ಎಲೆಕ್ಟ್ರಾನಿಕ್ ಮತದಾನ
Election technology |
---|
Terminology |
|
Testing |
Technology |
Manufacturers |
ಎಲೆಕ್ಟ್ರಾನಿಕ್ ಮತದಾನ ವು,( ಇ ಮತದಾನ ಎಂದೂ ಕರೆಯಲ್ಪಡುತ್ತದೆ ) ವಿವಿಧ ರೀತಿಯ ಮತದಾನಗಳನ್ನು ತನ್ನ ಪರಿಧಿಯಲ್ಲಿ ಒಳಗೊಂಡಂತಹ ಒಂದು ಪದವಾಗಿದ್ದು,ಎಲೆಕ್ಟ್ರಾನಿಕ್ (ವಿದ್ಯುನ್ಮಾನ) ರೀತಿಯಲ್ಲಿ ಮತ ಚಲಾಯಿಸುವ ಮತ್ತು ವಿದ್ಯುನ್ಮಾನ ರೀತಿಯಲ್ಲಿಯೇ ಮತಗಳನ್ನು ಎಣಿಸುವ ಪ್ರಕ್ರಿಯೆಗಳನ್ನು ಬಿಂಬಿಸುವ ಪದವಾಗಿದೆ. ಎಲೆಕ್ಟ್ರಾನಿಕ್ ಮತದಾನದ ತಂತ್ರಜ್ಞಾನವು ಇವುಗಳನ್ನು ಒಳಗೊಂಡಿರುತ್ತವೆಪಂಚ್ ಕಾರ್ಡಗಳು, ಆಪ್ಟಿಕಲ್ ಸ್ಕಾನ್ ಮತದಾನದ ವ್ಯವಸ್ಥೆ ಮತ್ತು ವಿಶೇಷವಾದ ಮತಗಟ್ಟೆಗಳು ಡೈರೆಕ್ಟ್-ರೆಕಾರ್ಡಿಂಗ್ ಎಲೆಕ್ಟ್ರಾನಿಕ್ ಮತದಾನದ ಪದ್ಧತಿಯನ್ನೂ (ಡಿ ಅರ್ ಇ) ಸಹ ಒಳಗೊಂಡಿರುತ್ತದೆ, ಅದು ದೂರವಾಣಿಗಳು, ಖಾಸಗಿ ಗಣಕಯಂತ್ರದ ನೆಟ್ವರ್ಕ್ ಗಳು, ಅಥವಾ ಅಂತರಜಾಲಗಳ ಮುಖಾಂತರ, ಮತಪತ್ರಗಳು ಮತ್ತು ಮತಗಳನ್ನು ರವಾನಿಸುವುದೂ ಸಹ ಸೇರಿರುತ್ತದೆ. ಎಲೆಕ್ಟ್ರಾನಿಕ್ ಮತದಾನದ ತಂತ್ರಜ್ಞಾನವು ಮತಪತ್ರಗಳ ಎಣಿಕೆಯನ್ನು ತ್ವರಿತಗೊಳಿಸಬಹುದು ಮತ್ತು ವಿಕಲ ಮತದಾರರಿಗೆ ಉತ್ತಮಗೊಂಡ ತಲುಪುವಿಕೆಯನ್ನು ಒದಗಿಸಬಹುದು. ಆದಾಗ್ಯೂ, ಎಲೆಕ್ಟ್ರಾನಿಕ್ ಮತದಾನವು, ವಿಶೇಷವಾಗಿ ಡಿ ಆರ್ ಇ ಮತದಾನವು, ಚುನಾವಣೆಗೆ ಸಂಬಂಧಿಸಿದ ಮೋಸವನ್ನುಸುಗಮಗೊಳಿಸುವುದೆಂದು ಮುಖ್ಯವಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿವಾದ ವಿವಾದಗಳಿವೆ.
ಸ್ಥೂಲ ಅವಲೋಕನ
[ಬದಲಾಯಿಸಿ]ನೂತನ ಆಪ್ಟಿಕಲ್ ಸ್ಕಾನ್ ಮತದಾನದ ಪದ್ಧತಿಯುಒಂದು ಗಣಕ ಯಂತ್ರಕ್ಕೆ ಮತಪತ್ರದ ಮೇಲೆ ಒಬ್ಬ ಮತದಾರನ ಮುದ್ರೆಯನ್ನು ಎಣಿಸಲು ಅನುವುಮಾಡಿಕೊಡುತ್ತದೆ. ಒಂದೇ ಯಂತ್ರದಲ್ಲಿ ಮತಗಳನ್ನು ಸಂಗ್ರಹಿಸಿ ಪಟ್ಟಿ ಮಾಡುವ ಡಿ ಆರ್ ಇ ಮತದಾನದ ಯಂತ್ರಗಳುಬ್ರೆಜಿಲ್ ಮತ್ತು ಭಾರತದಲ್ಲಿಹಾಗೂ ವೆನಿಜೂಲಾ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿಯೂಸಹ ವ್ಯಾಪಕ ಪ್ರಮಾಣದಲ್ಲಿ ಎಲ್ಲಾ ಚುನಾವಣೆಗಳಲ್ಲಿ ಪ್ರತಿಯೊಬ್ಬ ಮತದಾರರಿಂದ ಉಪಯೋಗಿಸಲ್ಪಡುತ್ತವೆ. ಅವು ಹೆಚ್ಚಿನ ಸಂಖ್ಯೆಯಲ್ಲಿ ನೆದರ್ ಲ್ಯಾಂಡ್ಸ್‌ನಲ್ಲಿ ಉಪಯೋಗಿಸಲ್ಪಡುತ್ತಿದ್ದವು ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಆ ಅಧಿಕಾರವನ್ನು ಹಿಂದೆಗೆದುಕೊಳ್ಳಲಾಗಿದೆ. ಅಂತರಜಾಲ ಮತದಾನದ ವ್ಯವಸ್ಥೆಯು ಜನಪ್ರಿಯತೆಯನ್ನು ಗಳಿಸಿವೆ ಮತ್ತು ಇಂಗ್ಲೆಂಡ್, ಎಸ್ಟೊನಿಯಾ ಹಾಗೂ ಸ್ವಿಡ್ಜರ್ಲೆಂಡ್ ದೇಶಗಳ ಸರ್ಕಾರಿ ಚುನಾವಣೆಗಳು ಮತ್ತು ಲೋಕಮತ ಸಂಗ್ರಹಕ್ಕಾಗಿ ಅಲ್ಲದೆ ಕೆನಡಾ ದೇಶದ ಪೌರಸಭೆಯ ಚುನಾವಣೆಗಳಿಗೆ ಮತ್ತು ಸಂಯುಕ್ತ ಸಂಸ್ಥಾನಹಾಗೂ ಫ್ರಾನ್ಸ್ ದೇಶದ ಪಕ್ಷದ ಪ್ರಾಥಮಿಕ ಚುನಾವಣೆಗಳಲ್ಲಿಯೂ ಉಪಯೋಗಿಸಲ್ಪಡುತ್ತಿದ್ದವು.
ಒಂದು ವಿದ್ಯುನ್ಮಾನ ಗುಪ್ತ ಮತದಾನದ ಮುದ್ರೆಯೊತ್ತುವ ಸಾಧನಗಳನ್ನು ಒಳಗೊಂಡಂತಹ ಸಂಕೀರ್ಣ ವ್ಯವಸ್ಥೆಗಳು (ಸಾಮಾನ್ಯವಾಗಿ ಡಿ ಆರ್ ಇ ಗೆ ಸಮನಾದ ಒಂದು ಸ್ಪರ್ಶ ಪರದೆ ಪದ್ಧತಿ) ಅಥವಾ ಒಬ್ಬ ಮತದಾರನು ಪ್ರಾಮಾಣೀಕರಿಸುವ ಮತಪತ್ರವನ್ನುಮುದ್ರಿಸಲು ಬೇರೆ ರೀತಿಯಲ್ಲಿ ನೆರವಾಗುವಂತಹ ತಂತ್ರಜ್ಞಾನವೂ ಸಹ ಇರುತ್ತವೆ. ನಂತರ ವಿದ್ಯುನ್ಮಾನ ದತ್ತಾಂಶಗಳ ಸಂಯೋಜನೆಗಾಗಿ ಪ್ರತ್ಯೇಕವಾದ ಯಂತ್ರವನ್ನು ಉಪಯೋಗಿಸಬೇಕು.
ಮತಪತ್ರವನ್ನು ಆಧರಿಸಿದ ಎಲೆಕ್ಟ್ರಾನಿಕ್ ಮತದಾನದ ವ್ಯವಸ್ಥೆ
[ಬದಲಾಯಿಸಿ]ಕೆಲವು ವೇಳೆ "ಒಂದು ದಾಖಲೆಯ ಗುಪ್ತ ಮತದಾನ ಮಾಡುವ ಪದ್ಧತಿ" ಎಂದು ಕರೆಯಲಾಗುವ ಮತಪತ್ರ-ಆಧಾರಿತ ಮತದಾನದ ವ್ಯವಸ್ಥೆಯಲ್ಲಿ ಕಾಗದದ ಮತಪತ್ರಗಳನ್ನು ಉಪಯೋಗಿಸಿ, ಮತಗಳನ್ನು ಚಲಾಯಿಸುವ ಮತ್ತು ಕೈಯಿಂದಲೇ ಎಣಿಸುವಪದ್ಧತಿಯಾಗಿ ಪ್ರಾರಂಭವಾಯಿತು. ವಿದ್ಯುನ್ಮಾನ ದತ್ತಾಂಶಗಳ ಪಟ್ಟಿಮಾಡುವ ಮಹತ್ವದ ಆಗಮನದಿಂದ ಕೈಯಿಂದ ಗುರುತು ಮಾಡಿ, ಆದರೆ ವಿದ್ಯುನ್ಮಾನದಿಂದ ಎಣಿಸುವ ಕಾಗದದ ಕಾರ್ಡುಗಳ ಅಥವಾ ಹಾಳೆಗಳ ವ್ಯವಸ್ಥೆಗಳ ಪ್ರವೇಶವಾಯಿತು. ಈ ಪದ್ಧತಿಗಳು ಪಂಚ್ ಕಾರ್ಡ್ ಮತದಾನ, ಸಂಕೇತ ಜ್ಞಾನಹಾಗೂ ಕೊನೆಗೆ ಡಿಜಿಟಲ್ ಪೆನ್ ಮತದಾನಪದ್ಧತಿಗಳು ಅಂತರ್ಗತವಾಗಿರುತ್ತವೆ. ಅತ್ಯಂತ ಇತ್ತೀಚೆಗೆ, ಈ ವ್ಯವಸ್ಥೆಗಳು ವಿದ್ಯುನ್ಮಾನ ಮತಪತ್ರದಲ್ಲಿ ಮುದ್ರೆಯೊತ್ತುವ ಸಾಧನವನ್ನು ಒಳಗೊಂಡಿರಬಲ್ಲವು (ಇ ಬಿ ಯಮ್). ಇವು ಮತದಾರರು ಒಂದು ವಿದ್ಯುನ್ಮಾನ ಇನ್ ಪುಟ್ ಸಾಧನವನ್ನುಉಪಯೋಗಿಸಿ ತಮ್ಮ ಆಯ್ಕೆಗಳನ್ನು ಮಾಡಲು ಅನುವು ಮಾಡಿಕೊಡುತ್ತವೆ. ಸಾಮಾನ್ಯವಾಗಿ ಡಿ ಆರ್ ಇ ಪದ್ಧತಿಗಳಿಗೆ ಸಮನಾದ ಒಂದು ಸ್ಪರ್ಶ ಪರದೆಯವ್ಯವಸ್ಥೆ, ಮತಪತ್ರದಲ್ಲಿ ಮುದ್ರೆಯೊತ್ತುವ ಸಾಧನವನ್ನು ಒಳಗೊಂಡು ನೆರವಾಗುವ ತಂತ್ರಜ್ಞಾನದವಿವಿಧ ರೀತಿಗಳನ್ನು ಸಂಯೋಜಿಸಬಲ್ಲವು.
ಡೈರೆಕ್ಟ್-ರೆಕಾರ್ಡಿಂಗ್ ವಿದ್ಯುನ್ಮಾನ (ಡಿ ಆರ್ ಇ) ಮತದಾನದ ಪದ್ಧತಿ
[ಬದಲಾಯಿಸಿ]ಒಂದು ಡೈರೆಕ್ಟ್ ರೆಕಾರ್ಡಿಂಗ್ ಎಲೆಕ್ಟ್ರಾನಿಕ್ (ಡಿ ಆರ್ ಇ) ಮತದಾನದ ಯಂತ್ರವುಸ್ವಯಂಚಾಲಿತ ಅಥವಾ ಎಲೆಕ್ಟ್ರೊ-ಆಪ್ಟಿಕಲ್ ಉಪಾಂಗಗಳನ್ನು ಹೊಂದಿರುವ ಮತಪತ್ರ ಪ್ರದರ್ಶನದ ಮೂಲಕ ಮತದಾನ ಮಾಡುತ್ತದೆ. ಇದನ್ನು ಮತದಾರನಿಂದ ಚುರುಕುಗೊಳಿಸ ಬಹುದು (ಸಾಂಕೇತಿಕವಾಗಿ ಗುಂಡಿಗಳು ಅಥವಾ ಸ್ಪರ್ಶ ಪರದೆ); ಇದು ಗಣಕಯಂತ್ರದ ತಂತ್ರಾಂಶ ಮೂಲಕ ಅಂಕಿ ಅಂಶಗಳ ಮಾಹಿತಿಯ ಕಾರ್ಯನಿರ್ವಹಿಸುತ್ತದೆ; ಮತ್ತು ಇದು ಮೆಮೊರಿ ಕಾಂಪೊನೆಂಟ್ಗಳಲ್ಲಿಮತದಾನದ ಅಂಕಿ ಅಂಶಗಳು ಮತಪತ್ರದ ಪ್ರತಿಬಿಂಬಗಳನ್ನು ರೆಕಾರ್ಡ್ ಮಾಡುತ್ತದೆ. ಚುನಾವಣೆಯ ನಂತರ ಅದು ಮುದ್ರಿಸಿ ನಕಲುಮಾಡಿದ ಮತ್ತು ತೆಗೆಯಬಹುದಾದ ಮೆಮೊರಿ ಕಾಂಪೊನೆಂಟ್ನಲ್ಲಿ ಸಂಗ್ರಹಿಸಿದ ಮತದಾನದ ಅಂಕಿ ಅಂಶಗಳ ದತ್ತಾಂಶಗಳ ಸಂಯೋಜನೆಯನ್ನು ಒದಗಿಸುತ್ತದೆ. ಕೇಂದ್ರೀಯ ಕಾರ್ಯ ಸ್ಥಳದ ಸುತ್ತ ಮುತ್ತಲಿನ ಫಲಿತಾಂಶಗಳನ್ನು ಕ್ರೋಢೀಕರಿಸಿ ವರದಿ ಮಾಡಲು ಒಂದು ಕೇಂದ್ರ ಸ್ಥಾನಕ್ಕೆ ವ್ಯಕ್ತಿಗತ ಮತಪತ್ರಗಳು ಅಥವಾ ಮತದಾನದ ಮೊತ್ತವನ್ನು ರವಾನಿಸಲು ಈ ವ್ಯವಸ್ಥೆಯು ಒಂದು ಸಾಧನವನ್ನು ಒದಗಿಸಬಲ್ಲದು. ಈ ವ್ಯವಸ್ಥೆಗಳು ಪ್ರಾಕಾರದ ಎಣಿಸುವ ಪದ್ಧತಿಯನ್ನು ಉಪಯೋಗಿಸುತ್ತವೆ. ಇದು ಮತದಾನದ ಸ್ಥಳದಲ್ಲಿ ಮತಪತ್ರಗಳನ್ನು ಪಟ್ಟಿ ಮಾಡುತ್ತದೆ. ಅವು ಮತಚಲಾಯಿಸಿದಂತೆ ಸೂಚಕವಾಗಿ ಮತಪತ್ರಗಳನ್ನು ಪಟ್ಟಿಮಾಡಿ, ಚುನಾವಣೆ ಮುಗಿದನಂತರ ಫಲಿತಾಂಶವನ್ನು ಮುದ್ರಿಸುತ್ತವೆ.[೧] 2002 ರಲ್ಲಿ, ಸಂಯುಕ್ತ ಸಂಸ್ಥಾನದಲ್ಲಿ, ಪ್ರತಿ ಮತಗಟ್ಟೆಗೆ ಒಂದು ವಿಕಲಾಂಗರಿಗೆ ಸುಲಭವಾಗಿ ನೆರವಾಗುವ ಮತದಾನದ ವ್ಯವಸ್ಥೆಯನ್ನು ಒದಗಿಸ ಬೇಕೆಂದು ಹೆಲ್ಪ್ ಅಮೇರಿಕಾ ಮತದಾನದ ಕಾಯ್ದೆಕಡ್ಡಾಯ ಮಾಡಿತು. ಡಿ ಆರ್ ಇ ಮತದಾನದ ಯಂತ್ರಗಳ ುಪಯೋಗದಿಂದ ಇದನ್ನು ಅತಿ ಹೆಚ್ಚು ಅಧಿಕಾರ ವ್ಯಾಪ್ತಿಯವರು, ಕೆಲವರು ಸಂಪೂರ್ಣವಾಗಿ ಡಿ ಆರ್ ಇಗೆ ಜಿಗಿದು ಮನದಟ್ಟು ಮಾಡಲು ಆರಿಸಿಕೊಂಡಿದ್ದಾರೆ. ಸಂಯುಕ್ತ ಸಂಸ್ಥಾನದಲ್ಲಿ, 1996 [೨] ರಲ್ಲಿ ಶೇಕಡಾ 7.7 ರಿಂದ ಮೇಲೇರಿ, 2004 ರಲ್ಲಿ, ದಾಖಲಿಸಲ್ಪಟ್ಟ ಮತದಾನದ ಶೇಕಡಾ 28.9 ರಷ್ಟು ವ್ಯಕ್ತಿಗಳು, ಕೆಲವು ವಿಧಗಳ ಡೈರೆಕ್ಟ್ ರೆಕಾರ್ಡಿಂಗ್ ವಿದ್ಯುನ್ಮಾನ ಮತದಾನ ಪದ್ಧತಿಯನ್ನು ಉಪಯೋಗಿಸಿ ಕೊಂಡರು.{{http://www.kidsvotingoh.org/insidefiles/activities/Voting%20Systems%20Handout-3copy.pdf}} 2004ರಲ್ಲಿ, ಭಾರತವು ತನ್ನ ಸಂಸತ್ತಿನ ಚುನಾವಣೆಗಾಗಿ ವಿದ್ಯುನ್ಮಾನ ಮತದಾನ ಯಂತ್ರಗಳನ್ನು (ಇ ವಿ ಎಂ) ಅಳವಡಿಸಿಕೊಂಡಿತು. ಆಗ 380 ಮಿಲಿಯನ್ ಮತದಾರರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಮತದಾನದ ಯಂತ್ರಗಳನ್ನು[ಸೂಕ್ತ ಉಲ್ಲೇಖನ ಬೇಕು] ಉಪಯೋಗಿಸಿ ತಮ್ಮ ಮತಗಳನ್ನು ಚಲಾಯಿಸಿದರು. ಭಾರತೀಯ ಇ ವಿ ಎಂ ಗಳನ್ನು ಎರಡು ಸರ್ಕಾರಿ ಸ್ವಾಮ್ಯದ ರಕ್ಷಣಾ ಸಾಧನ ಸಲಕರಣೆಗಳನ್ನು ತಯಾರಿಸುವ ಘಟಕಗಳಾದ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿ ಇ ಎಲ್) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಇ ಸಿ ಐ ಎಲ್)ನಲ್ಲಿ ರಚಿಸಿ, ಅಭಿವೃದ್ಧಿ ಪಡಿಸಲ್ಪಟ್ಟವು. ಎರಡೂ ವ್ಯವಸ್ಥೆಗಳು ತದ್ರೂಪವಾದವುಗಳು, ಮತ್ತು ಭಾರತದ ಚುನಾವಣಾ ಕಮೀಶನ್ ನ ವೈಶಿಷ್ಟತೆಗಳಿಗೆ ವಿಕಾಸಿಸಲ್ಪಟ್ಟವು. ಈ ವ್ಯವಸ್ಥೆಯು 6 ವೊಲ್ಟ್ ಬ್ಯಾಟರಿಗಳಿಂದ ನಡೆಯುವ ಎರಡು ಸಾಧನಗಳುಳ್ಳ ಒಂದು ಜೋಡಿ. ಒಂದು ಸಾಧನವು, ಮತದಾನದ ಘಟಕವು ಮತದಾರನಿಂದ ಉಪಯೋಗಿಸಲ್ಪಡುತ್ತದೆ, ಕಂಟ್ರೋಲ್ ಘಟಕವೆಂದು ಕರೆಯಲ್ಪಡುವ ಮತ್ತೊಂದು ಸಾಧನವು ಚುನಾವಣಾ ಸಂಬಂಧಿತ ಅಧಿಕಾರಿಯಿಂದ ಕಾರ್ಯ ನಿರ್ವಹಿಸಲ್ಪಡುತ್ತದೆ. ಎರಡೂ ಘಟಕಗಳು 5 ಮೀಟರ್ ಕೇಬಲ್ ನಿಂದ ಜೋಡಿಸಲ್ಪಟ್ಟಿರುತ್ತವೆ. ಮತದಾನದ ಘಟಕವು ಪ್ರತಿ ಅಭ್ಯರ್ಥಿಗೆ ಒಂದು ನೀಲಿ ಗುಂಡಿಯನ್ನು ಹೊಂದಿರುತ್ತದೆ, ಆ ಘಟಕವು 16 ಅಭ್ಯರ್ಥಿಗಳನ್ನು ಭರಿಸಬಲ್ಲದು, ಆದರೆ 64 ಉಮೇದುವಾರರಿಗೆ ಸ್ಥಳ ಹೊಂದಿಸಲು 4 ಘಟಕಗಳವರೆಗೆ ಮಾತ್ರ ಜೋಡಿಸ ಬಹುದು. ಕಂಟ್ರೋಲ್ ಘಟಕವು ತನ್ನ ಮೇಲ್ಮೈ ಮೇಲೆ ಮೂರು ಗುಂಡಿಗಳನ್ನು ಹೊಂದಿರುತ್ತದೆ, ಅಂದರೆ, ಒಂದು ಗುಂಡಿ ಏಕೈಕ ಮತವನ್ನು ಬಿಡುಗಡೆ ಮಾಡಲು, ಒಂದು ಗುಂಡಿ ಇದುವರೆಗೂ ಚಲಾಯಿಸಿದ ಮತಗಳ ಸಂಖ್ಯೆಯ ಮೊತ್ತವನ್ನು ನೋಡಲು, ಮತ್ತೊಂದು ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯ ಮಾಡಲು. ಫಲಿತಾಂಶದ ಗುಂಡಿಯನ್ನು ಗುಪ್ತವಾಗಿಟ್ಟು ಮೊಹರು ಮಾಡಲಾಗಿದೆ, ಮುಚ್ಚುವ ಗುಂಡಿಯನ್ನು ಈ ಮೊದಲೇ ಒತ್ತುವವರೆಗೂ ಅದನ್ನು ಅದುಮಲಾಗುವುದಿಲ್ಲ.
