ಕಾಂಚನ್ ಜುಂಗಾ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಿಕ್ಕಿಂ ನಿಂದ ಕಾಂಚನ್ ಜುಂಗಾದ ಒಂದು ನೋಟ
ಸಿಕ್ಕಿಂ ನಿಂದ ಕಾಂಚನ್ ಜುಂಗಾದ ಒಂದು ನೋಟ
ಗೋಚಾಲಾ ಲಾ ದಿಂದ ಕಾಂಚನ್ ಜುಂಗಾದ ಒಂದು ನೋಟ
ಗೋಚಾಲಾ ಲಾ ದಿಂದ ಕಾಂಚನ್ ಜುಂಗಾದ ಒಂದು ನೋಟ

ಕಾಂಚನ್ ಜುಂಗಾ (ಕಾಂಚನಗಂಗಾ) ಪ್ರಪಂಚದ ಮೂರನೆಯ ಅತ್ಯುನ್ನತ ಪರ್ವತಶಿಖರ. ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಕೆ-೨ ಬಿಟ್ಟರೆ ಕಾಂಚನ್ ಜುಂಗಾ ಭಾರತದ ಅತ್ಯುನ್ನತ ಶಿಖರ. ೮೫೮೬ ಮೀ. ಎತ್ತರ ಇರುವ ಇದು ಭಾರತ-ನೇಪಾಳ ಗಡಿಯಲ್ಲಿದೆ. ಇದು ನೇಪಾಳದ ೨ನೆಯ ಅತ್ಯುನ್ನತ ಶಿಖರವೂ ಹೌದು. ಒಟ್ಟು ಐದು ಶಿಖರಗಳುಳ್ಳ ಈ ಪರ್ವತದ ಹೆಸರಿಗೆ ’ಹಿಮದ ೫ ನಿಧಿಗಳು’ ಎಂಬ ಅರ್ಥವೂ ಇದೆ. ಈ ಐದು ನಿಧಿಗಳು ಚಿನ್ನ,ಬೆಳ್ಳಿ,ರತ್ನಗಳು,ಧಾನ್ಯ ಹಾಗೂ ಪವಿತ್ರಗ್ರಂಥಗಳೆಂದು ಹೇಳಲಾಗುತ್ತದೆ. ೧೮೫೨ರಲ್ಲಿ ಎವರೆಸ್ಟ್ ಶಿಖರದ ಎತ್ತರವನ್ನು ಕರಾರುವಾಕ್ಕಾಗಿ ಅಳೆಯುವವರೆಗೆ ಕಾಂಚನ್ ಜುಂಗಾ ಪ್ರಪಂಚದ ಅತ್ಯುನ್ನತ ಪರ್ವತ ಶಿಖರವೆಂದು ತಿಳಿಯಲಾಗಿತ್ತು. ೧೯೫೫ರ ಮೇ ೨೫ರಂದೊ ಬ್ರಿಟಿಷ್ ಪರ್ವತಾರೋಹಿ ತಂಡದ ಇಬ್ಬರು ಸದಸ್ಯರು ಈ ಶಿಖರವನ್ನು ಪ್ರಪ್ರಥಮ ಬಾರಿಗೆ ಏರಿದರು. ಸಿಕ್ಕಿಂ ಜನತೆಯು ಪವಿತ್ರವೆಂದು ಭಾವಿಸಿರುವ ಕಾಂಚನ್ ಜುಂಗಾ ಪರ್ವತವನ್ನು ಏರಲು ಭಾರತದ ಕಡೆಯಿಂದ ಅನುಮತಿ ವಿರಳವಾಗಿ ದೊರೆಯುತ್ತದೆ. ಅಲ್ಲದೆ ನೇಪಾಲದ ಕಡೆಯಿಂದ ಇದನ್ನು ಏರುವುದು ಅತಿ ಕಠಿಣ. ಆದ್ದರಿಂದಲೇ ಪ್ರಪಂಚದ ಉನ್ನತ ಪರ್ವತಶಿಖರಗಳ ಪೈಕಿ ಕಾಂಚನ್ ಜುಂಗಾ ಶಿಖರವು ಬಹಳ ಕಡಿಮೆ ಬಾರಿ ಆರೋಹಿಸಲ್ಪಟ್ಟಿದೆ. ದಾರ್ಜೀಲಿಂಗ್ ಹಾಗೂ ಗ್ಯಾಂಗ್ಟಕ್ ನಗರಗಳಿಂದ ಕಾಂಚನ್ ಜುಂಗಾ ಪರ್ವತಶಿಖರದ ಅದ್ಭುತ ನೋಟ ಕಾಣಲು ಲಭ್ಯ.

ಕಾಂಚನ್ ಜುಂಗಾದ ಐದು ಶಿಖರಗಳು ಇಂತಿವೆ.

ಶಿಖರದ ಹೆಸರು ಎತ್ತರ (ಮೀ.) ಎತ್ತರ (ಅಡಿ)
ಕಾಂಚನ್ ಜುಂಗಾ ಮುಖ್ಯ ಶಿಖರ ೮,೫೮೬ ೨೮,೧೬೯
ಕಾಂಚನ್ ಜುಂಗಾ ಪಶ್ಚಿಮ ಶಿಖರ (ಯಲುಂಗ್ ಕಾಂಗ್) ೮,೫೦೫ ೨೭,೯೦೪
ಕಾಂಚನ್ ಜುಂಗಾ ಕೇಂದ್ರ ಶಿಖರ ೮,೪೮೨ ೨೭,೮೨೮
ಕಾಂಚನ್ ಜುಂಗಾ ದಕ್ಷಿಣ ಶಿಖರ ೮,೪೯೪ ೨೭,೮೬೭
ಕಂಗ್ಬಾಚೆನ್ ಶಿಖರ ೭,೯೦೩ ೨೫,೯೨೫
ವೈಯಕ್ತಿಕ ಉಪಕರಣಗಳು