ಜಲವಿದ್ಯುತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಲವಿದ್ಯುತ್ ಶಕ್ತಿಯನ್ನು ನೀರಿನ ಪ್ರವಾಹದ ಬಲವನ್ನು ಉಪಯೋಗಿಸಿ ಉತ್ಪಾದಿಸಲಾಗುತ್ತದೆ.[೧] ೨೦೧೫ರಲ್ಲಿ ಪ್ರಪಂಚದ ಒಟ್ಟು ಉತ್ಪಾದನೆಯ ೧೬.೬% ರಷ್ಟನ್ನು ಇದರಿಂದ ಉತ್ಪಾದಿಸಲಾಗಿದೆ.[೨] ಉತ್ಪತ್ತಿಯಾದ ಶಕ್ತಿಯ ಪ್ರಮಾಣವು ಪರಿಮಾಣ ಮತ್ತು ವೇಗವನ್ನು ಅವಲಂಬಿಸಿರುತ್ತದೆ. ಹೆಚ್ಚೆಚ್ಚು ವೇಗದಲ್ಲಿ ನೀರು ಚಲಿಸಿದಷ್ಟು, ಹೆಚ್ಚು ಶಕ್ತಿ ಉತ್ಪತ್ತಿಯಾಗುತ್ತದೆ. ಈ ಕಾರಣಕ್ಕಾಗಿ, ಅನೇಕ ಜಲವಿದ್ಯುತ್ ಕೇಂದ್ರಗಳು ಜಲಪಾತಗಳು ಮತ್ತು ಜಲಾಶಯಗಳ ಬಳಿ ನಿರ್ಮಿಸಲ್ಪಟ್ಟಿವೆ. ಶಕ್ತಿಯನ್ನು ಉತ್ಪಾದಿಸಲು, ನೀರು ಟರ್ಬೈನ್ಗಳ ಕಡೆಗೆ ನಿರ್ದೇಶಿಸಲ್ಪಟ್ಟು ಅವುಗಳನ್ನು ತಿರುಗುವಂತೆ ಮಾಡುತ್ತದೆ.[೩]

ಉತ್ಪಾದಿಸುವ ವಿಧಾನಗಳು[ಬದಲಾಯಿಸಿ]

ಆಣೆಕಟ್ಟೆ[ಬದಲಾಯಿಸಿ]

ಹೆಚ್ಚಿನ ಜಲವಿದ್ಯುತ್ ಘಟಕಗಳು ಆಣೆಕಟ್ಟೆಯನ್ನು ಅವಲಂಬಿಸಿರುತ್ತವೆ. ಆಣೆಕಟ್ಟೆಯಲ್ಲಿ ನಿಂತ ನೀರನ್ನು ಟರ್ಬೈನ್ ಅನ್ನು ತಿರುಗಿಸಲು ಬಳಸಲಾಗುತ್ತದೆ. ಉತ್ಪಾದನೆಗೊಳ್ಳುವ ಒಟ್ಟು ಶಕ್ತಿಯು ಹರಿಸಲ್ಪ್ಡುವ ನೀರಿನ ಪ್ರಮಾಣ ಹಾಗು ನೀರಿನ ಮೂಲ ಮತ್ತು ನೀರು ಹೊರಹೋಗುವ ಜಾಗದ ನಡುವಿನ ಎತ್ತರದ ಮೇಲೆ ಅವಲಂಬಿತವಾಗಿರುತ್ತದೆ.[೪]

ಪಂಪ್ ಮಾಡಿ ಸಂಗ್ರಹಿಸುವ ವಿಧಾನ[ಬದಲಾಯಿಸಿ]