ಸಾರ್ವಜನಿಕ ನೆಟ್ವರ್ಕ್ ಡಿ ಆರ್ ಇ ಮತದಾನದ ವ್ಯವಸ್ಥೆ
[ಬದಲಾಯಿಸಿ]ಸಾರ್ವಜನಿಕ ನೆಟ್ವರ್ಕ ಮತದಾನದ ವ್ಯವಸ್ಥೆಯು ಒಂದು ಚುನಾವಣಾ ಪದ್ಧತಿ, ಅದು ವಿದ್ವುನ್ಮಾನ ಮತಪತ್ರಗಳನ್ನು ಉಪಯೋಗಿಸುತ್ತದೆ ಹಾಗೂ ನಂತರ ಅಂಕಿ ಅಂಶಗಳನ್ನು ಒಂದು ಸಾರ್ವಜನಿಕ ನೆಟ್ವರ್ಕ್ ನ ಮೂಲಕ ಮತಗಟ್ಟೆಯಿಂದ ಮತ್ತೊಂದು ಕಾರ್ಯಸ್ಥಳಕ್ಕೆ ರವಾನಿಸುತ್ತದೆ. ಮತದ ದತ್ತ ಮಾಹಿತಿಯನ್ನು ಮತ ಚಲಾಯಿಸಿದಂತೆ ಏಕವ್ಯಕ್ತಿ ಮತಪತ್ರಗಳಂತೆ, ನಿಯತಕಾಲಿಕವಾಗಿ ಚುನಾವಣೆಯ ದಿನದ ಕೊನೆಯವರೆಗೂ ಮತಪತ್ರದ ಗುಂಪುಗಳಾಗಿ, ಇಲ್ಲವೆ ಮತದಾನವು ಮುಗಿದಾಗ ಒಂದೇ ಗುಂಪಾಗಿಯೂ ರವಾನಿಸ ಬಹುದು. ಇದು ಅಂತರಜಾಲ ಮತದಾನ ಹಾಗೂ ದೂರವಾಣಿ ಮತದಾನವನ್ನೂ ಸಹ ಒಳಗೊಂಡಿರುತ್ತದೆ. ಸಾರ್ವಜನಿಕ ನೆಟ್ವರ್ಕ್ ಡಿ ಆರ್ ಇ ಮತದಾನ ವ್ಯವಸ್ಥೆಯು ಆವರಣದ ಎಣಿಕೆ ಅಥವಾ ಕೇಂದ್ರ ಎಣಿಕೆಯಾಗಿಯೂ ಉಪಯೋಗ ಮಾಡಿಕೊಳ್ಳಬಲ್ಲದು. ಕೇಂದ್ರ ಎಣಿಕೆ ಪದ್ಧತಿಯು ಅನೇಕ ಸುತ್ತಮುತ್ತಲಿನಿಂದ ಮತಪತ್ರಗಳನ್ನು ಕೇಂದ್ರ ಕಾರ್ಯಸ್ಥಳದಲ್ಲಿ ಪಟ್ಟಿ ಮಾಡುತ್ತದೆ. ಅಂತರಜಾಲ ಮತದಾನವು ಬಹು ದೂರದ ಕಾರ್ಯಸ್ಥಳಗಳನ್ನು ಬಳಸಿ ಕೊಳ್ಳಬಹುದು (ಯಾವುದಾದರೂ ಅಂತರಜಾಲ ಸಾಮರ್ಥ್ಯವುಳ್ಳ ಗಣಕಯಂತ್ರದಿಂದ ಮತದಾನ ಮಾಡುವ) ಇಲ್ಲವೇ ಅಂತರಜಾಲ ಸೇರಿಸಿರುವ ಮತದಾನ ವ್ಯವಸ್ಥೆಗಳನ್ನು ಹೊಂದಿರುವ ಮತಗಟ್ಟೆಗಳ ಸಹಿತ ಪರಂಪರೆಯ ಮತದಾನ ಸ್ಥಳಗಳನ್ನು ಉಪಯೋಗಿಸಿಕೊಳ್ಳ ಬಹುದು. ಮಹಾನಗರಸಭೆ ಹಾಗೂ ಸಂಘಟನಾ ಸಂಸ್ಥೆಗಳು ಮತ್ತು ಇತರೆ ಬದಲಿ ಪ್ರತಿನಿಧಿತ್ವದ ಚುನಾವಣೆಗಳಿಗೆ ಅಧಿಕಾರಿಗಳನ್ನು ಹಾಗೂ ಸಮಿತಿ ಸದಸ್ಯರನ್ನು ಚುನಾಯಿಸಲು ನಿಯತಿ ಕ್ರಮದಂತೆ ಅಂತರಜಾಲ ಮತದಾನವನ್ನು ಉಪಯೋಗಿಸುತ್ತವೆ. ಅಂತರಜಾಲ ಮತದಾನದ ವ್ಯವಸ್ಥೆಗಳು ಅನೇಕ ಆಧುನಿಕ ರಾಷ್ಟ್ರಗಳಲ್ಲಿ ಖಾಸಗಿಯಾಗಿ ಮತ್ತು ಸಂಯುಕ್ತ ಸಂಸ್ಥಾನ, ಇಗ್ಲೆಂಡ್, ಐರ್ಲೆಂಡ್, ಸ್ವಿಡ್ಜರ್ಲೆಂಡ್ ಮತ್ತು ಎಸ್ಟೋನಿಯಾದಲ್ಲಿ ಸಾರ್ವಜನಿಕವಾಗಿ ಉಪಯೋಗಿಸಲ್ಪಟ್ಟಿವೆ. ಸ್ವಿಡ್ಜರ್ಲೆಂಡ್ ನಲ್ಲಿ ಅದು ಈಗಾಗಲೇ ಸ್ಥಳೀಯ ಲೋಕಮತ ಸಂಗ್ರಹಗಳ ನೆಲೆಗೊಂಡಿರುವ ಭಾಗವಾಗಿದೆ, ಮತದಾರರು ಅಂಚೆಯ ಸೇವೆಯ ಮುಖಾಂತರ ಮತಪತ್ರ ಚಲಾಯಿಸಲು ತಮ್ಮ ಪಾಸ್ವರ್ಡ್ ಗಳನ್ನು ಪಡೆಯುತ್ತಾರೆ. ಎಸ್ಟೋನಿಯಾದಲ್ಲಿ ಅತಿ ಹೆಚ್ಚು ಮತದಾರರು, ತಮಗೆ ಇಷ್ಟವಾದರೆ, ಅಂತರಜಾಲದ ಮೂಲಕ ಸ್ಥಳೀಯ ಮತ್ತು ಸಂಸತ್ತಿನ ಚುನಾವಣೆಗಳಲ್ಲಿ ತಮ್ಮ ಮತ ಚಲಾಯಿಸ ಬಹುದು, ಏಕೆಂದರೆ ಮತದಾನದ ಪಟ್ಟಿಯಲ್ಲಿರುವ ಅತ್ಯಂತ ಹೆಚ್ಚು ಮತದಾರರು, ಯಾವುದೇ ಯುರೋಪಿಯನ್ ಐಕ್ಯಮತ ರಾಷ್ಟ್ರಕ್ಕಿಂತ ಅತಿ ಹೆಚ್ಚಾಗಿ ನಡೆಸಲ್ಪಡುವ ಇ-ಮತದಾನ ಕ್ರಮವನ್ನು ಹೊಂದಿರುತ್ತಾರೆ. ಗಣಕಯಂತ್ರವು ಓದ ಬಹುದಾದ ಮೈಕ್ರೊಚಿಪ್ ಜೊತೆ ಸಿದ್ಧ ಪಡಿಸಲ್ಪಟ್ಟ ಒಂದು ರಾಷ್ಟ್ರೀಯ ವ್ಯಕ್ತಿತ್ವದ ಕಾರ್ಡಅನ್ನು ಎಲ್ಲಾ ಎಸ್ಟೋನಿಯನ್ನರು ಧರಿಸುವುದರಿಂದ ಅದು ಸಾಧ್ಯವಾಗಿದೆ ಮತ್ತು ಈ ಕಾರ್ಡುಗಳನ್ನೇ ಅವರು ಆನ್ ಲೈನ್ ಮತಪತ್ರಕ್ಕೂ ಪ್ರವೇಶಾಧಿಕಾರ ಪಡೆಯಲು ಉಪಯೋಗಿಸುತ್ತಾರೆ. ಒಬ್ಬ ಮತದಾರನಿಗೆ ಏನೆಲ್ಲಾ ಬೇಕೆಂದರೆ ಒಂದು ಗಣಕಯಂತ್ರ, ಒಂದು ವಿದ್ಯುನ್ಮಾನ ಕಾರ್ಡ್ ರೀಡರ್, ಅವರ ಐ ಡಿ ಕಾರ್ಡ್ ಮತ್ತು ಅದರ ಪಿನ್. ಆಗ ಅವರು ವಿಶ್ವದ ಎಲ್ಲಿಂದಲಾದರೂ ತಮ್ಮ ಮತ ಚಲಾಯಿಸ ಬಹುದು. ಮುಂಗಡ ಮತದಾನಮಾಡುವ ದಿನಗಳ ಅವಧಿಯಲ್ಲಿ ಮಾತ್ರ ಎಸ್ಟೋನಿಯನ್ನರು ಇ-ಮತಗಳನ್ನು ಚಲಾಯಿಸ ಬಹುದು. ಚುನಾವಣೆಯ ದಿನದಂದು ಜನಗಳು ಮತದಾನ ಕೇಂದ್ರಗಳಿಗೆ ಹೋಗಿ ಮತಪತ್ರವನ್ನು ಭರ್ತಿ ಮಾಡಬೇಕು.
ವಿದ್ಯುನ್ಮಾನ ಮತದಾನದ ವಿಶ್ಲೇಷಣೆ
[ಬದಲಾಯಿಸಿ]ಇತರ ಮತದಾನ ತಂತ್ರಗಳಿಗೆ ಹೋಲಿಸಿದರೆ ವಿದ್ಯುನ್ಮಾನ ಮತದಾನದ ಕ್ರಮಗಳು ಅನುಕೂಲತೆಗಳನ್ನು ಒದಗಿಸಬಲ್ಲವು. ಒಂದು ವಿದ್ಯುನ್ಮಾನ ಮತದಾನ ಪದ್ಧತಿಯನ್ನು, ಅದರ ರಚನೆ, ವಿಂಗಡಣೆ, ಮತದಾನ, ಸಂಗ್ರಹಣೆ ಮತ್ತು ಮತಪತ್ರಗಳನ್ನು ಎಣಿಸುವ, ಅನೇಕ ಹಂತಗಳಲ್ಲಿ ಯಾವುದಾದರೂ ಒಂದಕ್ಕೆ ಒಳಪಡಿಸಬಹುದು ಮತ್ತು ಈ ರೀತಿ ಅನೇಕ ಮೆಟ್ಟಿಲುಗಳಲ್ಲಿ ಯಾವುದಾದರೊಂದಕ್ಕೆ ಅನುಕೂಲತೆಗಳನ್ನು ಪ್ರವೇಶ ಮಾಡಿಸಬಹುದು ಅಥವಾ ಇಲ್ಲ. ಸಂಭವನೀಯ ಅನಾನುಕೂಲತೆಯೂ ಅಲ್ಲದೆ ಯಾವುದೇ ವಿದ್ಯುನ್ಮಾನ ಅಂಗ ಭಾಗದಲ್ಲಿ ಕೊರತೆ ಅಥವಾ ನ್ಯೂನತೆಯು ಇರುತ್ತದೆ. ಮತಪತ್ರದ ಮೂಲಕ ಯಂತ್ರಗಳು ಕಂಡು ಹಿಡಿಯದೆ ಹೋದ ಮತಗಳನ್ನು ವಿದ್ಯುನ್ಮಾನ ಮತದಾನದ ಯಂತ್ರಗಳು ಪತ್ತೆ ಹಚ್ಚಿದ ಕಾರಣ 2000 ರಕ್ಕಿಂತ 2004 ರಲ್ಲಿ ಒಂದು ಮಿಲಿಯಾಗಿಂತಲೂ ಹೆಚ್ಚು ಮತಪತ್ರಗಳು ಎಣಿಸಲ್ಪಟ್ಟವು ಎಂದು ಮ್ಯೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯಚಾರ್ಲ್ಸ್ ಸ್ಟೀವರ್ಟ್ ಅಂದಾಜು ಮಾಡಿದ್ದಾರೆ.[೩] ಸಂಯುಕ್ತ ಸಂಸ್ಥಾನದ ಜವಾಬ್ದಾರಿಯುತ ಕಚೇರಿಯುಮೇ 2004 ರಲ್ಲಿ ವಿದ್ಯುನ್ಮಾನ ಮತದಾನದಿಂದ ನಿರ್ಮಾಣ ಮಾಡಲ್ಪಟ್ಟ ಉಪಕಾರಗಳು ಮತ್ತು ಕಾರ್ಯ ವಿಶೇಷ ಆಸಕ್ತಿಗಳೆರಡನ್ನೂ ವಿಶ್ಲೇಷಿಸುತ್ತಾ, "ವಿದ್ಯುನ್ಮಾನದ ಮತದಾನವು ಸದವಕಾಶಗಳು ಮತ್ತು ಪೈಪೋಟಿಗಳನ್ನು ಹಾಜರು ಪಡಿಸುತ್ತದೆ"[೪] ಎಂಬ ಶಿರೊನಾಮೆಯುಳ್ಳ ಒಂದು ವರದಿಯನ್ನು ಬಿಡುಗಡೆ ಮಾಡಿತು. ವಿದ್ಯುನ್ಮಾನ ಮತದಾನದಲ್ಲಿ ನಡೆಯುತ್ತಿರುವ ಸುಧಾರಣೆಗಳೊಂದಿಗೆ ಕೆಲವು ಆಸಕ್ತಿಗಳನ್ನು ವಿವರಿಸುತ್ತಾ ಸೆಪ್ಟೆಂಬರ್ 2005 ರಲ್ಲಿ, "ವಿದ್ಯುನ್ಮಾನ ಮತದಾನ ಪದ್ಧತಿಗಳ ರಕ್ಷಣೆ ಮತ್ತು ಭರವಸೆಯನ್ನು ಸುಧಾರಿಸಲು ಸಂಘಟನಾ ಪ್ರಯತ್ನಗಳು ನಡೆಯುತ್ತಿವೆ, ಆದರೆ ಸೂಕ್ಷ್ಮ ಕಾರ್ಯಕ್ಷೇತ್ರಗಳನ್ನು ಪೂರೈಸಬೇಕಾಗಿದೆ"[೫] ಎಂಬ ತಲೆಬರಹವುಳ್ಳ ಎರಡನೆ ವರದಿಯು ಬಿಡುಗಡೆ ಮಾಡಲ್ಪಟ್ಟಿತು. ಮತದಾನದ ಕ್ರಮಗಳು ಹೆಚ್ಚು ಜಟಿಲವಾದಷ್ಟು ಮತ್ತು ತಂತ್ರಾಂಶ ಒಳಗೊಂಡಾಗ, ವಿವಿಧ ರೀತಿಗಳ ಚುನಾವಣೆಯ ವಂಚನೆಗಳು ಸಾಧ್ಯವಾಗುತ್ತವೆ ಎಂದು ನಿರೂಪಿಸಲ್ಪಟ್ಟಿದೆ. ತಾತ್ವಿಕವಾದ ದೃಷ್ಟಿಕೋನದಿಂದ ವಿದ್ಯುನ್ಮಾನ ಮತದಾನದ ಉಪಯೋಗವನ್ನು ಇತರರೂ ಸಹ ಪೈಪೋಟಿ ಮಾಡುತ್ತಾರೆ. ವಿದ್ಯುನ್ಮಾನ ಯಂತ್ರದೊಳಗಿನ ಕಾರ್ಯಗಳನ್ನು ಪ್ರಮಾಣೀಕರಿಸಲು ಮಾನವರು ಸಜ್ಜುಗೊಳಿಸಲ್ಪಟ್ಟಿಲ್ಲವೆಂದು ಚರ್ಚಿಸುತ್ತಾರೆ, ಈ ಕೆಲಸಗಳನ್ನು ಜನರು ದೃಢೀಕರಿಸಲು ಸಾಧ್ಯವಿಲ್ಲದ ಕಾರಣ, ಅವುಗಳನ್ನು ನಂಬಲರ್ಹವಲ್ಲ. ಇದೂ ಅಲ್ಲದೆ, ತಾವು ಪರೀಕ್ಷಿಸದೆ ಇರುವ ಯಾವುದೇ ಕಾರ್ಯಕ್ರಮಗಳ ಮೇಲೆ ಜನಗಳು ಭರವಸೆ ಇಡಲಾರರೆಂದು ಹೆಚ್ಚು ವಿಶಾಲವಾದ ಉದ್ದೇಶಕ್ಕಾಗಿ ಕೆಲವು ಎಣಿಕೆ ಮಾಡುವ ತಜ್ಞರು ವಾದ ಮಾಡಿದ್ದಾರೆ.[೬] ಗುಪ್ತ ಮತದಾನ ಪರಿಧಿಯಲ್ಲಿ, ಚುನಾವಣೆಗೆ ಸಂಬಂಧಿಸಿದ ಫಲಿತಾಂಶಗಳ ಜೊತೆ ಹೋಲಿಸಲು ಗೊತ್ತಾದ ಇನ್ ಪುಟ್ ಆಗಲಿ ಇಲ್ಲವೆ ನಿರೀಕ್ಷಿಸಿದ ಔಟ್ ಪುಟ್ ಸಹ ಇರುವುದಿಲ್ಲ. ಆದ್ದರಿಂದ ವಿದ್ಯುನ್ಮಾನ ಚುನಾವಣಾ ಪರಿಣಾಮಗಳು ಮತ್ತು ಹೀಗೆ ಸಂಪೂರ್ಣ ವಿದ್ಯುನ್ಮಾನ ಕ್ರಮದ ಸ್ಪಷ್ಟತೆ, ಪ್ರಾಮಾಣೀಕತೆ ಮತ್ತು ರಕ್ಷಣೆಯನ್ನು ಮಾನವರಿಂದ ಪ್ರಾಮಾಣೀಕರಿಸಲು ಸಾಧ್ಯವಿಲ್ಲ.[೭] "ಗಣಕಯಂತ್ರದ ಸುರಕ್ಷಾ ನಿಪುಣರು ಏನು ಮಾಡಬೇಕೆಂಬುದರಬಗ್ಗೆ ಒಂದೇ ಅಭಿಪ್ರಾಯವುಳ್ಳವರು (ಕೆಲವು ಮತ ಚಲಾಯಿಸುವ ದಕ್ಷರು ಒಪ್ಪುವುದಿಲ್ಲ, ಆದರೆ ಆಲಿಸ ಬೇಕಾಗಿರುವುದು ಗಣಕಯಂತ್ರದ ಭದ್ರತೆಯ ಬಗ್ಗೆ ಆಸಕ್ತಿಯುಳ್ಳವರು; ಇಲ್ಲಿ ಸಮಸ್ಯೆಗಳಿರುವುದು ಗಣಕಯಂತ್ರದಲ್ಲಿ, ಗಣಕಯಂತ್ರವನ್ನು ಮತದಾನದ ಪ್ರಕ್ರಿಯೆಯಲ್ಲಿ ಉಪಯೋಗಿಸಲಾಗಿದೆ ಎಂಬ ವಾಸ್ತವಾಂಶ ಸರಿಯಲ್ಲ)...ಎಂದು ಭದ್ರತಾ ವಿಶ್ಲೇಷಣಕಾರ ಬ್ರೂಸ್ ಶ್ಕೇನಿಯರ್‌ಸೇರಿದಂತೆ ವಿದ್ಯುನ್ಮಾನ ಮತದಾನದ ವಿಮರ್ಶಕರು ಅಭಿಪ್ರಾಯ ಪಡುತ್ತಾರೆ.ಡಿ ಆರ್ ಇ ಯಂತ್ರಗಳು ಮತದಾರನ-ಮತಗಳನ್ನು ಪರಾಮರ್ಶಿಸುವ ಲೆಕ್ಕ ಶೋಧನಗಳನ್ನು ಹೊಂದಿರಬೇಕು... ಡಿ ಆರ್ ಇ ಯಂತ್ರಗಳಲ್ಲಿ ಉಪಯೋಗಿಸುವ ತಂತ್ರಾಂಶವನ್ನು ಮತದಾನದ ವ್ಯವಸ್ಥೆಯ ಸ್ಪಷ್ಟತೆಯ ಬಗ್ಗೆ ಭರವಸೆ ಕೊಡಲು ಸಾರ್ವಜನಿಕ ವಿಮರ್ಶೆಗೆ ತೆರದಿಡಬೇಕು."[೮] ಮತದಾನದ ಯಂತ್ರಗಳು ಸಂಧಾನ ಮಾಡಿಕೊಳ್ಳ ಬಹುದಾದ ಕಾರಣ ಹಾಗೂ ಗಣಕಯಂತ್ರಗಳು ದೋಷಪೂರಿತ ಕೆಲಸಗಳನ್ನು ಮಾಡುತ್ತವೆ ಮತ್ತು ಮಾಡಬಹುದಾದ್ದರಿಂದ ಪ್ರಮಾಣಿಸಿ ನೋಡುವ ಮತಫತ್ರಗಳು ಕಡ್ಡಾಯವಾಗಿ ಬೇಕು.
