ಚರ್ಚೆಪುಟ:ಪಿ. ಭಾನುಮತಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳಸಿ ಬೀದಿಗೆ ಬಿದ್ದವರು

ಪೀಠಿಕೆ.

ಮನುಷ್ಯ ತುಂಬಾ ವೈವಿಧ್ಯಮಯ ಭಾವನೆ ಆಲೋಚನೆ ನಿರ್ಧಾರಗಳ ಮೂಲಕ ವಿಭಿನ್ನ ಎನ್ನಿಸಿಕೊಂಡು ಭುವಿಯಲ್ಲಿ ಜೀವಿಸುತ್ತಿರುವ ಏಕೈಕ ಪ್ರಾಣಿ. ಮನುಷ್ಯ ಒಂದು ಪ್ರಾಣಿ ಎನ್ನುವುದು ಎಷ್ಟು ಸತ್ಯವೋ ನೀನೊಬ್ಬ ಪ್ರಾಣಿ ಎಂದರೆ ಆತನ ಸಿಟ್ಟು ನೆತ್ತಿಗೇರುವುದು ಅಷ್ಟೇ ಸತ್ಯ. ಆದರೆ ಆತನಿಗೂ ಇತರೆ ಪ್ರಾಣಿಗಳಂತೆ ಸಂಬಂಧದ ಅರಿವು ಮರೆಯಾಗುತ್ತಿರುವುದು ವಿಷಾದನೀಯ. ಅರೆ.. ಯಾಕೆ ? ಈ ಮನುಷ್ಯ ಬೆರಳ ತುದಿಯಲ್ಲಿ ಪೆನ್ನು ಹಿಡಿದು ಏನೇನೋ ಗೀಚುತ್ತಿದ್ದಾನೆ, ಎಂದು ಕೋಪ ಬರುತ್ತಿದೆಯಾ..? ಬರಬೇಕಾದದ್ದೆ ಅಲ್ವೇ, ನಾಯಿಯನ್ನು ನಿಯತ್ತಿನ ಆಧಾರದಲ್ಲಿ, ನರಿಯನ್ನು ಬುದ್ಧಿಯ ಆಧಾರದಲ್ಲಿ, ಆನೆಯನ್ನು ಗಾತ್ರದ ಆಧಾರದಲ್ಲಿ, ಹಾಗೆಯೇ ಹಾವನ್ನು ವಿಷದ ಆಧಾರದಲ್ಲಿ ಪಟ್ಟನೆ ಊಹಿಸಿಬಿಡುವ ಮನುಷ್ಯ ತನ್ನನ್ನು ಹೇಗೆ ನಿರ್ಧರಿಸಬೇಕೆಂದು. ಇನ್ನೂ ಗೊಂದಲದಲ್ಲಿದ್ದಾನೆ. ಇಲ್ಲಿಯವರೆಗೆ ಓದಿದವರ ತಾಳ್ಮೆ ಮಿತಿಮೀರಿ, ಇನ್ನೇನು ಈ ಅಂಕಣವನ್ನು ಮುಗುಚಿಹಾಕಿ ಬೇರೆ ನೋಡೋಣ ಎಂದು ನಿರ್ಧರುವತ್ತ ಮನಸು ಮಾಡಿದರೆ ಕಷ್ಟ ಅಲ್ವೇ.. ವಿಷಯಕ್ಕೆ ಬರೋಣ, ಜೀವನ ಎಂದರೆ ಏನು..? ಹೇಗೆ..? "ಜೀವನ" ಈ ಮೂರು ಪದಗಳ ಸಾರಾಂಶವನ್ನು ವಿವರಣಾತ್ಮಕವಾಗಿ ಉಲ್ಲೇಖಿಸಲು ಪದಗಳು ಸಾಲುವುದಿಲ್ಲ ನಮ್ಮ ಕವಿವೃಂದ ಜೀವನದ ಸಾಕಷ್ಟು ಮೌಲ್ಯಗಳನ್ನು ಹೇಳಿಕೊಟ್ಟರೆ ಹೊರತು ಅದರ ನಿಖರತೆಯ ಮೂಲಕ್ಕೆ ಕೈ ಹಾಕುವ ಸಾಹಸ ಮಾಡಿಲ್ಲ.


