ಕರುನಾಡು (ಸಿನೆಮಾ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರುನಾಡು
ನಿರ್ದೇಶನಜಿ. ಮೂರ್ತಿ
ಪಾತ್ರವರ್ಗಲಕ್ಷ್ಮಿ ಹೆಗಡೆ, ಹೆಚ್.ಜಿ. ದತ್ತಾತ್ರೆಯ
ಸಂಗೀತಪ್ರವೀಣ್ ಗೋಡ್ಕಿಂಡಿ
ಬಿಡುಗಡೆಯಾಗಿದ್ದು೨೦೦೯
ದೇಶಭಾರತ
ಭಾಷೆಕನ್ನಡ

ಕರುನಾಡು ಹಿರಿಯ ಕಲಾ ನಿರ್ದೇಶಕ ಜಿ.ಮೂರ್ತಿ ನಿರ್ದೇಶಿಸಿರುವ ೨೦೦೯ರ ಚಿತ್ರವಾಗಿದೆ.


ಚಿತ್ರದ ಸಾರಾಂಶ[ಬದಲಾಯಿಸಿ]

ಜಾಗತೀಕರಣದ ಈ ದಿನಗಳಲ್ಲಿ, ಧಾರ್ಮಿಕ ಭಾವಾತಿರೇಕದಲ್ಲಿ ಸಿಕ್ಕಿರುವ ಒಂದು ಚಿಕ್ಕ ದ್ವೀಪ 'ಕರುನಾಡು'. ಚಲನಚಿತ್ರದಲ್ಲಿ ದ್ವೀಪದ ಸೌಂದರ್ಯವನ್ನು ಅತ್ಯಂತ ಮನೋಹರವಾಗಿ ಚಿತ್ರಿಸಿದ್ದಾರೆ ಹಿರಿಯ ಕಲಾ ನಿರ್ದೇಶಕ ಜಿ.ಮೂರ್ತಿ[೧]. ಸಾಂಪ್ರದಾಯಿಕ ಕುಟುಂಬದವರಾದ ಶಂಕರ ಭಟ್ಟರು(ಎಚ್.ಜಿ.ದತ್ತಾತ್ರೆಯ) ಜ್ಞಾನಿ , ವೇದ ತಿಳಿದವರು. ಅವರ ಪರಿಸರ ಕಾಳಜಿ ಅತ್ಯುತ್ತಮ. ಆದರೆ ಈ ಪರಿಸರ ಪ್ರೇಮ,ಆಸಕ್ತಿಯ ಹಿಂದೆ ಸ್ವಾರ್ಥ ಉದ್ದೇಶವಿರುತ್ತದೆ. 'ಕರುನಾಡು' ಶಂಕರ ಭಟ್ಟರ ಕಪಿ ಮುಷ್ಠಿಯಲ್ಲಿರುತ್ತದೆ. ಇಂತಹ ಸಂಧರ್ಭದಲ್ಲಿ ಶಂಕರ ಭಟ್ಟರ ಮನೆಗೆ ಬರುವ ಸೊಸೆ 'ನಗರದಲ್ಲಿ ಹುಟ್ಟಿ ಬೆಳೆದ ವಿದ್ಯಾವಂತೆ , ಸುರುಚಿ'( ಲಕ್ಷ್ಮಿ ಹೆಗಡೆ). ದ್ವೀಪಕ್ಕೆ ಸೇತುವೆ ಕೂಡ ಇರದ ಸ್ಥಿತಿಯನ್ನು ನೋಡಿ ಸುರುಚಿ ದಿಗ್ಬ್ರಮೆಗೊಳ್ಳುತ್ತಾಳೆ. ಕರುನಾಡಿನ ಜನ ಸೇತುವೆ ಇಲ್ಲದೆ, ಹೊರ ಜಗತ್ತಿಗೆ ಸಂಪರ್ಕವೇ ಇರವುದಿಲ್ಲ. ಕರುನಾಡಿನ ಒಬ್ಬ ಹುಡುಗ ಥುಕ್ರ ವೈದ್ಯಕೀಯ ಚಿಕಿತ್ಸೆಯ ಕೊರತೆಯಿಂದ ಸಾವನ್ನಪ್ಪಿದ್ದಾಗ ಸುರುಚಿ ಕುರುನಾಡಿಗೆ ಸೇತುವೆ ಕಟ್ಟಲೇಬೇಕೆಂದು ಪಟ್ಟು ಹಿಡಿಯುತ್ತಾಳೆ. ತನ್ನ ಮಾವ ಇದನ್ನು ಒಪ್ಪದಿದ್ದಾಗ ಮನೆ ಬಿಟ್ಟು ಬುಡಕಟ್ಟು ಜನಾಂಗದವರ ಜೊತೆಯೇ ಇರುತ್ತಾಳೆ. ಕರುನಾಡಿಗೆ ಸೇತುವೆ ನಿರ್ಮಾಣ ಅಗುತ್ತದೆಯೋ ಇಲ್ಲವೋ ಇದೇ ಈ ಚಲನಚಿತ್ರದ ಮುಕ್ತಾಯ.

ಪ್ರಶಸ್ತಿಗಳು[ಬದಲಾಯಿಸಿ]

  • 2007-08ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ ಶ್ರೇಷ್ಠ ಕಲಾ ನಿರ್ದೇಶಕ- ಜಿ.ಮೂರ್ತಿ [೧]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "ಶ್ರೇಷ್ಠ ಕಲಾ ನಿರ್ದೇಶಕ- ಜಿ.ಮೂರ್ತಿ (ಚಿತ್ರ- ಕರುನಾಡು)". Webdunia. Retrieved 10 ಏಪ್ರಿಲ್ 2015.

ಬಾಹ್ಯಕೊಂಡಿಗಳು[ಬದಲಾಯಿಸಿ]