ಈ ವಿಧಾನದಲ್ಲಿ ಕಡಿಮೆ ಬೇಡಿಕೆಯ ಸಮಯದಲ್ಲಿ ಉತ್ಪಾದನೆಗೊಳ್ಳುವ ಹೆಚ್ಚಿನ ಶಕ್ತಿಯಿಂದ ನೀರನ್ನು ಎತ್ತರದಲ್ಲಿರುವ ಆಣೆಕಟ್ಟೆಗೆ ಎತ್ತಿ ಸಂಗ್ರಹಿಸಲು ಬಳಸಲಾಗುತ್ತದೆ. ನಂತರ ಹೆಚ್ಚಿನ ಬೇಡಿಕೆಯ ಸಮಯದಲ್ಲಿ ಇದನ್ನು ಉಪಯೋಗಿಸಿ ಹೆಚ್ಚಿನ ವಿದ್ಯುತ್ ಉತ್ಪಾದಿಸಲಾಗುತ್ತದೆ.[೫]

ನೀರಿನ ಸಹಜ ಹರಿವನ್ನು ಬಳಸಿ ವಿದ್ಯುತ್ ಉತ್ಪಾದನೆ[ಬದಲಾಯಿಸಿ]

ಈ ವಿಧಾನದಲ್ಲಿ ಸಣ್ಣ ಆಣೆಕಟ್ಟೆ ಬಳಸಿ ಅಥವ ಯಾವುದೀ ಆಣೆಕಟ್ಟೆಯನ್ನು ಬಳಸದೆಯೂ ನೀರಿನ ಸಹಜ ಹರಿವನ್ನು ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಯಾವುದೇ ದೊಡ್ಡ ಆಣೆಕಟ್ಟೆ ಅಥವ ನೀರಿನ ಪ್ರವಾಹಕ್ಕೆ ತಡೆ ಇಲ್ಲದೆ ಇರುವುದರಿಂದ ಇದು ಪರಿಸರದ ಮೇಲೆ ಮಾಡುವ ಹಾನಿಯು ಕಡಿಮೆ ಪ್ರಮಾಣದ್ದಾಗಿದೆ. ಆದರೆ ಟರ್ಬೈನ್ ಗಳಿಗೆ ಏಕರೀತಿಯ ಪ್ರವಾಹದ ಅಗತ್ಯ ಇರುವುದರಿಂದ ಹೆಚ್ಚಿನ ಪ್ರವಾಹ ಇದ್ದ ಸಂದರ್ಬದಲ್ಲಿ ಅದನ್ನು ಬಳಸದೆ ವ್ಯರ್ಥವಾಗಿ ಹರಿಯಬಿಡಬೇಕಾಗುತ್ತದೆ.[೬]

ಸಮುದ್ರದ ಉಬ್ಬರವಿಳಿತದಿಂದ ವಿದ್ಯುತ್ ಉತ್ಪಾದನೆ[ಬದಲಾಯಿಸಿ]

ಇದು ಸಹ ಸಾಮಾನ್ಯ ಜಲವಿದ್ಯುತ್ ಘಟಕಗಳಂತೆ ಕಾರ್ಯನಿರ್ವಹಿಸುತ್ತದೆ, ಇದರಲ್ಲಿನ ವ್ಯತ್ಯಾಸವೆಂದರೆ ಇದು ಒಂದು ದೊದ್ಡ ಆಣೆಕಟ್ಟೆಯನ್ನು ಹೊಂದಿರುತ್ತದೆ.

ಇದಕ್ಕಾಗಿ ನದಿಯ ಅಳಿವೆಗೆ ಅಡ್ದಲಾಗಿ ಒಂದು ದೊಡ್ಡ ಆಣೆಕಟ್ಟೆಯನ್ನು ಕಟ್ಟಲಾಗುತ್ತದೆ. ಸಮುದ್ರದ ಉಬ್ಬರ ಮತ್ತು ಇಳಿತದ ಸಮಯದಲ್ಲಿ ನೀರು ಕೊಳವೆಗಳ ಮೂಲಕ ಒಂದು ಬದಿಯಿಂದ ಇನ್ನೊಂದು ಬದಿಗೆ ಪ್ರವಹಿಸುವಂತೆ ಮಾಡಲಾಗುತ್ತದೆ. ಈ ನೀರಿನ ಪ್ರವಾಹದಿಂದ ಟರ್ಬೈನ್ ಗಳನ್ನು ತಿರುಗಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.[೭]

