ಓಂ ಪ್ರಕಾಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಓಂ ಪ್ರಕಾಶ್'
ಓಂ ಪ್ರಕಾಶ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಓಂ ಪ್ರಕಾಶ್ ಬಕ್ಷಿ
೧೯ ಡಿಸೆಂಬರ್ ೧೯೧೯
ಜಮ್ಮು, ಬ್ರಿಟೀಷ್ ಭಾರತ
ನಿಧನ ೨೧ ಫೆಬ್ರುವರಿ ೧೯೯೮ (ತೀರಿದಾಗ ವಯಸ್ಸು ೭೮)
ಮುಂಬಯಿ, ಮಹಾರಾಷ್ಟ್ರ, ಭಾರತ
ವೃತ್ತಿ ನಟ
ವರ್ಷಗಳು ಸಕ್ರಿಯ ೧೯೪೭-೧೯೯೪


(೧೯ ಡಿಸೆಂಬರ್ ೧೯೧೯ - ೨೧ ಫೆಬ್ರವರಿ ೧೯೯೮)

ಓಂ ಪ್ರಕಾಶ್ ಭಾರತೀಯ ಚಲನಚಿತ್ರಗಳಲ್ಲಿ ಬಹಳಷ್ಟು ಸಮಯ ಪೋಷಕನಟನಾಗಿ ಕೆಲಸಮಾಡಿದರು. ಹಿಂದಿ ಚಲನಚಿತ್ರಗಳಲ್ಲಿ ಪ್ರಸಿದ್ಧರಾದ ಈ ನಟನ ಬಾಲ್ಯದ ಹೆಸರು ಓಂಪ್ರಕಾಶ್ ಬಕ್ಷಿಎಂದು. ಓಂಪ್ರಕಾಶ್', ಜಮ್ಮು ಪಟ್ಟಣದಲ್ಲಿ ಜನಿಸಿದರು. ಅಂದಿನ ದಿನಗಳಲ್ಲಿ ಸುಪ್ರಸಿದ್ಧ ದೇವನ್ ಮಂದಿರ್ ನಾಟಕ್ ಸಮಾಜ್ ಪ್ರಸ್ತುತಪಡಿಸುತ್ತಿದ್ದ, ರಾಮ್ ಲೀಲಾ ನಾಟಕಗಳಲ್ಲಿ ಅವರು, ಸೀತಾಮಯ್ಯನ ಪಾತ್ರ ವಹಿಸುತ್ತಿದ್ದರು. ಓಂ ಪ್ರಕಾಶ್, ಚಲನಚಿತ್ರರಂಗಕ್ಕೆ, ೧೯೪೭ ರಲ್ಲಿ ಪಾದಾರ್ಪಣೆಮಾಡಿದರು. ೧೯೫೦ ರಿಂದ ೧೯೮೦ ರವರೆಗೆ ನಟಿಸಿದ ಎಲ್ಲಾ ಚಿತ್ರಗಳಲ್ಲೂ ಪ್ರಧಾನ-ನಟರ ಜೊತೆಯಲ್ಲಿ ಜೊತೆಗಾರನ ಪಾತ್ರವಹಿಸಿದ್ದಾರೆ. ೧೯೬೦-೭೦ ರಲ್ಲಿ ಓಂ ಪ್ರಕಾಶ್, ಒಬ್ಬ ಅತ್ಯಂತ ನುರಿತ ಅನುಭವಿ ನಟನರೂಪದಲ್ಲಿ ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ೧೯೮೦ ರವರೆಗೂ, ಅವರ ಪ್ರಭಾವ ಸಿನಿಮಾರಂಗದಲ್ಲಿ ಹರಡಿತ್ತು. ಛುಪ್ಕೆ ಛುಪ್ಕೆ, ಜೂಲಿ, ಬುಡ್ಢಮಿಲ್ಗಯ, ನಮಕ್ ಹಲಾಲ್', ಝಂಜೀರ್ ಚಿತ್ರಗಳಲ್ಲಿನ ಅಭಿನಯ ಸ್ಮರಣೀಯ. ಓಂ ಪ್ರಕಾಶ್' ತಮ್ಮ ಅತ್ಯುತ್ತಮ ಅಭಿನಯವನ್ನು ನೀಡಿ, ಚಿತ್ರರಸಿಕರ ಮನಸ್ಸನ್ನು ಗೆದ್ದಿದ್ದಾರೆ.

