ಚರ್ಚೆಪುಟ:ವಿಗಲನ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಯಾಲಿಸಿಸ್(ವಿಗಲನ) ಎಂಬುದು ರಕ್ತದಿಂದ ತ್ಯಾಜ್ಯ ಮತ್ತು ದೇಹಕ್ಕೆ ಅನಗತ್ಯವಾದ ನೀರನ್ನು ಹೋಗಲಾಡಿಸುವ ಪ್ರಕ್ರಿಯೆ. ನಮ್ಮ ಮೂತ್ರಪಿಂಡಗಳು ಸ್ವಾಭಾವಿಕವಾಗಿಯೇ ಈ ಕಾರ್ಯನವನ್ನು ನಿರ್ವಹಿಸುತ್ತವೆ. ಆದರೆ ಕಾರಣಾಂತರಗಳಿಂದ ಕೆಲವರ ಮೂತ್ರ ಪಿಂಡಗಳು ಕೆಲಸ ನಿರ್ವಹಿಸಲು ವಿಫಲಗೊಳ್ಳುತ್ತವೆ. ಅರ್ಥಾತ್, ಡಯಾಲಿಸಸ್ ಎಂಬುದು ಕೃತಕ ಮೂತ್ರಪಿಂಡಗಲಳಾಗಿ ಕಾರ್ಯ ನಿರ್ವಹಿಸುತ್ತವೆ.

ಡಯಾಲಿಸಿಸನನ್ನು ಯಾರು ಉಪಯೋಗಿಸುವುದು ಎಂದು ತಿಳಿಯುವುದು ಅಗತ್ಯ.ಇದನ್ನು ಮೂತ್ರಪಿಂಡಗಳು ತಾತ್ಕಾಲಿಕವಾಗಿ ವಿಫಲಗೊಂಡು ಬಳಲುತ್ತಿರುವವರು ಹಾಗೂ ಶಾಶ್ವತವಾಗಿ ಮೂತ್ರಪಿಂಡಗಳ ಕಾರ್ಯ ಸ್ಥಗಿತಗೊಂಡವರು ಉಪಯೋಗಿಸಬಹುದು. ಮೂತ್ರಪಿಂಡಗಳು ನಮ್ಮ ದೇಹದ ನೀರಿನ ಅಂಶವನ್ನು ನಿಯಂತ್ರಣದಲ್ಲಿರುತ್ತದೆ. ಅಷ್ಟೇ ಅಲ್ಲದೆ, ದೇಹದ ಅನಗತ್ಯ ನೀರನ್ನೂ, ತ್ಯಾಜ್ಯಗಳಾದ ಅಮೋನಿಯ, ಯೂರಿಯಾ ಇತ್ಯಾದಿಗಳನ್ನು ದೇಹದಿಂದ ಹೊರಹಾಕುತ್ತದೆ. ಡಯಾಲಿಸಿಸ್ ಮೂತ್ರಪಿಂಡ ವಿಫಲವಾದವರಿಗೆ ಅತೀ ಅವಶ್ಯವಾಗಿದೆ. ಒಬ್ಬ ಆರೋಗ್ಯವಂತ ಮನುಷ್ಯನಲ್ಲಿ ಸುಮಾರು ೧೫೦೦ ಲೀಟರ್ ಮೂತ್ರವು ಶೋಧಿಸಲಾಗುತ್ತದೆ. ಹೀಗಿರುವಾಗ ದೇಹದ ತ್ಯಾಜ್ಯಗಳನ್ನು ಮೂತ್ರದ ಮೂಲಕ ಹೊರ ಹಾಕದಿದ್ದಲ್ಲಿ ದೇಹಕ್ಕೆ ಅದು ವಿಷವಾಗಿ ಪರಿಣಮಿಸುತ್ತದೆ.ಕ್ರಮೇಣ ಮಾನವನ ಜೀವಕ್ಕೆ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ಡಯಾಲಿಸಿಸ್ ಮೂತ್ರಪಿಂಡ ವಿಫಲಗೊಂಡ ರೋಗಿಗಳಿಗೆ ಒಂದು ಉತ್ತಮ ಪರಿಹಾರ.