ಎಂಟೊರೆಂಟ್(ΜTorrent)
µTorrent Icon | |
µTorrent Screenshot | |
ಮೂಲ ಕರ್ತೃ | Ludvig Strigeus |
---|---|
ಅಭಿವೃದ್ಧಿಪಡಿಸಿದವರು | BitTorrent, Inc. |
ಮೊದಲು ಬಿಡುಗಡೆ | 18 ಸೆಪ್ಟೆಂಬರ್ 2005 |
ಕ್ರಮವಿಧಿಯ ಭಾಷೆ | C++ |
ಕಾರ್ಯಾಚರಣಾ ವ್ಯವಸ್ಥೆ | Microsoft Windows Mac OS X 10.5 (Intel and PPC) Linux (using Wine is officially supported),[೧] native Linux version planned [೨] |
ಗಾತ್ರ | Windows: 319.8 kB Mac OS X: 1.492 MB |
ಲಭ್ಯವಿರುವ ಭಾಷೆ(ಗಳು) | 54 languages |
ವಿಧ | BitTorrent client |
ಪರವಾನಗಿ | Proprietary freeware |
ಅಧೀಕೃತ ಜಾಲತಾಣ | www.utorrent.com |
µ-ಟೊರೆಂಟ್ ('ಯು-ಟೊರೆಂಟ್') (ಅಥವಾ ಯು-ಟೊರೆಂಟ್ (ಸಾಮಾನ್ಯವಾಗಿ 'µT ' ಅಥವಾ 'uT ') ಎಂಬುದು ಫ್ರೀವೇರ್ (ಉಚಿತ ತಂತ್ರಾಂಶ), ಸೀಮಿತ ಬಳಕೆಯ ಮೂಲ (closed source) ಬಿಟ್ಟೊರೆಂಟ್ ಗ್ರಾಹಕ(ಅವಲಂಬಿ ಗಣಕ)ವಾಗಿದೆ. ಈ ತಂತ್ರಾಂಶವನ್ನು ರಚಿಸಿ ಅಭಿವೃದ್ಧಿಗೊಳಿಸಿದ್ದು ಬಿಟ್ಟೊರೆಂಟ್ ಇಂಕ್. ಇದು ಮೈಕ್ರೊಸಾಫ್ಟ್ ವಿಂಡೋಸ್ ಹಾಗೂ ಮ್ಯಾಕ್ ಓಎಸ್ ಎಕ್ಸ್ (Mac OS X) ಗಳಿಗೆ ಲಭ್ಯವಿದೆ. . ಇವೆರಡೂ ಆವೃತ್ತಿಗಳನ್ನು C++ ಆದೇಶ ಸರಣಿಯಲ್ಲಿ ರಚಿಸಿ ಸಿದ್ಧಪಡಿಸಲಾಗಿದೆ.[೩] ಈ ತಂತ್ರಾಂಶದ ಹೆಸರಿನಲ್ಲಿ µ ಎಂಬುದು SI (ಸಿಸ್ಟಮ್ ಇಂಟರ್ನ್ಯಾಷನಲ್)(ಏಕಮಾನಗಳ ಅಂತಾರಾಷ್ಟ್ರೀಯ ವ್ಯವಸ್ಥೆ) ಪೂರ್ವಪ್ರತ್ಯಯ 'ಮೈಕ್ರೊ' ಹೆಸರಿನಿಂದ ಬಂದಿದೆ. ಇದರ ಅರ್ಥ, 'ಒಂದು ದಶಲಕ್ಷದ ಒಂದು ಭಾಗ' ಎಂದು. ಇದು ಯುಪಿಎಕ್ಸ್ ಚಾಲಿಸಬಲ್ಲ ಅಡಕಗಾರವನ್ನು ಬಳಸುವ ಮೂಲಕ, ಈ ತಂತ್ರಾಂಶದ ಸಣ್ಣಗಾತ್ರದ 'ಸ್ಮರಣೆಯ ಹೆಜ್ಜೆಗುರುತನ್ನು' ಉಲ್ಲೇಖಿಸುತ್ತದೆ. ದೊಡ್ಡಗಾತ್ರದ ಬಿಟ್ಟೊರೆಂಟ್ ಗ್ರಾಹಕಗಳಾದ ವ್ಯೂಝ್ ಅಥವಾ ಬಿಟ್ಕಾಮೆಟ್ಗೆ ಹೋಲಿಕೆಯಾಗುವ ಕಾರ್ಯಸಾಧ್ಯತೆ ನೀಡುವುದರ ಜತೆಗೆ ಈ ಕ್ರಮವಿಧಿ(ಪ್ರೋಗ್ರಾಂ)ಯು ಕಂಪ್ಯೂಟರ್ ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದಕ್ಕೆ ವಿನ್ಯಾಸಗೊಂಡಿದೆ. ಹಳೆಯ ಹಾರ್ಡ್ವೇರ್ ಮತ್ತು ವಿಂಡೋಸ್ ಆವೃತ್ತಿಗಳಿಗೆ ಈ ಕ್ರಮವಿಧಿ(ಪ್ರೋಗ್ರಾಂ) ತನ್ನ ಸಾಮರ್ಥ್ಯ,ಕಾರ್ಯವೈಖರಿ,ಸ್ಥಿರತೆ ಮತ್ತು ಬೆಂಬಲದ ಉತ್ತಮ ಪರಾಮರ್ಶೆಗಳನ್ನು ಸ್ವೀಕರಿಸಿದೆ. ವರದಿಯೊಂದರ ಪ್ರಕಾರ, ಚೈನೀಸ್ ತಂತ್ರಾಂಶ ಕ್ಸುನ್ಲೇ (Xunlei) ನಂತರ, µ-ಟೊರೆಂಟ್ ಎರಡನೆಯ ಅತಿ ಜನಪ್ರಿಯ ಬಿಟ್ಟೊರೆಂಟ್ ಗ್ರಾಹಕವಾಗಿದೆ.[೪] 2005ರಲ್ಲಿ ಮೊದಲ ಆವೃತ್ತಿ ಬಿಡುಗಡೆಯಾದಾಗಿನಿಂದಲೂ, ಈ ಕ್ರಮವಿಧಿಯು ಸಕ್ರಿಯ ಅಭಿವೃದ್ಧಿಯನ್ನು ಕಂಡಿದೆ. ಲುಡ್ವಿಗ್ ಸ್ಟ್ರಿಜಿಯಸ್ ಮೂಲತಃ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದರೂ, 2006ರ ಡಿಸೆಂಬರ್ 7ರಿಂದಲೂ, ಬಿಟ್ಟೊರೆಂಟ್ ಇಂಕ್. ಉದ್ದಿಮೆಯು ಇದರ ಸಂಕೇತದ ಸ್ವಾಮ್ಯ ಪಡೆದು, ನಿರ್ವಹಣೆ ಮಾಡುತ್ತಿದೆ.[೫] µ-ಟೊರೆಂಟ್ನ ಮರು ಬ್ರಾಂಡ್ ಆವೃತ್ತಿ ಬಿಟ್ಟೊರೆಂಟ್ ಗ್ರಾಹಕ ತಂತ್ರಾಂಶದ ಆವೃತ್ತಿ 6.0ಗೆ ಆಧಾರವಾಗಿ, ಬಿಟ್ಟೊರೆಂಟ್ ಇಂಕ್. ಈ ಸಂಕೇತವನ್ನು ಬಳಸಿದೆ. ಆರ್ಬೊರ್ ನೆಟ್ವರ್ಕ್ಸ್ ನಡೆಸಿದ ಅಧ್ಯಯನ ಪ್ರಕಾರ, µ-ಟೊರೆಂಟ್ ಐಪಿವಿ6 (IPv6) ಅಳವಡಿಸಿಕೊಂಡ ನಂತರ, ಹತ್ತು-ತಿಂಗಳ ಅವಧಿಯಲ್ಲಿ ಅಂತರ್ಜಾಲದಲ್ಲಿ ಐಪಿವಿ6 ಮಾಹಿತಿ ಸಂಚಾರ ದಟ್ಟಣೆಯಲ್ಲಿ ಹದಿನೈದು ಪಟ್ಟು ಹೆಚ್ಚಳ ಕಂಡಿತು.[೬]
ಲಕ್ಷಣಗಳು
[ಬದಲಾಯಿಸಿ]µ-ಟೊರೆಂಟ್ನ ಲಕ್ಷಣಗಳಲ್ಲಿ ಕೆಳಕಂಡವೂ ಸೇರಿವೆ:
- ಟೆರಿಡೊ / ಐಪಿವಿ6 ಬೆಂಬಲ.
- ಮೈಕ್ರೊ ಟ್ರಾನ್ಸ್ಪೋರ್ಟ್ ಪ್ರೋಟೊಕಾಲ್ 1.8.2 ಆವೃತ್ತಿಯಲ್ಲಿ ಪ್ರಾಥಮಿಕ ಮಟ್ಟದ ಬೆಂಬಲ ಹಾಗೂ 2.0 ಆವೃತ್ತಿಯಲ್ಲಿ ಪೂರ್ಣಪ್ರಮಾಣದ ಬೆಂಬಲ.
- ವಿಂಡೋಸ್ XPಯ ಯುಪಿಎನ್ಪಿ (UPnP) ಚೌಕಟ್ಟಿನ ಅಗತ್ಯವಿಲ್ಲದೆ, ವಿಂಡೋಸ್ನ ಎಲ್ಲ ಆವೃತ್ತಿಗಳಿಗೂ UPnP ಬೆಂಬಲ.
- ಪ್ರೋಟೊಕಾಲ್ ಗೂಢ ಲಿಪಿಕರಣ (PE).
- ಇತರೆ ಬಿಟ್ಟೊರೆಂಟ್ ಗ್ರಾಹಕಗಳೊಂದಿಗೆ ಪಿಯರ್ ಎಕ್ಸ್ಚೇಂಜ್ (ಪಿಇಎಕ್ಸ್ (PEX).
- ಲಿಬ್ಟೊರೆಂಟ್ ಹಾಗೂ ಅದನ್ನು ಆಧರಿಸಿದ ಡಿಲ್ಯೂಜ್ನಂತಹ ಗ್ರಾಹಕಗಳಿಗೆ ಪೂರ್ಣಪ್ರಮಾಣದ µ-ಟೊರೆಂಟ್ ಪಿಇಎಕ್ಸ್ ಬೆಂಬಲವಿದೆ.
- ಲಿಬ್ಟ್ರ್ಯಾನ್ಸ್ಮಿಷನ್ ಆಧರಿಸಿದ ಟ್ರ್ಯಾನ್ಸ್ಮಿಷನ್ ಹಾಗೂ ಇತರೆ ಗ್ರಾಹಕಗಳಿಗೆ ಪೂರ್ಣಪ್ರಮಾಣದ µ-ಟೊರೆಂಟ್ ಪಿಇಎಕ್ಸ್ ಬೆಂಬಲವಿದೆ.
- ಕೆಟೊರೆಂಟ್ನ 2.1 ಆರ್ಸಿ1ಗೆ ಪೂರ್ಣಪ್ರಮಾಣದ µ-ಟೊರೆಂಟ್ PEX ಬೆಂಬಲವಿದೆ.
- ವ್ಯೂಝ್ (ಮುಂಚೆ ಆಝುರಿಯಸ್) 3.0.4.3 ಆವೃತ್ತಿಯಲ್ಲಿ ಸಂಪೂರ್ಣ ಬೆಂಬಲ ಹೊಂದಿದೆ.
- ಆರ್ಎಸ್ಎಸ್ ('ಬ್ರಾಡ್ಕ್ಯಾಚಿಂಗ್').
- DHT ಬಳಸಿ 'ಟ್ರಾಕರ್ಲೆಸ್' ಬಿಟ್ಟೊರೆಂಟ್ ಬೆಂಬಲ. ಇದು ಮೂಲತಃ ಬಿಟ್ಟೊರೆಂಟ್ ಗ್ರಾಹಕ ಹಾಗೂ ಬಿಟ್ಕಾಮೆಟ್ ಒಂದಿಗೂ ಹೊಂದಾಣಿಕೆಯಾಗಬಲ್ಲದು.
- ಬಳಕೆದಾರ ವಿನ್ಯಾಸಗೊಳಿಸಿದ ಪ್ರಬಲ ಗ್ರಹಿಕೆಶಕ್ತಿಯುಳ್ಳ ಕೇಚಿಂಗ್ ವ್ಯವಸ್ಥೆ
- ಪೂರ್ಣಪ್ರಮಾಣದ ಪ್ರಾಕ್ಸಿ ಸರ್ವರ್ ಬೆಂಬಲ.
- HTTPS ಟ್ರ್ಯಾಕರ್ ಬೆಂಬಲ.
- ಸಂರಚಿಸಬಹುದಾದ ಬ್ಯಾಂಡ್ವಿಡ್ತ್ ಷೆಡ್ಯೂಲರ್.
- 52 ಭಾಷೆಗಳಿಗಾಗಿ ಸ್ಥಳೀಕರಣ.[೭]
- ಟೊರೆಂಟ್ಗಳ ಅರಂಭಿಕ ಸೀಡಿಂಗ್(ಟೊರೆಂಟ್ಗೆ ಸಂಪರ್ಕಿಸುವ ಪ್ರಕ್ರಿಯೆ)
- ಇಚ್ಛೆಯಂತೆ ವಿನ್ಯಾಸಗೊಳಿಸಬಹುದಾದ ಸರ್ಚ್ ಬಾರ್ ಹಾಗೂ ಬಳಕೆದಾರ ದೃಶ್ಯಪ್ರಾತಿನಿಧ್ಯ(ಇಂಟರ್ಫೇಸ್) ವಿನ್ಯಾಸ.[೮]
- ಸಂರಚನೆ ಸೆಟ್ಟಿಂಗ್ಗಳು ಹಾಗೂ ತಾತ್ಕಾಲಿಕ ಕಡತಗಳನ್ನು ಒಂದೇ ನಿರ್ದೇಶಿಕೆಯಲ್ಲಿ ಶೇಖರಿಸಲಾಗುತ್ತದೆ. ಇದರಿಂದಾಗಿ ಪೋರ್ಟೆಬಲ್(ಒಯ್ಯುವುದು)ಬಳಕೆಗೆ ಅವಕಾಶ ನೀಡುತ್ತದೆ.
- ವೆಬ್ಯುಐ (WebUI): ಸದ್ಯಕ್ಕೆ ಬೀಟಾ ಪರೀಕ್ಷಣ (ಟೆಸ್ಟಿಂಗ್)ನಲ್ಲಿರುವ ಒಂದು ಪ್ಲಗಿನ್. ಒಂದು ಕಂಪ್ಯೂಟರ್ನಲ್ಲಿ ಚಾಲಿಸಲಾಗಿರುವ µ-ಟೊರೆಂಟ್ನ್ನು ಇನ್ನೊಂದು ಕಂಪ್ಯೂಟರ್ನಿಂದ ನಿಯಂತ್ರಿಸಲು ಅವಕಾಶ ನೀಡುತ್ತದೆ. ಜಾಲಪುಟ ಬಳಸಿ, ಅಂತರಜಾಲ ಅಥವಾ LANಮೂಲಕ ನಿಯಂತ್ರಿಸಬಹುದಾಗಿದೆ.
- ಫ್ಯಾಲ್ಕಾನ್ ಎಂಬ ಹೊಸದಾದ ಅಂತರಜಾಲ ಬಳಕೆದಾರ ದೃಶ್ಯಪ್ರಾತಿನಿಧ್ಯ (ವೆಬ್ ಯುಸರ್ ಇಂಟರ್ಫೇಸ್) ಅಭಿವೃದ್ಧಿ ಹಂತದಲ್ಲಿದೆ. ಇದು ಗೂಢಲಿಪೀಕರಿಸಿದ ಅವಧಿಗಳನ್ನು ಬೆಂಬಲಿಸುತ್ತದೆ ಹಾಗೂ ಪೋರ್ಟ್ಫಾರ್ವಾಂಡಿಂಗ್ (ಸರಿಯಾದ ಅಂಕಿಅಂಶವನ್ನು ಪುಟಕ್ಷೇತ್ರಕ್ಕೆ ಕಳಿಸುವುದು)ಇಲ್ಲದೇ ಭದ್ರತಾ ವ್ಯವಸ್ಥೆಗಳ ಮೂಲಕ ಹಾದುಹೋಗುವ ಸಾಮರ್ಥ್ಯ ಹೊಂದಿದೆ.ಹಿಂದಿನದಕ್ಕಿಂತ ಪೂರ್ಣ ಮತ್ತು ಆರಂಭಿಸಲು ಸುಲಭ.[೯]
- ಹುದುಗಿಸಲಾದ ಟ್ರಾಕರ್: ಇದು ಟೊರೆಂಟ್ಗಳ ಸಂಪರ್ಕಕ್ಕೆ(ಸೀಡಿಂಗ್)ವಿನ್ಯಾಸಗೊಳಿಸಲಾಗಿದೆ.ಇದು ಟೊರೆಂಟ್ಗಳ ಪಟ್ಟಿ ಅಥವಾ ವೆಬ್ ದೃಶ್ಯಪ್ರಾತಿನಿಧ್ಯದ(ಇಂಟರ್ಫೇಸ್) ಕೊರತೆ ಹೊಂದಿದೆ. ಸುರಕ್ಷಿತ ಅಥವಾ ಬೃಹತ್ ಪ್ರಮಾಣದ ಅನ್ವಯಿಕೆಗಾಗಿ ಇದು ವಿನ್ಯಾಸವಾಗಿಲ್ಲ.[೧೦]
- ಅಡಚಣೆಗೊಳಗಾದ (ಕಡತ) ವರ್ಗಾವಣೆಗಳನ್ನು ತಕ್ಷಣದಲ್ಲೇ ಆರಂಭಗೊಳಿಸುತ್ತದೆ.
- 1.8.5 ಬಿಲ್ಡ್ 17091ವರೆಗಿನ [೧೧] µ-ಟೊರೆಂಟ್[೧೧] ಗಳ ಆವೃತ್ತಿಗಳು, ವಿಂಡೋಸ್ 95 ಕಾರ್ಯಾಚರಣಾ ವ್ಯವಸ್ಥೆ, 486 ಸಂಸ್ಕಾರಕ(ಪ್ರೋಸೆಸರ್)ದ ಮೇಲೆ ಚಾಲನೆಯಾಗುವ 14 ಮೆಗಾಬೈಟ್ನಷ್ಟು ಕಡಿಮೆ ರ್ಯಾಮ್ (RAM) ಬಳಸಬಹುದು.[೧೨] ವಿಂಡೋಸ್ 95/98/ME ಕಾರ್ಯಾಚರಣಾ ವ್ಯವಸ್ಥೆಗಾಗಿ ಯುನಿಕೋಡ್ ಬೆಂಬಲ ನೀಡುತ್ತದೆ. µ-ಟೊರೆಂಟ್ಗಿಂತಲೂ ಬಹಳಷ್ಟು ದೊಡ್ಡದಾಗಿರುವ ಮೈಕ್ರೊಸಾಫ್ಟ್ ಲೇಯರ್ ಫಾರ್ ಯುನಿಕೋಡ್(ಸಾಫ್ಟ್ವೇರ್ ಲೈಬ್ರರಿ)ನ್ನು ಬಳಸುವ ಅಗತ್ಯವನ್ನು ತಪ್ಪಿಸುತ್ತದೆ. ಹೊಸ ಆವೃತ್ತಿಗಳಿಗೆ ವಿಂಡೋಸ್ 2000 ಅಥವಾ ಇನ್ನೂ ಇತ್ತೀಚೆಗಿನ ಕಾರ್ಯಾಚರಣಾ ವ್ಯವಸ್ಥೆಗಳ ಅಗತ್ಯವಿದೆ.[೧೩]
ಗಾತ್ರ
[ಬದಲಾಯಿಸಿ]µ-ಟೊರೆಂಟ್ನ್ನು ಸಂಕುಚಿತಗೊಳಿಸಲಾದ ಹಾಗೂ ಚಾಲಿತಗೊಳಿಸಬಹುದಾದ ಒಂಟಿ ಕಡತವಾಗಿ ರವಾನಿಸಲಾಗಿದೆ. ಸಣ್ಣ ಅಳವಡಿಕೆಗಾಗಿ ಲಭ್ಯವಾಗಿರುವ ಅನುಸ್ಥಾಪಕದ ಮೂಲಕ ಕಂಪ್ಯೂಟರ್ನಲ್ಲಿ ಇದನ್ನು ಅಳವಡಿಸುವ ಅಗತ್ಯವಿಲ್ಲ. ಇತ್ತೀಚೆಗಿನ ಆವೃತ್ತಿಗಳಲ್ಲಿ ಮೊದಲ ಬಾರಿ ಚಾಲಿತಗೊಳಿಸುವುದರೊಂದಿಗೆ ಅವು ತಾವಾಗಿಯೇ ಅಳವಡಿಸಿಕೊಳ್ಳುವ ಕ್ಷಮತೆ ಹೊಂದಿವೆ. ಅನೇಕ ಕಡತಭಂಡಾರಗಳ ಬಳಕೆಯನ್ನು ತಪ್ಪಿಸಿ ಸಣ್ಣ ಕಾರ್ಯರೂಪಕ್ಕೆ ತರಬಲ್ಲ ಗಾತ್ರ ಸಾಧಿಸಬಹುದು.(ಇದರಲ್ಲಿ C++ ಪ್ರಮಾಣಿತ ಕಡತಭಂಡಾರ (libraries) ಮತ್ತು ಸ್ಟ್ರೀಮ್ ಸೌಲಭ್ಯಗಳು ಸೇರಿವೆ) ತಪ್ಪಿಸಿ, ಈ ಕ್ರಮವಿಧಿಗಾಗಿ ನಿರ್ದಿಷ್ಟವಾಗಿ ರೂಪಿಸಿದ ಬದಲಿ ಕಡತಗಳನ್ನು ರಚಿಸಬಹುದು. UPX. ಬಳಸಿ ಈ ಚಾಲಿತಗೊಳಿಸಬಹುದಾದ ಸಂಕಲಿತ ಮತ್ತು ಸಂಪರ್ಕಹೊಂದಿದ ಕಡತದ ಗಾತ್ರವನ್ನು ಶೇಕಡಾ 50ರಷ್ಟು ಸಂಕುಚಿತಗೊಳಿಸಲಾಗುತ್ತದೆ.