ಓಂಪ್ರಕಾಶ್ ಒಬ್ಬ ಶ್ರೇಷ್ಠ ನಗೆನಟರು[ಬದಲಾಯಿಸಿ]

ನಮಕ್ ಹಲಾಲ್ ಚಿತ್ರದಲ್ಲಿನ ಡಿ ಸಿಲ್ವನ ಪಾತ್ರ, ಝಂಜೀರ್ ಚಿತ್ರದಲ್ಲಿನ ನಗೆಪಾತ್ರಗಳು ಪ್ರೇಕ್ಷಕರ ಮೇಲೆ ಅತಿಹೆಚ್ಚುಸಮಯ ಪ್ರಭಾವ ಬೀರಿದ್ದವು. ಶರಾಬಿ ಚಿತ್ರದಲ್ಲಿ (೧೯೮೪) ಮಾಡಿದ ಅಭಿನಯ, ಅವರಿಗೆ ಒಳ್ಳೆಯ ಹೆಸರುತಂದಿತ್ತು. ಸಾಧು ಔರ್ ಶೈತಾನ್ ಮತ್ತೊಂದು ಪ್ರಭಾವಿ ಹಾಸ್ಯ-ಚಿತ್ರ, ಓಂಪ್ರಕಾಶರ ಪಾತ್ರ-ವೈವಿಧ್ಯತಾ-ಸಾಮರ್ಥ್ಯವನ್ನು ತೋರಿಸುವ ಚಿತ್ರವಾಗಿತ್ತು. ಓಮ್ ಪ್ರಕಾಶ್ ಬಕ್ಷಿಯವರು, ಲಾಹೋರ್ ನಲ್ಲಿ ೧೯, ಡಿಸೆಂಬರ್, ೧೯೧೯ ರಲ್ಲಿ ಜನಿಸಿದರು. ಬಾಲ್ಯದಿಂದಲೂ ನಾಟಕಗಳಲ್ಲಿ ನಟನೆಯ, ಸಂಗೀತ ಮತ್ತು ಚಿತ್ರಗಳಲ್ಲಿ ನಟಿಸುವ ಗೀಳಿತ್ತು. ತಮ್ಮ ೧೨ ನೆಯ ವಯಸ್ಸಿನಲ್ಲೇ ಶಾಸ್ತ್ರೀಯ ಸಂಗೀತದ ತರಪೇತಿಗಾಗಿ ಒಬ್ಬ ಗುರುಗಳ ಬಳಿಗೆ ಹೋದರು. ಸ್ವಲ್ಪಸಮಯದಲ್ಲೇ ಪ್ರಾವೀಣ್ಯತೆಯನ್ನು ಗಳಿಸಿದರು.

ವೃತ್ತಿಜೀವನ[ಬದಲಾಯಿಸಿ]

