್, ಚೀನಾ, ಇಂಡೊನೇಷ್ಯಾ, ಮಲೇಷ್ಯಾ, ಥಾಯ್‍ಲಂಡ್, ಮ್ಯಾನ್ಮಾರ್, ವಿಯೆಟ್ನಾಮ್, ಪೂರ್ವ ಪ್ಯಾಪ್ಯುಯಾ ನ್ಯೂ ಗಿನಿ, ಮತ್ತು ಉತ್ತರ ಪ್ರಾಂತ್ಯಗಳು, ಆಸ್ಟ್ರೇಲಿಯಾವನ್ನು ಒಳಗೊಂಡಂತೆ, ಆಫ್ರಿಕಾದಿಂದ ಏಷ್ಯಾದ ವರೆಗೆ ವಿಸ್ತರಿಸುತ್ತದೆ. ಈ ಹಂಬಿನ ಬೀಜಗಳು ಅಥವಾ ತುಣುಕುಗಳನ್ನು ಸ್ಥಳಾಂತರ ಮಾಡಬಹುದು ಮತ್ತು ಸಮರ್ಥ ಸಂತತಿಗೆ ಕಾರಣವಾಗಬಲ್ಲದು.[೧]
ಆರೋಗ್ಯ ಉಪಯೋಗಗಳು
[ಬದಲಾಯಿಸಿ]- ತೊಂಡೆಕಾಯಿಯನ್ನು ಆಹಾರದಲ್ಲಿ ಸೇರಿಸುವುದರಿಂದ, ಪೈಲ್ಸ್, ಗ್ಯಾಸ್ಟ್ರೋ-ಎಸೋಫೇಜಿಲ್, ರಿಫ್ಲಕ್ಸ್ ಮತ್ತು ಮಲಬದ್ಧತೆಯಂತಹ ರೋಗಗಳು ದೂರವಾಗುತ್ತವೆ. ಜೀರ್ಣಾಂಗ ವ್ಯವಸ್ಥೆಯಲ್ಲಿಯೂ ಸಾಕಷ್ಟು ಸುಧಾರಣೆ ಕಂಡು ಬರುತ್ತದೆ.
- ತೊಂಡೆಕಾಯಿ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಏಕೆಂದರೆ ಇದು ಥಯಾಮಿನ್ ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಮತ್ತು ಪ್ರೋಟೀನ್‌ಗಳ ವಿಭಜನೆಗೆ ಸಹಾಯ ಮಾಡುತ್ತದೆ.
- ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿ ನಮ್ಮ ದೇಹವು ಬೇಗನೆ ದಣಿದಿರುವುದು ಕಂಡುಬರುತ್ತದೆ. ಆಹಾರದಲ್ಲಿ ತೊಂಡೆಕಾಯಿಯನ್ನು ಸೇರಿಸುವುದರಿಂದ ಕಬ್ಬಿಣದ ಕೊರತೆ ದೂರವಾಗುತ್ತದೆ. ಇದರಿಂದ ದೇಹದಲ್ಲಿ ಆಯಾಸದ ಸಮಸ್ಯೆ ಇರುವುದಿಲ್ಲ. ಮಾತ್ರವಲ್ಲ ದೇಹದ ಸಕ್ಕರೆ ಪ್ರಮಾಣ ಕೂಡಾ ನಿಯಂತ್ರಣದಲ್ಲಿರುತ್ತದೆ.
- ತೊಂಡೆಕಾಯಿಯ ಬೇರಿನಲ್ಲಿ ಬೊಜ್ಜು ಕರಗಿಸಲು ಸಹಾಯ ಮಾಡುವ ಅಂಶ ಇದೆ ಎನ್ನುವುದು ಸಂಶೋಧನೆಯಿಂದ ತಿಳಿದುಬಂದಿದೆ. ಇದು ದೇಹದ ಚಯಾಪಚಯ ದರವನ್ನು ಸರಿಪಡಿಸುತ್ತದೆ. ಜೀರ್ಣಕ್ರಿಯೆಯು ಉತ್ತಮವಾದಾಗ, ಬೊಜ್ಜು ಕ್ರಮೇಣ ಕಡಿಮೆಯಾಗುತ್ತದೆ.
- ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ತೊಂಡೆಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ತೊಂಡೆಕಾಯಿಯಲ್ಲಿಯೂ ಫ್ಲೇವನಾಯ್ಡ್‌ಗಳು ಕಂಡುಬರುತ್ತವೆ. ಇವೆಲ್ಲವೂ ಸೇರಿ ಹೃದಯದ ಚಟುವಟಿಕೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಸಮಸ್ಯೆಯನ್ನು ದೂರ ಉಳಿಸುತ್ತದೆ. [೨]
ಬಳಕೆ
[ಬದಲಾಯಿಸಿ]ತೊಂಡೆಕಾಯಿ ಸದಾ ಲಭ್ಯವಿರುವ ತರಕಾರಿ. ಇದನ್ನು ಪಲ್ಯ, ಸಾರು, ಹಿಂಡಿ ವಿವಿಧ ಬಗೆಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಬಹುದು. ತೊಂಡೆಕಾಯಿ ಹೊಲ, ಮನೆ (Home)ಹಿಂದೆ, ರಸ್ತೆ ಬದಿಯ ಬೇಲಿಗಳಲ್ಲಿ ಬೆಳೆಯಬಹುದಾದ ಕಾಯಿಪಲ್ಯಯಾಗಿದೆ. ಸಾಧಾರಣವಾಗಿ ಬಳ್ಳಿಯ ರೀತಿ ಹಬ್ಬುವ ತೊಂಡೆಕಾಯಿ ಗಿಡ ನಮ್ಮ ಭಾರತ(India), ಆಫ್ರಿಕಾ(Africa) ಮತ್ತು ಏಷ್ಯಾ ಖಂಡಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.ಹಾಗಾಗಿ ಇಲ್ಲಿನ ಜನರು ಬಹಳ ಹಿಂದಿನ ಕಾಲದಿಂದ ತಮ್ಮ ತಮ್ಮ ಔಷಧೀಯ(Medicine) ಪದ್ಧತಿಗಳಲ್ಲಿ ತೊಂಡೆಕಾಯಿಯ ಬಳ್ಳಿ, ಎಲೆ, ಬೇರು ಮತ್ತು ಕಾಯಿಗಳನ್ನು ಗಿಡಮೂಲಿಕೆಯ ರೀತಿ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸುತ್ತಾ ಬಂದಿದ್ದಾರೆ.[೧]
ಚಿತ್ರಗಳು
[ಬದಲಾಯಿಸಿ]
|
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Coccinia grandis (L.) Voigt (ivy gourd) - USDA plants
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Health Tips: ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು : ತೊಂಡೆ ಕಾಯಿಯಲ್ಲಿದೆ ಹಲವು ಪ್ರಯೋಜನ". News18 ಕನ್ನಡ. 4 March 2022. Retrieved 30 August 2024.
- ↑ "ಹೃದಯಕ್ಕೆ ಪ್ರಯೋಜನ". Zee News Kannada. Retrieved 30 August 2024.