ವಿದ್ಯುನ್ಮಾನ ಮತಪತ್ರಗಳು
[ಬದಲಾಯಿಸಿ]ವಿದ್ಯುನ್ಮಾನ ಮತದಾನದ ಪದ್ಧತಿಗಳು ಗಣಕಯಂತ್ರದ ಮೆಮೊರಿಯಲ್ಲಿಮತಗಳನ್ನು ಶೇಖರಿಸಲು ವಿದ್ಯುನ್ಮಾನ ಮತಪತ್ರಗಳನ್ನು ಉಪಯೋಗಿಸ ಬಹುದು. ಇವುಗಳನ್ನು ಪ್ರತ್ಯೇಕವಾಗಿ ಉಪಯೋಗಿಸುವಂತಹ ವ್ಯವಸ್ಥೆಗಳನ್ನು ಡಿ ಆರ್ ಇ ಮತದಾನದ ಕ್ರಮಗಳೆಂದು ಕರೆಯಲ್ಪಡುತ್ತವೆ. ವಿದ್ಯುನ್ಮಾನ ಮತಪತ್ರಗಳನ್ನು ಉಪಯೋಗಿಸಿದಾಗ ಮತಪತ್ರಗಳ ಪೂರೈಕೆಯು ಖಾಲಿಯಾಗುವ ತೊಂದರೆಯಿರುವುದಿಲ್ಲ. ಅದೂ ಅಲ್ಲದೆ, ಈ ವಿದ್ಯುನ್ಮಾನ ಮತಪತ್ರಗಳು ಕಾಗದದ ಮತಪತ್ರಗಳನ್ನು ಮುದ್ರಿಸುವ ಅವಶ್ಯಕತೆಯ ಒಂದು ಮಹತ್ವದ ವೆಚ್ಚವನ್ನು ಕಡಿಮೆ ಮಾಡುತ್ತವೆ.[೯] ವಿವಿಧ ಭಾಷೆಗಳಲ್ಲಿ ಇರುವ ಮತಪತ್ರಗಳುಳ್ಳ ಚುನಾವಣೆಗಳನ್ನು ನಿರ್ವಹಿಸುವಾಗ (ಸಂಯುಕ್ತ ಸಂಸ್ಥಾನದ ಕೆಲವು ಪ್ರದೇಶಗಳಲ್ಲಿ, ಸಾರ್ವಜನಿಕ ಮತದಾನಗಳು 1965 ರ ರಾಷ್ಟ್ರೀಯ ಮತದಾನದ ಹಕ್ಕುಗಳ ಕಾಯ್ದೆಯಿಂದಅಪೇಕ್ಷಿಸಲ್ಪಡುತ್ತವೆ)ವಿದ್ಯುನ್ಮಾನ ಮತಪತ್ರಗಳು ಒಂದೇ ಯಂತ್ರದಿಂದ ಅನೇಕ ಭಾಷೆಯಲ್ಲಿ ಮತಪತ್ರಗಳನ್ನು ಒದಗಿಸುವ ಕಾರ್ಯಕ್ರಮ ಹಾಕಿಕೊಳ್ಳ ಬಹುದು. ಹೆಚ್ಚನ ಭಾಷೆಯಲ್ಲಿ ಮತಪತ್ರಗಳಿಗೆ ಸಂಬಂಧಿಸಿದ ಅನುಕೂಲತೆಯು ವಿದ್ಯುನ್ಮಾನ ಮತದಾನಕ್ಕೆ ಅದ್ವಿತೀಯವಾಗಿ ತೋರುತ್ತದೆ. ಉದಾಹರಣೆಗೆ, ಸಂಯುಕ್ತ ಸಂಸ್ಥಾನದ ಒಕ್ಕೂಟದ ಚುನಾವಣಾ ಕಾನೂನು ಮತಪತ್ರವನ್ನು ಚೀನಿಭಾಷೆಗೆ ಸರಿಮಾಡಿ ಒದಗಿಸಲು ವಾಶಿಂಗ್ಟನ್ನಿನ ಕಿಂಗ್ ಕೌಂಟಿಯ ಸಂಖ್ಯಾಶಾಸ್ತ್ರಜ್ಞರಿಗೆ ಅವುಗಳ ಅವಶ್ಯಕತೆಯಿದೆ. ಯಾವುದೇ ರೀತಿಯ ಕಾಗದದ ಮತಪತ್ರದ ಜೊತೆ, ಎಷ್ಟು ಚೀನಿ ಭಾಷೆಯ ಮತಪತ್ರಗಳನ್ನು ಮುದ್ರಿಸ ಬೇಕು, ಪ್ರತಿ ಮತಗಟ್ಟೆಯಲ್ಲಿ ಎಷ್ಟನ್ನು ದೊರಕುವಂತೆ ಮಾಡಬೇಕು, ಇತ್ಯಾದಿಗಳನ್ನು ಆ ಪ್ರದೇಶವು ನಿರ್ಧರಿಸಬೇಕು. ಅತ್ಯಂತ ಕಡಿಮೆ ಮಟ್ಟದಲ್ಲಿ ಮಹತ್ವಪೂರ್ಣ ಸಂಖ್ಯೆಯ ಹಾಳಾದ ಮತಪತ್ರಗಳ ಫಲಿತಾಂಶ ಬರುವಂತೆ ಚೀನಿ ಭಾಷೆಯ ಮತಪತ್ರಗಳು ಎಲ್ಲಾ ಮತಗಟ್ಟೆಯಲ್ಲೂ ದೊರಕುವುದು ಖಚಿತವೆಂದು ಯಾವುದೇ ನೀತಿಯು ಭರವಸೆ ಕೊಡಬಲ್ಲದು.[ಸೂಕ್ತ ಉಲ್ಲೇಖನ ಬೇಕು] (ಪತ್ರಕ್ಕಿಂತ ಸನ್ನೆ ಕೋಲಿನ ಯಂತ್ರಗಳ ವಸ್ತು ಸ್ಥಿತಿಯು ಇನ್ನೂ ಹೆಚ್ಚು ಹದಗೆಡುತ್ತಿದೆ: ಪ್ರತಿ ಮತಗಟ್ಟೆಯಲ್ಲೂ ಚೀನಿ ಭಾಷೆಯ ಸನ್ನೆ ಕೋಲಿನ ಯಂತ್ರಗಳನ್ನು ಸ್ಥಾಪಿಸಿ ನಂಬಿಕೆಯಿಂದ ಒದಗಿಸುವುದು ಏಕೈಕ ಸಹಜವಾಗಿ ಕಾಣುವ ಮಾರ್ಗ, ಅವುಗಳಲ್ಲಿ ಕೆಲವನ್ನು ಸ್ವಲ್ಪವಾದರೂ ಉಪಯೋಗಿಸ ಬಹುದು.) ಮತದಾನದ ಕಾರ್ಯಕ್ಷೇತ್ರಗಳಲ್ಲಿ ಮತಪತ್ರಗಳನ್ನು ಮುದ್ರಿಸುವ ಒಂದು ಪದ್ಧತಿಯನ್ನು ಒದಗಿಸುವುದರ ಮೂಲಕ ಯಾವುದೇ ಭಾಷೆಯಲ್ಲಿ ಹೆಚ್ಚುವರಿ ಮತಪತ್ರಗಳ ಬೇಡಿಕೆಯನ್ನು ಕಡಿಮೆ ಮಾಡಬಹುದುದೆಂದು ವಿಮರ್ಶಕರು ಚರ್ಚಿಸುತ್ತಾರೆ. ಅವರು ಮುಂದುವರಿದು, ತಂತ್ರಾಂಶ ಸಮರ್ಥನೆ, ಕಂಪೈಲರ್ ನಂಬಿಕೆಯ ದೃಢೀಕರಣ, ಸ್ಥಾಪನೆಯ ನ್ಯಾಯ ಸಮ್ಮತೆಯ ಸಮರ್ಥನೆ, ರವಾನಿಸುವ ಭರವಸೆ ಮತ್ತು ವಿದ್ಯುನ್ಮಾನ ಮತದಾನಕ್ಕೆ ಸಂಬಂಧಿಸಿದ ಇತರ ಹಂತಗಳ ಆಧಾರವು ಸಂಕೀರ್ಣ ಮತ್ತು ದುಬಾರಿಯೆಂದು ವಾದಿಸುತ್ತಾರೆ. ಹೀಗೆ ಮುದ್ರಿಸಿದ ಮತಪತ್ರಗಳಿಗಿಂತ ವಿದ್ಯುನ್ಮಾನ ಮತಪತ್ರಗಳು ಕಡಿಮೆ ವೆಚ್ಚವುಳ್ಳದೆಂಬುವ ಭರವಸೆ ಕೊಡುವಂತಿಲ್ಲ.
ನೋಡಲು ಸಾಧ್ಯವಾಗುವಿಕೆ
[ಬದಲಾಯಿಸಿ]ವಿದ್ಯುನ್ಮಾನ ಮತದಾನದ ಯಂತ್ರಗಳನ್ನು ವಿಕಲಾಂಗತೆಗಳುಳ್ಳ ವ್ಯಕ್ತಿಗಳಿಗೆ ಸಂಪೂರ್ಣ ನೆರವಾಗುವಂತೆ ಮಾಡ ಬಹುದು. ಪಂಚ್ ಕಾರ್ಡ್ ಮತ್ತು ಆಪ್ಟಿಕಲ್ ಸ್ಕಾನ್ ಯಂತ್ರಗಳು ಅಂಧರಿಗೆ ಅಥವಾ ದೃಷ್ಟಿದೋಷ ಉಳ್ಳವರಿಗೆ ಪೂರ್ಣವಾಗಿ ನೆರವಾಗುವುದಿಲ್ಲ, ಮತ್ತು ಸನ್ನೆ ಕೋಲಿನ ಯಂತ್ರಗಳು ಮಿತಿಯುಳ್ಳ ಚಲನೆ ಮತ್ತು ಶಕ್ತಿ ಸಾಮರ್ಥ್ಯವುಳ್ಳ ಮತದಾರರಿಗೆ ಕಷ್ಟವಾಗಬಹುದು.[೧೦] ವಿದ್ಯುನ್ಮಾನ ಯಂತ್ರಗಳು ಹೆಡ್ ಫೋನ್ಗಳು, ಸಿಪ್ ಮತ್ತು ಪಫ್, ಫುಟ್ ಪೆಡಲ್ಗಳು, ಜಾಯ್ ಸ್ಟಿಕ್ಗಳು ಮತ್ತು ಇತರ ಹೊಂದಿಕೊಳ್ಳುವ ತಂತ್ರಜ್ಞಾನವನ್ನು ಅವಶ್ಯ ನೆರವನ್ನುಒದಗಿಸಲು ಉಪಯೋಗಿಸಬಹುದು.
ಪರೀಕ್ಷಿಸಿದ ಮತದಾನದ ಪ್ರತಿಷ್ಠಾನದಂತಹ ಸಂಸ್ಥೆಗಳುವಿದ್ಯುನ್ಮಾನ ಮತದಾನದ ಯಂತ್ರಗಳ ನೆರವನ್ನು[೧೧] ಟೀಕಿಸಿದ್ದಾರೆ ಹಾಗೂ ಬದಲಿ ವ್ಯವಸ್ಥೆಗಳನ್ನು ಸಮರ್ಥಿಸಿದ್ದಾರೆ. ವಿಕಲಾಂಗ ಮತದಾರರು (ದೃಷ್ಟಿದೋಷವುಳ್ಳವರನ್ನು ಒಳಗೊಂಡಂತೆ) ಎಲ್ಲಿ ಸಂಕೇತ ಮಾಡಬೇಕೆಂದು ತೋರಿಸಲು ದೈಹಿಕ ಸಂಕೇತಗಳನ್ನು ಉಪಯೋಗಿಸುವ ಒಂದು ಮತಪತ್ರದ ಪದ್ಧತಿಯಾದ ಸ್ಪರ್ಶಜ್ಞಾನದ ಮತಪತ್ರವನ್ನುಗುಪ್ತ ಮತದಾನ ಮಾಡಲು ಪ್ರಯೋಗಿಸಬಹುದು. ಈ ಮತಪತ್ರಗಳನ್ನು ಇತರ ಮತದಾರರು ಉಪಯೋಗಿಸುವಂತಹವುಗಳಿಗೆ ತದ್ರೂಪವಾಗಿ ರಚಿಸ ಬಹುದು.[೧೨]. ಆದಾಗ್ಯೂ, ಬೇರೆ ವಿಕಲಾಂಗ ಮತದಾರರು (ದಕ್ಷತೆಯ ವಿಕಲಾಂಗ ಮತದಾರರನ್ನೂ ಸೇರಿಸಿದಂತೆ) ಈ ಮತಪತ್ರಗಳನ್ನು ಉಪಯೋಗಿಸಲು ಅಸಮರ್ಥರಾಗಬಹುದು.
ಕ್ರಿಪ್ಟೋಗ್ರಾಫಿಕ್ ಪ್ರಮಾಣಿಕರಣ
[ಬದಲಾಯಿಸಿ]ವಿದ್ಯುನ್ಮಾನ ಮತದಾನದ ಕ್ರಮಗಳು ಪರಿಹಾರವನ್ನು ಒದಗಿಸಬಲ್ಲವು, ಅವು ಮತದಾರರು ತಮ್ಮ ಮತವು ನಿಖರವಾಗಿ ಲಿಕ್ಕಾಚಾರ ಸಹಿತ ದಾಖಲಿಸಿ ಪಟ್ಟಿ ಮಾಡಿರುವುದನ್ನು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ಈ ಪದ್ಧತಿಗಳು ತಪ್ಪಾಗಿ ದಾಖಲಾದ ಮತಗಳ ಕಾರ್ಯವಿಧಾನವನ್ನು ಕಡಿಮೆ ಮಾಡಬಲ್ಲವು. ಅಂತಹ ವಿಧಾನಗಳನ್ನು ಕಡಿಮೆ ಮಾಡುವ ಒಂದು ವೈಶಿಷ್ಟ್ಯವೆಂದರೆ ಡಿಜಿಟಲ್ ಚಿನ್ಹೆಗಳನ್ನುಉಪಯೋಗಿಸಿ ಮತದಾನ ಪ್ರಾಧಿಕಾರದವರಿಂದ ಸಹಿ ಮಾಡಲ್ಪಟ್ಟ, ಯಾವುದಾದರೊಂದು ರೀತಿಯ ವಿದ್ಯುನ್ಮಾನ ರಸೀದಿಯ ಸಹಿತ, ತಾವು ಹೇಗೆ ಮತ ಚಲಾಯಿಸಿದೆವು ಎಂಬುದನ್ನು ಒಬ್ಬ ಮತದಾರನು ಸಾಧಿಸುವಂತೆ ಅನುವು ಮಾಡಿ ಕೊಡುವುದು. ಈ ಲಕ್ಷಣವು ಅಂಕಿ ಅಂಶಗಳ ಸ್ಪಷ್ಟತೆಯನ್ನು ನಿರ್ಧಾರಾತ್ಮಕವಾಗಿ ದೃಢಪಡಿಸಬಲ್ಲದು, ಆದರೆ ಮತದಾರನ ಆಯ್ಕೆಯ ಅನಾಮಧೇಯತ್ವವನ್ನು ಭರವಸೆ ಕೊಡಲಾರದ ಯಾವುದೇ ಪ್ರಾಮಾಣೀಕರಿಸಿದ ವ್ಯವಸ್ಥೆಯು, ಮತದಾರನಿಗೆ ಬೆದರಿಕೆಅಥವಾ ಮತ ಮಾರಾಟವನ್ನುಸಮರ್ಥಿಸಬಹುದು. ಕೆಲವು ಕ್ರಿಪ್ಟೋಗ್ರಾಫಿಕ್ ಪರಿಹಾರಗಳು ತಮ್ಮ ಮತವನ್ನು ವೈಯಕ್ತಿಕವಾಗಿ, ಪ್ರಮಾಣೀಕರಿಸಲು ಮೂರನೆಯವರನ್ನು ಹೊರತು ಪಡಿಸಿ, ಮತದಾರನಿಗೆ ಅನುವು ಮಾಡಿಕೊಡಲು ಗುರಿಯಿಟ್ಟುಕೊಂಡಿವೆ. ಇತರ ಸಂಭಾವ್ಯತೆಯಿಂದ ಆರಿಸಿದ ಮತಗಳ ರಸೀದಿಗಳೂ ಅಲ್ಲದೆ ತಮ್ಮ ಮತದ ಸಹಿತ ಡಿಜಿಟಲ್ ಆಗಿ ಸಹಿಯಾದ ರಸೀದಿಯನ್ನು ಮತದಾರನಿಗೆ ಒದಗಿಸುವುದು ಅಂತಹ ಒಂದು ಉಪಾಯ. ಇದು ತನ್ನ ಮತವನ್ನು ಗುರುತಿಸಲು ಮತದಾರನಿಗೆ ಮಾತ್ರ ಅನುವು ಮಾಡಿ ಕೊಡುತ್ತದೆ, ಆದರೆ ತನ್ನ ಮತವನ್ನು ಪರೀಕ್ಷಿಸಲು ಮತ್ಯಾರಿಗೂ ಸಾಧ್ಯವಾಗಲಾರದು. ಇದು ಮತಪತ್ರದ ಒಂದು ಸಾರ್ವಜನಿಕ ಅಂಕಿ ಅಂಶಗಳ ಜಾಡಿನಲ್ಲಿ ಮತವು ಸ್ಪಷ್ಟವಾಗಿ ದಾಖಲಾಗಿದೆಯೆಂದು ಪರೀಕ್ಷಿಸಲು ಮತದಾರನಿಗೆ ಅನುವು ಮಾಡಿ ಕೊಡಬಲ್ಲದು, ಅದೂ ಅಲ್ಲದೆ, ಸಂಭಾವ್ಯತೆಯಿಂದ ಉತ್ಪತ್ತಿಯಾದ ಮತದಾನದ ಅವಧಿಯ ಐ ಡಿ ಯ ಜೊತೆ ಪ್ರತಿ ಮತವನ್ನು ಜೋಡಿಸಬಹುದು.
ಮತದಾರನ ಆಸಕ್ತಿ
[ಬದಲಾಯಿಸಿ]ಹಾಳಾದ ಮತಪತ್ರದಲ್ಲಿಫಲಿಸ ಬಹುದಾದ ಕಡಿಮೆ ಮತದಾನಮತ್ತು ಅತಿಹೆಚ್ಚು ಮತದಾನದಂತಹಸಂಭವಿಸಬಹುದಾದ ಸಮಸ್ಯೆಗಳನ್ನು ಪತ್ತೆಹಚ್ಚಿ ಮತದಾನಿಗೆ ತಕ್ಷಣ ಪ್ರತ್ಯುತ್ತರ ಒದಗಿಸಲು ವಿದ್ಯುನ್ಮಾನ ಮತದಾನದ ಯಂತ್ರಗಳು ಸಶಕ್ತವಾಗಿವೆ. ಮತದಾರನ ಆಸಕ್ತಿಯನ್ನುಯಶಸ್ವಿಯಾಗಿ ನಿರ್ಧರಿಸುವಲ್ಲಿ ಈ ತಕ್ಷಣದ ಫಲಿತಾಂಶವನ್ನು ಮರಳಿಸುವ ವ್ಯವಸ್ಥೆಯು ಸಹಾಯಕವಾಗಬಲ್ಲದು.
ಪಾರದರ್ಶಕತೆ
[ಬದಲಾಯಿಸಿ]ಶೋಧನೆಯ ಕೊರತೆ, ನ್ಯೂನವಾದ ಲೆಕ್ಕ ವಿಮರ್ಶೆಯ ಕಾರ್ಯ ವಿಧಾನಗಳು ಹಾಗೂ ವ್ಯವಸ್ಥೆ ಅಥವಾ ಪದ್ಧತಿಯ ನಕ್ಷೆಗೆ ಸಾಕಷ್ಟು ಗಮನ ಕೊಡದ ವಿದ್ಯುನ್ಮಾನ ಮತದಾನ ಸಹಿತ "ಚುನಾವಣೆಗಳು ದೋಷ ಮತ್ತು ವಂಚನೆಗೆ ದಾರಿಮಾಡಿ ಕೊಡುತ್ತವೆ" ಎಂದು ಇಗ್ಲೆಂಡ್ ಮೂಲದ ಓಪನ್ ರೈಟ್ಸ್ ಗುಂಪಿನಂತಹ [೧೩][೧೪] ಸಮುದಾಯಗಳಿಂದ ಆಪಾದಿಸಲ್ಪಟ್ಟಿದೆ. ಮತದಾನ ಯಂತ್ರಗಳನ್ನು ಉಪಯೋಗಿಸುವಾಗ "ವಿಷಯದ ಯಾವುದೇ ವಿಶೇಷ ಜ್ಞಾನವಿಲ್ಲದೆ ಹಾಗೂ ನಾಗರಿಕನಿಂದ ನಂಬಲರ್ಹವಾಗಿ ಫಲಿತಾಂಶವನ್ನು ಪ್ರಮಾಣಿಸಿ ನೋಡಲು ಸಾಧ್ಯವಾಗಬೇಕೆಂದು" ಜರ್ಮನಿಯ ಸಂಯುಕ್ತ ಶಾಸನಬದ್ಧ ನ್ಯಾಯಾಲಯವು 2009 ರಲ್ಲಿ ಗಮನಿಸಿತು. ಅಲ್ಲಿಯವರೆಗೂ ಉಪಯೋಗದಲ್ಲಿದ್ದ ಡಿ ಆರ್ ಇನಡಾಪ್ ಗಣಕಯಂತ್ರಗಳು ಈ ಬೇಡಿಕೆಯನ್ನು ಪೂರೈಸಿರಲಿಲ್ಲ. ವಿವರಿಸಿದಂತೆ ನಿರ್ಣಯವು ವಿದ್ಯುನ್ಮಾನ ಮತದಾನವನ್ನು ನಿಷೇಧಿಸಲಿಲ್ಲ, ಆದರೆ ಚುನಾವಣೆಗಳಲ್ಲಿ ಎಲ್ಲಾ ಅಗತ್ಯವಾದ ಹಂತಗಳೂ ಸಾರ್ವಜನಿಕ ಪರಿಶೀಲನೆಗೆ ಒಳಪಟ್ಟಿರಬೇಕೆಂದು ಅಪೇಕ್ಷಿಸುತ್ತದೆ.[೧೫][೧೬]
ಲೆಕ್ಕ ವಿಮರ್ಶೆಯ ಜಾಡು ಮತ್ತು ಲೆಕ್ಕ ಶೋಧನೆ
[ಬದಲಾಯಿಸಿ]ಮತಗಳು ಚಲಾಯಿಸಿದಂತೆ ದಾಖಲಾಗಬೇಕು ಮತ್ತು ಧಾಖಲಾದಂತೆ ಪಟ್ಟಿ ಮಾಡಲ್ಪಡಬೇಕೆಂಬುದೇ ಯಾವುದೇ ಮತದಾನ ಯಂತ್ರವು ದೃಢಪಡಿಸುವುದು ಒಂದು ಮೂಲಭೂತವಾದ ಪೈಪೋಟಿಯಾಗಿದೆ. ದಾಖಲೆ-ಇಲ್ಲದ ಗುಪ್ತ ಮತದಾನ ಪದ್ಧತಿಗಳುಸಾಕ್ಷಿಯ ಹೆಚ್ಚಿನ ಹೊರೆಯನ್ನು ಹೊಂದ ಬಲ್ಲವು. ಇದು ಆಗಾಗ್ಗೆ ಒಂದು ಸ್ವತಂತ್ರವಾಗಿ ಅಂಕಿ ಅಂಶಗಳನ್ನು ಪಟ್ಟಿ ಮಾಡುವ, ಕೆಲವು ವೇಳೆ ಸ್ತಾಯತ್ತ ಪ್ರಮಾಣೀಕರಿಸುವ ವ್ಯವಸ್ಥೆಯೆಂದು ಕರೆಯಲ್ಪಡುತ್ತದೆ, ಇದನ್ನು ಪುನರೆಣಿಕೆ ಇಲ್ಲವೇ ಲೆಕ್ಕ ಪರಿಶೀಲಿಸಲೂ ಸಹ ಉಪಯೋಗಿಸಬಹುದು. ಈ ವ್ಯವಸ್ಥೆಗಳು ಮತದಾರರಿಗೆ ತಮ್ಮ ಮತಗಳು ಹೇಗೆ ಚಲಾಯಿಸಲ್ಪಟ್ಟವು ಎಂದು ಪರೀಕ್ಷಿಸುವ ಸಾಮರ್ಥ್ಯ ಅಥವಾ ಇಷ್ಟೇ ಅಲ್ಲದೆ ತಮ್ಮ ಮತಗಳು ಹೇಗೆ ಪಟ್ಟಿ ಮಾಡಲ್ಪಟ್ಟವು ಎಂದು ಪ್ರಮಾಣಿಸುವುದನ್ನು ಒಳಗೊಂಡಿರಬಲ್ಲವು. ಪ್ರಮಾಣಗಳ ಮತ್ತು ತಂತ್ರಜ್ಞಾನದ ರಾಷ್ಟ್ರೀಯ ಸಂಸ್ಥೆಯಲ್ಲಿ (ಎನ್ ಐ ಎಸ್ ಟಿ)ವಾದಿಸಲ್ಪಟ್ಟ ಒಂದು ಚರ್ಚಾ ಕರಡು ಪತ್ರವು ವಿವರಿಸುತ್ತದೆ, "ಸುಮ್ಮನೆ ಇಟ್ಟರೆ, ಅದರ ವಿದ್ಯುನ್ಮಾನ ದಾಖಲೆಗಳು ಸ್ವಾಯತ್ತ ಲೆಕ್ಕ ಪರಿಶೋಧನೆಗೆ ಒದಗಿಸಲು ಡಿ ಆರ್ ಇ ವಾಸ್ತುಶಿಲ್ಪದ ಅಸಾಮರ್ಥ್ಯವು ಪರಿಸರಕ್ಕೆ ಅದು ಒಂದು ಗಮನಾರ್ಹವಲ್ಲದ ಅಯ್ಕೆಯನ್ನಾಗಿ ಮಾಡುತ್ತದೆ, ಅದರಲ್ಲಿ ದೋಷಗಳು ಮತ್ತು ವಂಚನೆಯನ್ನು ಪತ್ತೆ ಹಚ್ಚುವುದು ಪ್ರಮುಖವಾದದ್ದು".[೧೭] ವರದಿಯು ಎನ್ ಐ ಎಸ್ ಟಿ ಯ ಅಧಿಕಾರದ ಸ್ಥಾನವನ್ನುಪ್ರತಿನಿಧಿಸುವುದಿಲ್ಲ, "ದಾಖಲೆಯಲ್ಲಿನ ಕೆಲವು ಹೇಳಿಕೆಗಳು ತಪ್ಪಾಗಿ ಊಹಿಸಲ್ಪಟ್ಟಿವೆ" ಎಂದು ದಾಖಲೆಯ ಅಪಾರ್ಥಗಳು ಎನ್ ಐ ಎಸ್ ಟಿ ಗೆ ವಿವರಿಸಲು ಮಾರ್ಗದರ್ಶನ ಮಾಡುತ್ತದೆ. ಒಂದು ವೇಳೆ ಡಿ ಆರ್ ಇ ಗಳ ಮೇಲೆ ಆಕ್ರಮಣಗಳ ಸಂಭವನೀಯವಾದ ಸಾಧ್ಯತೆ ಏನು ಎಂಬುದರ ಬಗ್ಗೆ ಚುನಾವಣಾ ಅಧಿಕಾರಿಗಳು, ಮತದಾನ ವ್ಯವಸ್ಥೆಯ ಮಾರಾಟಗಾರರು, ಗಣಕಯಂತ್ರ ವಿಜ್ಞಾನಿಗಳು ಮತ್ತು ಈ ಕ್ಷೇತ್ರದಲ್ಲಿನ ಇತರ ತಜ್ಞರ ಹೇಳಿಕೆಗಳನ್ನು ಕರಡು ಪ್ರತಿಯು ಒಳಗೊಂಡಿರುತ್ತದೆ. ಅದಾಗ್ಯೂ ಈ ಕಥನಗಳು ವರದಿಯ ತೀರ್ಪುಗಳಲ್ಲ."[೧೮]
ತಮ್ಮ ಮತವು ಯಥಾರ್ಥವಾಗಿ ಚಲಾಯಿಸಲ್ಪಟ್ಟಿದೆ, ಮೋಸ ಅಥವಾ ದೋಷಪೂರಿತ ಕಾರ್ಯವನ್ನು ಪತ್ತೆ ಹಚ್ಚುವ, ಹಾಗೂ ಲೆಕ್ಕ ಪರೀಕ್ಷಿಸುವ ಒಂದು ಸಾಧನವನ್ನು ಮೂಲ ಯಂತ್ರಕ್ಕೆ ಒದಗಿಸಬೇಕು ಎಂದು ಮತದಾರರಿಗೆ ಭರವಸೆ ಕೊಡಲು ವಿವಿಧ ತಂತ್ರಜ್ಞಾನಗಳನ್ನು ಉಪಯೋಗಿಸಬಹುದು. ಕ್ರಿಪ್ಟೊಗ್ರಫಿ (ನೋಡುವಿಕೆ ಅಥವಾ ಗಣಿತಶಾಸ್ತ್ರ ರೀತಿ), ಕಾಗದದ (ಮತದಾರನಿಂದ ರಕ್ಷಿಸಲ್ಪಟ್ಟ ಅಥವಾ ಕೇವಲ ಪರೀಕ್ಷಿಸಿದ), ಶ್ರವಣರೂಪದಿಂದ ಪ್ರಮಾಣೀಕರಿಸಿದ, ಮತ್ತು ಇಬ್ಬಗೆಯಲ್ಲಿ ವರದಿ ಮಾಡಿದ ಇಲ್ಲವೇ ಸಾಕ್ಷಿಯ ವ್ಯವಸ್ಥೆಗಳಂತಹ (ಕಾಗದವನ್ನು ಹೊರತುಪಡಿಸಿ) ತಂತ್ರಜ್ಞಾನಗಳನ್ನು ಕೆಲವು ವ್ಯವಸ್ಥೆಗಳು ಒಳಗೊಂಡಿರುತ್ತವೆ. ಒಂದು ಸುರಕ್ಷೆಯ ಕಾರ್ಯಸ್ಥಳದೊಳಕ್ಕೆ ಸೇರಿಸಲ್ಪಡುವ ಮೊದಲು ಮತದಾರನ ಮೂಲಕ ದೃಷ್ಟಿಯಿಂದ ಪರೀಕ್ಷಿಸಬಲ್ಲಂತಹ ಇತರ ಪತ್ರದ ಫ್ಯಾಸಿಮೈಲ್ ಇಲ್ಲವೇ ಮತದಾನ ಯಂತ್ರದ ಮುದ್ರಣದ ಮತಪತ್ರವನ್ನು ಪಡೆದು ಅಂಕಿಅಂಶಗಳ ಪರಾಮರ್ಶೆಯ ಪ್ರಶ್ನೆಯನ್ನು ಉತ್ತರಿಸಲು, ಮತದಾರ ಪರೀಕ್ಷಿಸಿದ ಕಾಗದದ ಲೆಕ್ಕ ಶೋಧನೆಯ ಜಾಡಿನ (ವಿ ವಿ ಪಿ ಎ ಟಿ) ಸೃಷ್ಟಿಕರ್ತೆ ಡಾ. ರೆಬೆಕ್ಕ ಮರ್ಕ್ಯೂರಿಯ (ಮತದಾರನು ಮೂಲಭೂತವಾಗಿ ಪರೀಕ್ಷಿಸುವ ಮತಪತ್ರ ವ್ಯವಸ್ಥೆ ಎನ್ನುವ ಅಕ್ಟೋಬರ್ 2000 ದ ತನ್ನ ಪಿ ಹಚ್ ಡಿ ಪ್ರಬಂಧದಲ್ಲಿ ವಿವರಿಸಿದಂತೆ) ಸೂಚಿಸುತ್ತಾಳೆ. ತರುವಾಯ, ಇದು ಕೆಲವು ವೇಳೆ "ಮರ್ಕ್ಯುರಿ ಪದ್ಧತಿ" ಎಂದು ಉಲ್ಲೇಖಿಸಲ್ಪಡುತ್ತದೆ. ಸತ್ಯವಾಗಿಯೂ ಮತದಾರ -ಪರೀಕ್ಷಿಸಲು, ಸ್ವತಃ ದಾಖಲೆಯು ಮತದಾರನಿಂದ ಪ್ರಮಾಣಿಸಲ್ಪಡಬೇಕು ಮತ್ತು ದೃಶ್ಯ ಹಾಗೂ ಶ್ರವಣ ಮಾಧ್ಯಮದ ಸಹಾಯವಿಲ್ಲದೆ ಮಾಡಲು ಸಾಧ್ಯವಾಗುವಂತಿರಬೇಕು. ಮತದಾರನು ಒಂದು ಬಾರ್ ಕೋಡ್ ಸ್ಕಾನರ್ ಅಥವಾ ಪರೀಕ್ಷಿಸಲು ಬೇರೆ ವಿದ್ಯುನ್ಮಾನ ತಂತ್ರವನ್ನು ಉಪಯೋಗಿಸಲೇ ಬೇಕಾದರೆ, ಆಗ ಅದು ನಿಜವಾಗಿಯೂ ಮತದಾರ-ಪರೀಕ್ಷಿಸಿದ ದಾಖಲೆಯಲ್ಲ, ಏಕೆಂದರೆ ವಿದ್ಯುನ್ಮಾನ ತಂತ್ರವೇ ಪ್ರತ್ಯಕ್ಷವಾಗಿ ಮತದಾರನಿಗೆ ದಾಖಲೆಯನ್ನು ಪ್ರಮಾಣೀಕರಿಸುತ್ತದೆ. ವಿ ವಿ ಪಿ ಎ ಟಿ ಯು ಸಂಯುಕ್ತ ಸಂಸ್ಥಾನದ ಚುನಾವಣೆಗಳಲ್ಲಿಅತ್ಯಂತ ಸಾಮಾನ್ಯವಾಗಿ ಕಂಡುಬರುವ ಸ್ವತಂತ್ರವಾಗಿ ಪರೀಕ್ಷಿಸಿದ ಒಂದು ವಿಹಿತ ರೀತಿಯಾಗಿದೆ. ಮೊದಲಿನಿಂದ ಕೊನೆಯವರೆಗೂ ಅಂಕಿ ಅಂಶ ಪರಿಶೀಲಿಸುವ ಮತದಾನ-ವ್ಯವಸ್ಥೆಗಳು, ಮತದಾರನಿಗೆ ಮನೆಗೆ ತೆಗೆದುಕೊಂಡು ಹೋಗುವಂತಹ ರಸೀದಿಯನ್ನು ಒದಗಿಸಬಲ್ಲವು. ಈ ರಸೀದಿಯು ಮತದಾರರು ತಾವು ಹೇಗೆ ಮತ ಚಲಾಯಿಸಿದೆವೆಂಬುದನ್ನು ಇತರರಿಗೆ ದೃಢಪಡಿಸಲು ಅನುವು ಮಾಡಿಕೊಡುವುದಿಲ್ಲ, ಆದರೆ ಅದು ಅವರಿಗೆ ತಮ್ಮ ಮತವು ಪಟ್ಟಿಯಲ್ಲಿ ಸೇರಿಸಲ್ಪಟ್ಟಿದೆ, ಎಲ್ಲಾ ಮತಗಳು ನ್ಯಾಯ ಸಮ್ಮತವಾದ ಮತದಾರರಿಂದ ಚಲಾಯಿಸಲ್ಪಟ್ಟಿವೆ, ಹಾಗೂ ಫಲಿತಾಂಶಗಳು ನಿಖರವಾಗಿ ಬರೆಯಲ್ಪಟ್ಟಿವೆ ಎಂಬುದನ್ನು ಪರೀಕ್ಷಿಸಲು ದಾರಿ ಮಾಡಿ ಕೊಡುತ್ತದೆ. ಸಂಪೂರ್ಣವಾದ (ಇ2ಇ) ವ್ಯವಸ್ಥೆಗಳು ಪಂಚ್ ಸ್ಕಾನ್, ಮೂರು ಮತಪತ್ರಗಳುಹಾಗೂ ಒಬ್ಬ ಮತದಾರನ ಪ್ರೆಟ್ ಒಳಗೊಂಡಿರುತ್ತವೆ. ಪ್ರಚಲಿತ ಆಪ್ಟಿಕಲ್ ಸ್ಕಾನ್ ಮತದಾನ ಪದ್ಧತಿಗಳು ಸಂಪೂರ್ಣ ಪದರ ಸಹಿತ ವಿಸ್ತರಿಸಿ ಕೂಡಿಸುವ ಒಂದು ವಿಧಾನ ಸ್ಕಾನ್ಟೆಗ್ರಿಟಿ. ಮೇರಿಲ್ಯಾಂಡ್ ನ ಟಕೊಮ ಪಾರ್ಕನಗರವು ತನ್ನ ನವೆಂಬರ್, 2009ರ ಚುನಾವಣೆಗೆ ಸ್ಕಾನ್ಟೆಗ್ರಿಟಿನ್ನು ಉಪಯೋಗಿಸಿತು.[೧೯][೨೦] ತಾವು ಹೇಗೆ ಮತ ಚಲಾಯಿಸಿದೆವು ಎಂಬುದನ್ನು ಪರೀಕ್ಷಿಸಲು ಮತದಾರನಿಗೆ ಅನುವು ಮಾಡಿಕೊಡುವಂತಹ ವ್ಯವಸ್ಥೆಗಳು ಸಂಯುಕ್ತ ಸಂಸ್ಥಾನದ ಸಾರ್ವಜನಿಕ ಚುನಾವಣೆಗಳಲ್ಲಿ ಎಂದಿಗೂ ಉಪಯೋಗಿಸಲ್ಪಡುವುದಿಲ್ಲ ಮತ್ತು ಅತ್ಯಂತ ಹೆಚ್ಚು ರಾಜ್ಯ ಸಂವಿಧಾನಗಳಲ್ಲಿ ಬಹಿಷ್ಕರಿಸಲ್ಪಟ್ಟಿದೆ. ಮತದಾರನಿಗೆ ಬೆದರಿಕೆ ಹಾಕುವುದುಹಾಗು ಮತ ಮಾರಾಟವುಈ ಪರಿಹಾರ ಸಹಿತ ಪ್ರಾಥಮಿಕ ಕಾರ್ಯ ವಿಶೇಷ ಆಸಕ್ತಿಗಳಾಗಿವೆ. ಅಳತೆ ಮಾಡಿದ ಸಂಭಾವ್ಯತೆಯ ಪುನರೆಣಿಕೆಗಳಲ್ಲಿ ಶಕ್ಯವಾದ ವಂಚನೆ ಇಲ್ಲವೇ ದೋಷಪೂರಿತ ಕೆಲಸವನ್ನು ಪತ್ತೆ ಹಚ್ಚಲು ಒಂದು ಲೆಕ್ಕ ಶೋಧನೆ ವ್ಯವಸ್ಥೆಯನ್ನು ಉಪಯೋಗಿಸಬಹುದು. ವಿ ವಿ ಪಿ ಎ ಟಿ ಪದ್ಧತಿಯಲ್ಲಿ, ಕಾಗದದ ಮತಪತ್ರವು ಹಲವು ಬಾರಿ ದಾಖಲೆಯ ಅಧಿಕಾರದ ಮತಪತ್ರವೆಂದು ಎಣಿಸಲ್ಪಡುತ್ತದೆ. ಈ ದೃಷ್ಟಿಕೋನದಲ್ಲಿ, ಮತಪತ್ರವು ಮೊಟ್ಟಮೊದಲನೆಯದು ಮತ್ತು ವಿದ್ಯುನ್ಮಾನ ದಾಖಲೆಗಳು ಕೇವಲ ಆರಂಭಿಕ ಎಣಿಕೆಗಾಗಿ ಉಪಯೋಗಿಸಲ್ಪಡುತ್ತವೆ. ಆನಂತರದ ಯಾವುದೇ ಪುನರೆಣಿಕೆ ಅಥವಾ ಪೈಪೋಟಿಗಳಲ್ಲಿ, ಕಾಗದದ ಮತಪತ್ರ, ವಿದ್ಯುನ್ಮಾನ ಮತಪತ್ರವಲ್ಲ, ಪಟ್ಟಿಗಾಗಿ ಉಪಯೋಗಿಸಲ್ಪಡುತ್ತದೆ. ಯಾವಾಗಲಾದರೂ ಒಂದು ಕಾಗದದ ದಾಖಲೆಯು ಕಾನೂನು ಸಮ್ಮತವಾದ ಮತ ಪತ್ರವೆಂದು ಉಪಯೋಗವಾದರೆ, ಆ ವ್ಯವಸ್ಥೆಯು ಯಾವುದೇ ಕಾಗದದ ಮತಪತ್ರ ಪದ್ಧತಿಯಾಗಿ ಅದೇ ಲಾಭಗಳು ಮತ್ತು ಕಾರ್ಯವಿಧಾನಗಳಿಗೆ ಅಧೀನವಾಗಿರುತ್ತವೆ. ಯಾವುದೇ ಮತದಾನ ಯಂತ್ರವನ್ನು ಯಶಸ್ವಿಯಾಗಿ ಲೆಕ್ಕ ಶೋಧನೆ ಮಾಡಲು ಕಟ್ಟುನಿಟ್ಟಿನ ಕಾವಲಿನ ವ್ಯವಸ್ಥೆಅವಶ್ಯವಾಗಿರುತ್ತದೆ. ಅವಂತೆ ಅಂತರರಾಷ್ಟ್ರೀಯ ತಂತ್ರಜ್ಞಾನ ಇನ್ಕ್.. ರವರಿಂದ ಮೊದಲಬಾರಿಗೆ ಇದರ ಪರಿಹಾರವು ಪ್ರತಿಪಾದಿಸಲ್ಪಟ್ಟು (ನ್ಯೂಯಾರ್ಕ್ ನಗರ, 2001 ಮಾರ್ಚ್) ಉಪಯೋಗಿಸಲ್ಪಟ್ಟಿತು (ಸಾಕ್ರಮೆಂಟೊ, ಕ್ಯಾಲಿಫೋರ್ನಿಯಾ 2002). ಒಂದು ವಿದ್ಯುನ್ಮಾನ ದಾಖಲೆಯನ್ನು ಮುದ್ರಿಸುವಂತಹ ಒಂದು ಡಿ ಆರ್ ಇ ಮತದಾನ ವ್ಯವಸ್ಥೆಯನ್ನು 2004 ರಲ್ಲಿ ನೆವೆಡ ಸಫಲಪೂರ್ವಕವಾಗಿ ಕಾರ್ಯಗತಗೊಳಿಸಿದ ಮೊದಲ ರಾಜ್ಯವಾಗಿತ್ತು. ವೆರಿವೊಟ್ ವಿವಿಪಿಎಟಿಉಪಾಂಗದ ಸಹಿತ ಸಿದ್ಧಪಡಿಸಲ್ಪಟ್ಟ 2600 ಕ್ಕಿಂತಲೂ ಹೆಚ್ಚಿನ ಅವಾಕ್ ಎಡ್ಜ್‌ಸ್ಪರ್ಶ ಪರದೆ ಡಿ ಆರ್ ಇ ಗಳು ಸಿಕ್ವೊಯ ಮತದಾನ ವ್ಯವಸ್ಥೆಗಳಿಂದಒದಗಿಸಲ್ಪಟ್ಟು 9.3 ಮಿಲಿಯನ್ ಡಾಲರ್ಗಳ ಮತದಾನ ಪದ್ಧತಿಯೂ ಒಳಗೊಂಡಿತ್ತು. [೨೧] ಹೊಸ ಪದ್ಧತಿಗಳು, ಆಗಿನ ರಾಜ್ಯ ಕಾರ್ಯದರ್ಶಿ ಡೀನ್ ಹೆಲ್ಲರ್‌ಅವರ ಮಾರ್ಗದರ್ಶನದಲ್ಲಿ ವ್ಯಾಪಕವಾಗಿ ಪಂಚ್ ಕಾರ್ಡ್ ಮತದಾನ ವ್ಯವಸ್ಥೆಗಳು, ಅದರ ಬದಲಿಗೆ ಜಾರಿಗೊಳಿಸಲ್ಪಟ್ಟವು ಮತ್ತು ಪುರಭವನದ ಸಭೆಗಳ ಮುಖಾಂತರ ಸಮಾಜದಿಂದ ಕ್ರಿಯಾತ್ಮಕ ಪ್ರತ್ಯುತ್ತರವನ್ನು ಕೇಳಿಕೊಂಡ ನಂತರ ಆಯ್ಕೆ ಮಾಡಲ್ಪಟ್ಟವು ಹಾಗೂ ಇನ್ ಪುಟ್ ಅನ್ನು ನೆವೆಡ ಕ್ರೀಡಾ ಅಧಿಕಾರದ ಸಮಿತಿಯಿಂದಕೊರಲ್ಪಟ್ಟಿತು.[೨೨]
ಯಂತ್ರಾಂಶ
[ಬದಲಾಯಿಸಿ]ಸಾಕಷ್ಟು ಸುರಕ್ಷಿತಪಡಿಸದಿರುವ ಯಂತ್ರಾಂಶವು ಭೌತಿಕವಾದ ಗುಪ್ತ ಪ್ರಭಾವಕ್ಕೆಒಳಪಡಬಹುದು. ಉದಾಹರಣೆಗೆ, ಪರದೇಶದ ಯಂತ್ರಾಂಶವನ್ನು ಯಂತ್ರದಲ್ಲಿ ಒಳ ಸೇರಿಸ ಬಹುದು, ಅಥವಾ ಬಳಕೆದಾರ ಮತ್ತು ಸ್ವತಃ ಯಂತ್ರದ ರಚನೆಯ ಮಧ್ಯ ಆಕ್ರಮಣ ತಂತ್ರಕೌಶಲ್ಯದಲ್ಲಿ ಒಬ್ಬ ವ್ಯಕ್ತಿಯನ್ನು ಬಳಸಿಕೊಂಡು, ಹಾಗೂ ಈ ರೀತಿ ಡಿ ಆರ್ ಇ ಯಂತ್ರಗಳನ್ನು ಮೊಹರು ಮಾಡುವುದೂ ಸಹ ಸಾಕಷ್ಟು ರಕ್ಷಣೆ ಒದಗಿಸಲಾರದೆಂದು "ನಾವು ಮತದಾನ ಯಂತ್ರಗಳನ್ನು ನಂಬುವುದಿಲ್ಲ" ಎನ್ನುವ ಸಂಸ್ಥೆಯಂತಹ ಕೆಲವು ವಿಮರ್ಶಕರು ಅಪಾದಿಸುತ್ತಾರೆ.[೨೩] ಅಂತಹ ವಿಷಯಗಳು ಪ್ರಸ್ತುತವಿದ್ದರೆ ಪುನರ್ವಿಮರ್ಶೆ ಮತ್ತು ಪರೀಕ್ಷೆಯ ಕಾರ್ಯವಿಧಾನಗಳು ವಂಚನೆಯ ಸಂಕೇತ ಅಥವಾ ಯಂತ್ರಾಂಶದ ಸ್ಥಿತಿಯಿಂದ ಈ ಅಧಿಕಾರವು ವಿರೋಧಿಸಲ್ಪಟ್ಟಿದೆ ಮತ್ತು ಒಂದು ಸಾಧ್ಯಂತವಾದ, ಪ್ರಮಾಣೀಕರಿಸಿದ ಕಾವಲಿನ ಭದ್ರತೆಯುಅಂತಹ ಯಂತ್ರಾಂಶ ಇಲ್ಲವೇ ತಂತ್ರಾಂಶದ ಸೇರಿಸುವಿಕೆಯನ್ನು ತಡೆಗಟ್ಟಬಲ್ಲದು.
ಕಂಪ್ಯೂಟರ್ ತಂತ್ರಾಂಶ
[ಬದಲಾಯಿಸಿ]ಮತದಾನ ಯಂತ್ರದ ಸೊರ್ಸ್ ಕೊಡ್ ಅನ್ನು ಪರಿವೀಕ್ಷಣೆಗೆ ಸಾರ್ವಜನಿಕವಾಗಿ ದೊರೆಯುವಂತಾಗಬೇಕೆಂದು ಬ್ರೂಸ್ ಶ್ಕೇನಿಯರ್‌ನಂತಹ ರಕ್ಷಣಾ ತಜ್ಞರು ಹಕ್ಕಿನಿಂದ ಕೇಳುತ್ತಿದ್ದಾರೆ.[೨೪] ಆಸ್ಟ್ರೇಲಿಯಾದಲ್ಲಿಮಾಡಿದಂತೆ ಮತದಾನ ಯಂತ್ರದ ತಂತ್ರಾಂಶವನ್ನು ಒಂದು ಮುಕ್ತ ತಂತ್ರಾಂಶದ ಅಧೀನದಲ್ಲಿಪ್ರಕಾಶಿಸಲು ಇತರರೂ ಸಹ ಸೂಚಿಸಿದ್ದಾರೆ.[೨೫]
ವಿಮರ್ಶಣೆ ಮತ್ತು ದೃಢೀಕರಿಸುವಿಕೆ
[ಬದಲಾಯಿಸಿ]ಮತದಾನ ಯಂತ್ರದಲ್ಲಿ ಯಾವುದೇ ದೋಷದ ಒಂದು ಕ್ರಮ ಸಮಾನಾಂತರ ಪರೀಕ್ಷೆಮಾಡುವುದು, ಇವುಗಳನ್ನು ಸಂಭಾವ್ಯತೆಯಿಂದ ಆರಿಸಿದ ಯಂತ್ರಗಳಿಂದ ಚುನಾವಣೆಯ ದಿನ ನಡೆಸಲ್ಪಡುತ್ತವೆ. 2000 ದ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳ ಚುನಾವಣೆಯ ಫಲಿತಾಂಶವನ್ನು ಬದಲಾಯಿಸಲು ಪ್ರತಿ ಆವರಣದಲ್ಲಿ ಕೇವಲ 2 ಮತಗಳನ್ನು ಮಾತ್ರ ಬದಲಾಯಿಸುವ ಅವಶ್ಯಕತೆಯಿತ್ತೆಂದು ತೋರಿಸುವ ಒಂದು ಅಧ್ಯಯನವನ್ನು ಎ ಸಿ ಎಂ ಪ್ರಕಾಶಪಡಿಸಿತು.[೨೬]
ಇತರೆ
[ಬದಲಾಯಿಸಿ]ಒಂದು ವೇಳೆ ಅಂತಹ ವಿಷಯಗಳು ಪ್ರಸ್ತುತವಿದ್ದರೆ, ಮೋಸದ ಸಂಕೇತ ಅಥವಾ ಯಂತ್ರಾಂಶವನ್ನು ಪತ್ತೆ ಹಚ್ಚಲು ಪುನರ್ವಿಮರ್ಶೆ ಮತ್ತು ಪರೀಕ್ಷೆಯ ಕಾರ್ಯವಿಧಾನಗಳಿಂದ ಮತ್ತು ಅಂತಹ ಯಂತ್ರಾಂಶ ಇಲ್ಲವೇ ತಂತ್ರಾಂಶ ಒಳಸೇರುವಿಕೆಯನ್ನು ತಡೆಗಟ್ಟಲು ಪ್ರಾಮಾಣೀಕರಿಸಿದ ಕಾವಲಿನ ಸಂಕೋಲೆಯಮುಖಾಂತರ ವಿಮರ್ಶೆಗಳನ್ನು ಕಡಿಮೆಗೊಳಿಸಬಹುದು. ವಿಶೇಷವಾಗಿ ಅಂತರಜಾಲ ಮತದಾನದ ಉಪಯೋಗದ ಮುಖಾಂತರ, ಕಡಿಮೆಗೊಳಿಸಿದ ದತ್ತಾಂಶಗಳ ಸಂಯೋಜನೆಯ ಅವಧಿಗಳು ಮತ್ತು ಹೆಚ್ಚಿದ ಮತದಾರರ ಭಾಗವಹಿಸುವಿಕೆಯಲಾಭಗಳು ಒಳಗೊಂಡಿರುತ್ತವೆ. ಮತಗಳ ಎಣಿಕೆಯನ್ನುವೇಗವಾಗಿ ಪಡೆಯಲು ಕೇವಲ ವಿದ್ಯುನ್ಮಾನ ಮತದಾನ ಒಂದೇ ಸಾಧನವಲ್ಲವೆಂದು ಸೂಚಿಸುತ್ತಾ, ಪ್ರತ್ಯೇಕವಾಗಿ ಕಾಗದದ ಮತಪತ್ರಗಳನ್ನು ಉಪಯೋಗಿಸುವ ಸ್ವಿಡ್ಜರ್ ಲ್ಯಾಂಡ್‌ಅನ್ನು (ಹಾಗೂ ಇನ್ನೂ ಇತರೆ ದೇಶಗಳನ್ನೂ) ಉದಾಹರಿಸಿ ಮತ ಎಣಿಕೆಯ ಪರ್ಯಾಯ ಪದ್ಧತಿಗಳನ್ನು ವಿರೋಧ ಪಕ್ಷದಲ್ಲಿರುವವರು ಸೂಚಿಸುತ್ತಾರೆ. 7 ಮಿಲಿಯನ್ ಗಿಂತಲೂ ಸ್ವಲ್ಪ ಹೆಚ್ಚಿನ ಜನ ಸಂಖ್ಯೆಯಿರುವ ದೇಶ ಸ್ವಿಡ್ಜರ್ ಲ್ಯಾಂಡ್ ಸುಮಾರು ಆರು ಘಂಟೆಗಳಲ್ಲಿ ಒಂದು ನಿರ್ಣಯಾತ್ಮಕ ಮತಪತ್ರದ ಎಣಿಕೆಯನ್ನು ಪ್ರಕಟಿಸುತ್ತದೆ. ಹಳ್ಳಿಗಳಲ್ಲಿ, ಮತಪತ್ರಗಳು ಕೈಯಿಂದಲೇ ಎಣಿಸಲ್ಪಡುತ್ತವೆ. ಬಹುದೂರದ ಮತದಾರನ ವ್ಯಕ್ತಿತ್ವವನ್ನು ಪರೀಕ್ಷಿಸಲು ಕಷ್ಟ ಅಥವಾ ಕಠಿಣವಾಗುತ್ತದೆ ಮತ್ತು ಸಾರ್ವಜನಿಕ ನೆಟ್ವರ್ಕ್ ಗಳ ಪ್ರಾರಂಭವು ಹೆಚ್ಚು ಭೇದ್ಯ ಹಾಗೂ ಜಟಿಲವಾಗುತ್ತಿದೆಯೆಂದು ವಿಮರ್ಶಕರು ಗಮನಿಸುತ್ತಾರೆ ಸಹ. ವಿದ್ಯುನ್ಮಾನ ಮತದಾನ ಒಡೆತನದ ಒಟ್ಟು ವೆಚ್ಚ ಇತರ ವ್ಯವಸ್ಥೆಗಳಿಗಿಂತ ಬಹುಶಃ ಕಡಿಮೆಯಿರಬಹುದೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವಿದ್ಯುನ್ಮಾನ ಮತದಾನದ ಉದಾಹರಣೆಗಳು
[ಬದಲಾಯಿಸಿ]ಆಸ್ಟ್ರೇಲಿಯಾ, ಬೆಲ್ಜಿಯಂ, ಬ್ರೆಜಿಲ್, ಕೆನಡ, ಎಸ್ಟೋನಿಯಾ, ಯುರೋಪಿನ ಸಂಘಟನೆ, ಫ್ರಾನ್ಸ್, ಜರ್ಮನಿ, ಇಂಡಿಯಾ, ಐರ್ಲೆಂಡ್, ಇಟಲಿ, ನೆದರ್ ಲ್ಯಾಂಡ್ಸ್, ನಾರ್ವೆ, ರುಮೇನಿಯಾ, ಸ್ವಿಡ್ಜರ್ ಲ್ಯಾಂಡ್, ಇಂಗ್ಲೆಂಡ್ ಮತ್ತು ವಿನಿಜುಏಲಾ ದೇಶಗಳಲ್ಲಿ ಮತಗಟ್ಟೆಗಳ ಮತದಾನ ಅಥವಾ ಅಂತರಜಾಲ ಮತದಾನ ನಡೆದ ಉದಾಹರಣೆಗಳಿವೆ.
ದಾಖಲೀಕರಿಸಿದ ತೊಂದರೆಗಳು
[ಬದಲಾಯಿಸಿ]- 2000 ದ ರಾಷ್ಟ್ರಪತಿಗಳ ಚುನಾವಣೆಯಿಂದಮೊದಲ್ಗೊಂಡು ಫ್ಲಾರಿಡಾದಲ್ಲಿ ಮತದಾನ ಪದ್ಧತಿಗಳ ಅನೇಕ ಸಮಸ್ಯೆಗಳು.[೨೭]
- ವರ್ಜಿನಿಯಾದ ಫೇರ್ ಫ್ಯಾಕ್ಸ್ ಕೌಂಟಿ, ನವೆಂಬರ್ 4, 2003 . ತಾವು ತಮ್ಮ ಮತವನ್ನು ಒಬ್ಬ ನಿರ್ದಿಷ್ಟ ಅಭ್ಯರ್ಥಿಗೆ ಚಲಾಯಿಸುವುದಾಗಿ ಕೆಲವು ಮತದಾರರು ದೂರು ಕೊಟ್ಟರು ಮತ್ತು ಆ ಓಟಿನ ದರ್ಶಕವು ಸ್ವಲ್ಪ ಹೊತ್ತಿನಲ್ಲಿ ಹೊರಟು ಹೋಗುತ್ತದೆ.[೨೮]
- ಮತದಾರನ ಕಾರ್ಡ್ ಸಾಂಕೇತಿಕ ಸಂದೇಶ ಒದಗಿಸುವಲ್ಲಿ ಕೆಲಸ ಮಾಡದ ಕಾರಣ ಮಾರ್ಚ 2 2004 ರ ಕ್ಯಾಲಿಫೋರ್ನಿಯಾ ರಾಷ್ಟ್ರಪತಿಗಳ ಪ್ರಾಥಮಿಕ ಚುನಾವಣೆಯಲ್ಲಿ ಅಲ್ಮೇಡಾ ಮತ್ತು ಸ್ಯಾನ್ ಡಿಯಾಗೋ ಕೌಂಟಿಗಳಲ್ಲು ಅನೇಕ ಮತದಾರರಿಗೆ ಪ್ರೀಮಿಯರ್ ಎಲೆಕ್ಷನ್ ಸೊಲ್ಯೂಷನ್ (ಮೊದಲ ದೈಬೋಲ್ಡ್ ಎಲೆಕ್ಷನ್ ಸಿಸ್ಟಂಮ್)ಟಿ ಎಸ್ ಎಕ್ಸ ಮತದಾನ ವ್ಯವಸ್ಥೆಯು ಚುನಾವಣಾ ಹಕ್ಕು ಕೊಡಲಿಲ್ಲ.[೨೯] ಏಪ್ರಿಲ್ 30 ರಂದು ಕ್ಯಾಲಿಫೋರ್ನಿಯಾದ ರಾಜ್ಯ ಕಾರ್ಯದರ್ಶಿ ಕೆವಿನ್ ಶೆಲ್ಲಿಯು ಎಲ್ಲಾ ಸ್ಪರ್ಶ ಪರದೆಯ ಯಂತ್ರಗಳನ್ನು ದೃಢೀಕರಿಸಲಿಲ್ಲ ಮತ್ತು ಡೈಬೋಲ್ಡ್ ಎಲೆಕ್ಷನ್ ಸಿಸ್ಟಂಮ್ ಗಳ ಮೇಲೆ ಅಪರಾಧಿ ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಿದರು.[೩೦] ಕ್ಯಾಲಿಫೋರ್ನಿಯಾದ ಪ್ರಧಾನ ವಕೀಲರು ಅಪರಾಧಿ ನ್ಯಾಯ ಕ್ರಮ ಜರುಗಿಸುವುದರ ವಿರುದ್ಧ ತೀರ್ಮಾನಿಸಿದರು, ಆದರೆ ಅನಂತರದಲ್ಲಿ ಚುನಾವಣಾ ಅಧಿಕಾರಿಗಳಿಗೆ ಮಾಡಿದ ಮೋಸದ ಹಕ್ಕುಗಳಿಗಾಗಿ ಡೈಬೋಲ್ಡ್ ವಿರುದ್ಧ ಮೊಕದ್ದಮೆ ಹೂಡಿದರು. ಡೈಬೋಲ್ಡ್ 2.6 ಮಿಲಿಯನ್ ಡಾಲರುಗಳನ್ನು ಪಾವತಿಸಿ ಆ ದಾವೆಯನ್ನು ಕೊನೆಗೊಳಿಸಿತು.[೩೧] 2006, ಫೆಬ್ರವರಿ 17 ರಂದು ಕ್ಯಾಲಿಫೋರ್ನಿಯಾದ ರಾಜ್ಯ ಕಾರ್ಯದರ್ಶಿ ಬ್ರೂಸ್ ಮ್ಯಾಕ್ ಫರ್ಸನ್‌ನಂತರ ಡೈಬೋಲ್ಡ ಎಲೆಕ್ಷನ್ ಸಿಸ್ಡಂಮ್ ನ ಡಿ ಆರ್ ಇಮತ್ತು ಆಪ್ಡಿಕಲ್ ಸ್ಕಾನ್ ಮತದಾನ ವ್ಯವಸ್ಥೆಯನ್ನು ಪುನರ್ಸಮರ್ಥಿಸಿದರು.[೩೨]
- ನಾಪಾ ಕೌಂಟಿ, ಕ್ಯಾಲಿಫೋರ್ನಿಯಾ, ಮಾರ್ಚ್ 2, 2004, ಒಂದು ಅನುಚಿತವಾದ ಮಹತ್ವದ ಅಂಶದ ಮಾರ್ಕಸೆನ್ಸ್‌ಸ್ಕಾನರ್ 6,692 ಅನುಪಸ್ಥಿತಿಯ ಮತಪತ್ರದಮತಗಳನ್ನು ಲಕ್ಷಿಸಲಿಲ್ಲ.[೩೩]
- ಆಂತರಿಕ ದೇಶದ ಡಚ್ ಮಂತ್ರಿಯುಎಸ್ ಡಿ ಯು ಎನ್ ವಿ ತಯಾರಿಸಿದ 1187 ಮತದಾನ ಯಂತ್ರಗಳ ಅನುಮತಿ ಪತ್ರವನ್ನು ಅಕ್ಟೋಬರ್ 30 2006 ರಂದು ಹಿಂದೆಗೆದುಕೊಂಡನು, ಒಟ್ಟು ಸಂಖ್ಯೆಯ ಸುಮಾರು ಶೇಕಡಾ 10 ಅನ್ನು ಉಪಯೋಗಿಸಬೇಕು, ಏಕೆಂದರೆ ವ್ಯಾನ್ ಇಕ್ ಫ್ರಿಯಕಿಂಗ್‌ಉಪಯೋಗಿಸಿ 40 ಮೀಟರುಗಳಿಂದ ವ್ಯಕ್ತಿಯು ಮತದಾನದ ಗುಟ್ಟಿಗೆ ಕಿವಿಗೊಡಬಹುದೆಂದು ಪ್ರಧಾನ ಬೇಹುಗಾರಿಕೆಯ ಸುದ್ದಿ ಮತ್ತು ರಕ್ಷಣಾ ಸೇವೆಯಿಂದಅದರ ಯೋಗ್ಯತೆಯು ಪರೀಕ್ಷಿಸಲ್ಪಟ್ಟಿದೆ.[೩೪] ಈ ತೀರ್ಮಾನದ 24 ದಿನಗಳ ನಂತರ ರಾಷ್ಟ್ರೀಯ ಚುನಾವಣೆಗಳು ನಡೆಸಲ್ಪಡಬೇಕು. ಈ ನಿರ್ಣಯವು ವಿಜ್ ವೆರ್ಟೋವೆನ ಸ್ಟೆಮ್ ಕಂಪ್ಯೂಟರ್ಸ್ ನಿಯಟ್ [೩೫]("ನಾವು ಮತದಾನದ ಯಂತ್ರಗಳನ್ನು ನಂಬುವುದಿಲ್ಲ"[೩೬]) ಎಂಬ ಡಚ್ ಗ್ರಾಸ್ ರೂಟ್ಸ್‌ಸಂಸ್ಥೆಯಿಂದ ಹೇರಲ್ಪಟ್ಟಿತು.[೩೭]
- 2006 ರ ಸಂಯುಕ್ತ ಸಂಸ್ಥಾನದ ಸಾಮಾನ್ಯ ಚುನಾವಣೆಗಳಲ್ಲಿನ ಸಮಸ್ಯೆಗಳು:
- ಅಕ್ಟೋಬರ್ 2006 ರಲ್ಲಿ ಫ್ಲೋರಿಡಾದ ಫೋರ್ಟ ಲೌಡರ್ ಡೇಲ್ ಮತ್ತು ಹಾಲಿವುಡ್ ನ ಮಿಯಾಮಿಯಲ್ಲಿ ಮುಂಚಿತವಾಗಿ ನಡೆದ ಮತದಾನದಕಾಲದಲ್ಲಿ ಮೂರು ಮತಗಳನ್ನು ಡೆಮೊಕ್ರೆಟಿಕ್ ಅಭ್ಯರ್ಥಿಗಳು ಪಡೆಯಬೇಕಾದ್ದನ್ನು, ರಿಪಬ್ಲಿಕನ್ನರಿಗೆ ಚಲಾಯಿಸಿದಂತೆ ಕಂಡುಬಂದಿತು. ಚುನಾವಣಾ ಅಧಿಕಾರಿಗಳು ಅದು ಮತದಾನ ವ್ಯವಸ್ಥೆಯ ಸ್ಪರ್ಶ ಪರದೆಯಲ್ಲಿನ ಮಹತ್ವಪೂರ್ಣವಾದ ದೋಷಗಳೆಂದು ಆರೋಪಿಸಿದರು.[೩೮]
- ಪೆನ್ಸಿಲ್ವೇನಿಯಾದಲ್ಲಿ, ಒಂದು ಗಣಕ ಯಂತ್ರದ ಕಾರ್ಯಕ್ರಮದ ದೋಷವು ಕೆಲವರನ್ನು ಕಾಗದದ ಮತಪತ್ರಗಳನ್ನು ಚಲಾಯಿಸುವಂತೆ ಮಾಡಿತು. ಇಂಡಿಯಾನಾದಲ್ಲಿ, ಅಕ್ಕ ಪಕ್ಕದ 175 ಜನಗಳು ಸಹ ಕಾಗದವನ್ನು ಅವಲಂಬಿಸಿದರು. ಆ ರಾಜ್ಯಗಳ ಕೌಂಟಿ ಪ್ರದೇಶದವರೂ ಸಹ ತಡವಾದುದ್ದಕ್ಕೆ ನಷ್ಟ ತುಂಬಲು ಮತದಾನದ ಅವಧಿಯನ್ನು ವಿಸ್ತರಿಸಿದರು.[೩೯]
- ಕುಯಹೊಗ ಕೌಂಟಿ, ಓಹಿಯೊ: ಡೈಬೋಲ್ಡ ಗಣಕ ಯಂತ್ರದ ಸರ್ವರ್ ಕೆಲಸ ಮಾಡದೆ ಮತಗಳ ಎಣಿಕೆಯನ್ನು ನಿಲ್ಲಿಸಿತು, ಆಗ ಮುದ್ರಣ ಯಂತ್ರಗಳು ನಿಂತುಬಿಟ್ಟವು, ಆದ್ದರಿಂದ ಮತಪತ್ರದ ನಕಲುಗಳನ್ನು ಅನೇಕ ಮತಗಳಿಗೆ ಪಡೆದುಕೊಳ್ಳಲಾಗಲಿಲ್ಲ, ಮತಗಳು ಎಣಿಸಲ್ಪಟ್ಟಾಗ ಮತಗಳ ಸ್ಪಷ್ಟತೆಯ ಬಗ್ಗೆ ಖಚಿತವಾಗಿ ಹೇಳಲಾಗುತ್ತಿರಲಿಲ್ಲ.[೪೦]
- ವಾಲ್ಡೆನಬರ್ಗ, ಅರ್ಕನ್ಸಾಸ್: ಸ್ಪರ್ಶ ಪರದೆಯ ಗಣಕ ಯಂತ್ರವು ಒಬ್ಬ ಮೇಯರ್ ಅಭ್ಯರ್ಥಿಗೆ ಶೂನ್ಯ ಮತಗಳನ್ನು ತಾಳೆ ಮಾಡಿತು, ಅವರು ಖಂಡಿತವಾಗಿಯೂ ಸ್ವತಃ ತನಗೆ ಮತ ಚಲಾಯಿಸಿದೆನೆಂದು ದೃಢಪಡಿಸಿದರು, ಆದ್ದರಿಂದ ಕನಿಷ್ಠ ಒಂದು ಮತವಾದರೂ ಇರಬಲ್ಲದು, ಸ್ಪರ್ಶ ಪರದೆ ಯಂತ್ರಗಳ ಮೇಲೆ ಮತಗಳು ಮಾಯವಾಗುವಂತಹ ಪರಿಸ್ಥಿತಿಯಿದು.[೩೯]
- ಸರಸೊಟ, ಫ್ಲಾರಿಡಾ: ಕಾಂಗ್ರೆಸ್ ನ ಚುನಾವಣೆಯಲ್ಲಿ 18,000 ಜನಗಳ "ಕಡಿಮೆ ಮತಗಳಿದ್ದವು".[೩೯] ಕಡಿಮೆ ಮತವು ತಂತ್ರಾಂಶದ ದೋಷದ ಕಾರಣದಿಂದಲ್ಲವೆಂದು ನಂತರದ ತನಿಖೆಯು ಪತ್ತೆ ಹಚ್ಚಿತು. ಗಮನಾರ್ಹವಲ್ಲದ ಮತಪತ್ರ ರಚನೆಯು ಕಡಿಮೆ ಮತದ ಕಾರಣವೆಂದು ಸಂಪೂರ್ಣವಾಗಿ ಒಪ್ಪಿಕೊಂಡಿತು.
