ಆಹಾರ ಮತ್ತು ಕೃಷಿ ಸಂಘಟನೆ
Food and Agriculture Organization of the United Nations
| |
---|---|
Org type | Specialized Agency |
Acronyms | FAO |
Head | Jacques Diouf |
Status | active |
Established | 16 October 1945 in Rome |
Headquarters | Rome, Italy |
Website | www |
Parent org | ECOSOC |
(ವಿಶ್ವಸಂಘಟನೆ )ಸಂಯುಕ್ತ ರಾಷ್ಟ್ರಸಂಘಟನೆ ಯ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್ (FAO , ಅಥವಾ ಫ್ರೆಂಚ್ ನಲ್ಲಿರುವ ಆರ್ಗನೈಸೇಷನ್ ಡೇಸ್ ನೇಷನ್ಸ್ ಯುನೈಸ್ ಪೋರ್ ಲ್’ಆಲಿಮಂಟೇಷನ್ ಎಟ್ ಲ್’ಅಗ್ರಿಕಲ್ಚರ್ ನ ಸಮಾನಪದವಾದ ONUAA ಆಗಿದೆ) ಎಂಬುದು ಸಂಯುಕ್ತ ರಾಷ್ಟ್ರ ಸಂಘಟನೆಯ ವಿಶೇಷ ಪ್ರತಿನಿಧಿಯಾಗಿದೆ. ಇದು ಹಸಿವನ್ನು ನೀಗಿಸಲು ಅಂತರರಾಷ್ಟ್ರೀಯ ಪ್ರಯತ್ನ ಮಾಡುತ್ತಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸೇವೆಸಲ್ಲಿಸುವ ಮೂಲಕ FAO ತಟಸ್ಥ ವೇದಿಕೆಯಂತೆ ಕಾರ್ಯನಿರ್ವಹಿಸುತ್ತಿದೆ. ಈ ವೇದಿಕೆಯಲ್ಲಿ ಎಲ್ಲಾ ರಾಷ್ಟ್ರಗಳು, ಒಪ್ಪಂದಗಳನ್ನು ನಿರ್ಣಯಿಸಲು ಮತ್ತು ಕಾರ್ಯನೀತಿಯನ್ನು ಚರ್ಚಿಸಲು ಸಭೆ ಸೇರುತ್ತವೆ. FAO ಜ್ಞಾನ ಮತ್ತು ಮಾಹಿತಿಯ ಸಂಪನ್ಮೂಲವಾಗಿದೆ. ಅಲ್ಲದೇ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮತ್ತು ಆಧುನಿಕತೆಯ ಸಂಕ್ರಮಣದಲ್ಲಿರುವ ರಾಷ್ಟ್ರಗಳಿಗೆ ಇದು ನೆರವಾಗುತ್ತದೆ. ಇದು ಕೃಷಿ, ಅರಣ್ಯಪ್ರದೇಶ ಮತ್ತು ಮೀನುಗಾರಿಕೆ ಉದ್ಯೋಗಗಳನ್ನು ಆಧುನಿಕಗೊಳಿಸಿ ಅಭಿವೃದ್ಧಿಪಡಿಸುತ್ತಿದೆ. ಈ ಮೂಲಕ ಎಲ್ಲರಿಗೂ ಉತ್ತಮ ಪೌಷ್ಟಿಕಾಂಶ ಮತ್ತು ಆಹಾರ ಭದ್ರತೆಯನ್ನು ಒದಗಿಸುವ ಭರವಸೆ ನೀಡುತ್ತಿದೆ. ಇದರ ಲ್ಯಾಟಿನ್ ಭಾಷೆಯಲ್ಲಿರುವ ಧ್ಯೇಯ ಸೂತ್ರ, ಫಿಯೆಟ್ ಪ್ಯಾನೀಸ್ ಅನ್ನು "ಅಲ್ಲಿಯೂ ಬ್ರೆಡ್ (ಆಹಾರ)ಸಿಗಲಿ " ಎಂದು ಇಂಗ್ಲೀಷ್ ನಲ್ಲಿ ಅನುವಾದಿಸಲಾಗಿದೆ. As of 8 August 2008[update][[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]]FAO, 191 ಸದಸ್ಯ ರಾಷ್ಟ್ರಗಳನ್ನು , ಇದರ ಜೊತೆಯಲ್ಲಿ ಸಂಯೋಜಿತ ಸದಸ್ಯರಾಗಿರುವ ಯುರೋಪಿಯನ್ ಒಕ್ಕೂಟ ಮತ್ತು ಫೆರೋ ದ್ವೀಪಗಳನ್ನು ಹೊಂದಿದೆ.[೧]
ಹಿನ್ನೆಲೆ
[ಬದಲಾಯಿಸಿ]ವಿಶ್ವದಾದ್ಯಂತ ಕೃಷಿ ಮತ್ತು ಆಹಾರ ಪರಿಸ್ಥಿತಿ ಅವಲೋಕಿಸಲು, ಅಂತರರಾಷ್ಟ್ರೀಯ ಸಂಘಟನೆಯನ್ನು ಸ್ಥಾಪಿಸಬೇಕೆಂಬ ಪರಿಕಲ್ಪನೆ, 19 ನೇ ಶತಮಾನದ ಉತ್ತರಾರ್ಧ ಮತ್ತು 20 ನೇ ಶತಮಾನದ ಆರಂಭದಲ್ಲಿ ಅಂತರರಾಷ್ಟ್ರೀಯ ಕಾನೂನಿನ ಕ್ರೋಢೀಕರಣ ಕಾರ್ಯವಿಧಾನದಡಿ ಮೂಡಿ ಬಂತು. ಕಳೆದ 1905 ರ ಮೇ- ಜೂನ್ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಅಧಿವೇಶನವು ರೋಮ್ ನಲ್ಲಿ ನಡೆಯಿತು. ಈ ಸಭೆಯು ಅಂತರರಾಷ್ಟ್ರೀಯ ಕೃಷಿ ಸಂಘಟನೆ ಯನ್ನು ರಚಿಸುವುದಕ್ಕಾಗಿ ಅಂತರರಾಷ್ಟ್ರೀಯ ಒಪ್ಪಂದದ ಅಗತ್ಯವಿದೆ ಎಂಬ ತೀರ್ಮಾನಕ್ಕೆ ಬಂದಿತು.[೨] ಎರಡನೆ ವಿಶ್ವ ಯುದ್ಧದ ಸಮಯದಲ್ಲಿ ಅಂತರರಾಷ್ಟ್ರೀಯ ಕೃಷಿ ಸಂಘಟನೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೇ ಅಧಿಕೃತವಾಗಿ ಅದರ ಶಾಶ್ವತ ಸಮಿತಿಯ ನಿರ್ಣಯದಿಂದ 1948 ರ ಫೆಬ್ರವರಿ 27 ರಂದು ಅದನ್ನು ವಿಸರ್ಜಿಸಲಾಯಿತು. ಅದರ ಕಾರ್ಯಚಟುವಟಿಕೆಗಳನ್ನು ಹೊಸದಾಗಿ ರಚಿಸಿದ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್ ಗೆ ವರ್ಗಾಯಿಸಲಾಯಿತು.[೩]
ರಚನಾ ಕ್ರಮ ಮತ್ತು ಹಣಕಾಸು
[ಬದಲಾಯಿಸಿ]FAO ಅನ್ನು 1945 ರ ಅಕ್ಟೋಬರ್ 16 ರಂದು ಕೆನಡಾ ದ ಕ್ವಿಬೆಕ್ ನಲ್ಲಿರುವ ಕ್ಯುಬೆಕ್ ನಗರದಲ್ಲಿ ಸ್ಥಾಪಿಸಲಾಯಿತು. 1951ರಲ್ಲಿ ಅದರ ಕೇಂದ್ರ ಕಾರ್ಯಾಲಯವು, ಅಮೇರಿಕ ಸಂಯುಕ್ತ ಸಂಸ್ಥಾನದ ವಾಷಿಂಗ್ ಟನ್ D.C.ಯಿಂದ, ರೋಮ್ ನ ಇಟಲಿ ಗೆ ಬದಲಾಯಿತು. ಈ ನಿಯೋಗವನ್ನು ಸದಸ್ಯ ರಾಷ್ಟ್ರಗಳ ಅಧಿವೇಶನದ ಮೂಲಕ ನಿರ್ದೇಶಿಸಲಾಗುತ್ತದೆ. ಇದು ಸಂಘಟನೆಯ ಕಾರ್ಯಸೂಚಿಯನ್ನು ವಿಮರ್ಶಿಸಲು ಹಾಗು ಕೆಲಸದ ಕಾರ್ಯಕ್ರಮ ಮತ್ತು ಮುಂದಿನ ಎರಡು ವರ್ಷಗಳಿಗೆ ನಿಯೋಜಿಸಬೇಕಿರುವ ಆಯವ್ಯಯವನ್ನು(ಬಜೆಟ್) ಅಂಗೀಕರಿಸಲು ಎರಡು ವರ್ಷಗಳಿಗೊಮ್ಮೆ ಸಭೆ ಸೇರುತ್ತದೆ. ಅಧಿವೇಶನವು 49 ಸದಸ್ಯ ರಾಷ್ಟ್ರಗಳ ಸಮಿತಿಯನ್ನು ಆಯ್ಕೆ ಮಾಡುತ್ತದೆ. (ಇವು ಮೂರು ವರ್ಷಗಳ ಸರದಿಯಂತೆ ಕಾರ್ಯನಿರ್ವಹಿಸುತ್ತವೆ.) ಈ ಸಮಿತಿಯು ಮಧ್ಯಂತರ ಆಡಳಿತ ರಚನಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಈ ನಿಯೋಗದ ಮುಖ್ಯಸ್ಥರಾದ ಮಹಾನಿರ್ದೇಶಕರು ಇದರ ನೇತೃತ್ವವಹಿಸುತ್ತಾರೆ. FAO ಎಂಟು ಇಲಾಖೆಗಳನ್ನು ಒಳಗೊಂಡಿದೆ: ಆಡಳಿತ ಮತ್ತು ಹಣಕಾಸು ವಿಭಾಗ, ಕೃಷಿ ಮತ್ತು ಗ್ರಾಹಕ ರಕ್ಷಣಾ ವಿಭಾಗ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ವಿಭಾಗ, ಮೀನುಗಾರಿಕೆ ಮತ್ತು ಜಲಚರ ಸಾಕಾಣೆ ವಿಭಾಗ, ಅರಣ್ಯಪ್ರದೇಶ ವಿಭಾಗ, ಮಾಹಿತಿ-ಜ್ಞಾನ ಮತ್ತು ಸಂಪರ್ಕವ್ಯವಸ್ಥೆ ವಿಭಾಗ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ವಿಭಾಗ ಮತ್ತು ತಾಂತ್ರಿಕ ಸಹಕಾರ ವಿಭಾಗ.[೪] FAO ಸ್ಥಾಪನೆಯ ನಂತರ, ಮೊದಲ ಬಾರಿಗೆ ಕಾರ್ಯ ಚಟುವಟಿಕೆಯನ್ನು ವಿಕೇಂದ್ರೀಕರಿಸಲು, ನಿರ್ವಹಣೆ ಸುಲಭವಾಗಿಸಲು ಮತ್ತು ಬೆಲೆ ಇಳಿಕೆಗೆ, 1994 ರ ಆರಂಭದಲ್ಲಿ ಅತ್ಯಂತ ಪ್ರಮುಖವೆನ್ನಲಾದ ಪುನಃ ರಚನೆಗೆ ಒಳಪಟ್ಟಿತು. ಇದರ ಫಲವಾಗಿ, ವರ್ಷಕ್ಕೆ ಸುಮಾರು US$50 ಮಿಲಿಯನ್ ನಷ್ಟು ಹಣ ಉಳಿಸಬಹುದೆಂದು ಮನವರಿಕೆಯಾಯಿತು.
ಆಯವ್ಯಯ
[ಬದಲಾಯಿಸಿ]FAO ನ ನಿಯಮಿತ ಕಾರ್ಯಕ್ರಮಗಳ ಆಯವ್ಯಯವನ್ನು ಅದರ ಸದಸ್ಯರ ನಿಧಿ ಕೊಡುಗೆಯ ಮೂಲಕ FAO ಅಧಿವೇಶನದಲ್ಲಿ ಸಂಗ್ರಹಿಸಲಾಗುತ್ತದೆ. ಈ ಆಯವ್ಯಯ, ಅಗ್ರ ಶ್ರೇಣಿಯ ತಾಂತ್ರಿಕ ಕಾರ್ಯ, ಸಹಕಾರ ಮತ್ತು ಪಾಲುದಾರಿಕೆಗಳು,ಇದರಲ್ಲಿ ತಂತ್ರಜ್ಞಾನದ ಸಹಕಾರ ಕಾರ್ಯಕ್ರಮ,ಜ್ಞಾನ-ಮಾಹಿತಿ ವಿನಿಮಯ, ನೀತಿ-ಧೋರಣೆ ಮತ್ತು ಸಲಹಾ ನಿರ್ದೇಶನ ಮತ್ತು ಆಡಳಿತ, ಸರ್ಕಾರಿ ಮಟ್ಟದ ಆಡಳಿತಾಧಿಕಾರ ಮತ್ತು ಭದ್ರತೆಯನ್ನು ಒಳಗೊಂಡಿದೆ. 2008–2009 ರ ದ್ವೈವಾರ್ಷಿಕ FAO ನ ಆಯವ್ಯಯ US$929.8 ಮಿಲಿಯನ್. FAO ಅಧಿವೇಶನ ನಿಗದಿಪಡಿಸಿದ Euro/US ಡಾಲರ್ ವಿನಿಮಯದೊಂದಿಗೆ ಈ ಮೊತ್ತವನ್ನು ಹೊಂದಿಸಲಾಯಿತು. ಪ್ರಸ್ತುತದ ಆಯವ್ಯಯ ಯಾವುದೇ ಬೆಳವಣಿಗೆ ಇಲ್ಲದ ನಾಲ್ಕು ಅನುಕ್ರಮ ಆಯವ್ಯಯಗಳನ್ನೇ ಅನುಸರಿಸಿದೆ. ಸದಸ್ಯ ರಾಷ್ಟ್ರಗಳು 2001 ರಲ್ಲಿ ಪ್ರತಿ ಎರಡು ವರ್ಷಕ್ಕೆ US$650 ಮಿಲಿಯನ್ ನಂತೆ, 1994 ರಿಂದ FAO ನ ಆಯವ್ಯಯ ಮಂಡನೆಯನ್ನು ಸ್ಥಗಿತಗೊಳಿಸಿದವು. 2002-03 ನೇ ವರ್ಷಕ್ಕೆ ಆಯವ್ಯಯವನ್ನು ಸ್ವಲ್ಪ ಪ್ರಮಾಣದಲ್ಲಿ ಅಂದರೆ US$651.8 ಮಿಲಿಯನ್ ನಷ್ಟು ಹೆಚ್ಚಿಸಲಾಯಿತು. ಈ ಮೊತ್ತವು 2004-05 ನೇ ವರ್ಷದಲ್ಲಿ US$749 ಮಿಲಿಯನ್ ಆಯಿತು. ಆದರೆ ಈ ನಾಮಮಾತ್ರ ಏರಿಕೆ ವಾಸ್ತವವಾಗಿ ಆಗುತ್ತಿರುವ ಕುಸಿತವನ್ನು ತೋರುತ್ತದೆ.[೫] 2005 ರ ನವೆಂಬರ್ ನಲ್ಲಿ ನಡೆದ FAO ಆಡಳಿತ ಸಮಾವೇಶವು, 2006-2007 ಎರಡು ವರ್ಷಗಳಿಗೆ US$765.7 ಮಿಲಿಯನ್ ನಷ್ಟು ಆಯವ್ಯಯ ಹೆಚ್ಚಳಕ್ಕೆ ಒಪ್ಪಿಗೆ ನೀಡಿತು; ಭಾಗಶಃ ಮತ್ತೊಮ್ಮೆ ಈ ಹೆಚ್ಚಳವನ್ನು ಹಣದುಬ್ಬರದ ಕಾರಣದಿಂದ ಮಾಡಲಾಯಿತು.[೬]
ಮಹಾನಿರ್ದೇಶಕರು
[ಬದಲಾಯಿಸಿ]-
- ಸರ್ ಜಾನ್ ಬಾಯ್ಡ್ ಒರ್(UK):1945 ರ ಅಕ್ಟೋಬರ್ ನಿಂದ 1948 ರ ಏಪ್ರಿಲ್ ವರೆಗೆ
- ನಾರೀಸ್ E. ಡಾಡ್ (U.S.) : 1948 ರ ಏಪ್ರಿಲ್ –1953 ರ ಡಿಸೆಂಬರ್.
- ಫಿಲಿಪ್ V. ಕಾರ್ಡನ್ (U.S.) : 1954 ರ ಜನವರಿ – 1956 ರ ಏಪ್ರಿಲ್ .
- ಸರ್ ಹರ್ಬರ್ಟ್ ಬ್ರಾಡ್ಲೆ(UK) (acting) : 1956 ರ ಏಪ್ರಿಲ್ – 1956 ರ ನವೆಂಬರ್.
- ಬಿನಯ್ ರಂಜನ್ ಸೇನ್ (ಭಾರತ): 1956 ರ ನವೆಂಬರ್–1967 ರ ಡಿಸೆಂಬರ್.
- ಅಡ್ಕೆ ಹೆಂಡ್ರಿಕ್ ಬೋರ್ಮ್ (Neth.) : 1968 ರ ಜನವರಿ –1975 ರ ಡಿಸೆಂಬರ್.
- ಎಡೌರ್ಡ್ ಸೌಮ (ಲೆಬ್ಯನಾನ್):1976 ರ ಜನವರಿ–1993 ರ ಡಿಸೆಂಬರ್.
- ಜಾಕ್ಯೂಸ್ ಡಿಯೋಫ್(ಸೆನೆಗಲ್):1994 ರ ಜನವರಿ ಯಿಂದ ಪ್ರಸ್ತುತ
ಉಪ ಮಹಾನಿರ್ದೇಶಕರು
[ಬದಲಾಯಿಸಿ]-
- ವಿಲಿಯಂ ನೋಬೆಲ್ ಕ್ಲಾರ್ಕ್(US):1948.
- ಸರ್ ಹರ್ಬರ್ಟ್ ಬ್ರಾಡ್ಲೆ(UK) : 1948–1958.
- ಫ್ರೆಡ್ ರಿಚ್ ಟ್ರಾಗಾಟ್ ವಾಹ್ಲೆನ್(ಸ್ವಿಜರ್ಲೆಂಡ್) : 1958–1959.
- ನಾರ್ಮನ್ C. ರೈಟ್ (UK):1959–1963.
- ಒರಿಸ್ V.ವೆಲ್ಸ್ (US):1963–1971.
- ರಾಯ್ I. ಜಾಕ್ಸನ್ (US):1971–1978.
- ರಾಲ್ಫ್ W.ಫಿಲಿಪ್ಸ್ (US):1978–1981.
- ಎಡ್ವರ್ಡ್ M.ವೆಸ್ಟ್ (UK):1981–1985.
- ಡಿಕ್ಲ್ಯಾನ್ J.ವಾಲ್ಟನ್(ಐರ್ಲೆಂಡ್):1986–1987.
- ಹೊವರ್ಡ್ ಜೊರ್ಟ್ (US):1992–1997.
- ವಿಕ್ರಮ್ J.ಶಾಹ್ (ಅಡ್ ಪರ್ಸೊನಮ್)(UK): 1992–1995.
- ಡೇವಿಡ್ A. ಹ್ಯಾರ್ಚರಿಕ್(US: 1998–2007.
- ಜೇಮ್ಸ್ G.ಬಟ್ಲರ್ (US):2008–ಪ್ರಸ್ತುತ.
FAO ಕಛೇರಿಗಳು
[ಬದಲಾಯಿಸಿ]ವಿಶ್ವ ಪ್ರಧಾನ ಕಾರ್ಯಾಲಯ
[ಬದಲಾಯಿಸಿ]ವಿಶ್ವದ ಪ್ರಧಾನ ಕಾರ್ಯಾಲಯವು ರೋಮ್ ನಲ್ಲಿ ಹಿಂದೆ ಇದ್ದ ಇಟಲಿಯನ್ ಈಸ್ಟ್ ಆಫ್ರಿಕಾ ವಿಭಾಗದಲ್ಲಿದೆ. ಈ ಕಟ್ಟಡದ ಅತ್ಯಂತ ಪ್ರಮುಖ ಲಕ್ಷಣವೆಂದರೆ ಆಕ್ಸಮ್ ಒಬ್ಲಿಸ್ಕ್,(ಅರಸುಗಳ ಆಳ್ವಿಕೆಯ ಕಾಲದ ಗೊಮ್ಮಟ ಆಕಾರ) ನಿಯೋಗದ ಕಚೇರಿ ಮುಂಭಾಗದಲ್ಲಿದ್ದರೂ ಕೂಡ, ಇಟಲಿಯನ್ ಸರ್ಕಾರ ಅದರ ಹೊರಾಂಗಣವನ್ನು ಮಾತ್ರ FAO ಗೆ ನೀಡಿದೆ. ಇದನ್ನು ಬೆನಿಟೋ ಮುಸೊಲಿನಿಯ ಸೈನ್ಯದ ಮೂಲಕ ಇಥಿಯೋಪಿಯ ದಿಂದ 1937 ರಲ್ಲಿ ಯುದ್ಧದ ಪರಿಹಾರ ನಿಧಿಯಾಗಿ ಪಡೆದುಕೊಳ್ಳಲಾಯಿತು. ಅಲ್ಲದೇ 2005 ರ ಏಪ್ರಿಲ್ 18 ರಂದು ಹಿಂದಿರುಗಿಸಲಾಯಿತು.
ಪ್ರಾದೇಶಿಕ ಕಛೇರಿಗಳು
[ಬದಲಾಯಿಸಿ]- ಅಕ್ರಾ, ಘಾನಾದಲ್ಲಿರುವ ಆಫ್ರಿಕಾದ ಪ್ರಾದೇಶಿಕ ಕಛೇರಿ
- ಚಿಲಿಯ ಸ್ಯಾಂಟಿಗೊ ನಲ್ಲಿರುವ, ಲ್ಯಾಟಿನ್ ಅಮೇರಿಕದ ಮತ್ತು ಕ್ಯಾರಿಬಿಯನ್ ನ ಪ್ರಾದೇಶಿಕ ಕಛೇರಿ
- ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿರುವ ಏಷ್ಯಾ ಮತ್ತು ಪೆಸಿಫಿಕ್ ನ ಪ್ರಾದೇಶಿಕ ಕಛೇರಿ
- ಈಜಿಪ್ಟ್ ನ ಕೈರೊದಲ್ಲಿರುವ ಸಮೀಪ ಪ್ರಾಚ್ಯದ ಪ್ರಾದೇಶಿಕ ಕಛೇರಿ
- ಹಂಗೇರಿಯ ಬುಡಾಪೆಸ್ಟ್ ನಲ್ಲಿರುವ ಯುರೋಪ್ ನ ಪ್ರಾದೇಶಿಕ ಕಛೇರಿ
ಉಪ ಪ್ರಾಂತೀಯ ಕಛೇರಿಗಳು
[ಬದಲಾಯಿಸಿ]- ಜಿಂಬಾಬ್ವೆಯ ಹರೇರ್ ನಲ್ಲಿರುವ ದಕ್ಷಿಣ ಮತ್ತು ಪೂರ್ವ ಆಫ್ರಿಕದ ಉಪಪ್ರಾಂತೀಯ ಕಛೇರಿ
- ಸಮೋವಾದ ಅಪಿಯಾದಲ್ಲಿರುವ ಪೆಸಿಫಿಕ್ ದ್ವೀಪಗಳ ಉಪಪ್ರಾಂತೀಯ ಕಛೇರಿ.
- ಹಂಗೇರಿಯ ಬುಡಾಪೆಸ್ಟ್ ನಲ್ಲಿರುವ ಮಧ್ಯ ಮತ್ತು ಪೂರ್ವ ಯುರೋಪ್ ನ ಉಪಪ್ರಾಂತೀಯ ಕಛೇರಿ
- ಬಾರ್ಬಡಾಸ್ ನ ಬ್ರಿಡ್ಜ್ ಟೌನ್ ನಲ್ಲಿರುವ ಕ್ಯಾರಿಬೀಯನ್ ನ ಉಪಪ್ರಾಂತೀಯ ಕಛೇರಿ
- ಟುನಿಸಿಯಾದ ಟುನಿಸ್ ನಲ್ಲಿರುವ ಉತ್ತರ ಆಫ್ರಿಕಾದ ಉಪಪ್ರಾಂತೀಯ ಕಛೇರಿ
- ಟರ್ಕಿಯ ಅಂಕಾರದಲ್ಲಿರುವ ಮಧ್ಯ ಏಷ್ಯಾದ ಉಪಪ್ರಾಂತೀಯ ಕಛೇರಿ
- ಘಾನಾದ ಅಕ್ರಾದಲ್ಲಿರುವ ಪಶ್ಚಿಮ ಆಫ್ರಿಕಾದ (SFW) ಉಪ-ಪ್ರಾಂತೀಯ ಕಛೇರಿ
- ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿರುವ ಪೂರ್ವ ಆಫ್ರಿಕಾದ (SFE) ಉಪ-ಪ್ರಾಂತೀಯ ಕಛೇರಿ
- ಗ್ಯಾಬೋನ್ ನ ಲಿಬ್ರೆವಿಲ್ಲೆಯಲ್ಲಿರುವ ಮಧ್ಯ ಆಫ್ರಿಕಾದ (SFC) ಉಪ-ಪ್ರಾಂತೀಯ ಕಛೇರಿ
- ಪನಾಮಾದ ಪನಾಮಾ ನಗರದಲ್ಲಿರುವ ಮಧ್ಯ ಅಮೇರಿಕಾದ (SLM) ಉಪ-ಪ್ರಾಂತೀಯ ಕಛೇರಿ
ಸಂಪರ್ಕ ಕಛೇರಿಗಳು
[ಬದಲಾಯಿಸಿ]- ಜಿನೀವಾದಲ್ಲಿನ ವಿಶ್ವ ಸಂಘಟನೆಯೊಂದಿಗಿರುವ ಸಂಪರ್ಕ ಕಛೇರಿ
- ವಾಷಿಂಗ್ಟನ್ D.C.ಯಲ್ಲಿರುವ ಉತ್ತರ ಅಮೇರಿಕಾದ ಸಂಪರ್ಕ ಕಛೇರಿ
- ನ್ಯೂಯಾರ್ಕ್ ನಲ್ಲಿರುವಂತಹ ವಿಶ್ವ ಸಂಘಟನೆಯೊಂದಿಗಿರುವ ಸಂಪರ್ಕ ಕಛೇರಿ
- ಯೊಕೊಹ್ಮದಲ್ಲಿರುವ ಜಪಾನಿನ ಸಂಪರ್ಕ ಕಛೇರಿ
- ಬ್ರೂಸೆಲ್ಸ್ ನಲ್ಲಿರುವ ಯುರೋಪಿಯನ್ ಒಕ್ಕೂಟ ಮತ್ತು ಬೆಲ್ಜಿಯಂನೊಂದಿಗಿರುವ ಸಂಪರ್ಕ ಕಛೇರಿ
ಯೋಜಿತ ಕಾರ್ಯಕ್ರಮಗಳು ಮತ್ತು ಸಾಧನೆಗಳು
[ಬದಲಾಯಿಸಿ]ಆಹಾರದ ಭದ್ರತೆಯ ಮೇಲೆ ವಿಶ್ವ ಶೃಂಗಸಭೆ
[ಬದಲಾಯಿಸಿ]ಆಹಾರ ಭದ್ರತೆಯ ಮೇಲೆ ನಡೆದ ವಿಶ್ವ ಶೃಂಗ ಸಭೆ,ರೋಮ್, ಇಟಲಿಯಲ್ಲಿ 2009 ರ ನವೆಂಬರ್ 16 ಮತ್ತು 18 ರ ಮಧ್ಯೆ ನಡೆಯಿತು. FAO ನ ಮಹಾನಿರ್ದೇಶಕರಾದ, ಜಾಕ್ಯೂಸ್ ಡಿಯೊಫ್ ರವರ ಪ್ರಸ್ತಾಪದ ಮೇರೆಗೆ FAO ದ ಪರಿಷತ್ತು, ಶೃಂಗಸಭೆ ನಡೆಸುವ ನಿರ್ಧಾರ ಮಾಡಿತು. ಸರ್ಕಾರದ ಮತ್ತು ರಾಷ್ಟ್ರಗಳ ಅರವತ್ತು ಮುಖ್ಯಸ್ಥರು ಶೃಂಗಸಭೆಯಲ್ಲಿ ಉಪಸ್ಥಿತರಿದ್ದರು. ಭೂಮಿಯ ಮೇಲಿರುವ ಹಸಿವನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ನಿರ್ಮೂಲನೆ ಮಾಡುತ್ತೇವೆ ಎಂಬ ಘೋಷವಾಕ್ಯದ, ನವೀಕರಿಸಿದ ಪ್ರತಿಜ್ಞೆಯನ್ನು ರಾಷ್ಟ್ರಗಳು ಒಮ್ಮತದಿಂದ ಒಪ್ಪಿಕೊಂಡವು.[೭]
ಆಹಾರದ ಬಿಕ್ಕಟ್ಟಿಗೆ FAO ನ ಪ್ರತಿಕ್ರಿಯೆ
[ಬದಲಾಯಿಸಿ]2007 ರ ಡಿಸೆಂಬರ್ ನಲ್ಲಿ FAO , ಸಣ್ಣ ಇಳುವರಿದಾರರ ನೆರವಿಗಾಗಿ, ಉತ್ಪಾದನೆ ಹೆಚ್ಚಿಸಲು ಹಾಗು ಹೆಚ್ಚು ಆದಾಯ ಗಳಿಸುವಂತೆ ಮಾಡಲು, ಆಹಾರದ ಬೆಲೆಗಳನ್ನು ಏರಿಸುವ ಮೂಲಕ ಮೊದಲ ಹೆಜ್ಜೆಯನ್ನಿಟ್ಟಿತು. ಮೊದಲ ಹೆಜ್ಜೆಯಡಿಯಲ್ಲಿಯೇ FAO, UN ಹೈ-ಲೆವೆಲ್ ಟಾಸ್ಕ್ ಫೋರ್ಸ್ ನ (ಉನ್ನತಮಟ್ಟದ ಕಾರ್ಯಪಡೆಯ)ಕಾರ್ಯಕ್ಕೆ ಕೊಡುಗೆ ನೀಡಿತು, ಇದು ಜಾಗತಿಕ ಆಹಾರದ ಬಿಕ್ಕಟ್ಟಿನ ಮೇಲೆ ಕಾರ್ಯ ನಿರ್ವಹಿಸುತ್ತಿತ್ತು. ಇದರ ಕಾರ್ಯಾಚರಣೆಗೆ ಸಮಗ್ರತೆಯನ್ನೊಳಗೊಂಡ ಕ್ರಿಯಾ ಚೌಕಟ್ಟನ್ನು ಒದಗಿಸಿತು. FAO ಸುಮಾರು 25 ರಾಷ್ಟ್ರಗಳಲ್ಲಿ ಯೋಜನೆಗಳನ್ನು ಹಮ್ಮಿಕೊಂಡಿತು. ಅಲ್ಲದೇ ಸುಮಾರು 60 ರಾಷ್ಟ್ರಗಳಲ್ಲಿ ಇಂಟರ್ ಏಜೆನ್ಸಿ ಮಿಷಿನ್ ಅನ್ನು(ಅಂತರ್ ಕಾರ್ಯಧ್ಯೇಯ) ಕಾರ್ಯರೂಪಕ್ಕೆ ತಂದಿತು. ಇವುಗಳನ್ನು ಜಾಗತಿಕ ಮಾಹಿತಿ ಹಾಗು ಆಹಾರ ಮತ್ತು ಕೃಷಿಯ ಬಗೆಗಿನ ಪ್ರಾಥಮಿಕ ಎಚ್ಚರಿಕೆ ವ್ಯವಸ್ಥೆಯ ಮೂಲಕ ಪ್ರಮಾಣಾನುಸಾರವಾಗಿ ವರ್ಧಿಸಿತು. ಅಲ್ಲದೇ ಆಹಾರ ಉತ್ಪಾದನೆ ಹೆಚ್ಚಿಸಲು ಸರ್ಕಾರದ ಪ್ರಯತ್ನಗಳಿಗೆ ಬೆಂಬಲ ನೀಡಿತು. ಕೃಷಿಯಲ್ಲಿ ಇನ್ನಷ್ಟು ಬಂಡವಾಳ ಹೂಡಲು ಸೂಚಿಸುವ ಮೂಲಕ ಸರ್ಕಾರಗಳಿಗೆ ಕಾರ್ಯಗತಗೊಳಿಸುವ ನೀತಿ-ಸೂತ್ರಗಳ ಸಲಹೆಗಳನ್ನು ಒದಗಿಸಿತು. ಇದು ಯುರೋಪಿಯನ್ ಒಕ್ಕೂಟದ ಜೊತೆ ಕೈಜೋಡಿಸಿ ಕಾರ್ಯನಿರ್ವಹಿಸಿದೆ. ಹೈಟಿಯಲ್ಲಿರುವ ಉತ್ತಮ ಗುಣಮಟ್ಟದ ಬೀಜಗಳನ್ನು ಹೇರಳ ಪ್ರಮಾಣದಲ್ಲಿ ವಿತರಿಸಲು ಮತ್ತು ಇಳುವರಿ ದ್ವಿಗುಣಗೊಳಿಸಲು US$10.2 ಮಿಲಿಯನ್ ನ ಕಾರ್ಯಯೋಜನೆಯನ್ನು ಹಾಕಿಕೊಂಡಿತ್ತು ,ಈ ಕಾರ್ಯಯೋಜನೆಯು ಇದರ ಕಾರ್ಯಚಟುವಟಿಕೆಗಳಿಗೆ ಇರುವ ಒಂದು ಉದಾಹರಣೆಯಾಗಿದೆ.[೮] ಈ ಯೋಜನೆಯಿಂದಾಗಿ ಆಹಾರದ ಉತ್ಪಾದನೆ ಹೆಚ್ಚಿತು,ಇದರಿಂದಾಗಿ ಕಡಿಮೆ ಬೆಲೆಯಲ್ಲಿ ಆಹಾರ ಒದಗಿಸಲು ಸಾಧ್ಯವಾಗಿ, ಕೃಷಿಕರ ಆದಾಯವನ್ನೂ ಹೆಚ್ಚಿಸಲಾಯಿತು.
FAO–EU ಪಾಲುದಾರಿಕೆ
[ಬದಲಾಯಿಸಿ]FAO ಮತ್ತು ಯುರೋಪಿಯನ್ ಒಕ್ಕೂಟ, ಒಟ್ಟು €125 ಮಿಲಿಯನ್ ಮೌಲ್ಯದ ನೆರವಿನ ನಿಧಿಯನ್ನು (US$170 ಮಿಲಿಯನ್) ಒದಗಿಸಲು ಆರಂಭಿಕ ಸಹಕಾರ ಒಪ್ಪಂದಕ್ಕೆ 2009 ರ ಮೇ ಯಲ್ಲಿ ಸಹಿ ಹಾಕಿದವು. ಅಧಿಕ ಹಾನಿ ಅನುಭವಿಸಿದ ಸಣ್ಣ ರೈತರ ರಾಷ್ಟ್ರಗಳಿಗೆ ಬೆಲೆ ಏರಿಕೆಯ ಮೂಲಕ ಬೆಂಬಲ ನೀಡಲು ಈ ಒಪ್ಪಂದ ಮಾಡಲಾಯಿತು. ಏಡ್ ಪ್ಯಾಕೇಜ್ ಸವಲತ್ತು EU ನ €1 ಬಿಲಿಯನ್ ನೆರವಿನ ಆಹಾರ ಭದ್ರತೆಯ ಮೂಲಕ ಹುಟ್ಟಿಕೊಂಡಿತು. ಇದನ್ನು ಜಾಗತಿಕ ಆಹಾರದ ಬಿಕ್ಕಟ್ಟಿನ ಮೇಲೆ ಮತ್ತು ಅತಿ ಶೀಘ್ರದಲ್ಲಿ ಆಗಬೇಕಿರುವ ಕಾರ್ಯಕ್ರಮಗಳ ಮೇಲೆ FAO ಗಮನಹರಿಸಲೆಂದು , UN ನ ಮಹಾಕಾರ್ಯದರ್ಶಿಯ ಅತ್ಯುನ್ನತ ಕಾರ್ಯಪಡೆಯೊಂದಿಗೆ ಇದರ ಕಾರ್ಯಾಚರಣೆ ಆರಂಭಿಸಲಾಯಿತು.[೯] FAO,25 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸಲು ಸುಮಾರು ಒಟ್ಟು €200 ಮಿಲಿಯನ್ ನಷ್ಟು ನಿಧಿ ಪಡೆದುಕೊಂಡಿತು. ಇದರಲ್ಲಿ €15.4 ಮಿಲಿಯನ್ ನಷ್ಟು ನೆರವು ಜಿಂಬಾಬ್ವೆಗೆ ಹೋಯಿತು.[೧೦]
ಆಹಾರ ಭದ್ರತೆಯ ಯೋಜನಾ ಕಾರ್ಯಕ್ರಮಗಳು
[ಬದಲಾಯಿಸಿ]ಮಿಲೇನಿಯಂ ಡೆವಲಪ್ಮೆಂಟ್ ಗೋಲ್ಸ್ ನ (ಸಹಸ್ರಮಾನ ಅಭಿವೃದ್ಧಿ ಗುರಿಗಳು)ಅದರ ಬದ್ಧತೆಯ ಭಾಗವೆಂಬಂತೆ ವಿಶ್ವದಲ್ಲಿ 2015 ರ ಹೊತ್ತಿಗೆ(ಪ್ರಸ್ತುತ 1 ಬಿಲಿಯನ್ (ನೂರು ಕೋಟಿ)ಜನರನ್ನು ತಲುಪಲಿದೆ ಎಂದು ಅಂದಾಜುಮಾಡಲಾಗಿದೆ.) ಹಸಿವಿನ ಪ್ರಮಾಣವನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡಬೇಕೆಂಬ ಗುರಿಯನ್ನು ತಲುಪುವ FAO ನ ಪ್ರಮುಖ ಉಪಕ್ರಮ, ಆಹಾರ ಭದ್ರತೆಗೆಂದು ಹಾಕಿಕೊಂಡ ವಿಶೇಷ ಕಾರ್ಯಕ್ರಮವಾಗಿದೆ. ವಿಶ್ವದಾದ್ಯಂತ ಸುಮಾರು 100 ರಾಷ್ಟ್ರಗಳಲ್ಲಿ ಈ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಈ ಕಾರ್ಯಕ್ರಮವು, ಹಸಿವು, ಬಡತನ ಮತ್ತು ಪೋಷಣೆಯ ಕೊರತೆಯ ನಿರ್ಮೂಲನೆಗೆ ಪರಿಣಾಮಕಾರಿ ಮತ್ತು ಸ್ಪಷ್ಟವಾದ ಪರಿಹಾರ ನೀಡಿದೆ. ಪ್ರಸ್ತುತ 102 ರಾಷ್ಟ್ರಗಳು ಈ ಕಾರ್ಯಕ್ರಮದಲ್ಲಿ ಕಾರ್ಯನಿರತವಾಗಿವೆ. ಇವುಗಳಲ್ಲಿ ಸರಿಸುಮಾರು30 ರಾಷ್ಟ್ರಗಳು, ಪ್ರಾಯೋಗಿಕತೆಯಿಂದ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ವರ್ಗಾವಣೆಗೊಳ್ಳಲು ಪ್ರಾರಂಭಿಸಿವೆ. FAO ತನ್ನ ಕಾರ್ಯಾಚರಣೆಯ ಪ್ರಭಾವವನ್ನು ಗರಿಷ್ಠಗೊಳಿಸಲು, ತಾನು ಕಾರ್ಯ ನಿರ್ವಹಿಸುವ ರಾಷ್ಟ್ರಗಳಲ್ಲಿ ಒಡೆತನಕ್ಕೆ ಮತ್ತು ಸ್ಥಳೀಯ ಸ್ವಶಕ್ತಿ ಪರಮಾಧಿಕಾರಕ್ಕೆ ಪ್ರೋತ್ಸಾಹ ನೀಡಿತು.
ತುರ್ತುಸ್ಥಿತಿಗಳಲ್ಲಿನ ಪ್ರತಿಕ್ರಿಯೆ
[ಬದಲಾಯಿಸಿ]FAO,ಯು ತುರ್ತುಸ್ಥಿತಿ ತಪ್ಪಿಸಲು, ಶಮನಗೊಳಿಸಲು, ಸೂಕ್ತವಾಗಿ ಸ್ಪಂದಿಸಲು ಮತ್ತು ಅದಕ್ಕೆ ಸಿದ್ದಗೊಳ್ಳುವುದಕ್ಕೆ ರಾಷ್ಟ್ರಗಳಿಗೆ ಸಹಾಯ ಮಾಡುತ್ತದೆ. FAO , ಆಪತ್ತು ಪರಿಸ್ಥಿತಿಯನ್ನು ಎದುರಿಸುವ ಸಿದ್ಧತಾ ಸಾಮರ್ಥ್ಯದ ಕಡೆಗೆ ಮತ್ತು ಆಹಾರ ಭದ್ರತೆಯ ಮೇಲುಂಟಾಗಬಹುದಾದ ತುರ್ತುಸ್ಥಿತಿಯ ಶಮನದ ಕಡೆಗೆ ಹೆಚ್ಚು ಗಮನ ನೀಡುತ್ತದೆ. ಪ್ರತಿಕೂಲ ಪರಿಸ್ಥಿತಿಯ ಪೂರ್ವ ಮುನ್ಸೂಚನೆ ಮತ್ತು ಮೊದಲೇ ಎಚ್ಚರಿಕೆ ನೀಡುತ್ತದೆ,ಅಗತ್ಯಗಳನ್ನು ಅಂದಾಜು ಮಾಡುತ್ತದೆ. ಅಲ್ಲದೇ ಪುನರ್ರಚನೆ ಮತ್ತು ಅಭಿವೃದ್ಧಿಗೆ ಪರಿಹಾರದ ಮೂಲಕ ಬದಲಾವಣೆ ತರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.ಆ ಸಮಯದ ಬಿಕ್ಕಟ್ಟಿನ ಪ್ರಮುಖ ಕಾರಣಗಳ ವಿಶ್ಲೇಷಣೆಯನ್ನು ಸುಧಾರಿಸುತ್ತದೆ, ಅಂತಹ ಪರಿಸ್ಥಿತಿ ಎದುರಿಸಲು ಸ್ಥಳೀಯವಾಗಿ ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ ಇದು ತುರ್ತುಸ್ಥಿತಿ ಎದುರಿಸಲು ರಾಷ್ಟ್ರಗಳಿಗೆ ನೆರವಾಗುತ್ತದೆ. ಪೂರ್ವ ಆಫ್ರಿಕಾದ ಕಡಿಮೆ ಪ್ರಮಾಣದ ಇಳುವರಿಯ ಸ್ಥೂಲ ಚಿತ್ರಣ ನೀಡಿರುವ ಇತ್ತೀಚಿನ ವರದಿ ಅದರ ಕಾರ್ಯವೈಖರಿಗೆ ಉದಾಹರಣೆಯಾಗಿದೆ.[೧೧]
ಆಹಾರ ತುರ್ತುಸ್ಥಿತಿಯ ಆರಂಭಿಕ ಎಚ್ಚರಿಕೆ
[ಬದಲಾಯಿಸಿ]FAO ನ ಗ್ಲೋಬಲ್ ಇನ್ಫಾರ್ಮೆಷನ್ ಅಂಡ್ ಅರ್ಲಿ ವಾರ್ನಿಂಗ್ ಅಂಡ್ ಇನ್ಫಾರ್ಮೆಷನ್ ಸಿಸ್ಟಮ್ (GIEWS),ವಿಶ್ವದ ಆಹಾರ ಪೂರೈಕೆ/ಬೇಡಿಕೆಯ ಉಸ್ತುವಾರಿ ನೋಡಿಕೊಳ್ಳುತ್ತದೆ. ಅಲ್ಲದೇ ಬೆಳೆ ಇಳುವರಿ,ಉತ್ಪಾದನಾ ಪ್ರಮಾಣದ ಬಗ್ಗೆ ಚುರುಕಾಗಿ ಮಾಹಿತಿ ಕೊಡುವುದರೊಂದಿಗೆ ಅಂತರರಾಷ್ಟ್ರೀಯ ಸಮೂದಾಯವನ್ನು ಎಚ್ಚರಿಸುತ್ತದೆ. ಇದು ಜಾಗತಿಕವಾಗಿ, ಪ್ರಾದೇಶಿಕವಾಗಿ ಮತ್ತು ರಾಷ್ಟ್ರವಾರು ಆಧರಿಸಿದ ಆಹಾರ ಭದ್ರತೆಯಪರಿಸ್ಥಿತಿಯನ್ನು [೧೨] ಕುರಿತು ಚುರುಕಾಗಿ ಮಾಹಿತಿ ನೀಡುತ್ತದೆ. ಆಹಾರ ತುರ್ತುಸ್ಥಿತಿ ಸನಿಹದಲ್ಲಿಯೇ ಸಂಭವಿಸಬಹುದಾದ ಸಾಧ್ಯತೆಗಳಿದ್ದಾಗ ಈ ವ್ಯವಸ್ಥೆಯು, ಕ್ಷಿಪ್ರಗತಿಯಲ್ಲಿ ಬೆಳೆ ಮತ್ತು ಆಹಾರ ಸರಬರಾಜು ಅಂದಾಜು ಮಾಡುವ ನಿಯೋಗವನ್ನು ಕಳುಹಿಸಿಕೊಡುತ್ತದೆ. ಇದು ಕೆಲವೊಮ್ಮೆ ವಿಶ್ವ ಆಹಾರ ಯೋಜನಾ ಕಾರ್ಯಕ್ರಮದೊಡನೆ ಜಂಟಿಯಾಗಿ ಮತ್ತು ಕೆಲವೊಮ್ಮೆ ಮುಂದಿನ ಮಧ್ಯಸ್ಥಿಕೆಗೆ ಮತ್ತು ಸಹಾಯಕ್ಕೆ ಪೂರ್ವಗಾಮಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಸಮಗ್ರ ಬೆಳೆ ಪಿಡುಗು ನಿರ್ವಹಣೆ
[ಬದಲಾಯಿಸಿ]1990ರ ಸಂದರ್ಭದಲ್ಲಿ, ಏಷ್ಯಾದಲ್ಲಿ ಅಕ್ಕಿಯ ಉತ್ಪಾದನೆಗಾಗಿ ಇಂಟಿಗ್ರೇಟೆಡ್ ಪೆಸ್ಟ್ ಮ್ಯಾನೇಂಜ್ಮೆಂಟ್ (ಸಮಗ್ರ ಬೆಳೆ ಪಿಡುಗು ನಿರ್ವಹಣೆ)ಅನ್ನು ರಚಿಸುವಲ್ಲಿ FAO ಪ್ರಮುಖ ಪಾತ್ರವಹಿಸಿದೆ. ನೂರಾರು ಸಾವಿರಾರು ಕೃಷಿಕರಿಗೆ, ಫಾರ್ಮರ್ ಫೀಲ್ಡ್ ಸ್ಕೂಲ್(FFS) [೧೮] Archived 2013-03-12 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಸಂಘಟನೆಯ ನೆರವು ಬಳಸಿಕೊಂಡು ರೈತರಿಗೆ ಪರ್ಯಾಯ ತಿಳಿವಳಿಕೆಯ ತರಬೇತಿ ನೀಡಲಾಯಿತು. FAO ನಿರ್ವಹಿಸಿದ ಅನೇಕ ಕಾರ್ಯಕ್ರಮಗಳಂತೆ ಫಾರ್ಮರ್ ಫೀಲ್ಡ್ ಸ್ಕೂಲ್ ಗೆ , ದ್ವಿಪಕ್ಷೀಯ ಟ್ರಸ್ಟ್ ಫಂಡ್ ನಿಂದ(ದತ್ತಿನಿಧಿಯಿಂದ) ಧನಸಹಾಯ ದೊರೆಯಿತು. ಇದರ ಜೊತೆಯಲ್ಲಿ ಆಸ್ಟ್ರೇಲಿಯಾ ,ನೆದರ್ಲ್ಯಾಂಡ್, ನಾರ್ವೆ, ಸ್ವಿಜರ್ಲೆಂಡ್ ಧನಸಹಾಯ ಮಾಡಿದ ಪ್ರಮುಖ ರಾಷ್ಟ್ರಗಳಾಗಿವೆ. NGO (ಸರ್ಕಾರೇತರ)ಸಂಘಟನೆಗಳು ಬಹುಪಾಲು FAO ನ ಪ್ರಯತ್ನವನ್ನು ಪ್ರಶಂಸಿಸಿವೆ.ಇಲ್ಲದಿದ್ದರೆ ಅವುಗಳಿಂದ ಸಂಘಟನೆಯ ಕಾರ್ಯಗಳು ಹೆಚ್ಚು ಮಟ್ಟದಲ್ಲಿ ಟೀಕಿಸಲ್ಪಡುತ್ತಿದ್ದವು.
ಗಡಿಯಾಚೆಯ ಕ್ರಿಮಿಕೀಟಗಳು ಮತ್ತು ರೋಗಗಳು
[ಬದಲಾಯಿಸಿ]FAO , 1994 ರಲ್ಲಿ ಎಮರ್ಜೆನ್ಸಿ ಪ್ರಿವೆನ್ಷನ್ ಸಿಸ್ಟಮ್ ಫಾರ್ ಟ್ರ್ಯಾನ್ಸ್ ಬೌಂಡರಿ ಅನಿಮಲ್ ಅಂಡ್ ಪ್ಲಾಂಟ್ ಪೆಸ್ಟ್ಸ್ ಅಂಡ್ ಡಿಸೀಸಸ್ Archived 2010-11-15 ವೇಬ್ಯಾಕ್ ಮೆಷಿನ್ ನಲ್ಲಿ. ಅನ್ನು ಸ್ಥಾಪಿಸಿತು. ಆಯಾ ಸರ್ಕಾರದ ಪ್ರತಿಕ್ರಿಯೆಗಳನ್ನು ಒಟ್ಟುಗೂಡಿಸುವ ಮೂಲಕ ಸರ್ಕಾರದ ನೆರವಿಗೆ ಮುಂದಾಯಿತು. ಈ ಮೂಲಕ ಗೋಮಾರಿ ರೋಗ, ಕಾಲು ಮತ್ತು ಬಾಯಿ ರೋಗ ಹಾಗು ಹಕ್ಕಿ ಜ್ವರ ದಂತಹ ರೋಗಗಳ ನಿಯಂತ್ರಣದ ಕಡೆಗೆ ಗಮನ ನೀಡಿತು. ಜಾಗತಿಕ ಗೋಮಾರಿ ರೋಗ ನಿರ್ಮೂಲನೆ ಕಾರ್ಯಕ್ರಮ ಕೂಡ ಒಂದು ಪ್ರಮುಖ ಅಂಶವಾಗಿದೆ. ಇದನ್ನು ಏಷ್ಯಾ ಮತ್ತು ಆಫ್ರಿಕಾದ ಪ್ರದೇಶಗಳಲ್ಲಿ ವಿಶಾಲ ವ್ಯಾಪ್ತಿಯ ಪ್ರಮಾಣದಲ್ಲಿ ಹಮ್ಮಿಕೊಳ್ಳಲು ಅಭಿವೃದ್ಧಿಪಡಿಸಲಾಯಿತು. ಆದ್ದರಿಂದ ಈ ಪ್ರದೇಶಗಳು ಈಗ ವಿಸ್ತೃತ ಸಮಯಾವಧಿ ವರೆಗೆ ಪಶುಗಳ ಸಾಮಾನ್ಯ ಪಿಡುಗಾದ, ಗೋಮಾರಿ ರೋಗದಿಂದ ಮುಕ್ತವಾಗಿವೆ. ಇದೇ ಸಮಯದಲ್ಲಿ ಲೋಕಸ್ಟ್ ವಾಚ್,(ಪಿಡುಗು ಮೇಲ್ವಿಚಾರಣಾ ವ್ಯವಸ್ಥೆ) ವಿಶ್ವದಾದ್ಯಂತ ರೋಗಕಾರಕ ಪಿಡುಗಿನ ಪರಿಸ್ಥಿತಿಯನ್ನು ಗಮನಿಸುತ್ತಿರುತ್ತದೆ. ಅಲ್ಲದೇ ಇದರಿಂದ ತೊಂದರೆಗೊಳಗಾದ ರಾಷ್ಟ್ರಗಳಿಗೆ ಮತ್ತು ದಾನಿಗಳಿಗೆ ನಿರೀಕ್ಷಿತ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡುತ್ತಿರುತ್ತದೆ.
ಅಂತರರಾಷ್ಟ್ರೀಯ ಸಸ್ಯಕುಲದ ಸಂರಕ್ಷಣಾ ಸಮಾವೇಶ
[ಬದಲಾಯಿಸಿ]FAO , 1952 ರಲ್ಲಿ ಅಂತರರಾಷ್ಟ್ರೀಯ ಸಸ್ಯಕುಲ ಸಂರಕ್ಷಣಾ ಸಮಾವೇಶ(ಇಂಟರ್ ನ್ಯಾಷನಲ್ ಪ್ಲ್ಯಾಂಟ್ ಪ್ರೊಟೆಕ್ಷನ್ ಕನ್ವೆನ್ಷನ್) ಅಥವಾ IPPC ಯನ್ನು ರಚಿಸಿತು. ಈ ಅಂತರರಾಷ್ಟ್ರೀಯ ಒಡಂಬಡಿಕೆ ಸಂಘಟನೆ, ಸಸ್ಯ ರೋಗಗಳ ಮತ್ತು ಕ್ರಿಮಿಕೀಟಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ತಡೆಗಟ್ಟುವ ಕಾರ್ಯ ನಿರ್ವಹಿಸುತ್ತದೆ. ಇದರ ಕಾರ್ಯಚಟುವಟಿಕೆಯಲ್ಲಿ ಕೆಳಕಂಡವುಗಳನ್ನು ನೋಡಬಹುದು: ಸಸ್ಯ ಪಿಡುಗು ಕೀಟಗಳ ಪಟ್ಟಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು, ರೋಗಕಾರಕ ಕೀಟಗಳ ಹರಡುವಿಕೆಯನ್ನು ಪತ್ತೆಹಚ್ಚುವುದು, ಮತ್ತು ಸದಸ್ಯ ರಾಷ್ಟ್ರಗಳ ನಡುವೆ ತಾಂತ್ರಿಕ ನೆರವಿನ ಹೊಂದಾಣಿಕೆ ಬಗೆಗೆ ನೋಡಿಕೊಳ್ಳುವುದು. 2009 ರ ಜುಲೈನಲ್ಲಿ 173 ಸರ್ಕಾರಗಳು ಈ ಒಡಂಬಡಿಕೆಯನ್ನು ಅಳವಡಿಸಿಕೊಂಡವು.
ಸಸ್ಯ ಸಂಕುಲದ ತಳಿ ಅಭಿವೃದ್ಧಿ ಸಾಮರ್ಥ್ಯ ನಿರ್ಮಾಣಕ್ಕಾಗಿ ಜಾಗತಿಕ ಪಾಲುದಾರಿಕೆಯ ಮೊದಲಹೆಜ್ಜೆ
[ಬದಲಾಯಿಸಿ]ಸಸ್ಯ ಸಂಕುಲದ ತಳಿ ಅಭಿವೃದ್ಧಿ ಸಾಮರ್ಥ್ಯ ನಿರ್ಮಾಣಕ್ಕಾಗಿ ಜಾಗತಿಕ ಪಾಲುದಾರಿಕೆಯ ಮೊದಲ ಹೆಜ್ಜೆಯ (GIPB)ಯು, ಜಾಗತಿಕ ಪಾಲುದಾರಿಕೆಯಾಗಿದ್ದು, ಇದು ತಳಿಗಳ ಅಭಿವೃದ್ಧಿಗೆ ಅಗತ್ಯ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವ ಪ್ರಯತ್ನಕ್ಕೆ ಮೀಸಲಾಗಿದೆ.[೧೩] GIPB ಯ ನಿಯೋಗವು , ಆಹಾರ ಭದ್ರತೆಗಾಗಿ ಆಹಾರ ಬೆಳೆಗಳ ವಿವಿಧ ತಳಿ ವೃದ್ಧಿಸಲು ಅಭಿವೃದ್ಧಿಶೀಲ ರಾಷ್ಟ್ರಗಳ ಸಾಮರ್ಥ್ಯ ವರ್ಧಿಸಬೇಕಾಗಿದೆ. ಉತ್ತಮ ರೀತಿಯಲ್ಲಿ ಆಹಾರ ಧಾನ್ಯದ ಅಧಿಕ ಇಳುವರಿಯ ಬೆಳೆಸಂಕುಲವನ್ನು ಸುಧಾರಣೆಯ ನಿರಂತರತೆ ಮೂಲಕ, ವಿತರಣಾ ವ್ಯವಸ್ಥೆಯ ಸಮಗ್ರತೆಯಡಿ ಅಭಿವೃದ್ಧಿ ಹೆಚ್ಚಿಸಬಹುದು.[೧೪] ಸಂಭವನೀಯ ಅಪಾಯದ ಅಂಚಿನಲ್ಲಿರುವ ಸಸ್ಯ ತಳಿ ಅಭಿವೃದ್ಧಿ ಮಾಡುವವರು, ಅದಕ್ಕೆ ಸಂಭಂಧಿಸಿದ ನೇತಾರರು, ಆಡಳಿತ ನಿರ್ವಾಹಕರು ಮತ್ತು ತಂತ್ರಜ್ಞರು, ನಿರ್ದೇಶಕರು ಮತ್ತು , ದಾನಿಗಳು ಮತ್ತು ಪಾಲುದಾರರನ್ನು ಪರಿಣಾಮಕಾರಿ ಜಾಗತಿಕ ಸಂಪರ್ಕಜಾಲದ ಮೂಲಕ ಒಟ್ಟಿಗೆ ಸೇರುವಂತೆ ಮಾಡುವುದು ಇದರ ಅಂತಿಮ ಗುರಿಯಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಸ್ಯ ತಳಿ ಬೆಳೆಸುವ ಸಾಮರ್ಥ್ಯ ಹೆಚ್ಚಿಸುವುದು ಬಿಕ್ಕಟ್ಟಿನ ಸ್ಥಿತಿ ಎನಿಸಿದೆ. ಬಡತನದಲ್ಲಿರುವ ಇವುಗಳು ಅರ್ಥಪೂರ್ಣ ಫಲಿತಾಂಶ ಪಡೆಯುವುದು ಕಷ್ಟಕರವಾಗಿದೆ. ಇದನ್ನು ಸಾಧಿಸುವುದು ಹಾಗು ಹಸಿವಿನ ಪ್ರಮಾಣ ಕಡಿಮೆ ಮಾಡುವುದು, ಹಾಗು ಪ್ರಸ್ತುತದಲ್ಲಿ ಪೀಡಿಸುತ್ತಿರುವ ಚಿಂತಾಜನಕ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟ. ಸಸ್ಯದ ಹೊಸತಳಿ ಬೆಳೆಸುವಿಕೆಯು, ಅತ್ಯಂತ ಮಹತ್ವದೆಂದು ಪರಿಗಣಿಸಲಾಗಿರುವ ವಿಜ್ಞಾನವಾಗಿದೆ. ಆನುವಂಶಿಕ ಮತ್ತು ಅಳವಡಿಕೆ ಆಧಾರಿತ, ಕೃಷಿ ವ್ಯವಸ್ಥೆಯಾಗಿದೆ. ಇದನ್ನು ಆಯ್ಕೆ ಮಾಡಿಕೊಂಡ ಸಾಂಪ್ರದಾಯಿಕ ತಂತ್ರಜ್ಞಾನ ವಿಧಾನ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಸಂಯೋಜಿಸಿ ಮಾಡಲಾಗುತ್ತದೆ. ಬಿಕ್ಕಟ್ಟು ಮತ್ತೆ ಬರದಂತೆ ತಡೆಗಟ್ಟುವುದು ಮತ್ತು ಅದನ್ನು ಸಮರ್ಥವಾಗಿ ಎದುರಿಸುವುದು ಅಗತ್ಯವಾಗಿದೆ. ಉದಾಹರಣೆಗೆ, ಆಹಾರದ ಬೆಲೆ ಹೆಚ್ಚಳ ಮತ್ತು ಬೆಳೆಯಾಧಾರಿತ ಸಂಪನ್ಮೂಲಗಳಿಗೆ ಹೆಚ್ಚಾದ ಬೇಡಿಕೆಗಳಿಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುವುದು.
ಕೊಡೆಕ್ಸ್ ಅಲೈಮೆಂಟರಿಯಸ್ FAO ದ (ಅಧಿಕೃತ ವೆಬ್ ಸೈಟ್)
[ಬದಲಾಯಿಸಿ]FAO ಮತ್ತು ವಿಶ್ವ ಆರೋಗ್ಯ ಸಂಘಟನೆಗಳು 1963 ರಲ್ಲಿ ಕೊಡೆಕ್ಸ್ ಅಲೈಮೆಂಟರಿಯಸ್ ಕಮಿಷನ್ ಅನ್ನು ರಚಿಸಿದವು. ಈ ಆಯೋಗವನ್ನು ಜಂಟಿಯಾಗಿ FAO/WHO ನ ಆಹಾರ ಗುಣಮಟ್ಟದ ಕಾರ್ಯಕ್ರಮದಡಿ, ಆಹಾರದ ಗುಣಮಟ್ಟ, ಕೋಡ್ ಆಫ್ ಪ್ರಾಕ್ಟೀಸ್ ನಂತಹ ಮಾರ್ಗದರ್ಶಿ ಸೂತ್ರ ಮತ್ತು ಪಠ್ಯಗಳನ್ನು ಅಭಿವೃದ್ಧಿಪಡಿಸಲು ಕೈಗೆತ್ತಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪ್ರಮುಖ ಗುರಿಯೆಂದರೆ; ಗ್ರಾಹಕನ ಆರೋಗ್ಯ ರಕ್ಷಣೆ, ವಂಚನೆರಹಿತ ವಹಿವಾಟಿನ ಭರವಸೆ ನೀಡುವುದು ಹಾಗು ಅಂತರಸರ್ಕಾರದ ಮತ್ತು ಸರ್ಕಾರೇತರ ಸಂಘಟನೆಗಗಳು ಕೈಗೊಳ್ಳುವ ಎಲ್ಲಾ ಆಹಾರ ಗುಣಮಟ್ಟ ಕಾರ್ಯದ ಸಹಕಾರ ಕಾರ್ಯಗಳನ್ನು ಪ್ರೋತ್ಸಾಹಿಸುವುದು.
FAO ಅಂಕಿಅಂಶಗಳು
[ಬದಲಾಯಿಸಿ]FAO ನ ಅಂಕಿಅಂಶ ವಿಭಾಗವು FAOSTAT ಅನ್ನು ಬಿಡುಗಡೆ ಮಾಡುತ್ತದೆ. ಇದು ಆನ್ ಲೈನ್ ನ ಬಹುಭಾಷಿಕ ದತ್ತಾಂಶ ಸಂಗ್ರಹವಾಗಿದ್ದು, ಪ್ರಸ್ತುತದಲ್ಲಿ ಸುಮಾರು 210 ರಾಷ್ಟ್ರಗಳು ಮತ್ತು ಆಡಳಿತ ಪ್ರದೇಶಗಳ ಕೃಷಿ, ಪೌಷ್ಟಿಕಾಂಶ, ಮೀನುಗಾರಿಕೆ, ಅರಣ್ಯ ಸಂರಕ್ಷಣೆ, ಆಹಾರಕ್ಕಾಗಿ ಸರ್ಕಾರಗಳ ನೆರವಿನ ಬೆಂಬಲ, ಸಹಕಾರ,ಭೂಬಳಕೆ ಮತ್ತು ಜನಸಂಖ್ಯೆಯ ಅಂಕಿಅಂಶವನ್ನು ಒಳಗೊಳ್ಳುವ ಭೂ ಪ್ರದೇಶಗಳಿಂದ ಸುಮಾರು 3 ಮಿಲಿಯನ್ ಕಾಲಾವಧಿ ಸರಣಿಗಳ ದಾಖಲೆ ಒಳಗೊಂಡಿದೆ. ಅಂಕಿಅಂಶ ವಿಭಾಗವು, ವಲ್ಡ್ ಅಗ್ರಿಕಲ್ಚರಲ್ ಟ್ರೇಡ್ ಫ್ಲೋಸ್ ನ (ಕೃಷಿ ವಹಿವಾಟಿನ ಹರಿವು)ಮೇಲೆಯೂ ಅಂಕಿಅಂಶಗಳನ್ನು ನೀಡಿದೆ. ಈ ದತ್ತಾಂಶಗಳಲ್ಲಿ ಕೆಲವು ಅಫ್ರಿಕವರ್ (ಆಫ್ರಿಕಾ ಖಂಡದ) ಯೋಜನೆಗಳಿಂದ ಪಡೆದ ದತ್ತಾಂಶಗಳಾಗಿವೆ.
ಕೃಷಿಯಲ್ಲಿ ತೊಡಗಿಸಿದ ಬಂಡವಾಳ
[ಬದಲಾಯಿಸಿ]FAO ನ ತಾಂತ್ರಿಕ ಸಹಕಾರ ವಿಭಾಗ, ಬಂಡವಾಳ ಹೂಡಿಕೆ ಕೇಂದ್ರ Archived 2009-11-09 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು ಆರಂಭಿಸಿತು. ಈ ಕೇಂದ್ರವು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ಮೇಲೆ ಬೃಹತ್ ಪ್ರಮಾಣದಲ್ಲಿ ಬಂಡವಾಳ ಹೂಡುವಂತೆ ಮಾಡಿತು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಮರ್ಥನೀಯ, ನಿರಂತರ ಕೃಷಿ ನೀತಿಗಳನ್ನು ರೂಪಿಸಲು ಮತ್ತು ಗುರುತಿಸಲು, ಕೃಷಿ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಹಾಕಿಕೊಳ್ಳಲು ಸಹಾಯ ಮಾಡುವ ಮೂಲಕ ಈ ಪ್ರಯತ್ನವನ್ನು ಸಾಧಿಸಿದೆ. ಇದು ವಿಶ್ವ ಬ್ಯಾಂಕ್,ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಗಳು ಮತ್ತು ಅಂತರರಾಷ್ಟ್ರೀಯ ಬಂಡವಾಳ ಹಾಗು FAO ನ ಸಂಪನ್ಮೂಲಗಳಾದ ಬಹುಪಕ್ಷೀಯ ಸಂಘಟನೆಗಳಿಂದ ನಿಧಿಸಂಗ್ರಹ ಮಾಡಿತು.
ಟೆಲಿಫುಡ್ (ಸುದೀರ್ಘ ಆಹಾರ ಯೋಜನೆ)
[ಬದಲಾಯಿಸಿ]ಹಸಿವಿನ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಪನ್ಮೂಲ ಶಕ್ತಿಯ ಕ್ರೋಢೀಕರಣಗೊಳಿಸಲಾಯಿತು. 1997ರಲ್ಲಿ FAO ಟೆಲಿಫುಡ್ Archived 2010-11-09 ವೇಬ್ಯಾಕ್ ಮೆಷಿನ್ ನಲ್ಲಿ. ಅನ್ನು ಬಿಡುಗಡೆ ಮಾಡಿತು. ಇದು ಸಂಗೀತಗೋಷ್ಠಿಗಳು, ಕ್ರೀಡಾ ಸಂದರ್ಭ, ಮತ್ತು ಪ್ರಬಲ ಮಾಧ್ಯಮ, ಪ್ರಖ್ಯಾತ ವ್ಯಕ್ತಿಗಳ ಪ್ರಭಾವ ಬಳಸಿಕೊಳ್ಳುವ ಮೂಲಕ, ಹಾಗು ಹಸಿವನ್ನು ನೀಗಿಸಿಕೊಳ್ಳಲು ಹೋರಾಡುತ್ತಿರುವವರಿಗೆ ಮತ್ತು ಸಂಬಂಧಪಟ್ಟ ನಾಗರಿಕ ಸಮುದಾಯಕ್ಕೆ ಸಹಾಯ ಮಾಡಲು ಪ್ರಚಾರಾಂದೋಲನ ಕೈಗೊಂಡಿತು. ಈ ಪ್ರಚಾರಾಂದೋಲನದಿಂದ ಸುಮಾರು US$28 ಮಿಲಿಯನ್ ನಿಧಿ ಸಂಗ್ರಹಿಸಲಾಯಿತು. ಸಣ್ಣ ಗಾತ್ರದ ಮತ್ತು ನಿರಂತರವಾಗಿರುವ ಯೋಜನೆಗಳಿಗಾಗಿ ಟೆಲಿಫುಡ್ ನ ಈ ನಿಧಿಯ ಮೂಲಕ ನೆರವು ಒದಗಿಸಲಾಯಿತು. ಇದು ಸಣ್ಣ ಪ್ರಮಾಣದ ಕೃಷಿಕರು ತಮ್ಮ ಕುಟುಂಬಗಳಿಗಾಗಿ ಮತ್ತು ಸಮುದಾಯಗಳಿಗಾಗಿ ಹೆಚ್ಚಿನ ಆಹಾರಧಾನ್ಯ ಬೆಳೆಯಲು ಸಹಾಯಮಾಡುತ್ತದೆ. ಈ ಯೋಜನೆಯು, ಮೀನು ಹಿಡಿಯುವ ಸಾಧನ,ಬೀಜಗಳು ಮತ್ತು ಕೃಷಿ ಉಪಕರಣಗಳಂತಹ ಅನುಕೂಲಕರ ಸಂಪನ್ಮೂಲಗಳನ್ನು ಒದಗಿಸುತ್ತದೆ. ಈ ಅನುಕೂಲಗಳು ಅಗಾಧ ರೀತಿಯಲ್ಲಿ ಭಿನ್ನತೆ ಹೊಂದಿವೆ. ಉದಾಹರಣೆಗೆ; ಕೇಪ್ ವರ್ಡೆಯಲ್ಲಿ ಮತ್ತು ಮೌರಿಟ್ಯಾನಿಯಾದಲ್ಲಿ ಶಾಲಾ ಉದ್ಯಾನವನ ನಿರ್ಮಾಣ, ಅಥವಾ ವೆನಿಜುಲಾದಲ್ಲಿ ಹಂದಿ ಸಾಕಾಣೆ ಕುಟುಂಬಗಳಿಗೆ ಸಹಾಯ ಮಾಡುವುದು ಅಥವಾ ಉಂಗಾಡದಲ್ಲಿ ಶಾಲಾ ಮಧ್ಯಾಹ್ನದೂಟ ಒದಗಿಸುವುದು. ಅಲ್ಲದೇ ಮಕ್ಕಳಿಗೆ ಆಹಾರ ಬೆಳೆಯುವುದರ ಬಗ್ಗೆ ಕಲಿಕೆ,ಭಾರತದಲ್ಲಿ ಕುಷ್ಠರೋಗದಿಂದ ಮುಕ್ತವಾದ ಸಮುದಾಯದಲ್ಲಿ ಮೀನುಗಾರಿಕೆ ಉದ್ಯೋಗ ಪ್ರೊತ್ಸಾಹಿಸುವುದು.
ಆಹಾರದ ಹಕ್ಕು
[ಬದಲಾಯಿಸಿ]FAO ಸ್ ಸ್ಟ್ರ್ಯಾಟಜಿಕ್ ಫ್ರೇಮ್ ವರ್ಕ್ 2000–2015,"ಆಹಾರ ಭದ್ರತೆ ಹಕ್ಕು ಆಧಾರಿತ ಯೋಜನೆ ಅಭಿವೃದ್ಧಿಪಡಿಸಿ ಮುಂದಿನ ಪ್ರಗತಿಗೆ ಕ್ರಮ ಕೈಗೊಳ್ಳುತ್ತದೆ". "ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಆಹಾರ ಭದ್ರತಾ ಸುರಕ್ಷಿತ ವಿಶ್ವ ನಿರ್ಮಾಣಮಾಡಲು ಸಹಾಯಮಾಡುವೆಡೆಗೆ"; ನಮ್ಮ ಗುರಿ,ಎಂದು ಸಾರುವ ಮೂಲಕ ಸಂಘಟನೆಯು ಎಲ್ಲಾ ರೀತಿಯಲ್ಲೂ ಕಾರ್ಯೋನ್ಮುಖವಾಗುತ್ತದೆ ಎಂಬ ಭರವಸೆ ನೀಡಿತು. ಸಮಿತಿಯು 2004 ರ ನವೆಂಬರ್ ನಲ್ಲಿ ವಾಲೆಂಟರಿ ಗೈಡ್ ಲೈನ್ಸ್ ಅನ್ನು (ಸ್ವಯಂ ಸೃಷ್ಟಿಸಿದ ಮಾರ್ಗಸೂಚಿಗಳು)ಒಪ್ಪಿಕೊಂಡಿತು. ಈ ಕೈಪಿಡಿ ಸೂತ್ರಗಳ ಮೂಲಕ ಅದರ ಫಲಿತಾಂಶ-ಆಗುಹೋಗುಗಳ ಮೇಲೆ ಸಾಕಷ್ಟು ನಿಗಾ ಇಡಬೇಕಾಗುತ್ತದೆ. "ಮುಖ್ಯವಾಹಿನಿಗೆ ತರುವುದು" ಮತ್ತು ಮಾಹಿತಿಯ ಸಿದ್ಧತೆ,ಸಂಪರ್ಕ-ಸಂವಹನದ ಮತ್ತು ತರಬೇತಿ ವಿಷಯಗಳ ಕೈಪಿಡಿ ಮೂಲಕ ಸೂಕ್ತ ರೀತಿಯಲ್ಲಿ ಅಳವಡಿಸಬಹುದಾಗಿದೆ.
ಹಸಿವಿನ ವಿರುದ್ಧ ಅಂತರರಾಷ್ಟ್ರೀಯ ಮೈತ್ರಿಕೂಟ
[ಬದಲಾಯಿಸಿ]2002ರ ಜೂನ್ ನಲ್ಲಿ, ವಿಶ್ವ ಆಹಾರ ಶೃಂಗಸಭೆಯ ಸಂದರ್ಭದಲ್ಲಿ, ವಿಶ್ವನಾಯಕರು, 2015 ರ ಹೊತ್ತಿಗೆ ವಿಶ್ವದ ಹಸಿವಿನ ಪ್ರಮಾಣದಲ್ಲಿ ಅರ್ಧದಷ್ಟು ಕಡಿಮೆಮಾಡಲಾಗುವುದು ಎಂಬ 1996 ರ ಶೃಂಗಸಭೆಯ ಧ್ಯೇಯವನ್ನು ಎಷ್ಟರ ಮಟ್ಟಿಗೆ ಸಾಧಿಸಲಾಗಿದೆ ಎಂಬುದನ್ನು ಪರಾಮರ್ಶಿಸಿದರು;ಹಸಿವಿನ ವಿರುದ್ಧ ಅಂತರರಾಷ್ಟ್ರೀಯ ಮೈತ್ರಿಕೂಟ(IAAH) ವನ್ನು ರಚಿಸುವುದು ಅವರ ಕೊನೆಯ ತೀರ್ಮಾನವಾಯಿತು. ಇದು ಹಸಿವು ನಿರ್ಮೂಲನೆಗೆ ಕಂಕಣಬದ್ದ ಮೈತ್ರಿಕೂಟವಾಗಿದೆ. ಇದನ್ನು 2003 ರ ಅಕ್ಟೋಬರ್ 16 ರಂದಿನ ವಿಶ್ವ ಆಹಾರ ದಿನದಂದು ಅನುಷ್ಟಾನಗೊಳಿಸಲಾಯಿತು. IAAH, ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಹುಟ್ಟಿಸುವ ಮತ್ತು ಅಂತರಸರ್ಕಾರಿ ಸಂಘಟನೆ ಮತ್ತು ಸರ್ಕಾರೇತರ ಸಂಘಟನೆಗಳು ಹಾಗು ರಾಷ್ಟ್ರೀಯ ಮೈತ್ರಿಕೂಟಗಳ ನಡುವೆ ಪಾಲುದಾರಿಕೆಯ ಮೂಲಕ ನಿಶ್ಚಿತ ಕಾರ್ಯತತ್ಪರತೆ ರೂಪಿಸುತ್ತದೆ. IAAH ಎಂಬುದು,ಹಸಿವಿನ ವಿರುದ್ಧ ಹೋರಾಡುತ್ತಿರುವ ಅಂತರರಾಷ್ಟ್ರೀಯ ಸಂಘಟನೆಗಳ,ರಾಷ್ಟ್ರೀಯ ಮೈತ್ರಿಕೂಟಗಳ,ನಾಗರಿಕ ಸಮಾಜ ಸಂಘಟನೆಗಳ , ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳ ಹಾಗು ಖಾಸಗಿ ವಲಯದ ಸ್ವಯಂಪ್ರೇರಿತ ಸಂಘಟನೆಯಾಗಿದೆ. IAAH ನ ಜಾಗತಿಕ ಕಾರ್ಯಚಟುವಟಿಕೆಗಳು ನಾಲ್ಕು ಪ್ರಮುಖ ವಿಷಯಗಳ ಮೇಲೆ ಗಮನಹರಿಸಿವೆ: ಸಲಹಾ ಸವಲತ್ತು, ಬದ್ಧತೆ, ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಪರಸ್ಪರರಲ್ಲಿನ ಹೊಂದಾಣಿಕೆ. ಅಂತರರಾಷ್ಟ್ರೀಯ ಮೈತ್ರಿಕೂಟವು, ರೋಮ್-ಮೂಲದ UN ಆಹಾರ ಸಂಘಟನೆಗಳು– FAO,ದಿ ಇಂಟರ್ ನ್ಯಾಷನಲ್ ಫಂಡ್ ಫಾರ್ ಅಗ್ರಿಕಲ್ಚರ್ ಡೆವಲಪ್ಮೆಂಟ್ (IFAD)(ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ ನೆರವು) ಮತ್ತು ವಲ್ಡ್ ಫುಡ್ ಪ್ರೋಗ್ರಾಂ(WFP)–(ವಿಶ್ವ ಆಹಾರ ಯೋಜನೆ) ಮತ್ತು ಇತರ ಅಂತರಸರ್ಕಾರ ಹಾಗು ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಂಘಟನೆಯಾಗಿದೆ. ವೈಯಕ್ತಿಕವಾಗಿ ರಾಷ್ಟ್ರೀಯ ಮೈತ್ರಿಕೂಟಗಳ ಜೊತೆಗೆ ಹಸಿವಿನ ವಿರುದ್ದ ಹೋರಾಡುತ್ತಿರುವ ವ್ಯಕ್ತಿಗಳಿದ್ದರೂ, ಅವರು ನೇರವಾಗಿ IAAH ನಲ್ಲಿ ಸದಸ್ಯರಾಗಿ ಸೇರಿಕೊಳ್ಳಲಾಗದು. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿಯೇ 36 ರಾಷ್ಟ್ರಗಳು ರಾಷ್ಟ್ರೀಯ ಮೈತ್ರಿಕೂಟವನ್ನು ಊರ್ಜಿತಗೊಳಿಸಿಕೊಂಡವು. ಅವುಗಳಲ್ಲಿ ಬ್ರೆಜಿಲ್, ಬುರ್ಕಿನ ಫ್ಯಾಸೊ,(ಪಶ್ಚಿಮ ಆಫ್ರಿಕಾ) ಫ್ರಾನ್ಸ್, ಭಾರತ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳಂತೆ ಇವೆಲ್ಲವೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.
FAO ನ ಸದಾಶಯದ ರಾಯಭಾರಿಗಳು(FAO ಗುಡ್ ವಿಲ್ ಅಂಬ್ಯಾಸಡರ್ಸ್ )
[ಬದಲಾಯಿಸಿ]FAO ಗುಡ್ ವಿಲ್ ಅಂಬ್ಯಾಸಡರ್ ಸ್ ಕಾರ್ಯಕ್ರಮವನ್ನು 1999 ರಲ್ಲಿ ಆರಂಭಿಸಲಾಯಿತು. ಈ ಸದಾಶಯದ ಯೋಜನೆಯ ಮುಖ್ಯ ಉದ್ದೇಶವೆಂದರೆ, ಜಗತ್ತಿನ ಸುಮಾರು 1 ಬಿಲಿಯನ್ ಸಂಖ್ಯೆಯ(ನೂರು ಕೋಟಿ) ಜನರು ದೀರ್ಘಕಾಲಿಕ,ನಿರಂತರ ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದನ್ನು ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ಮನವರಿಕೆ ಮಾಡಿ ಗಮನ ಸೆಳೆಯುವುದೇ ಮೂಲೋದ್ದೇಶವಾಗಿದೆ. ಇತರೆಡೆ ಸಮೃದ್ಧಿ ಕಾಲದಲ್ಲೂ ಈ ಜನರು ಹಸಿವಿನ ಸಂಕಟ ಅನುಭವಿಸುವಂತಾಗಿದೆ,ಎಂದು ಸಂಘಟನೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಜನರು ದುರ್ಗತಿಯ ಬದುಕು ನಡೆಸುತ್ತಿದ್ದಾರೆ. ಅಲ್ಲದೇ ಅವರಿಗೆ ಮಾನವನಿಗೆ ಮೂಲ ಭೂತವಾದ ಆಹಾರದ ಹಕ್ಕನ್ನೇ ನಿರಾಕರಿಸಲಾಗಿದೆ. ಹಸಿವು ಮತ್ತು ಪೋಷಣೆಯ ಕೊರತೆ ನೀಗಿಸಲು ಕೇವಲ ಸರ್ಕಾರಗಳಿಂದಲೇ ಮಾತ್ರವೇ ಸಾಧ್ಯವಾಗುವುದಿಲ್ಲ. ಜನರು, ಹಸಿವು ಮತ್ತು ಪೋಷಣೆ ಕೊರತೆಯ ಕೆಟ್ಟ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕೆಂದಿದ್ದರೆ, ಇದಕ್ಕೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಕಾರ್ಯಾಚರಣೆ, ನಾಗರಿಕ ಸಮಾಜದ ಒಳಗೊಳ್ಳುವಿಕೆ ಹಾಗು ಒಟ್ಟಾದ ಮತ್ತು ಪ್ರತ್ಯೇಕವಾದ ಅವಶ್ಯಕತೆಯನ್ನು ಪೂರೈಸುವ ಸಾಧನಗಳ ಅಗತ್ಯವಿರುತ್ತದೆ. FAO ನ ಗುಡ್ ವಿಲ್ ಅಂಬ್ಯಾಸಡರ್ ಗಳಲ್ಲಿರುವ ಪ್ರತಿಯೊಬ್ಬರೂ – ಕಲೆ, ಮನರಂಜನೆ, ಕ್ರೀಡೆ, ಶೈಕ್ಷಣಿಕ ಕ್ಷೇತ್ರ ದಿಂದ ಬಂದಂತಹ ಪ್ರಸಿದ್ಧ ವ್ಯಕ್ತಿಗಳಾಗಿದ್ದಾರೆ. ಉದಾಹರಣೆಗೆ ನೋಬೆಲ್ ಬಹುಮಾನ ವಿಜೇತರಾದ ರಿಟಾ ಲೆವಿ ಮಾಂಟಲ್ಸಿನಿ, ನಾಯಕಿ ಗಾಂಗ್ ಲಿ, ಮಾಜಿ ಗಾಯಕ ಮಿರಿಯಂ ಮ್ಯಾಕೆಬ್, ಮತ್ತು ಸಾಕರ್ ಆಟಗಾರರಾದ ರೊಬೋರ್ಟ್ ಬ್ಯಾಗಿಯೊ ಮತ್ತು ರೌಲ್. ಇಲ್ಲಿ ಹೆಸರಿಸಲಾದವರು FAO ನ ದೃಷ್ಟಿಕೋನದೊಂದಿಗೆ ವ್ಯಯಕ್ತಿಕ ಮತ್ತು ವೃತ್ತಿಪರ ಬದ್ಧತೆಯನ್ನು ಬೆಳೆಸಿಕೊಂಡಿದ್ದರು: ಪ್ರಸ್ತುತದ ಮತ್ತು ಭವಿಷ್ಯದ ಪೀಳಿಗೆಗಾಗಿ ಆಹಾರ ಭದ್ರತೆಯ ವಿಶ್ವ ನಿರ್ಮಾಣ ಇದರ ಉದ್ದೇಶವಾಗಿದೆ. ಗುಡ್ ವಿಲ್ ಅಂಬ್ಯಾಸಡರ್ ಗಳು ತಮ್ಮ ಪ್ರತಿಭೆ ಮತ್ತು ಪ್ರಭಾವವನ್ನು ಬಳಸಿಕೊಂಡು ಹಿರಿಯರು ಮತ್ತು ಕಿರಿಯರು , ಬಡವರು ಮತ್ತು ಶ್ರೀಮಂತರನ್ನು ವಿಶ್ವದ ಹಸಿವಿನ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗುವಂತೆ ಮಾಡಿದರು. ಅವರು 21 ನೇ ಶತಮಾನದಲ್ಲಿ ಮತ್ತು ಅದರ ಆಚೆಗೆ ವಾಸ್ತವವಾಗಿ ಎಲ್ಲರಿಗೂ ಆಹಾರ ದೊರೆಯುವಂತೆ ಮಾಡುವ ಗುರಿ ಹೊಂದಿದ್ದಾರೆ.
ಹಸಿವಿನ ವಿರುದ್ಧ ಆನ್ ಲೈನ್ ಕಾರ್ಯಾಚರಣೆ
[ಬದಲಾಯಿಸಿ]2010 ರ ಮೇ 11 ರಂದು FAO, ಪ್ರಪಂಚದಾದ್ಯಂತ ಸಂಪರ್ಕ ಮತ್ತು ಮಾಧ್ಯಮ ಕಾರ್ಯಾಚರಣೆಯನ್ನು , "ದಿ 1 ಬಿಲಿಯನ್ ಹಂಗ್ರಿ ಪ್ರಾಜೆಕ್ಟ್" ಎಂಬ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಿತು. ಇದು " ನಮ್ಮ ಸುತ್ತಲೂ ಸುಮಾರು ಒಂದು ಬಿಲಿಯನ್ ನಷ್ಟು ಜನರು ಹಸಿವಿನಿಂದ ನರಳುತ್ತಿದ್ದಾರೆ ಎಂಬುದನ್ನು ತಿಳಿದು ಜನರು ಕೋಪದಿಂದ ಸಿಡಿದೇಳುವಂತೆ" ಮಾಡುತ್ತದೆ . FAOನ ಕಾರ್ಯಾಚರಣೆ, ಪೀಟರ್ ಫಿಂಚ್ ಎಂಬಾತ ನೆಟ್ವರ್ಕ್ ಎಂಬ 1976 ರ ಸಿನಿಮಾದಲ್ಲಿ ಬಳಸಿದಂತಹ "ನಾನು ನರಕವೆಂಬಂತೆ ಬೇಸರಗೊಂಡಿದ್ದೇನೆ, ಮತ್ತು ನಾನೆಂದಿಗೂ ಇದನ್ನು ತೆಗೆದುಕೊಳ್ಳುವುದಿಲ್ಲ!", ಎಂಬ ಘೋಷಣೆಯನ್ನು ಎರವಲಾಗಿ ತೆಗೆದುಕೊಳ್ಳಲಾಗಿದೆ. ಈ ಕಾರ್ಯಾಚರಣೆಯು ಜನರನ್ನು www.1billionhungry.org ನಲ್ಲಿ ಆನ್ ಲೈನ್ ಅಹವಾಲಿಗೆ ಸಹಿಮಾಡುವಂತೆ ಕೋರುತ್ತದೆ. ಇದು ಹಸಿವಿನ ನಿರ್ಮೂಲನೆಯನ್ನು ಸರ್ಕಾರದ ಪ್ರಥಮ ಆದ್ಯತೆಯನ್ನಾಗಿಸುತ್ತದೆ. ಇಷ್ಟೇ ಅಲ್ಲದೇ ಅಹವಾಲಿಗೆ ಸಹಿಹಾಕಿದ ನಂತರ, ಪ್ರತಿಯೊಬ್ಬರಿಗೂ ‘’ರಹಸ್ಯ ಸಂಕೇತವೊಂದನ್ನು’’ ನೀಡಲಾಗುತ್ತದೆ. ಅಹವಾಲಿನ ಸಂಪರ್ಕ ಕೊಂಡಿಯನ್ನು ಇತರರಿಗೆ ವಿತರಿಸಲು ಈ ಸಂಕೇತವನ್ನು ಬಳಸಬಹುದಾಗಿದೆ. FAO ಈ ಅಹವಾಲು, ಫೇಸ್ ಬುಕ್ , ಟ್ವಿಟ್ಟರ್ ಮತ್ತು ಯು ಟ್ಯೂಬ್ ಗಳಂತಹ ಸಾಮಾಜಿಕ ಸಂಪರ್ಕ ಮಾಧ್ಯಮದ ಸೈಟ್ ಗಳ ಮೂಲಕ ಹರಡುತ್ತದೆ ಎಂಬ ಭರವಸೆಯಿದೆ ಎಂದು ಹೇಳಿದೆ.[೧೫] ಕಾರ್ಯಾಚರಣೆಯನ್ನು, ರೋಮ್ ನಲ್ಲಿರುವ FAO ಕೇಂದ್ರ ಕಾರ್ಯಾಲಯದಲ್ಲಿ ಮತ್ತು ಸ್ಟಾಕೊಲ್ಮ್, ಯೊಕೊಹಮ, ನ್ಯೂಯಾರ್ಕ್ ಮತ್ತು ಪ್ಯಾರಿಸ್ ನಂತಹ ನಗರಗಳಲ್ಲಿ ಆರಂಭಿಸಿಲಾಯಿತು. ಅಹವಾಲಿನ ಫಲಿತಾಂಶವನ್ನು, 2010 ರ ಅಕ್ಟೋಬರ್ ಅಂತ್ಯದಲ್ಲಿ ನ್ಯೂಯಾರ್ಕ್ ನ UN ಕೇಂದ್ರ ಕಾರ್ಯಾಲಯದಲ್ಲಿ ನಡೆಯುವ ವಿಶ್ವ ಆಹಾರ ದಿನಕ್ಕೆ ಹೋಗುವ ಪ್ರತಿ ರಾಷ್ಟ್ರದ ಪ್ರತಿನಿಧಿಗೆ ನೀಡಲಾಗುವುದು. ಇದು FAO ನ ಕ್ಷೇತ್ರ ಘಟಕಗಳ ಪ್ರತಿನಿಧಿಗಳು ಪಾಲ್ಗೊಳ್ಳುವಿಕೆಯ ಕಾರ್ಯಾಚರಣೆಯಾಗಿದೆ: ಮಧ್ಯ ಅಮೇರಿಕಾದ Mr. ಡಿಯೊಡೊರೊ ರೊಕಾ , ಆಫ್ರಿಕಾ ಮತ್ತು ಯುರೋಟ Ms. ಮರಿಯಾ ಹೆಲೆನ M Q ಸೊಮೆಡೊ , ಏಷ್ಯಾ ಮತ್ತು ಪೆಸಿಫಿಕ್ ಸಾಗರ Mr. ಫರ್ನ್ಯಾನ್ಡೊ ಗೆರಿಯರಿ ಸರ್ಕ್ಯಾನೊ ಒರಿಯಂಟೆ Mr. ಅಲ್-ಒತೈಬಿ ಸಾದ್ ಅಯ್ದ್ ಮತ್ತು ಇತ್ತೀಚಿನ ಲ್ಯಾಟಿನ್ ಅಮೇರಿಕಾದ ಉತ್ತರ ಉಪ ಪ್ರಾಂತ್ಯ, ಫ್ರಾನ್ಸಿಸ್ಕೊ ಕೊಸ್ಟ ಎಸ್ಪರಾಸ್ [೧೬]. FAO , ವಿಶ್ವದಲ್ಲಿರುವ ಸುದೀರ್ಘಕಾಲದ ಹಸಿವು ಕಡೆಯ ಪಕ್ಷ 1 ಬಿಲಿಯನ್ ನಷ್ಟು ಜನರನ್ನಾದರೂ ನರಳಿಸುತ್ತದೆ, ಎಂಬುದರ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂಬುದು ಪ್ರಾಜೆಕ್ಟ್ ನ(ಯೋಜನೆಯ) ಪ್ರಮುಖ ಆಲೋಚನೆಯಾಗಿದೆ. ಇಷ್ಟೇ ಅಲ್ಲದೇ FAO , ಹಸಿವಿನ ಸಮಸ್ಯೆಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕೆಂದುಕೊಂಡಿದೆ. ಅಲ್ಲದೇ ಆಹಾರ ಭದ್ರತೆಗೆ ಸಂಬಂಧಿಸಿದಂತೆ ಗಮನಾರ್ಹ ಅಭಿವೃದ್ಧಿ ಸಾಧಿಸಿರುವ ಅಗ್ರ ಸಂಘಟನೆಯಾಗಿ ಅದರ ಪಾತ್ರವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಮ್ಯಾಕ್ ಆನ್ ಎರಿಕ್ಸನ್ ಎಂಬ ಇಟಲಿ ಕಮ್ಯುನಿಕೇಷನ್ ಏಜೆನ್ಸಿ(ವಿಭಾಗ) ಆಕರ್ಷಕವಾಗಿ ಸೃಜನಾತ್ಮಕ ಪರಿಕಲ್ಪನೆಗಳನ್ನು ಒದಗಿಸುತ್ತದೆ. ಹಳದಿ ಸಿಳ್ಳೆಯು ಈ ಕಾರ್ಯಾಚರಣೆಯ ಚಿಹ್ನೆಯಾಗಿದೆ. ಇದು ಅಸ್ತಿತ್ವದಲ್ಲಿರುವ ಹಸಿವಿನ ಸಮಸ್ಯೆಯ ಬಗ್ಗೆ ‘’ಜಾಗೃತಗೊಳಿಸುವ’’ ರೂಪಕದಂತೆ ಕಾರ್ಯನಿರ್ವಹಿಸುತ್ತದೆ. 1billionhungry.org ವೆಬ್ ಸೈಟ್ ನಲ್ಲಿ, ಆಗಲೇ ಎಷ್ಟು ಜನರು ಈ ಅಹವಾಲಿಗೆ ಸಹಿ ಮಾಡಿದ್ದಾರೆ ಎಂಬುದನ್ನು ಸೂಚಿಸುವ ವಿಭಾಗವಿದೆ. ಹಸ್ತಾಕ್ಷರವು ಸಂಖ್ಯಾತ್ಮಕವಾಗಿರಬಹುದು (ವೆಬ್ ಸೈಟ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ) ಅಥವಾ ಹಸ್ತಾಕ್ಷರದ ಹಾಳೆಯನ್ನು ಬಳಸುವ ಮೂಲಕ ಭೌತಿಕವಾಗಿರಬಹುದು(ಈ ಸೌಲಭ್ಯ 1BH ವೆಬ್ ಸೈಟ್ ನಲ್ಲಿರುತ್ತದೆ). ಈ ಸಂಪರ್ಕ ಕಾರ್ಯಾಚರಣೆಯನ್ನು ಹಿಂದಿನದಕ್ಕೆ ಹೋಲಿಸಿದಾಗ ಅನೇಕ ವ್ಯತ್ಯಾಸಗಳನ್ನು ನೋಡಬಹುದಾಗಿದೆ. ಮೊದಲನೆಯದಾಗಿ, ಇದು ಸಂಸ್ಥೆ ಮತ್ತು ಸಂಘಟನೆಗಳ ಸಹಾಯದ ಮೇಲೆ ಅವಲಂಬಿಸಿತ್ತು. ಏಕೆಂದರೆ ಈ ಸಂಘಟನೆಗಳು ತಮ್ಮ ವೈಬ್ ಸೈಟ್ ನಲ್ಲಿ ಅದರ ಬ್ಯಾನರ್ ಗಳನ್ನು ಹಾಕಿಕೊಳ್ಳುವ ಮೂಲಕ ಹಾಗು ಈ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇದಕ್ಕೆ ಸಂಭಂಧಿಸಿದ ಯೋಜನೆಯನ್ನು ಎಲ್ಲೆಡೆ ಪಸರಿಸಲು ಸಹಾಯಮಾಡುತ್ತಿದ್ದವು. ಎರಡನೆಯದಾಗಿ, 1 ಬಿಲಿಯನ್ ಹಂಗ್ರಿ ಪ್ರಾಜೆಕ್ಟ್ (1 ಬಿಲಿಯನ್ ಹಸಿವಿನ ಯೋಜನೆ),ಪ್ರಚಾರಾಂದೋಲನ ಸಂಪರ್ಕ ಕಾರ್ಯಾಚರಣೆಯಾಗಿದೆ. ಇದು ಅಹವಾಲಿಗೆ ಸಹಿ ಮಾಡಿದ ಜನರು , ಜಾಗೃತಿ ಮೂಡಿಸಲು ಮತ್ತು ಈ ಯೋಜನೆಗೆ ಇನ್ನಷ್ಟು ಸಹಿ ಸಂಗ್ರಹಿಸಲು, 1 ಬಿಲಿಯನ್ ಹಂಗ್ರಿ ವೆಬ್ ಸೈಟ್ ನ ಲಿಂಕ್ ಅನ್ನು ಅವರ ಸ್ನೇಹಿತರು, ಸಾಮಾಜಿಕ ಮಾಧ್ಯಮ ಅಥವಾ ಮೇಲ್ ಗಳಿಗೆ ಕಳುಹಿಸಬಹುದು ಎಂಬುದನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೇ , ಪ್ರತಿಯೊಬ್ಬ ವ್ಯಕ್ತಿಯು ಈ ಯೋಜನೆಯ ಬಗ್ಗೆ ಯಾವುದಾದರು ಕಾರ್ಯಕ್ರಮ ಏರ್ಪಡಿಸಬಹುದಾಗಿದೆ. ಇದನ್ನು ಸರಳವಾಗಿ ಸ್ನೇಹಿತರು, ಸಿಳ್ಳೆಗಳು, ಟೀ ಶರ್ಟ್ ಗಳು ಮತ್ತು ಬ್ಯಾನರ್ ಗಳನ್ನು ಕಲೆ ಹಾಕುವ ಮೂಲಕ (ಸಿಳ್ಳೆಗಳನ್ನು ಮತ್ತು ಟೀ ಶರ್ಟ್ ಗಳನ್ನು 1 billionhungry.org ವೈಬ್ ಸೈಟ್ ನಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಬರವಣಿಗೆಯ ವಸ್ತುಗಳನ್ನೂ ಬಳಕೆ ಮಾಡಬಹುದಾಗಿದೆ.FAO ಆರಂಭಿಸಿದ FTP ಸರ್ವರ್[permanent dead link] ನಲ್ಲಿ ದೊರೆಯುತ್ತವೆ.) ಸಾಂಕೇತಿಕ ಹಳದಿ ಸಿಳ್ಳೆಯನ್ನು ಬಳಸುವ ಮೂಲಕ ಹಸಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬಹುದು. 1BH FTP ನಲ್ಲಿ ಹಸ್ತಾಕ್ಷರದ ಹಾಳೆಯನ್ನು ತೆಗೆದುಕೊಂಡು ಆ ಅವುಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಸಂಗ್ರಹಿಸಬಹುದು. ನಿರಂತರ ಹಸಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರಾಚೆಗೆ, 1 ಮಿಲಿಯನ್ ನಷ್ಟು ಸಹಿಯನ್ನು ಪಡೆಯುವುದು ಅಹವಾಲಿನ ಪ್ರಮುಖ ಗುರಿಯಾಗಿದೆ. ವಿಶ್ವದಲ್ಲಿರುವ, ನಿರಂತರ ಹಸಿವಿನ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳು ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಮತ್ತು FAO ಅದರ ಸುದೀರ್ಘ ಹಸಿವಿನ ವಿರುದ್ಧ ಹೋರಾಡಲು ಸಹಾಯಹಸ್ತ ನೀಡುವಂತೆ ಮಾಡುವುದು ಇದರ ಗುರಿಯಾಗಿದೆ.
