ಡೇಗೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡೇಗೆ
LC
Adult male (dussumieri)
Adult male (dussumieri)
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: Animalia
ವಂಶ Chordata
ವರ್ಗ: Aves
ಗಣ: ಫಾಲ್ಕೋನಿಫಾರ್ಮಿಸ್
ಕುಟುಂಬ: ಅಸ್ಸಿಪಿಟ್ರಿಡೇ
ಜಾತಿ: ಅಸ್ಸಿಪಿಟರ್
ಪ್ರಜಾತಿ: ಏ.ಬಾಡಿಯಾಸ್
ದ್ವಿಪದಿ ನಾಮ
ಅಸ್ಸಿಪಿಟರ್ ಬಾಡಿಯಾಸ್
Gmelin, 1788
Subspecies
  • cenchroides (Severtzov, 1873)
  • dussumieri (Temminck, 1824)
  • badius (Gmelin, 1788)
  • poliopsis (Hume, 1874)
  • sphenurus (Rüppell, 1836)
  • polyzonoides A. Smith, 1838
Synonyms
Astur badius
Scelospizias badius
Micronisus badius

ಡೇಗೆ (Shikra) ಇದನ್ನು ಸಂಸ್ಕೃತದಲ್ಲಿ ದ್ರೋಣಕ ಎಂದು ಕರೆಯುತ್ತಾರೆ. ಏಷಿಯಾ ಹಾಗೂ ಆಫ್ರಿಕ ಖಂಡಗಳಲ್ಲಿ ಕಂಡು ಬರುವ ಹಕ್ಕಿ. ಸಣ್ಣ ಹಕ್ಕಿ ಹಾಗೂ ಪ್ರಾಣಿಗಳನ್ನು ತಟ್ಟನೆ ಎರಗಿ ಹಿಡಿಯುತ್ತದೆ.

ಲಕ್ಷಣಗಳು[ಬದಲಾಯಿಸಿ]

ದೇಹದ ಮೆಲ್ಬಾಗವು ನೀಲಿ ಮಿಶ್ರಿತ ಕಡು ಬೂದು. ಬಿಳಿ ತಳ ಭಾಗದಲ್ಲಿ ಕಂದು ಬಣ್ಣದ ಮಚ್ಚೆಗಳು ಕಂಡು ಬರುತ್ತದೆ.ಕೆಂಪು ಕಣ್ಣು,ಮೊನಚು ಕೊಕ್ಕು ಇದೆ.ಬೂದು ಬಾಲಕ್ಕೆ ಪಟ್ಟಿಗಳಿದ್ದು ತುದಿಯಲ್ಲಿ ಬಿಳಿ ಅಂಚು ಇದೆ. ಕಾಲುಗಳು ಹಳದಿ. ಹೆಣ್ಣು ಹಕ್ಕಿಯು ಗಾತ್ರದಲ್ಲಿ ದೊಡ್ಡದಿದ್ದು ಹಳದಿ ಕಣ್ಣುಗಳಿರುತ್ತದೆ.

ವಾಸ[ಬದಲಾಯಿಸಿ]

ಕಾಡು, ಕುರುಚಲು ಕಾಡು ಹಾಗೂ ಪೊದೆಗಳಲ್ಲಿ ಕಂಡು ಬರುತ್ತದೆ.ಮರಗಳಲ್ಲಿ ವಾಸಿಸುತ್ತದೆ.ಕಡ್ಡಿಗಳಿಂದ ಕೂಡಿದ ಆಳವಲ್ಲದೆ ಗೂಡು ಕಟ್ಟುತ್ತದೆ.

"http://kn.wikipedia.org/w/index.php?title=ಡೇಗೆ&oldid=322288" ಇಂದ ಪಡೆಯಲ್ಪಟ್ಟಿದೆ