ವಿಧಗಳು[ಬದಲಾಯಿಸಿ]

ಸಾಮರ್ಥ್ಯಕ್ಕನುಗುಣವಾಗಿ[೮]

ದೊಡ್ಡ ಜಲವಿದ್ಯುತ್ ಘಟಕ[ಬದಲಾಯಿಸಿ]

೧೦೦ಮೆವ್ಯಾ ಗಿಂತ ದೊಡ್ಡ ಜಲವಿದ್ಯುತ್ ಘಟಕಗಳಿಗೆ ದೊಡ್ಡ ಜಲವಿದ್ಯುತ್ ಘಟಕ ಎನ್ನಲಾಗುತ್ತದೆ.

ಮಧ್ಯಮ ಜಲವಿದ್ಯುತ್ ಘಟಕ[ಬದಲಾಯಿಸಿ]

೨೫ ರಿಂದ ೧೦೦ ಮೆವ್ಯಾ ಸಾಮರ್ಥ್ಯದ ಘಟಕಗಳಿಗೆ ಮದ್ಯಮ ಜಲವಿದ್ಯುತ್ ಘಟಕ ಎನ್ನಲಾಗುತ್ತದೆ.

ಸಣ್ಣ ಜಲವಿದ್ಯುತ್ ಘಟಕ[ಬದಲಾಯಿಸಿ]

೧ ರಿಂದ ೨೫ ಮೆವ್ಯಾ ಸಾಮರ್ಥ್ಯದ ಘಟಕಗಳಿಗೆ ಸಣ್ಣ ಜಲವಿದ್ಯುತ್ ಘಟಕ ಎನ್ನಲಾಗುತ್ತದೆ.

ಅತಿ ಸಣ್ಣ ಜಲವಿದ್ಯುತ್ ಘಟಕ[ಬದಲಾಯಿಸಿ]

೧೦೦ಕಿವ್ಯಾ ನಿಂದ ೧ ಮೆವ್ಯಾ ಸಾಮರ್ಥ್ಯದ ಘಟಕಗಳಿಗೆ ಅತಿ ಸಣ್ಣ ಜಲವಿದ್ಯುತ್ ಘಟಕ ಎನ್ನಲಾಗುತ್ತದೆ.

ಮೈಕ್ರೋ ಜಲವಿದ್ಯುತ್ ಘಟಕ[ಬದಲಾಯಿಸಿ]

೫ರಿಂದ ೧೦೦ ಕಿ ವ್ಯಾ ಸಾಮರ್ಥ್ಯದವರೆಗಿನ ಘಟಕಗಳಿಗೆ ಮೈಕ್ರೋಜಲವಿದ್ಯುತ್ ಘಟಕಗಳೆನ್ನಲಾಗುತ್ತದೆ. ಇದು ಸಣ್ಣಹಳ್ಳಿಗಳ ವಿದ್ಯುತ್ ಅಗತ್ಯನ್ನು ನೀಗಿಸಬಲ್ಲ ಸಾಮರ್ತ್ಯವನ್ನು ಹೊಂದಿರುತ್ತದೆ.

ಪಿಕೋ ಜಲವಿದ್ಯುತ್ ಘಟಕ[ಬದಲಾಯಿಸಿ]

