ಜ್ಯೋತಿಷ ಶಾಸ್ತ್ರದ ನಕ್ಷತ್ರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜ್ಯೋತಿಶಾಸ್ತ್ರದ ನಕ್ಷತ್ರಗಳು ಇಂದ ಪುನರ್ನಿರ್ದೇಶಿತ)

ಜ್ಯೋತಿಷದ ನಕ್ಷತ್ರ ಗಳ ಅರ್ಥ[ಬದಲಾಯಿಸಿ]


  • ಆಕಾಶದಲ್ಲಿ ಮಕರ ಮತ್ತು ಕರ್ಕಾಟಕ ಸಂಕ್ರಾತಿ ಮಧ್ಯ ಅವಕ್ಕೆ ಎರಡು ಕಡೆ ಸ್ಪರ್ಶಿಸುವಂತೆ ವೃತ್ತವನ್ನು ರಚಿಸಿದರೆ , ಅದು ಕ್ರಾಂತಿವೃತ್ತ ವೆನಿಸುವುದು. ಅದು ಆಕಾಶದಲ್ಲಿ ೩೬೦ ಡಿಗ್ರಿಯ ಊಹಾ ವೃತ್ತವಾಗುವುದು. ಆ ೩೬೦ ಡಿಗ್ರಿಗಳನ್ನು ೨೭ ಭಾಗ ಮಾಡಿದರೆ ೨೭ ನಕ್ಷತ್ರದ ಸ್ಥಾನಗಳಾಗುತ್ತವೆ. ಅವೇ ಅಶ್ವಿನಿ, ಭರಣಿ, ಮೊದಲಾದ ೨೭ ನಕ್ಷತ್ರ ಸ್ಥಾನಗಳು. ಆ ಹೆಸರಿನ ಒಂದು ನಕ್ಷತ್ರಕ್ಕೆ ಆಕಾಶದಲ್ಲಿ ೧೩.೧/೩ ಡಿಗ್ರಿ ಯಷ್ಟು ಸ್ಥಾನ (ಸ್ಥಳ -ಆ ಸ್ಥಳ ಕ್ಕೆ ನಕ್ಷತ್ರದ ಹೆಸರು). ಆಕಾಶದಲ್ಲಿ ಈ ಹೆಸರಿನ ನಕ್ಷತ್ರಗಳು ಅಳತೆಗೆ ಸರಿಯಾಗಿ ಇಲ್ಲ; ೧೩.೧/೩ ಡಿಗ್ರಿ ಸ್ಥಳ- ಮಧ್ಯದಲ್ಲಿ ಎಲ್ಲಿಯೋ ಒಂದು ಕಡೆ ಬರುವುದು. ಚಂದ್ರನು ಸುಮಾರು ಪ್ರತಿದಿನ ಒಂದು ನಕ್ಷತ್ರ ದಂತೆ ಒಂದು ತಿಂಗಳಲ್ಲಿ (೨೮/೨೯.೫ ದಿನ) ಈ೨೭ ನಕ್ಷತ್ರ ಗಳಲ್ಲಿ ಸಂಚರಿಸುತ್ತಾನೆ. ವ್ಯಕ್ತಿಯ ಜನನ ಕಾಲದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿರುತ್ತಾನೋ ಅದು ಆ ವ್ಯಕ್ತಿಯ ನಕ್ಷತ್ರವಾಗುತ್ತದೆ (ಚಂದ್ರ ನಕ್ಷತ್ರ- ನಿತ್ಯ ನಕ್ಷತ್ರ -ಎಂದು ಹೆಸರು)

ನಕ್ಷತ್ರ ಪಾದ[ಬದಲಾಯಿಸಿ]


