ಗುಣ (ಹಿಂದೂ ಪರಿಕಲ್ಪನೆ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗುಣ ಎಂದರೆ 'ದಾರ' ಅಥವಾ 'ಹುರಿ ಅಥವಾ ನೂಲಿನ ಒಂದು ಒಂಟಿ ದಾರ ಅಥವಾ ಎಳೆ'. ಹೆಚ್ಚು ಅಮೂರ್ತ ಬಳಕೆಗಳಲ್ಲಿ, ಅದು ಉಪವಿಭಾಗ, ವರ್ಗ, ಪ್ರಕಾರ, ಗುಣಮಟ್ಟ, ಅಥವಾ ಕಾರ್ಯಾಚರಣೆಯ ತತ್ವ ಅಥವಾ ಪ್ರವೃತ್ತಿಯನ್ನು ಸೂಚಿಸಬಹುದು. ಸಾಂಖ್ಯ ದರ್ಶನದಲ್ಲಿ, ಪ್ರಕೃತಿಯ ಮೂಲಭೂತ ಕಾರ್ಯಾಚರಣಾ ತತ್ವಗಳು ಅಥವಾ ಪ್ರವೃತ್ತಿಗಳಾಗಿ ಕೆಲಸಮಾಡುವ ಮೂರು ಪ್ರಮುಖ ಗುಣಗಳಿವೆ: ಸತ್ವ ಗುಣ, ರಜಸ್ ಗುಣ, ಮತ್ತು ತಮಸ್ ಗುಣ.