ಇಚ್ಛಾಧಾರಿ ನಾಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಚ್ಛಾಧಾರಿ ನಾಗ, ಇಚ್ಛಾಧಾರಿ ನಾಗಿಣಿ
ಗುಂಪುಗಾರಿಕೆ ಪೌರಾಣಿಕ ಜೀವಿ.
ಉಪಗುಂಪು ಹಾವು.
ಇತರ ಹೆಸರುಗಳು ನಾಗ, ನಾಗಿನ್, ನಾಗಿಣಿ
ದೇಶ ಭಾರತ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ
ವಿವರಗಳು ಹಿಂದೂ

ಇಚ್ಛಧಾರಿ ನಾಗ್ (ಸ್ತ್ರೀಲಿಂಗ: ಇಚ್ಛಧಾರಿ ನಾಗಿನ್) ಭಾರತೀಯ ಜಾನಪದ ಮತ್ತು ಪೌರಾಣಿಕೆ ಕಥೆಗಳಲ್ಲಿ ಬರುವ ಆಕಾರವನ್ನು ಬದಲಾಯಿಸುವ ನಾಗರಹಾವುಗಳಾಗಿವೆ. ಇವುಗಳು ಹಾವಿನಿಂದ ಮನುಷ್ಯರೂಪಕ್ಕೆ ಮತ್ತು ಮನುಷ್ಯರೂಪದಿಂದ ಪುನಃ ಹಾವಾಗುವ ಶಕ್ತಿ ಹೊಂದಿವೆ ಎಂಬ ಕಥೆಗಳಿವೆ. ಅವರು ಶಿವನ ಮಹಾನ್ ಭಕ್ತರಾಗಿದ್ದಾರೆ.

ದಂತಕಥೆಗಳು[ಬದಲಾಯಿಸಿ]

ಕತೆಗಳಲ್ಲಿರುವಂತೆ ಸಾಮಾನ್ಯ ಗಂಡು ನಾಗರಹಾವು ಇಚ್ಚಾಧಾರಿ ನಾಗ (ಗಂಡು ಆಕಾರವನ್ನು ಬದಲಾಯಿಸುವ ನಾಗರಹಾವು) ಆಗುತ್ತದೆ ಮತ್ತು ಸಾಮಾನ್ಯ ಹೆಣ್ಣು ನಾಗರಹಾವು ೧೦೦ ವರ್ಷಗಳ ತಪಸ್ಸಿನ ನಂತರ ಇಚ್ಚಾಧಾರಿ ನಾಗಿನ್ (ಹೆಣ್ಣು ಆಕಾರವನ್ನು ಬದಲಾಯಿಸಿದ ನಾಗರಹಾವು ಆಗುತ್ತವೆ. ಶಿವನಿಂದ ಆಶೀರ್ವದಿಸಲ್ಪಟ್ಟ ನಂತರ ಅವರು ತಮ್ಮದೇ ಆದ ಮಾನವ ರೂಪವನ್ನು ಪಡೆಯುತ್ತಾರೆ. ಜೊತೆಗೆ ಇವು ಯಾವುದೇ ಜೀವಿಯ ಆಕಾರವನ್ನು ಹೊಂದುವ ಸಾಮರ್ಥ್ಯವನ್ನು ಪಡೆಯುತ್ತಾರೆ . ಇವುಗಳು ನೂರು ವರ್ಷಗಳಿಗಿಂತ ಹೆಚ್ಚು ಕಾಲವೂ ಬದುಕಬಹುದು.

ಇಚ್ಛಧಾರಿ ನಾಗಗಳು ಮತ್ತು ನಾಗಿಣಿಯರು ನಾಗಮಣಿ ಎಂಬ ಆಭರಣವನ್ನು ಹೊಂದಿರುತ್ತಾರೆ. ಇವು ಯಾವುದೇ ಅಮೂಲ್ಯವಾದ ಕಲ್ಲುಗಳಿಗಿಂತ ಹೆಚ್ಚು ಮೌಲ್ಯಯುತವಾಗಿದೆ. ಏಕೆಂದರೆ ಅದು ತನ್ನ ಮಾಲೀಕರನ್ನು ಮತ್ತೆ ಬದುಕಿಸುವ ಮತ್ತು ಅಪಾರವಾದ ಶಕ್ತಿಯನ್ನು ನೀಡುವ ಶಕ್ತಿಯನ್ನು ಹೊಂದಿದೆ. ಈ ನಾಗಮಣಿಯನ್ನು ಕದಿಯಲು ಪ್ರಯತ್ನಿಸಿದಾಗ ಆ ಜನರು ಹಾವು ಕಡಿತದಿಂದ ಸಾಯುತ್ತಾರೆ ಎಂದು ದಂತಕಥೆಗಳು ಹೇಳುತ್ತವೆ.

