ಕೆ. ಪಿ. ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿನ್ನಿಕಂಬಳ ಪದ್ಮನಾಭ ರಾವ್
ನಾಡೋಜ ಕೆ. ಪಿ. ರಾವ್.
ಜನನ
ಪದ್ಮನಾಭ

ಕಿನ್ನಿಕಂಬಳ
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆಕಿನ್ನಿಕಂಬಳದಲ್ಲಿ ಪ್ರಾಥಮಿಕ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು. ೧೯೫೯ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ.
ಉದ್ಯೋಗಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ, ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್
ಇದಕ್ಕೆ ಖ್ಯಾತರುಪ್ರಥಮ ಬಾರಿಗೆ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‍ನಲ್ಲಿ ಅಳವಡಿಸಿದ್ದು
ಕೆ.ಪಿ.ರಾವ್

ಕಿನ್ನಿಕಂಬಳ ಪದ್ಮನಾಭ ರಾವ್ (ಫೆಬ್ರವರಿ ೨೯, ೧೯೪೦), ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆಯ ಮೂಲ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು ಶ್ರೀ ಕೆ. ಪಿ. ರಾವ್ ಅವರ ಸಾಧನೆ.

ಜನನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

  • ಜನನ ೧೯೪೦ರ ಫೆಬ್ರುವರಿ ೨೯ರಂದು, ಮಂಗಳೂರು ಬಳಿಯ ಕಿನ್ನಿಕಂಬಳದಲ್ಲಿ.
  • ಕಿನ್ನಿಕಂಬಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ.
  • ೧೯೫೯ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ.

ಕುಟುಂಬ[ಬದಲಾಯಿಸಿ]

  • ಪತ್ನಿ ಶ್ರೀಮತಿ ನಿರ್ಮಲ ಉಡುಪಿಯವರು, ವಿವಾಹವಾದದ್ದು ೧೯೬೪ರಲ್ಲಿ.
  • ಈ ದಂಪತಿಗೆ ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳು.

ಉದ್ಯೋಗ[ಬದಲಾಯಿಸಿ]

  • ಮೊದಲಿಗೆ ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್(ಟಿಐಎಫ್‌ಆರ್)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರು.
  • ೧೯೭೦ರ ದಶಕದಲ್ಲಿ ಟಾಟಾ ಪ್ರೆಸ್ ಸೇರಿದಾಗ ಅಕ್ಷರಗಳೊಡನೆ ಒಡನಾಟದ ಪ್ರಾರಂಭ.
  • ಮುಂದೆ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್‌ಪ್ರೆಸ್ - ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರರಾಗಿ, ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಣೆ.

ಸಾಧನೆಗಳು[ಬದಲಾಯಿಸಿ]

  • ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ.
  • ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ. ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ.
  • ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

  • ಕನ್ನಡ ಕೀಲಿಮಣೆ ವಿನ್ಯಾಸಕ್ಕೆ 'ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ'ವೆಂಬ ಮಾನ್ಯತೆ.[ಸೂಕ್ತ ಉಲ್ಲೇಖನ ಬೇಕು]
  • ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ.[ಸೂಕ್ತ ಉಲ್ಲೇಖನ ಬೇಕು]
  • ಆಳ್ವಾಸ್ ನುಡಿಸಿರಿ ೨೦೦೯ರಲ್ಲಿ ಸನ್ಮಾನ.[೧]
  • ೨೦೧೩ ರಲ್ಲಿ ವಿಶ್ವಕರ್ಮ ಪ್ರಶಸ್ತಿ.[೨]
  • ೨೦೧೩ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ.[೩]
  • ೨೦೧೩ ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ "ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್" ಪ್ರಕಟಣೆ
  • ೨೦೧೩ ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ[೪].
  • ೨೦೨೧ ರಲ್ಲಿ 'ಕಾರಂತ ಬಾಲವನ ಪ್ರಶಸ್ತಿ'[೫]

ಕೃತಿಗಳು[ಬದಲಾಯಿಸಿ]

ರಾವ್ ಅವರು 'ವರ್ಣಕ' ಎಂಬ ಕಾದಂಬರಿಯನ್ನು ಬರೆದಿದ್ದಾರೆ. ೨೦೨೧ರಲ್ಲಿ ಅಂಕಿತ ಪ್ರಕಾಶನದಿಂದ ಪ್ರಕಟಗೊಂಡಿದೆ.[೬]

ಚಿತ್ರಸಂಪುಟ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಮ್ಯಾಂಗಲೋರ್ ಟೈಮ್ಸ್". Archived from the original on 2016-03-04. Retrieved 2013-10-31.
  2. ದೊರೆಸ್ವಾಮಿ, ಕೆ.ಪಿ.ರಾವ್‌ ಸೇರಿ ಐವರಿಗೆ ವಿಶ್ವಕರ್ಮ ಪ್ರಶಸ್ತಿ - ಕನ್ನಡ ಯಾಹೂ Archived 2013-09-27 ವೇಬ್ಯಾಕ್ ಮೆಷಿನ್ ನಲ್ಲಿ.
  3. "ಭಾರತೀಯ ಭಾಷಾ ಗಣಕ ರೂವಾರಿ ಕೆ.ಪಿ.ರಾವ್‌ಗೆ ಸನ್ಮಾನ, ಪ್ರಜಾವಾಣಿ ಏಪ್ರಿಲ್ ೧೦, ೨೦೧೩". Archived from the original on 2022-05-28. Retrieved 2013-04-10.
  4. ಕನ್ನಡ ಕೀ ಬೋರ್ಡ್‌ ಜನಕ ಕೆ.ಪಿ.ರಾವ್‌ಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಗರಿ, kannada.gizbot.com
  5. ಬಾಲವನ ಪ್ರಶಸ್ತಿಗೆ ಕೆ.ಪಿ.ರಾವ್ ಆಯ್ಕೆ, ಪ್ರಜಾವಾಣಿ, ೩೦ ಸೆಪ್ಟೆಂಬರ್ ೨೦೨೧
  6. ವರ್ಣಕ, ಕೆ.ಪಿ. ರಾವ್, ಬುಕ್ ಬ್ರಹ್ಮ ಜಾಲತಾಣ