ಸದಸ್ಯತ್ವ
[ಬದಲಾಯಿಸಿ]
|
|
|
ಬ್ರುನೆ, ಲೈಚೆಟೆನ್ಸ್ಟೀನ್, ಸಿಂಗಾಪುರ್,[೧೭] ವ್ಯಾಟಿಕನ್ ನಗರ ಮತ್ತು ಸದಸ್ಯತ್ವ ಇಲ್ಲದ ರಾಷ್ಟ್ರಗಳು ಮತ್ತು ಸೀಮಿತ ವಲಯದ ರಾಷ್ಟ್ರಗಳು ಇಲ್ಲಿ ಸದಸ್ಯರಾಗಿಲ್ಲ.[೧೮]
ಟೀಕೆ
[ಬದಲಾಯಿಸಿ]1970ರ, 80ರ, 90ರ
[ಬದಲಾಯಿಸಿ]FAO ಕನಿಷ್ಠ ಪಕ್ಷ 30 ವರ್ಷಗಳ ವರೆಗೆ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. 1974ರಲ್ಲಿ ನಡೆದ ವಿಶ್ವ ಆಹಾರ ಅಧಿವೇಶನದ ನಂತರ ವಿಶ್ವ ಆಹಾರ ಸಮಿತಿ(ವಲ್ಡ್ ಫುಡ್ ಕೌನ್ಸಿಲ್) ಮತ್ತು ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ ಸಂಗ್ರಹ(ಇಂಟರ್ ನ್ಯಾಷನಲ್ ಫಂಡ್ ಫಾರ್ ಅಗ್ರಿಕಲ್ಚರ್ ಡೆವಲಪ್ಮೆಂಟ್) ವೆಂಬ ಎರಡು ಹೊಸ ಸಂಘಟನೆಗಳನ್ನು ಆರಂಭಿಸಲು ಸಂಘಟನೆಯ ಸಾಧನೆಯ ಬಗ್ಗೆ ಇದ್ದಂತಹ ಅತೃಪ್ತಿ ಕಾರಣವಾಗಿದೆ; ಎಂಭತ್ತರ ಪೂರ್ವಾರ್ಧದಲ್ಲಿ ಈ ಸಂಘಟನೆಗಳ ನಡುವೆ ತೀವ್ರವಾದ ಪೈಪೋಟಿ ನಡೆಯುತ್ತಿತ್ತು.[೧೯] ಇದೇ ಸಮಯದಲ್ಲಿ, FAO ಅಡಿಯಲ್ಲಿ ಆರಂಭಿಸಲಾದ ಪ್ರಾಯೋಗಿಕ 3 ವರ್ಷಗಳ ಕಾರ್ಯಕ್ರಮವಾದಂತಹ ವಿಶ್ವ ಆಹಾರ ಕಾರ್ಯಕ್ರಮ, ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದ FAO ನ ಮತ್ತು WFP ನ ನಿರ್ದೇಶಕರೊಂದಿಗೆ ಗಾತ್ರದಲ್ಲಿಯು(ವ್ಯಾಪ್ತಿಯಲ್ಲಿಯು) ಮತ್ತು ಸ್ವತಂತ್ರದಲ್ಲಿಯು ಬೆಳೆಯಿತು.[೨೦] 1989 ರ ಪೂರ್ವಾರ್ಧದಲ್ಲಿ, ಈ ಸಂಘಟನೆಯು ಹೆರಿಟೇಜ್ ಫೌಂಡೇಷನ್ ನ ದಾಳಿಗೊಳಗಾಯಿತು. ಇದು ಸಂಪ್ರದಾಯ ಶೀಲ ಚಿಂತಕರ ಚಾವಡಿಯಾಗಿದ್ದು, ವಾಷಿಂಗ್ಟನ್ , D.C.ಯಲ್ಲಿದೆ. ಈ ಫೌಂಡೇಷನ್, ದುಖಃಕರ ವಿಷಯವೆಂದರೆ ಹಸಿವಿನ ವಿರುದ್ಧ ಹೋರಾಡಲು FAO ಅತ್ಯಂತ ಅಪ್ರಸ್ತುತವಾಗಿದೆ . ಅದರ ಕೆಲಸ ಕಾರ್ಯದ ಸಾಮಾನ್ಯತೆಯು ಕೇಂದ್ರೀಕೃತ ಪ್ರಭುತ್ವಕ್ಕೆ ಹೆಸರುವಾಸಿಯಾಗಿದೆ. ಅಲ್ಲದೇ ಅದರ ಸಿಬ್ಬಂದಿ ವರ್ಗದ ಅದಕ್ಷತೆ FAO ಅನ್ನು ಇತ್ತೀಚಿನ ವರ್ಷಗಳಲ್ಲಿ ರಾಜಕೀಯಗೊಳಿಸಿದೆ ಎಂದು ಬರೆದಿದೆ. [೨೧] ಅದೇ ವರ್ಷದ ಸೆಪ್ಟೆಂಬರ್ ನಲ್ಲಿ , ಜರನಲ್ ಸೊಸೈಟಿ(ಅಮೇರಿಕಾದ ವೃತ್ತಪತ್ರಿಕೆ) FAO ಬಗ್ಗೆ ಲೇಖನಗಳ ಸರಣಿಯನ್ನೇ ಪ್ರಕಟಿಸಿತು[೨೨]. ಈ ಲೇಖನಗಳು ಹೆರಿಟೇಜ್ ಫೌಂಡೇಷನ್ ನ ಕೊಡುಗೆಯನ್ನು ಮತ್ತು FAO ನ ಸಿಬ್ಬಂದಿ ವರ್ಗದ ಸದಸ್ಯರಾದ ರಿಚರ್ಡ್ ಲೈಡಿಕರ್ ಅವರ ಪ್ರತಿಕ್ರಿಯೆಯನ್ನು ಒಳಗೊಂಡಿದೆ. ಇವರ ಬಗ್ಗೆ ಅನಂತರ ಡ್ಯಾನಿಷ್ ನ ಕೃಷಿ ಸಚಿವರು ವಿವರಿಸಿದ್ದಾರೆ (ಸ್ವತಃ ರಾಜೀನಾಮೆ ಕೊಟ್ಟು ಸಂಘಟನೆಯಿಂದ ಹೊರಗುಳಿದರು) ಇವರು 'FAO' ನ ಪ್ರಧಾನ ಅಪ್ರಾಮಾಣಿಕ ವಕ್ತಾರರಾಗಿದ್ದರು ಎಂದು ವಿವರಿಸಿದ್ದಾರೆ'.[೨೩] FAO ನ ಮಹಾನಿರ್ದೇಶಕರಾದ ಎಡೊರ್ಡ್ ಸೌಮ ರವರನ್ನು ಕೂಡ, 1989 ರಲ್ಲಿ ಪ್ರಕಟಿಸಲಾದ ಗ್ರ್ಯಾಮ್ ಹ್ಯಾನ್ಕಾಕ್ ನ 'ಲಾರ್ಡ್ಸ್ ಆಫ್ ಪಾವರ್ಟಿ ಎಂಬ ಪುಸ್ತಕದಲ್ಲಿ ಟೀಕಿಸಲಾಗಿದೆ.[೨೪] ಈ ಪುಸ್ತಕದಲ್ಲಿ ಸೌಮಾ ರವರ 'ಅಧಿಕ ಸಂಬಳದ ಜೇಬು', ಅವರ 'ದಬ್ಬಾಳಿಕೆಯ' ಆಡಳಿತ ಶೈಲಿ ಹಾಗು 'ಸಾರ್ವಜನಿಕ ಮಾಹಿತಿಯ ಹರಿವಿನ ಮೇಲೆ ಅವರ ನಿಯಂತ್ರಣ'ದ ಬಗ್ಗೆ ಹೇಳಲಾಗಿದೆ. ಹ್ಯಾನ್ ಕಾಕ್, " ಈ ಎಲ್ಲದರಿಂದ ಒಂದು ಸಂಘಟನೆ , ಅದರ ಸಂಪೂರ್ಣವಾದ ಲೋಕೋಪಕಾರಿ ಮತ್ತು ಅಭಿವೃದ್ಧಿಯ ಕರಾರಿನಿಂದ ದೂರಸರಿಯುವ ಮೂಲಕ, ಖಚಿತವಾಗಿ ಅದು ಏನನ್ನು ಮಾಡುತ್ತಿದೆ , ಏಕೆ ಎಂಬುದರ ಬಗ್ಗೆ ಮತ್ತು ಪ್ರಪಂಚದಲ್ಲಿರುವ ಅದರ ಸ್ಥಾನದ ಬಗ್ಗೆ ಗೊಂದಲಗೊಂಡು ದಾರಿ ತಪ್ಪಿದೆಯೆಂದು ಯಾರಾದರು ತಿಳಿದುಕೊಳ್ಳಬಹುದಾಗಿದೆ ಎಂದು ಹೇಳುವ ಮೂಲಕ ಈ ಟೀಕೆಯನ್ನು ಮುಕ್ತಾಯಗೊಳಿಸಿದ್ದಾನೆ" . ಈ ಟೀಕೆಯ ಹೊರತಾಗಿಯು, ಎಡೊರ್ಡ್ ಸೌಮ, ಮೂರು ಅನುಕ್ರಮ ಅವಧಿಗಳಿಗಾಗಿ 1976 ರಿಂದ 1993 ರ ವರೆಗೆ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. US ರಾಷ್ಟ್ರ ವಿಭಾಗವು, 1990ರಲ್ಲಿ, " US ನ ಕಾರ್ಯಕ್ರಮಗಳಲ್ಲಿ ಸುಧಾರಣೆಯನ್ನು ತರುವುದರ ಬಗ್ಗೆ ಮತ್ತು ಅವುಗಳ ಮೇಲೆ ಖರ್ಚು ಮಾಡಬೇಕಿರುವ ಹಣದ ಮೊತ್ತವನ್ನು ಏರಿಸುವುದರ ಬಗ್ಗೆ ಪ್ರತಿಕ್ರಿಯಿಸುವಲ್ಲಿ ದಿ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್, ಇತರ UN ಸಂಘಟನೆಗಳ ಹಿಂದೆ ಮಂದಗತಿಯಲ್ಲಿ ಚಲಿಸುತ್ತಿದೆ" ಎಂಬ ಅಭಿಪ್ರಾಯವನ್ನು ನೀಡಿದೆ.[೨೫] ಒಂದು ವರ್ಷದ ನಂತರ, 1991 ರಲ್ಲಿ, ದಿ ಎಕೊಲಾಜಿಸ್ಟ್ ಎಂಬ ನಿಯತಕಾಲಿಕೆ "ದಿ UN ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್ : ಪ್ರಮೋಟಿಂಗ್ ವಲ್ಡ್ ಹಂಗರ್"ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ಸಂಚಿಕೆಯನ್ನು ಪ್ರಕಟಿಸಿತು.[೨೬] ಈ ನಿಯತಕಾಲಿಕೆಯು, ಅರಣ್ಯಪ್ರದೇಶ, ಮೀನುಗಾರಿಕೆ, ಜಲಚರ ಸಾಕಣೆ, ಮತ್ತು ಕೀಟನಿಯಂತ್ರಣ ಕ್ಷೇತ್ರಗಳಲ್ಲಿ FAO ನ ಕಾರ್ಯನೀತಿ ಮತ್ತು ಕಾರ್ಯಾಚರಣೆಗಳನ್ನು ಕುರಿತು ಪ್ರಶ್ನಿಸಿದ ಲೇಖನಗಳನ್ನು ಒಳಗೊಂಡಿತ್ತು. ಈ ಲೇಖನಗಳನ್ನು ಹೆಲೆನ ನಾರ್ಬರ್ಗ್-ಹೊಡ್ಜ್, ವಂದನಾ ಶಿವ, ಎಡ್ವರ್ಡ್ ಗೋಲ್ಡ್ ಸ್ಮಿತ್ , ಮೈಗೆಲ್ A. ಅಲ್ಟೈರಿ ಮತ್ತು ಬಾರ್ಬರ ಡಿನ್ಹ್ಯಾಮ್ ನಂತಹ ಪರಿಣಿತರು ಬರೆದಿದ್ದಾರೆ. 1996 ರಲ್ಲಿ , FAO ವಿಶ್ವ ಆಹಾರ ಶೃಂಗಸಭೆಯನ್ನು ಏರ್ಪಡಿಸಿತು. ಈ ಸಭೆಯಲ್ಲಿ 112 ರಾಷ್ಟ್ರಗಳ ಮತ್ತು ಸರ್ಕಾರದ ಮುಖ್ಯಸ್ಥರು ಅಥವಾ ಉಪಮುಖ್ಯಸ್ಥರು ಉಪಸ್ಥಿತರಿದ್ದರು. ಈ ಶೃಂಗಸಭೆಯು ರೋಮ್ ಘೋಷಣೆಗೆ ಸಹಿಹಾಕುವುದರೊಂದಿಗೆ ಮುಕ್ತಾಯಗೊಂಡಿತು. ವಿಶ್ವದಲ್ಲಿ ಹಸಿವಿನಿಂದ ನರಳುತ್ತಿರುವ ಜನರ ಸಂಖ್ಯೆಯನ್ನು 2015 ರ ಹೊತ್ತಿಗೆ ಅರ್ಧದಷ್ಟು ಕಡಿಮೆ ಮಾಡಬೇಕೆಂಬುದು ಈ ಘೋಷಣೆಯ ಗುರಿಯಾಗಿತ್ತು.[೨೭] ಇದೇ ಸಮಯದಲ್ಲಿ, 80 ರಾಷ್ಟ್ರಗಳಿಂದ 1,200 ನಾಗರಿಕ ಸಮಾಜ ಸಂಘಟನೆಗಳು(CSOs), NGO ವೇದಿಕೆಯಲ್ಲಿ ಪಾಲ್ಗೊಂಡಿದ್ದವು. ಈ ವೇದಿಕೆಯು ಕೃಷಿಯ ಕೈಗಾರಿಕೀಕರಣದ ಬೆಳವಣಿಗೆಯನ್ನು ಟೀಕಿಸಿತು. ಅಲ್ಲದೇ ಬಡವನ ಆಹಾರದ ಹಕ್ಕನ್ನು ರಕ್ಷಿಸಲು ಇನ್ನಷ್ಟು ಹೆಚ್ಚಿನದನ್ನು ಮಾಡಬೇಕೆಂದು FAO ಮತ್ತು ಸರ್ಕಾರಕ್ಕೆ ಕರೆನೀಡಿತು.[೨೮]
2000 ರಿಂದ
[ಬದಲಾಯಿಸಿ]FAO 2002 ರಲ್ಲಿ ಆಯೋಜಿಸಲಾದ ಮುಂದಿನ ಆಹಾರ ಶೃಂಗಸಭೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಈ ಸಭೆ ಸಮಯವನ್ನು ವ್ಯರ್ಥ ಮಾಡಿತು ಎಂಬ ಅಭಿಪ್ರಾಯಕ್ಕೆ ಬಂದರು.[೨೯] ಸಾಮಾಜಿಕ ಚಳವಳಿಗಳು , ಕೃಷಿಕರು, ಮೀನುಹಿಡಿಯುವವರು, ಕುರಿಸಾಕುವವರು, ಸ್ಥಳೀಯ ಜನರು, ಪರಿಸರವಾದಿಗಳು, ಮಹಿಳಾ ಸಂಘಟನೆಗಳು, ವಾಣಿಜ್ಯ ಒಕ್ಕೂಟಗಳು ಮತ್ತು NGO ಗಳು ಈ ಸಭೆಯ ಬಗ್ಗೆ ಸಾಮೂಹಿಕ ಅತೃಪ್ತಿಯನ್ನು ವ್ಯಕ್ತಪಡಿಸಿದರು, ಅಲ್ಲದೇ ಶೃಂಗ ಸಭೆಯ ಅಧಿಕೃತ ಘೋಷಣೆಯನ್ನು ನಿರಾಕರಿಸಲಾಯಿತು. ನಿರಾಕರಿಸಿದರು [೩೦]. 2004ರಲ್ಲಿ FAO , 'ಕೃಷಿ ಜೈವಿಕ ತಂತ್ರಜ್ಞಾನ: ಬಡವನ ಅಗತ್ಯಗಳನ್ನು ಪೂರೈಸುವುದೇ?' ಎಂಬ ಶೀರ್ಷಿಕೆಯಡಿಯಲ್ಲಿ ವಿವಾದಾತ್ಮಕ ವರದಿಯನ್ನು ಪ್ರಕಟಿಸಿತು. ಈ ವರದಿ, "ಕೃಷಿ ಜೈವಿಕ ತಂತ್ರಜ್ಞಾನವನ್ನು ಹಸಿವಿನ ವಿರುದ್ಧದ ಹೋರಾಟದಲ್ಲಿ ಬಳಸಬಹುದಾದ ಹೊಸ ಅಸ್ತ್ರದಂತೆ ನಿಜವಾದ ಸಾಮರ್ಥ್ಯವನ್ನು ಹೊಂದಿದೆ" ಎಂಬುದನ್ನು ವಾದಿಸಿತು.[೩೧] ಈ ವರದಿಗೆ ಪ್ರತಿಕ್ರಿಯಿಸುವಂತೆ ಅಲ್ಲಿಯ ಮತ್ತು ಪ್ರಪಂಚದ ಇತರ ಭಾಗಗಳಿಂದ ಸುಮಾರು 650 ಕ್ಕಿಂತಲೂ ಹೆಚ್ಚು ಸಂಘಟನೆಗಳು ಬಹಿರಂಗ ಪತ್ರಕ್ಕೆ ಸಹಿಹಾಕಿದವು. ಈ ಪತ್ರದಲ್ಲಿ ಅವರು "FAO , ನಾಗರಿಕ ಸಮಾಜದೊಂದಿಗೆ ಮತ್ತು ಕೃಷಿಕರ ಸಂಘಟನೆಗಳೊಂದಿದೆ ಅದರ ಬದ್ಧತೆಯನ್ನು ಮುರಿದುಕೊಂಡಿದೆ" ಎಂದು ಹೇಳಿದ್ದರು. . ಈ ಪತ್ರವು, FAO ಕೃಷಿಕರ ಆಸಕ್ತಿಯನ್ನು ಪ್ರತಿನಿಧಿಸುವಂತಹ ಸಂಘಟನೆಗಳ ಸಲಹೆಯನ್ನು ತೆಗೆದುಕೊಳ್ಳದೇ, ಜೈವಿಕ ತಂತ್ರಜ್ಞಾನ ಕೈಗಾರಿಕೆಯ ಪರವಾಗಿ ನಿಂತಿದೆ ಎಂದು ದೂರು ನೀಡಿದೆ. ಈ ವರದಿಯ ಪರಿಣಾಮವಾಗಿ "ಸಂಯುಕ್ತ ರಾಷ್ಟ್ರ ಸಂಘಟನೆಯ ಪ್ರಮುಖ ಏಜೆನ್ಸಿಯ ಸ್ವತಂತ್ರದ ಬಗ್ಗೆ ಮತ್ತು ಬೌದ್ಧಿಕ ಸಮಗ್ರತೆಯ ಬಗ್ಗೆ ಗಂಭೀರವಾದ ಪ್ರಶ್ನೆ ಏಳುತ್ತದೆ".[೩೨] FAO ನ ಮಹಾನಿರ್ದೇಶಕರು, ಜೈವಿಕ ತಂತ್ರಜ್ಞಾನದ ಮೇಲೆ ನಿರ್ಧಾರಗಳನ್ನು "ಸಮರ್ಥ ಅಧಿಕಾರಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಳ್ಳಬೇಕಾಗಿದೆ" ಎಂಬ ಹೇಳಿಕೆಯನ್ನು ಕೊಡುವ ಮೂಲಕ ತಕ್ಷಣವೇ ಪ್ರತಿಕ್ರಿಯಿಸಿದರು.