  • ಈ ೧೩.೧/೩ ಡಿಗ್ರಿಗಳನ್ನು ಪುನಃ ೪ ಭಾಗ (೪ ಪಾದ) ಮಾಡಿದರೆ ಪ್ರತಿ ಭಾಗಕ್ಕೆ ೩.೧/೩ ಡಿಗ್ರಿಯಷ್ಟು(೩ಅಂಶ ೨೦ಕಲೆ) ಸ್ಥಳ (ಆಕಾಶದಲ್ಲಿ) ಬರುವುದು. ಅದು ನಕ್ಷತ್ರದ ಒಂದು ಪಾದ (೩ ೧/೩ಡಿಗ್ರಿ ಸ್ಥಳ) ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಂತೆ ಅಶ್ವಿನ್ಯಾದಿ ೨೭ ನಕ್ಷತ್ರಗಳನ್ನು (೩೬೦ ಡಿಗ್ರಿಗಳನ್ನು) ೧೦೮ ಭಾಗಮಾಡಿ ಪ್ರತಿ ಭಾಗದಲ್ಲಿ ಜನನ ಕಾಲದಲ್ಲಿದ್ದ ಗ್ರಹಗಳನ್ನು ಗುರುತಿಸಿದರೆ, ಅದು ನವಾಂಶ ಕುಂಡಲಿ. ನಕ್ಷತ್ರದ ಒಂದು ಪಾದಕ್ಕೆ ೩ಅಂಶ ೨೦ಕಲೆಯಾದರೆ , ಚಂದ್ರನು ಒಂದು ಪಾದದಲ್ಲಿ ಸುಮಾರು ೬ ರಿಂದ ೬.೧/೪ ಗಂಟೆಗಳ ಕಾಲ ಇರುತ್ತಾನೆ. ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಆರೂಕಾಲು ಗಂಟೆಗಳ ಮಧ್ಯದಲ್ಲಿ ಒಂದೇ ರೇಖಾಂಶದಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರಿಗೂ ಅಶ್ವಿನಿ ನಕ್ಷತ್ರದ ಒಂದನೇ ಪಾದ.

ನಕ್ಷತ್ರ ಮತ್ತು ಪುರಾಣ[ಬದಲಾಯಿಸಿ]


  • ಈ ಜ್ಯೋತಿಷ್ಯಕ್ಕೆ ಗಣನೆಗೆ ತೆಗೆದುಕೊಳ್ಳುವ ೨೭ ನಕ್ಷತ್ರ ಗಳು ಬ್ರಹ್ಮನ ಮಗ ದಕ್ಷನ ಹೆಣ್ಣುಮಕ್ಕಳು. ಅವರನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ್ದನು. ಚಂದ್ರನು ದಿನಕ್ಕೆ ಒಬ್ಬರಂತೆ ಅಶ್ವಿನಿ ಮೊದಲಾದ ಸತಿ-ನಕ್ಷತ್ರಗಳ ಜೊತೆ ಇರುತ್ತಾನೆ. (ಅವೇ ಚಂದ್ರ ನಕ್ಷತ್ರ.) ಆದರೆ ಅವಲ್ಲಿ ಕೆಲವು ನಕ್ಷತ್ರಗಳನ್ನು ಪುಲ್ಲಿಂಗದಲ್ಲಿ ಕರೆಯುವ ರೂಢಿ ಇದೆ! ಸೃಷ್ಟಿ ಮತ್ತು ಮಹಾಭಾರತ
  • ಈಗಲೂ ಸಿನೇಮಾ ನಟ - ನಟಿಯರನ್ನು ತಾರೆ ಯರೆಂದು ಕರೆಯುತ್ತಾರೆ - ಆಕಾಶದ ತಾರೆಯರಂತೆ ಸುಂದರವಾಗಿ ಮಿನುಗುವರೆಂದು ಹಾಗೆ ಕರೆಯುತ್ತಾರೆ.

ನಕ್ಷತ್ರ ಮತ್ತು ವಿಜ್ಞಾನ[ಬದಲಾಯಿಸಿ]


