ಕರ್ಟ್ನಿ ವಾಲ್ಷ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Courtney Walsh

ಚಿತ್ರ:West Indies Cricket Board Flag.svg ವೆಸ್ಟ್ ಇಂಡೀಸ್
ವೈಯಕ್ತಿಕ ಮಾಹಿತಿ
ಪೂರ್ಣಹೆಸರು Courtney Andrew Walsh
ಹುಟ್ಟು 10 30 1962
Kingston, ಜಮೈಕ
ಪಾತ್ರ Bowler
ಬ್ಯಾಟಿಂಗ್ ಶೈಲಿ Right-hand batsman
ಬೌಲಿಂಗ್ ಶೈಲಿ Right-arm fast
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap 183) 9 November 1984: v Australia
ಕೊನೆಯ ಟೆಸ್ಟ್ ಪಂದ್ಯ 19 April 2001: v South Africa
ODI ಪಾದಾರ್ಪಣೆ (cap 45) 10 January 1985: v Sri Lanka
ಕೊನೆಯ ODI ಪಂದ್ಯ 11 January 2000: v New Zealand
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
1981/82–2000/01 Jamaica
1984–1998 Gloucestershire
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIFCList A
ಪಂದ್ಯಗಳು 132 205 429 440
ಒಟ್ಟು ರನ್ನುಗಳು 936 321 4530 1304
ಬ್ಯಾಟಿಂಗ್ ಸರಾಸರಿ 7.54 6.97 11.32 8.75
೧೦೦/೫೦ 0/0 0/0 0/8 0/0
ಅತೀ ಹೆಚ್ಚು ರನ್ನುಗಳು 30* 30 66 38
ಬೌಲ್ ಮಾಡಿದ ಚೆಂಡುಗಳು 30019 10822 85443 21881
ವಿಕೆಟ್ಗಳು 519 227 1807 551
ಬೌಲಿಂಗ್ ಸರಾಸರಿ 24.44 30.47 21.71 25.14
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 22 1 104 5
೧೦ ವಿಕೆಟುಗಳು ಪಂದ್ಯದಲ್ಲಿ 3 n/a 20 n/a
ಶ್ರೇಷ್ಠ ಬೌಲಿಂಗ್ 7-37 5-1 9-72 6-21
ಕ್ಯಾಚುಗಳು /ಸ್ಟಂಪಿಂಗ್‍ಗಳು 29/– 27/– 117/– 68/–

ದಿನಾಂಕ 21 August, ೨೦೦೮ ವರೆಗೆ.
ಮೂಲ: CricketArchive

ಕರ್ಟ್ನಿ ಆಂಡ್ರೂ ವಾಲ್ಷ್ ಇವರು ವೆಸ್ಟ್ ಇಂಡೀಜ್ ಕ್ರಿಕೆಟ್ ತಂಡದ ವೇಗದ ಬೌಲರಾಗಿದ್ದರು. ಇವರು ೧೯೮೪ರಿಂದ ೨೦೦೧ರ ವರೆಗೆ ವೆಸ್ಟ್ ಇಂಡೀಜ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು ಮತ್ತು ೨೨ ಟೆಸ್ಟ್ ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದರು. ಕಪಿಲ್ ದೇವರ ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿದುದಕ್ಕೆ ಇವರು ಪ್ರಸಿದ್ಧರಾಗಿದ್ದರು, ಈ ವಿಶ್ವ ದಾಖಲೆಯು ೨೦೦೦ರಿಂದ ೨೦೦೪ರ ವರ್ಗೆ ಇವರ ಹೆಸರಿನಲ್ಲಿತ್ತು, ೨೦೦೪ರಲ್ಲಿ ಶ್ರೀಲಂಕಾದ ಮುರಳೀಧರನ್ ಈ ದಾಖಲೆಯನ್ನು ಮುರಿದರು.

ಪ್ರಥಮ ದರ್ಜೆ ಕ್ರಿಕೆಟ್ ಜೀವನ[ಬದಲಾಯಿಸಿ]

೧೯೭೯ರಲ್ಲಿ ಶಾಲಾ ಕ್ರಿಕೆಟ್ನಲ್ಲಿ ಇನ್ನಿಂಗ್ವೊಂದರಲ್ಲಿ ೧೦ವಿಕೆಟ್ಗಳನ್ನು ಕಬಳಿಸಿದಾಗ ಇವರು ಮೊದಲ ಬಾರಿಗೆ ಬೆಳಕಿಗೆ ಬಂದರು. ಇದರ ೨ ವರ್ಷದ ತರುವಾಯ ಇವರು ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಇವರು ಜಮೈಕಾ ತಂಡವನ್ನು ಪ್ರತಿನಿಧಿಸುತ್ತಿದ್ದರು.

ಅಂತರ್ರಾಷ್ಟ್ರೀಯ ಕ್ರಿಕೆಟ್ ಜೀವನ[ಬದಲಾಯಿಸಿ]

೧೯೮೪ರ ನವ್ಹೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇವರು ಟೆಸ್ಟ್ ರಂಗಕ್ಕೆ ಪಾದಾರ್ಪಣೆ ಮಾಡಿದರು., ಆ ಪಂದ್ಯದಲ್ಲಿ ಇವರು ೪೩ರನ್ನುಗಳನ್ನಿತ್ತು ೨ಹುದ್ದರಿಗಳನ್ನು ಪಡೆದರು. ಅದೇ ಕ್ರಿಕೆಟ್ ಸುಗ್ಗಿಯಲ್ಲಿಯೇ ೧೯೮೫ರ ಜನೇವರಿಯಲ್ಲಿ ಹೋಬರ್ಟ್ನಲ್ಲಿ ಶ್ರೀಲಂಕಾ ವಿರುದ್ಧ ಅಂತರ್ರಾಷ್ಟ್ರೀಯ ಒಂದು ದಿನದ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು. ೧೯೮೪ರಲ್ಲಿಯೇ ಅವರು ಇಂಗ್ಲೆಂಡ್ನ ಕೌಂಟಿ ಪಂದ್ಯಾವಳಿಗಳಲ್ಲಿ ಗ್ಲೌಸ್ಟರ್ ಶೈರ್ ತಂಡವನ್ನು ಪ್ರತಿನಿಧಿಸಿದರು, ೧೯೯೮ರ ವರೆಗೆ ಅವರು ಈ ತಂಡದೊಂದಿಗೆ ತಮ್ಮನ್ನು ಗುರುತಿಸಿಕೊಂಡರು ಮತ್ತು ತಂಡದ ಬೆನ್ನೆಲುಬಾಗಿದ್ದರು ಕೂಡಾ.

ವಿಸ್ಡೆನ್ ಮತ್ತು ಹ್ಯಾಟ್ರಿಕ್[ಬದಲಾಯಿಸಿ]

೧೯೮೭ರಲ್ಲಿ ಇವರಿಗೆ ವಿಸ್ಡೆನ್ ವರ್ಷದ ಕ್ರಿಕೆಟಿಗ ಪ್ರಶಸ್ತಿಯು ಲಭಿಸಿತು.