೫ ಕಿಲೊ ವ್ಯಾಟ್ ಗಿಂತ ಕಡಿಮೆ ಸಾಮರ್ಥ್ಯದ ಜಲವಿದ್ಯುತ್ ಘಟಕಗಳಿಗೆ ಪೀಕೋ ಜಲವಿದ್ಯುತ್ ಘಟಕಗಳೆನ್ನುತ್ತೇವೆ. ಇವನ್ನು ದುರ್ಗಮ ಗುಡ್ಡಗಾಡಿನ ಪ್ರದೇಶಗಳಲ್ಲಿ ಬಳಸಬಹುದಾಗಿದೆ. ಕೇವಲ ಕೆಲವು ನೂರು ವ್ಯಾಟ್ ಸಾಮರ್ಥ್ಯದ ಘಟಕಗಳೂ ಕೂಡ ಒಂದು ಮನೆಯ ವಿದ್ಯುತ್ ಅಗತ್ಯವನ್ನು ನೀಗಿಸಬಲ್ಲವು. ಇವುಗಳನ್ನು ಸ್ಥಾಪಿಸಲು ಯಾವುದೇ ಆಣೆಕಟ್ಟು ಅಥವ ಅಡ್ಡಗಟ್ಟೆಗಳ ಅವಶ್ಯಕತೆ ಇಲ್ಲ. ಇವುಗಳನ್ನು ಅತಿ ಚಿಕ್ಕ ಅಡ್ಡಗಟ್ಟೆಗಳ(೦.೫-೧ಮೀ) ನೆರವಿನಿಂದ ಸ್ಥಾಪಿಸಬಹುದಾಗಿದೆ. ಆದುದರಿಂದ ಇವುಗಳು ಪರಿಸರದ ಮೇಲೆ ಮಾಡುವ ಹಾನಿಯು ನಿರ್ಲಕ್ಷಿಸಬಹುದಾದ ಮಟ್ಟದ್ದಾಗಿದೆ. ಏಕೆಂದರೆ ಕೆಲವು ದುರ್ಗಮ ಗುಡ್ಡಗಾಡಿನ ಪ್ರದೇಶಗಳನ್ನು ಗ್ರಿಡ್ ನೊಂದಿಗೆ ಸಂಪರ್ಕಿಸಬೇಕಾದರೆ ಬಹಳ‌ಷ್ಟು ಅರಣ್ಯವು ನಾಶವಾಗುತ್ತದೆ ವಿಶೇಷವಾಗಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಈ ಸಮಸ್ಯೆ ತಲೆದೋರುತ್ತದೆ. ಆದುದರಿಂದ ಅಂತಹ ಪ್ರದೇಶಗಳಿಗೆ ಇವು ಸೂಕ್ತವಾದ ಪರ್ಯಾಯವಾಗಬಲ್ಲವಾಗಿವೆ.[೯]

ಶೃಂಗೇರಿಯ ಬಳಿ ಮಗೆಬೈಲಿನಲ್ಲಿರುವ ಪೀಕೋ ಜಲವಿದ್ಯುತ್ ಘಟಕ

ಉಲ್ಲೇಖ[ಬದಲಾಯಿಸಿ]

  1. ಪರ್ಲ್‍‌‌ಮನ್, ಹೊವರ್ಡ್. "Hydroelectric power water use". U.S. Geological Survey. U.S. Geological Survey. Retrieved 13 March 2018.
  2. http://www.ren21.net/wp-content/uploads/2016/06/GSR_2016_Full_Report_REN21.pdf
  3. ಹಂಫ್ರೀಸ್, E W; ಜೇಮ್ಸ್-ಅಬ್ರಾ, ಎರಿನ್. "Hydroelectricity". ದ ಕೆನೇಡಿಯನ್ ಎನ್ಸೈಕ್ಲೋಪೀಡಿಯಾ. ದ ಕೆನೇಡಿಯನ್ ಎನ್ಸೈಕ್ಲೋಪೀಡಿಯಾ. Archived from the original on 17 ಏಪ್ರಿಲ್ 2018. Retrieved 13 March 2018.
  4. "Hydroelectricity Explained". The Electricity Forum. The Electricity Forum. Retrieved 16 March 2018.
  5. https://www.hydro.org/policy/technology/pumped-storage/
  6. "ಆರ್ಕೈವ್ ನಕಲು". Archived from the original on 2017-05-25. Retrieved 2018-03-08.
  7. http://www.darvill.clara.net/altenerg/tidal.htm
  8. https://www.slideshare.net/rajbairwa22/presentaion-of-raj-final
  9. "ಆರ್ಕೈವ್ ನಕಲು" (PDF). Archived from the original (PDF) on 2018-04-21. Retrieved 2018-03-08.