ವಿಷಯಕ್ಕೆ ಹೋಗು

ಆನ್ ಹ್ಯಾಥ್‌ವೇ (ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Anne Hathaway

Hathaway at the Get Smart premiere in June 2008
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Anne Jacqueline Hathaway
(1982-11-12) ೧೨ ನವೆಂಬರ್ ೧೯೮೨ (ವಯಸ್ಸು ೪೨)
Brooklyn, New York,
United States
ವೃತ್ತಿ Actress
ವರ್ಷಗಳು ಸಕ್ರಿಯ 1999–present

'ಆನ್‌ ಜಾಕ್ವೆಲಿನ್‌ ಹ್ಯಾಥ್‌ವೇ (1982ರ ನವೆಂಬರ್‌ 12ರಲ್ಲಿ ಜನಿಸಿದಳು )ಒಬ್ಬಳು ಅಮೆರಿಕದ ನಟಿ, ಈಕೆ ಮೊದಲ ಬಾರಿಗೆ 1999ರಲ್ಲಿ ದೂರದರ್ಶನ ಸರಣಿ ಕಾರ್ಯಕ್ರಮ ಗೆಟ್ ರಿಯಲ್‌ ‌ನಲ್ಲಿ ನಟಿಸಿದಳು. ಇದು ರದ್ದುಗೊಂಡ ನಂತರ ಡಿಸ್ನಿ ಕೌಟುಂಬಿಕ ಹಾಸ್ಯ ದ ಪ್ರಿನ್ಸೆಸ್ ಡೈರೀಸ್‌ ‌ (2001)ನಲ್ಲಿ ಮಿಯಾ ಥರ್ಮೋಪೋಲಿಸ್‌ ಪಾತ್ರದಲ್ಲಿ ನಟಿಸಿದಳು, ಇದರಿಂದ ಅವಳ ವೃತ್ತಿಜೀವನಕ್ಕೆ ಚಾಲನೆ ಸಿಕ್ಕಿತು. ನಂತರದ ಮೂರು ವರ್ಷಗಳಲ್ಲಿ, ಅದರ ಉತ್ತರಭಾಗದ ಪಾತ್ರದಲ್ಲಿ ಪುನರಾವರ್ತನೆಗೊಳ್ಳುವ ಮ‌ೂಲಕ ಹಾಗೂ ಎಲ್ಲಾ ಎನ್‌ಚಾನ್ಟೆಡ್‌ '‌ನಲ್ಲಿ ಚಿತ್ರದ ಹೆಸರನ್ನೇ ಹೊಂದಿರುವ ಪಾತ್ರದಲ್ಲಿ ನಟಿಸುವ ಮ‌ೂಲಕ (ಎರಡೂ 2004) ಹ್ಯಾಥ್‌ವೇ ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸುವುದನ್ನು ಮುಂದುವರಿಸಿದಳು. ಇತರ ಯೋಜನೆಗಳಲ್ಲಿ ಆಸಕ್ತಿ ಇದ್ದುದರಿಂದ ಹ್ಯಾಥ್‌ವೇ ಹ್ಯಾವೋಕ್‌ ಮತ್ತು ಬ್ರೋಕ್‌ಬ್ಯಾಕ್‌ ಮೌಂಟೈನ್‌ (ಎರಡೂ 2005) ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವುದರೊಂದಿಗೆ ತನ್ನ ವೃತ್ತಿಜೀವನದಲ್ಲಿ ಬದಲಾವಣೆಯನ್ನು ತಂದುಕೊಂಡಳು. ಆನಂತರ ಅವಳು ದ ಡೆವಿಲ್ ವೇರ್ಸ್ ಪ್ರಾಡ (2006) ಚಿತ್ರದಲ್ಲಿ ಮೆರಿಲ್ ಸ್ಟ್ರೀಪ್‌‌‌‌ಳೊಂದಿಗೆ ಸಹ-ನಟಿಯಾಗಿ ಹಾಗೂ ಬಿಕಮಿಂಗ್ ಜೇನ್ (2007)ಯಲ್ಲಿ ಜೇನ್ ಆಸ್ಟೆನ್‌ ಹೆಸರಿನ ಲೇಖಕಿಯಾಗಿ ಅಭಿನಯಿಸಿದಳು. 2008ರಲ್ಲಿ ಅವಳು ರಾಚೆಲ್ ಗೆಟ್ಟಿಂಗ್ ಮ್ಯಾರೀಡ್‌ ಚಿತ್ರಕ್ಕಾಗಿ ಬಹುವ್ಯಾಪಕವಾಗಿ ವಿಮರ್ಶಾತ್ಮಕ ಪ್ರಶಂಸೆಗಳನ್ನು ಗಳಿಸಿದಳು, ಅಲ್ಲದೆ ಈ ಚಿತ್ರಕ್ಕಾಗಿ ಆಕೆ ಅಸಂಖ್ಯಾತ ಉದ್ಯಮ ಪ್ರಶಸ್ತಿಗಳನ್ನು ಗೆದ್ದಳು ಹಾಗೂ ಅತ್ಯುತ್ತಮ ನಟನೆಗಾಗಿ ಅಕಾಡೆಮಿ ಪ್ರಶಸ್ತಿಗೂ ನಾಮನಿರ್ದೇಶನಗೊಂಡಳು. ಹ್ಯಾಥ್‌ವೇಳ ನಟನಾ ಶೈಲಿಯನ್ನು ಜ್ಯೂಡಿ ಗಾರ್ಲ್ಯಾಂಡ್‌ ಮತ್ತು ಆಡ್ರೆ ಹೆಪ್ಬರ್ನ್‌[]‌ರೊಂದಿಗೆ ಹೋಲಿಸಲಾಗುತ್ತದೆ ಹಾಗೂ ಹೆಪ್ಬರ್ನ್‌‌ಳನ್ನು ಅವಳ ಅಚ್ಚುಮೆಚ್ಚಿನ ನಟಿಯರಲ್ಲಿ ಒಬ್ಬಳೆಂದು[] ಮತ್ತು ಸ್ಟ್ರೀಪ್‌ಳನ್ನು ವರ್ಚಸ್ವಿ ಎಂದು ಅವಳು ಉಲ್ಲೇಖಿಸಿದ್ದಾಳೆ.[] ಪೀಪಲ್‌ ನಿಯತಕಾಲಿಕವು ಅದರ 2001ರ ಜನಪ್ರಿಯ ನಟಿಯರಲ್ಲಿ ಇವಳೂ ಒಬ್ಬಳು ಎಂದು ಹೇಳಿದೆ[] ಮತ್ತು ಪ್ರಪಂಚದ 50 ಅತಿಹೆಚ್ಚು ಸುಂದರ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಬಾರಿಗೆ 2006ರಲ್ಲಿ ಕಾಣಿಸಿಕೊಂಡಳು.[]

ಆರಂಭಿಕ ಬದುಕು ಮತ್ತು ವೃತ್ತಿಜೀವನ

[ಬದಲಾಯಿಸಿ]