- ನ್ಯೂಯಾರ್ಕ್ ವಿಶ್ವವಿದ್ಯಾಲಯದ ಕಾನೂನು ಶಾಲೆಯ ಬ್ರೆನಾನ್ ಕೇಂದ್ರದಲ್ಲಿ 2001 ರ ಆಗಸ್ಟ 1 ರಂದು ಈ ಯಂತ್ರಗಳನ್ನು ಸುತ್ತುವರಿದಿರುವ ರಕ್ಷಣಾ ವಿಷಯಗಳು ಮತ್ತು ದೋಷಯುಕ್ತ ತಂತ್ರಜ್ಞಾನದ ಉದಾಹರಣೆಗಳು ದಾಖಲಿಸಲ್ಪಟ್ಟವು. 2004 ಹಾಗೂ 2006 ರಲ್ಲಿ 26 ರಾಜ್ಯಗಳಲ್ಲಿ ಇ-ಮತದಾನ ಯಂತ್ರಗಳ ಹಾಳಾಗುವಿಕೆಯ 60 ಕ್ಕಿಂತಲೂ ಹೆಚ್ಚು ಉದಾಹರಣೆಗಳ ಸಹಿತ ನ್ಯೂಯಾರ್ಕ ವಿಶ್ವವಿದ್ಯಾಲಯದ ಕಾನೂನು ಶಾಲೆಯು ಒಂದು ವರದಿಯನ್ನು ಬಿಡುಗಡೆ ಮಾಡಿತು. 2004 ರಲ್ಲಿ ಸಾಕ್ರಮೆಂಟೊದಲ್ಲಿ ಮತಗಳು ಚಲಾಯಿಸಲ್ಪಟ್ಟಿದ್ದವು ಆದರೆ ಎಣಿಕೆಯಾಗಿರಲಿಲ್ಲದ ಸ್ಪಾನಿಷ್ ಭಾಷೆಯ ಮತಪತ್ರಗಳ ಉದಾಹರಣೆಗಳು ಸೇರಿದ್ದವು.[ಸೂಕ್ತ ಉಲ್ಲೇಖನ ಬೇಕು]
- ಫಿನ್ಲೆಂಡಿನಲ್ಲಿ, ಪ್ರಧಾನ ಆಡಳಿತಾತ್ಮಕ ನ್ಯಾಯಾಲಯವುಮೂರುಪುರಸಭೆಗಳಲ್ಲಿಒಂದು ಮಾರ್ಗದರ್ಶಕ ವಿದ್ಯುನ್ಮಾನ ಮತದ ಫಲಿತಾಂಶಗಳನ್ನು ಸಿಂಧುವಲ್ಲವೆಂದು ಪ್ರಕಟಿಸಿತು, ಮತ್ತು ಪುರಸಭೆಯ ಚುನಾವಣೆಗಳನ್ನು ಪುನಃ ನಡೆಸುವಂತೆ ಆಜ್ಞಾಪಿಸಿತು. ಮತವು ಚಲಾಯಿಸಲ್ಪಟ್ಟ ಬಗ್ಗೆ ಸಂದೇಶಗಳು ಅಸ್ಪಷ್ಟವಾಗಿದ್ದ ಕಡೆ ವ್ಯವಸ್ಥೆಯು ಉಪಯೋಗಿಸುವ ಸಮಸ್ಯೆಯನ್ನು ಹೊಂದಿತ್ತು. ಒಟ್ಟು 232 ಸಂಗತಿಗಳಲ್ಲಿ (ಮತಗಳ ಶೇಕಡಾ 2 ರಷ್ಟು) ಮತದಾರರು ಮತ ಚಲಾಯಿಸಿದ್ದರು, ತಮ್ಮ ಮತವನ್ನು ಆರಿಸಿಕೊಂಡಿದ್ದರು ಆದರೆ ಅದನ್ನು ದೃಢಪಡಿಸಿರಲಿಲ್ಲ ಹಾಗೆಯೇ ಮತಗಟ್ಟೆ ಬಿಟ್ಟು ಹೊರಟರು, ಆ ಮತಗಳು ದಾಖಲಾಗಲಿಲ್ಲ.[೪೧]
- ಸಂಯುಕ್ತ ಸಂಸ್ಥಾನದ 2008 ರ ಚುನಾವಣೆಗಳು:
ಕ್ಯಾಲಿಫೋರ್ನಿಯಾದ ಸಂಪೂರ್ಣ ಪುನರಾವಲೋಕನ
[ಬದಲಾಯಿಸಿ]ಮೇ 2007 ರಲ್ಲಿ, ಕ್ಯಾಲಿಫೋರ್ನಿಯಾ ರಾಜ್ಯದ ಕಾರ್ಯದರ್ಶಿ ಡೇಬ್ರ ಬೊವೆನ್‌ರಾಜ್ಯದ ಎಲ್ಲಾ ವಿದ್ಯುನ್ಮಾನ ಮತದಾನ ವ್ಯವಸ್ಥೆಗಳ "ಸಂಪೂರ್ಣ ತಪಾಸಣೆ" ಅಧಿಕಾರ ಪಡೆದರು. ಮತದಾನ ಪದ್ಧತಿಯ ಆಕರದ ಸೊರ್ಸ್ ಕೊಡಿನ ರಕ್ಷಣಾ ಮೌಲ್ಯಮಾಪನಗಳನ್ನು ನಡೆಸಲು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದವರಗಣಕಯಂತ್ರ ರಕ್ಷಣೆಯ ತಜ್ಞರ ನೇತೃತ್ವದಲ್ಲಿ ಆಕೆಯು ನೇಮಿಸಿದಳು. ಅದೂ ಅಲ್ಲದೆ, ಗುಪ್ತ ಪ್ರಭಾವ ಅಥವಾ ದೋಷಗಳ ಭೇದ್ಯತೆಗಳನ್ನು ಗುರುತಿಸಲು ಪ್ರಯತ್ನಿಸುವ ಚುನಾವಣಾ ದಿನದ ದೃಶ್ಯ ವಿವರಗಳ "ಅತ್ಯಂತ ಕೆಟ್ಟ ಸಂಗತಿ"ಯನ್ನು ನಡೆಸುತ್ತಿರುವ "ರೆಡ್ ತಂಡಗಳನ್ನು" ಸಹ ಗೊತ್ತುಪಡಿಸಿದಳು. ನೆರವಾಗುವ ವೈಶಿಷ್ಟ್ಯಗಳ ವಿಮರ್ಶೆ ಮತ್ತು ಪರ್ಯಾಯ ಭಾಷಾ ಅಗತ್ಯಗಳೂ ಅಲ್ಲದೆ ತಯಾರಕರ ಕಾಗದಪತ್ರಗಳ ಉಪಯೋಗದ ಒಂದು ವ್ಯಾಪಕವಾದ ಪರಿಶೀಲನೆಗಳನ್ನು ಸಹ ಸಂಪೂರ್ಣ ಪುನರಾವಲೋಕನವು ಒಳಗೊಂಡಿದೆ. ಪರೀಕ್ಷೆಗಳ ಮುಕ್ತಾಯದ ಫಲಿತಾಂಶಗಳು ನಾಲ್ಕು ವಿವರವಾದ ರಾಜ್ಯ ಕಾರ್ಯದರ್ಶಿ ನಿರ್ಣಯಗಳಲ್ಲಿ ಬಿಡುಗಡೆ ಮಾಡಲ್ಪಟ್ಟವು (ಡೈಬೊಲ್ಡ್ ಎಲೆಕ್ಷನ್ ಸಿಸ್ಟಂಮ್ಸ್, ಹಾರ್ಟ ಇಂಟರ್ಸಿವಿಕ್, ಸಿಕ್ವೊಯ ವೊಟಿಂಗ್ ಸಿಸ್ಟಂಮ್ಸ್ ಮತ್ತು ಎಲೆಕ್ಷನ್ಸ್ ಸಿಸ್ಟಂಮ್ಸ್ ಮತ್ತು ಸಾಫ್ಟ್ ವೇರ್, ಇಂಕ್)ಮತ್ತು ಡೈಬೊಲ್ಡ್ ಹಾಗೂ ಸಿಕ್ವೊಯ ಮತದಾನ ರೀತಿಗಳಿಗೆ ಅಕ್ಟೋಬರ್ 25, 2007 ರ ಪರಿಶೀಸಿದ ತೀರ್ಮಾನಗಳು ಅಪ್ಡೇಟ್ ಮಾಡಲ್ಪಟ್ಟವು.[೪೪] ಸಂಪೂರ್ಣ ಮತದಾನವನ್ನು ರಾಜಿ ಮಾಡಿಕೊಳ್ಳಲು ಏಕೈಕ-ತಜ್ಞನಲ್ಲದವನಿಗೆ ದಾರಿಮಾಡಿ ಕೊಡುವಂತಹ ನ್ಯೂನ್ಯತೆಗಳು, ಎಲ್ಲ ತಯಾರಕರ ಮತದಾನ ವ್ಯವಸ್ಥೆಗಳಲ್ಲಿ ರಕ್ಷಣಾ ಪರಿಣಿತರು ಗಮನಾರ್ಹವಾದ ರಕ್ಷಣಾ ದೋಷಗಳನ್ನು ಕಂಡರು. ಆಗಸ್ಟ್ 3, 2007 ರ ಪುನರ್ವಿಮರ್ಶೆಯಲ್ಲಿ ಸೇರಿಸದಂತಹ ಇಎಸ್&ಎಸ್ ನ ಇಂಕಾವೊಟ್ ಯಂತ್ರವೂ ಒಳಗೊಂಡಂತೆ ಆಕೆಯು ಸಂಪೂರ್ಣ ವಿಮರ್ಶೆಯಲ್ಲಿ ಪರೀಕ್ಷೆ ಮಾಡಲ್ಪಟ್ಟಂತಹ ಯಂತ್ರಗಳನ್ನು ಬೊವೆನ್ ದೃಢೀಕರಿಸಲಿಲ್ಲ, ಏಕೆಂದರೆ ಕಂಪನಿಯು ಅದನ್ನು ಪರೀಕ್ಷೆಯ ಅವಧಿ ಮುಗಿದ ನಂತರ ಮಂಡಿಸಿತು. ತಂತ್ರಜ್ಞಾನದ ಭೇದ್ಯತೆಯ ಹಂತಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುವ "ರೆಡ್ ಟೀಮ್" ತಜ್ಞರಿಂದ ನಿರ್ವಹಿಸಲ್ಪಟ್ಟ ವರದಿಯು ಜುಲೈ 27, 2007 ರಲ್ಲಿ ಪ್ರಕಟಿಸಿತು. ಆಗಸ್ಟ್ 2, 2007 ರಲ್ಲಿ ಮತ್ತೊಂದು ವರದಿಯು ಮತದಾನ ವ್ಯವಸ್ಥೆಯ ಸೋರ್ಸ್ ಕೋಡ್ ದೋಷಗಳನ್ನು ಪತ್ತೆ ಹಚ್ಚಲು ಒಂದು ಸೋರ್ಸ್ ಕೋಡ್ ಪರಿಶೀಲನೆಯ ತಂಡದಿಂದ ನಿಯಂತ್ರಿಸಲ್ಪಟ್ಟಿತು. 2005 ರ ಎರಡೂ ವರದಿಗಳು ಐಚ್ಛಿಕ ಮತದಾನ ಪದ್ಧತಿಯ ಮಾರ್ಗದರ್ಶಿ (ವಿ ವಿ ಎಸ್ ಜಿ)ಸೂತ್ರಗಳಲ್ಲಿ ನಮೂದಿಸಿ ಪರೀಕ್ಷಿಸಿದ ವ್ಯವಸ್ಥೆಗಳಲ್ಲಿ ಮೂರು ಅತೀ ಕನಿಷ್ಟ ಅವಶ್ಯಕತೆಗಳನ್ನೂ ಹೊಂದಿರಲಿಲ್ಲ. ಕೆಲವು ಪ್ರಮಾಣಿಸಿದ ಪದ್ಧತಿಗಳು ಹೊಸ ಕಠಿಣವಾದ ಭದ್ರತಾ ಅಗತ್ಯೆತೆಗಳನ್ನು ಹೇರಿ ಕೆಲವು ಶರತ್ತುಗಳ ಸಹಿತ ಪುನರ್ವಿಮರ್ಶಿಸಲ್ಪಟ್ಟವು.[೪೫] ಪ್ರಶ್ನಿಸಲ್ಪಟ್ಟ ಕಂಪನಿಗಳು ಫೆಬ್ರುವರಿ 2008 ರವರೆಗೂ ಕ್ಯಾಲಿಫೋರ್ನಿಯಾ ರಾಷ್ಟ್ರಾಧ್ಯಕ್ಷರ ಪ್ರಾಥಮಿಕ ಚುನಾವಣೆಗೆ ತಮ್ಮ ಭದ್ರತೆಯ ವಿವಾದಾಂಶಗಳನ್ನು ಗೊತ್ತು ಪಡಿಸಲಾಗಿದೆ ಮತ್ತು ಚುನಾವಣಾ ಫಲಿತಾಂಶಗಳ ಅಂಕಿ ಅಂಶಗಳನ್ನು ಗುಟ್ಟಾಗಿ ಮಾಡಲಾಗುವುದೆಂದು ಭದ್ರ ಪಡಿಸಬೇಕು. ಪ್ರೀಮಿಯರ್ ಎಲೆಕ್ಷನ್ ಸಲ್ಯೂಷನ್ಸ (ಮುಂಚಿನ ಡೈಬೊಲ್ಡ ಎಲೆಕ್ಷನ ಸಿಸ್ಟಂಮ್ಸ್), ಅಕ್ಯುವೊಟ್-ಟಿ ಎಸ್ ಎಕ್ಸ್ ವೊಟಿಂಗ್ ಸಿಸ್ಟಂಮ್ಸ್ ಅನ್ನು, ಪ್ರಿನ್ಸಟನ್ ವಿಶ್ವವಿದ್ಯಾಲಯದಗಣಕಯಂತ್ರ ವಿಜ್ಞಾನಿಗಳಿಂದ 2006 ರಲ್ಲಿ ಅಧ್ಯಯನ ಮಾಡಲ್ಪಟ್ಟಿತು. ಅಕ್ಯುವೊಟ್-ಟಿ ಎಸ್ ಎಕ್ಸ ಅಭದ್ರತೆಯುಳ್ಳದ್ದು ಮತ್ತು"ಮತ ಕದಿಯುವ ತಂತ್ರಾಂಶವನ್ನು ಒಂದು ಕ್ಷಣದಲ್ಲಿ ರವಾನಿಸಬಹುದೆಂದು" ಅವರ ಫಲಿತಾಂಶಗಳು ತೋರಿಸಿದವು. "ಯಂತ್ರಗಳು ಗಣಕಯಂತ್ರದ ವೈರಾಣುಗಳನ್ನು ಒಂದರಿಂದ ಮತ್ತೊಂದಕ್ಕೆ" ಹಿಂದಿನ ಮತ್ತು ತರುವಾಯದ ಚುನಾವಣೆಯ ಚಟುವಟಿಕೆಯ ಅವಧಿಯಲ್ಲಿ ರವಾನಿಸಬಹುದು.[೪೬]
ಫ್ಲೋರಿಡಾ, ಪಂಚ್ ಕಾರ್ಡ್ ಗಳು ಮತ್ತು 2000 ದ ರಾಷ್ಟ್ರಾಧ್ಯಕ್ಷರ ಚುನಾವಣೆ
[ಬದಲಾಯಿಸಿ]ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳ ಚುನಾವಣೆಯಫಲಿತಾಂಶವು ಪ್ರಭಾವ ಬೀರಿರಬಹುದೆಂದು ಆಪಾದಿಸಲ್ಪಟ್ಟು ಫ್ಲಾರಿಡಾದಲ್ಲಿ ಅವರ ವೊಟೊಮ್ಯಾಟಿಕ್‌ಶೈಲಿಯ ವ್ಯವಸ್ಥೆಗಳಲ್ಲಿ ಅದರ ಅಸಮ ಉಪಯೋಗವಾದಾಗ 2000 ದಲ್ಲಿ ಪಂಚ್ ಕಾರ್ಡ್ ಗಳು ಸಾಕಷ್ಟು ಕುಪ್ರಸಿದ್ಧತೆಯನ್ನು ಪಡೆದವು. ಜೊಸೆಫ್ ಪಿ. ಹ್ಯಾರಿಸ್ ನಿಂದ ಕಂಡುಹಿಡಿಯಲ್ಪಟ್ಟ ವೊಟೊಮ್ಯಾಟಿಕ್, ಐ ಬಿ ಎಮ್ ನಿಂದ ಸ್ವಲ್ಪಕಾಲದವರೆಗೆ ಅಪ್ಪಣೆ ಚೀಟಿ ಪಡೆದು ತಯಾರಿಸಲ್ಪಟ್ಟಿತು. ಆ ಸನ್ನದುಗಳ ಅವಧಿ 1982 ರಲ್ಲಿ ಮುಗಿದು ಹೋದನಂತರ, ಕಡಿಮೆ ಗುಣಮಟ್ಟದ ಯಂತ್ರಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡವು ಎಂದು ಪ್ರೊಟೊಟೈಪನ್ನು ರಚಿಸಿ ಸಾಮ್ಯದ ಸನ್ನದನ್ನು ಪಡೆದ ವಿಲಿಯಂ ರೊವೆರೊಲ್ ನು ತಿಳಿಸಿದನು. ಫ್ಲೊರಿಡಾದಲ್ಲಿ ಉಪಯೋಗಿಸಲ್ಪಟ್ಟ ಯಂತ್ರಗಳು ನಿಜವಾದ ವೊಟೊಮ್ಯಾಟಿಕ್ ಗಿಂತ ಐದು ಪಟ್ಟು ಹೆಚ್ಚು ನ್ಯೂನ್ಯತೆಗಳನ್ನು ಹೊಂದಿದ್ದವು ಎಂದು ತಿಳಿಸಿದನು.[೪೭] ವಿಶೇಷವಾಗಿ ವೊಟೊಮ್ಯಾಟಿಕ್ ಪದ್ಧತಿಯ, ಪಂಚ್ ಕಾರ್ಡ್ ಮೂಲದ ಮತದಾನ ವ್ಯವಸ್ಥೆಗಳು ಮೊದಲೇ ಎಣಿಸಿದ ಸಾಧ್ಯವಾದ ಪ್ರತಿ ಭದ್ರದ ವಿಶಿಷ್ಟ ಕಾರ್ಡ್ ಗಳನ್ನು ಉಪಯೋಗಿಸುತ್ತವೆ, ಮತದಾನ ಯಂತ್ರದಲ್ಲಿಮಾರ್ಗದರ್ಶಿ ಮುಖಾಂತರ ಒಂದು ಮೊನಚಾದ ತುದಿಯುಳ್ಳ ಮುಳ್ಳನ್ನು ಮತದಾರನಿಂದ ಒತ್ತಿ ರಂದ್ರಗಳನ್ನು ಮಾಡಲು ಅನುವು ಮಾಡಿಕೊಡುತ್ತವೆ. ಈ ವ್ಯವಸ್ಥೆಯಲ್ಲಿ ಅಪೂರ್ಣ ಪಂಚ್ ದೇ ಒಂದು ಸಮಸ್ಯೆ; ಇದು ನಿರೀಕ್ಷಸಿದ್ದಕ್ಕಿಂತ ಸ್ವಲ್ಪ ಚಿಕ್ಕದಾದ ರಂಧ್ರಕ್ಕೆ, ಅಥವಾ ಕಾರ್ಡ್ ನಲ್ಲಿ ಕೇವಲ ಒಂದು ಸೀಳು, ಇಲ್ಲವೇ ಕಾರ್ಡ್ ನಲ್ಲಿ ಒಂದು ಅತೀ ಸಣ್ಣ ತಗ್ಗು, ಅಥವಾ ಹ್ಯಾಂಗಿಂಗ್ ಚಾಡ್ ಗೆ ದಾರಿ ಮಾಡಿ ಕೊಡಬಹುದು. 2000 ದ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳ ಚುನಾವಣೆಯಲ್ಲಿಈ ತಾಂತ್ರಿಕ ದೋಷವು ಫ್ಲೊರಿಡಾರಾಜ್ಯದಲ್ಲಿ ಡೆಮಾಕ್ರೆಟಿಕ್ ಪಕ್ಷದಿಂದ ಪ್ರಭಾವ ಬೀರಿರಬಹುದೆಂದು ಹಕ್ಕು ಸಾಧಿಸಿತು, ಪಂಚ್ ಕಾರ್ಡ್ ಮತದಾನ ಯಂತ್ರಗಳು ಡೆಮಾಕ್ರೆಟಿಕ್ ಪ್ರದೇಶಗಳಲ್ಲಿ ಪ್ರಾಥಮಿಕವಾಗಿ ಉಪಯೋಗಿಸಲ್ಪಟ್ಟವು, ಮತ್ತು ನೂರಾರು ಮತಪತ್ರಗಳು ಸಂಪೂರ್ಣವಾಗಿ ಓದಲ್ಪಟ್ಟಿರಲಿಲ್ಲ ಅಥವಾ ಅಪೂರ್ಣ ಪಂಚ್ ಗಳ ಕಾರಣ ಅನರ್ಹಗೊಳಿಸಲ್ಪಟ್ಟವು. ಇವು ಅಲ್ ಗೊರೆಗಿಂತ ಜಾರ್ಜ್ ಡಬ್ಲು. ಬುಷ್‌ಪರವಾಗಿ ಮತವನ್ನು ರಹಸ್ಯವಾಗಿ ಸೇರಿಸಿತೆಂದು ವಿಮರ್ಶಕರು ವಾದಿಸಿದರು. ಈ ಆಪಾದನೆಯು ತಪ್ಪಿರಬಹುದೆಂದು ಸ್ವತಂತ್ರ ಸಂಸ್ಥೆಗಳಿಂದ ನಂತರದ ತನಿಖೆಗಳು ದೃಢಪಡಿಸಿದವು.[ಸೂಕ್ತ ಉಲ್ಲೇಖನ ಬೇಕು] ಇತರೆ ಪಂಚ್ ಕಾರ್ಡ್ ಮತದಾನ ವ್ಯವಸ್ಥೆಗಳು ಲೋಹ ರಂಧ್ರ ಪಂಚ್ ತಂತ್ರವನ್ನು ಉಪಯೋಗಿಸುತ್ತವೆ. ಇವು ಈ ದೋಷದಿಂದ ಅಷ್ಟಾಗಿ ನಷ್ಟಹೊಂದುವುದಿಲ್ಲ, ಆದಾಗ್ಯೂ ಅತಿ ಹೆಚ್ಚು ರಾಜ್ಯಗಳು 2000 ದ ಫ್ಲಾರಿಡಾ ಅನುಭವದ ನಂತರ ಎಲ್ಲಾ ರೀತಿಯ ಪಂಚ್ ಕಾರ್ಡ್ ಮತದಾನ ಪದ್ಧತಿಗಳನ್ನು ತೆಗೆದುಹಾಕಿವೆ. ದಕ್ಷಿಣ ಕೊರಿಯಾಇನ್ನೂ ಪ್ರಬಲವಾಗಿ ಪಂಚ್ ಕಾರ್ಡ್ ಮತಪತ್ರಗಳನ್ನು ಉಪಯೋಗಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಅಭಿವೃದ್ಧಿಗೆ ಶಿಫಾರಸುಗಳು
[ಬದಲಾಯಿಸಿ]ಮತದಾನ ವ್ಯವಸ್ಥೆಗಳಿಗೆ ಗಮನಾರ್ಹವಾಗಿ ರಕ್ಷಣಾ ಅವಶ್ಯೆಕತೆಗಳನ್ನು ಹೆಚ್ಚಿಸುವಂತಹ 2005 ರ ಐಚ್ಛಿಕ ಮತದಾನ ಪದ್ಧತಿಯ ಮಾರ್ಗದರ್ಶಿಸೂತ್ರಗಳನ್ನು ಮತ್ತು ವಿಕಲಾಂಗತೆಗಳುಳ್ಳ ವ್ಯಕ್ತಿಗಳಿಗೆ ಮುಕ್ತವಾಗಿ ಹಾಗೂ ಖಾಸಗಿಯಾಗಿ ಮತಚಲಾಯಿಸುವ ಸದವಕಾಶಗಳನ್ನು ಒಳಗೊಂಡ ನೆರವನ್ನು ವಿಸ್ತರಿಸಬೇಕೆಂದು ಡಿಸೆಂಬರ್ 2005 ರಲ್ಲಿ ಸಂಯುಕ್ತ ಸಂಸ್ಥಾನದ ಚುನಾವಣಾ ಕಮೀಶನ್‌ಸರ್ವಾನುಮತದಿಂದ ಅಂಗೀಕರಿಸಿತು. ಸಂಘಟನಾ ಚುನಾವಣೆಯ ಕಮೀಶನ್ ನಿಂದ ಅಭಿವೃದ್ಧಿ ಪಡಿಸಲ್ಪಟ್ಟ 2002 ರ ಮತದಾನ ಪದ್ಧತಿಯ ನಿರ್ದಿಷ್ಟ ಮಾನಗಳನ್ನು (ವಿ ಎಸ್ ಎಸ್) ಬದಲಾಯಿಸಿ ಡಿಸೆಂಬರ್ 2007 ರಲ್ಲಿ ಮಾರ್ಗದರ್ಶಿ ಸೂತ್ರಗಳು ಜಾರಿಗೆ ಬರಲಿವೆ. ಮತದಾರನ ನಂಬಿಕೆಯನ್ನು ಮರಳಿಸಲು ಮತ್ತು ಸಂಭವನೀಯ ವಂಚನೆಯನ್ನು ಕಡಿಮೆಗೊಳಿಸಲು, ಎಲ್ಲಾ ವಿದ್ಯುನ್ಮಾನ ಮತದಾನ ವ್ಯವಸ್ಥೆಗಳು ಸಂಪೂರ್ಣವಾಗಿ ಸಾರ್ವಜನಿಕ ಪರಿಶೀಲನೆಗೆ ದೊರೆಯುವಂತಾಗಬೇಕೆಂದು ಮಕ್ತ ಮತದಾನ ಸಂಘದಂತಹಕೆಲವು ತಂಡಗಳು ನಂಬುತ್ತವೆ. ಐ ಎಸ್ ಒ ಇಂದ (ದಾಖಲೆಗಳು ಮತ್ತು ಯೋಜನೆಗಳನ್ನು ನೋಡಿ) ಈಗ ಪರಿಶೀಲಿಸಲ್ಪಡುತ್ತಿರುವ ಮತ್ತು ಚುನಾವಣಾ ಮಾರ್ಕ್ ಅಪ್ ಭಾಷೆ (ಇ ಎಮ್ ಎಲ್) ನಿರ್ದಿಷ್ಟ ಮಾನವು ಒಯಸಿಸ್ ನಿಂದ ಅಭಿವೃದ್ಧಿ ಪಡಿಸಿರುವಂತಹ ವಿಶೇಷತೆಗಳು ಮತ್ತು ಮಕ್ತವಾಗಿ ಸಾರ್ವಜನಿಕ ಅಳತೆಗಳ ಉಪಯೋಗಕ್ಕೆ ಸೂಚಿಸಿರುವ ಬೇಡಿಕೆಯಾಗಿದೆ. ಗಣಕಯಂತ್ರ ವ್ಯವಸ್ಥೆಯನ್ನು ಉಪಯೋಗಿಸಿ ಚುನಾವಣೆಗಳನ್ನು ನಡೆಸಿ ನಿರ್ವಹಿಸಲು ಇವು ಸ್ಥಿರವಾದ ಕಾರ್ಯವಿಧಾನಗಳು ಹಾಗೂ ತಂತ್ರಗಳನ್ನು ಒದಗಿಸಬಲ್ಲವು.
