ಏಳು ಸಾಮಾಜಿಕ ಪಾಪಗಳು
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಏಳು ಸಾಮಾಜಿಕ ಪಾಪಗಳನ್ನು ಮೊಟ್ಟಮೊದಲಿಗೆ ಪಟ್ಟಿ ಮಾಡಿದವರು ಫ್ರೆಡ್ರಿಕ್ ಲೂಯಿಸ್ ಡೊನಾಲ್ಡ್ಸನ್. ಕ್ರೈಸ್ತ ಪಾದ್ರಿಯಾಗಿದ್ದ ಇವರು ವೆಸ್ಟ್ ಮಿನ್ಸ್ಟರ್ ಅ್ಯಬ್ಬಿಯಲ್ಲಿ ಮಾರ್ಚ್ ೨೦, ೧೯೨೬ ರಂದು ನೀಡಿದ ಉಪದೇಶದಲ್ಲಿ ಈ ಸಾಮಾಜಿಕ ಪಾಪಗಳ ಬಗ್ಗೆ ತಿಳಿಹೇಳಿದರು.[೧]ಎಲ್ಲೆಡೆ ಹಬ್ಬಿರುವ ತಪ್ಪು ಮಾಹಿತಿಯೇನೆಂದರೆ ಮಹಾತ್ಮ ಗಾಂಧಿಯವರು ಈ ಏಳು ಪಾಪಗಳನ್ನು ಮೊಟ್ಟಮೊದಲನೆಯ ಬಾರಿಗೆ ಪಟ್ಟಿ ಮಾಡಿದರೆಂಬುದು. ಗಾಂಧಿಯವರು ಈ ಪಟ್ಟಿಯನ್ನು ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ೧೯೨೫ ರ ಅಕ್ಟೋಬರ್ ೨೨ರಂದು ಪ್ರಕಟಿಸಿ ಪ್ರಚುರಪಡಿಸಿದರಷ್ಟೆ[೨]
ತಾವು ಹತ್ಯೆ ಆಗುವ ಮೊದಲು ಈ ಪಟ್ಟಿಯನ್ನು ತಮ್ಮ ಮೊಮ್ಮಗ ಅರುಣ್ ಗಾಂಧಿಯವರಿಗೆ ನೀಡಿದ್ದರು.
ಏಳು ಪಾಪಗಳು ಯಾವುವೆಂದರೆ :
೧. ದುಡಿಮೆಯಿಲ್ಲದೆ ಗಳಿಸಿದ ಸಂಪತ್ತು
೨. ಆತ್ಮಸಾಕ್ಷಿಯಿಲ್ಲದ ಭೋಗ
೩. ಚಾರಿತ್ರ್ಯವಿಲ್ಲದ ಜ್ಞಾನ
೪. ನೀತಿಯಿಲ್ಲದ ವ್ಯಾಪಾರ
೬. ತ್ಯಾಗವಿಲ್ಲದ ಧರ್ಮ
೭. ನೀತಿಯಿಲ್ಲದ ರಾಜಕೀಯ [೩]
ಇತಿಹಾಸ ಮತ್ತು ಪ್ರಭಾವ
[ಬದಲಾಯಿಸಿ]ಮಹಾತ್ಮ ಗಾಂಧಿಯವರು ಈ ಪಟ್ಟಿಯನ್ನು ತಮ್ಮ ಯಂಗ್ ಇಂಡಿಯಾ ವಾರಪತ್ರಿಕೆಯಲ್ಲಿ ಪ್ರಕಟಿಸುವ ಮುನ್ನ ಈ ಪಟ್ಟಿಯನ್ನು ತಮ್ಮ ಸ್ನೇಹಿತರೊಬ್ಬರಿಂದ ಪತ್ರ ಮುಖೇನ ತಿಳಿದುಕೊಂಡಿದ್ದರು. ಅಷ್ಟೇ ಅಲ್ಲ, 'ಯಂಗ್ ಇಂಡಿಯಾ ಪತ್ರಿಕೆಯ ಓದುಗರು ಬೌದ್ಧಿಕವಾಗಿಯಷ್ಟೇ ಅಲ್ಲದೆ ಹೃದಯಾಂತರಾಳದಿಂದ ಈ ಪಟ್ಟಿಯನ್ನು ಮನಗಂಡು, ಇಲ್ಲಿ ನೀಡಿರುವ ಯಾವುದೇ ಪಾಪಗಳನ್ನು ಎಸೆಯದೇ ಇರಲಿ ಎಂದು ಆಶಿಸುತ್ತಾರೆ ಈ ಪಟ್ಟಿಯನ್ನು ಕಳುಹಿಸಿಕೊಟ್ಟ ನಮ್ಮ ಸ್ನೇಹಿತರು.' ಎಂದು ತಮ್ಮ ಪತ್ರಿಕೆಯಲ್ಲಿ ಗಾಂಧಿಯವರು ಬರೆದಿದ್ದರು. [೪] ಹಲವಾರು ಪುಸ್ತಕಗಳಲ್ಲಿ ಈ ಏಳು ಸಾಮಾಜಿಕ ಪಾಪಗಳ ಉಲ್ಲೇಖ ಇದೆ.
