ವಿಷಯಕ್ಕೆ ಹೋಗು

ಗುಳ್ಟು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಳ್ಟು
Directed byಜನಾರ್ಧನ್ ಚಿಕ್ಕಣ್ಣ
Screenplay byಜನಾರ್ಧನ್ ಚಿಕ್ಕಣ್ಣ
Story byಜನಾರ್ಧನ್ ಚಿಕ್ಕಣ್ಣ
Produced byಪ್ರಶಾಂತ್ ರೆಡ್ಡಿ
ದೇವರಾಜ ಅರ್
Starringನವೀನ್ ಶಂಕರ್
ಸೋನು ಗೌಡ
ಅವಿನಾಶ್
ರಂಗಾಯಣ ರಘು
ಪವನ್ ಕುಮಾರ್
Cinematographyಶಾಂತಿ ಸಾಗರ್
Edited byಭರತ್ ಎಚ್. ಸಿ
Music byಅಮಿತ್ ಆನಂದ್
Production
company
ವಿವಿಧ್ ಫ಼ಿಲಂಸ್
Release date
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 30 ಮಾರ್ಚ್ 2018 (2018-03-30)
Countryಭಾರತ
Languageಕನ್ನಡ

ಗುಳ್ಟು ಇದು 2018 ರ ಭಾರತೀಯ ಕನ್ನಡ ಭಾಷೆಯ ಚಿತ್ರವಾಗಿದ್ದು, ಜನಾರ್ಧನ್ ಚಿಕಣ್ಣರವರು ಬರೆದು ನಿರ್ದೇಶಿಸಿದ್ದಾರೆ. ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಆರ್ ನಿರ್ಮಿಸಿದ ಈ ಚಿತ್ರಕ್ಕೆ ಸಂಗೀತವನ್ನು ಅಮಿತ್ ಆನಂದ್ ಅವರು ನೀಡಿದ್ದಾರೆ. ನವೀನ್ ಶಂಕರ್ , ಸೋನು ಗೌಡ, ರಂಗಾಯಣ ರಘು, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾಂತಿ ಸಾಗರ್ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ.[]

ಪಾತ್ರಗಳು

[ಬದಲಾಯಿಸಿ]
  • ನವೀನ್ ಶಂಕರ್ - ಅಲೋಕ್ ಆಗಿ
  • ಸೋನು ಗೌಡ - ಪೂಜಾ ರಮೇಶ್ / ಅನಘ ಆಗಿ
  • ಅವಿನಾಶ್ - ಸರ್ಕಲ್ ಇನ್ಸ್ಪೆಕ್ಟರ್ ಅವಿನಾಶ್ ಆಗಿ
  • ರಂಗಾಯಣ ರಘು - ಮುಖ್ಯಮಂತ್ರಿ ಅನಂತರಾಮಯ್ಯರಾಗಿ
  • ಪವನ್ ಕುಮಾರ್ - ಟೆಕೀ ಫನೇಶ್ ಪಾತ್ರದಲ್ಲಿ
  • ರಾಮ್ ಧನುಷ್ - ಅರಸು ತಿಮ್ಮಯ್ಯ ಅಲಿಯಾಸ್ "ಆಸ್ತಿ" ಆಗಿ

ಸಾರಾಂಶ

[ಬದಲಾಯಿಸಿ]

