ಕಲ್ಕತ್ತ ರಿವ್ಯೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಲ್ಕತ್ತ ರಿವ್ಯೂ : ಕಲ್ಕತ್ತ ವಿಶ್ವವಿದ್ಯಾಲಯದ ಒಂದು ಮಾಸಪತ್ರಿಕೆ. ೧೮೪೪ರಲ್ಲಿ ತ್ರೈಮಾಸಿಕವಾಗಿ ಕಲ್ಕತ್ತ ನಗರದಲ್ಲಿ ಪ್ರಾರಂಭವಾಯಿತು. ಭಾರತೀಯ ವಿಷಯಗಳನ್ನು ಚರ್ಚಿಸುವುದೇ ಇದರ ಮುಖ್ಯ ಗುರಿಯಾಗಿತ್ತು.

ಇತಿಹಾಸ[ಬದಲಾಯಿಸಿ]

ಇದರ ಮೊದಲ ಸಂಪಾದಕ ಜಾನ್ ಕೇ. ಇವನ ಅನಂತರ ಅಲೆಕ್ಸಾಂಡರ್ ಡಫ್, ಥಾಮಸ್ ಸ್ಮಿತ್ ಮೊದಲಾದ ವರು ಸಂಪಾದಕರಾಗಿ ಕೆಲಸ ಮಾಡಿದ್ದರು. ೧೯೧೩೪ರಲ್ಲಿ ಈ ಪತ್ರಿಕೆಯ ಹೊಸ ಸರಣಿ ಪ್ರಾರಂಭವಾಗಿ ತ್ರೈಮಾಸಿಕವಾಗಿಯೇ ಮುಂದುವರಿಯಿತು. ಅನಂತರ, ೧೯೨೧ರಲ್ಲಿ ಮಾಸಿಕವಾಗಿ, ಮಾರ್ಪಟ್ಟು, ಕಲ್ಕತ್ತ ವಿಶ್ವವಿದ್ಯಾಲಯದಿಂದ ಪ್ರಕಟವಾಗತೊಡಗಿತು. ಭಾರತದ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಸಾರ್ವಜನಿಕ ಗ್ರಂಥಾಲಯಗಳು, ಸಾಂಸ್ಕೃತಿಕ, ಸಾಹಿತ್ಯಕ ಮತ್ತು ವೈಜ್ಞಾನಿಕ ಸಂಸ್ಥೆಗಳು, ವಿದ್ವಾಂಸರು ಮುಂತಾದದವರೇ ಅಧಿಕ ಸಂಖ್ಯೆಯಲ್ಲಿ ಚಂದಾದಾರರಿರುವ ಈ ಪತ್ರಿಕೆಯಲ್ಲಿ ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ರಾಜಕಾರಣ, ಅರ್ಥಶಾಸ್ತ್ರ, ವಾಣಿಜ್ಯ ಮುಂತಾದ ನಾನಾ ವಿಚಾರಗಳನ್ನು ಕುರಿತ ಲೇಖನಗಳು ಪ್ರಕಟವಾಗಿವೆ. ಭಾರತದ ಅತ್ಯಂತ ಹಳೆಯ ಸಾಂಸ್ಕೃತಿಕ ಪತ್ರಿಕೆಯಾದ ಕಲ್ಕತ್ತರಿವ್ಯೂ ಇತಿಹಾಸ ಸಂಶೋಧಕರಿಗೆ ಉಪಯುಕ್ತ. ಈಗ ಈ ಪತ್ರಿಕೆ ಅರ್ಧವಾರ್ಷಿಕವಾಗಿ ಕಲ್ಕತ್ತ ವಿ.ವಿ. ಪ್ರೆಸ್ನಿಂದ ಪ್ರಕಟವಾಗುತ್ತಿದೆ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: