ವಿಷಯಕ್ಕೆ ಹೋಗು

ಉಪೇಂದ್ರ ಪೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(26-11-1895 to 13-12-1956) 'ಉಪೇಂದ್ರ ಪೈ' ಅವರ ಅಜ್ಜ, ಶ್ರೀ ರಂಗ ಪೈ ಅವರಿಗೆ, ೭ ಗಂಡು ಮಕ್ಕಳು ಹಾಗು ೩ ಹೆಣ್ಣು ಮಕ್ಕಳು. ಅವರಲ್ಲಿ ಅನಂತ ಪೈ ೪ ನೆಯ ಮಗ. ಅನಂತ ಪೈ ಅವರಿಗೆ ೪ ಗಂಡು ಮಕ್ಕಳು ಹಾಗೂ ಒಬ್ಬ ಮಗಳು. ಉಪೇಂದ್ರ ಎರಡನೆಯ ಮಗ.

ವಿದ್ಯಾಭ್ಯಾಸ

[ಬದಲಾಯಿಸಿ]

ಉಡುಪಿಯಲ್ಲಿ ಪ್ರಾಥಮಿಕ ಶಾಲೆಯ ನಂತರ, ಮಂಗಳೂರಿಗೆ ಹೋಗಿ ಮೊದಲ ವರ್ಷದ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದರು. ಮುಂದಿನ ವರ್ಷ, ಕುಮಟಾಗೆ ಹೋದರು. ಕೊನೆಗೆ ಪ್ರೌಢಶಾಲಾ ವಿದ್ಯಾಭ್ಯಾಸ ಕಾರವಾರದಲ್ಲಿ ಮುಗಿಯಿತು. ಕಾಲೇಜ್ ವಿದ್ಯಾಭ್ಯಾಸಕ್ಕೆ ಬರೋಡ ನಗರಕ್ಕೆ ಹೊದರು. ಅಲ್ಲಿ ಇಂಟರ್ ಮಿಡಿಯೇಟ್ ಮೊದಲ ವರ್ಷವನ್ನು ಮುಗಿಸಿದರು. ಕೊನೆಯ ವರ್ಷದ ಇಂಟರ್ಮೀಡಿಯೇಟ್ ಪರೀಕ್ಷೆಗೆ 'ಬೊಂಬಾಯಿನ ಎಲ್ಫಿನ್ ಸ್ಟನ್ ಕಾಲೇಜಿ'ಗೆ ಸೇರಿದರು. ಅಲ್ಲಿಂದ ಮುಂದೆ ಅವರು ವಿದ್ಯಾಭ್ಯಾಸದ ಕಡೆ ಹೆಚ್ಚಿಗೆ ಗಮನ ಕೊಡಲಿಲ್ಲ.

ವ್ಯಕ್ತಿತ್ವ

[ಬದಲಾಯಿಸಿ]

'ಉಪೇಂದ್ರ ಪೈ' [] ಒಳ್ಳೆಯ ಧಾರಾಳಿ, ಮತ್ತು ತಮ್ಮ ಕೈಲಾದ ಜನ ಸಹಾಯಕ್ಕೆ ಸದಾ ಸಿದ್ಧರು. ವಿಶಾಲವಾದ ಮನಸ್ಸು, ಮತ್ತು ಧಾರಾಳಿ, ಪರಿಶ್ರಮಿ, ಪ್ರಾಮಾಣಿಕ ಯಾವುದೇ ವಸ್ತುಗಳನ್ನು ಹಾಗೂ ಯುವ ಪರಿಶ್ರಮವನ್ನು ದುರುಪಯೋಗ ಮಾಡುವುದು ಅವರಿಗೆ ಸರಿ ಬೀಳುತ್ತಿರಲಿಲ್ಲ. ಅಪಾರ ಸಹನೆಯಿಂದ ತಮ್ಮ ಸರತಿ ಬರುವವರೆಗೂ ಕಾಯಲು ಯಾವಾಗಲೂ ಸಿದ್ಧರಾಗಿದ್ದರು. ಬರೋಡದಲ್ಲಿದ್ದಾಗ 'ಕಲಿಯಾನ್ ಪುರದಲ್ಲಿ'ಹಿಂದೂ ಹೈಯರ್ ಪ್ರೈಮರಿ ಸ್ಕೂಲ್' ನ ಆಡಳಿತವನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿದರು. ಮಹಾತ್ಮ ಗಾಂಧಿಯವರು ಕರೆಕೊಟ್ಟ 'ಹೋಂ ರೂಲ್' ಅಂದೋಳನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಬ್ರಿಟಿಷರ ಆಡಳಿತದ ವಿರುದ್ಧ ಜನರನ್ನು ಎಚ್ಚರಿಸಿದರು. 'ರಾಷ್ಟ್ರೀಯ ವಿದ್ಯಾಮಂದಿರ್' ಸ್ಥಾಪಿಸಿದರು. (ನ್ಯಾಷನಲ್ ಹೈಸ್ಕೂಲ್) ಉಡುಪಿಯಲ್ಲಿ ೧೯೩೨ ರಲ್ಲಿ 'ರಾಮಕೃಷ್ಣ ಥಿಯೇಟರ್' ಎಂದು ಹೆಸರಿನ 'ಫಿಲ್ಮ್ ಥಿಯೇಟರ್' ಸ್ಥಾಪಿಸಿದರು. 'ಚಿತ್ರಲೇಖ' ಎಂಬ 'ಫಿಲ್ಮ್ ಮ್ಯಾಗಜೈನ್' ಶುರುಮಾಡಿದರು.