ಹ್ಯಾಥ್‌ವೇ ಗೆರಾಲ್ಡ್‌ ಹ್ಯಾಥ್‌ವೇ ಮತ್ತು ಕ್ಯಾಟೆ ಮ್ಯಾಕ್‌ಕಾಲೆ ದಂಪತಿಗಳಿಗೆ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ[][] ಜನಿಸಿದಳು. ಅವಳ ತಂದೆ ಒಬ್ಬ ವಕೀಲ ಹಾಗೂ ತಾಯಿ ಒಬ್ಬಳು ನಟಿಯಾಗಿದ್ದು,ಹ್ಯಾಥ್‌ವೇ ತನ್ನ ಹೆಜ್ಜೆಗುರುತನ್ನು ಅನುಸರಿಸುವಂತೆ ತಾಯಿ ಪ್ರೇರಣೆ ನೀಡಿದವಳು. ಹ್ಯಾಥ್‌ವೇ ಆರು ವರ್ಷ ವಯಸ್ಸಿನವಳಾಗಿದ್ದಾಗ ಅವರ ಕುಟುಂಬವು ನ್ಯೂಜೆರ್ಸಿಯ ಮಿಲ್ಬರ್ನ್‌‌ಗೆ ತೆರಳಿತು.[] ಅವಳಿಗೆ ಒಬ್ಬ ಅಣ್ಣ ಮೈಕೆಲ್ ಮತ್ತು ಒಬ್ಬ ತಮ್ಮ ಥಾಮಸ್ ಇದ್ದಾರೆ. ಹ್ಯಾಥ್‌ವೇ ಮುಖ್ಯವಾಗಿ ದೂರದ ಜರ್ಮನ್ ಮತ್ತು ಸ್ಥಳೀಯ ಅಮೆರಿಕ ಮ‌ೂಲದೊಂದಿಗೆಐರಿಶ್‌ ಮತ್ತು ಫ್ರೆಂಚ್ ಮನೆತನವನ್ನು ಮುಖ್ಯವಾಗಿ ಹೊಂದಿದ್ದಾಳೆ.[] "ನಿಜವಾಗಲೂ ಸದೃಢ ಮೌಲ್ಯಗಳನ್ನು" ಹೊಂದಿದೆಯೆಂದು ಅವಳು ಪರಿಗಣಿಸಿದ ಕ್ಯಾಥೋಲಿಕ್ ವ್ಯವಸ್ಥೆಯಲ್ಲಿ ಹ್ಯಾಥ್‌ವೇ ಬೆಳೆದಳು ಹಾಗೂ ಬಾಲ್ಯದಲ್ಲಿ ಕ್ರೈಸ್ತ ಸನ್ಯಾಸಿನಿಯಾಗಲು ಬಯಸಿದ್ದಾಗಿ ಹೇಳಿಕೊಂಡಿದ್ದಾಳೆ.[][೧೦] ಹದಿನೈದನೇ ವಯಸ್ಸಿನಲ್ಲಿ ಅವಳ ಅಣ್ಣ ಮೈಕೆಲ್ ಒಬ್ಬ ಸಲಿಂಗಕಾಮಿ ಎಂಬುದನ್ನು ತಿಳಿದ ನಂತರ ಕ್ರೈಸ್ತ ಸನ್ಯಾಸಿನಿಯಾಗಬಾರದೆಂದು ನಿರ್ಧರಿಸಿದಳು.[೧೦] ಅವಳು ಕ್ಯಾಥೋಲಿಕ್‌‌‌ ವ್ಯವಸ್ಥೆಯಲ್ಲಿ ಬೆಳೆದುಬಂದಿದ್ದರೂ, ತನ್ನ ಅಣ್ಣನ ಲೈಂಗಿಕ ಮನೋಧರ್ಮವನ್ನು ಒಪ್ಪದ ಈ ಧರ್ಮದ ಭಾಗವಾಗಿರಬಾರದಿತ್ತು ಎಂದು ಭಾವಿಸಿದಳು. ತನ್ನ ಮನೋಭಾವನೆಯ "ಧರ್ಮವನ್ನು ಕಂಡುಕೊಳ್ಳಲಿಲ್ಲ"ವಾದ್ದರಿಂದ ತಾನು ಧಾರ್ಮಿಕ ಪಂಥಕ್ಕೆ ಸೇರಿರದ ಕ್ರೈಸ್ತಳು ಎಂದು ಹೇಳಿಕೊಂಡಿದ್ದಾಳೆ.[೧೦] ಮಗುವಾಗಿದ್ದಾಗ ಹ್ಯಾಥ್‌ವೇ ಬ್ರೂಕ್ಲಿನ್‌ ಹೈಟ್ಸ್ ಮಾಂಟಿಸೋರಿ ಸ್ಕೂಲ್‌ನಲ್ಲಿನ ಮಾಂಟಿಸೋರಿ ಕಾರ್ಯಕ್ರಮದಲ್ಲಿ ಶಾಲೆಗೆ ಹೋಗುವ ವಯಸ್ಸು ತಲುಪದ ಮಗುವಾಗಿಯೇ ಭಾಗವಹಿಸಿದಳು, ನಂತರ ನಿಜವಾಗಿ ಇನ್ನೂ ಕಿಂಡರ್‌ಗಾರ್ಟನ್ ವಿದ್ಯಾರ್ಥಿನಿಯಾಗಿದ್ದರೂ NJಯ ಮಿಲ್ಬರ್ನ್‌‌ನ ವೈಯೋಮಿಂಗ್ ಎಲಿಮೆಂಟರಿ ಸ್ಕೂಲ್‌ಗೆ ಪ್ರಥಮ ಗ್ರೇಡ್‌ಗೆ ಪ್ರವೇಶ ಪಡೆಯಲು ಸಮರ್ಥಳಾದಳು.[೧೧] ಹ್ಯಾಥ್‌ವೇ ಪದವಿಪಡೆದ ಮಿಲ್ಬರ್ನ್‌ ಪ್ರೌಢಶಾಲೆಯಲ್ಲಿ ಅನೇಕ ಶಾಲಾನಾಟಕಗಳಲ್ಲಿ ಭಾಗವಹಿಸಿದಳು; ಒನ್ಸ್ ಅಪಾನ್ ಎ ಮ್ಯಾಟ್ರೆಸ್‌ ‌ನಲ್ಲಿ ವಿನಿಫ್ರೆಡ್ ಪಾತ್ರದಲ್ಲಿ ಅವಳ ಪ್ರೌಢಶಾಲೆಯ ನಟನೆಯು ಪ್ರೌಢಶಾಲಾ ವಿದ್ಯಾರ್ಥಿನಿಯ ಅತ್ಯುತ್ತಮ ನಟನೆಗಾಗಿ ಪೇಪರ್ ಮಿಲ್ ಪ್ಲೇಹೌಸ್ ಉದಯೋನ್ಮುಖ ತಾರೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಳು. ಆ ದಿನಗಳಲ್ಲಿ ಹ್ಯಾಥ್‌ವೇ ನ್ಯೂಜೆರ್ಸಿಯ ಪೇಪರ್ ಮಿಲ್ ಪ್ಲೇಹೌಸ್‌ನಲ್ಲಿ (ಇದು ಮಿಲ್ಬರ್ನ್‌ನಲ್ಲಿ, ಹ್ಯಾಥ್‌ವೇಯ ಮಾಧ್ಯಮಿಕ ಶಾಲೆಗೆ ಹೋಗುವ ದಾರಿಯಲ್ಲಿದೆ) ಜಾನೆ ಐರೆ ಮತ್ತು ಗಿಗಿ ಯಂತಹ ನಾಟಕಗಳಲ್ಲೂ ನಟಿಸಿದಳು.[೧೨] ನ್ಯೂಯಾರ್ಕ್‌ ವಿಶ್ವವಿದ್ಯಾನಿಲಯಗ್ಯಲಾಟಿನ್ ಸ್ಕೂಲ್ ಆಫ್ ಇಂಡಿವಿಜ್ವಲೈಸ್ಡ್ ಸ್ಟಡಿಗೆ ವರ್ಗಾವಣೆಗೊಳ್ಳುವ ಮೊದಲು ಅವಳು ನ್ಯೂಯಾರ್ಕ್‌ನ ಪೆಕೀಪ್ಸಿವಸ್ಸಾರ್ ಕಾಲೇಜ್ ನಲ್ಲಿ ಇಂಗ್ಲೀಷ್‌ನ್ನು ಪ್ರಮುಖವಾಗಿ ಮತ್ತು ವುಮೇನ್ ಸ್ಟಡೀಸ್ಅನ್ನು ಎರಡನೇ ದರ್ಜೆಯದಾಗಿ ತೆಗೆದುಕೊಂಡು ಅನೇಕ ಸೆಮಿಸ್ಟರುಗಳಲ್ಲಿ ಉತ್ತೀರ್ಣಳಾದಳು. "ಬೆಳೆಯಲು" ಪ್ರಯತ್ನಿಸುವವರೊಂದಿಗಿದ್ದು ಹೆಚ್ಚು ಆನಂದವನ್ನು ಅನುಭವಿಸಿದರಿಂದ ಕಾಲೇಜು ದಾಖಲಾತಿಯನ್ನು ತನ್ನ ಉತ್ತಮ ನಿರ್ಧಾರಗಳಲ್ಲಿ ಒಂದು ಎಂದು ಉಲ್ಲೇಖಿಸಿದ್ದಾಳೆ.[೧೩] ಹ್ಯಾಥ್‌ವೇ ಬ್ಯಾರೊ ಗ್ರೂಪ್ ನಾಟಕ ಕಂಪೆನಿಯ ನಟಿಸುವ ಕಾರ್ಯಕ್ರಮದ ಸದಸ್ಯಳಾಗಿದ್ದಳು ಹಾಗೂ ಆ ಕಾರ್ಯಕ್ರಮದಲ್ಲಿ ಪ್ರವೇಶಪಡೆದವರಲ್ಲಿ ಮೊದಲ ಹದಿಹರೆಯದ ಹುಡುಗಿಯಾಗಿದ್ದಾಳೆ.[೧೪] ಅವಳೊಬ್ಬಳು ಪರಿಣಿತ ರಂಗ ನಟಿಯಾಗಿದ್ದು, ಚಲನಚಿತ್ರದ ಪಾತ್ರಗಳ ಬದಲಿಗೆ ವೇದಿಕೆಯಲ್ಲಿ ನಟಿಸುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿಕೊಂಡಿದ್ದಾಳೆ.[] ಹಾಡುವ ಧ್ವನಿಹೊಂದಿದ್ದ ಹ್ಯಾಥ್‌ವೇ 1998 ಮತ್ತು 1999ರಲ್ಲಿ ಕಾರ್ನೆಗೈ ಹಾಲ್‌ನಲ್ಲಿ ನಡೆದ ಆಲ್-ಈಸ್ಟರ್ನ್ U.S. ಹೈ ಸ್ಕೂಲ್ ಹಾನರ್ಸ್ ಗೀತನೃತ್ಯಮೇಳದಲ್ಲಿ ಭಾಗವಹಿಸಿದಳು ಹಾಗೂ NJಯ ವೆಸ್ಟ್ ಆರೆಂಜ್‌ಸೆತಾನ್ ಹಾಲ್ ಪ್ರೆಪ್‌ನಲ್ಲಿ ನಡೆದ ನಾಟಕಗಳಲ್ಲಿ ನಟಿಸಿದಳು. 1999ರಲ್ಲಿ ಕಾರ್ನೆಗೈ ಹಾಲ್‌ನಲ್ಲಿನ ಪ್ರದರ್ಶನದ ಮ‌ೂರು ದಿನಗಳ ನಂತರ ಅವಳ ಹದಿನಾರನೇ ವಯಸ್ಸಿನಲ್ಲಿ ಅಲ್ಪಕಾಲದ ಫಾಕ್ಸ್ ದೂರದರ್ಶನ ಸರಣಿ ಕಾರ್ಯಕ್ರಮ ಗೆಟ್ ರಿಯಲ್‌ ‌ನಲ್ಲಿ ನಟಿಸಿದಳು.[೧೨]

