ಎಳೆತುಂಬುವುದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಳೆತುಂಬುವುದು (ರಪ್ಪು ಮಾಡುವುದು) ಬಟ್ಟೆಯಲ್ಲಿನ ತೂತುಗಳು ಅಥವಾ ಜೀರ್ಣವಾದ ಪ್ರದೇಶಗಳನ್ನು ದುರಸ್ತಿ ಮಾಡಲು ಬಳಸಲಾಗುವ ಒಂದು ಹೊಲಿಗೆ ತಂತ್ರವಾಗಿದೆ. ಇದನ್ನು ಕೇವಲ ಸೂಜಿ ಮತ್ತು ದಾರವನ್ನು ಬಳಸಿಯೂ ಮಾಡಬಹುದು. ಇದನ್ನು ಹಲವುವೇಳೆ ಕೈಯಿಂದ ಮಾಡಲಾಗುತ್ತದೆ, ಆದರೆ ಹೊಲಿಗೆಯಂತ್ರವನ್ನು ಬಳಸಿ ರಪ್ಪು ಮಾಡುವುದು ಕೂಡ ಸಾಧ್ಯವಿದೆ. ಕೈ ರಪ್ಪು ರಪ್ಪು ಹೊಲಿಗೆಯನ್ನು ಬಳಸುತ್ತದೆ. ಅಂದರೆ ಇದು ಸರಳವಾದ ದಾಟು ಹೊಲಿಗೆಯಾಗಿದ್ದು ಇದರಲ್ಲಿ ದಾರವನ್ನು ಬಟ್ಟೆಯ ಎಳೆರಚನೆಯ ಉದ್ದಕ್ಕೆ ಸಾಲುಗಳಲ್ಲಿ ನೆಯ್ಗೆ ಮಾಡಲಾಗುತ್ತದೆ, ಮತ್ತು ಹೊಲಿಯುವವನು ಪ್ರತಿ ಸಾಲಿನ ಕೊನೆಯಲ್ಲಿ ದಿಕ್ಕನ್ನು ಬದಲಾಯಿಸಿ ನಂತರ ಈ ಪ್ರಕಾರವಾಗಿ ಸೃಷ್ಟಿಯಾದ ಚೌಕಟ್ಟಿನಲ್ಲಿ ತುಂಬುತ್ತಾನೆ, ನೆಯ್ಗೆ ಮಾಡುತ್ತಿರುವಂತೆ. ಎಳೆತುಂಬುವುದು ಬಟ್ಟೆಯಲ್ಲಾಗಿರುವ ಜಖಂ ಅಥವಾ ಹೊಲಿಗೆ ರೇಖೆಯುದ್ದಕ್ಕೆ ಸಾಗದ ರಂಧ್ರಗಳನ್ನು ರಿಪೇರಿ ಮಾಡುವ ಒಂದು ಸಾಂಪ್ರದಾಯಿಕ ವಿಧಾನವಾಗಿದೆ. ತೇಪೆಹಚ್ಚುವುದು ಕಾರ್ಯಸಾಧ್ಯವಲ್ಲದ ಕಡೆ ಅಥವಾ ಹಾಗೆ ಮಾಡುವುದು ಧರಿಸುವವನಿಗೆ ಅಹಿತವನ್ನು ಉಂಟುಮಾಡಬಲ್ಲ ಸಾಧ್ಯತೆಯಿದ್ದಲ್ಲಿ (ಉದಾಹರಣೆಗೆ ಕಾಲುಚೀಲದ ಹಿಮ್ಮಡಿಯ ಮೇಲೆ) ಎಳೆತುಂಬುವುದನ್ನು ಬಳಸಲಾಗುತ್ತದೆ.

ಹೆಚ್ಚಿನ ಓದಿಗೆ[ಬದಲಾಯಿಸಿ]

  • Reader's Digest Oxford Dictionary p. 1001.CS.
  • Coates, Lydia Trattles (1917). "Chapter 11—Darning and Patching". American Dressmaking Step by Step. New York: Pictorial Review Company. pp. 188–192 – via Google Books.
  • "Embroidery or Decoration". How to Become an "Expert Knitter". Studio Knits. n.d. Swiss darning, or duplicate stitch. Archived from the original on 2021-01-25. Retrieved 2020-04-21.