ಗ್ರೆಗೊರಿ ಪೆಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ರೋಮನ್ ಹಾಲಿಡೇ'ಚಿತ್ರದಲ್ಲಿ ಗ್ರೆಗೊರಿ ಪೆಕ್

'ಗ್ರೆಗೊರಿ ಪೆಕ್' ದಿಟ್ಟ ಮುಂದಾಳತ್ವವನ್ನು ಅತ್ಯಂತ ಸಮರ್ಪಕವಾಗಿ ನಡೆಸಿಕೊಂಡು ಬರುವ ಧೀರ, ಶೂರನಪಾತ್ರಕ್ಕೆ ಹೇಳಿಮಾಡಿಸಿದಂತೆ ಮೈಮಾಟಪಡೆದಿರುವ ಕೆಲವೇ ನಟರಲ್ಲಿ ಪ್ರಮುಖರು. ಅವರಿಗೆ ಸಿಕ್ಕ ಪಾತ್ರಗಳೆಲ್ಲಾ ಅಂತಹವೆ. 'ಮೆಕೆನ್ನಾಸ್ ಗೋಲ್ದ್', 'ಗನ್ಸ್ ಆಫ್ ನವರೋನ್', ಇತ್ಯಾದಿ ಚಿತ್ರಗಳಲ್ಲಿ ಗ್ರೆಗೊರಿ ಪೆಕ್, ಭರ್ಜರಿ ಅಭಿನಯವನ್ನು ಪ್ರದರ್ಶಿಸಿದ್ದಾರೆ. 'ರೋಮನ್ ಹಾಲಿಡೆ' ಒಂದು ಕಾಮೆಡಿ ಚಿತ್ರ. ಆಡ್ರ್ಯೂ ಹೆಪ್ಬರ್ನ್ ಜೊತೆ ನಟಿಸಿದ್ದಾರೆ. ನಮ್ಮ ಹಿಂದಿ ಚಿತ್ರನಟ, ದೇವಾನಂದ್ , ಗ್ರೆಗೊರಿಪೆಕ್ ತರಹ ಕಾಣಿಸುತ್ತಾರೆ. ಪೆಕ್ ಆರಡಿಎತ್ತರದ ಅದ್ಭುತವ್ಯಕ್ತಿತ್ವದ ಅಭಿನಯಕಾರರು. ಅಂತಹ ಅಚಲ ನಿರ್ಧಾರದ, ಸ್ಥಿರಮುಖಭಾವವನ್ನು ಹೊಂದಿದ್ದಾರೆ. ದೇವಾನಂದ್, ಹೆಂಗೆಳೆಯರ ಮೆಚ್ಚಿನ ನಟರು. ಕಾಮೆಡಿಯಲ್ಲಿ ಚೆನ್ನಾಗಿ ಅಭಿನಯನೀಡಿದ್ದಾರೆ.