ಇತಿಹಾಸ
[ಬದಲಾಯಿಸಿ]ಆರಂಭಿಕ ಬೆಳವಣಿಗೆ
[ಬದಲಾಯಿಸಿ]ಬ್ಲೋಟ್ವೇರ್ (ತುಂಬಾ ಭಾರಿ ಗಾತ್ರದ ಕಡತಗಳ) ಬಗ್ಗೆ ಬೇಸತ್ತ ಸರ್ಜ್ ಪ್ಯಾಕ್ವೆಟ್, ಸಣ್ಣ, ಕ್ಷಮತೆಯುಳ್ಳ ಬಿಟ್ಟೊರೆಂಟ್ ಗ್ರಾಹಕ(ಕ್ಲೈಂಟ್)ದ ಅಭಿವೃದ್ಧಿ ಕುರಿತು ಲುಡ್ವಿಗ್ ಸ್ಟ್ರಿಗಿಯಸ್ಗೆ ಸಲಹೆ ನೀಡಿದರು. ಸ್ಟ್ರಿಗಿಯಸ್ ಈ ಕ್ರಮವಿಧಿಯ ಅಭಿವೃದ್ಧಿಗಾಗಿ ಯೋಜನೆಗಳ ಪರಿಕಲ್ಪನೆಯಲ್ಲಿ ತೊಡಗಿದರು. ಆ ಸಮಯದಲ್ಲಿ ಈ ಗ್ರಾಹಕ(ಅವಲಂಬಿ ಗಣಕ)ವನ್ನು ಲಕ್ಷಣ-ಸಮೃದ್ಧಿಯಾಗಿ ಮಾಡುವುದು ಸೇರಿರಲಿಲ್ಲ. ಆರಂಭದಲ್ಲಿ, 2004ರ ಕೊನೆಯ ತ್ರೈಮಾಸಿಕ ಕಾಲಾವಧಿಯಲ್ಲಿ ಒಂದು ತಿಂಗಳ ಕಾಲ ಈ ತಂತ್ರಾಂಶದ ರಚನೆ-ಅಭಿವೃದ್ಧಿ ಕಾರ್ಯ ನಡೆಸಿದರು (ಮೊದಲ ಆವೃತ್ತಿಯನ್ನು 2004 ಅಕ್ಟೋಬರ್ 17ರ ದಿನಾಂಕ ಎಂದು ನಮೂದಿಸಲಾಗಿದೆ). ಆನಂತರ ಸ್ಟ್ರಿಗಿಯಸ್ ಒಂದು ವರ್ಷದ ಕಾಲ µ-ಟೊರೆಂಟ್ ಕುರಿತು ಸಂಕೇತನವನ್ನು ನಿಲ್ಲಿಸಿದರು. 2005ರ ಸೆಪ್ಟೆಂಬರ್ 15ರಂದು ತಮ್ಮ ಕಾರ್ಯವನ್ನು ಪುನಃ ಆರಂಭಿಸಿದರು. ಮೂರು ದಿನಗಳ ನಂತರ, ಮೊದಲ ಸಾರ್ವಜನಿಕ ಆವೃತ್ತಿ (ಆವೃತ್ತಿ 1.1 ಬೀಟಾ) ಉಚಿತ ತಂತ್ರಾಂಶವಾಗಿ ಲಭ್ಯಗೊಳಿಸಲಾಯಿತು ಮತ್ತು ಹಿಮ್ಮಾಹಿತಿಗಳನ್ನು ಸೃಷ್ಟಿಸಲು ಆರಂಭಿಸಿತು.
ಜಾಹೀರಾತುಗಳು
[ಬದಲಾಯಿಸಿ]ಮುಂಚಿನ ಆವೃತ್ತಿಗಳಲ್ಲಿ, 'ಮಾಹಿತಿ-ಹುಡುಕು' ಕೋರಿಕೆಗಳಿಗೆ ನ್ಯಾನೊಟೊರೆಂಟ್ ಮೂಲಕ ಅಂತರಜಾಲ ಪುನರ್ನಿರ್ದೇಶನ ಸಾಧನವನ್ನು ಸ್ಟ್ರೈಜಿಯಸ್ ನಿರ್ಮಿಸಿದ್ದರು. ಇದಕ್ಕೆ ಅಂತರಜಾಲ ವೀಕ್ಷಕ (ವೆಬ್ ಬ್ರೌಸರ್)ದ ಚೌಕಟ್ಟೊಂದರಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವ ಸರ್ಚ್ಬಾರ್ ಮೂಲಕ ಪ್ರವೇಶ ಕಲ್ಪಿಸಲಾಗುತ್ತಿತ್ತು. ಇದರ ಬಗ್ಗೆ ಕೆಲವು ಬಳಕೆದಾರರು ಅನುಮಾನ ವ್ಯಕ್ತಪಡಿಸಿದರು. ಏಕೆಂದರೆ, ಈ ತರಹ ಜಾಹೀರಾತುಗಳನ್ನು ಡೌನ್ಲೋಡ್ ಮಾಡುವವರು/ಸ್ವೀಕರಿಸುವವರ ಐಪಿ ವಿಳಾಸಗಳನ್ನು ದಾಖಲು ಮಾಡುವ ಮೂಲಕ ಜಾಡು ಹಿಡಿಯಬಹುದು.ಬಳಕೆದಾರನ ಪ್ರಶ್ನೆಗಳ ಜಾಡುಹಿಡಿಯಲು ಶೋಧ ಕಾರ್ಯಸಾಧ್ಯತೆಯನ್ನು ಸುಲಭವಾಗಿ ಬಳಸಬಹುದು. ಶೋಧವನ್ನು ಕಾರ್ಯಗತಗೊಳಿಸಲು ಗ್ರಾಹಕ(ಅವಲಂಬಿ ಗಣಕ) ಯಾವುದೇ ವೆಬ್ ದೃಶ್ಯಪ್ರಾತಿನಿಧ್ಯದ ಮೂಲಕ ಸಾಗಿದರೂ ಶೋಧ ಕಾರ್ಯಸಾಧ್ಯತೆ ಬಳಸಬಹುದು. ಅಲ್ಪಾವಧಿಯ ಪ್ರಯೋಗದ ಅವಧಿ ಬಳಿಕ,ಜಾಹೀರಾತು ನಿಷ್ಕ್ರಿಯಗೊಳಿಸಿ, ತಳಮಳಗಳನ್ನು ಶಮನಗೊಳಿಸಲಾಯಿತು.[೧೪] ತಂತ್ರಾಂಶದ ನಂತರದ ಆವೃತ್ತಿಯಲ್ಲಿ, ಜಾಹೀರಾತಿನ ಬದಲಿಗೆ, 'ಎಲ್ಲಾ ಅಂತರಜಾಲತಾಣಗಳನ್ನು ಹುಡುಕು' ಸೌಲಭ್ಯವಿದೆ. ಇದು ಕೀಲಿಪದ ಆಧಾರಿತ ಹುಡುಕುವ ಪಟ್ಟಿಯಾಗಿದೆ (search bar). ಇದು ವಿವಿಧ ಟ್ರಾಕರ್ಗಳಲ್ಲಿ ಟೊರೆಂಟ್ ಕಡತಗಳ ಪಟ್ಟಿಗಳನ್ನು ರವಾನಿಸುತ್ತದೆ. ಹುಡುಕು ಕ್ರಿಯೆಯನ್ನು ಬಳಸಿದಾಗ, ವೀಕ್ಷಕ(ಬ್ರೌಸರ್)ನ ಮೇಲ್ಭಾಗದ ಚೌಕಟ್ಟಿನಲ್ಲಿ ಜಾಹೀರಾತು ಪ್ರದರ್ಶಿಸುತ್ತದೆ(ಸರ್ವರ್ ಕಡೆ). 1.5ರ ಆವೃತ್ತಿಯಲ್ಲಿ, ತಂತ್ರಾಂಶದಲ್ಲಿ ಯಾವುದೇ ಜಾಹೀರಾತು ಇರುವುದಿಲ್ಲ. ಆವೃತ್ತಿ 463ರಲ್ಲಿ, ಪುನರ್ನಿರ್ದೇಶಿತ ಉಪಮಾರ್ಗ ಲಕ್ಷಣವು ಮುಂದುವರಿದ ಆಯ್ಕೆಗಳಲ್ಲಿ ಲಭ್ಯವಾಯಿತು.
ಪಿಯರ್ಫ್ಯಾಕ್ಟರ್ SARL
[ಬದಲಾಯಿಸಿ]ಅಂತರಜಾಲದ ಮೂಲಕ ಹೊಸ ಮಾಹಿತಿ ವಿತರಣಾ ಅನ್ವಯಿಕೆಗಳ ಅಭಿವೃದ್ಧಿಗಾಗಿ ಸ್ಟ್ರಿಜಿಯಸ್ರೊಂದಿಗೆ ಆರು ತಿಂಗಳುಗಳ ಒಪ್ಪಂದಕ್ಕೆ ಸಹಿ ಮಾಡಿರುವುದನ್ನು ಪಿಯರ್ಫ್ಯಾಕ್ಟರ್ SARL 2006ರ ಮಾರ್ಚ್ 4ರಂದು ಘೋಷಿಸಿತು.[೧೫] ಪಿಯರ್ಫ್ಯಾಕ್ಟರ್ SARL ಎಂಬುದು ತುಲನಾತ್ಮಕವಾಗಿ ಹೊಸ ಕಂಪೆನಿಯಾಗಿದೆ. ಇದನ್ನು ಸ್ಥಾಪಿಸಿದವರು ಪಿಯರ್ಫ್ಯಾಕ್ಟರ್ನ ಮಾಜಿ ಉದ್ಯೋಗಿಗಳಾಗಿದ್ದರು. ಈ ಸಂಸ್ಥೆಯು ಫ್ರೆಂಚ್ ಮೂಲದ ಸ್ವಾಮ್ಯಚೌರ್ಯ-ವಿರೋಧಿ ಸಂಸ್ಥೆ ರೆಟ್ಸ್ಪ್ಯಾನ್ನ ಅಂಗ ಸಂಸ್ಥೆಯಾಗಿತ್ತು. ಪಿಯರ್ಫ್ಯಾಕ್ಟರ್ SARL ಸಂಕೇತನವು(ಕೋಡಿಂಗ್)dll ಸೃಷ್ಟಿಸುವುದಕ್ಕಾಗಿ ಬಿಟ್ಟೊರೆಂಟ್ ಶಿಷ್ಟಾಚಾರ ಅತ್ಯುತ್ತಮವಾಗಿಸಲು ತಮ್ಮ ನಿಪುಣತೆಯನ್ನು ಇಲ್ಲಿ ಬಳಸುವ ಉದ್ದೇಶವಾಗಿತ್ತು ಎಂದು ಲೂಡ್ ತಿಳಿಸಿದರು. ಪಿಯರ್ಫ್ಯಾಕ್ಟರ್ SARL ಸಾಂಸ್ಥಿಕ ಸೆಟ್ಟಿಂಗ್ನಲ್ಲಿ ವಿತರಣಾ ವೇದಿಕೆಯ ಭಾಗವಾಗಿ dll ಬಳಸುವ ಇಂಗಿತ ಹೊತ್ತಿತ್ತು. [೧೬] ಈ ಸಮಯದಲ್ಲಿ, ಪಿಯರ್ಫ್ಯಾಕ್ಟರ್ನ ಪರವಾಗಿ ಬಳಕೆದಾರರ ಮೇಲೆ ಗೂಢಚರ್ಯೆ ನಡೆಸುವಂತೆ µ-ಟೊರೆಂಟ್ನ್ನು ಬದಲಾಯಿಸಲಾಗಿದೆ ಎಂಬ ಊಹಾಪೋಹಗಳಿದ್ದವು.[೧೫][೧೭] ಆದರೂ, ಬಿಟ್ಟೊರೆಂಟ್ ಇಂಕ್. µ-ಟೊರೆಂಟ್ನ್ನು ತನ್ನದಾಗಿಸಿಕೊಂಡ ನಂತರವೂ ಇದುವರೆಗೆ ಈ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರವೂ ಲಭ್ಯವಾಗಿಲ್ಲ.
ಮಾಲೀಕತ್ವದ ಬದಲಾವಣೆ
[ಬದಲಾಯಿಸಿ]2006ರ ಡಿಸೆಂಬರ್ 7ರಂದು, ಬಿಟ್ಟೊರೆಂಟ್ ಇಂಕ್ನ ಅಧಿಕೃತ ವೇದಿಕೆಯಲ್ಲಿ ತಿಳಿಸಿದ ಪ್ರಕಾರ, ಆ ಉದ್ದಿಮೆಯು µ-ಟೊರೆಂಟ್ನ್ನು ಕೊಂಡು ತನ್ನ ಮಾಲೀಕತ್ವಕ್ಕೆ ತಂದುಕೊಂಡಿತು.[೫] 2007ರ ಸೆಪ್ಟೆಂಬರ್ 18ರಂದು, ಬಿಟ್ಟೊರೆಂಟ್ 6.0 ಆವೃತ್ತಿ ಬಿಡುಗಡೆಗೊಳಿಸಲಾಯಿತು. ಇದು µ-ಟೊರೆಂಟ್ನ ಮರುಹೆಸರಿಸಲಾದ ಆವೃತ್ತಿಯಾಗಿತ್ತು. ಇದರ ಫಲವಾಗಿ, ಬಿಟ್ಟೊರೆಂಟ್ 6 ಸೀಮಿತ ಬಳಕೆಯ ಮೂಲವಾಗಿದೆ (ಇದರ ಮುಂಚಿನ ಆವೃತ್ತಿಗಳಾದ ಬಿಟ್ಟೊರೆಂಟ್ 5.x ಹಾಗೂ ಮುಂಚಿನವುಗಳು ಮುಕ್ತ ಮೂಲ ತಂತ್ರಾಂಶಗಳಾಗಿದ್ದವು). ಈ ಆವೃತ್ತಿಯು ಕೇವಲ ವಿಂಡೋಸ್ಗಾಗಿ ಮಾತ್ರ ಲಭ್ಯ.
ಆವೃತ್ತಿ ಬಿಡುಗಡೆಯ ಇತಿಹಾಸ
[ಬದಲಾಯಿಸಿ]ಆವೃತ್ತಿ | ಗಾತ್ರ | ಬಿಡುಗಡೆ ದಿನಾಂಕ | ಮ್ಯಾಕ್ ಆವೃತ್ತಿ | ಗಾತ್ರ | ಬಿಡುಗಡೆ ದಿನಾಂಕ |
---|---|---|---|---|---|
1.0.0 | 77
kB |
2005-09-18 | 1.0.0.1 | 1.492
MB |
2010-06-28 |
1.1.7.2 | 98
kB |
2005-10-22 | |||
1.2.2 | 107
kB |
2005-11-25 | |||
1.3.0 | 115
kB |
2005-12-10 | |||
1.4.2 | 142
kB |
2006-01-11 | |||
1.5.0 | 155
kB |
2006-03-08 | |||
1.6.1 | 173
KB |
2007-02-15 | |||
1.7.7 | 214
kB |
2008-01-25 | |||
1.8.5 | 282
kB |
2009-10-29 | |||
2.0.0 | 311
kB |
2010-01-25 | |||
2.0.3 | 319.8
kB |
2010-07-21 |
ಮ್ಯಾಕ್ ಆವೃತ್ತಿ
[ಬದಲಾಯಿಸಿ]ಮ್ಯಾಕ್ ಒಎಸ್ ಎಕ್ಸ್ 10.5ಗಾಗಿ µ-ಟೊರೆಂಟ್ನ ಪ್ರತ್ಯೇಕ ಆವೃತ್ತಿಯು (ಸಾಮಾನ್ಯವಾಗಿ µ-ಮ್ಯಾಕ್ ಎಂದು ಸಂಕ್ಷಿಪ್ತಗೊಳಿಸಲಾಗಿದೆ)ವರ್ಷಗಳವರೆಗೆ ಅಭಿವೃದ್ಧಿ ಹಂತದಲ್ಲಿದೆ.[೧೮] 28 ಜೂನ್ 2010 ರಂದು, ಸ್ಥಿರ ಆವೃತ್ತಿ (ಇಂಟೆಲ್ ಎಕ್ಸ್86 ಮತ್ತು PPC) ಅಂತರಜಾಲತಾಣದ ಪ್ರತ್ಯೇಕ ವಿಭಾಗದಲ್ಲಿ [೧೯] ಡೌನ್ಲೋಡ್ ಮಾಡಲು ಲಭ್ಯವಿದೆ.[೨೦]
Ask.com ಟೂಲ್ಬಾರ್
[ಬದಲಾಯಿಸಿ]1.8.2 ಆವೃತ್ತಿಯಲ್ಲಿ µ-ಟೊರೆಂಟ್ ಅನುಸ್ಥಾಪಕವು Ask.com ಟೂಲ್ಬಾರ್ ಅಳವಡಿಸುವ ಮತ್ತು ಡೌನ್ಲೋಡ್ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ನೀಡುತ್ತದೆ. ಈ ಕ್ರಮವಿಧಿ(ಪ್ರೋಗ್ರಾಂ) ಮೊದಲ ಬಾರಿಗೆ ಚಾಲಿತಗೊಳಿಸುವಾಗ ಈ ಆಯ್ಕೆಯನ್ನು ಪ್ರಸ್ತಾಪಿಸಲಾಗುತ್ತದೆ. ಈ ಟೂಲ್ಬಾರ್ ಬೇಡವಾದಲ್ಲಿ,ಬಳಕೆದಾರ ಆಯ್ಕೆಯ ಗುರುತನ್ನು ತೆಗೆಯಬಹುದಾಗಿದೆ.[೨೧][೨೨] ತಮ್ಮ ಅಭಿವೃದ್ಧಿ ಕಾರ್ಯ ಮುಂದುವರೆಸಲು ನಿಧಿಯ ಹೆಚ್ಚಳ ಅಗತ್ಯವಾಗಿದೆ ಎಂದು ತಂತ್ರಾಂಶ ಅಭಿವೃದ್ಧಿಗಾರರು ಹೇಳುತ್ತಾರೆ.