- [೫] ಪುಸ್ತಕದಲ್ಲಿ ಪೀಟರ್. ಜೆ. ಗೋಮ್ಸ್ ರವರು ಬರೆಯುತ್ತಾರೆ - "ಗಾಂಧೀಯವರು ಪಟ್ಟಿಮಾಡಿರುವ ಏಳು ಪಾಪಗಳನ್ನು ನಾವು ತಡೆಯದಿದ್ದರೆ ಅವು ಮನುಷ್ಯರನ್ನೂ ದೇಶಗಳನ್ನೂ ಹಾನಿ ಮಾಡುತ್ತವೆಯೆಂದು ಬಹಳ ವರ್ಷಗಳ ಹಿಂದೆಯೇ ಕಂಡುಕೊಂಡೆನು. ಈ ಏಳು ಪಾಪಗಳು ಗಾಂಧಿಯವರ ಕಾಲದಲ್ಲಿ ಎಷ್ಟು ವ್ಯಾಪಕವಾಗಿತ್ತೋ ಅಷ್ಟೇ ಪ್ರಮಾಣದಲ್ಲಿ ಈಗಲೂ ವ್ಯಾಪಕವಾಗಿವೆ. ಈ ಪಾಪಗಳ ವಿರುದ್ಧ ಯುದ್ಧ ಇಂದಿಗೂ ಪ್ರಸ್ತುತ."
- Mobilizing hope: Faith-inspired activism for a post-civil rights generation ಪುಸ್ತಕದಲ್ಲಿ ಆ್ಯಡಮ್ ಟೇಯ್ಲರ್ ಎರಡು ಪಾಪಗಳನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ -"ಇತ್ತೀಚನ ಜಾಗತಿಕ ಹಣಕಾಸು ಹಿಂಜರಿತವು ಗಾಂಧಿಯವರು ಪ್ರತಿಪಾದಿಸಿದ್ದ ಏಳು ಸಾಮಾಜಿಕ ಪಾಪಗಳನ್ನು ನೆನಪಿಗೆ ತರುತ್ತದೆ. 'ದುಡಿಮೆಯಿಲ್ಲದೆ ಗಳಿಸಿದ ಸಂಪತ್ತು' ಮತ್ತು 'ನೀತಿಯಿಲ್ಲದ ವ್ಯಾಪಾರ' ಗಳ ಅಪಾಯದ ಬಗ್ಗೆ ಗಾಂಧಿ ಎಂದೋ ಎಚ್ಚರಿಸಿದ್ದರು."
- The Cambridge companion to Gandhi ಯಲ್ಲಿ 141ನೇ ಪುಟದಲ್ಲಿ ಈ ಏಳು ಪಾಪಗಳ ಪಟ್ಟಿ ಇದ್ದು ಉಲ್ಲೇಖವೇನೆಂದರೆ "ಇವು ಮತ್ತು ಗಾಂಧಿಯವರ ಬರಹಗಳು ಏನು ಹೇಳುತ್ತವೆಯೆಂದರೆ ಗಾಂಧಿಯವರು ತಮ್ಮ ಜೀವನವನ್ನು ಒಂದು ಚೌಕಟಿನಲ್ಲಿ ಬಂಧಿಸಿಡಲಿಲ್ಲ. ಅವರಿಗೆ ರಾಜಕೀಯ, ನೀತಿ ಹಾಗೂ ಧರ್ಮವನ್ನೊಳಗೊಂಡ ಆರ್ಥಿಕತೆ ಒಂದು ಅವಿಭಾಜ್ಯ ಅಂಗವಾಗಿತ್ತು."
- Fifty key thinkers of development ಅಲ್ಲಿ, "ಈ ಪಾಪಗಳ ಹೊರತಾದ ಆದರ್ಶಗಳು ಇಂದಿಗೆ ಹೆಚ್ಚು ಪ್ರಸ್ತುತ." ಎಂದು ಹೇಳಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Frederick Lewis Donaldson". www.goodreads.com. Retrieved 2017-11-23.
- ↑ The 7 Social SinsIntellectual Takeout | August 28, 2015
- ↑ Inspiring thoughts of mahatma Gandhi (Ganghi in daily life ) Ouote Number 239 ;Ypong India Oct22,1925
- ↑ The 7 Social Sins ;Intellectual Takeout | August 28, 2015 | 3,284
- ↑ The scandalous Gospel of Jesus: What's so good about the good news