( ಇದನ್ನು ಸರ್ಕಾರೇತರ ಸಂಘಟನೆಗಳು ತೆಗೆದುಕೊಳ್ಳುವಂತಹದ್ದಲ್ಲ ಎಂಬುದು ಇದರ ಅರ್ಥವಾಗಿದೆ). ಅವರು, "ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಪಂಚದ ಅಗ್ರ ಹತ್ತು ಬಹುರಾಷ್ಟ್ರೀಯ ಕಂಪನಿಗಳು ಸಂಶೋಧನೆ ನಡೆಸಿವೆ." ಅಲ್ಲದೇ " ಈ ಸಂಶೋಧನೆಯಿಂದ ಪಡೆದ ವಿಷಯಗಳನ್ನು ಖಾಸಗಿ ಕ್ಷೇತ್ರದ ಕಂಪನಿಗಳು ಪೇಟೆಂಟ್(ಹಕ್ಕು ಸೌಮ್ಯದ) ಮೂಲಕ ಸಂರಕ್ಷಿಸಿಟ್ಟು ಕೊಂಡಿವೆ. ಈ ಮೂಲಕ ಕಂಪನಿಗಳು ಬಂಡವಾಳ ಹೂಡಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಡಬೇಕೆಂದಿವೆ.[೩೩] 2006 ರ ಮೇ ಯಲ್ಲಿ , ಬ್ರಿಟಿಷ್ ವೃತ್ತಪತ್ರಿಕೆ ಲೂಯೀಸ್ ಫ್ರೆಸ್ಕೊ ಎಂಬುವವರ ರಾಜೀನಾಮೆ ಪತ್ರವನ್ನು ಪ್ರಕಟಿಸಿತು. FAO ನ ಎಂಟು ಉಪ ಮಹಾನಿರ್ದೇಶಕರಲ್ಲಿ ಇವರೂ ಒಬ್ಬರು. ಅವರ ಪತ್ರದಲ್ಲಿ , ಗೌರವಾನ್ವಿತರಾದ ಡಾ.ಫ್ರೆಸ್ಕೊ ರವರು, "ಈ ಸಂಘಟನೆಗೆ ಹೊಸ ಯುಗದೊಂದಿಗೆ ಹೊಂದಿಕೊಳ್ಳಲಾಗುವುದಿಲ್ಲ ", " ನಮ್ಮ ಕೊಡುಗೆ (ಪ್ರಯತ್ನ) ಮತ್ತು ಗೌರವ ಖಂಡಿತವಾಗಿ ಹಾಳಾಗುತ್ತದೆ " ಹಾಗು "ಇದರ ನಾಯಕತ್ವವು ಈ ಸಮಸ್ಯೆಯನ್ನು ಪರಿಹರಿಸುವಂತಹ ದಿಟ್ಟ ಆಯ್ಕೆಯನ್ನು ನೀಡಿಲ್ಲ " ಎಂದು ಹೇಳಿದ್ದಾರೆ.[೩೪] 2006 ರ ಅಕ್ಟೋಬರ್ ನಲ್ಲಿ ರೋಮ್ ನಲ್ಲಿ ವಿಶ್ವ ಆಹಾರ ಭದ್ರತೆಯ ಮೇಲೆ ನಡೆದ FAO ಸಮಿತಿಯ 32 ನೇ ಅಧಿವೇಶನದಲ್ಲಿ 120 ರಾಷ್ಟ್ರಗಳ ನಿಯೋಗದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಅಧಿವೇಶನವನ್ನು ಖಾಸಗಿ ಸಂಸ್ಥೆಗಳು ವ್ಯಾಪಕವಾಗಿ ಟೀಕಿಸಿದವು. ಆದರೆ ಈ ಟೀಕೆಯನ್ನು ಪ್ರಮುಖ,ಮುಖ್ಯವಾಹಿನಿಯ ಮಾಧ್ಯಮಗಳು ನಿರ್ಲಕ್ಷಿಸಿದವು. ವಿಯಾ ಕ್ಯಾಂಪೆಸಿನ,(ಅಂತರಾಷ್ಟ್ರೀಯ ವಲಯದ ರೈತ ಸಮೂಹ) FAO ನ ಆಹಾರ ಭದ್ರತೆಯ ನಿಯಮಗಳನ್ನು ಟೀಕಿಸುವ ಹೇಳಿಕೆಯನ್ನು ಪ್ರಕಟಿಸಿದ ಕಾರಣ ಮಾತುಕತೆಯು ಆಕ್ಸ್ ಫ್ಯಾಮ್ ಎಂದು ಕರೆಯಲಾಗುವ ಒಕ್ಕೂಟದ ನಿರ್ಮಾಣದೊಂದಿಗೆ ಮುಕ್ತಾಯಗೊಂಡಿತು[೩೫].[೩೬] FAO ನ ಇಂಡಿಪೆಂಡಂಟ್ ಎಕ್ಸ್ ಟ್ರನಲ್ ಇವ್ಯಾಲ್ಯುಯೇಷನ್ ನ (ಸ್ವತಂತ್ರವಾದ ಬಾಹ್ಯ ಮೌಲ್ಯ ಮಾಪನದ) ಅಂತಿಮ ವರದಿ 2007 ರ ಅಕ್ಟೋಬರ್ 18 ರಂದು ಪ್ರಕಟವಾಯಿತು. ಈ ವರದಿಯು 400 ಪುಟಗಳಿಗಿಂತ ಹೆಚ್ಚಿತ್ತು. ಈ ರೀತಿಯ ಮೌಲ್ಯ ಮಾಪನವು ಸಂಘಟನೆಯ ಇತಿಹಾಸದಲ್ಲೇ ಮೊದಲನೆಯದಾಗಿದೆ. 2005 ರ ನವೆಂಬರ್ ನಲ್ಲಿ ನಡೆದ FAO ಅಧಿವೇಶನದ 33 ನೇ ಸಭೆಯ ನಿರ್ಧಾರದ ಮೂಲಕ ಇದನ್ನು ಜಾರಿಗೊಳಿಸಲಾಯಿತು. ವರದಿಯು ಕಡೆಯಲ್ಲಿ, "ಇಂದು ಈ ಸಂಘಟನೆಯು ಆರ್ಥಿಕ ಮತ್ತು ಯೋಜನಾ ಕಾರ್ಯಕ್ರಮಗಳ ಬಿಕ್ಕಟ್ಟಿನಲ್ಲಿದೆ". ಆದರೆ "ಇಂದು ಸಂಘಟನೆಗೆ ತೊಡಕುಂಟುಮಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ" ಎಂದು ತಿಳಿಸಿತು.[೩೭] IEE ಪಟ್ಟಿ ಮಾಡಿರುವ ಸಮಸ್ಯೆಗಳಲ್ಲಿ : "ಸಂಘಟನೆಯು ಸಂಪ್ರದಾಯಶೀಲವಾಗಿದ್ದು, ಹೊಸತನವನ್ನು ಒಪ್ಪಿಕೊಳ್ಳುವಲ್ಲಿ ನಿಧಾನ ಮಾಡುತ್ತಿದೆ" , "FAO ಪ್ರಸ್ತುತದಲ್ಲಿ ದುಬಾರಿಯಾದ ಮತ್ತು ಜಡ ಅಧಿಕಾರ ಶಾಹಿ ವ್ಯವಸ್ಥೆ ಹೊಂದಿದೆ. " ಅಲ್ಲದೇ "ಸಂಘಟನೆಯ ಸಾಮರ್ಥ್ಯ ಕುಗ್ಗುತ್ತಿದ್ದು, ಇದರ ಅನೇಕ ಪ್ರಮುಖ ಶಕ್ತಿಗಳು ಈಗ ವಿಪತ್ತಿಗೆ ಸಿಲುಕುತ್ತಿವೆ" . ಪರಿಹಾರಗಳಲ್ಲಿ: "ಹೊಸ ಕಾರ್ಯನೀತಿಯ ಕಾರ್ಯ ಚೌಕಟ್ಟು" , " ಸಂಘಟನೆಯ ಸಂಸ್ಕೃತಿ ಬದಲಾವಣೆ ಹಾಗು ಆಡಳಿತಾತ್ಮಕ ಮತ್ತು ಆಡಳಿತ ಮಂಡಳಿ ವ್ಯವಸ್ಥೆಯಲ್ಲಿ ಸುಧಾರಣೆ" . ಅಕ್ಟೋಬರ್ 29 ರಂದು ಬಂದ FAO ನ ಅಧಿಕೃತ ಪ್ರತಿಕ್ರಿಯೆಗಳು: ಬೆಳವಣಿಗೆಯೊಂದಿಗೆ ಸುಧಾರಣೆಯ' ಬಗ್ಗೆ IEE ನ ವರದಿಯಲ್ಲಿ ಬಂದಂತಹ ಪ್ರಧಾನ ಫಲಿತಾಂಶವನ್ನು ಆಡಳಿತ ಮಂಡಳಿ ಬೆಂಬಲಿಸುತ್ತದೆ. ಇದರಿಂದಾಗಿ FAO 'ಈ ಶತಮಾನದಲ್ಲಿ ಇದನ್ನು' ಸಾಧಿಸುತ್ತದೆ" .[೩೮] ಇದೇ ಸಮಯದಲ್ಲಿ, FAO ನ ನೂರಾರು ಸಿಬ್ಬಂದಿ "ಆಡಳಿತ ಸಂಸ್ಕೃತಿ ಮತ್ತು ಅದರ ಗುಣಲಕ್ಷಣದಲ್ಲಿ ಮೂಲ ಬದಲಾವಣೆ ತರುವುದು, ಮತ್ತು ನೇಮಕಾತಿಗಳನ್ನು ರಾಜಕೀಯರಾಹಿತ್ಯಗೊಳಿಸುವುದು, ಸಿಬ್ಬಂದಿ ವರ್ಗದ ಮತ್ತು ಆಡಳಿತ ಮಂಡಳಿಯ ನಡುವೆ ನಂಬಿಕೆಯನ್ನು ಪುನರ್ಸ್ಥಾಪಿಸುವುದು , [ಮತ್ತು ] ಸಂಘಟನೆಯ ಆದ್ಯತೆಗಳನ್ನು ಸಿದ್ಧಪಡಿಸುವುದು" ಎಂಬ IEE ನ ಶಿಫಾರಸ್ಸುಗಳನ್ನು ಬೆಂಬಲಿಸುವ ಅಹವಾಲಿಗೆ ಸಹಿಹಾಕಿದರು.[೩೯] ಅಂತಿಮವಾಗಿ IEE , " FAO ಇಲ್ಲದಿದ್ದಲ್ಲಿ ಇದನ್ನು ರಚನೆ ಮಾಡುವ ಅಗತ್ಯವಿರಲಿಲ್ಲ" ಎಂದು ತಿಳಿಸಿದೆ. 2008 ರ ನವೆಂಬರ್ ನಲ್ಲಿ , FAO ಸದಸ್ಯ ರಾಷ್ಟ್ರಗಳ ವಿಶೇಷ ಅಧಿವೇಶನವು, ಇಂಡಿಪೆಂಡಂಟ್ ಎಕ್ಸ್ ಟ್ರನಲ್ ಇವ್ಯಾಲ್ಯುವೇಷನ್ (IEE) ಶಿಫಾರಸ್ಸು ಮಾಡಿದ "ಬೆಳವಣಿಗೆಯೊಂದಿಗೆ ಸುಧಾರಣೆಯನ್ನು" ಕಾರ್ಯರೂಪಕ್ಕೆ ತರಲು, ಮೂರುವರ್ಷಗಳ ತಕ್ಷಣದ ಯೋಜನೆಗೆ US$42.6 ಮಿಲಿಯನ್ ನಷ್ಟು ಹಣಕಾಸು ಮಂಜೂರು ಮಾಡಲು ಒಪ್ಪಿಕೊಂಡಿತು. ಈ ಯೋಜನೆಯಡಿಯಲ್ಲಿ US$21.8 ಮಿಲಿಯನ್ ನಷ್ಟು ಆರ್ಥಿಕ ನಿರ್ವಹಣೆ, ಶ್ರೇಣಿ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ಆಡಳಿತ ಮಂಡಳಿಯ ಕಾರ್ಯಚಟುವಟಿಕೆ ಪರಿಶೀಸಲು ಮುಂದಿನ ವರ್ಷ ಬಳಸಲಾಗುವುದು.[೪೦]
FAO ಮತ್ತು ವಿಶ್ವ ಆಹಾರ ಬಿಕ್ಕಟ್ಟು
[ಬದಲಾಯಿಸಿ]2008 ರ ಮೇ ಯಲ್ಲಿ , ಸೆನೆಗಲ್ ನ ಅಧ್ಯಕ್ಷರಾದ ಅಬ್ದುಲ್ಲಾ ವಾಡೆಯವರು , ಪ್ರಸ್ತುತದಲ್ಲಿರುವ ವಿಶ್ವ ಆಹಾರ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತ, FAO ಎಂಬುದು "ಹಣದ ಪೋಲಾಗಿದೆ." ಅದಲ್ಲದೇ "ನಾವು ಅದನ್ನು ಖಂಡಿತವಾಗಿ ತಿರಸ್ಕರಿಸಬೇಕು " ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ವಾಡೆಯವರು, ಬೆಲೆ ಏರಿಕೆಗಾಗಿ FAO ಅನ್ನು ದೂಷಿಸಬೇಕಾಗಿದೆ, ಅಲ್ಲದೇ ಸಂಘಟನೆಯ ಕೆಲಸಕಾರ್ಯವನ್ನು ಮಾದರಿಯಾಗಿಸಿಕೊಂಡ UNನ ಇಂಟರ್ ನ್ಯಾಷನಲ್ ಫಂಡ್ ಫಾರ್ ಅಗ್ರಿಕಲ್ಚರ್ ಅಂಡ್ ಡೆವಲಪ್ ಮೆಂಟ್ ನಂತಹ ಇತರ ಸಂಸ್ಥೆಗಳು ಅತ್ಯಂತ ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.[೪೧] ಆದರೂ, ಈ ಟೀಕೆಯು ಅಧ್ಯಕ್ಷರು ಮತ್ತು ಮಹಾನಿರ್ದೇಶಕರ ನಡುವಿನ ವೈಯಕ್ತಿಕ ದ್ವೇಷಕ್ಕೆ ಸಂಬಂಧಿಸಿದೆ. ಇವರು ಸೆನೆಗಲ್ ದೇಶದ ನಿವಾಸಿಯಾಗಿ ಎರಡೂ ಸಂಸ್ಥೆಗಳು ಕೈಗೊಂಡ ಕಾರ್ಯದಲ್ಲಿ ಕಂಡುಬರುವ ಪ್ರಮುಖ ಭಿನಾಭಿಪ್ರಾಯದ ಮೇಲೆ ಬೆಳಕು ಚೆಲ್ಲಿದ್ದಾರೆ. 2008ರಲ್ಲಿ, FAO ವಿಶ್ವ ಆಹಾರ ಭದ್ರತೆಯ ಮೇಲೆ ಉನ್ನತ ಮಟ್ಟದ ಅಧಿವೇಶನವನ್ನು ಪ್ರಾಯೋಜಿಸಿತು. ಈ ಶೃಂಗಸಭೆಯು ಜೈವಿಕ ಇಂಧನ ವಿಷಯದ ಬಗೆಗಿನ ಸಮ್ಮತಿಯ ಕೊರತೆಯಿಂದಾಗಿ ಗಮನಾರ್ಹವಾಗಿದೆ.[೪೨] ಶೃಂಗಸಭೆಯ ಬಗ್ಗೆ ಸರ್ಕಾರೇತರ ಸಂಸ್ಥೆಗಳು ಮಿಶ್ರ ಪ್ರತಿಕ್ರಿಯೆ ನೀಡಿದವು, ಇದರ ಜೊತೆಯಲ್ಲಿ ಆಕ್ಸ್ ಫ್ಯಾಮ್, "ರೋಮ್ ನಲ್ಲಿ ನಡೆದ ಶೃಂಗಸಭೆ ಆಹಾರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮೊದಲ, ಪ್ರಮುಖ ಹೆಜ್ಜೆಯಾಗಿದೆ. ಆದರೆ ಈಗ ಅತ್ಯುತ್ತಮ,ಚುರುಕಿನ ಕಾರ್ಯಾಚರಣೆಯ ಅಗತ್ಯವಿದೆ " [೪೩] ಎಂದು ತಿಳಿಸಿದೆ. ಸತತ ಅಭಿವೃದ್ಧಿಯ ಇರಾನ್ ಕೇಂದ್ರದ ಮರ್ಯಮ್ ರಮಣಿಯನ್ ರವರು, " ನಾವು ಆಹಾರ ಬಿಕ್ಕಟ್ಟನ್ನು ನೋಡಿ ನಿರಾಶರಾದೆವು ಮತ್ತು ರೋಸಿಹೋದೆವು. ಮುಂದಿನ ಯೋಜನೆಗಳನ್ನು ಬಳಸುವುದರಿಂದ ಅವು ಮೊದಲ ಸ್ಥಾನದಲ್ಲಿ ನಮ್ಮನ್ನು ಆಹಾರ ಬಿಕ್ಕಟ್ಟಿನಲ್ಲಿ ಸಿಲುಕಿಸಲಿವೆ” ಎಂದು ಹೇಳಿದ್ದಾರೆ.[೪೪] ಹಿಂದಿನ ಆಹಾರ ಶೃಂಗಸಭೆಗಳೊಂದಿಗೆ, ನಾಗರಿಕ ಸಮಾಜದ ಸಂಘಟನೆಗಳು,ಸಮಾಂತರದ ಸಭೆ ನಡೆಸಿ, ಅದರದೇ ಸ್ವಂತ ಘೋಷಣೆಯನ್ನು ಪ್ರಕಟಿಸಿದವು: "ಉತ್ಪಾದನೆ ಮತ್ತು ಬಳಕೆಯ ಸಂಘಟಿತ ಕೈಗಾರಿಕೆ ಮತ್ತು ಮಾದರಿಯು ಮುಂದುವರೆಯುತ್ತಿರುವ ಬಿಕ್ಕಟ್ಟಿನ ಮೂಲಕಾರಣವಾಗಿರುವುದರಿಂದ ಇದನ್ನು ನಿರಾಕರಿಸುವುದು" [೪೫]
ಇವನ್ನೂ ನೋಡಿ
[ಬದಲಾಯಿಸಿ]- ಆಹಾರ ಭದ್ರತೆಯ ಮೇಲೆ ವಿಶ್ವ ಶೃಂಗಸಭೆ
- CountrySTAT
- ವರ್ಗ:Food and Agriculture Organization officials
- FAO ನ ರಾಷ್ಟ್ರಗಳ ಸಂಪೂರ್ಣ ಮಾಹಿತಿ-ವಿವರಗಳು
- ಕೃಷಿ ಮತ್ತು ಪರಿಸರ
- ಫಾರ್ಮರ್ ಫೀಲ್ಡ್ ಸ್ಕೂಲ್
- ಆಹಾರ ಸುರಕ್ಷತೆ
- ಆಹಾರ ಭದ್ರತೆ
- ಆಹಾರದ ಸಾರ್ವಭೌಮತ್ವ
- ಸಮಗ್ರ ಆಹಾರ ಭದ್ರತೆಯ ಹಂತದ ವರ್ಗೀಕರಣ
- OIE/FAO ನೆಟ್ ವರ್ಕ್ ಆಫ್ ಎಕ್ಸ್ಪರ್ಟೈಸ್ ಆನ್ ಏವಿಯನ್ ಇನ್ ಫ್ಲುಯೆನ್ಸ್
- ವಿಶ್ವ ಆಹಾರ ದಿನ, ಅಕ್ಟೋಬರ್,16.