ಒಬ್ಬ ನಾಗ ಅಥವಾ ನಾಗಿಣಿಯನ್ನು ಕೊಲ್ಲುವಾಗ ಆ ಕೊಲೆಗಾರನ ಚಿತ್ರಣವು ಅವರ ಕಣ್ಣುಗಳಲ್ಲಿ ಮುದ್ರಿಸಲ್ಪಡುತ್ತದೆ ಎಂಬ ನಂಬಿಕೆಯಿದೆ . ಆ ನಾಗ/ನಾಗಿಣಿಯ ಸಂಗಾತಿ ಅಥವಾ ಕುಟುಂಬವು ಈ ಚಿತ್ರದಿಂದ ಕೊಲೆಗಾರರನ್ನು ಗುರುತಿಸುತ್ತದೆ ಮತ್ತು ಸೇಡು ತೀರಿಸಿಕೊಳ್ಳುತ್ತದೆ ಎಂದು ದಂತಕತೆಗಳು ಹೇಳುತ್ತವೆ . ಇದಕ್ಕೇ ಹಾವಿನ ದ್ವೇಷ ಹನ್ನೆರಡು ವರುಷ ಎಂಬ ಗಾದೆ ಮಾತು ಪ್ರಚಲಿತದಲ್ಲಿರಬಹುದು ಎಂದು ಕೆಲವರು ಹೇಳುತ್ತಾರೆ

ಸಪೇರಾ (ಸ್ನೇಕ್ ಚಾರ್ಮರ್) ಅಥವಾ ಹಾವಾಡಿಗ ಬಳಸುವ ಗಾಳಿ ವಾದ್ಯವಾದ ಪುಂಗಿಯ ಶಬ್ದವನ್ನು ಕೇಳಿದಾಗ ನಾಗ್ಗಳು ಮತ್ತು ನಾಗಿನ್ನರು/ನಾಗಿಣಿಯರು ತಮ್ಮ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ ಮತ್ತು ತಮ್ಮ ನಿಜವಾದ ರೂಪವನ್ನು ತೋರಿಸುತ್ತಾರೆ ಎಂನ ನಂಬಿಕೆಯಿದೆ.

ನಾಗಗಳು ಮತ್ತು ನಾಗಿನಗಳ ಲೋಕವನ್ನು ನಾಗ್ಲೋಕ್ ಎಂದು ಕರೆಯಲಾಗುತ್ತದೆ. ನಾಗ್ಲೋಕ್ ಅನ್ನು ನಾಗರಾಜ್ (ರಾಜ) ಅಥವಾ ನಾಗ್ರಾಣಿ (ರಾಣಿ) ಆಳುತ್ತಾರೆ. ಇದರಲ್ಲಿ ನಾಗ/ನಾಗಿನ್ನ ವಿವಿಧ ಕುಲಗಳು ಇವೆ. ಇಚ್ಛಧಾರಿ ನಾಗ್/ನಾಗಿನಿಯ ಶತ್ರುಗಳು ಮುಂಗುಸಿ, ಹದ್ದು ಮತ್ತು ನವಿಲು.