ಆಶ್ರಮದಲ್ಲಿ ಬೆಳೆದ ಬಡ ಇಂಜಿನಿಯರಿಂಗ್ ವಿದ್ಯಾರ್ಥಿ ಅಲೋಕ್ (ನವೀನ್ ಶಂಕರ್)ಗೆ ರ‍್ಯಾಗಿಂಗ್ ಮಾಡುತ್ತಾರೆ. ಆಗ ಆತ ಹಿರಿಯ ವಿದ್ಯಾರ್ಥಿಗಳು ಹೇಳಿದಂತೆ ನಡೆದುಕೊಳ್ಳದ ತಪ್ಪಿಗೆ ಸಿನಿಮಾ ಟಿಕೇಟ್ ಬುಕ್ ಮಾಡಿಕೊಡುವಂತಹ ಶಿಕ್ಷೆಯನ್ನು ಪಡೆಯುತ್ತಾನೆ. ಕೈಯಲ್ಲಿ ದುಡ್ಡಿಲ್ಲದ ಅಲೋಕ್ ಆಗ ಆನ್ಲೈನಿನಲ್ಲಿ ಸಿನಿಮಾ ಟಿಕೇಟ್ ಬುಕ್ ಮಾಡುವ ಜಾಲತಾಣವೊಂದಕ್ಕೆ ಹೋಗಿ ಹ್ಯಾಕ್ ಮಾಡಿ ಕಾಲೇಜಿನಲ್ಲಿ ಪ್ರಸಿದ್ಧನಾಗುತ್ತಾನೆ. ಇಂಜಿನಿಯರಿಂಗ್ ಓದಿನ ನಂತರ ಅವನು ಮತ್ತು ಅವನ ಸ್ನೇಹಿತ ಆಸ್ತಿ (ರಾಮ್ ಧನುಷ್) ಒಟ್ಟಿಗೆ ತಮ್ಮದೇ ಒಂದು ಸ್ವಂತ ಕಂಪನಿ ಪ್ರಾರಂಭಿಸಲು ಹೊರಡುತ್ತಾರೆ. ಆದರೆ ಹಣದ ಅಭಾವದಿಂದ ಅಲೋಕ್ ಪುಟ್ಟ ಇನ್ಸ್ಟಿಟ್ಯೂಟೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಟ್ರೇನಿಯಾಗಿ ಕೆಲಸ ಮಾಡುತ್ತಿದ್ದಾಗ, ಅಲ್ಲಿಗೆ ಹೆಸರು, ಹುದ್ದೆಯನ್ನೆಲ್ಲ ಮರೆ ಮಾಚಿಕೊಂಡು ಬರುವ ಇಂಡಿಯನ್ ಸೈಬರ್ ಸೆಕ್ಯುರಿಟಿಯ ಗುಪ್ತ ಏಜೆಂಟ್ ಪೂಜಾ (ಸೋನು ಗೌಡ) ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಪನೇಶ್(ಪವನ್ ಕುಮಾರ್) ಸಹಾಯದಿಂದ ಆಕೆ 'ಸುಧಾರ್' ಶೇಖರಣಾ ಕೇಂದ್ರದ ಪ್ರಮುಖ ದತ್ತಾಂಶ ಸೋರಿಕೆಗೆ ಕಾರಣವಾದ ಹ್ಯಾಕರ್ ಅನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾಳೆ. ಆ ಸಂದರ್ಭದಲ್ಲಿ ಈ ಕೇಸ್ ಅಲೋಕ್ ಕಡೆಗೆ ತಿರುಗುತ್ತದೆ. ಮತ್ತು ತಾನು ಇಷ್ಟು ದಿನ ಪ್ರೀತಿಸಿದ್ದು ಸೈಬರ್ ಸೆಕ್ಯುರಿಟಿಯ ಗುಪ್ತ ಏಜೆಂಟ್ ಎಂದೂ ತಿಳಿಯುತ್ತದೆ. ಆದರೆ ಮುಖ್ಯಮಂತ್ರಿ ಅನಂತರಾಮಯ್ಯ (ರಂಗಾಯಣ ರಘು) ಅವರನ್ನು ಬ್ಲ್ಯಾಕ್ಮೇಲ್ ಮಾಡುವುದರ ಮೂಲಕ ಬುದ್ಧಿವಂತಿಕೆಯಿಂದ ಅವನು ಈ ಪ್ರಕರಣವನ್ನು ಪರಿಹರಿಸಿಕೊಳ್ಳುತ್ತಾನೆ ಮತ್ತು ನ್ಯಾಯಾಲಯದಿಂದ ನಿರ್ದೋಷಿ ಎಂದು ಘೋಷಿಸಲ್ಪಡುತ್ತಾನೆ. []

ಧ್ವನಿಸುರುಳಿ

[ಬದಲಾಯಿಸಿ]
Untitled

ಅಮಿತ್ ಆನಂದ್ ಚಿತ್ರಕ್ಕಾಗಿ ಸ್ಕೋರ್ ಮತ್ತು ಹಾಡುಗಳನ್ನು ಸಂಯೋಜಿಸಲು ಸಹಿ ಮಾಡಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ, ಕಿರಣ್ ಕಾವೇರಪ್ಪ ಮತ್ತು ಅನುಪ್ ರಾಮಸ್ವಾಮಿ ಕಶ್ಯಪ್ ಅವರು ಬರೆದಿದ್ದಾರೆ.

ಹಾಡುಗಳು
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ಸಾಲಾಗಿ"ಅನುಪ್ ರಾಮಸ್ವಾಮಿ ಕಶ್ಯಪ್ಸೈಂಧವಿ, ದೀಪಕ್ ದೊಡ್ಡೇರ04:03
2."VTU ವೀ ಲವ್ ಯೂ"ಕಿರಣ್ ಕಾವೇರಪ್ಪರಘು ದೀಕ್ಷಿತ್, ಅಂಕನ ಅರೋಕಿಯಮ್05:32
3."ನೀನೊಂದು ಆಶ್ಚರ್ಯ"ಜಯಂತ್ ಕಾಯ್ಕಿಣಿಈಶ ಸುಚಿ, ದೀಪಕ್ ದೊಡ್ಡೇರ04:05
4."ಕಡಲಾಚೆ"ಅನುಪ್ ರಾಮಸ್ವಾಮಿ ಕಶ್ಯಪ್ಸುಪ್ರಿಯ ಲೋಹಿತ್, ರಘುರಾಮ್03:51
5."ಕಾಣದ ಪ್ರೀತಿ"ಅನುಪ್ ರಾಮಸ್ವಾಮಿ ಕಶ್ಯಪ್ಜಾಸ್ಮಿನ್ ಮಾನ್ಸ್, ಅಮಿತ್ ಆನಂದ್01:01

ಉಲ್ಲೇಖಗಳು

[ಬದಲಾಯಿಸಿ]
  1. "TOI on Gultoo Trailer". {{cite web}}: Cite has empty unknown parameter: |dead-url= (help)
  2. "Gultoo promises a new face of crime". {{cite web}}: Cite has empty unknown parameter: |dead-url= (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]