- ಅಂತರರಾಷ್ಟ್ರೀಯ ಪರ್ವತದ ದಿನ,ಡಿಸೆಂಬರ್, 11.
- ಅರಣ್ಯಪ್ರದೇಶ ಮಾಹಿತಿ ಕೇಂದ್ರ
- AGROVOC
- ಕೃಷಿ ಮಾಹಿತಿ ಆಡಳಿತ ಮಂಡಳಿಯ ಗುಣಮಟ್ಟಗಳು
- ಕೃಷಿ ಮೂಲತತ್ತ್ವಶಾಸ್ತ್ರದ ಸೇವೆ
- Agris: International Information System for the Agricultural Sciences and Technology
- ಅಗ್ರಿಕಲ್ಚರ್ ಮೆಟಾಡೇಟಾ ಎಲಿಮೆಂಟ್ ಸೆಟ್
- RIGA ಪ್ರಾಜೆಕ್ಟ್
ಉಲ್ಲೇಖಗಳು
[ಬದಲಾಯಿಸಿ]- ↑ "List of FAO members". Fao.org. Archived from the original on 2011-10-01. Retrieved 2010-10-15.
- ↑ ಟೆಕ್ಸ್ಟ್ ಆಫ್ ದಿ 1905 ಕನ್ ವೆನ್ಷನ್, ಫ್ರಮ್ ದಿ ವೆಬ್ ಸೈಟ್ ಆಫ್ ದಿ ಬ್ರಿಟಿಷ್ ಫಾರೀನ್ ಅಂಡ್ ಕಾಮನ್ ವೆಲ್ತ್ ಆಫೀಸ್ ಮತ್ತು ಸಪ್ಲಿಮೆಂಟರಿ ಪ್ರೊಟೊಕಾಲ್ ಆಫ್ 1926
- ↑ "Text of the 1946 convention for the dissolution of the International Agricultural Institute". Archived from the original on 2012-04-18. Retrieved 2010-10-15.
- ↑ FAO Departments http://www.fao.org/about/depart/en/ Archived 2010-11-15 ವೇಬ್ಯಾಕ್ ಮೆಷಿನ್ ನಲ್ಲಿ.
- ↑ UN ಫುಡ್ ಏಜೆನ್ಸಿ ಸೇಸ್ ರಿಯಲ್ ಬಡ್ಜಟ್ ಫಾಲ್ಸ್ ಇನ್ 2004–2005 , UN ಮಿಷನ್ ಟು ದಿ UN ಏಜೆನ್ಸೀಸ್ ಇನ್ ರೋಮ್,2003 ರ ಡಿಸೆಂಬರ್ 10 [೧] Archived 2007-02-11 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "''FAO'S 2006–2007 budget'', FAO Newsroom, 25 November 2005". Fao.org. 2005-11-26. Archived from the original on 2021-01-12. Retrieved 2010-10-15.
- ↑ "Declaration of the World Summit on Food Security, FAO Web site, 16 November 2009" (PDF). Retrieved 2010-10-15.
- ↑ "ಹೈಟೀಸ್ ಸೀಡ್ ಮಲ್ಟಿಪ್ಲಿಕೇಷನ್ ಪ್ರೋಗ್ರಾಂ ಯಿಲ್ಡ್ಸ್ ಫ್ರೂಟ್ಸ್ ",ಜೆನೆ ಆಫ್ರಿಕೆ , 2009 ರ ಆಗಸ್ಟ್ 21 [೨]
- ↑ "FAO and EU Food Facility". Fao.org. Archived from the original on 2018-09-20. Retrieved 2010-10-15.
- ↑ "UN ನ ಆಹಾರ ಇಲಾಖೆಗಳು ಜಿಂಬಾವ್ವೆಯಲ್ಲಿ ರೈತರಿಗೆ ಸಲಹೆ ನೀಡಿದವು", ಕ್ಸಿನ್ಹು, 2009 ರ ಸೆಪ್ಟೆಂಬರ್ 14 [೩]
- ↑ "18 ವರ್ಷಗಳಲ್ಲಿ ಸೋಮಾಲಿಯ ಅತ್ಯಂತ ಬೀಕರ ಬಿಕ್ಕಟ್ಟನ್ನು ಅನುಭವಿಸಿದೆ: UN", ಹಿಂದುಸ್ಥಾನ್ ಟೈಮ್ಸ್ ,2009 ರ ಸೆಪ್ಟೆಂಬರ್ 22.
- ↑ "ಜಂಬೇಜಿ ಮಾರಣಾಂತಿಕ ಮೀನು ರೋಗದ ದಾಳಿಗೊಳಗಾಯಿತು",ಫಿಶ್ ಫಾರ್ಮರ್ ,2009 ರ ಜುಲೈ 21
- ↑ "About GIPB". Km.fao.org. Archived from the original on 2011-06-29. Retrieved 2010-10-15.
- ↑ "Mission". Km.fao.org. Archived from the original on 2011-06-29. Retrieved 2010-10-15.
- ↑ "FAO launches anti-hunger petition, 11 May 2010". Fao.org. 2010-05-11. Archived from the original on 2018-06-29. Retrieved 2010-10-15.
- ↑ "FAO fights hunger with petition". The Myanmar Times. 2010-07-05. Archived from the original on 2012-01-12. Retrieved 2010-07-20.
- ↑ "CIA World Factbook , 14 May 2009". Archived from the original on 4 ಮೇ 2012. Retrieved 3 ನವೆಂಬರ್ 2010.
- ↑ "FAO members list". Fao.org. Archived from the original on 2011-10-01. Retrieved 2010-10-15.
- ↑ ಕ್ರಿಟಿಕ್ಸ್ ಸೇ ರೈವಲ್ರೀಸ್ ಹರ್ಟ್ ವರ್ಕ್ ಆಫ್ ಫುಡ್ ಗ್ರೂಪ್ಸ್ ,ನ್ಯೂಯಾರ್ಕ್ ಟೈಮ್ಸ್,1981 ರ ನವೆಂಬರ್ 9 [೪]
- ↑ ಬ್ರೆಡ್ ಅಂಡ್ ಸ್ಟೋನ್ಸ್ : ಲೀಡರ್ ಶಿಪ್ ಅಂಡ್ ದಿ ಸ್ಟ್ರಗಲ್ ಟು ರೀಫಾಮ್ ದಿ ಯುನೈಟೆಡ್ ನೇಷನ್ಸ್ ವಲ್ಡ್ ಫುಡ್ ಪ್ರೋಗ್ರಾಂ", ಜೇಮ್ಸ್ ಇನ್ ಗ್ರ್ಯಾಮ್, ಬುಕ್ ಸರ್ಜ್, 2006 [೫] Archived 2011-06-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ದಿ U.N.ಸ್ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್:ಬಿಕಮಿಂಗ್ ಪಾರ್ಟ್ ಆಫ್ ದಿ ಪ್ರಾಬ್ಲಂ ,ಜೂಲಿಯಾನ ಗೆರಾನ್ ಪಿಲೊನ್, ಹೆರಿಟೇಜ್ ಫೌಂಡೇಷನ್ ಬ್ಯಾಕ್ ಗ್ರೌಂಡರ್ #626,1988 ರ ಜನವರಿ 4 [೬] Archived 2008-06-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "''Society'', Volume 25, Number 6, September 1988". Springerlink.com. 2002-04-05. Retrieved 2010-10-15.[permanent dead link]
- ↑ ಎ ಸಿಕ್ಸ್ತ್ 100 ಕೊಶ್ಚೆನ್ಸ್ ಆನ್ ಡೆಮೊಕ್ರಸಿ ,ಕೌನ್ಸಿಲ್ ಫಾರ್ ಪ್ಯಾರಿಟಿ ಡೆಮೊಕ್ರಸಿ, 2002 ರ ನವೆಂಬರ್ 22 [೭]
- ↑ ಲಾರ್ಡ್ ಆಫ್ ಪಾವರ್ಟಿ: ದಿ ಪವರ್, ಪ್ರೆಸ್ಟೀಜ್, ಅಂಡ್ ಕರಪ್ಷನ್ ಆಫ್ ದಿ ಇಂಟರ್ ನ್ಯಾಷನಲ್ ಏಡ್ ಬಿಸ್ನೆಸ್ , ಮ್ಯಾಕ್ ಮಿಲ್ಲನ್, ಲಂಡನ್,1989 [೮]
- ↑ ಸ್ಟೇಟ್ ಮೆಂಟ್ ಬೈ ಜಾನ್ ಆರ್. ಬೋಲ್ಟಾನ್ ,ಅಸಿಸ್ಟೆಂಟ್ ಸೆಕ್ರೆಟರಿ ಫಾರ್ ಇಂಟರ್ ನ್ಯಾಷನಲ್, ಆರ್ಗನೈಸೇಷನ್ ,1990 ರ ಸೆಪ್ಟೆಂಬರ್ 19 [೯] Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "''The Ecologist'' 21(2), March/April, 1991". Exacteditions.theecologist.org. Archived from the original on 2011-07-28. Retrieved 2010-10-15.
- ↑ "''World Food Summit archive'', FAO". Fao.org. Archived from the original on 2018-10-12. Retrieved 2010-10-15.
- ↑ ಪ್ರಾಫಿಟ್ ಫಾರ್ ಫ್ಯೂ ಆರ್ ಫುಡ್ ಫಾರ್ ಆಲ್ ,ಫೈನಲ್ ಸ್ಟೇಟ್ಮೆಂಟ್ ಆಫ್ ದಿ NGO ಫೋರಂ,1996 [೧೦]
- ↑ "''Food summit waste of time''. BBC, 13 June 2002". BBC News. 2002-06-13. Retrieved 2010-10-15.
- ↑ "''NGO/CSO Forum for Food Sovereignty, final statement'', 12 June 2002". Practicalaction.org. Retrieved 2010-10-15.
- ↑ ಅಗ್ರಿಕಲ್ಚರ್ ಬಯೋ ಟೆಕ್ನಾಲಜಿ(ಕೃಷಿ ಜೈವಿಕ ತಂತ್ರಜ್ಞಾನ): ಮೀಟಿಂಗ್ ದಿ ನೀಡ್ಸ್ ಆಫ್ ದಿ ಪುವರ್? , FAO, 2004ರ ಮೇ 17 [೧೧] Archived 2010-11-27 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "''FAO declare war on farmers not hunger'', Grain, 16 June 2004". Grain.org. 2004-06-16. Retrieved 2010-10-15.
- ↑ "''Statement by FAO Director General''". Fao.org. Archived from the original on 2010-10-30. Retrieved 2010-10-15.
- ↑ ರೆಸಿಗ್ನೇಷನ್ ಲೆಟರ್ ಆಫ್ ಲೂಯೀಸ್ ಫ್ರೆಸ್ಕೊ, ADG,FAO ,ಗಾರ್ಡಿಯನ್ ಅನ್ ಲಿಮಿಟೆಡ್,2006ರ ಮೇ 14 , [೧೨] ಲಿಮಿಟೆಡ್,
- ↑ ಗ್ಲೋಬಲ್ ಹಂಗರ್: ಆಕ್ಟ್ ನವ್ ಆರ್ ಗೋ ಹೋಮ್ ,ಪ್ರೆಸ್ ಸ್ಟೇಟ್ಮೆಂಟ್,2006 ರ ಅಕ್ಟೋಬರ್ 30 [೧೩] Archived 2012-03-07 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "10 ಇಯರ್ಸ್ ಆಫ್ ಎಂಟಿ ಪ್ರಾಮಿಸಸ್ , ಪ್ರೆಸ್ ಸ್ಟೇಟ್ಮೆಂಟ್ 2006 ರ ಸೆಪ್ಟೆಂಬರ್ 22". Archived from the original on 2009-02-10. Retrieved 2021-08-09.
- ↑ ಇಂಡಿಪೆಂಡೆಂಟ್ ಎಕ್ಸ್ಟ್ರನಲ್ ಇವ್ಯಾಲ್ಯುಯೇಷನ್ ,ಪೇಜ್ ಅಟ್ FAO ವೆಬ್ ಸೈಟ್ ವಿತ್ ಲಿಂಕ್ಸ್ ಟು ದಿ IEE ರಿಪೋರ್ಟ್ [೧೪]
- ↑ "''Official FAO response to evaluation report''". Fao.org. 2007-10-29. Archived from the original on 2011-01-16. Retrieved 2010-10-15.
- ↑ ಫಾರ್ ಎ ರಿನ್ಯೂವಲ್ ಆಫ್ FAO ,ಆನ್ ಲೈನ್ ಪಿಟೀಷನ್, 2007 ರ ನವೆಂಬರ್
- ↑ ""UN food agency approves US$42.6 million reform plan"". Economictimes.indiatimes.com. 2008-11-22. Retrieved 2010-10-15.
- ↑ "''UN food body should be scrapped'', BBC News, 5 May 2008". BBC News. 2008-05-05. Retrieved 2010-10-15.
- ↑ "''Food summit fails to agree on biofuels'', Guardian 06 June 2008". Guardian. Retrieved 2010-10-15.
- ↑ ರೋಮ್ ಶೃಂಗಸಭೆ ‘ಇಂಪಾರ್ಟೆಂಟ್ ಫಸ್ಟ್ ಸ್ಟೆಪ್’ ಬಟ್ ಮಚ್ ಮೋರ್ ನೀಡೆಡ್ ಸೇಸ್ ಆಕ್ಸ್ ಫ್ಯಾಮ್, ಆಕ್ಸ್ ಫ್ಯಾಮ್ ಪ್ರೆಸ್ ರಿಲೀಸ್, 2008 ರ ಜೂನ್ 5 [೧೫] Archived 2008-06-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಫಾರ್ಮರ್ಸ್ 'ಡಿಸ್ ಗಸ್ಟೆಡ್' ವಿತ್ ಫುಡ್ ಸಮ್ಮಿಟ್ ,ಡ್ಯೇಲಿ ಡಿಸ್ ಪ್ಯಾಚ್ ಆನ್ ಲೈನ್ , 2008 ರ ಜೂನ್ 7 [೧೬]
- ↑ ಸಿವಿಲ್ ಸೊಸೈಟಿ ಡಿಕ್ಲರೇಷನ್ ಆಫ್ ದಿ ಟೆರ್ರ ಪ್ರಿಟಾ ಫೋರಂ , ಲಾ ವಿಯ ಕ್ಯಾಂಪೆಸಿನಾ, 2008 ರ ಜನವರಿ 5 [೧೭] Archived 2009-02-10 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- Articles containing Arabic-language text
- Articles containing Chinese-language text
- Articles containing French-language text
- Articles with French-language external links
- Articles containing Russian-language text
- Articles with Russian-language external links
- Articles containing Spanish-language text
- Articles with Spanish-language external links
- All articles containing potentially dated statements
- ಕೃಷಿ ಸಂಘಟನೆಗಳು
- ಮೀನುಗಾರಿಕೆಯ ಸಂಘಟನೆಗಳು
- ಆಹಾರ ಸಂಬಂಧಿ ಸಂಘಟನೆಗಳು
- ಆಹಾರ ರಾಜಕೀಯ
- ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್
- ಭೂ ಸಂಬಂಧಿ ರಾಜಕೀಯ
- ಇಟಲಿ ಮೂಲದ ಪರಿಸರೀಯ ಸಂಘಟನೆಗಳು
- ಅಪೌಷ್ಟಿಕತೆ
- ಸಂಯುಕ್ತ ರಾಷ್ಟ್ರ ಸಂಘದ ವಿಶೇಷ ವಿಭಾಗಗಳು
- 1945ರಲ್ಲಿ ಸ್ಥಾಪನೆಗೊಂಡ ಸಂಘಟನೆಗಳು
- ಅಂತರರಾಷ್ಟ್ರೀಯ ಸಂಘಟನೆಗಳು