ಉಚ್ಚಾರಣೆ
[ಬದಲಾಯಿಸಿ]2005ರಲ್ಲಿ µ-ಟೊರೆಂಟ್ನ ಲೇಖಕರು ಬರೆಯುತ್ತಾರೆ , 'ನಾನು ಎಂದಿನಂತೆ 'ಯು-ಟೊರೆಂಟ್' ಎನ್ನುವೆ, ಏಕೆಂದರೆ, ಇದು u ತರಹ ಕಾಣುತ್ತದೆ', ಜೊತೆಗೆ, 'ಮೈಕ್ರೊಟೊರೆಂಟ್', 'ಮೈಟೊರೆಂಟ್' ("my" [myː] ಗ್ರೀಕ್ ಅಕ್ಷರ µ ನ ಸ್ವೀಡಿಷ್ ಭಾಷೆಯ ಉಚ್ಚಾರಣೆ), ನಂತರ 'ಮ್ಯೂಟೊರೆಂಟ್' ಎಂಬ ಪರ್ಯಾಯ ಉಚ್ಚಾರಣೆಗಳನ್ನು ಪ್ರಸ್ತಾಪಿಸಿದರು.[೨೩] μ ಚಿಹ್ನೆಯು ಗ್ರೀಕ್ ಅಕ್ಷರ Muದ ಸಣ್ಣ ಅಕ್ಷರರೂಪವಾಗಿದೆ. ಇದು ಸಿಸ್ಟಮ್ ಇಂಟರ್ನ್ಯಾಷನಲ್ ಮಾಪನದ ಪೂರ್ವಪ್ರತ್ಯಯ ಮೈಕ್ರೊವನ್ನು ನಿರೂಪಿಸುತ್ತದೆ. ಇದರ ಅರ್ಥ, ಒಂದು ದಶಲಕ್ಷದ ಒಂದು ಭಾಗ. ಇದು ಈ ಕ್ರಮವಿಧಿಯ ಸಣ್ಣ ಹೆಜ್ಜೆಗುರುತನ್ನು ಉಲ್ಲೇಖಿಸುತ್ತದೆ.
'ಬಾಕ್ಸ್ ಈಸ್ಟರ್ ಎಗ್ಸ್' ಕುರಿತು
[ಬದಲಾಯಿಸಿ]- ಬಳಕೆದಾರರು About ಪರದೆಯನ್ನು ತೆರೆದು ("Help" > 'About µTorrent'), ನಂತರ T ಕೀಲಿ ಒತ್ತಿದರೆ, µTris ಎಂಬ ಅಂತರ್ನಿರ್ಮಿತ ಟೆಟ್ರಿಸ್ ಆಟವನ್ನು ಆರಂಭಿಸುತ್ತದೆ.[೨೪]
- About ಪರದೆಯಲ್ಲಿ µTorrent ಲಾಂಛನವನ್ನು ಕ್ಲಿಕ್ ಮಾಡಿದರೆ, ಪರದೆಯಲ್ಲಿ ಡೀಪ್ ನೋಟ್ಗೆ ಸಮಾನವಾದ ಸಂಶ್ಲೇಷಿತ ಸದ್ದು ಕೇಳಿಬರುತ್ತದೆ.[೨೪]
- About ಪರದೆಯ ಹಿನ್ನೆಲೆಯ ಬಣ್ಣವು ತುಸು ಬದಲಾಗುತ್ತದೆ; ಇದರ ಅರ್ಥ, ನಿಮ್ಮ ದರ್ಶಕವನ್ನು ಒಂದು ಕೋನದಿಂದ ನೋಡಿದಲ್ಲಿ ಇದನ್ನು ಗಮನಿಸಬಹುದು.
ಕೊಡುಗೆದಾರರು
[ಬದಲಾಯಿಸಿ]µ-ಟೊರೆಂಟ್ನ ಅಭಿವೃದ್ಧಿಗಾರರಾದ, ಸ್ವೀಡೆನ್ ದೇಶದ ಲುಡ್ವಿಗ್ ಸ್ಟ್ರಿಜಿಯಸ್ ('ಲುಡ್ಡ್') ಈ ತಂತ್ರಾಂಶದ ಮೂಲ ಸೃಷ್ಟಿಕರ್ತರು. ಸರ್ಜ್ ಪ್ಯಾಕ್ವೆಟ್ ( ಕೆನಡಾದ 'ವುರ್ಲಿಕ್ಸ್') ಬಿಡುಗಡೆ ಸಮನ್ವಯಕರಾಗಿ, ಲಿನುಕ್ಸ್ ಮತ್ತು ಮ್ಯಾಕ್ OS X ಪೋರ್ಟ್ಗಳ ಮೇಲೆ ಕಾರ್ಯನಿರ್ವಹಿಸುವ ಇಂಗಿತ ಹೊಂದಿದ್ದರು. ಇವರು 2005ರ ಕೊನೆಯ ತನಕ µ-ಟೊರೆಂಟ್ ಅಂತರಜಾಲತಾಣ ಹಾಗೂ ವೇದಿಕೆಯನ್ನು ನಿರ್ವಹಿಸುತ್ತಿದ್ದರು. ಆದರೆ ಇಂದು µ-ಟೊರೆಂಟ್ನೊಂದಿಗೆ ಇವರು ಯಾವುದೇ ಸಂಬಂಧ ಹೊಂದಿಲ್ಲ. ಬಿಟ್ಟೊರೆಂಟ್ µ-ಟೊರೆಂಟ್ನ್ನು ಖರೀದಿಸಿದ ನಂತರ, ಬಿಟ್ಟೊರೆಂಟ್ ಇಂಕ್.ನಲ್ಲಿ ತಂತ್ರಾಂಶ ಅಭಿವೃದ್ಧಿಗಾರರಾದ ಗ್ರೆಗ್ ಹೇಝೆಲ್ ('ಆಲಸ್'), ಆರ್ವಿಡ್ ನಾರ್ಬರ್ಗ್ ('ಆರ್ವಿಡ್', ಲಿಬ್ಟೊರೆಂಟ್ನ ಲೇಖಕ), ಜ್ಯಾನ್ ಬ್ರಿಟೆನ್ಸನ್ ('ಕೋಡ್ರೆಡ್'), ರಿಚರ್ಡ್ ಚೊಯಿ ('ಆರ್ಚೊಯಿ') ಹಾಗೂ ರಯಾನ್ ನಾರ್ಟನ್ ('ರಯಾನ್ನಾರ್ಟನ್') ಈ ತಂತ್ರಾಂಶದ ಅಭಿವೃದ್ಧಿ ಕಾರ್ಯ ಮಾಡಿದರು. ಸ್ಟ್ರಿಜಿಯಸ್ ಇಂದಿಗೂ ತಾಂತ್ರಿಕ ಸಲಹಗಾರರಾಗಿದ್ದಾರೆ. ಇತರೆ ಕೊಡುಗೆದಾರರು ಇತರೆ ಅನ್ಯ ತಾಂತ್ರಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಗ್ಯಾನ್ಕಾರ್ಲೊ ಮಾರ್ಟಿನೆಝ್ (ಪ್ಯೂರ್ಟೊ ರಿಕೊದ 'ಫಿರೊನ್') µ-ಟೊರೆಂಟ್ ವೇದಿಕೆಗಳು ಮತ್ತು FAQ (ಆಗಾಗ್ಗೆ ಕೇಳಲಾದ ಪ್ರಶ್ನೆಗಳ ಪುಟ) ನಿರ್ವಹಿಸುತ್ತಾರೆ. ಕಾರ್ಸ್ಟೆನ್ ನೀಬುಹ್ರ್ (ಜರ್ಮನಿಯ 'ಡೈರೆಕ್ಟ್ರಿಕ್ಸ್') µTorrentಅಂತರಜಾಲಪುಟ ಬಳಕೆದಾರ ದೃಶ್ಯಪ್ರಾತಿನಿಧ್ಯ (ವೆಬ್ ಯುಸರ್ ಇಂಟರ್ಫೆಸ್) ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿದ್ದಾರೆ. ಟಿಮೊತಿ ಸು (ಮಲೇಷ್ಯಾದ 'ಇಗ್ನೊರಂಟ್ಕೌ') ಪ್ರಸ್ತುತ ಅಂತರಜಾಲತಣದ ವಿನ್ಯಾಸಕರಾಗಿದ್ದಾರೆ.