ಶ್ರಿ.ತೋನ್ಸೆ ಉಪೇಂದ್ರ ಅನಂತ ಪೈ

[ಬದಲಾಯಿಸಿ]

ಪೈ ಪರಿವಾರದ ಉದ್ಯಮ ಶುರುವಾದದ್ದು, ಉಪೇಂದ್ರ ಪೈ ನೇಕಾರಿಗೆ ಮತ್ತು ರೈತರಿಗೆ ಧನ ಸಹಾಯ ಮಾಡುವ ಉದ್ದೇಶದಿಂದ,ಸ್ಥಾಪಿಸಿದ ಬ್ಯಾಂಕಿಂಗ್ ಸಂಸ್ಥೆ, 'ಕೆನರಾ ಇಂಡಸ್ಟ್ರಿಯಲ್ ಅಂಡ್ ಬ್ಯಾಂಕಿಂಗ್ ಸಿಂಡಿಕೇಟ್,' 'ಸಿಂಡಿಕೇಟ್ ಬ್ಯಾಂಕ್' ಗೆ ದಾರಿಯಾಯಿತು. ೧೯೪೩ ರಲ್ಲಿ ಆರಂಭಗೊಂಡ 'ಮಹಾರಾಷ್ಟ್ರ ಅಪೆಕ್ಸ್ ಕಾರ್ಪೋರೇಶನ್' ಎಂಬ ಸಂಸ್ಥೆ ಉಪೇಂದ್ರ ಪೈರಿಗೆ, ಬಹಳ ಪ್ರಿಯವಾದದ್ದು. ಆನಂತ್ ಪೈ ತಮ್ಮ ತನುಮನ ಧನಗಳನ್ನೂ ಹಾಗೂ ಆದುವರೆಗೂ ಗಳಿಸಿದ ತಮ್ಮ ಅನುಭವವನ್ನು ಆ ಸಂಸ್ಥೆಯ ಬೆಳವಣಿಗೆ ಮುಡಿಪಾಗಿಟ್ಟರು. ೧೯೫೬ ರಲ್ಲಿ 'ಮ್ಯಾನೇಜಿಂಗ್ ಡೈರೆಕ್ಟರ್ ಪೋಸ್ಟ್' ನಲ್ಲಿ ಕೆಲಸಮಾಡುತ್ತಿರುವಾಗಲೇ ತಮ್ಮ ಕೆಲಸದಿಂದ ನಿವೃತ್ತರಾದರು.

ಗ್ರಾಮ ಸೇವಾ ಪ್ರತಿಷ್ಠಾನ್ ಸ್ಥಾಪನೆ

[ಬದಲಾಯಿಸಿ]

'ಮಣಿಪಾಲ್ ಗ್ರಾಮ'ದಲ್ಲಿ ಆದ ಗಮನಾರ್ಹ ಸರ್ವತೋಮುಖ ಪ್ರಗತಿಯನ್ನು ಗಮನಿಸಿ, 'ಗ್ರಾಮ ಸೇವಾ ಪ್ರತಿಷ್ಠಾನ್' ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು. ಊರಿನ ಸಾವಿರಾರು ನಿವಾಸಿಗಳನ್ನು ಆಧ್ಯಾತ್ಮಿಕವಾಗಿ ಒಂದು ಮಾಡಲು 'ಗೀತಾ ಮಂದಿರ್' ಎಂಬ ಮಂದಿರವನ್ನು 'ಮಣಿಪಾಲ್' ನಲ್ಲಿ ಶುರು ಮಾಡಿದರು ಅಲ್ಲಿ 'ಭಗವದ್ಗೀತಾ ಪ್ರವಚನ'ಗಳನ್ನೂ ಆಯೋಜಿಸಿದರು. ಸರಳ ಜೀವನ, ತಮ್ಮ ಕೃತಿ ಮತ್ತು ಕಾರ್ಯಗಳಲ್ಲಿ ತಂದರು. 'ಮಹಾತ್ಮ ಗಾಂಧೀಜಿ'ಯವರ ವಿದೇಶಿ ವಸ್ತ್ರಗಳನ್ನು ನಿಷೇಧಿಸುವ ಕಾರ್ಯದಲ್ಲಿ ತಮ್ಮ ಸಹಕಾರವನ್ನು ಘೋಷಿಸಿದರು. ತಮ್ಮ ಜೀವನದುದ್ದಕ್ಕೂ ಸರಳ ಜೀವನಕ್ಕೆ ಬಹಳ ಒತ್ತುಕೊಟ್ಟರು.

ಉಲ್ಲೇಖಗಳು

[ಬದಲಾಯಿಸಿ]
  1. "Sri Tonse Upendra Anantha Pai". Archived from the original on 2014-05-22. Retrieved 2014-06-16.