2001–2004: ವೃತ್ತಿಜೀವನ ಅಭಿವೃದ್ಧಿ

[ಬದಲಾಯಿಸಿ]

ಕ್ರಿಸ್ಟೋಫರ್ ಗೋರ್ಹಾಮ್‌‌ಗೆ ಎದುರಾಗಿ ದ ಅದರ್ ಸೈಡ್ ಆಫ್ ಹೆವೆನ್‌ ಚಿತ್ರದಲ್ಲಿ ನಟಿಸಿದ ಜೀನ್ ಸೇಬಿನ್ ಪಾತ್ರವು ಚಲನಚಿತ್ರದಲ್ಲಿ ನಟಿಸಿದ ಹ್ಯಾಥ್‌ವೇಳ ಮೊದಲ ಪಾತ್ರವಾಗಿದೆ. ನ್ಯೂಜಿಲೆಂಡ್‌ನಲ್ಲಿ ಹೆವೆನ್ ನಿರ್ಮಾಣ ಕಾರ್ಯವು ಆರಂಭವಾಗುವ ಮೊದಲು ಅವಳು ಗ್ಯಾರಿ ಮಾರ್ಶಲ್‌ ನಿರ್ದೇಶನದ ದ ಪ್ರಿನ್ಸೆಸ್ ಡೈರೀಸ್‌ ‌ನಲ್ಲಿನ ಮಿಯಾ ಥರ್ಮೋಪೋಲಿಸ್‌‌ ಪ್ರಮುಖ ಪಾತ್ರಕ್ಕೆ ಅಭಿನಯ ಪರೀಕ್ಷೆಗೊಳಗಾದಳು. ಹ್ಯಾಥ್‌ವೇ ನ್ಯೂಜಿಲೆಂಡ್‌ಗೆ ಹೋಗಲು ವಿಮಾನ ಹತ್ತುವುದಕ್ಕೆ ಮುಂಚಿತವಾಗಿ ಈ ಪಾತ್ರದ ಅಭಿನಯ ಪರೀಕ್ಷೆಗೊಳಗಾದಳು ಹಾಗೂ ಕೇವಲ ಒಂದೇ ಪರೀಕ್ಷೆಯಲ್ಲಿ ಆ ಪಾತ್ರವನ್ನು ಗೆದ್ದಳು. ಪರೀಕ್ಷೆಯ ಸಂದರ್ಭದಲ್ಲಿ ಅವಳು ಕುರ್ಚಿಯಿಂದ ಬಿದ್ದಾಗ ತನ್ನ ಕೌಶಲ್ಯದ ಅಭಾವವು ತನ್ನನ್ನು ಮುಂದೆ ಈ ಪಾತ್ರಕ್ಕೆ ಪಕ್ವವಾಗುವಂತೆ ಮಾಡುತ್ತದೆ ಎಂದು ನಂಬಿದ್ದೇನೆ ಎಂದು ಆಕೆ ಹೇಳಿದ್ದರಿಂದ ಅವಳು ತನಗೆ ಇಷ್ಟವಾದಳು ಎಂದು ಮಾರ್ಶಲ್ ತಿಳಿಸಿದ್ದಾನೆ.[] (ಆದರೆ ಹ್ಯಾಥ್‌ವೇ ತಾನು "ನೈಪುಣ್ಯತೆ ಹೊಂದಿಲ್ಲ" ಎಂದು ಬಹಿರಂಗವಾಗಿ ಒಪ್ಪಿಕೊಂಡರೂ 2008ರಲ್ಲಿ ಸ್ಟೀವ್ ಕ್ಯಾರೆಲ್‌ನೊಂದಿಗಿನ ಸಂಭಾಷಣೆಯಲ್ಲಿ ಈ ಅಭಿನಯ ಪರೀಕ್ಷೆಯ ಸಂದರ್ಭದಲ್ಲಿ ತಾನು ಕೆಳಗೆ ಬಿದ್ದಿದ್ದನ್ನು ಅಲ್ಲಗಳೆದಿದ್ದಾಳೆ.)[] ದ ಅದರ್ ಸೈಡ್ ಆಫ್ ಹೆವೆನ್‌ ಚಿತ್ರಕ್ಕಿಂತ ಮೊದಲೇ ದ ಪ್ರಿನ್ಸೆಸ್ ಡೈರೀಸ್‌ ಅನ್ನು ಬಿಡುಗಡೆಗೊಳಿಸಲಾಯಿತು, ಇದರ ಯಶಸ್ಸು ಹೆವೆನ್ ಚಿತ್ರದ ಬಗೆಗಿನ ಆಸಕ್ತಿಯನ್ನು ಹೆಚ್ಚಿಸಬಹುದೆಂಬ ಆಶಯದಿಂದ ಹೀಗೆ ಮಾಡಲಾಯಿತು. ಪ್ರಪಂಚದಾದ್ಯಂತ ದ ಪ್ರಿನ್ಸೆಸ್ ಡೈರೀಸ್‌ ವಾಣಿಜ್ಯ ಯಶಸ್ಸು ಕಂಡಿತು[೧೫] ಹಾಗೂ ಸ್ವಲ್ಪದರಲ್ಲೇ ಅದರ ಮುಂದಿನಭಾಗವನ್ನು ನಿರ್ಮಿಸುವ ಬಗ್ಗೆ ಯೋಜಿಸಲಾಯಿತು. ಡೈರೀಸ್ ‌ನಲ್ಲಿನ ಹ್ಯಾಥ್‌ವೇಳ ನಟನೆಯನ್ನು ಹಲವಾರು ವಿಮರ್ಶಕರು ಹೊಗಳಿದರು; BBC ವಿಮರ್ಶಕನೊಬ್ಬ "ಹ್ಯಾಥ್‌ವೇ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾಳೆ ಹಾಗೂ ಮಹತ್ವಪೂರ್ಣ ಅಂತರವೈಯಕ್ತಿಕ ಸಂಬಂಧ ಸೃಷ್ಟಿಸುತ್ತಾಳೆ" ಎಂದು ಸೂಚಿಸಿದ್ದಾನೆ.[೧೬] ದ ಅದರ್ ಸೈಡ್ ಆಫ್ ಹೆವೆನ್‌ ದುರ್ಬಲ ವಿಮರ್ಶೆಗಳನ್ನು ಪಡೆದರೂ, ಧಾರ್ಮಿಕ-ವಿಷಯವನ್ನಾಧಾರಿತ ಚಿತ್ರವಾಗಿ ಉತ್ತಮ ರೀತಿಯ ಪ್ರದರ್ಶನ ಕಂಡಿತು.[೧೭][೧೮] 2002ರ ಫೆಬ್ರವರಿಯಲ್ಲಿ, ಹ್ಯಾಥ್‌ವೇ ಬ್ರಿಯಾನ್ ಸ್ಟೋಕ್ಸ್ ಮಿಟ್ಚೆಲ್‌ಗೆ ಎದುರಾಗಿ ಸಿಟಿ ಸೆಂಟರ್ ಎನ್ಕೋರ್ಸ್! ಕಾರ್ನಿವಾಲ್ ನಿರ್ಮಾಣದ ಎನ್‌ಕೋರ್ಸ್‌!ನಲ್ಲಿ ಪಾತ್ರವಹಿಸಿದಳು.ನ್ಯೂಯಾರ್ಕ್ ನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅವಳ ಲಿಲಿ ಪಾತ್ರಕ್ಕೆ ಧನಾತ್ಮಕ ವಿಮರ್ಶೆಗಳನ್ನು ಪಡೆದಳು. 2002ರಲ್ಲಿ ಹ್ಯಾಥ್‌ವೇ ದ ಪ್ರಿನ್ಸೆಸ್ ಡೈರೀಸ್‌ ‌ನ ಧ್ವನಿಮುದ್ರಿತ ರೆಕಾರ್ಡುಗಳ ಬಿಡುಗಡೆಗಾಗಿ ಧ್ವನಿ ನೀಡಲು ಆರಂಭಿಸಿದಳು, ಹಾಗಾಗಿ ಸರಣಿಯ ಮೊದಲ ಮ‌ೂರು ರೆಕಾರ್ಡುಗಳಿಗೆ ಧ್ವನಿ ನೀಡಿದಳು. ಅವಳು ಹಿರುಯುಕಿ ಮೊರಿಟಾನ ದ ಕ್ಯಾಟ್ ರಿಟರ್ನ್ಸ್‌ ‌ನ ಇಂಗ್ಲಿಷ್ ಆವೃತ್ತಿಯಲ್ಲಿನ ಹರು ಪಾತ್ರಕ್ಕೂ ಧ್ವನಿ ನೀಡಿದಳು.[೧೯] ನಂತರದ ಮ‌ೂರು ವರ್ಷಗಳಲ್ಲಿ ಹ್ಯಾಥ್‌ವೇ ಕೌಟುಂಬಿಕ-ವಿಷಯವನ್ನಾಧಾರಿತ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸಿದಳು, ಆ ಬಳಿಕ ಮುಖ್ಯವಾಹಿನಿ ಮಾಧ್ಯಮದಲ್ಲಿ ಮಕ್ಕಳ ಆದರ್ಶ ವ್ಯಕ್ತಿಯಾಗಿ ಹೆಸರುವಾಸಿಯಾದಳು.[೨೦] 2002ರಲ್ಲಿ ಈಕೆ ಚಾರ್ಲಿ ಹ್ಯುನಾಮ್‌ ಮತ್ತು ಜೇಮಿ ಬೆಲ್‌‌ರಿಗೆ ಎದುರಾಗಿ ನಿಕೋಲಸ್ ನಿಕ್ಲೆಬಿ ಯಲ್ಲಿ ನಟಿಸಿದಳು, ಇದು ಧನಾತ್ಮಕ ವಿಮರ್ಶೆಗಳನ್ನು ಗಳಿಸಿತು. ಇದನ್ನು ನಾರ್ತ್‌ವೆಸ್ಟ್ ಹೆರಾಲ್ಡ್‌ "ನಂಬಲಾಗದ ಹಾಸ್ಯಚಿತ್ರ"[೨೧] ಎಂದು ಉಲ್ಲೇಖಿಸಿದ್ದಾನೆ ಹಾಗೂ ಡೆಸೆರೆಟ್ ನ್ಯೂಸ್‌ ಇದರ ಪಾತ್ರವರ್ಗವು "ಆಸ್ಕರ್-ಯೋಗ್ಯ"ವಾದುದು ಎಂದು ಹೇಳಿದೆ.[೨೨] ವಿಮರ್ಶಾತ್ಮಕ ಪ್ರಶಂಸೆಗಳನ್ನು ಗಳಿಸಿದರೂ ಚಿತ್ರವು ವ್ಯಾಪಕ ಬಿಡುಗಡೆಯನ್ನು ಕಾಣಲಿಲ್ಲ ಹಾಗೂ ಟಿಕೆಟ್ ಮಾರಾಟದಲ್ಲಿ ಒಟ್ಟು US$4-ದಶಲಕ್ಷಕ್ಕಿಂತಲೂ ಕಡಿಮೆ ಗಳಿಸುವ ಮ‌ೂಲಕ ಉತ್ತರ ಅಮೆರಿಕದ ಗಲ್ಲಾಪೆಟ್ಟಿಗೆಯಲ್ಲಿ ಸಂಪೂರ್ಣವಾಗಿ ಸೋತಿತು.[೨೩] ಹ್ಯಾಥ್‌ವೇಳ ಮುಂದಿನ ಪಾತ್ರ ಕಾದಂಬರಿ ಆಧಾರಿತ ಚಿತ್ರವಾದ ಎಲ್ಲಾ ಎನ್‌ಚಾನ್ಟೆಡ್‌ (2004)ನಲ್ಲಿನ ಅದರ ಹೆಸರನ್ನೇ ಉಳ್ಳ ಪಾತ್ರ, ಇದು ಬಹುತೇಕ ವಿಭಿನ್ನ ವಿಮರ್ಶೆಗಳನ್ನು ಪಡೆಯಿತು.[೨೪][೨೫] ಹ್ಯಾಥ್‌ವೇ ಈ ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಗೂ ಧ್ವನಿಮುದ್ರಣದಲ್ಲಿ ಮ‌ೂರು ಹಾಡುಗಳನ್ನು ಹಾಡಿದ್ದಾಳೆ. 2004ರಲ್ಲಿ ಹ್ಯಾಥ್‌ವೇ ದ ಫಾಂಟಮ್ ಆಫ್ ದ ಒಪೇರದಲ್ಲಿ ಗೆರಾರ್ಡ್ ಬಟ್ಲರ್‌ಗೆ ಎದುರಾಗಿ ನಟಿಸಲು ಆಯ್ಕೆಯಾಗಿದ್ದಳು, ಆದರೆ ಈ ಚಿತ್ರದ ನಿರ್ಮಾಣ ವೇಳಾಪಟ್ಟಿಯು ಅವಳು ಅದಾಗಲೇ ನಟಿಸುವ ಒಪ್ಪಂದಕ್ಕೆ ಕಟ್ಟುಬಿದ್ದ ಪ್ರಿನ್ಸಸ್ ಡೈರೀಸ್ 2:ರಾಯಲ್ ಎಂಗೇಜ್‌ಮೆಂಟ್' The Princess Diaries 2: Royal Engagement ಚಿತ್ರದ ಚಿತ್ರೀಕರಣದ ಸಮಯದೊಂದಿಗೆ ಅತಿಕ್ರಮಿಸಿದ್ದರಿಂದ ಅವಳು ಆ ಪಾತ್ರವನ್ನು ಬಲವಂತವಾಗಿ ಬಿಟ್ಟುಬಿಡುವಂತೆ ಆಯಿತು.[೨೬] ದ ಪ್ರಿನ್ಸೆಸ್ ಡೈರೀಸ್‌ 2 ‌ರ ನಿರ್ಮಾಣವನ್ನು ಡಿಸ್ನಿ 2004ರ ಆರಂಭದಲ್ಲಿ ಪ್ರಾರಂಭಿಸಿದನು ಹಾಗೂ ಇದು ಆ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ನಕರಾತ್ಮಕ ವಿಮರ್ಶೆಗಳನ್ನು ಪಡೆದರೂ, $40-ದಶಲಕ್ಷದಷ್ಟು ವೆಚ್ಚಕ್ಕೆ $95.1-ದಶಲಕ್ಷದಷ್ಟು ಲಾಭಗಳಿಸುವ ಮ‌ೂಲಕ ಗಲ್ಲಾಪೆಟ್ಟಿಗೆಯಲ್ಲಿ ಅತ್ಯುಚ್ಚ ಸ್ಥಾನ ತಲುಪಿ ಅದರ ಹಿಂದಿನ ಭಾಗಕ್ಕಿಂತ ಉನ್ನತ ಸ್ಥಾನಕ್ಕೇರಿತು.[೨೭]

2005-2007: ವೃತ್ತಿಜೀವನದ ಬದಲಾವಣೆ

[ಬದಲಾಯಿಸಿ]
A bust shot of a young woman standing in a side view, her head turned to look to the camera. Her very long hair is pulled back from her face and cascades down her back. She wears a black sleeveless dress with a gold trim around the back and under her arm. She wears jeweled silver floral shaped earrings and smiles softly. There is a crowd of people, slightly out of focus, in the background.
2007ರ ಡ್ಯೂವಿಲ್ಲೆ ಅಮೆರಿಕದ ಚಲನಚಿತ್ರೋತ್ಸವದಲ್ಲಿ ಹ್ಯಾಥ್‌ವೇ

ದ ಪ್ರಿನ್ಸೆಸ್ ಡೈರೀಸ್‌ 2 ರ ನಂತರ ಹ್ಯಾಥ್‌ವೇ ಹೆಚ್ಚು ನಾಟಕೀಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದಳು. "ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಿರುವ ಎಲ್ಲರಿಗೂ ತಾತ್ಕಾಲಿಕ ಬಿಡುವಿನ ಅವಶ್ಯಕತೆ ಇದೆ"[೧೩] ಎಂದು ಅವಳು ಹೇಳಿದರೂ, ತಾನು ಹಿಂದೆ ಮಕ್ಕಳ-ನಟಿಯಾಗಿ ಅಭಿನಯಿಸಿದ್ದನ್ನು ಉಲ್ಲೇಖಿಸಿ "ನನ್ನ ಪ್ರೇಕ್ಷಕರು ನನ್ನೊಂದಿಗೆ ಬೆಳೆಯುತ್ತಿರುವುದನ್ನು ಕಂಡಾಗ ಖುಷಿಯಾಗುತ್ತದೆ" ಎಂದೂ ಸೂಚಿಸಿದ್ದಾಳೆ.[೨೦] ಆಕೆ ಹುಡ್‌ವಿಂಕ್ಡ್‌! (2005)ನಲ್ಲಿ ಲಿಟಲ್ ರೆಡ್ ರೈಡಿಂಗ್ ಹುಡ್‌ ಪಾತ್ರಕ್ಕೆ ಧ್ವನಿನೀಡಿದ್ದಾಳೆ, ಇದು ಬಹುಮಟ್ಟಿಗೆ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. ಆ ವರ್ಷದಲ್ಲೇ ಹ್ಯಾಥ್‌ವೇ R-ದರ್ಜೆಯ ಹ್ಯಾವೋಕ್‌ ‌ನಲ್ಲಿ ಅಭಿನಯಿಸಿದಳು, ಇದರಲ್ಲಿ ಅವಳು ಸಮಾಜದ ಕುಲಗೆಟ್ಟ ಪ್ರಮುಖ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾಳೆ. ಆಶ್ಚರ್ಯಕರ ರೀತಿಯಲ್ಲಿ ಹ್ಯಾಥ್‌ವೇ ಚಿತ್ರದಾದ್ಯಂತ ಅನೇಕ ನಗ್ನ ಮತ್ತು ಲೈಂಗಿಕ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಆದರೂ ಚಿತ್ರದ ಕಥೆಯು ಅವಳ ಹಿಂದಿನ ಚಿತ್ರಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದರೂ,ಚಿತ್ರದಲ್ಲಿ ಅವಳ ಪಾತ್ರವು ತಾನು ಹೆಚ್ಚು ಪರಿಪಕ್ವ ನಟಿ ಎಂದು ತೋರಿಸುವ ಸುಸ್ಪಷ್ಟ ಪ್ರಯತ್ನವೆಂಬುದನ್ನು ಅಲ್ಲಗಳೆದಳು ; ಕೆಲವು ಚಿತ್ರಗಳಲ್ಲಿ ನಗ್ನ ಪಾತ್ರಗಳ ಅಭಿನಯವು ಅವಳಿಂದ ಬೇಡುವ ಕೇವಲ ಕಲೆಯ ಆಯ್ದ ಸ್ವರೂಪದ ಭಾಗ ಎಂಬ ನಂಬಿಕೆಯನ್ನು ಉದಾಹರಿಸಿದಳು; ಆ ನಂಬಿಕೆಯ ಕಾರಣ ಸೂಕ್ತ ಚಿತ್ರಗಳಲ್ಲಿ ನಗ್ನವಾಗಿ ಕಾಣಿಸಿಕೊಳ್ಳುವುದು ನೈತಿಕವಾಗಿ ಆಕ್ಷೇಪಾರ್ಹ ಎಂದು ಅವಳು ಪರಿಗಣಿಸುವುದಿಲ್ಲ.[೨೮] ಹ್ಯಾವೋಕ್‌ ‌ನ ನಂತರ ಹ್ಯಾಥ್‌ವೇ ಹೆತ್ ಲೆಡ್ಜರ್ ಮತ್ತು ಜೇಕ್ ಗಿಲ್ಲೆನಾಲ್‌ರಿಗೆ ಎದುರಾಗಿ ನಾಟಕಬ್ರೋಕ್‌ಬ್ಯಾಕ್‌ ಮೌಂಟೈನ್‌ ನಲ್ಲಿ ಅಭಿನಯಿಸಿದಳು. ಇದು ನಾಟಕೀಯ ಪಾತ್ರದಲ್ಲಿ ನಟಿಯಾಗಿ ಅವಳ ಅಭಿವೃದ್ಧಿಯನ್ನು ಪ್ರದರ್ಶಿಸಿತು. ಹ್ಯಾವೋಕ್‌ ಅದರ ದುರ್ಬಲ ವಿಮರ್ಶಾತ್ಮಕ ಸ್ವಾಗತದಿಂದಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಚಲನಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ (ಆದರೆ ನಂತರ ಇತರ ರಾಷ್ಟ್ರಗಳಲ್ಲಿ ಬಿಡುಗಡೆಯಾಯಿತು)[೨೯], ಆದರೆ 1960ರ ದಶಕದಲ್ಲಿ ಸಲಿಂಗಕಾಮ ಸಂಬಂಧ ಬಿಂಬಿಸುವ ಬ್ರೋಕ್‌ಬ್ಯಾಕ್‌ ಮೌಂಟೈನ್‌ ಅಬ್ಬರದ ವಿಮರ್ಶೆಗಳನ್ನು ಗೆದ್ದಿತು ಹಾಗೂ ಅನೇಕ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಪಡೆಯಿತು.[೩೦] ಬ್ರೋಕ್‌ಬ್ಯಾಕ್‌ ಮೌಂಟೈನ್‌ ಚಿತ್ರಕ್ಕೆ ಬಂದ ಪ್ರಶಸ್ತಿ ಸಂಖ್ಯೆಗಿಂತ ಅದರ ಕಥೆಯ ತಿರುಳು ಹೆಚ್ಚು ಮುಖ್ಯವಾಗಿದೆ ಹಾಗೂ ಚಿತ್ರನಿರ್ಮಾಣದಿಂದ ನಟಿಯಾಗಿ ತಾನು ಹೇಳಲು ಹೊರಟ ಕಥೆಗಳ ಪ್ರಕಾರಗಳ ಬಗ್ಗೆ ಹೆಚ್ಚು ಅರಿವು ಮೂಡಿಸಿತು ಎಂದು ನಂತರ ಅವಳು ಪ್ರತಿಪಾದಿಸಿದಳು.[೩೧] ಹ್ಯಾಥ್‌ವೇಳ ಮುಂದಿನ ಚಿತ್ರ 2006ರ ಹಾಸ್ಯಚಿತ್ರ ದ ಡೆವಿಲ್ ವೇರ್ಸ್ ಪ್ರಾಡ, ಅದರಲ್ಲಿ ಹ್ಯಾಥ್‌ವೇ "ದೈವಸ್ವರೂಪಿ" ಎಂದು ಬಣ್ಣಿಸಿದ ಮೆರಿಲ್ ಸ್ಟ್ರೀಪ್‌‌‌ ಅಭಿನಯದ ಪ್ರಬಲ ಫ್ಯಾಷನ್ ನಿಯತಕಾಲಿಕದ ಸಂಪಾದಕರ ಸಹಾಯಕಳಾಗಿ ನಟಿಸಿದಳು.[] ಈ ಚಿತ್ರದಲ್ಲಿ ಕೆಲಸ ಮಾಡಿದರಿಂದ ತನಗೆ ಫ್ಯಾಷನ್ ಜಗತ್ತಿನ ಬಗ್ಗೆ ಮುಂಚಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗೌರವ ಮ‌ೂಡಿಸಿತು ಎಂದು ಹ್ಯಾಥ್‌ವೇ ಹೇಳಿಕೊಂಡಿದ್ದಾಳೆ, ಅದರೊಂದಿಗೆ ಅವಳ ವೈಯಕ್ತಿಕ ಶೈಲಿಯನ್ನು "ಇನ್ನೂ ಸರಿಯಾಗಿ ಪಡೆಯಲಾಗಲಿಲ್ಲ" ಎಂದೂ ದೂರಿದ್ದಾಳೆ.[೧೪] ಹ್ಯಾಥ್‌ವೇ US ವೀಕ್ಲಿ ಗೆ ನೀಡಿದ ಸಂದರ್ಶನದಲ್ಲಿ ಅವಳು ಮತ್ತು ಸಹ-ನಟಿ ಎಮಿಲಿ ಬ್ಲಂಟ್‌ ಚಿತ್ರಕ್ಕಾಗಿ ತೂಕ ಕಡಿಮೆಮಾಡಿಕೊಂಡ ವಿಧಾನದ ಬಗ್ಗೆ ವಿವರಿಸುತ್ತಾ ಹೀಗೆ ಹೇಳಿದ್ದಾಳೆ - "ನಾನು ಬರಿಯ ಹಣ್ಣು, ಮೀನು ಮತ್ತು ತರಕಾರಿಗಳನ್ನು ಮಾತ್ರ ತಿನ್ನುತ್ತಿದ್ದೆ.(ಚಿತ್ರಕ್ಕಾಗಿ ತೆಳ್ಳನೆಯ ಮೈಕಟ್ಟನ್ನು ಹೊಂದಲು) ನಾನು ಅದನ್ನು ಶಿಫಾರಸು ಮಾಡುವುದಿಲ್ಲ. ಎಮಿಲಿ ಬ್ಲಂಟ್ ಮತ್ತು ನಾನು ಪರಸ್ಪರ ಆಲಂಗಿಸಿಕೊಂಡು ಅಳುತ್ತಿದ್ದೆವು, ಏಕೆಂದರೆ ನಮಗೆ ತುಂಬಾ ಹಸಿವಾಗುತ್ತಿತ್ತು."[೩೨] ಹ್ಯಾಥ್‌ವೇ ಆರಂಭದಲ್ಲಿ 2007ರ ಹಾಸ್ಯಚಿತ್ರ ನಾಕ್ಡ್ ಅಪ್‌ ‌ನಲ್ಲಿ ನಟಿಸುವುದಕ್ಕೆ ಆಯ್ಕೆಯಾಗಿ ನಂತರ ಚಿತ್ರೀಕರಣ ಆರಂಭವಾಗುವ ಮೊದಲೇ ಅವಳನ್ನು ಕೈಬಿಟ್ಟು ಕ್ಯಾಥೆರಿನ್ ಹೈಗ್ಲ್‌ಳನ್ನು ಸೇರಿಸಿಕೊಳ್ಳಲಾಯಿತು. ದ ನ್ಯೂಯಾರ್ಕ್‌ ಟೈಮ್ಸ್ ನಿಯತಕಾಲಿಕ ದ 2007ರ ಮೇ ಸಂಚಿಕೆಯಲ್ಲಿ ಲೇಖಕ/ನಿರ್ದೇಶಕ ಜ್ಯೂಡ್ ಅಪಟೊ ಹೀಗೆಂದು ಹೇಳಿದ್ದಾನೆ - " ಅವಳು ಮಗುವಿಗೆ ಜನ್ಮನೀಡುತ್ತಿದ್ದಾಳೆಂಬ ಕಲ್ಪನೆಯನ್ನು ಸೃಷ್ಟಿಸುವುದಕ್ಕಾಗಿ ಮಹಿಳೆಯೊಬ್ಬಳ ನಿಜವಾದ ಚಿತ್ರಣವನ್ನು ಬಳಸಲು ಅವಳು ನಮಗೆ ಅವಕಾಶ ನೀಡಲು ಬಯಸಲಿಲ್ಲ" ಆದ್ದರಿಂದ ಹ್ಯಾಥ್‌ವೇಳನ್ನು ಕೈಬಿಡಲಾಯಿತು.[೩೩] 2008ರ ಆಗಸ್ಟ್‌ನಲ್ಲಿ ಮೇರಿ ಕ್ಲೈರೆ ನಿಯತಕಾಲಿಕದೊಂದಿಗಿನ ಸಂದರ್ಶನದಲ್ಲಿ ಹ್ಯಾಥ್‌ವೇ "ಇದು ಚಿತ್ರದ ಕಥೆಗೆ ಅವಶ್ಯಕವಾಗಿದೆ ಎಂದು ತನಗೆ ಅನಿಸಲಿಲ್ಲ" ಎಂದು ಹೇಳಿದ್ದಾಳೆ.[೩೪] ನಂತರ ಹ್ಯಾಥ್‌ವೇ 2007ರಲ್ಲಿ ಬಿಕಮಿಂಗ್ ಜೇನ್ ಎಂಬ ನಾಟಕೀಯ ಪಾತ್ರದಲ್ಲಿ ಕಾಣಿಸಿಕೊಂಡಳು, ಇದರಲ್ಲಿ ಆಕೆ ಇಂಗ್ಲಿಷ್ ಲೇಖಕಿ ಜೇನ್ ಆಸ್ಟೆನ್‌‌ಳ ಪಾತ್ರದಲ್ಲಿ ಅಭಿನಯಿಸಿದ್ದಾಳೆ.[೩೧] ಟಿಮ್ ಬರ್ಟನ್ ಅವನ 2007ರ ಚಿತ್ರ ಸ್ವೀನಿ ಟೋಡ್: ದ ಡೆಮನ್ ಬಾರ್ಬರ್ ಆಫ್ ಫ್ಲೀಟ್ ಸ್ಟ್ರೀಟ್‌ ನಲ್ಲಿನ ಜೊಹಾನ್ನ ಪಾತ್ರಕ್ಕೆ ಮೊದಲು ಹ್ಯಾಥ್‌ವೇಳನ್ನು ಆಯ್ಕೆಮಾಡಿದನು, ಆದರೆ ನಂತರ ಬರ್ಟನ್ ಆ ಪಾತ್ರಕ್ಕೆ ಅಪರಿಚಿತ ಕಿರಿಯ ನಟಿ ಬೇಕೆಂದು ಬಯಸಿದ್ದರಿಂದ ಆಗ ಹೆಸರುವಾಸಿಯಲ್ಲದ ಅಪರಿಚಿತ ನಟಿ ಜಾಯ್ನೆ ವಿಸೆನರ್‌ಳನ್ನು ಆರಿಸಿದನು.[೩೫]

2008–ಇಂದಿನವರೆಗೆ: ಇತ್ತೀಚಿನ ಮತ್ತು ಮುಂದಿನ ಯೋಜನೆಗಳು

[ಬದಲಾಯಿಸಿ]
ಜರತಾರಿಯ ಬಿಳಿ ತೋಳುಗಳಿಲ್ಲದ ಮೇಲಂಗಿ ಧರಿಸಿರುವ, ಸಣ್ಣ ಕಿವಿಯುಂಗುರವಿರುವ, ತುಂಬಿದ ಜನರತ್ತ ವಿಶಾಲ ನಗುವಿನೊಂದಿಗೆ ಕೈಬೀಸುತ್ತಿರುವ ಯುವತಿ.ಎಡಭಾಗಕ್ಕೆ ತಿರುಗಿ ಹಿಂದಕ್ಕೆ ಎಳೆದ ಕೇಶರಾಶಿಯೊಂದಿಗೆ ತೆರೆದ ತೋಳುಗಳ ಪ್ರದರ್ಶನಹಿನ್ನೆಲೆಯು ಗಮನದಿಂದ ಹೊರಗಿದ್ದು, ಅಸ್ಪಷ್ಟವಾಗಿದೆ.
Hathaway on the red carpet in 2009 at the 81st Academy Awards

