ಚರ್ಚೆಪುಟ:೨೦೧೪ ಏಷ್ಯನ್‌ ಕ್ರೀಡಾಕೂಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ಸಮೀಕ್ಷೆ[ಬದಲಾಯಿಸಿ]

ಇಂಚೆನ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ 2010ರ ಕೂಟಕ್ಕಿಂತ ಹೆಚ್ಚು ಪದಕಗಳನ್ನು ಗೆಲ್ಲಲಿಲ್ಲವಾದರೂ, ಕೆಲ ಸಕಾರಾತ್ಮಕ ಅಂಶಗಳನ್ನು ಕಂಡುಕೊಂಡಿತು. ಸ್ಕ್ವಾಷ್‌ನಲ್ಲಿ ಇತಿಹಾಸ ಸೃಷ್ಟಿಯಾಯಿತು. ಹೊಸ ಪ್ರತಿಭೆಗಳು ಉದಯಿಸಲು ಈ ಸಲದ ಕೂಟ ವೇದಿಕೆಯಾಯಿತು.

ಯೋಗೇಶ್ವರ್‌ ದತ್‌ ಕೇವಲ ಹವ್ಯಾಸ­ಕ್ಕಾಗಿಯಷ್ಟೇ ತಮ್ಮೂರಿನಲ್ಲಿ ಕುಸ್ತಿ ಆಡಲು ಶುರು ಮಾಡಿದವರು. ‘ಆಖಾಡ’ಕ್ಕಿಳಿದಾಗ ಅವರಿಗೆ ಎಂಟು ವರ್ಷವಷ್ಟೇ. ಹರಿಯಾಣ ರಾಜ್ಯದ ಸೋನೆಪತ್‌ ಜಿಲ್ಲೆಯ ಬೈನ್ಸ್‌ವಾಲ್‌ ಗ್ರಾಮದಲ್ಲಿ ಪೈಲ್ವಾನ್‌ ಬಲರಾಜ್‌ ಬಳಿ ಅಭ್ಯಾಸ ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. ಆಗ ಲಭಿಸಿದ ಒಂದು ಪದಕ ಭವಿಷ್ಯದಲ್ಲಿ ಅವರಿಗೆ ಅನೇಕ ಪದಕಗಳನ್ನು ಗೆಲ್ಲಲು ಮುನ್ನುಡಿಯಾಯಿತು.

ಸೋನೆಪತ್‌ ಜಿಲ್ಲೆಯವರಾದ ಡಿಸ್ಕಸ್‌ ಎಸೆತ ಸ್ಪರ್ಧಿ ಸೀಮಾ ಅಂಟಿಲ್ ತಮ್ಮ ಕ್ರೀಡಾಜೀವನ ಆರಂಭಿಸಿದ್ದು ಹರ್ಡಲ್ಸ್‌ ಮತ್ತು ಲಾಂಗ್ ಜಂಪ್‌ ಸ್ಪರ್ಧೆಯ ಮೂಲಕ. ಕ್ರೀಡೆಯಲ್ಲಿ ಅದಮ್ಯವಾದದ್ದನ್ನು ಸಾಧಿಸಬೇಕೆನ್ನುವ ಕಾರಣಕ್ಕಾಗಿ ಹರಿಯಾಣದಿಂದ ಉತ್ತರ ಪ್ರದೇಶದ ಮೀರತ್‌ಗೆ ಹೋದ ಸೀಮಾ 14 ವರ್ಷಗಳ ಹಿಂದೆ ಚಿಲಿಯಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದರು. ‘ಮಿಲೇನಿಯಮ್‌ ಚೈಲ್ಡ್‌’ ಖ್ಯಾತಿಯ ಸೀಮಾ ಮೂರು ವರ್ಷಗಳ ಹಿಂದೆಯಷ್ಟೇ ಕೋಚ್‌ ಅಂಕುಷ್ ಪೂನಿಯಾ ಅವರನ್ನು ಮದುವೆಯಾಗಿದ್ದಾರೆ. ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಐದು ಪದಕಗಳನ್ನು ಜಯಿಸಿದ್ದಾರೆ