  • ನಕ್ಷತ್ರಗಳು ಗ್ರಹಗಳಂತೆ ಸೂರ್ಯ ಮಂಡಲದಲ್ಲಿ ಇಲ್ಲ. ಅಥವಾ ಪ್ರಭಾವ ಬೀರುವಷ್ಟು ಹತ್ತಿರದಲ್ಲೂ ಇಲ್ಲ. ಅನೇಕ ಕೋಟಿ ಕೋಟಿ ಮೈಲಿಗಳ ದೂರದಲ್ಲಿವೆ. ಅವುಗಳಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಅನೇಕ ಕೋಟಿ ವರ್ಷಗಳೇ ಬೇಕು. ಮೂಲಾ ನಕ್ಷತ್ರದಿಂದ ಹೊರಟ ಬೆಳಕು ಭೂಮಿಗೆ ತಲುಪಲು ೩೦ ಕೋಟಿ ವರ್ಷ ಬೇಕು. ಅವು (ಈ ನಕ್ಷತ್ರಗಳು) ಮಾನವನ ಜೀವಿತದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇಲ್ಲ. ಇಂದಿನ ವಿಜ್ಞಾನದ ಪ್ರಕಾರ ಅವು (ನಕ್ಷತ್ರಗಳು) ನಿರ್ಜೀವ, ಅಗಾಧ ಗಾತ್ರದ ಬೆಂಕಿಯ ಉಂಡೆಗಳು.
  • ಈ ನಕ್ಷ ತ್ರಗಳು ಒಂದೇ ದೂರದಲ್ಲೂ ಇಲ್ಲ. . ಅವು ಭೂಮಿಯಿಂದ ಕೋಟಿ ಕೋಟಿ ಮೈಲಿ ಗಳ ದೂರದಲ್ಲಿವೆ, ಬೇರೆ ಬೇರೆ ಅಂತರದಲ್ಲಿವೆ.
  • ಈಗ ನೂರೈವತ್ತು ವರ್ಷಗಳ ಹಿಂದೆ ಈ ನಕ್ಷತ್ರಗಳ ವಿವರ, ದೂರ ತಿಳಿಯುವ ಸಾಧನಗಳಿರಲಿಲ್ಲ. ಹಳೆಯ ನಂಬುಗೆಯ ಮೇಲೇ ಫಲಜ್ಯೋತಿಷದ ಭವಿಷ್ಯ ಹೇಳುತ್ತಾರೆ.
  • ಈ ಕೆಳಗಿನ ನಕ್ಷತ್ರ ಗಳು ಬಹಳಷ್ಟು ಸ್ತ್ರೀ ಲಿಂಗ ಪದಗಳು ; ಅವು ಧೀರ್ಘಾಕ್ಷರ ದಿಂದ ಕೊನೆಗೊಳ್ಳಬೇಕು

೨೭ ನಕ್ಷತ್ರಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಸಂಸ್ಕೃತ ಕನ್ನಡ ಪಾಶ್ಚಿಮಾತ್ಯ ಹೆಸರು+ಕೊಂಡಿ
1 अश्विनी ಅಶ್ವಿನಿ Beta Arietis; Gamma Arietis; en:Aries (constellation)
2 भरणी ಭರಣಿ en:35Arietis , 39Arietis and 41Arietis
3 कृत्तिका ಕೃತ್ತಿಕಾ Pleiades
4 रोहिणी ರೋಹಿಣಿ Aldebaran
5 मृगशिर्ष - ಮೃಗಶಿರಾ Meissa Orionis
6 आद्रा ಆರಿದ್ರಾ Betelgeuse
7 पुनर्वसु ಪುನರ್ವಸು Castor (star)& Pollux (star)
8 पुष्य ಪುಷ್ಯ Gamma Cancri;Delta Cancri Theta Cancri
9 आश्लेषा ಆಶ್ಲೇಷಾ Sigma Hydrae
10 मघा ಮಖ/ಮಘಾ Regulus
11 पूर्व फाल्गुनी ಪುಬ್ಬಾ/ಪೂರ್ವ ಫಲ್ಗುಣಿ en:Delta Leonisanden:Theta Leonis]]
12 उत्तर फाल्गुनी ಉತ್ತರ/ಉತ್ತರ ಫಲ್ಗುಣಿ Denebola
13 हस्त ಹಸ್ತ ೦Corvi, ೨Corvi and Corvi]] anden:Epsilon Corvi
14 चित्रा ಚಿತ್ತಾ/ಚಿತ್ರಾ Spica
15 स्वाति ಸ್ವಾತಿ Arcturus
16 विशाखा ವಿಶಾಖ ೧ Librae, ]] and ೨ Beta Libraeen:Libra (constellation)ರಾಶಿ
17 अनुराधा ಅನುರಾಧ en:Beta Scorpionis and ScorpiiScorpii
18 ज्येष्ठा ಜ್ಯೇಷ್ಠ en:Antares en:Gamma Scorpionisanden:Tau Scorpii
19 मूल ಮೂಲ Scorpii;Eta Scorpii andLambda Scorpii
20 पूर्वाषाढा ಪೂರ್ವಾಷಾಢಾ en:δ anden: εSagittarii
21 उत्तराषाढा ಉತ್ತರಾಷಾಢಾ en:anden:Sagittarii
22 श्रवण ಶ್ರವಣ en:Alpha Aquilae and en:Aquilae
23 धनिष्ठा ಧನಿಷ್ಠ en:Alpha Delphinus en:Beta Delphinus; en:Delta Delphinus
24 शतभिषक्/शततारका ಶತಭಿಷ en:Gamma Aquarii
25 पूर्वभाद्रपदा / पूर्वप्रोष्ठपदा ಪೂರ್ವ ಭಾದ್ರ en:Alpha Pegasianden:Beta Pegasi
26 उत्तरभाद्रपदा / उत्तरप्रोष्ठपदा ಉತ್ತರಭಾದ್ರ en:Gamma Pegasi and en:Alpha Andromedae
27 रेवती ರೇವತಿ en:Piscium& en:Van Maanen's Star

