ಎಮ್. ನಾರಾಯಣ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಮ್.ನಾರಾಯಣ ರಾವ್,, ಅತ್ಯುತ್ತಮ ನ್ಯಾಯವಾದಿ, ಬೆಂಗಳೂರು ಲಾ ಕಾಲೇಜಿನ ಪ್ರಪ್ರಥಮ ಪ್ರಾಂಶುಪಾಲ, ಹಾಗೂ ಪ್ರಾಚಾರ್ಯರಾಗಿದ್ದದ್ದರು. ಶಾಲಾಕಾಲೇಜುಗಳಲ್ಲಿ ವ್ಯಾಸಂಗಮಾಡುವ ವಿದ್ಯಾರ್ಥಿಗಳ ಸಹಾಯಕ್ಕಾಗಿ ಒಂದು ವಿದ್ಯಾರ್ಥಿ ವಸತಿಗೃಹವನ್ನು ನಿರ್ಮಾಣಮಾಡುವ ಧ್ಯೇಯವನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಜೀವನದಲ್ಲಿ ಯಾವಾಗಲೂ ಕನಸುಕಾಣುತ್ತಿದ್ದರು. [೧]

ಜನನ, ವಿದ್ಯಾಭ್ಯಾಸ, ವೃತ್ತಿಜೀವನ[ಬದಲಾಯಿಸಿ]

  • 'ನಾರಾಯಣ', ಹಿಂದೂಪುರ ತಾಲ್ಲೂಕಿನ 'ಮಾನೇಪಲ್ಲಿ' ಗ್ರಾಮದ ಶ್ಯಾನುಭೋಗರಾಗಿದ್ದ 'ಕರಣಂ ವೆಂಕಟಾಚಲಪ್ಪ' ಮತ್ತು 'ವೆಂಕಮ್ಮ' ದಂಪತಿಗಳ ಮಗನಾಗಿ ಜನಿಸಿದರು. ಮುಂದೆ,'ಮದರಾಸಿನ ಲಾ ಕಾಲೇಜ್' ನಲ್ಲಿ ವ್ಯಾಸಂಗಮಾಡಿ, ನ್ಯಾಯಶಾಸ್ತ್ರ' ವಿಶಯದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಪದವಿ ಗಳಿಸಿದರು. ನಂತರ ನ್ಯಾಯವಾದಿಯ ಪದಗ್ರಹಣ ಮಾಡಿ ಸಾಮಾಜಿಕ ಸೇವೆ, ಗ್ರಾಮೀಣ ಪ್ರದೇಶದ ಜನರ ಏಳಿಗೆಗೆ ದುಡಿದರು. ದೀನದಲಿತರ ಸೇವೆಗಾಗಿ ಶ್ರಮಿಸಿದರು.
  • ಮೈಸೂರು ಸಂಸ್ಥಾನದ ಕಾಂಗ್ರೆಸ್ ಪಕ್ಷದ ಆಗಿನ ಮುಖ್ಯಮಂತ್ರಿ,'ಕಾಸಂಬಳ್ಳಿ ಚಂಗಲರಾಯ ರೆಡ್ಡಿ'ಯವರ ನೇತೃತ್ವದಲ್ಲಿ ಮೈಸೂರು ಸರಕಾರ ೧೯೪೭ ರಲ್ಲಿ ರಚಿಸಲಾಯಿತು. ಆ ಸಮಯದಲ್ಲಿ 'ಬೆಂಗಳೂರಿನ ಸರಕಾರಿ ಸೆಂಟ್ರೆಕ್ ಲಾ ಕಾಲೇಜು' ಸ್ಥಾಪನೆಯಾಯಿತು. ಎಮ್.ನಾರಾಯಣ ರಾಯರು, ಆ ಕಾಲೇಜಿನ ಪ್ರಪ್ರಥಮ ಪ್ರಾಂಶುಪಾಲ ಮತ್ತು ಪ್ರಾಚಾರ್ಯರಾಗಿ ದುಡಿದರು. ಅವರ ಆದರ್ಶ ಮುನ್ನೋಟ, ಮತ್ತು ಸಮರ್ಥ ಆಡಳಿತಗಳಿಂದ ಎಲ್ಲರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯವನ್ನು ಹುಟ್ಟುಹಾಕಿ, ಹಲವಾರು ಜನಪರ ಕಲ್ಯಾಣ ಕೆಲಸಗಳನ್ನು ಮಾಡಿ ಯಶಸ್ವಿಯಾದರು.

ಮದುವೆ[ಬದಲಾಯಿಸಿ]

ಆಗಿನ ಕಾಲದ ಸುಪ್ರಸಿದ್ಧ ನ್ಯಾಯವಾದಿ ಹೈಕೋರ್ಟ್ ನ್ಯಾಯಾಧೀಶ 'ಬಾಲೇಪುರದ ಸುಬ್ಬಣ್ಣ'ನವರ ಪುತ್ರಿ,'ಸರಸ್ವತಮ್ಮ'ನವರ ಜೊತೆ ವಿವಾಹವಾಯಿತು. ಎಮ್.ಎನ್.ನಾರಾಯಣರಾಯರ ಮೊದಲ ಮಗ, 'ಎಮ್.ಎನ್.ವೆಂಕಟಾಚಲಯ್ಯ'ನವರು ಆಗಿನ ಸಮಯದ ಮೈಸೂರಿನ ಸರ್ವೋಚ್ಚ ನ್ಯಾಯಾಧೀಶರಾಗಿದ್ದರು. ನಂತರ ಭಾರತದ ಸರ್ವೋಚ್ಚನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಿಸಲ್ಪಟ್ಟರು.

ಬಡಗನಾಡು ಸಂಘ ಹಾಸ್ಟೆಲ್ ಸ್ಥಾಪನೆಗೆ ಶ್ರಮಿಸಿದರು[ಬದಲಾಯಿಸಿ]

  • 'ಬಡಗನಾಡು ಸಂಸ್ಥೆ'ಯನ್ನು ೧೯೪೩ ರಲ್ಲಿ ಸ್ಥಾಪಿಸಲಾಯಿತು. ಬೆಣ್ಣೆಗೋವಿಂದಪ್ಪನವರ ಛತ್ರದ ಮಾಲೀಕ, 'ಬಿ.ಜಿ.ಸುಬ್ಬರಾಯ'ರ ಮನವೊಲಿಸಿ ಸಮಾನ ಮನಸ್ಕರಾದ ಗೆಳೆಯರ ಸಹಕಾರದಿಂದ ವಿದ್ಯಾರ್ಥಿಗಳಿಗೆ ವಸತಿ-ಊಟದ ಗೃಹವನ್ನು ಕಟ್ಟಿಸಲು ನೆರವಾದರು. ಸಂಘದ ಪ್ರಥಮ ಅಧ್ಯಕ್ಷರಾಗಿ ಬಹಳ ಶ್ರಮಿಸಿ ಸಂಘವನ್ನು ಅಭಿವೃದ್ಧಿಗೊಳಿಸಿದರು.
  • ಬೆಂಗಳೂರಿನ ಶೇಶಾದ್ರಿಪುರಂನಲ್ಲಿ ವಿದ್ಯಾರ್ಥಿನಿಲಯವನ್ನು ನಿರ್ಮಿಸಲು ಪ್ರಯತ್ನಿಸಿ, ಅದಕ್ಕೆ ಬೇಕಾದ ನಿವೇಶನವನ್ನು ಪಡೆಯುವಲ್ಲಿ ಜಯಶೀಲರಾದರು. 'ಮಾನೇಪಲ್ಲಿ ಎಮ್.ನಾರಾಯಣ ರಾವ್', ಬಡಗನಾಡು ಸಂಘದ ಪ್ರಪ್ರಥಮ ಅಧ್ಯಕ್ಷರಾಗಿ (೧೯೪೩-೪೮) ಕಾರ್ಯ ನಿರ್ವಹಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. "'ಬಡಗನಾಡು ಸಂಘದ ಅಧ್ಯಕ್ಷರುಗಳು,'-ಶ್ರೀ.ಎಂ.ನಾರಾಯಣ ರಾವ್". Archived from the original on 2015-02-04. Retrieved 2015-01-29.