ವಿಶ್ವ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಮತ್ತು ಬ್ರಿಟಿಷ್‌ ಜೂನಿಯರ್ ಓಪನ್‌ನಲ್ಲಿ ಚಾಂಪಿಯನ್‌ ಆದ ಮೊದಲ ಭಾರತದ ಆಟಗಾರ ಎನ್ನುವ ಕೀರ್ತಿ ಹೊಂದಿರುವ ಸೌರವ್‌ ಘೋಷಾಲ್ ಪಶ್ಚಿಮ ಬಂಗಾಳದವರು. ಕೋಲ್ಕತ್ತದ ರ್‍ಯಾಕೆಟ್‌ ಕ್ಲಬ್‌ನಲ್ಲಿ ಮೊದಲು ಸ್ಕ್ವಾಷ್ ಆಡಲು ಆರಂಭಿಸಿದ 28 ವರ್ಷದ ಘೋಷಾಲ್ ನಂತರ ಚೆನ್ನೈನಲ್ಲಿರುವ ಐಸಿಎಲ್ ಸ್ಕ್ವಾಷ್‌ ಅಕಾಡೆಮಿ ಸೇರಿಕೊಂಡರು. ಏಷ್ಯನ್‌ ಕ್ರೀಡಾಕೂಟದಲ್ಲಿ ಒಟ್ಟು ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಜಯಿಸಿದ್ದಾರೆ.

-ಹೀಗೆ ಒಬ್ಬೊಬ್ಬ ಕ್ರೀಡಾಪಟುವಿನದ್ದು ಒಂದೊಂದು ಕಥೆಯಿದೆ. ಅನುಭವಿ ಕ್ರೀಡಾಪಟುಗಳು ತೆರೆಯ ಮರೆಗೆ ಸರಿಯಲು ಸಜ್ಜಾಗಿರುವಾಗ ಇವರು ಭರವಸೆಯ ತಾರೆಗಳಾಗಿ ಉದಯಿಸಿದ್ದಾರೆ. ದಕ್ಷಿಣ ಕೊರಿಯದ ಇಂಚೆನ್‌ನಲ್ಲಿ ನಡೆದ 17ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಯೋಗೇಶ್ವರ್‌ ದತ್‌, ಸೀಮಾ ಪೂನಿಯಾ ಹಾಗೂ ಸೌರವ್‌ ಘೋಷಾಲ್‌ ಚಿನ್ನ ಜಯಿಸಿದ್ದಾರೆ.

ಶೂಟಿಂಗ್ ವಿಭಾಗದಲ್ಲಿ ಭಾರತದ್ದೂ ಯಾವಾಗಲೂ ಎತ್ತರದ ಸಾಧನೆ. ಇದರಲ್ಲಿ ಅನುಭವಿಗಳಾದ ಗಗನ್‌ ನಾರಂಗ್ ಮತ್ತು ಅಭಿನವ್‌ ಬಿಂದ್ರಾ ಅವರ ಪಾಲು ದೊಡ್ಡದು. ಕೊನೆಯ ಏಷ್ಯನ್‌ ಕೂಟವಾಡಿದ ಬಿಂದ್ರಾ ಬೆಳ್ಳಿ ಪದಕದೊಂದಿಗೆ ಸವಿ ನೆನಪಿನ ಬುತ್ತಿ ಕೊಂಡೊಯ್ದರು. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟ ಮೊದಲ ಶೂಟರ್‌ ಎನಿಸಿರುವ ಬಿಂದ್ರಾ ಏಷ್ಯನ್‌ ಕೂಟದಿಂದ ವಿದಾಯ ಹೇಳಿದರೆ, ಇನ್ನೊಂದು ದಿಕ್ಕಿನಿಂದ ಜಿತು ರಾಯ್ ಎನ್ನುವ ಸೂರ್ಯ ಭರವಸೆಯ ಕಿರಣಗಳನ್ನು ಮೂಡಿಸಿದ್ದ.

ರಾಜ್ಯದ ಕ್ರೀಡಾಪಟುಗಳ ಸಾಧನೆ
  • ಹಿಂದಿನ ಕೂಟದ ಸಾಧನೆಯನ್ನು ಹೋಲಿಕೆ ಮಾಡಿದರೆ ರಾಜ್ಯದ ಕ್ರೀಡಾಪಟುಗಳ ಸಾಧನೆ ಕಡಿಮೆಯಾಯಿತು.

2010ರಲ್ಲಿ ಬಿಲಿಯರ್ಡ್ಸ್‌ ಸಿಂಗಲ್ಸ್ ವಿಭಾಗದಲ್ಲಿ ಪಂಕಜ್ ಅಡ್ವಾಣಿ ಚಿನ್ನ ಜಯಿಸಿದ್ದರು. ಅಶ್ವಿನಿ ಅಕ್ಕುಂಜಿ 400ಮೀ. ಹರ್ಡಲ್ಸ್‌ ಮತ್ತು 4XX400ಮೀ. ಸ್ಪರ್ಧೆ ಯಲ್ಲೂ ಬಂಗಾರದ ಸಾಮರ್ಥ್ಯ ತೋರಿ ದ್ದರು. ಹೆಪ್ಟಥ್ಲಾನ್‌ನಲ್ಲಿ ಪ್ರಮೀಳಾ ಅಯ್ಯಪ್ಪ ಕಂಚು ಜಯಿಸಿದ್ದರು. ವಿಕಾಸ್‌ ಗೌಡ ಕಂಚು ಪಡೆದಿದ್ದರು. ಭಾರತ ಕಬಡ್ಡಿ ಮತ್ತು ಹಾಕಿ ತಂಡಗಳಲ್ಲಿಯೂ ಕರ್ನಾಟಕದ ಆಟಗಾರರು ಇದ್ದರು. ಕಬಡ್ಡಿ ತಂಡ ಚಿನ್ನದ ಪದಕ ಗೆದ್ದುಕೊಂಡಿತ್ತು. ಹಾಕಿ ತಂಡ ಕಂಚಿಗೆ ತೃಪ್ತಿಪಟ್ಟಿತ್ತು.