೨೭ ನಕ್ಷತ್ರಗಳ ಹೆಸರುಗಳು[ಬದಲಾಯಿಸಿ]

  • ೧.ಅಶ್ವಿನಿ
  • ೨.ಭರಣಿ
  • ೩.ಕೃತಿಕಾ
  • ೪.ರೋಹಿಣಿ
  • ೫.ಮೃಗಶಿರ
  • ೬.ಆರ್ದ್ರಾ (ಆರಿದ್ರಾ)
  • ೭.ಪುನರ್ವಸು
  • ೮.ಪುಷ್ಯ
  • ೯.ಆಶ್ಲೇಷ
  • ೧೦.ಮಖ
  • ೧೧.ಪುಬ್ಬ (ಪೂರ್ವ ಫಲ್ಗುಣಿ)
  • ೧೨.ಉತ್ತರಾ (ಉತ್ತರ ಫಲ್ಗುಣಿ)
  • ೧೩.ಹಸ್ತ
  • ೧೪.ಚಿತ್ತಾ ನಕ್ಷತ್ರ
  • ೧೫.ಸ್ವಾತಿ
  • ೧೬.ವಿಶಾಖ
  • ೧೭.ಅನುರಾಧ
  • ೧೮.ಜ್ಯೇಷ್ಠ
  • ೧೯.ಮೂಲ
  • ೨೦.ಪೂರ್ವಾಷಾಡಾ
  • ೨೧.ಉತ್ತರಾಷಾಡಾ
  • ೨೨.ಶ್ರವಣ
  • ೨೩.ಧನಿಷ್ಠ
  • ೨೪.ಶತಭಿಷ
  • ೨೫.ಪೂರ್ವಭಾದ್ರ
  • ೨೬.ಉತ್ತರಭಾದ್ರ
  • ೨೭.ರೇವತಿ

ಗ್ರಹಗಳು[ಬದಲಾಯಿಸಿ]

