ಘನ್ ಸೋಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:MT.JPG
'ಘನ್ ಸೋಲಿ'
Ghansoli

Ghansoli
ರಾಜ್ಯ ಮಹಾರಾಷ್ಟ್ರ
ನಿರ್ದೇಶಾಂಕಗಳು 19.7° N 72.59° E
ವಿಸ್ತಾರ {{{area_total}}} km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 400 701
 - +022
 - MH-43

ಮರಾಠಿ ಭಾಷೆಯಲ್ಲಿ (घणसोली),

’ಸಿಡ್ಕೊ’(CIDCO) ಸಂಸ್ಥೆ, ಸುಮಾರು ೩ ಸಾವಿರ ಫ್ಲಾಟ್ ಗಳನ್ನು ನಿರ್ಮಿಸಿದ್ದಾರೆ. ಘನ್ ಸೋಲಿಯಲ್ಲಿ ಅನೇಕ ರಸಾಯನಿಕ ಕಾರ್ಖಾನೆಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು :

ಬಸ್ ಮಾರ್ಗ[ಬದಲಾಯಿಸಿ]

'ಹೊಸ ಮುಂಬಯಿ' ಎಂದು ಹೆಸರಾದ, ವಾಶಿ ಯಿಂದ ಇಲ್ಲಿಗೆ, ಕೇವಲ ೨೦ ನಿಮಿಷಗಳಲ್ಲಿ ಬಸ್ಸಿನಲ್ಲಿ ಬರಬಹುದು. ಅತಿ ಹಳೆಯ ಕುರುಹುಗಳಲ್ಲೊಂದಾದ ಮೂಕಾಂಬಿಕಾ ದೇವಸ್ಥಾನ, ರೈಲ್ವೆ ನಿಲ್ದಾಣದ ಬಳಿಯಲ್ಲೇ ಸ್ಥಾಪಿಸಲ್ಪಟ್ಟಿದೆ. ಥಾಣೆಯಿಂದ ವಾಶಿ/ನೇರೂಲ್ ರೈಲ್ವೆ ದಾರಿ ಬಂದ ಮೇಲೆ, ಈ ಸ್ಥಳಕ್ಕೆ ಹೆಚ್ಚು ಹೆಚ್ಚು ಜನರು ಬರಲು ಆರಂಭಿಸಿದರು. ಇಲ್ಲಿ ವಸತಿಗೃಹಗಳ ನಿರ್ಮಾಣವಾಗಿದೆ. ಕಡಿಮೆ ಬೆಲೆಗೆ ದೊರೆಯುವ, ಹಲವು ಬಗೆಯ ವಸತಿ ಗೃಹಗಳು ಲಭ್ಯವಿವೆ. ನಿರ್ಮಲವಾದ ಗಾಳಿ ಹಾಗೂ ಪರಿಸರವಿರುವ ಈ ಸ್ಥಳ, ಈಗೀಗ ಹೊಸದಾಗಿ ಇನ್ನೂ ಹೆಚ್ಚು ಪ್ರಬುದ್ಧಮಾನಕ್ಕೆ ಬರುತ್ತಿದೆ.'ಘನ್ ಸೋಲಿ' ಯಲ್ಲಿ, 'ಕೃಷಿಕ ಸಂಸ್ಥೆ ಸಂಚಾಲಿತ ವಿದ್ಯಾಲಯ'ವಿದೆ. ಎ.ಎಸ್.ಪಿ ಸಂಚಾಲಿತ, ಇಂಗ್ಲೀಷ್ ಕಾನ್ವೆಂಟ್ ಪ್ರೌಢಶಾಲೆ ನಗರದಲ್ಲಿದೆ. ರೈಲ್ವೆ ನಿಲ್ದಾಣದ ಸಮೀಪದಲ್ಲಿ ಕೆಲವು ಪೂಜಾಸ್ಥಳಗಳ ನಿರ್ಮಾಣವಾಗಿದೆ. ಅವುಗಳಲ್ಲಿ ಮುಖ್ಯವಾದವುಗಳು :

'ಘನಸೋಲಿ' ಯನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ೧. 'ಘನ್ ಸೋಲಿ ಗ್ರಾಮ'. ೨. 'ಘನ್ ಸೋಲಿ ಹೊಸ ಸೆಕ್ಟರ್.' 'ಘನ್ ಸೋಲಿ ಗ್ರಾಮ'ದಲ್ಲಿ ಹಳೆಯ ಮಾದರಿಯ ಮನೆಗಳಿವೆ. 'ಹೊಸದಾಗಿ ನಿರ್ಮಿಸಿದ ಸೆಕ್ಟರ್' ನಲ್ಲಿ, ಹಲವಾರು ಆಧುನಿಕ ಕಟ್ಟಡಗಳು ನಿರ್ಮಾಣವಾಗಿವೆ.