ಕಾಡಿದ ಚಿನ್ನದ ಬರ ಈ ಸಲದ ಏಷ್ಯನ್ ಕೂಟದ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಕೈಗೆಟುಕದಂತಾಯಿತು. ಕಾಮನ್‌ವೆಲ್ತ್ ಕೂಟದಲ್ಲಿ ಬಂಗಾರ ಗೆದ್ದಿದ್ದ ವಿಕಾಸ್‌ ಇಂಚೆನ್‌ನಲ್ಲಿ ಚಿನ್ನ ಗೆಲ್ಲುವ ಭರವಸೆ ಇತ್ತಾದರೂ, ಅದು ಸಾಧ್ಯವಾಗಲಿಲ್ಲ. ಬೆಳ್ಳಿಗಷ್ಟೇ ತೃಪ್ತಿ ಪಡಬೇಕಾಯಿತು. ಶೂಟರ್‌ ಪಿ.ಎನ್‌. ಪ್ರಕಾಶ್ ತಂಡ ಸ್ಪರ್ಧೆಯಲ್ಲಿ ಕಂಚು ಗೆದ್ದರು. ಅಥ್ಲೀಟ್‌ ಎಂ.ಆರ್‌. ಪೂವಮ್ಮ 400ಮೀ. ಸ್ಪರ್ಧೆಯಲ್ಲಿ ಕಂಚು ಪಡೆದರು. ಆದರೆ, ಅಶ್ವಿನಿ ಅಕ್ಕುಂಜಿ 400ಮೀ. ಹರ್ಡಲ್ಸ್‌ನಲ್ಲಿ ನಾಲ್ಕನೇಯವರಾಗಿ ಗುರಿ ಮುಟ್ಟಿ ನಿರಾಸೆಗೆ ಒಳಗಾದರು. ಆದರೆ, 4X400ಮೀ. ರಿಲೇಯಲ್ಲಿ ಮಹಿಳಾ ತಂಡ ಚಿನ್ನದ ಸಾಧನೆ ತೋರಿತು. ಭಾರತ ಪುರುಷರ ಹಾಕಿ ತಂಡದಲ್ಲಿ ವಿ.ಆರ್. ರಘುನಾಥ್, ಎಸ್.ವಿ. ಸುನಿಲ್ ಮತ್ತು ನಿಕಿನ್‌ ತಿಮ್ಮಯ್ಯ ಇದ್ದರು. ಈ ತಂಡ ಚಿನ್ನದ ಪದಕ ಗೆದ್ದುಕೊಂಡಿತು. ಮಹಿಳಾ ಕಬಡ್ಡಿ ತಂಡಕ್ಕೆ ಕನ್ನಡತಿ ತೇಜಸ್ವಿನಿ ಬಾಯಿ ನಾಯಕಿ. ರೈಲ್ವೆಯಲ್ಲಿ ಉದ್ಯೋಗಿ­ಯಾಗಿರುವ ಕರ್ನಾಟಕದ ಮಮತಾ ಪೂಜಾರಿ, ಕೆಎಸ್‌ಪಿಯಲ್ಲಿರುವ ಸುಷ್ಮಿತಾ ಪವಾರ್‌ ಮತ್ತು ಜಯಂತಿ ಅವರು ತಂಡದಲ್ಲಿದ್ದರು.