ಶಾಸನ ರಚನೆ
[ಬದಲಾಯಿಸಿ]2004 ರ ಬೇಸಿಗೆಯಲ್ಲಿ ಮಾಹಿತಿ ತಂತ್ರಜ್ಞಾನ ಅಧಿಕಾರಿಗಳ ಸಂಘದಶಾಸನಾಧಿಕಾರದ ವಿಷಯಗಳ ಕಮಿಟಿಯು ವಿದ್ಯುನ್ಮಾನ ಮತದಾನದ ರಾಷ್ಟ್ರೀಯ ನಿರ್ದಿಷ್ಟ ಮಾನಕ್ಕೆ ಒಂಭತ್ತು ಅಂಶಗಳ ಒಂದು ಪ್ರಸ್ತಾಪವನ್ನು ಜಾರಿಗೊಳಿಸಿತು.[೪೮] ದೇಶದ ಸುತ್ತ ಮತ್ತಲಲ್ಲಿ ಉದ್ಭವಿಸಿರುವ ಕೆಲವು ಸಮಸ್ಯೆಗಳನ್ನು ಕಮಿಟಿಯ ಚೇರ್ಮನ್ನರಾದ, ಚಾರ್ಲ್ಸ್ ಒರಿಯೆಜ್ ಲಗತ್ತಿಸಿರುವ ಲೇಖನದಲ್ಲಿ ವಿವರಿಸಿದರು.[೪೯] ನೆಲ್ಸನ್-ವೈಟ್ ಹೌಸ್ ಬಿಲ್ಲನ್ನು ಒಳಗೊಂಡ ವಿದ್ಯುನ್ಮಾನ ಮತದಾನಕ್ಕೆ ಸಂಬಂಧಿಸಿದ ಸಂಯುಕ್ತ ಸಂಸ್ಥಾನದ ಕಾಂಗ್ರಸ್ ನಲ್ಲಿ ಶಾಸನದ ರಚನೆಯು ಪ್ರಾರಂಭಿಸಲ್ಪಟ್ಟಿದೆ. ಸ್ಪರ್ಶ ಪರದೆ ವ್ಯವಸ್ಥೆಗಳನ್ನು ಆಪ್ಟಿಕಲ್ ಸ್ಕಾನ್ ಮತದಾನ ಪದ್ಧತಿಗೆ ಬದಲಾಯಿಸಲು ಈ ಬಿಲ್ ಒಂದು ಬಿಲಿಯನ್ ಡಾಲರ್ ನಷ್ಟು ಬಂಡವಾಳವನ್ನು ರಾಜ್ಯಗಳಿಗೆ ಒದಗಿಸಿ ವಿನಿಯೋಗಿಸುತ್ತದೆ. ಎಲ್ಲಾ ಸಂಘಟನೆಯ ಚುನಾವಣೆಗಳಲ್ಲಿ ಅಕ್ಕಪಕ್ಕದ ಶೇಕಡಾ 3 ರಷ್ಟು ಬೇಕಾದ ಲೆಕ್ಕ ಪರಿಶೋಧನೆಗಳನ್ನು ಸಹ ಶಾಸನ ರಚನೆಯು ಸಂಬೋಧಿಸುತ್ತದೆ. 2012 ನೇ ವರ್ಷದೊಳಗೆ ಯಾವುದಾದರೂ ರೀತಿಯ ಮತದಾನ ತಂತ್ರಜ್ಞಾನದಿಂದ ಎಲ್ಲಾ ವಿದ್ಯುನ್ಮಾನ ಮತದಾನ ಯಂತ್ರಗಳಿಗೆ ಕೆಲವು ರೀತಿಯ ಕಾಗದದ ಟ್ರಯಲ್ ಲೆಕ್ಕ ಪರಿಶೋಧನೆಯನ್ನು ಅದು ಆಜ್ಞಾಪಿಸುತ್ತದೆ.[೫೦] ನ್ಯೂಜರ್ಸಿಯ ಡೆಮೊಕ್ರೆಟ್ ರಶ್ ಡಿ. ಹೊಲ್ಟ ಜ್ಯುನಿಯರ್‌ಪ್ರತಿನಿಧಿಯಿಂದ ಸೂಚಿಸಲ್ಪಟ್ಟ ಮತ್ತೊಂದು ಬಿಲ್, ಹೆಚ್ ಆರ್. 811 (2003 ರ ಮತದಾರರ ಭರವಸೆ ಮತ್ತು ಹೆಚ್ಚಿನ ನೆರವಿನ ಕಾನೂನು), 2002 ರ ಹೆಲ್ಪ್ ಅಮೇರಿಕಾ ಮತದಾನ ಕಾಯ್ದೆಗೆ ತಿದ್ದುಪಡಿಯಂತೆ ಕೆಲಸ ನಿರ್ವಹಿಸಬಲ್ಲದು ಮತ್ತು ವಿದ್ಯುನ್ಮಾನ ಮತದಾನ ಯಂತ್ರಗಳು ಪ್ರತಿ ಮತಕ್ಕೆ ಒಂದು ಕಾಗದದ ಆಡಿಟ್ ಟ್ರಯಲ್ ಅನ್ನು ಉತ್ಪಾದಿಸಲು ಅಪೇಕ್ಷಿಸುತ್ತದೆ.[೫೧] ನಿರ್ದಿಷ್ಟ ಮಾನಗಳ ಹಾಗೂ ತಂತ್ರಜ್ಞಾನದ ರಾಷ್ಟ್ರೀಯ ನಿರ್ದೇಶಕರಿಗೆ ಸಂಶೋಧನೆಯನ್ನುಮುಂದುವರಿಸಲು, ಮತ್ತು ವಿಕಲಾಂಗರಿಗೆ ಮತಪತ್ರದ ಮತದಾನದ ವಿಧಾನಗಳನ್ನು ಒದಗಿಸಲು, ಪ್ರಾಥಮಿಕವಾಗಿ ಇಂಗ್ಲೀಷ್ ಭಾಷೆ ಮಾತನಾಡದವರು, ಮತ್ತು ಹೆಚ್ಚಿನ ಸಾಕ್ಷರತೆಯ ಮಟ್ಟ ಹೊಂದದವರಿಗೆ ನವೆಂಬರ್ 1, 2007 ರಲ್ಲಿ ಫ್ಲಾರಿಡಾದ ಸೆನೆಟರ್ ಬಿಲ್ ನೆಲ್ಸನ್ ನಿಂದ ಪ್ರಾರಂಭಿಸಲ್ಪಟ್ಟ ಸಂಯುಕ್ತ ಸಂಸ್ಥಾನದ ಸೆನೆಟ್ ಸಹ ಬಿಲ್ಲಿನ ವರದಿಯು ಒತ್ತಾಯಿಸುತ್ತದೆ. ಹಾಗೂ, ಮತದಾರನು ಪ್ರಮಾಣಿಸಿದ ಕಾಗದದ ಮತಪತ್ರಗಳನ್ನು ಕೈಯಿಂದ ಎಣಿಸಿದ ಆಡಿಟ್ ವರದಿಯ ಸಹಿತ ಸಂಘಟನಾ ಕಚೇರಿಗೆ ಒದಗಿಸಲು ಅದು ರಾಜ್ಯಗಳಿಗೆ ಆದೇಶಿಸುತ್ತದೆ. ಪ್ರಸ್ತುತ, ಈ ಬಿಲ್ಲು ನಿಯಮಗಳು ಮತ್ತು ಆಡಳಿತದ ಸಂಯುಕ್ತ ಸಂಸ್ಥಾನದ ಸೆನೆಟ್ ಕಮಿಟಿಗೆಹಿಂದಿರುಗಿಸಲ್ಪಟ್ಟಿದೆ ಮತ್ತು ಮತದಾನದ ತಾರೀಕನ್ನು ನಿರ್ದಿಷ್ಟಪಡಿಸಿಲ್ಲ.[೫೨] ವಿದ್ಯುನ್ಮಾನ ಮತದಾನ ತಂತ್ರಜ್ಞಾನದ ಉಪಯೋಗದ ಸುತ್ತಲಿನ ಅಭದ್ರತೆಗೆ ಸಂಬಂಧಿಸಿದ ಹೆಚ್ಚುತ್ತಿರುವ ಹಂಬಲದ ಕಾರಣ, 2008 ರಲ್ಲಿ ಕಾಂಗ್ರೆಸ್ಸಿನ ಹೋಲ್ಟನು, ವಿದ್ಯುನ್ಮಾನ ಮತದಾನದ ಭವಿಷ್ಯಕ್ಕೆ ಸಂಬಂಧಿಸಿದ ಹೆಚ್ಚುವರಿ ಬಿಲ್ಲುಗಳನ್ನು ಸಲ್ಲಿಸಿದನು. ಪ್ರಧಾನ ಸೇವೆಗಳ ಆಡಳಿತವುನಾಗರಿಕರಿಗೆ ಕಾಗದದ ಮತಪತ್ರಗಳನ್ನು ಒದಗಿಸಿದ ಹೆಚ್ಚಿನ ವೆಚ್ಚವನ್ನು ಮತ್ತು ಅವುಗಳನ್ನು ಎಣಿಸಲು ಬಾಡಿಗೆಗೆ ತೆಗೆದುಕೊಂಡ ಜನಗಳ ಖರ್ಚಿನ ಹಣವನ್ನು ಹಿಂತಿರುಗಿಸುತ್ತದೆ ಎಂದು (ಹೆಚ್ ಆರ್ 5036) "2008 ರ ಭದ್ರತಾ ಚುನಾವಣೆಗೆ ತುರ್ತು ಪರಿಸ್ಥಿತಿಯ ಸಹಾಯದ ಕಾನೂನು" ಎನ್ನುವ ಒಂದು ಬಿಲ್ಲು ತಿಳಿಸುತ್ತದೆ.[೫೩] ಈ ಬಿಲ್ಲು ಜನವರಿ 17, 2008 ರಲ್ಲಿ ಶಾಸನ ಸಭೆಗೆ ಪರಿಚಯಿಸಲ್ಪಟ್ಟಿತು.[೫೪] 500 ಮಿಲಿಯನ್ ಡಾಲರುಗಳನ್ನು ಕಾಗದದ ಮತಪತ್ರಕ್ಕೆ ಪುನರ್ಮಾಪಾಡು ಮಾಡುವ ವೆಚ್ಚವನ್ನು ಸರಿದೂಗಿಸಲು ಕೊಡಲಾಗುವುದು; ಮತದಾನದ ಲೆಕ್ಕ ಶೋಧಕರಿಗೆ ಕೊಡಲು 100 ಮಿಲಿಯನ್ ಡಾಲರುಗಳನ್ನು ಒದಗಿಸಲಾಗುವುದು; ಕೈಯಿಂದ ಎಣಿಸಿದವರಿಗೆ ಕೊಡಲು 30 ಮಿಲಿಯನ್ ಡಾಲರುಗಳನ್ನು ಕೊಡುವಂತೆ ಈ ಬಿಲ್ಲು ಅಂದಾಜು ಮಾಡುತ್ತದೆ. ವಿದ್ಯುನ್ಮಾನ ಮತದಾನದ ಯಂತ್ರಗಳನ್ನು ನಂಬದೇ ಹೋದರೆ ಸಾರ್ವಜನಿಕರು ಕೈಯಿಂದ ಮತ ಚಲಾಯಿಸುವ ಆಯ್ಕೆಯನ್ನು ಒದಗಿಸುತ್ತದೆ.[೫೩]. ಮತದಾನದ ತಾರೀಕು ಇನ್ನೂ ನಿರ್ಧರಿಸಲಾಗಿಲ್ಲ.
ಪ್ರಖ್ಯಾತ ಸಂಸ್ಕೃತಿ
[ಬದಲಾಯಿಸಿ]2006 ರಲ್ಲಿ ತಯಾರಾದ ಮ್ಯಾನ್ ಆಫ್ ದ ಇಯರ್ ಎನ್ನುವ ಚಲನಚಿತ್ರದಲ್ಲಿ ರಾಬಿನ್ ವಿಲಿಯಮ್ಸ್‌ಪಾತ್ರವಹಿಸಿದ್ದನು. ರಾಜಕೀಯ ಸಂಭಾಷಣಾ ಪ್ರದರ್ಶನದ ಹಾಸ್ಯಗಾರ ಅಭ್ಯಾಗತ ಜಾನ್ ಸ್ಟೀವರ್ಟ್‌ನಂತಹ ಪಾತ್ರವನ್ನು ವಿಲಿಯಮ್ಸ್ ಮಾಡಿದ್ದನು, ಕಲ್ಪನಾ ತಯಾರಕ ಡೆಲಕ್ರಾಯ್ ನಿಂದ ಉತ್ಪಾದಿಸಲ್ಪಟ್ಟ ವಿದ್ಯುನ್ಮಾನ ಮತದಾನ ಯಂತ್ರಗಳಲ್ಲಿ ಒಂದು ತಂತ್ರಾಂಶದ ದೋಷವು ಮತಗಳನ್ನು ಅಸಮರ್ಪಕವಾಗಿ ತಾಳೆ ಮಾಡಿದಾಗ ವಿಲಿಯಮ್ಸ್ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಜಯಶಾಲಿಯಾದನು. ಮಾರ್ಕ್ ಕೊಗಿನ್ಸ್ 2007 ರಲ್ಲಿ ರನ್ ಆಫ್ ಎಂಬ ಕಾದಂಬರಿ ಬರೆದಿದ್ದನು. ಸಾನ್ ಫ್ರಾನ್ಸಿಸ್ಕೊ ನಗರ ಸಭಾಧ್ಯಕ್ಷ ಚುನಾವಣೆಯಲ್ಲಿ ಗ್ರೀನ್ ಪಾರ್ಟಿ ಅಭ್ಯರ್ಥಿಯಿಂದ ಒಂದು ವಿಸ್ಮಯದ ಪ್ರದರ್ಶನವು ಅವನಿಗೂ ಮತ್ತು ಹೆಚ್ಚು ಬೆಂಬಲಿಸಲ್ಪಟ್ಟ ಅಭ್ಯರ್ಥಿಯ ಮಧ್ಯೆ ಒಂದು ರನ್ ಆಫ್‌ಅನ್ನು ಬಲವಂತಪಡಿಸುತ್ತದೆ - 2003 ರ ಚುನಾವಣೆಯ ಸರಿಯಾದ ಫಲಿತಾಂಶಗಳು ಒಂದು ಸಂಚು ಹತ್ತಿರ ರಹಸ್ಯವಾಗಿ ಸರಿಗಟ್ಟುತ್ತದೆ. ಪುಸ್ತಕದ ಖಾಸಗಿ ಪತ್ತೇದಾರ ಮುಖಂಡನು ಶಕ್ತಿಶಾಲಿಯಾದ ಚೀನಾಪಟ್ಟಣದ ವ್ಯಾಪಾರಿ ಮಹಿಳೆಯ ಅಪ್ಪಣೆಯ ಮೇರೆಗೆ ತನಿಖೆ ಮಾಡಿದಾಗ, ನಗರದಲ್ಲಿ ಹೊಸದಾಗಿ ಸ್ಥಾಪಿಸಿದ ಇ-ಮತದಾನ ವ್ಯವಸ್ಥೆಯ ಭದ್ರತೆಯನ್ನು ಸೋಲಿಸಿದವರೊಬ್ಬರಿಂದ ಫಲಿತಾಂಶವನ್ನು ಮೋಸಗೊಳಿಸಲಾಗಿದೆ ಎಂದು ತೀರ್ಮಾನಿಸಿದನು.[೫೫] 2006ರ ಸಾಕ್ಷ್ಯಚಿತ್ರ "ಹ್ಯಾಕಿಂಗ್ ಡೆಮೊಕ್ರಸಿ" ಹೆಚ್ ಬಿ ಓ ನಲ್ಲಿ ತೋರಿಸಲ್ಪಟ್ಟಿತು. ಅಮೇರಿಕಾದ 2000 ಹಾಗೂ 2004 ರ ಚುನಾವಣಾ ಅವಧಿಯಲ್ಲಿ, ವಿಶೇಷವಾಗಿ ಫ್ಲೊರಿಡಾದ ವೊಲುಸಿಯ ಕೌಂಟಿಯಲ್ಲಿಸಂಭವಿಸಿದ ವಿದ್ಯುನ್ಮಾನ ಮತದಾನ ವ್ಯವಸ್ಥೆಗಳ ಅಕ್ರಮಗಳು ಮತ್ತು ಅವ್ಯವಸ್ಥೆಗಳನ್ನು ಅಮೇರಿಕಾದ ನಾಗರಿಕರು ತನಿಖೆ ನಡೆಸುತ್ತಿರುವಂತೆ ಮೂರು ವರ್ಷಗಳ ಕಾಲ ಚಿತ್ರಿಸಲ್ಪಟ್ಟ ಆ ಚಿತ್ರವು ದಾಖಲಿಸುತ್ತದೆ. ಆ ಚಿತ್ರವು, ಮುಖ್ಯವಾಗಿ ಡೈಬೊಲ್ಡ್ ಚುನಾವಣಾ ಪದ್ಧತಿಗಳಿಂದಮಾಡಲ್ಪಟ್ಟ ವಿದ್ಯನ್ಮಾನ ಮತದಾನ ಯಂತ್ರಗಳ ಲೋಪದೋಷಗಳ ಪ್ರಾಮಾಣಿಕತೆಗಳ ಶೋಧನೆ ಮಾಡುತ್ತದೆ. ಫ್ಲಾರಿಡಾದ ಲಿಯಾನ್ ಕೌಂಟಿಯಲ್ಲಿ ಡೈಬೊಲ್ಡ್ ಚುನಾವಣಾ ವ್ಯವಸ್ಥೆಯ ಹ್ಯಾಕಿಂಗ್ ಅನ್ನು ಅತ್ಯನ್ನತ ಮಟ್ಟಕ್ಕೇರಿಸುತ್ತದೆ.
ವಿದ್ಯುನ್ಮಾನ ಮತದಾನ ಯಂತ್ರದ ತಯಾರಕರು
[ಬದಲಾಯಿಸಿ]- ಆಕ್ಯುಪೋಲ್
- ಅಡ್ವಾನ್ಸಡ್ ವೊಟಿಂಗ್ ಸಲ್ಯೂಷನ್ಸ್, ಹಿಂದಿನ ಶೌಪ್ ವೊಟಿಂಗ್ ಮಶೀನ್ ಕಂ.
- ಭಾರತ್ ಎಲೆಟ್ರಾನಿಕ್ಸ್ ಲಿಮಿಟೆಡ್ (ಭಾರತ)
- ಡೊಮಿನಿಯನ್ ವೊಟಿಂಗ್ ಸಿಸ್ಟಮ್ಸ್ ಕಾರ್ಪೊರೇಶನ್ (ಕೆನಡಾ)
- ಎಲೆಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್
- ಇ ಎಸ್ & ಎಸ್ (ಯು ಎಸ್ ಎ)
- ಹಾರ್ಟ್ ಇಂಟರ್ ಸಿವಿಕ್ (ಯು ಎಸ್ ಎ)
- ಮೈಕ್ರೊವೊಟ್
- ನೆಡಾಪ್ (ನೆದರ್ ಲ್ಯಾಂಡ್ಸ್)
- ಪ್ರೀಮಿಯರ್ ಎಲೆಕ್ಷನ್ ಸಲ್ಯೂಶನ್ಸ್ (ಹಿಂದಿನ ಡೈಬೊಲ್ಡ್ ಎಲೆಕ್ಷನ್ ಸಿಸ್ಟಮ್ಸ್) (ಯು ಎಸ್ ಎ)
- ಸಿಕ್ವೊಯ ವೊಟಿಂಗ್ ಸಿಸ್ಟಮ್ಸ್ (ಯು ಎಸ್ ಎ)
- ಸ್ಮಾರ್ಟಮ್ಯಾಟಿಕ್
- ಯೂನಿಲೆಕ್ಟ್
- ವೊಟೆಕ್ಸ್ / ಟಿ ಎಮ್ ಟೆಕ್ನಾಲಜೀಸ್ ಎಲೆಕ್ಷನ್ಸ್ ಇಂಕ್ (ಕೆನಡಾ)
ಶೈಕ್ಷಣಿಕ ಶಿಸ್ತಿನ ಪರಿಶ್ರಮಗಳು
[ಬದಲಾಯಿಸಿ]ಇವನ್ನೂ ನೋಡಿ
[ಬದಲಾಯಿಸಿ]- ಮತದಾನದ ಯಂತ್ರ
- ಮತದಾನ ಯಂತ್ರಗಳ ಯೋಗ್ಯತಾ ಪತ್ರದ ಕೊಡುಗೆ
- ಚುನಾವಣೆಗೆ ಸಂಬಂಧಿಸಿದ ವಂಚನೆ
- ಮತ ಎಣಿಸುವ ಪದ್ಧತಿ
- ಇ-ಪ್ರಜಾಪ್ರಭುತ್ವ
- ಓಪನ್ ಸೊರ್ಸ್ ಡಿಜಿಟಲ್ ಮತದಾನ ಪ್ರತಿಷ್ಠಾನ
ಆಕರಗಳು
[ಬದಲಾಯಿಸಿ]- ↑ ಸಂಯುಕ್ತ ಸಂಸ್ಥಾನದ ಚುನಾವಣಾ ಸಹಾಯಕ ಕಮೀಶನ್: 2005 ಐಚ್ಛಿಕ ಮತದಾನ ವ್ಯವಸ್ಥೆಯ ಮಾರ್ಗದರ್ಶಿ ಸೂತ್ರಗಳು Archived 2008-02-07 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಸಂಯುಕ್ತ ಸಂಸ್ಥಾನದ ಸಂಘಟನೆಯ ಕಮೀಶನ್: ನೇರವಾಗಿ ದಾಖಲಿಸುವ ವಿದ್ಯುನ್ಮಾನ [೧] - ಮಾಹಿತಿಯ ಪುಟ
- ↑ ಫ್ರಿಯೆಲ್, ಬ್ರಿಯಾನ್ (ನವೆಂಬರ್ 2006) ಲೆಟ್ ದ ರೀಕೌಂಟ್ಸ್ ಬಿಗಿನ್ Archived 2005-06-19 ವೇಬ್ಯಾಕ್ ಮೆಷಿನ್ ನಲ್ಲಿ., ನ್ಯಾಶನಲ್ ಜರ್ನಲ್
- ↑ ಸರ್ಕಾರಿ ಹೊಣೆಗಾರಿಕೆಯ ಕಚೇರಿ (ಮೇ 2004) "ವಿದ್ಯುನ್ಮಾನ ಮತದಾನವು ಸದವಕಾಶಗಳನ್ನು ಒದಗಿಸಿ ಪೈಪೋಟಿಗಳನ್ನು ಪರಿಚಯಿಸುತ್ತದೆ"
- ↑ ಸರ್ಕಾರಿ ಹೊಣೆಗಾರಿಕೆಯ ಕಚೇರಿ(ಸೆ ಪ್ಟೆಂಬರ್ 2005) "ಸುರಕ್ಷತೆಯನ್ನು ಸುಧಾರಿಸಲು ಸಂಯುಕ್ತ ಸಂಸ್ಥಾನಗಳು ಹಾಗೂ ವಿದ್ಯುನ್ಮಾನ ವ್ಯವಸ್ಥೆಗಳು ನಡೆಯುತ್ತಿವೆ, ಆದರೆ ಸೂಕ್ಷ್ಮ ಚಟುವಟಿಕೆಗಳನ್ನು ಸಂಪೂರ್ಣ ಗೊಳಿಸಬೇಕಾಗಿದೆ"
- ↑ ಥಾಪ್ಸನ್, ಕೆನ್ (ಆಗಸ್ಟ್ 1984) ರಿಫ್ಲೆಕ್ಷನ್ಸ್ ಆನ್ ಟ್ರಸ್ಟಿಂಗ್ ಟ್ರಸ್ಟ್ Archived 2006-06-13 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಲೊಂಬಾರ್ಡಿ, ಇಮ್ಯಾನ್ಯುಎಲ್ ಎಲೆಕ್ಟ್ರಾನಿಕ್ ವೊಟಿಂಗ್ ಮತ್ತು ಡೆಮಾಕ್ರಸಿ Archived 2010-09-03 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಸ್ಕೀನಿಯರ್, ಬ್ರೂಸ್ (ಸೆಪ್ಟೆಂಬರ್ 2004), ಓಪನ್ ಡೆಮಾಕ್ರಸಿ ವಿದ್ಯನ್ಮಾನ ಮತದಾನ ಯಂತ್ರಗಳ ದೋಷವೇನು? Archived 2008-05-22 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "http://post-journal.com/articles.asp?articleID=6218". The Post-Journal Archived 2007-10-29 ವೇಬ್ಯಾಕ್ ಮೆಷಿನ್ ನಲ್ಲಿ.