೧೯೩೭ ರಲ್ಲಿ ಆಲ್ ಇಂಡಿಯಾ ರೇಡಿಯೊ ತಿಂಗಳಿಗೆ ೨೫ ರೂ ಮಾಸಾಶನದ ಮೇಲೆಸೇರಿದರು. ಎಲ್ಲರೂ ಅವರನ್ನು ಫತೆ ದಿನ್ ಎಂದು ಕರೆಯುತ್ತಿದ್ದರು. ರೇಡಿಯೋ ಕಾರ್ಯಕ್ರಮದಲ್ಲಿ ಫತೆದಿನ್ ಒಂದು ವಿಶೇಷ ಹೆಸರು. ಲಾಹೋರ್, ಪಂಜಾಬ್ ಗಳಲ್ಲಿ ಅವರ ಹೆಸರು ಜನಪ್ರಿಯವಾಯಿತು. ಮದುವೆಯ ಸಮಾರಂಭವೊಂದರಲ್ಲಿ ಓಂಪ್ರಕಾಶ್ ಎಲ್ಲರಿಗೂ ಬಡಿಸುವ ವ್ಯವಸ್ಥೆಯಲ್ಲಿ ತೊಡಗಿರುವಾಗ, ಆಗಿನ ಪ್ರಸಿದ್ಧ ಚಿತ್ರನಿರ್ಮಾಪಕ, ಡಾಲ್ ಸುಖ್ ಪಾಂಚೋಲಿಯವರು, ಓಂಪ್ರಕಾಶರನ್ನು ಗುರುತಿಸಿದರು. ತಮ್ಮ ಲಾಹೋರ್ ನ ಆಫೀಸ್ ಗೆ ಬಂದು ನೋಡಲು ಆಹ್ವಾನಿಸಿದರು. ದಾಸಿಯೆಂಬ ಚಿತ್ರದಲ್ಲಿ ಅವರಿಗೆ ಅವಕಾಶ ಕಲ್ಪಿಸಿಕೊಟ್ಟರು. ಆಗ ಅವರ ವೇತನ ೮೦ ರೂಪಾಯಿಗಳು. ಆದರೆ ಆಚಿತ್ರ ಓಂಪ್ರಕಾಶರ ಜೀವನ ನಕ್ಷೆಯನ್ನೇ ಬದಲಾಯಿಸಿತು. ಅದು ಅವರ ಜೀವನದ ಮೊಟ್ಟಮೊದಲ ನಟನೆಯಾಗಿತ್ತು, ಮೊದಲೇ ಆತರಹದ ಪಾತ್ರವನ್ನು ಶರೀಫ್ ಬದ್ಮಾಶ್ ಮೂಕಿಚಿತ್ರದಲ್ಲಿ ಅವರು ನಿರ್ವಹಿಸಿದ್ದರು. ತಮ್ಮ ನಿಷ್ಠೆ ಮತ್ತು ಪರಿಶ್ರಮಗಳಿಂದ ಪಾಂಚೋಲಿಯವರ ಜೊತೆಗೂಡಿ ಧಮ್ಕಿ ಮತ್ತು ಆಯೀಬಹಾರ್ ಚಿತ್ರಗಳಲ್ಲಿ ನಟಿಸಿದರು.

ಬೊಂಬಾಯಿಗೆ ಬಂದದ್ದು, ದೇಶದ ಬಟವಾರೆಯ ಸಮಯದಲ್ಲಿ[ಬದಲಾಯಿಸಿ]

ದೇಶದ ಬಟವಾರೆಯ ಸಮಯದಲ್ಲಿ ಅವರು ದೆಹಲಿಗೆ ನಂತರ ಬೊಂಬಾಯಿಗೆ ಬಂದರು. ಆಗ ಬೊಂಬಾಯಿನಲ್ಲಿ ಚಿತ್ರಪತ್ರಿಕೆಯ ಪತ್ರಿಕೋದ್ಯಮದಲ್ಲಿ ಹೆಸರುಮಾಡಿದ್ದ ’ಡಾ.ಬಿಆರ್ ಚೋಪ್ರರ’ವರ ಕಣ್ಣಿಗೆ ಬಿದ್ದರು. ಬೊಂಬಾಯಿನಲ್ಲಿ ಅವರಿಗೆ ಸಿಕ್ಕ ಮೊದಲ ಚಿತ್ರ, ’ಲಖ್ ಪತಿ’ ಇದರಲ್ಲಿ ಖಳನಾಯಕನ ಪಾತ್ರಸಿಕ್ಕಿತು. ಇದರಲ್ಲೂ ಓಂಪ್ರಕಾಶ್ ಉತ್ತಮ ಅಭಿನಯದ ಪ್ರದರ್ಶನವನ್ನು ಕೊಟ್ಟರು. ಮುಂದೆ, ಲಾಹೋರ್, ಚಾರ್ ದಿನ್, ರಾತ್ ಕಿ ರಾನಿ, ದಿಲೀಪ್ ಕುಮಾರ್ ಜೊತೆ, ಆಝಾದ್, ರಾಜ್ ಕಪೂರ್ ಜೊತೆ ಸರ್ ಗಮ್, ಅವರು ತಮ್ಮದೇ ಆದ ಒಂದು ಶೈಲಿಯನ್ನು ಬೆಳೆಸಿಕೊಂಡರು. ತಮಗೆ ಸಿಕ್ಕ ಎಲ್ಲಾ ಪಾತ್ರಗಳನ್ನೂ ಶ್ರದ್ಧೆಯಿಂದ ನಿರ್ವಹಿಸಿ ಮನೆಮಾತಾದರು. 'ಹಾಸ್ಯನಟ', 'ಸಮುದಾಯದ ಮುಖ್ಯಸ್ಥ','ಮುನ್ಷಿ', 'ಮದ್ಯಪಾನವ್ಯಸನಿಯಾಗಿ', 'ಕಾಟಕೊಡುವ ಪತಿಯಾಗಿ', 'ಪ್ರೀತಿಮಾಡುವ ವೃದ್ಧನಾಗಿ', 'ರಾಜಕೀಯ ಪಟುವಾಗಿ', 'ದೊಡ್ಡಮನುಷ್ಯನ ಪಾತ್ರ'. ಒಟ್ಟಾರೆ, ೩೦೭ ಚಿತ್ರಗಳಲ್ಲಿ ನಟಿಸಿದ್ದಾರೆ.