µ-ಟೊರೆಂಟ್ ತಂತ್ರಾಂಶದ ಸ್ವೀಕೃತಿ
[ಬದಲಾಯಿಸಿ]ತನ್ನ ಸಣ್ಣ ಗಾತ್ರ ಹಾಗೂ ತಾನು ಕಾರ್ಯನಿರ್ವಹಿಸಲು ಬಳಸುವ ಕನಿಷ್ಠ ಕಂಪ್ಯೂಟರ್ ಸಂಪನ್ಮೂಲಗಳಿಂದಾಗಿ, ಇತರೆ ತಂತ್ರಾಂಶಗಳಿಂದ µ-ಟೊರೆಂಟ್ ಭಿನ್ನವಾಗಿದೆ. 'ಅದ್ಭುತವಾದ ಸೌಕರ್ಯಗಳ ಸಂಗ್ರಹವನ್ನು ಇದು ಹೊಂದಿದೆ' ಎಂದು ಹೇಳಿದ ಪಿಸಿ ಮ್ಯಾಗಝೀನ್ ಈ ಕ್ರಮವಿಧಿಗೆ ಸಕಾರಾತ್ಮಕ ವಿಮರ್ಶೆ ನೀಡಿದೆ.[೨೫] ಈ ಪತ್ರಿಕೆಯ 157 ಅತ್ಯುತ್ತಮ ಉಚಿತ ತಂತ್ರಾಶ ಸಾಧನ ಗಳ ಪೈಕಿ µ-ಟೊರೆಂಟ್ಗೆ ಸ್ಥಾನ ನೀಡಿದೆ.[೨೬] ಪಿಸಿ ವರ್ಲ್ಡ್ ಮ್ಯಾಗಝೀನ್ನ 101 ಅದ್ಭುತ ಉಚಿತ ತಂತ್ರಾಂಶಗಳ ಪಟ್ಟಿ ಯಲ್ಲೂ ಸಹ ಸ್ಥಾನ ಗಳಿಸಿದೆ.[೨೭] ಬಹಳಷ್ಟು ಸೌಕರ್ಯಯುಕ್ತ ಬಿಟ್ಟೊರೆಂಟ್ ತಂತ್ರಾಂಶವಿದು ಎಂದು TorrentFreak.com ಹೇಳಿದೆ. ಅಲ್ಲದೆ, 'ವ್ಯೂಝ್ಗಿಂತಲೂ µ-ಟೊರೆಂಟ್ ಸರಾಸರಿ 16%ರಷ್ಟು ಹೆಚ್ಚು ವೇಗವಾಗಿ ಡೌನ್ಲೋಡ್ ಮಾಡಬಲ್ಲದು, ಹಾಗೂ 30 ಅತಿ ಹೆಚ್ಚು ಬಳಸಲಾದ ISPಗಳ ಪೈಕಿ 10% ಹೆಚ್ಚು ವೇಗ ಹಾಗೂ uಟೊರೆಂಟ್ ಬಳಕೆದಾರರು ವ್ಯೂಝ್ ಬಳಕೆದಾರರಿಗಿಂತಲೂ 30%ರಷ್ಟು ಹೆಚ್ಚು ವೇಗದಲ್ಲಿ ಡೌನ್ಲೋಡ್ ಮಾಡುತ್ತಿದ್ದರು' ಎಂಬ ರಿವರ್ಸೈಡ್ನ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯ ಅಧ್ಯಯನದ [೨೮] ಸಂಕ್ಷಿಪ್ತರೂಪವನ್ನು ಆಗಸ್ಟ್ 2009 ನಮೂದಿಸಿದೆ.[೨೯] [೨೯] ಇದು ಲಭ್ಯವಾದ ಅತ್ಯುತ್ತಮ ಬಿಟ್ಟೊರೆಂಟ್ ತಂತ್ರಾಂಶ ಎಂದು About.com ತಿಳಿಸಿ, ಇದರ ಸಣ್ಣ ಗಾತ್ರ ಹಾಗೂ ಕಂಪ್ಯೂಟರ್ನ ಇತರೆ ವೇಗಕ್ಕೆ ಕನಿಷ್ಠ ಪರಿಣಾಮದಿಂದ ಕಾರ್ಯನಿರ್ವಹಿಸುತ್ತದೆ ಎಂದು ವಿವರಿಸಿದೆ.[೩೦] 'ಇದರ ಸ್ಮೃತಿ ಹೆಜ್ಜೆಗುರುತು ಬಹಳಷ್ಟು ಕಿರಿದಾಗಿದೆ' ಎಂದು Wired.com ಹೇಳಿದೆ.[೩೧]
ಪಿಸಿ ಅಥಾರಿಟಿ ಪತ್ರಿಕೆಯು ಆರು ನಕ್ಷತ್ರಗಳಲ್ಲಿ ಈ ತಂತ್ರಾಂಶಕ್ಕೆ ಆರನ್ನೂ ನೀಡಿದೆ.[೩೨] ಇದುವರೆಗೂ ಲಭ್ಯವಿರುವ ಬಿಟ್ಟೊರೆಂಟ್ ತಂತ್ರಾಂಶದಲ್ಲಿ ಇದು ಅತ್ಯುತ್ತಮ ಎಂದು ಬೆಲೆ ಕಟ್ಟುವುದನ್ನು Lifehacker.com ಮುಂದುವರೆಸಿದೆ.[೩೩] ಇದು ಬಹಳ ಹಗುರ ಹಾಗೂ ವೇಗವಾಗಿ ಡೌನ್ಲೋಡ್ ಮಾಡುವ ಸೌಲಭ್ಯಕ್ಕಾಗಿ CNET.com ಐದು ನಕ್ಷತ್ರಗಳಲ್ಲಿ ಐದನ್ನೂ ಪ್ರದಾನ ಮಾಡಿದೆ.[೩೪]
2009ರ ನವೆಂಬರ್ ತಿಂಗಳಲ್ಲಿ 52 ದಶಲಕ್ಷ ಬಳಕೆದಾರರು ಈ ಅನ್ವಯಿಕ ತಂತ್ರಾಂಶವನ್ನು ಬಳಸಿದ್ದರು.[೩೫]
ಇವನ್ನೂ ವೀಕ್ಷಿಸಿ
[ಬದಲಾಯಿಸಿ]- ಬಿಟ್ಟೊರೆಂಟ್ ಅವಲಂಬಿ ಗಣಕಗಳ ಹೋಲಿಕೆ
- ಬಿಟ್ಟೊರೆಂಟ್
ಉಲ್ಲೇಖಗಳು
[ಬದಲಾಯಿಸಿ]- ↑ "Wine Support Honor Roll". Archived from the original on 2018-12-26. Retrieved 2009-12-16.
