ಕಂಬದಮರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಂಬದಮರ
ಕಂಬದಮರ(ವೀಪಿಂಗ್ ಅಶೋಕ)ದ ಎಲೆಗಳು
ಕಂಬದಮರ(ವೀಪಿಂಗ್ ಅಶೋಕ)ದ ಎಲೆಗಳು
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ವರ್ಗ: ಮ್ಯಾಗ್ನೋಲಿಯೋಪ್ಸಿಡ
ಗಣ: ಮ್ಯಾಗ್ನೋಲಿಯಾಲೆಸ್
ಕುಟುಂಬ: ಅನೋನಾಸಿ (Annonaceae)
ಜಾತಿ: ಪೊಲ್ಯಾಲ್ತಿಯ
ಪ್ರಜಾತಿ: P. longifolia
ದ್ವಿಪದಿ ನಾಮ
ಪೊಲ್ಯಾಲ್ತಿಯ ಲಾಂಗಿಫೋಲಿಯ
Sonn.

ಕಂಬದಮರ ಮೂಲತ: ಶ್ರೀಲಂಕಾದ ನಿವಾಸಿ.ಹೆಚ್ಚಾಗಿ ಉದ್ಯಾನವನಗಳಲ್ಲಿ ಅಲಂಕಾರಕ್ಕೆ ಬೆಳೆಸುತ್ತಾರೆ. ಇದನ್ನು ಪುತ್ರಂಜೀವಿ ಹಾಗೂ ಅಶೋಕ ವೃಕ್ಷಕ್ಕೆ ತಪ್ಪಾಗಿ ತಿಳಿಯುತ್ತಾರೆ.ಪ್ರಪಂಚದೆಲ್ಲೆಡೆ ಅಲಂಕಾರ ಸಸ್ಯವಾಗಿ ಬೆಳೆಸುತ್ತಾರೆ.

ಪರಿವಿಡಿ

ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]

ಇದು ಅನೋನಾಸಿ (Anonaceae)ಕುಟುಂಬಕ್ಕೆ ಸೇರಿದ್ದು,ಪಾಲಿಯಾಲ್ತಿಯ ಲಾಂಗಿಫೋಲಿಯ (Polyalthia longifolia) ಎಂದು ಸಸ್ಯಶಾಸ್ತ್ರೀಯ ಹೆಸರಿದೆ.

ಸಸ್ಯದ ಗುಣಲಕ್ಷಣಗಳು [ಬದಲಾಯಿಸಿ]

ಸುಂದರವಾದ ನಿತ್ಯಹರಿದ್ವರ್ಣ ಮರ.ಒತ್ತಾದ ಹಂದರ.ಈಟಿ ತಲೆಯಾಕಾರದ ಎಲೆಗಳು ಅಲೆಅಲೆಯಾದ ಅಂಚನ್ನು ಹೊಂದಿದ್ದು,ಹೊಳಪಿನಿಂದ ಕೂಡಿದೆ.ನಕ್ಷತ್ರಾಕಾರದ ಸಣ್ಣ ನಸುಹಳದಿ ಹೂವುಗಳು ಫೆಬ್ರವರಿ-ಎಪ್ರಿಲ್ ತಿಂಗಳಲ್ಲಿ ಕಂಡುಬರುತ್ತದೆ.ಸಾಧಾರಣ ಮೃದುವಾದ ದಾರು ಇದೆ. [[Image:

Polyalthia longifolia
var. pendula - leaves

ಉಪಯೋಗಗಳು [ಬದಲಾಯಿಸಿ]

ದಾರುವು ಪೆಟ್ಟಿಗೆ,ಪೆನ್ಸಿಲ್ ಮುಂತಾದವುಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ.ತೊಗಟೆಯಿಂದ ಒಳ್ಳೆಯ ನಾರು ದೊರಕುತ್ತದೆ.ಇದರ ಬೀಜಗಳು ಪಕ್ಷಿಗಳಿಗೆ ಬಹಳ ಇಷ್ಟವಾದ ಅಹಾರ.ಎಲೆಗಳು ಅಲಂಕಾರಕ್ಕಾಗಿ ಬಳಸಲ್ಪಡುತ್ತದೆ.ಈ ಮರದಿಂದ ಔಷಧ ತಯಾರಿಕೆ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಆಧಾರ ಗ್ರಂಥಗಳು [ಬದಲಾಯಿಸಿ]

  • 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.
"http://kn.wikipedia.org/w/index.php?title=ಕಂಬದಮರ&oldid=318487" ಇಂದ ಪಡೆಯಲ್ಪಟ್ಟಿದೆ