ರೈತನ ಮಗನಾದ ಜಿತು ಮೂಲತಃ ನೇಪಾಳ ದವರು. ಅರ್ಮಿಯಲ್ಲಿ ಸುಬೇದಾರ್‌ ಆಗಿರುವ ಅವರು ಇಂಚೆನ್‌ ಏಷ್ಯನ್‌ ಕೂಟದಲ್ಲಿ ಒಂದು ಚಿನ್ನ ಮತ್ತು ಒಂದು ಕಂಚು ಗೆದ್ದರು. ಸ್ಕ್ವಾಷ್‌ ಕ್ರೀಡೆಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಯಿತು. ಮಹೇಶ್‌ ಮಂಗಾವಕರ್‌, ಸೌರವ್ ಘೋಷಾಲ್‌ ಮತ್ತು ಹರೀಂದರ್‌ ಪಾಲ್‌ ಸಂಧು ಅವರನ್ನೊಳಗೊಂಡ ಭಾರತ ಪುರುಷರ ತಂಡ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ತೋರಿತು. ಘೋಷಾಲ್ ವೈಯಕ್ತಿಕ ವಿಭಾಗದಲ್ಲಿಯೂ ಬೆಳ್ಳಿ ಗೆದ್ದರು. ಹೀಗೆ ಹೊಸ ಪ್ರತಿಭೆಗಳು ಅರಳಲು ಇಂಚೆನ್‌ ಕ್ರೀಡಾಕೂಟ ವೇದಿಕೆಯಾಯಿತು. ಮೇರಿ ಕೋಮ್‌ ಮಹಿಳಾ ವಿಭಾಗದಲ್ಲಿ ಚೊಚ್ಚಲ ಚಿನ್ನ ತಂದುಕೊಟ್ಟ ಮೊದಲ ಭಾರತೀಯ ಬಾಕ್ಸರ್‌ ಎನ್ನುವ ಕೀರ್ತಿಗೆ ಪಾತ್ರರಾದರು.

2010ರ ಏಷ್ಯನ್‌ ಕೂಟಕ್ಕೆ ಹೋಲಿಸಿದರೆ ಭಾರತ ಈ ಸಲ ಪದಕ ಜಯಿಸಿದ್ದು ಕಡಿಮೆ. ಆದರೆ, ಕೆಟ್ಟ ಪ್ರದರ್ಶನ ವನ್ನೇನು ತೋರಲಿಲ್ಲ. ಈ ಸಲ ಭಾರತ 50ಕ್ಕಿಂತಲೂ ಹೆಚ್ಚು ಪದಕಗಳನ್ನು ಗೆದ್ದಿದೆ. ಸತತ ಮೂರನೇ ವರ್ಷ ಪದಕ ಗಳಿಕೆಯಲ್ಲಿ ‘ಅರ್ಧಶತಕ’ ಬಾರಿಸಿದೆ. 2006 ದೋಹಾ ಕೂಟದಲ್ಲಿ 53 ಮತ್ತು ಗುವಾಂಗ್ ಜೌ ಕೂಟದಲ್ಲಿ 65 ಪದಕಗಳು ಲಭಿಸಿದ್ದವು.

ಈ ಸಲದ ಕೂಟ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುವುದರ ಜೊತೆಗೆ, ಕೆಲ ಸವಾಲುಗಳನ್ನೂ ಒಡ್ಡಿತು. ಎರಡು ತಿಂಗಳ ಹಿಂದೆಯಷ್ಟೇ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕೂಟದಲ್ಲಿ ಭಾರತ 64 ಪದಕ ಜಯಿಸಿತ್ತು. ಆದರೆ, ಕಾಮನ್‌ವೆಲ್ತ್‌ನಲ್ಲಿ ಸುಲಭವಾಗಿ ಗೆಲ್ಲುವಷ್ಟು ಪದಕಗಳನ್ನು ಏಷ್ಯನ್‌ ಕೂಟದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಇದು ಭಾರತದ ಅಥ್ಲೀಟ್‌ಗಳಿಗೆ ಪಾಠವಾಗಬೇಕಿದೆ.

ಎರಡು ವರ್ಷ ಕಳೆದರೆ ಸಾಕು ರಿಯೊ ಡಿ ಜನೈರೊದಲ್ಲಿ ಒಲಿಂಪಿಕ್ಸ್ ಆರಂಭವಾಗಲಿದೆ. ಕಾಮನ್‌ವೆಲ್ತ್‌ ಮತ್ತು ಏಷ್ಯಾದ ರಾಷ್ಟ್ರಗಳ ಸ್ಪರ್ಧಿಗಳ ಎದುರು ತೋರಿಸಿದ ಸಾಮರ್ಥ್ಯವನ್ನು ಒಲಿಂಪಿಕ್ಸ್‌ನಲ್ಲಿ ವಿಶ್ವದ ಕ್ರೀಡಾಪಟುಗಳ ಮುಂದೆ ಸಾಬೀತುಪಡಿಸ ಬೇಕಿದೆ. ಈಗಿನ ಸಾಧನೆಯನ್ನೇ ಸ್ಫೂರ್ತಿಯಾಗಿಟ್ಟು ಕೊಂಡು ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆಯಾಡಲು ಭಾರತ ಸಜ್ಜಾಗಬೇಕಿದೆ.>> ಪುರವಣಿ› (ಪ್ರಮೋದ್‌ ಜಿ.ಕೆ.10/06/2014 ಪ್ರ.)ಸದಸ್ಯ:Bschandrasgr೧೬-೧೧-೨೦೧೪