ಬೆಳಸಿ ಬೀದಿಗೆ ಬಿದ್ದವರು" ಮಾನವನ ಜೀವನದಲ್ಲಿ ಬಾಲ್ಯ & ಯೌವ್ವನ ಒಂದು ಭಾಗವಾದರೆ ವೈವಾಹಿಕ ಜೀವನ ಇನ್ನೊಂದು ಭಾಗ. ಮದುವೆ ಮಕ್ಕಳೆಂಬ ಕುಟುಂಬದ ಬಂಧನದಲ್ಲಿ ಪಡೆದ ಅನುಭವಗಳು ಅವಿಸ್ಮರಣೀಯ. ಯೌವ್ವನದ ಜೀವಗಳಿಗೆ ಮದುವೆಯ ಬಂಧವನ್ನು ಕಟ್ಟಿ ವೈವಾಹಿಕ ಜೀವನಕ್ಕೆ ಕಳುಹಿಸುವುದು ಸಾಮಾನ್ಯ ಅದರಿಂದ ಅವರಿಗೆ ತನ್ನ ಪರಂಪರೆಯನ್ನು ಬಿತ್ತಿಬೆಳೆಸಲು ಭಗವಂತ ಹಣೆಯ ಬರಹದಲ್ಲಿ ಬರೆದನೆಂದು ನಮ್ಮ ಹಿರಿಯರ ನಂಬಿಕೆ. ತಂದೆ ತಾಯಿ ಮಕ್ಕಳು ಹುಟ್ಟುತ್ತಿದ್ದಂತೆ ಅವರಲ್ಲಿ ನಾನಾ ರೂಪಕಂಡು ಕೊಂಡಾಡಿ ಮರೆಸುತ್ತಾರೆ. ತಾಯಿ ಹೊತ್ತು ಹೆತ್ತು ಪ್ರೀತಿಯ ಮಡಿಲಿನ ತೊಟ್ಟಿಲಲ್ಲಿ ಬಚ್ಚಿಟ್ಟು ಬೆಳೆಸುತ್ತಾಳೆ. ತಂದೆ ಆತನ ಭವಿಷ್ಯಕ್ಕೆ ಅನುಕೂಲವಾಗುವ ಎಲ್ಲಾತರಹದ ಶಿಕ್ಷಣ ಬೆಂಬಲ ಭರವಸೆ ಧೈರ್ಯದ ಜೊತೆಗೆ ಬದುಕು ಕಲಿಸಿದ ಪಾಠವನ್ನು ಹೆಜ್ಜೆಹೆಜ್ಜೆಗೂ ತಿಳಿಸುತ್ತಾ ಬೆಳೆಸುತ್ತಾನೆ. ಹೀಗೆ ಅಮ್ಮನ ಸೀರೆಯನ್ನು ಗಲೀಜು ಮಾಡಿ ಅಪ್ಪನ ಹೆಗಳನ್ನು ಕೊಳೆಮಾಡಿ ಅರಿವಿರದ ಪ್ರಾಣಿಗಳಂತೆ ಮಕ್ಕಳು ಬೆಳೆದು ಬಿಡುತ್ತಾರೆ. ಯೌವನಕ್ಕೆ ಬರುತ್ತಿದ್ದಂತೆ ತಂದೆ ತಾಯಿಯರು ಇವರ ಆಳಾಗುತ್ತಾರೆ. ಇದು ಬೆಳಸಿದ ತಂದೆತಾಯಿಯ ತಪ್ಪೋ, ಕಲಿತ ಶಿಕ್ಷಣದ ಪ್ರತಿಫಲವೊ, ಅಥವಾ ಅಂತಹ ಸಮಾಜದಲ್ಲಿನ ನಿಯಮವೂ ಇಲ್ಲ ಅವರವರ ಮಾಡಿದ ಕರ್ಮದ ಫಲವೋ ತಿಳಿಯುವುದು ಕಷ್ಟ. ಯೌವ್ವನದ ಮಕ್ಕಳಿಗೆ ಮದುವೆ ಮಾಡಿ ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಮಣ್ಣಾಗುವ ಆಸೆಹೊತ್ತ ಹಿರಿ ಜೀವಗಳು ಕೈಲಿದ್ದ ಹಣವನ್ನೆಲ್ಲಾ ಸೇರಿಸಿ ಸಾಲದೊಂದಿಗೆ ಮರ್ಯಾದೆಯನ್ನು ಅಡವಿಟ್ಟು ಕಲ್ಯಾಣವನ್ನು ಮಾಡಿ ಹಾರೈಸುತ್ತಾರೆ. ಪ್ರತಿನಿತ್ಯವೂ ಚಿಕ್ಕಪುಟ್ಟ ವಿಚಾರಕ್ಕೂ ನೆನಪಾಗುತ್ತಿದ್ದ ತಂದೆತಾಯಿ ಬರುಬರುತ್ತಾ ದೊಡ್ಡದೊಡ್ಡ ನಿರ್ಧಾರದಲ್ಲಿ ಮರೆಯಾಗುತ್ತಾರೆ. ಮಡದಿಯ ಸರ್ವಾಧಿಕಾರದಲ್ಲಿ ಸೇನಾಧಿಪತಿಯಂತೆ ವರ್ತಿಸುವ ಮಕ್ಕಳೊಂದಿಗೆ ತಂದೆತಾಯಿಯದು ಬೇಡಿಕೆಯ ಬದುಕನ್ನು ಒಲ್ಲದ ಮನಸ್ಸಲ್ಲಿ ಒಪ್ಪುವ ಪರಿಸ್ಥಿತಿ. ಕೈತುತ್ತು ಕೊಟ್ಟು ಬೆಳಸಿದ ಮಕ್ಕಳು ತುತ್ತು ಕೊಡುವ ವರೆಗೆ ಕಾಯುವ ಹಂತವನ್ನು ಯಾವ ತಂದೆತಾಯಿ ನಿರೀಕ್ಷಿಸಬಹುದು ಇಂತಹ ಹತ್ತು ಹಲವು ವಿಚಾರಗಳಿಂದ ಕೂಡುಕೂಟುಂಬ ಇಬ್ಭಾಗವಾಗಿ ವೃದ್ಧ ತಂದೆತಾಯಿ ಬೀದಿಪಾಲಾಗಿ ಜೀವನ ಸಾಗಿಸುತ್ತಿರುವ ಉದಾಹರಣೆಗಳು ಸಾವಿರಾರು. ಈಗ ನನ್ನ ಪೀಠಿಕೆ ತಮಗೆಲ್ಲ ಅರ್ಥ ಆಯ್ತು ಅನ್ಸುತ್ತೆ.

ಜನ್ಮ ನೀಡಿ ಹೊತ್ತು ಹೆತ್ತು ಹೆಗಲ ಮೇಲೆ ಮೆರಸಿ ಅತ್ತಾಗ ಕಣ್ಣೋರೆಸಿ ನಕ್ಕಾಗ ಸಂಭ್ರಮಿಸಿ ಬದುಕಿನ ಏಳುಬೀಳು ಸೋಲು ಗೆಲುವಿನ ಬೆಂಬಲಿಸಿ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಗಿದ್ದು ಅವರೇ ಸೃಷ್ಟಿಸಿಕೊಟ್ಟ ಜೀವನದಲ್ಲಿ ಅವರನ್ನೇ ಬೀದಿಗೆ ಬಿಟ್ಟ ನಿಮ್ಮ ಬುದ್ಧಿಗೆ ಮುಂದೊಂದಿನ ನಿಮ್ಮ ಮಕ್ಕಳು ಮುನ್ನುಡಿ ಬರೆಯುತ್ತಾರೆ ಕಾಯಿರಿ.

ಇದುವೇ ಬೆಳೆಸಿ ಬೀದಿಗೆ ಬಿದ್ದವರು


✍️RKR Thoughts