ಆಹಾರ, ಪರಿಸರ ಮತ್ತು ಆರೋಗ್ಯ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಹಾರ, ಪರಿಸರ ಮತ್ತು ಆರೋಗ್ಯ
ಲೇಖಕರುಟ್ರಿಫರ್ ವಿಲಿಯಮ್ಸ್, ಅಲಿಸೌನ್ ಮೂನ್ ಮತ್ತು ಮಾರ್ಗರೆಟ್ ವಿಲಿಯಮ್ಸ್
ಅನುವಾದಕಡಾ. ಸಿ ಆರ್ ಚಂದ್ರಶೇಖರ್
ದೇಶಭಾರತ
ಭಾಷೆಕನ್ನಡ
ವಿಷಯಶಿಕ್ಷಣ
ಪ್ರಕಾರಆರೋಗ್ಯ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೨, ೭ನೇ ಮುದ್ರಣ
ಪುಟಗಳು೧೪೮
ಐಎಸ್‍ಬಿಎನ್978-81-7302-087-2

ಆಹಾರ, ಪರಿಸರ ಮತ್ತು ಆರೋಗ್ಯ ಟ್ರಿಫರ್ ವಿಲಿಯಮ್ಸ್, ಅಲಿಸೌನ್ ಮೂನ್ ಮತ್ತು ಮಾರ್ಗರೆಟ್ ವಿಲಿಯಮ್ಸ್ ಅವರು ಬರೆದ ಪುಸ್ತಕ. ಕನ್ನಡಕ್ಕೆ ಅನುವಾದಿಸಿದವರು : ಡಾ. ಸಿ ಆರ್ ಚಂದ್ರಶೇಖರ್. ಈ ಪುಸ್ತಕವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಮಾರ್ಗದರ್ಶನ ಕೈಪಿಡಿಯಾಗಿ ರೂಪಿಸಲಾಗಿದೆ. ತಮ್ಮ ವಿದ್ಯಾರ್ಥಿಗಳ ವಿಶಿಷ್ಟ ಸನ್ನಿವೇಶಗಳಿಗೆ ತಕ್ಕಂತೆ ತಮ್ಮ ಮೋಧನಾ ಕಾರ್ಯಕ್ರಮಗಳನ್ನು ರೂಪಿಸಲು ಇದನ್ನು ಅವರು ಆಧಾರವಾಗಿಟ್ಟುಕೊಳ್ಳಬಹುದಾಗಿದೆ ಆಹಾರವನ್ನು ಸಂಗ್ರಹಿಸುವುದು ಮತ್ತು ಉಪಯೋಗಿಸುವುದು, ನೀರನ್ನು ಕುಡಿಯುವುದಕ್ಕೆ ಯೋಗ್ಯವನ್ನಾಗಿ ಮಾಡುವುದು, ಕಸದ ವಿಲೇವಾರಿ ಹಾಗೂ ಮನೆಯ ಪರಿಸರವನ್ನು ಸ್ವಚ್ಛವಾಗಿಡುವುದರ ಮೂಲಕ ಆರೋಗ್ಯವನ್ನು ಕಾಪಾಡುವುದು- ಇತ್ಯಾದಿ ಪ್ರಾಯೋಗಿಕ ವಿಷಯಗಳು ಈ ಪುಸ್ತಕದ ಅಧ್ಯಾಯಗಳಾಗಿವೆ. ದೇಹಕ್ಕೆ ನೀರು ಏಕೆ ಅಗತ್ಯ (ಭೇದಿಯಿಂದಾಗಿ ಉಂಟಾಗುವ ನಿರ್ಜಲ ಸ್ಥಿತಿಯ ಅಪಾಯವೂ ಸೇರಿದಂತೆ), ಆರೋಗ್ಯವಾಗಿರಲು ದೇಹಕ್ಕೆ ಅಗತ್ಯವಾದ ಆಹಾರದ ವಿಧಗಳು, ಯಾವುದೇ ಸಮುದಾಯದಲ್ಲಿ ಸೋಂಕು ಮತ್ತು ಕಾಯಿಲೆಗಳು ಹರಡುವ ವಿಧಾನ ಗಳನ್ನು ಮಕ್ಕಳಿಗೆ ವಿವರಿಸುವ ಮಾರ್ಗದರ್ಶನವೂ ಈ ಪುಸ್ತಕದಲ್ಲಿದೆ. ಶಿಕ್ಷಕರು ತಾವು ಬೋಧಿಸುವ ವಿಷಯಗಳನ್ನು, ಈಗಾಗಲೇ ಮಕ್ಕಳಿಗೆ ತಿಳಿದಿರುವ ಮಾಹಿತಿಗೆ, ಸ್ಥಳೀಯ ಆಚರಣೆಗಳಿಗೆ, ಲಭ್ಯವಿರುವ ಸಂಪನ್ಮೂಲಗಳಿಗೆ, ಈಗಾಗಲೇ ಸಮುದಾಯದಲ್ಲಿ ಕೈಗೊಳ್ಳಲಾಗಿರುವ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಹೇಳಲು ಈ ಪುಸ್ತಕದಲ್ಲಿ ಹೆಚ್ಚು ಒತ್ತು ಕೊಡಲಾಗಿದೆ. ಸ್ಥಳೀಯ ಆರೋಗ್ಯ ಕಾರ್ಯಕರ್ತರ ಸಹಕಾರ ಮತ್ತು ಸಲಹೆಗಳನ್ನು ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಪಡೆಯಲು ಸೂಚಿಸಲಾಗಿದೆ. ಪುಸ್ತಕ ಸಾಕಷ್ಟು ಚಿತ್ರಗಳಿಂದ ಕೂಡಿದೆ. ಪ್ರಾಯೋಗಿಕವಾಗಿ ತಾವೇ ಮಾಡಬಹುದಾದಂತಹ ಅನೇಕ ಚಟುವಟಿಕೆಗಳನ್ನು ಮಕ್ಕಳಿಗೆ ಸೂಚಿಸಲಾಗಿದ್ದು, ಅವರು ತಾವು ಕಲಿತದ್ದನ್ನು ಮಾಡಿ ನೋಡಿ, ತಾವು ಕಲಿತ ಜ್ಞಾನ, ಶಾಲೆಯಿಂದ ಹೊರಗೆ ತಮ್ಮ ಜೀವನದಲ್ಲಿ ಹೇಗೆ ಪ್ರಸ್ತುತವಾಗಿದೆ ಎಂದು ತಿಳಿಯಲು ಅವಕಾಶವಿದೆ. ಅನೇಕ ಚಟುವಟಿಕೆಗಳಲ್ಲಿ ತಂದೆತಾಯಿಗಳು ಮತ್ತು ಸಮುದಾಯದ ಮುಖಂಡರು ತಾವೂ ಸಹಕರಿಸಿ ಭಾಗವಹಿಸಲು ಪ್ರೋತ್ಸಾಹ ಕೊಡಲಾಗಿದೆ. ಪುಸ್ತಕವು ಶಿಫಾರಸು ಮಾಡುವ ಆಹಾರ, ಪರಿಸರ ಮತ್ತು ಆರೋಗ್ಯದ ಬಗ್ಗೆ ಸಂದೇಶಗಳು ಎಲ್ಲೆಡೆ ಹರಡಲು ಇದೂ ಒಂದು ವಿಧಾನ.

ಬಾಹ್ಯ ಸಂಪರ್ಕ[ಬದಲಾಯಿಸಿ]