ಚೇರಮಾಂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೇರಮಾಂಕನು ೧೬ನೇ ಶತಮಾನದ ಒಬ್ಬ ವೀರಶೈವ ಕವಿ. ಇವನು ಕ್ರಿ.ಶ. ೧೫೨೬ರಲ್ಲಿ ಶಿವಭಕ್ತ ಚೇರಮನನ್ನು ಕುರಿತಾದ ಚೇರಮಕಾವ್ಯವನ್ನು ಬರೆದಿದ್ದಾನೆ.

ಈತನ ತಂದೆ ಗಂಗಪ್ಪಸೆಟ್ಟಿ. ಗುರು ಚೆನ್ನವೀರೇಶ. ಗುಬ್ಬಿಯ ಮಲ್ಲಣಾರ್ಯರ ಕೃಪೆಯಿಂದ ತನ್ನ ಗ್ರಂಥವನ್ನು ಬರೆದುದಾಗಿ ಹೇಳಿದ್ದಾನೆ. ತನ್ನನ್ನು ಈತನು "ನವರಸ ಭಾವ ಲಕ್ಷಣಾಲಂಕಾರ ನಿಪುಣ" ಎಂದು ಕರೆದುಕೊಂಡಿದ್ದಾನೆ.

ಈತನು ಬರೆದ ಚೇರಮಕಾವ್ಯವು ವಾರ್ಧಿಕಷಟ್ಪದಿಯಲ್ಲಿದ್ದು ಅದರಲ್ಲಿ ಸಂಸ್ಕೃತವನ್ನು ಹೆಚ್ಚು ಬಳಸದೆ ಹೆಚ್ಚು ಕನ್ನಡವನ್ನು ಕವಿಯು ಬಳಸಿದ್ದಾನೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ "ಚೇರಮಾಂಕ ಕಾವ್ಯ[ಶಾಶ್ವತವಾಗಿ ಮಡಿದ ಕೊಂಡಿ]"

"https://kn.wikipedia.org/w/index.php?title=ಚೇರಮಾಂಕ&oldid=1055114" ಇಂದ ಪಡೆಯಲ್ಪಟ್ಟಿದೆ