ಗ್ರಹ ಮತ್ತು ಚಿನ್ಹೆ ಸ್ವಾಮಿತ್ವ(Dignity) ದುರ್ಬಲ ಉಚ್ಚ(Exaltation) ನೀಚ (Fall)
ರವಿ (Sol) ಸಿಂಹ (Leo) ಕುಂಭ(Aquarius) ಮೇಷ (Aries) ತುಲಾ (Libra)
ಚಂದ್ರ(First quarter moon) ಕಟಕ (Cancer) ಮಕರ(Capricorn) ವೃಷಭ(Taurus) ವೃಶ್ಚಿಕ(Scorpio)
ಬುಧ(Mercury) ಮಿಥುನ&ಕನ್ಯಾ (Gemini and Virgo) ಧನು&ಮೀನ (Sagittarius and Pisces) ಕನ್ಯಾ (Virgo) ಮೀನ (Pisces)
ಶುಕ್ರ (Venus) ವೃಷಭ&ತುಲಾ (Libra and Taurus) ಮೇಷ&ವೃಶ್ಚಿಕ (Aries and Scorpio) ಮೀನ (Pisces) ಕನ್ಯಾ (Virgo)
ಕುಜ (Mars) ಮೇಷ&ವೃಶ್ಚಿಕ(Aries and Scorpio) ವೃಷಭ&ತುಲಾ (Libra and Taurus)? ಮಕರ (Capricorn) ಕಟಕ (Cancer)
ಗುರು (Jupiter) ಧನು&ಮೀನ (Sagittarius and Pisces) ಮಿಥುನ&ಕನ್ಯಾ (Gemini and Virgo)? ಕಟಕ (Cancer) ಮಕರ(Capricorn)
ಶನಿ (Saturn) ಮಕರ&ಕುಂಭ (Capricorn and Aquarius) ಕಟಕ&ಸಿಂಹ (Cancer and Leo)? ತುಲಾ (Libra) ಮೇಷ (Aries)
  • ರಾಹು ಕೇತುಗಳು ಖಗೋಳ ವಿಜ್ಞಾನದ ದೃಷ್ಠಿಯಲ್ಲಿ ಗ್ರಹಗಳಲ್ಲ. ಅವು ಕ್ರಾಂತಿ ವೃತ್ತ ಮತ್ತು ವಿಷುವದ್‍ವೃತ್ತಗಳು ಆಕಾಶದಲ್ಲಿ ಸಂಧಿಸುವ ಎರಡು ಬಿಂದುಗಳು. ಅದನ್ನು ವಿಜ್ಞಾನದಲ್ಲಿ "ನೋಡ್ಸ್" ಎಂದು ಕರೆಯುತ್ತಾರೆ.

[೧]ಲೇ:[೨] [೩]

ರಾಶಿ ಮತ್ತು ಅದರ ಸಂಕೇತ - ಗ್ರಹ[ಬದಲಾಯಿಸಿ]

ಸಂಕೇತ(Symbol) ಯು.ಕೊ.(Unicode
Char)
ಹೆಸರು(Sign/names) ಸ್ವಾಮಿ (Ruling
celestial body

Classical)ಶಾಸ್ತ್ರೀಯ

ಸ್ವಾಮಿ (Ruling
celestial body

Modern) ಆಧುನಿಕ

ನಕ್ಷತ್ರಗಳು
ಮೇಷ Aries ಕುಜ(ಮಂಗಳ) (Mars) Mars ಅಶ್ವಿನಿ, ಭರಣಿ ಕೃತ್ತಿಕಾ ಪಾದಂ
ವೃಷಭTaurus ಶುಕ್ರ (Venus) Earth ಕೃತ್ತಿಕಾತ್ರಿಪಾದಂ, ರೋಹಿಣಿ, ಮೃಗಶಿರಾರ್ಧಂ
ಮಿಥುನ Gemini ಬುಧ (Mercury) Mercury ಮೃಗಶಿರಾರ್ಧಂ, ಆದ್ರಾ, ಪುನರ್ವಸುತ್ರಿಪಾದಂ
ಕಟಕ Cancer ಚಂದ್ರ (Moon) Moon ಪುನರ್ವಸುಪಾದಂ, ಪುಷ್ಯ, ಆಶ್ಲೇಷಾ
ಸಿಂಹ Leo ರವಿ (Sun) Sun ಮಘಾ, ಹುಬ್ಬಾ, ಉತ್ತರಾಪಾದಂ
ಕನ್ಯಾ Virgo ಬುಧ (Mercury) Ceres ಉತ್ತರಾತ್ರಿಪಾದಂ, ಹಸ್ತಾ, ಚಿತ್ರಾರ್ಧಂ
ತುಲಾ Libra ಶುಕ್ರ (Venus) Venus ಚಿತ್ರಾರ್ಧಂ, ಸ್ವಾತಿ, ವಿಶಾಖಾತ್ರಿಪಾದಂ
ವೃಶ್ಚಿಕ Scorpio ಕುಜ(ಮಂಗಳ) (Mars) Pluto ವಿಶಾಖಾಪಾದಂ, ಅನುರಾಧಾ, ಜ್ಯೇಷ್ಠ
ಧನುಸ್ಸು Sagittarius ಗುರು (Jupiter) Jupiter ಮೂಲ, ಪೂರ್ವಾಷಾಢ, ಉತ್ತರಾಷಾಢಪಾದಂ
ಮಕರ Capricorn ಶನಿ (Saturn) Saturn ಉತ್ತರಾಷಾಢತ್ರಿಪಾದಂ, ಶ್ರವಣ, ಧನಿಷ್ಠಾರ್ಧಂ
ಕುಂಭ Aquarius ಶನಿ (Saturn) Uranus ಧನಿಷ್ಠಾರ್ಧಂ, ಶತಭಿಷಾ, ಪೂರ್ವಾಭಾದ್ರಪಾದಂ
ಮೀನ Pisces ಗುರು (Jupiter) Neptune ಪೂರ್ವಾಭಾದ್ರತ್ರಿಪಾದಂ, ಉತ್ತರಾಭಾದ್ರ, ರೇವತಿ