2008ರ ಜನವರಿಯಲ್ಲಿ ಹ್ಯಾಥ್‌ವೇ ಸೌಂದರ್ಯ ಪ್ರಸಾದನದ ದೈತ್ಯ ಕಂಪೆನಿ ಲ್ಯಾಂಕೋಮ್ ಗೆ ಅವರ ಸುಗಂಧದ ಉತ್ಕೃಷ್ಟತೆಯನ್ನು ಪ್ರತಿಬಿಂಬಿಸುವ ರೂಪದರ್ಶಿಯಾಗಿ ಸೇರಿಕೊಂಡಳು.[೩೬] ಆ ವರ್ಷದ ಅಕ್ಟೋಬರ್‌ನಲ್ಲಿ ಹ್ಯಾಥ್‌ವೇ ಸ್ಯಾಟರ್ಡೆ ನೈಟ್ ಲೈವ್‌ ಕಾರ್ಯಕ್ರಮವನ್ನು ಆಯೋಜಿಸಿದಳು. 1960ರ ಮೆಲ್ ಬ್ರೂಕ್ಸ್ ದೂರದರ್ಶನ ಸರಣಿ ಕಾರ್ಯಕ್ರಮ ಗೆಟ್ ಸ್ಮಾರ್ಟ್‌ ‌ನ ಆಧುನಿಕ ರೂಪಾಂತರ ಹ್ಯಾಥ್‌ವೇಳ 2008ರ ಮೊದಲ ಚಿತ್ರ, ಇದರಲ್ಲಿ ಆಕೆ ಸ್ಟೀವ್ ಕ್ಯಾರೆಲ್‌, ದ್ವೇನ್ ಜಾನ್ಸನ್‌ ಮತ್ತು ಅಲನ್ ಆರ್ಕಿನ್‌ರಿಗೆ ಎದುರಾಗಿ ಅಭಿನಯಿಸಿದ್ದಾಳೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡಿತು ಹಾಗೂ ಮುಂದಿನ ಭಾಗವನ್ನು ನಿರ್ಮಿಸಬೇಕೆಂಬುದನ್ನು ಪ್ರೇರೇಪಿಸುವಂತಹ ಗುಣಾತ್ಮಕ ವಿಮರ್ಶೆಗಳನ್ನು ಪಡೆಯಿತು. ಸಂಬಂಧಿಸಿದ ಚಿತ್ರದಲ್ಲಿ ಅವಳು ಕಿರುಪಾತ್ರವೊಂದರಲ್ಲಿ ಕೂಡ ಕಾಣಿಸಿಕೊಂಡಿದ್ದಾಳೆ. 2008ರ ಅಕ್ಟೋಬರ್‌ನಲ್ಲಿ ಅವಳು ಪ್ಯಾಸೆಂಜರ್ಸ್‌ ಕಥಾವಸ್ತುವಿನ ಮೊದಲ ಪ್ರದರ್ಶನದಲ್ಲಿ ಪ್ಯಾಟ್ರಿಕ್ ವಿಲ್ಸನ್‌ಗೆ ಎದುರಾಗಿ ಹಾಗೂ ರಾಚೆಲ್ ಗೆಟ್ಟಿಂಗ್ ಮ್ಯಾರೀಡ್‌ ‌ ಕಥಾವಸ್ತುವಿನಲ್ಲಿ ಡೆಬ್ರ ವಿಂಗರ್‌ಗೆ ಎದುರಾಗಿ ಅಭಿನಯಿಸಿದಳು. ರಾಚೆಲ್ ಗೆಟ್ಟಿಂಗ್ ಮ್ಯಾರೀಡ್‌ 2008ರ ವಿನೈಸೆ ಮತ್ತು ಟೊರೊಂಟೊ ಚಲನಚಿತ್ರೊತ್ಸವಗಳಲ್ಲಿ ಪ್ರಥಮ ಪ್ರದರ್ಶನ ಕಂಡಿತು ಹಾಗೂ ಅದರಲ್ಲಿನ ಕಿಮ್ ಪಾತ್ರಕ್ಕೆ ಅವಳು ಅಕಾಡೆಮಿ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್‌ ಎರಡಕ್ಕೂ ನಾಮನಿರ್ದೇಶಗೊಂಡುದುದನ್ನೂ ಒಳಗೊಂಡಂತೆ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆಗಳನ್ನು ಪಡೆದಳು. ಈ ಚಿತ್ರದಲ್ಲಿನ ಸಂಬಂಧಗಳ ನೈಜ ಚಿತ್ರಣ ಮತ್ತು ತಾನು ತನ್ನ ಪಾತ್ರದೊಂದಿಗೆ ಪ್ರಬಲ ಭಾವನಾತ್ಮಕ ಸಂಬಂಧವನ್ನು ಅನುಭವಿಸಿದ್ದರಿಂದ ಈ ಚಿತ್ರವು ತನಗೆ ಇಷ್ಟವಾಯಿತು ಎಂದು ಹ್ಯಾಥ್‌ವೇ ಹೇಳಿಕೊಂಡಿದ್ದಾಳೆ.[೩೭] ನಂತರ ಹ್ಯಾಥ್‌ವೇ 2009ರ ಜನವರಿ 9ರಂದು ಬಿಡುಗಡೆಯಾದ ಬ್ರೈಡ್ ವಾರ್ಸ್ ಹೆಸರಿನ ಹಾಸ್ಯಚಿತ್ರದಲ್ಲಿ ನಟಿಸಿದಳು, ಅದರಲ್ಲಿ ಆಕೆ ಕ್ಯಾಟೆ ಹಡ್ಸನ್‌‌ಗೆ ಎದುರಾಗಿ ಅಭಿನಯಿಸಿದ್ದಾಳೆ. ಹ್ಯಾಥ್‌ವೇ ಈ ಚಿತ್ರವು "ಭಾರಿ ಪ್ರಮಾಣದಲ್ಲಿ ಅದ್ಭುತವಾಗಿ ವಾಣಿಜ್ಯೋಪಯೋಗಿಯಾದುದು" ಎಂದು ವಿವರಿಸಿದ್ದಾಳೆ.[೩೮] "ತಾನು ಮದುವೆಯ ಬಗ್ಗೆ ಕನಸು ಕಾಣುವ ಹುಡುಗಿಯಲ್ಲ" ಎಂದು ಅಭಿಪ್ರಾಯಪಟ್ಟಿದ್ದರೂ, ಅವಳು ಮಾಡರ್ನ್ ಬ್ರೈಡ್‌ ‌ ನಿಯತಕಾಲಿಕದ 2009ರ ಫೆಬ್ರವರಿ/ಮಾರ್ಚ್ ತಿಂಗಳ ಮುಖಪುಟದಲ್ಲಿ ಹಡ್ಸನ್‌ನೊಂದಿಗೆ ಕಾಣಿಸಿಕೊಂಡಿದ್ದಾಳೆ.[೩೯] 2010ರಲ್ಲಿ ದ ಸಿಂಪ್ಸನ್ಸ್‌ ಮತ್ತು ಫ್ಯಾಮಿಲಿ ಗೈ ಯ ಸಂಚಿಕೆಗಳಿಗೆ ಧ್ವನಿ ನೀಡುವುದರೊಂದಿಗೆ,[೪೦][೪೧] ಹ್ಯಾಥ್‌ವೇ ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನ ಡೆಲಕೋರ್ಟೆ ಚಿತ್ರಮಂದಿರದಲ್ಲಿ ನಡೆದ ನ್ಯೂಯಾರ್ಕ್‌ ಶೇಕ್ಸ್‌ಪಿಯರ್ ಉತ್ಸವ‌ದ 2009ರ ಬೇಸಿಗೆಕಾಲದ ನಿರ್ಮಾಣ ಟ್ವೆಲ್ತ್ ನೈಟ್‌ ‌ನಲ್ಲಿ ಆಡ್ರಾ ಮ್ಯಾಕ್‌ಡೊನಾಲ್ಡ್‌ಗೆ ಎದುರಾಗಿ ಒಲಿವಿಯಾ, ರಾಲ್ ಎಸ್ಪಾರ್ಜನಿಗೆ ಎದುರಾಗಿ ಡ್ಯೂಕ್ ಒರ್ಸಿನೊ ಮತ್ತು ಜ್ಯೂಲಿ ವೈಟ್‌ಗೆ ಎದುರಾಗಿ ಮರಿಯಾ ಪಾತ್ರದಲ್ಲಿ ಕಾಣಿಸಿಕೊಂಡಳು.[೪೨] ಹ್ಯಾಥ್‌ವೇಳ ಚಿತ್ರ ಯೋಜನೆಗಳೆಂದರೆ - ಹೆಲೆನಾ ಬೊನ್ಹಾಮ್ ಕಾರ್ಟರ್ ಮತ್ತು ಜಾನಿ ಡೆಪ್ಪ್‌ರೊಂದಿಗೆ ಟಿಮ್ ಬರ್ಟನ್-ನಿರ್ದೇಶನದ ಆಲಿಸಸ್ ಅಡ್ವೆಂಚರ್ಸ್ ಇನ್ ವಂಡರ್‌ಲ್ಯಾಂಡ್‌ ಮತ್ತು ಥ್ರೂ ದ ಲುಕಿಂಗ್-ಗ್ಲಾಸ್ ‌ನ ರೂಪಾಂತರ ಚಿತ್ರ, ರಮ್ಯಕಥಾನಕದ ಹಾಸ್ಯ ದ ಫಿಯಾನ್ಸಿ ,[೪೩] ಜ್ಯೂಲಿ ಬಕ್ಸ್‌ಬಾಮ್‌ನ ಕಾದಂಬರಿ ದ ಒಪೋಸಿಟ್ ಆಫ್ ಲವ್ ‌ನ ರೂಪಾಂತರ ಚಿತ್ರ, ಜ್ಯೂಲಿಯ ರಾಬರ್ಟ್ಸ್, ಜೆಸ್ಸಿಕಾ ಬೈಲ್, ಜೆಸ್ಸಿಕಾ ಆಲ್ಬಾ ಮತ್ತು ಅಶ್ಟಾನ್ ಕುಟ್ಚರ್ ಮೊದಲಾದ‌ವರೊಂದಿಗೆ ಗ್ಯಾರಿ ಮಾರ್ಶಲ್‌-ನಿರ್ದೇಶನದ ಒಟ್ಟು ಹಾಸ್ಯ ವ್ಯಾಲೆಂಟೈನ್ಸ್ ಡೆ ಹಾಗೂ ಗೆರಾಲ್ಡ್‌ ಕ್ಲಾರ್ಕೆಯ ಜೀವನಚರಿತ್ರೆ ಗೆಟ್ ಹ್ಯಾಪಿ: ದ ಲೈಫ್ ಆಫ್ ಜ್ಯೂಡಿ ಗಾರ್ಲ್ಯಾಂಡ್‌ ‌ನ ರೂಪಾಂತರ ಚಿತ್ರ, ಇದರಲ್ಲಿ ಅವಳು ವೇದಿಕೆ ಮತ್ತು ತೆರೆಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಾಳೆ.{4/ ಮುಂದೆ ಬರುವ ಸೂಪರ್‌ಹೀರೊ ಚಿತ್ರ ಸ್ಪೈಡರ್-ಮ್ಯಾನ್ 4 ‌ರಲ್ಲಿನ ಫೆಲಿಸಿಯಾ ಹಾರ್ಡಿ ಪಾತ್ರದಲ್ಲಿ ಹ್ಯಾಥ್‌ವೇ ಅಭಿನಯಿಸುತ್ತಾಳೆ ಎಂದು 2009ರ ಡಿಸೆಂಬರ್ 8ರಲ್ಲಿ ವರದಿಯಾಗಿದೆ. ಆದರೆ ಹಾರ್ಡಿಯು ಕಾಮಿಕ್ಸ್‌ನಲ್ಲಿರುವಂತೆ ಬ್ಲ್ಯಾಕ್‌ ಕ್ಯಾಟ್‌ಗೆ ಬದಲಾವಣೆಯಾಗುವುದಿಲ್ಲ. ಬದಲಿಗೆ ರೈಮಿಯ ಫೆಲಿಸಿಯಾ, ಹೊಚ್ಚ-ಹೊಸ ಪ್ರಬಲಶಕ್ತಿಯ ಪ್ರತಿರೂಪ ಎಂದು ಕರೆಯಲಾಗುವ ವಲ್ಚರೆಸ್ ಪಾತ್ರದಲ್ಲಿ ಅಭಿನಯಿಸುವ ನಿರೀಕ್ಷೆಯಿದೆ.[೪೪] ಸ್ಪೈಡರ್-ಮ್ಯಾನ್‌ 4 ನ ಮರುಕಥೆ ಬರೆಯಲಾಗುತ್ತದೆ ಎಂದು ವರದಿಮಾಡಿದಾಗ 2010ರ ಜನವರಿ 5ರಲ್ಲಿ ಆನ್ ಹ್ಯಾಥ್‌ವೇ "ತುಂಬಾ ದುಬಾರಿ" ಎಂದು ಹೇಳಿ ಅವಳನ್ನು ಕೈಬಿಡಲು ಅವರು ನಿರ್ಧರಿಸಿದರು.[೪೫]

