ಆಲ
| ಆಲ | |||||||||||||||
|---|---|---|---|---|---|---|---|---|---|---|---|---|---|---|---|
Illustration of ಆಲದ ಎಲೆ ಮತ್ತು ಹಣ್ಣು
|
|||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| Many species, including:
ಟೆಂಪ್ಲೇಟು:Verify source
|
ಆಲ (Banyan Tree)ಇದು ಭಾರತದ ರಾಷ್ಟ್ರವೃಕ್ಷ.ಹಿಂದಿನ ಕಾಲದಲ್ಲಿ ಇದರ ನೆರಳಿನಲ್ಲಿ ಬನಿಯಾ(ಹಿಂದುವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು ಪ್ರವಾಸಿಗಳು ಬನಿಯಾನ್ ಟ್ರೀ ಎಂದು ಕರೆದರು.ಇದು ಬೃಹತ ಪ್ರಾಮಾಣದ್ದಾಗಿದ್ದು ಅಗಲವಾಗಿ ಹರಡಿರುವ ಕೊಂಬೆಗಳಿಂದ ಕೂಡಿದೆ.ಎಲ್ಲೆಡೆ ಸಾಲುಮರಗಳಾಗಿ ಬೆಳೆಸಲಾಗಿದೆ.ಜಗತ್ತಿನ ಅತ್ಯಂತ ದೊಡ್ಡದಾದ ಮರ ಕಲ್ಕತ್ತಾದಲ್ಲಿದೆ.
ಪರಿವಿಡಿ |
ಸಸ್ಯ ಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಇದು ಮೊರಾಸಿಯೆ ಕುಟುಂಬಕ್ಕೆ ಸೇರಿದ್ದು,ಫೈಕಸ್ ಬೆಂಗಾಲೆನಿಸಿಸ್(Ficus Bengalensis)ಎಂದು ಸಸ್ಯ ಶಾಸ್ತ್ರೀಯ ಹೆಸರು.ಸಂಸ್ಕೃತದಲ್ಲಿ 'ವಟವೃಕ್ಷ 'ಎಂದು ಕರೆಯುತ್ತಾರೆ.
ಸಸ್ಯದ ಗುಣ ಲಕ್ಷಣಗಳು [ಬದಲಾಯಿಸಿ]
ಇದು ವಿಶಾಲ ಕೊಂಬೆಗಳಿಂದ ಕೂಡಿದ ಮರ.ಈ ಕೊಂಬೆಗಳಿಂದ ಬೀಳಲುಗಳು ಹೊರಟು ನೆಲವನ್ನು ತಾಗಿ ಕಾಂಡಗಳಾಗಿ ಪರಿವರ್ತಿಸುತ್ತವೆ.ಈ ರೀತಿಯಿಂದ ಹಲವು ಎಕರೆ ಪ್ರದೇಶಗಳನ್ನೂ ವ್ಯಾಪಿಸುವುದುಂಟು.ಎಲೆ ದಪ್ಪವಾಗಿದ್ದು,ತೊಗಲಿನಂತಿದ್ದು ಹೊಳಪಿನಿಂದ ಕೂಡಿದೆ.
ಉಪಯೋಗಗಳು [ಬದಲಾಯಿಸಿ]
ಇದು ಸಾಲುಮರವಾಗಿ ವ್ಯಾಪಕವಾಗಿ ಉಪಯೋಗದಲ್ಲಿದೆ.ನೆರಳಿಗಾಗಿ,ಉದ್ಯಾನವನಗಳಲ್ಲಿ ಅಲಂಕಾರಕ್ಕೆ ನೆಡುತ್ತಾರೆ.ಇದರ ಎಲೆಗಳು ಆನೆಗಳಿಗೆ ಮೇವಾಗಿ ಉಪಯೋಗವಾಗುತ್ತದೆ.ಇದರ ಸಸ್ಯಕ್ಷೀರ ಹಾಗೂ ಬೇರಿನಿಂದ ಔಷಧ ತಯಾರಿಸುತ್ತಾರೆ.
ಆಧಾರ ಗ್ರಂಥಗಳು [ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