[೪] [೫]

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

  • ಈ ಜಗತ್ತು -ಲೇಖಕರು ಡಾ|ಶಿವರಾಮ ಕಾರಂತ
  • ಜಗತ್ತುಗಳ ಹುಟ್ಟು ಸಾವು : ಲೇ:ಆರ್.ಎಲ್.ನರಸಿಂಹಯ್ಯ,ಭೌತವಿಜ್ಞಾನ ಪ್ರೊ. ಸೆಂಟ್ರಲ್ ಕಾಲೇಜು ಬೆಂಗಳೂರು.ಕಾವ್ಯಾಲಯ ಪ್ರಕಾಶನ ಮೈಸೂರು.
  • ಮೈಸೂರು ಪಂಚಾಂಗ ೨೦೧೦

| |

ಗ್ರಹಗಳು[ಬದಲಾಯಿಸಿ]

೧) ಸೂರ್ಯ(ರವಿ,ಭಾನು)

೨) ಚಂದ್ರ

೩) ಮಂಗಳ (ಕುಜ)

೪) ಬುಧ

೫) ಗುರು(ಬೃಹಸ್ಪತಿ)

೬) ಶುಕ್ರ

೭) ಶನಿ

೮) ರಾಹು

೯) ಕೇತು

ಮಂತ್ರ ಓಂ ನಮಃ ಸೂರ್ಯಯಾ ಚಂದ್ರಾಯಾ ಮಂಗಳಾಯಾ ಬುಧಾಯಾ ಗುರು ಶುಕ್ರ ಶನಿ ಭಸ್ಚ್ಯ ರಾಹು ಕೇತುವೇ ನಮಃ

ರಾಶಿಗಳು[ಬದಲಾಯಿಸಿ]

೧) ಮೇಷ

೨) ವೃಷಭ

೩) ಮಿಥುನ

೪) ಕಟಕ (ಕರ್ಕಾಟಕ)

೫) ಸಿಂಹ

೬) ಕನ್ಯಾ

೭) ತುಲಾ

೮) ವೃಶ್ಚಿಕ

೯) ಧನುಸ್ಸು

೧೦) ಮಕರ

೧೧) ಕುಂಭ

೧೨) ಮೀನ

ಉಲ್ಲೇಖ[ಬದಲಾಯಿಸಿ]

  1. ಜ್ಯೋತಿರ್ಗನ್ನಡಿ -ಲೇಖಕ ರಮಾಕಾಂತ
  2. ಆರ್.ಎಲ್.ನರಸಿಂಹಯ್ಯ,ಭೌತವಿಜ್ಞಾನ ಪ್ರೊ. ಸೆಂಟ್ರಲ್ ಕಾಲೇಜು ಬೆಂಗಳೂರು.ಕಾವ್ಯಾಲಯ ಪ್ರಕಾಶನ ಮೈಸೂರು.
  3. ಮೈಸೂರು ಪಂಚಾಂಗ ೨೦೧೦
  4. ಈ ಜಗತ್ತು -ಲೇಖಕರು ಡಾ|ಶಿವರಾಮ ಕಾರಂತ
  5. ಜಗತ್ತುಗಳ ಹುಟ್ಟು ಸಾವು :ಲೇ ಆರ.ಎಲ್ ನರಸಿಂಹಯ್ಯ.