ಕೆಲವು ಚಿತ್ರಗಳಲ್ಲಿನ ವಿಶೇಷ ಪಾತ್ರಗಳು[ಬದಲಾಯಿಸಿ]

ಪ್ಯಾರ್ ಕಿಯ ಜ,ನಟನೆ, ಹಾಸ್ಯ, ಪಡೋಸನ್, ಸಾಧು ಔರ್ ಶೈತಾನ್, ಚುಪ್ ಕೆ ಚುಪ್ಕೆ, ನಮಕ್ ಹಲಾಲ್, ಜೂಲಿ, ಮತ್ತು ದಸ್ ಲಾಖ್, (ಇದಕ್ಕೆ ಅವರಿಗೆ ಪ್ರಶಸ್ತಿಯೂ ದೊರೆತಿತ್ತು) ಗೋಪಿ ಚಿತ್ರದಲ್ಲಿ ದಿಲೀಪ್ ಕುಮಾರ್ ರ ಸೋದರನಾಗಿ, ವಯಸ್ಕರ ಪಾತ್ರದಲ್ಲಿ ಚೆನ್ನಾಗಿ ನಟಿಸಬಹುದೆಂದು ಭರವಸೆಕೊಟ್ಟರು.’ಹರಿಯಾಲಿ ಔರ್ ರಾಸ್ತಾ’, ದಿಲ್ ಅಪ್ನಾ ಔರ್ ಪ್ರೀತ್ ಪರಾಯ್, ಲಾವಾರಿಸ್, ಝನ್ಜೀರ್, ಶರಾಬಿ, ಅನುರಾಗ್, ಮತ್ತು ಅಮರ್ ಪ್ರೇಮ್, ರವರು ಒಬ್ಬ ತಂದೆಯಂತೆ ಗೌರವವನ್ನುಹೊಂದಿದ್ದರು. ಅವರ ಅತ್ಯಂತ ದೊಡ್ಡಗುಣಗಳೆಂದರೆ, ಯಾವ ಜಂಬವೂ ಇಲ್ಲದ, ಎಲ್ಲರೊಡನೆ ಹೊಂದಿಕೊಳ್ಳುವ, ತಮಾಷೆಯಾಗಿ ವರ್ತಿಸುವ, ಒಳಗೊಂದು ಹೊರಗೊಂದು ಅಭ್ಯಾಸವಿಲ್ಲದ. ಸಾಧ್ಯವಾದಾಗಲೆಲ್ಲ ಸಹಾಯಮಾಡುವ ಸ್ವಭಾವ, ಸದಾ ಹಸನ್ಮುಖಿ ಮತ್ತು ಆಶಾವಾದಿ,ಮತ್ತು ಎಲ್ಲರಿಗಿಂತ ಭಿನ್ನವಾದ ವ್ಯಕ್ತಿತ್ವಹೊಂದಿದ್ದರು.

ಚೆಂಬೂರಿನ, 'ಯೂನಿಯನ್ ಪಾರ್ಕ್' ನಲ್ಲಿ ವಾಸ್ತವ್ಯ[ಬದಲಾಯಿಸಿ]

ಮುಂಬಯಿನ ಉಪನಗರಗಳಲ್ಲೊಂದಾದ, ಚೆಂಬೂರಿನ ಯೂನಿಯನ್ ಪಾರ್ಕ್, ನಲ್ಲಿ ವಾಸಿಸುತ್ತಿದ್ದ 'ಓಂಪ್ರಕಾಶ್,' ಸಾಯುವ ಎರಡುದಿನಗಳ ಮುಂಚೆಯೂ ಆರಾಮಾಗಿದ್ದರು, ಆರೋಗ್ಯವೇನೂ ಸರಿಯಿಲ್ಲದಿದ್ದರೂ ಹೇಗೋ ಎಲ್ಲರಜೊತೆ ನಗು-ನಗುತ್ತಾ ಕಾಲಕಳೆಯುತ್ತಿದ್ದರು. ತಮ್ಮ ಮನೆಗೆ ಸ್ನೇಹಿತರನ್ನು ರಮ್ಮಿ ಆಡಲು ಮತ್ತು ಗಪ್ಪೆಹೊಡೆಯಲು ಆಹ್ವಾನಿಸುತ್ತಿದ್ದರು. ರೂಪ್ ತಾರಾ ಸ್ಟುಡಿಯೋ ನಲ್ಲಿ ಒಂದು 'ಆಫೀಸ್' ಇತ್ತು. ಅಲ್ಲಿ ಗೆಳೆಯರೆಲ್ಲಾ ಒಟ್ಟುಗೂಡಿ 'ರಮ್ಮಿ ಆಟ'ವಾಡುತ್ತಿದ್ದರು. ಗಪ್ಪೆಹೊಡೆಯಲು ಮತ್ತು ರಮ್ಮಿ ಆಟಕ್ಕಾಗಿಯೇ, ತಮ್ಮ ಆಫೀಸನ್ನು ಮುಂಬಯಿನ ಉಪನಗರದ ಕಡೆಗೆ ಬದಲಾಯಿಸಿದರು. ಸಾಯುವರೆಗೂ ಪ್ರತಿದಿನ, ಆಫೀಸ್ ಗೆ ಬರುತ್ತಿದ್ದರು. ಅಶೋಕ್ ಕುಮಾರ್ ಬಂಗಲೆಯ ಪಕ್ಕದಲ್ಲೇ ಓಂಪ್ರಕಾಶ್ ರವರ 'ಬಂಗಲೆ'ಯಿತ್ತು. ಅವರ ಮಲಗುವ ಕೋಣೆಯಲ್ಲಿ ಮೊದಲ ಹೃದಯಾಘಾತವಾಯಿತು. 'ಮುಂಬಯಿಯ ಲೀಲಾವತಿ ಆಸ್ಪತ್ರೆ'ಯಲ್ಲಿ ದಾಖಲುಮಾಡಿದಮೇಲೆ 'ಎರಡನೆಯ ಹೃದಯಾಘಾತ'ವಾಯಿತು. 'ಓಂಪ್ರಕಾಶ್ ದೀರ್ಘಕಾಲ ಮೂರ್ಛೆ'ಹೋದವರು ಮತ್ತೆ ಏಳಲೇ ಇಲ್ಲ. ೧೯೯೮ ರ, ಫೆಬ್ರವರಿ, ೧೪, ಸುಮಾರು ೧-೩೦ ಕ್ಕೆ ಇಲ್ಲವಾದರು. ಆಗ ಅವರಿಗೆ, ೭೮ ವರ್ಷವಯಸ್ಸಾಗಿತ್ತು. ಯಾವ ಶೋಕವನ್ನೂ ಅರಿಯದ, ಸದಾ ಹಸನ್ಮುಖಿಯಾಗಿದ್ದ ದಣಿವರಿಯದ ಓಂ ಪ್ರಕಾಶ್, ಹೇಗೆ ಮರಣಿಸಿ, 'ಚಿರನಿದ್ರೆ'ಮಾಡಿದರೆಂದು ಯಾರಿಗೂ ಊಹಿಸಲೂ ಅಸಾಧ್ಯವಾಗಿತ್ತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]