- ↑ " 2004 ಹಾಗೂ ನಂತರದಲ್ಲಿ ಮತದಾನದ ಪ್ರಾಮಾಣಿಕತೆ ಮತ್ತು ನೆರವಾಗುವಿಕೆಯನ್ನು ರಕ್ಷಿಸುವುದು Archived 2004-12-12 ವೇಬ್ಯಾಕ್ ಮೆಷಿನ್ ನಲ್ಲಿ." ಪೀಪಲ್ ಫಾರ್ ದ ಅಮೇರಿಕನ್ ವೇ
- ↑ "ಮತದಾನ ವ್ಯವಸ್ಥೆಗಳಿಗೆ ವಿಕಲಾಂಗರಿಗೆ ನೆರವು" ಪರೀಕ್ಷಿಸಿದ ಮತದಾನ ಪ್ರತಿಷ್ಠಾನ
- ↑ "ಮತಪತ್ರ ಟೆಂಪ್ಲೇಟ್ಸ" Archived 2012-08-29 ವೇಬ್ಯಾಕ್ ಮೆಷಿನ್ ನಲ್ಲಿ. (ಸ್ಪರ್ಶೇಂದ್ರಿಯದ ಮತಪತ್ರಗಳು) ಚುನಾವಣೆ ವ್ಯವಸ್ಥೆಗಳಿಗೆ ಅಂತರರಾಷ್ಟ್ರೀಯ ಪ್ರತಿಷ್ಠಾನ
- ↑ ಓ ಆರ್ ಜಿ ಚುನಾವಣಾ ವರದಿಯು ಉಪಯೋಗಿಸಿದ ತಂತ್ರಜ್ಞಾನದ ಸಹಿತ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತದೆ
- ↑ ದ ಓಪನ್ ರೈಟ್ಸ್ ಗ್ರೂಪ್: ಬ್ಲಾಗ್ ಆರ್ಚಿವ್ >> ಓ ಆರ್ ಜಿ ಲಂಡನ್ ಚುನಾವಣೆಯಲ್ಲಿನ ತೀರ್ಪು: ಭರವಸೆಯಿಂದ ಫಲಿತಾಂಷವನ್ನು ಪ್ರಕಟಿಸಲು "ಸಾಕ್ಷ್ಯಗಳ ಕೊರತೆ"
- ↑ "ಜರ್ಮನಿಯ ಸಂಯುಕ್ತ ಸಂವಿಧಾನತ್ಮಕ ನ್ಯಾಯಾಲಯದ ಎರಡನೆ ಸೆನೆಟ್ ನ ಆಳ್ವಿಕೆ, ಮಾರ್ಚ್ 3, 2009". Archived from the original on 2011-07-11. Retrieved 2010-08-06.
- ↑ "ಜರ್ಮನಿಯ ಸಂಯುಕ್ತ ಸಂವಿಧಾನತ್ಮಕ ನ್ಯಾಯಾಲಯ, ಪತ್ರಿಕಾ ಪ್ರಕಟಣೆ ಸಂಖ್ಯೆ. 19/2009 ಮಾರ್ಚ್ 2009". Archived from the original on 2009-04-04. Retrieved 2010-08-06.
- ↑ ವಿ ವಿ ಎಸ್ ಜಿ ಯಲ್ಲಿ ತಂತ್ರಾಂಶದ ಸ್ವಾತಂತ್ರದ ಅಪೇಕ್ಷೆ 2007: ಟಿ ಜಿ ಡಿ ಸಿ ಗೆ ಎಸ್ ಟಿ ಎಸ್ ಶಿಫಾರಸುಗಳು
- ↑ [೨] Archived 2012-06-09 ವೇಬ್ಯಾಕ್ ಮೆಷಿನ್ ನಲ್ಲಿ.}"ಕರಡು ವರದಿಯ ಮೇಲೆ" ಪ್ರಶ್ನೋತ್ತರಗಳು: ಟಿ ಜಿ ಡಿ ಸಿ ಗೆ ಎಸ್ ಟಿ ಎಸ್ ಶಿಫಾರಸುಗಳು: ವಿ ವಿ ಎಸ್ ಜಿ ಯಲ್ಲಿ ತಂತ್ರಾಂಶದ ಸ್ವಾತಂತ್ರದ ಅಪೇಕ್ಷೆ 2007"
- ↑ Pilot Study of the Scantegrity II Voting System Planned for the 2009 Takoma Park City Election (PDF), archived from the original (PDF) on 2011-07-19, retrieved 2010-08-06
- ↑ Hardesty, Larry. "Cryptographic voting debuts". MIT news. Retrieved 2009-11-30.
- ↑ 'ಪೇಪರ್ ಟ್ರೇಲ್' ನೆವೆಡಾದಲ್ಲಿ ಉಪಯೋಗಿಸಿದ ಮತದಾನ ಪದ್ಧತಿ, ಅಸೋಸಿಯೇಟೆಡ್ ಪ್ರೆಸ್ ಸೆಪ್ಟೆಂಬರ್ 7, 2004
- ↑ ನೆವೆಡಾ ಈ-ಮತದ ಜೊತೆ ವ್ಯತ್ಯಾಸಗಳನ್ನು ಸುಧಾರಿಸುತ್ತದೆ, ಸಿ ಎನ್ ಎನ್‌ಅಕ್ಟೋಬರ್ 29, 2004
- ↑ "ನೆಡಾಪ್/ಗ್ರೋನೆಡಾಲ್ ಇ ಎಸ್3ಬಿ ಗಣಕಯಂತ್ರ ಮತದಾನ ಒಂದು ಸುರಕ್ಷತೆಯ ವಿಶ್ಲೇಷಣೆ (ಅಧ್ಯಾಯ 7.1)" (PDF). Archived from the original (PDF) on 2010-01-07. Retrieved 2010-08-06.
- ↑ ವಿದ್ಯುನ್ಮಾನ ಮತದಾನ ಯಂತ್ರಗಳಲ್ಲಿನ ಸಮಸ್ಯೆ
- ↑ "ವಿದ್ಯುನ್ಮಾನ ಮತದಾನ ಮತ್ತು ಎಣಿಸುವ ವ್ಯವಸ್ಥೆ". Archived from the original on 2011-02-18. Retrieved 2010-08-06.
- ↑ ಡಿ ಫ್ರಾನ್ಕೊ, ಎ., ಪೆಟ್ರೊ, ಎ., ಶಿಯರ್, ಇ,. ನತ್ತು ವಾಲ್ಡಿಮಿರೊವ್, ವಿ. 2004. ಚಿಕ್ಕ ಮತಯುಕ್ತಿಯ ನಿರ್ವಹಣೆಗಳು ಚುನಾವಣೆಗಳನ್ನು ತೂಗಾಡಿಸ ಬಹುದು. ಸಂಪರ್ಕ-ಸಂವಹನ ಎ ಸಿ ಎಮ್ 47, 10 (ಅಕ್ಟೋಬರ್. 2004), 43-45. DOI= http://doi.acm.org/10.1145/1022594.1022621
- ↑ ಫ್ಲಾರಿಡಾ ಪ್ರಾಥಮಿಕ 2002: ಭವಿಷ್ಯಕ್ಕೆ ಬೆಂಬಲಿಸು
- ↑ [೩]ಫೇರ್ ಫಾಕ್ಸ್ ಮತದಾನ ಯಂತ್ರಗಳನ್ನು ವಿವರವಾಗಿ ಪರೀಕ್ಷಿಸುವುದು (ವಾಷಿಂಗ್ಟನ್ ಪೋಸ್ಟ್, ನವೆಂಬರ್ 18, 2003)
- ↑ ಗ್ರೆಗ್ ಲ್ಯುಕಾಸ್, "4 ಕೌಂಟಿಗಳಲ್ಲಿ ವಿದ್ಯುನ್ಮಾನ ಮತಪತ್ರ ಚಲಾಯಿಸುವುದನ್ನು ರಾಜ್ಯವು ನಿಷೇಧಿಸಿದೆ; ಸ್ಪರ್ಶ ಪರದೆ ಉದ್ದಿಮೆಯುನ್ನು 'ಖಂಡನಾರ್ಹ', 'ಕಾನೂನು ಬಾಹಿರ' ವ್ಯವಸ್ಥೆಗಾಗಿ ಆಪಾದಿಸಲ್ಪಟ್ಟಿದೆ", ಸ್ಯಾನ್ ಫ್ರಾನ್ಸಿಸ್ಕೊ ಕ್ರಾನಿಕಲ್ (ಮೇ 1, 2004)) http://www.sfgate.com/cgi-bin/article.cgi?file=/chronicle/archive/2004/05/01/MNG036EAF91.DTL
- ↑ ಹಾರ್ಡಿ, ಮೈಖೆಲ್ (ಮಾರ್ಚ್. 3, 2004) ಕ್ಯಾಲಿಫೋರ್ನಿಯಾ ನಿಕ್ಸೆಸ್ ಇ-ಮತದಾನ Archived 2005-06-13 ವೇಬ್ಯಾಕ್ ಮೆಷಿನ್ ನಲ್ಲಿ.. ಎಫ್ ಸಿ ಡಬ್ಲ್ಯು.ಕಾಂ .
- ↑ ಡೈಬೋಲ್ಡ್ ಇ-ಮತದಾನ ವ್ಯಾಜ್ಯವನ್ನು ಪರಿಹರಿಸಬೇಕು.
- ↑ ಕ್ಯಾಲಿಫೋರ್ನಿಯಾ ರಾಜ್ಯದ ರಾಜ್ಯ ಕಾರ್ಯದರ್ಶಿ (ಫೆಬ್ರುವರಿ 17, 2006). ಡೈಬೋಲ್ಡ್ ಎಲೆಕ್ಷನ್ ಸಿಸ್ಟಮ್ಸ್, ಇಂಕ್ ಇದರ ಉಪಯೋಗಕ್ಕೆ ಒಪ್ಪಿಗೆ Archived 2006-05-02 ವೇಬ್ಯಾಕ್ ಮೆಷಿನ್ ನಲ್ಲಿ. .
- ↑ Kim, Zetter (2004-03-19). "E-Vote Snafu in California County". Wired. Archived from the original on 2013-01-05. Retrieved 2021-07-20.
- ↑ http://www.minbzk.nl/contents/pages/82071/briefstemmachinses.pdf
- ↑ "ಆರ್ಕೈವ್ ನಕಲು". Archived from the original on 2008-12-16. Retrieved 2010-08-06.
- ↑ "ಆರ್ಕೈವ್ ನಕಲು". Archived from the original on 2010-07-26. Retrieved 2010-08-06.
- ↑ ಎ ಪಿ ಮೂಲಕ ಇಂಟರ್ನಾಶನಲ್ ಹೆರಾಲ್ಡ್ ಟ್ರಿಬ್ಯೂನ್ (ಅಕ್ಟೋಬರ್ 30, 2006) ಡಚ್ ಸರ್ಕಾರವು ಆಮಸ್ಟರ್ಡಾಮ್ ಒಳಗೊಂಡಂತೆ 35 ನಗರಗಳಲ್ಲಿ ಮತದಾನ ಗಣಕಯಂತ್ರಗಳ ಉಪಯೋಗವನ್ನು ನಿಷ್ಕ್ರೀಯಗೊಳಿಸಲು ಯೋಜಿಸುತ್ತಿದೆ.
- ↑ ಮತದಾನಕ್ಕೆ ಪರೀಕ್ಷಾರ್ಥ ಕಾರ್ಯ (ಮಿಯಾಮಿ ಹೆರಾಲ್ಡ್, 10/31/2006)
- ↑ ೩೯.೦ ೩೯.೧ ೩೯.೨ ಇ-ಮತಪತ್ರಗಳ ಜೊತೆ ಚುನಾವಣಾ ಕೆಲಸಗಾರರ ಹೋರಾಟ
- ↑ Thompson, Clive (January 6, 2008). "Can You Count on Voting Machines?". The New York Times. Retrieved March 29, 2010.
- ↑ "KHO: Kuntavaalit uusiksi Vihdissä, Karkkilassa ja Kauniaisissa". YLE Uutiset, Talous ja politiikka. YLE. 2009-04-09. Retrieved 2009-04-09.
- ↑ http://www.technologyreview.com/computing/21626/
- ↑ Grossman, Wendy M (30 April 2009). "Why machines are bad at counting votes". London: The Guardian. Retrieved 2009-07-14.
- ↑ "ಸಿ ಎ ಎಸ್ ಒ ಎಸ್ ಸಂಪೂರ್ಣ ಪುನರಾವಲೋಕನ". Archived from the original on 2007-07-15. Retrieved 2010-08-06.
- ↑ ಸಿಮೊನ್ಸ್, ಬಾರ್ಬರಾ. ಆಗಸ್ಟ್ 13, 2009 "ಕ್ಯಾಲಿಫೋರ್ನಿಯಾ: ಸಂಪೂರ್ಣ ಪುನರಾವಲೋಕನೆ." Archived 2016-02-25 ವೇಬ್ಯಾಕ್ ಮೆಷಿನ್ ನಲ್ಲಿ. ಮತದಾರ. ದಿನಾಂಕ 10 ನವೆಂಬರ್ 2008ರಂದು ಮರುಪಡೆಯಲಾಯಿತು.
- ↑ ರಿಯೊರ್ಡಾನ್, ಥೆರೆಸಾ. 7 ಸೆಪ್ಟೈಂಬರ್ 1994 [೪] ಪ್ರಿನ್ಸಟನ್ ವಿಶ್ವವಿದ್ಯಾಲಯ. ಮಾರ್ಚ್ 6, 2008ರಲ್ಲಿ ಮರುಸಂಪಾದಿಸಲಾಗಿದೆ.
- ↑ "IGS Votomatic Prototype Goes to the Smithsonian". Institute of Governmental Studies, Public Affairs Report. 42 (4). University of California, Berkeley. Winter 2001. Archived from the original (– Scholar search) on 2007-07-13. Retrieved 2010-08-06.
{{cite journal}}
: External link in
(help)|format=
- ↑ "ಬಿ ಓ ಡಿ ಒಪ್ಪಿಗೆಯನ್ನು ಕಾಯುತ್ತಿರುವ ಶಾಸನ ಸಭೆಯ ಕಮಿಟಿಯ ತೀರ್ಮಾನ Archived 2008-05-18 ವೇಬ್ಯಾಕ್ ಮೆಷಿನ್ ನಲ್ಲಿ.". (ಜುಲೈ 2007). ಮಾಹಿತಿ ಕಾರ್ಯನಿರ್ವಾಹಕ Archived 2008-05-18 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಓರಿಯೆಜ್, ಚಾರ್ಲ್ಸ್ (ಜುಲೈ 2004). "ಮತದಾನ ಯಂತ್ರಗಳ ಅನ್ವೇಶಣೆಯಲ್ಲಿ ನಾವು ಭರವಸೆಯಿಡಬಹುದು" Archived 2009-02-23 ವೇಬ್ಯಾಕ್ ಮೆಷಿನ್ ನಲ್ಲಿ.." ಮಾಹಿತಿ ಕಾರ್ಯನಿರ್ವಾಹಕ Archived 2008-05-18 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಪಡ್ಗೆಟ್, ಟಿಮ್. ನವೆಂಬರ್ 19, 2007 "ಇ-ಮತದಾನ ಯಂತ್ರಗಳನ್ನು ತೆಗೆದುಹಾಕುವಿಕೆ" Archived 2013-08-24 ವೇಬ್ಯಾಕ್ ಮೆಷಿನ್ ನಲ್ಲಿ. ಟೈಮ್ ಮ್ಯಗಜೈನ್. ದಿನಾಂಕ 28 ನವೆಂಬರ್ 2008ರಂದು ಮರುಪಡೆಯಲಾಯಿತು.
- ↑ ರೊಸೆನ್ ಫೆಲ್ಡ್, ಸ್ಟೀವನ್. ಆಗಸ್ಟ್ 8, 2008. ವಿದ್ಯುನ್ಮಾನ ಮತದಾನ ಯಂತ್ರಗಳ ಮೇಲೆ ಕ್ಯಾಲಿಫೋರ್ನಿಯಾ ನಿಷೇಧದ ಪರಿಣಾಮಗಳು ದಿನಾಂಕ 27 ನವೆಂಬರ್ 2007 ರಂದು ಮರುಪಡೆಯಲಾಯಿತು.
- ↑ 2007 [೫] Archived 2015-10-18 ವೇಬ್ಯಾಕ್ ಮೆಷಿನ್ ನಲ್ಲಿ. ದ ಲೈಬ್ರರಿ ಆಫ್ ಕಾಂಗ್ರೆಸ್ 2008 ರ ಮಾರ್ಚ್ 3 ರಂದು ತೆಗೆದುಕೊಳ್ಳಲಾಗಿದೆ.
- ↑ ೫೩.೦ ೫೩.೧ 2008 [೬] ಚುನಾವಣಾ ಪತ್ರಾಗಾರ. 2008 ರ ಮಾರ್ಚ್ 3 ರಂದು ತೆಗೆದುಕೊಳ್ಳಲಾಗಿದೆ.
- ↑ [೭] 2008 ಓಪನ್ ಕಾಂಗ್ರಸ್. 2008ರ ಮಾರ್ಚ್ 3ರಂದು ತೆಗೆದುಕೊಳ್ಳಲಾಗಿದೆ.
- ↑ ಜನವರಿ ಮ್ಯಾಗಜೈನ್, "ದ ಫಿಕ್ಸ್ ಇಸ್ ಇನ್"
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಎಲೆಕ್ಷನ್ ಅಸಿಸ್ಟೆನ್ಸ್ ಕಮಿಷನ್
- ಮತಗಳುಎನ್ ಐ ಎಸ್ ಟಿ.ಗೌ - ದ ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ಸ್ಟಾಡರ್ಡ್ಸ ಅಂಡ್ ಟೆಕ್ನಾಲಜಿ ಹೆಲ್ಪ ಅಮೇರಿಕಾ ವೊಟ್ ಆಕ್ಟ್ಪುಟ
- ಪ್ರಾಕ್ಟಿಕಲ್ ಸೆಕ್ಯುರಿಟಿ ಅನಾಲಿಸಿಸ್ ಆಫ್ ಇ-ವೊಟಿಂಗ್ ಸಿಸ್ಟಮ್ಸ್, ಟ್ರಿನು ಮ್ಯಾಗಿಯಿಂದ ಎಸ್ಟೊನಿಯನ್ ಇ-ಮತದಾನ ಪದ್ಧತಿಯ ಸುರಕ್ಷತೆಯನ್ನು ಅಧ್ಯಯನ ಮಾಡಿದ ವಿದ್ವತ್ ಪ್ರಬಂಧ, ಸರ್ವ್ (ಸೆಕ್ಯೂರ್ ಎಲೆಕ್ಟ್ರಾನಿಕ್ ರೆಜಿಸ್ಟ್ರೇಶನ್ ಮತ್ತು ವೊಟಿಂಗ್ ಎಕ್ಸಪೆರಿಮೆಂಟ್)
- ಎ ಕೊರಸಿಯಾನ್-ರೆಸಿಸ್ಟಾನ್ಟ್ ಕ್ರಿಪ್ಟೊಗ್ರಾಫಿಕ್ ವೊಟಿಂಗ್ ಪ್ರೊಟೊಕಾಲ್ - ಇವ್ಯಾಲ್ಯುಯೇಶನ್ ಮತ್ತು ಪ್ರೊಟೊಟೈಪ್ ಇಂಪ್ಲಿಮೆಂಟೇಶನ್, - ವಿದ್ಯನ್ಮಾನ ಮತದಾನ ಯೋಜನೆಗಳಲ್ಲಿ ಮತ ಕೊಂಡುಕೊಳ್ಳುವದರ ವಿರುದ್ಧ ಪ್ರತಿಮಾನಗಳನ್ನು ವಿಶ್ಲೇಷಿಸಿದ ಸ್ಟೀಫನ್ ಜಿ. ವೇಬರ್ ನ ಒಂದು ಮಹತ್ವದ ಪ್ರಬಂಧ.
- ದ ಎಲೆಕ್ಷನ್ ಟೆಕ್ನಾಲಜಿ ಲೈಬ್ರರಿ ರಿಸರ್ಚ್ ಲಿಸ್ಟ್ Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ. - ಚುನಾವಣೆಗಳಲ್ಲಿ ತಂತ್ರಜ್ಞಾನದ ಉಪಯೋಗಕ್ಕೆ ಸಂಬಂಧಿಸಿದ ಸಂಶೋಧನೆಯ ಒಂದು ವ್ಯಾಪಕ ಪಟ್ಟಿ.
- ಇ-ವೊಟಿಂಗ್ ಇನಫಾರ್ಮೇಶನ್ ಏಸ್ ಪ್ರಾಜೆಕ್ಟ್ ನವರಿಂದ
- ಭಾರತದಲ್ಲಿ ನಾವು ಹೇಗೆ ಮತದಾನ ಮಾಡುವೆವು.
- ದ ಮೆಶಿನರಿ ಆಫ್ ಡೆಮೊಕ್ರಸಿ: ವೊಟಿಂಗ್ ಸಿಸ್ಟಮ್ ಸೆಕ್ಯುರಿಟಿ, ಅಸೆಸಬಿಲಿಟಿ, ಯೂಸಬಿಲಿಟಿ, ಮತ್ತು ಕಾಸ್ಟ್ Archived 2007-11-07 ವೇಬ್ಯಾಕ್ ಮೆಷಿನ್ ನಲ್ಲಿ., ಬ್ರೆನಾನ್ ಸೆಂಟರ್ ಫಾರ್ ಜಸ್ಟಿಸ್, ನ್ಯೂಯಾರ್ಕ್ ಯೂನಿವರ್ಸಿಟಿ ಯ ಲಾ ಸ್ಕೂಲ್ನವರಿಂದ.
- Electronic Voting Systems ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- ಎನ್ ಪಿ ಆರ್ ಮೇ 2008 ರವರೆಗೆ, ಸಂಯುಕ್ತ ಸಂಸ್ಥಾನದ ರಾಜ್ಯಗಳಲ್ಲಿ ಪ್ರಚಲಿತ ತಂತ್ರಜ್ಞಾನದ ಸ್ಥಾನಮಾನದ ಸಾರಾಂಶ.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: external links
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from April 2009
- Articles with unsourced statements from August 2009
- Articles with hatnote templates targeting a nonexistent page
- Articles with unsourced statements from May 2009
- Pages containing citation needed template with deprecated parameters
- Articles with unsourced statements from February 2010
- Commons category link is locally defined
- Articles with Open Directory Project links
- ವಿದ್ಯುನ್ಮಾನ ಮತದಾನ