ಥಾಣೆ ವಾಶಿ ರೈಲುಮಾರ್ಗ[ಬದಲಾಯಿಸಿ]

ಈ ರೈಲು ಮಾರ್ಗದಲ್ಲಿ ಪ್ರಯಾಣಿಸಿ, 'ಘನ್ ಸೋಲಿ' ಯನ್ನು ತಲುಪಬಹುದು.

  • ಐರೋಲಿ,
  • ರಾಬಲೆ,
  • ಘನ್ಸೋಲಿ,
  • ಕೋಪರ್ ಖೈರಾನೆ,
  • ತುರ್ಭೆ,
  • ಸಾನ್ ಪಾಡ,
  • ವಾಶಿ,
  • ಮಾನ್ ಖುರ್ಡ್,
  • ಗೋವಂಡಿ
  • ಚೆಂಬೂರ್,
  • ತಿಲಕ್ ನಗರ್,
  • ಕುರ್ಲಾ

ಕೊಂಕಣ್ ರೈಲ್ವೆಯಿಂದಲೂ ಸಂಪರ್ಕವಿದೆ[ಬದಲಾಯಿಸಿ]

  • ಪನವೇಲ್
  • ಖಾಂಡೇಶ್ವರ್,
  • ಮಾನಸರೋವರ್,
  • ಖಾರ್ ಘರ್,
  • ಬೇಲಾಪುರ್,
  • ಸೀವುಡ್,
  • ನೇರುಲ್,
  • ಇಯುನಗರ್,
  • ವಾಶಿ

'ವಾಶಿ'ಯಿಂದ ರೈಲು ಬದಲಾಯಿಸಿ, 'ಘನ್ ಸೋಲಿ'ಗೆ ಬರಬಹುದು.

ಘನಸೋಲಿ ಗ್ರಾಮ[ಬದಲಾಯಿಸಿ]

ಘನಸೋಲಿ ಗ್ರಾಮದ ಬಗ್ಗೆ ಹೆಚ್ಚು ವಿವರಗಳು ತಿಳಿದಿಲ್ಲ. 'ಮೀನು ಹಿಡಿಯುವವರ ಬಸದಿ'ಯೆನ್ನುವ ವಿಷಯ ಬಿಟ್ಟರೆ, 'ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮ'ದ ಸಮಯದಲ್ಲಿ 'ಗಾಂಧೀಜಿ'ಯವರು ಆಯೋಜಿಸಿದ 'ಉಪ್ಪಿನ ಸತ್ಯಾಗ್ರಹ'ದ ಸಮಯದಲ್ಲಿ ಇದು ಪ್ರಮುಖಪಾತ್ರವಹಿಸಿತ್ತು. ಆ ಸಮಯದಲ್ಲಿ ದೇಶದ ನಾಯಕರಾಗಿದ್ದ ಸ್ವಾತಂತ್ರ್ಯ ಸೇನಾನಿಗಳು,ಡಾ. ರಾಜೇಂದ್ರ ಪ್ರಸಾದ್, ಕಸ್ತುರ್ ಬಾ ಗಾಂಧಿ, ಮತ್ತು ಸರೋಜಿನಿ ನಾಯುಡುರವರು 'ಘನಸೋಲಿ ಗ್ರಾಮ'ದಲ್ಲಿ ಸಭೆಸೇರಿ ಐರೋಲಿ ಮತ್ತು ದಿವಾ ಗ್ರಾಮಗಳಿಂದ ಉತ್ಪಾದಿಸಲ್ಪಟ್ಟ ಉಪ್ಪನ್ನು, ಸಂಗ್ರಹಿಸಿ,ಥಾಣೆಯ ಮಾರುಕಟ್ಟೆಯಲ್ಲಿ ಮಾರಿದ ದಾಖಲೆಗಳು ಸಿಗುತ್ತವೆ.