ಕಾಯರುಬಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಯರುಬಳ್ಳಿ ಎಂದರೆ ಒಂದು ವಿಧದ ಬಳ್ಳಿ ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು ಸ್ಟ್ರೀಕ್‍ನೋಸ್ ಏನಿಯ ಎಂದು. ಇದು ಪೂರ್ವ ಏಷಿಯಾ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಲೊಗಾನಿಯೇಸಿ [೧]ಕುಟುಂಬದ ಒಂದು ಪ್ರಭೇದ.ಈ ಕುಟುಂಬದಲ್ಲಿ ನೂರಕ್ಕಿಂತಲೂ ಹೆಚ್ಚು ಸಸ್ಯಗಳಿವೆ.ಈ ಕುಟುಂಬದ ಸಸ್ಯಗಳು ಪ್ರಪಂಚದೆಲ್ಲೆಡೆ ಹರಡಿಕೊಂಡಿದ್ದು, ಬೇರು, ಎಲೆ, ಕಾಂಡದಲ್ಲಿ ವಿಷಯುಕ್ತ ಇಂಡೋಲ್ ಅಲ್ಕಲಾಯ್ಡ್ಸ್ ಗಳನ್ನು ಹೊಂದಿರುವುದರಿಂದ ವಿಶಿಷ್ಟವಾಗಿವೆ.

ಹರಡುವಿಕೆ[ಬದಲಾಯಿಸಿ]

ಇದು ಭಾರತದಲ್ಲಿ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸುಮಾರು ೧೨೦೦ ಮೀಟರ್ ಎತ್ತರದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಬಳ್ಳಿಯಾಗಿ ಇತರ ಮರಗಳ ಮೇಲೆ ಹಬ್ಬುತ್ತದೆ.ಇದರ ಪುನರುತ್ಪತ್ತಿ ಹೆಚ್ಚಾಗಿ ಬೀಜಗಳಿಂದಾಗುತ್ತದೆ.

ಉಪಯೋಗಗಳು[ಬದಲಾಯಿಸಿ]

ಈ ಸಸ್ಯವನ್ನು ಇದರಲ್ಲಿರುವ ಅಲ್ಕಲಾಯ್ಡ್ಸ್ ನಿಂದಾಗಿ ಔಷಧಗಳಲ್ಲಿ ಉಪಯೋಗದಲ್ಲಿದೆ. ಜಾನಪದ ಔಷಧ ಪದ್ಧತಿಯಲ್ಲಿ ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ.

  1. [[en:Loganiaceae]