ತಯಾಬುನ್ ನಿಶಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಯಾಬುನ್ ನಿಶಾ
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯರು
ಜನಾಂಗಿಯತೆಅಸ್ಸಾಮಿ, ಭಾರತೀಯರು
ನಾಗರಿಕತ್ವಭಾರತೀಯರು
Sport
ಕ್ರೀಡೆಅಥ್ಲೆಟ್, ಚಕ್ರ ಎಸೆತ
ಸ್ಥಾನ೧೯೭೪ ರಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವವರು
ಸ್ಪರ್ಧೆಗಳು(ಗಳು)ಏಷ್ಯನ್ ಗೇಮ್ಸ್, ೧೯೮೨
ಮಾಜಿ ಜತೆಗಾರ(ರು)ಅಸ್ಸಾಂ ಅಥ್ಲೆಟಿಕ್ಸ್ ಅಸೋಸಿಯೇಷನ್ ​​ಉಪಾಧ್ಯಕ್ಷೆ

ತಯಾಬುನ್ ನಿಶಾ ಒಬ್ಬ ಭಾರತೀಯ ಮಾಜಿ ಅಥ್ಲೀಟ್. ಅವರು ೧೯೭೪ ರಲ್ಲಿ ಚಕ್ರ ಎಸೆತದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ಹಲವಾರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅವರು ಭಾರತದ ಅಸ್ಸಾಂನ ಶಿವಸಾಗರ ಜಿಲ್ಲೆಯ ಧಯಾಲಿಯಲ್ಲಿ ಜನಿಸಿದರು. [೧]

ಅವರು ೮ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ತಮ್ಮ ಹೆತ್ತವರನ್ನು ಕಳೆದುಕೊಂಡರು. ಅಲ್ಲದೆ, ಸಂಪ್ರದಾಯಬದ್ದ ಕುಟುಂಬಕ್ಕೆ ಸೇರಿದ ಅವರು ಆರಂಭಿಕ ದಿನಗಳಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಹಲವು ಅಡೆತಡೆಗಳನ್ನು ಎದುರಿಸಿದರು. ಆದರೆ ಈ ಅಡೆತಡೆಗಳು ಅವರ ಗುರಿ ಸಾಧನೆಯನ್ನು ಸಾಧಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ೧೯೭೧ ರಲ್ಲಿ ಅವರು ೯ನೇ ಅಂತರ ರಾಜ್ಯ ಅಥ್ಲೆಟಿಕ್ ಮೀಟ್‌ನಲ್ಲಿ ಭಾಗವಹಿಸಿದರು ಮತ್ತು ಅಹಮದಾಬಾದ್‌ನಲ್ಲಿ ಪಾದಾರ್ಪಣೆ ಮಾಡಿದರು. ಅವರು ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಗೆದ್ದರು ಮತ್ತು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದು, ಅಸ್ಸಾಂ ರಾಜ್ಯದ ಮೊದಲ ಮಹಿಳಾ ಅಥ್ಲೀಟ್ ಎಂಬ ಇತಿಹಾಸವನ್ನು ಸೃಷ್ಟಿಸಿದರು. [೨]

೧೯೭೪ ರಂದು ಜೈಪುರದಲ್ಲಿ ಅವರು ಚಕ್ರ ಎಸೆತದಲ್ಲಿ ೧೨ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಅವರು ಪಂದ್ಯಾವಳಿಯಲ್ಲಿ ೨೯.೩೨ ಮೀಟರ್ ದೂರ ಎಸೆದರು. ಅವರು ೧೯೮೨ ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದರು, ಆದರೆ ಪದಕವನ್ನು ಪಡೆಯಲಿಲ್ಲ. ಪ್ರಸ್ತುತ, ಅವರು ಬಡ ಕುಟುಂಬದ ಹೆಣ್ಣುಮಕ್ಕಳಿಗಾಗಿ ಕ್ರೀಡಾ ಅಕಾಡೆಮಿ ಮತ್ತು ಹಾಸ್ಟೆಲ್ ಅನ್ನು ಸ್ಥಾಪಿಸಲು ಯೋಜಿಸುತ್ತಿದ್ದಾರೆ. ಇವರು ಅಸ್ಸಾಂ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷೆ ಮತ್ತು ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. [೩]

ಉಲ್ಲೇಖಗಳು[ಬದಲಾಯಿಸಿ]

  1. "First woman from Assam to win medals". Twocircles.net. Retrieved 19 September 2015.
  2. "A force of inspiration". The Sentinel. 30 June 2014. Archived from the original on 4 ಮಾರ್ಚ್ 2016. Retrieved 19 September 2015.
  3. "Assam Athletics Association vice-president Tayabun Nisha". The Telegraph. 8 August 2007. Archived from the original on 22 December 2015. Retrieved 19 September 2015.