- ↑ "uTorrent For Linux Is Coming, Finally". TorrentFreak. Retrieved 2010-06-04.
- ↑ "FAQ: How can µTorrent be so small and so fast?". BitTorrent, Inc. Archived from the original on 2009-12-12. Retrieved 2009-12-16.
- ↑ "Thunder Blasts uTorrent's Market Share Away". TorrentFreak. 2009-12-04. Retrieved 2009-12-16.
- ↑ ೫.೦ ೫.೧ "BitTorrent Inc Buys uTorrent". TorrentFreak. 2006-12-07. Retrieved 2009-12-16.
- ↑ http://www.theregister.co.uk/2009/09/10/ipv6_traffic_surge/
- ↑ "Forum: TRANSLATORS NEEDED!". BitTorrent, Inc. 2006-07-02. Retrieved 2009-12-16.
- ↑ "Forum: User Interface Design". BitTorrent, Inc. Retrieved 2009-12-16.
- ↑ "Read this first - Falcon introduction (2.1 build 18069) - Forums - µTorrent - The Lightweight and Efficient BitTorrent Client". Forum.utorrent.com. Retrieved 2010-06-04.
- ↑ "Documentation: How to Make a Torrent". BitTorrent, Inc. Archived from the original on 2009-12-13. Retrieved 2009-12-16.
- ↑ ೧೧.೦ ೧೧.೧ "µTorrent 1.8.5 released - Forums - µTorrent - The Lightweight and Efficient BitTorrent Client". Forum.utorrent.com. Retrieved 2010-06-04.
- ↑ "FAQ: What are µTorrent's system requirements? (Archived version)". BitTorrent, Inc. Archived from the original on 2008-06-19.
- ↑ "FAQ: What are µTorrent's system requirements?". BitTorrent, Inc. Archived from the original on 2010-03-04. Retrieved 2010-03-02.
- ↑ "Forum: The search bypass nanotorrent.com (post by Admin "Firon")". BitTorrent, Inc. Archived from the original on 2009-05-16. Retrieved 2009-12-16.
- ↑ ೧೫.೦ ೧೫.೧ "uTorrent Sign Six Month PeerFactor Agreement". Slyck.com. 2006-03-04. Archived from the original on 2008-12-21. Retrieved 2009-12-16.
- ↑ "uTorrent, PeerFactor deal". p2pnet. 2006-03-04. Archived from the original on 2008-12-26. Retrieved 2009-12-16.
- ↑ "Bizarre uTorrent, PeerFactor deal". p2pnet. 2006-03-06. Archived from the original on 2008-12-23. Retrieved 2009-12-16.
- ↑ "FAQ: Is there a Linux or Mac version?". BitTorrent, Inc. Archived from the original on 2009-12-16. Retrieved 2009-12-16.
- ↑ https://www.utorrent.com/downloads/mac
- ↑ "uTorrent Releases Long-Awaited Mac Version". TorrentFreak. 2008-11-27. Retrieved 2009-12-16.
- ↑ "Forum: µTorrent 1.8.2 released". BitTorrent, Inc. 2009-01-24. Retrieved 2009-12-16.
- ↑ "uTorrent Is Going to Make Money With a Toolbar". TorrentFreak. 2009-04-22. Retrieved 2009-12-16.
- ↑ "Forum: µTorrent Namesake (post by creator "Ludde")". Ludvig Strigeus. 2005-09-20. Archived from the original on 2009-10-18. Retrieved 2009-12-16.
- ↑ ೨೪.೦ ೨೪.೧ "uTorrent Easter Eggs". Archived from the original on 2010-09-02. Retrieved 2010-08-31.
- ↑ "Review: µTorrent 1.2.2". PC Magazine. 2006-11-06. Archived from the original on 2009-04-13. Retrieved 2009-12-16.
- ↑ [33] ^ ಪಿಸಿ ಮ್ಯಾಗಜೀನ್ ಪ್ರಕಟಣೆ 01-MAR-08
- ↑ ಪಿಸಿ ವರ್ಲ್ಡ್. ಪ್ರಕಟಣೆ 01-MAY-07
- ↑ Iliofotou, Marios; Siganos, Georgos; Yang, Xiaoyuan; Rodriguez, Pablo (2009-08). "Comparing BitTorrent Clients in the Wild: The Case of Download Speed" (PDF). University of California, Riverside & TorrentFreak. Archived from the original (PDF) on 2011-09-06. Retrieved 2010-04-11.
{{cite journal}}
: Check date values in:|date=
(help); Cite journal requires|journal=
(help) - ↑ "What Are The Good BitTorrent Software Packages?". About.com. August 2009. Archived from the original on 2009-02-01. Retrieved 2009-12-16.
- ↑ "The Best of BitTorrent". Wired.com. 2006-10-23. Archived from the original on 2013-01-05. Retrieved 2009-12-16.
- ↑ "Labs test: Torrent Clients". Australian PC Authority. 2006-03-14. Retrieved 2009-12-16.
{{cite web}}
: External link in
(help)|publisher=
- ↑ "Best of the Best: The Hive Five Winners". Lifehacker. 2008-09-21. Archived from the original on 2009-12-13. Retrieved 2009-12-16.
- ↑ "Review: µTorrent". CNET. 2008-11-06. Retrieved 2009-12-16.
- ↑ [೧]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ಅಂತರಜಾಲತಾಣ
- uಟೊರೆಂಟ್: ಎ ಬಿಗಿನರ್ಸ್ ಗೈಡ್ ಟು ಬಿಟ್ಟೊರೆಂಟ್ ಡೌನ್ಲೋಡಿಂಗ್ Archived 2009-03-08 ವೇಬ್ಯಾಕ್ ಮೆಷಿನ್ ನಲ್ಲಿ. ಜೇರಡ್ M ಅವರಿಂದ.
- p2pನೆಟ್ uಟೊರೆಂಟ್ ಇಂಟರ್ವ್ಯೂ Archived 2012-12-20 at Archive.is ಅಲೆಕ್ಸ್ Hಅವರಿಂದ
- ಕ್ಯಾನ್ ಗ್ರೇಟ್ ಸಾಫ್ಟ್ವೇರ್ ಲೀವ್ ಇನ್ ೧೩೦ ಕಿಲೊಬೈಟ್ಸ್? Archived 2006-07-08 ವೇಬ್ಯಾಕ್ ಮೆಷಿನ್ ನಲ್ಲಿ. ಜಾರ್ಜ್ ಓ ಅವರಿಂದ
- CS1 errors: missing periodical
- CS1 errors: dates
- CS1 errors: external links
- CS1 errors: generic name
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using Infobox software with unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Webarchive template archiveis links
- 2005 ತಂತ್ರಾಂಶ
- ಬಿಟ್ಟೊರೆಂಟ್ ಗ್ರಾಹಕಗಳು(ಅವಲಂಬಿ ಗಣಕಗಳು)
- C++ ತಂತ್ರಾಂಶ
- ಬಹು-ವೇದಿಕೆ ತಂತ್ರಾಂಶ
- ಉಚಿತ ಕಡತ ಹಂಚುವ ತಂತ್ರಾಂಶ
- ಉಚಿತ ತಂತ್ರಾಂಶ
- ಮ್ಯಾಕ್ OS X ತಂತ್ರಾಂಶ
- ವಿಂಡೋಸ್ ತಂತ್ರಾಂಶ