ಮಕ್ಕಳ ಕಾಮಿಕ್ಸ್[ಬದಲಾಯಿಸಿ]

ಇಚ್ಚಾಧಾರಿ ನಾಗ್ ಮತ್ತು ನಾಗಿನ್ ಬಗೆಗಿನ ದಂತಕಥೆಗಳನ್ನು ಅನೇಕ ಕಾಮಿಕ್ಸ್ ಮತ್ತು ಕಥೆಗಳಿಗೆ ಕಥಾವಸ್ತುವಿನ ಆಧಾರವಾಗಿ ಬಳಸಲಾಗಿದೆ. ಕಾಮಿಕ್ ಪುಸ್ತಕ ಸೂಪರ್ ಹೀರೋ ಪಾತ್ರವಾದ ನಾಗರಾಜ್ (ಕೋಬ್ರಾ-ಕಿಂಗ್) ಸಹ ಈ ದಂತಕಥೆಗಳನ್ನು ಆಧರಿಸಿದೆ. ಮತ್ತೊಂದು ಪ್ರಸಿದ್ಧ ಹಿಂದಿ ಹಾಸ್ಯ ಪಾತ್ರವಾದ ತೌಸಿ ಗಂಡು ಆಕಾರವನ್ನು ಬದಲಾಯಿಸುವ ಹಾವಾಗಿತ್ತು. ಇವುಗಳ ಹೊರತಾಗಿ, ಈ ಪರಿಕಲ್ಪನೆಯನ್ನು ಅನೇಕ ಮಕ್ಕಳ ಸಣ್ಣ ಕಥೆಗಳಿಗೆ ಬಳಸಲಾಗಿದೆ.  [ಸಾಕ್ಷ್ಯಾಧಾರ ಬೇಕಾಗಿದೆ][citation needed]

ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳು[ಬದಲಾಯಿಸಿ]

ಅನೇಕ ಬಾಲಿವುಡ್ ಚಲನಚಿತ್ರಗಳು ಈ ದಂತಕಥೆಗಳನ್ನು ಅಥವಾ ನಾಗರಾಜ್ ಅವರ ಪಾತ್ರವನ್ನು ಒಳಗೊಂಡಿವೆ, ಉದಾಹರಣೆಗೆ ನಾಗಿನ್ (೧೯೫೪), ನಾಗಿನಾ ಚಿತ್ರದಲ್ಲಿ ಶ್ರೀದೇವಿ, ನಾಗಿನ್ ನಲ್ಲಿ ರೀನಾ ರಾಯ್ (೧೯೭೬) ಮತ್ತು ನಚೇ ನಾಗಿನ್ ಗಲಿ ಗಲಿ (೧೯೮೯) ಆಯೀ ಮಿಲನ್ ಕಿ ರಾತ್ ಹಾಡು(೧೯೯೧) ನಾಗ್ ಚಂಪಾ ಹಾಡು (೧೯೫೮) ನಾಗಿನ್ ಔರ್ ಸಪೇರಾ ಹಾಡು (1969) ಪಹಾಡಿ ನಾಗಿನ್ ಚಲನಚಿತ್ರ (1964) ಶೇಷನಾಗ (೧೯೯೦) ತು ನಾಗಿನ್ ಮೈ ಸಪೇರಾ ಹಾಡು (೧೯೮೯) ಮತ್ತು ತುಮ್ ಮೇರೆ ಹೋ (೧೯೯೦).[೧]

2007ರಲ್ಲಿ, ಝೀ ಟಿವಿ ನಾಗಿನ್ ಎಂಬ ದೂರದರ್ಶನ ಸರಣಿಯು ಪ್ರಾರಂಭಿಸಿತು. ಇದರಲ್ಲಿ ಸಯಂತನಿ ಘೋಷ್ ನಾಗಿನ್ ಪಾತ್ರವನ್ನು ನಿರ್ವಹಿಸಿದರು.

2010ರಲ್ಲಿ ಹಿಸ್ಸ್ ಎಂಬ ಭಯಾನಕ ಸಾಹಸ ಚಿತ್ರ ತೆರೆಕಂಡಿತು . ಇದರಲ್ಲಿ ಮಲ್ಲಿಕಾ ಶೆರಾವತ್ ನಾಗಿನ್ ಪಾತ್ರದಲ್ಲಿ ನಟಿಸಿದರು.

2015ರಲ್ಲಿ ನಾಗಿನ್ ಎಂಬ ದೂರದರ್ಶನ ಸರಣಿಯನ್ನು ಕಲರ್ಸ್ ಟಿವಿಯಲ್ಲಿ ಪ್ರಾರಂಭಿಸಲಾಯಿತು . ನಾಗಿನ್ ಪಾತ್ರದಲ್ಲಿ ಮೌನಿ ರಾಯ್ ಮತ್ತು ಅದಾ ಖಾನ್ ನಟಿಸಿದ್ದಾರೆ. ಇದು ಭಾರತೀಯ ದೂರದರ್ಶನದಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಪಡೆದ ಕಾರ್ಯಕ್ರಮಗಳಲ್ಲಿ ಒಂದಾಯಿತು.

2016ರಲ್ಲಿ ನಿಕಿತಾನ್ ಧೀರ್, ಮೃಣಾಲ್ ಜೈನ್ ಮತ್ತು ಪರ್ಲ್ ವಿ ಪುರಿ ಅವರು ಇಚ್ಚಾಧಾರಿ ನಾಗ್ ಪಾತ್ರದಲ್ಲಿ ನಟಿಸಿದ ಧಾರಾವಾಹಿ ನಾಗಾರ್ಜುನ-ಏಕ್ ಯೋದ್ಧಾ ಪ್ರಾರಂಭವಾಯಿತು.

2016ರಲ್ಲಿ ಪ್ರಿಯಾಲ್ ಗೋರ್ ನಾಗಿನ್ ಪಾತ್ರದಲ್ಲಿ ನಟಿಸಿದ 'ಇಚ್ಛಾಪಿಯಾರಿ ನಾಗಿನ್' ಎಂಬ ಧಾರಾವಾಹಿ ಪ್ರಾರಂಭವಾಯಿತು.

ಆಕಾರವನ್ನು ಬದಲಾಯಿಸುವ ಹಾವಿನ ಪಾತ್ರವನ್ನು ಹೊಂದಿರುವ ಮತ್ತೊಂದು ದೂರದರ್ಶನ ಸರಣಿಯೆಂದರೆ ನಂದಿನಿ. ಇದು 2017ರ ಜನವರಿ 23ರಂದು ಪ್ರಸಾರವಾಗಲು ಪ್ರಾರಂಭಿಸಿತು. ಇದು ಏಕಕಾಲದಲ್ಲಿ ನಾಲ್ಕು ವಿಭಿನ್ನ ಭಾರತೀಯ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ತಮಿಳು (ಮೂಲ ಆವೃತ್ತಿ), ಕನ್ನಡ (ಮರು-ಚಿತ್ರೀಕರಿಸಿದ ಆವೃತ್ತಿ), ತೆಲುಗು(ಡಬ್) ಮತ್ತು ಮಲಯಾಳಂ (ಡಬ್ಡ್) ಈ ನಾಲ್ಕು ಆವೃತ್ತಿಗಳಾಗಿದ್ದವು,

ಇಚ್ಚಾಧಾರಿ ನಾಗಿನ್ ಕುರಿತಾದ ಮೊದಲ ಪಾಕಿಸ್ತಾನಿ ಧಾರಾವಾಹಿ ನಾಗಿನ್ ೧೭ ಏಪ್ರಿಲ್ ೨೦೧೭ ರಂದು ಪ್ರಸಾರವಾಯಿತು.[೨]

೨೦೧೯ರಲ್ಲಿ, ಫಿರ್ ಲೌತ್ ಆಯಿ ನಾಗಿನ್ ದಂಗಲ್ ಟಿವಿಯಲ್ಲಿ ಪ್ರಸಾರವಾಯಿತು. ನಿಕಿತಾ ಶರ್ಮಾ ನಾಗಿನಿಯಾಗಿ ನಟಿಸಿದ್ದಾರೆ.

೨೦೨೨ರಲ್ಲಿ, ದಂಗಲ್ ಟಿವಿ ಇಷ್ಕ್ ಕಿ ದಾಸ್ತಾನ್-ನಾಗಮಣಿ ಧಾರಾವಾಹಿಯನ್ನು ಪ್ರಸಾರ ಮಾಡಿತು . ಆದಿತ್ಯ ರೆಡಿಜ್ ಮತ್ತು ಅಲಿಯಾ ಘೋಷ್ ನಾಗ್ ಮತ್ತು ನಾಗಿನ್ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://cinemajadoo.wordpress.com
  2. "Geo Kahani launches new series". www.thenews.com.pk (in ಇಂಗ್ಲಿಷ್). Retrieved 2017-05-02.