ವೈಯಕ್ತಿಕ ಜೀವನ

[ಬದಲಾಯಿಸಿ]

ಹ್ಯಾಥ್‌ವೇ ಅನೇಕ ಧರ್ಮಕಾರ್ಯಗಳಲ್ಲಿ ತೊಡಗಿಕೊಂಡಿದ್ದಾಳೆ - ದ ಕ್ರಿಯೇಟಿವ್ ಕೊಯಲಿಶನ್, ದ ಸ್ಟೆಪ್ ಅಪ್ ವುಮೆನ್ಸ್ ನೆಟ್ವರ್ಕ್, ಸೇಂಟ್ ಜ್ಯೂಡ್ ಚಿಲ್ಡ್ರನ್ಸ್ ರಿಸರ್ಚ್ ಹಾಸ್ಪಿಟಲ್‌, ದ ಹ್ಯೂಮನ್ ರೈಟ್ಸ್ ಕ್ಯಾಂಪೇನ್ ಮತ್ತು ದ ಲಾಲಿಪಪ್ ಥಿಯೇಟರ್ ನೆಟ್ವರ್ಕ್, ಇದು ಕಾಯಿಲೆಯಿಂದ ತೀವ್ರವಾಗಿ ಅಸ್ವಸ್ಥಗೊಂಡ ಮಕ್ಕಳಿಗೆ ಚಿತ್ರಗಳನ್ನು ಪ್ರದರ್ಶಿಸುವ ಒಂದು ಸಂಸ್ಥೆ. 2008ರಲ್ಲಿ ಅವಳು ಎಲ್ಲೆ ನಿಯತಕಾಲಿಕದ "ಹಾಲಿವುಡ್‌ನ ಮಹಿಳೆ" ಸನ್ಮಾನವನ್ನು ಪಡೆದಳು ಹಾಗೂ ದ ಸ್ಟೆಪ್ ಅಪ್ ವುಮೆನ್ಸ್ ನೆಟ್ವರ್ಕ್ ಮತ್ತು ದ ಹ್ಯೂಮನ್ ರೈಟ್ಸ್ ಕ್ಯಾಂಪೇನ್‌ನೊಂದಿಗಿನ ಕಾರ್ಯಕ್ಕಾಗಿ ಅವಳನ್ನು ಅಭಿನಂದಿಸಲಾಯಿತು. 2007ರ ಆರಂಭದಲ್ಲಿ ಹ್ಯಾಥ್‌ವೇ ಅವಳ ಹದಿಹರೆಯದಲ್ಲಿ ಹೊಂದಿದ್ದ ಖಿನ್ನತೆಯ ಅನುಭವಗಳ ಬಗ್ಗೆ ಮಾತನಾಡುತ್ತಾ ತಾನು ಅಂತಿಮವಾಗಿ ಯಾವುದೇ ಔಷಧವಿಲ್ಲದೆ ಆ ಕಾಯಿಲೆಯಿಂದ ಹೊರಬಂದೆ ಎಂದು ಹೇಳಿಕೊಂಡಿದ್ದಾಳೆ.[೪೬] 2008ರ ಕೊನೆಯಲ್ಲಿ ಲೇಟ್ ಶೊ ವಿತ್ ಡೇವಿಡ್ ಲೆಟರ್‌ಮ್ಯಾನ್‌ ‌ನಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಹ್ಯಾಥ್‌ವೇ ಧೂಮಪಾನವನ್ನು ಮತ್ತೊಮ್ಮೆ ನಿಲ್ಲಿಸಿದ್ದಾಗಿ ಹೇಳಿ ಗಮನಸೆಳೆದಳು. ರಾಚೆಲ್ ಗೆಟ್ಟಿಂಗ್ ಮ್ಯಾರೀಡ್‌ ‌ನ ಚಿತ್ರೀಕರಣದ ಸಂದರ್ಭದಲ್ಲಿ "ಅತಿಯಾದ" ಧೂಮಪಾನ ಆರಂಭಿಸಿದ ಈಕೆ "ಸ್ವಲ್ಪ ಸಮಯದ ಮಟ್ಟಿಗೆ ಬಿಟ್ಟುಬಿಟ್ಟಳು", ಆದರೆ ಹೆಚ್ಚು ಒತ್ತಡದ ಬೇಸಿಗೆಕಾಲದ ಹಿನ್ನೆಲೆಯಲ್ಲಿ ಹಾಗೂ ರಫೆಲ್ಲೊ ಫೊಲೈರಿಯೊಂದಿಗಿನ ಅವಳ ಸಂಬಂಧವು ಅಂತ್ಯಗೊಂಡಾಗ ಒತ್ತಡ ನೀಗಲು ಮತ್ತೆ ಧೂಮಪಾನ ಪ್ರಾರಂಭಿಸಿದಳು.[೪೭][೪೮][೪೯] ಒತ್ತಡದ ಮಟ್ಟ ಕುಸಿತಗೊಂಡಿದ್ದರಿಂದ ತಾನು ಧೂಮಪಾನ ತ್ಯಜಿಸಿದೆ ಎಂದು ನಂತರ ಕಾರಣ ನೀಡಿರುವ ಅವಳು ತಾನು ಮತ್ತೆ ಸಸ್ಯಾಹಾರಿಯಾಗುತ್ತೇನೆ ಎಂದು ಸಾರಿದಳು.[೪೯][೫೦] 2008ರ ನವೆಂಬರ್‌ನಲ್ಲಿ ವರದಿಯಾಗಿರುವ ಪ್ರಕಾರ ಹ್ಯಾಥ್‌ವೇ ನಟ ಆಡಮ್ ಶುಲ್ಮಾನ್‌ನೊಂದಿಗೆ ಸಂಬಂಧ ಹೊಂದಿದ್ದಳು.[೫೧] ವೈಯಕ್ತಿಕ ಜೀವನದ ಸಂಘರ್ಷ ಮತ್ತು ಆನಂತರ ಮಾಧ್ಯಮದ ಗಮನ ಸೆಳೆದ ವಿಷಯಕ್ಕೆ ಸಂಬಂಧಿಸಿದಂತೆ ಹ್ಯಾಥ್‌ವೇ ಆಸ್ಕರ್ ವೈಲ್ಡ್ ನನ್ನು ಉಲ್ಲೇಖಿಸುವ: "ಜೀವನದ ಕಹಿನೆನಪುಗಳ ಬಗ್ಗೆ ಕಡಿಮೆ ಹೇಳಿಕೊಂಡಷ್ಟು ಉತ್ತಮ" ಎಂಬ ಒಂದು ಮಂತ್ರವನ್ನು ಬಳಸುತ್ತಾಳೆ.[೫೨]

ರಫೆಲ್ಲೊ ಫೊಲೈರಿಯೊಂದಿಗಿನ ಸಂಬಂಧ

[ಬದಲಾಯಿಸಿ]

2004ರಲ್ಲಿ ಹ್ಯಾಥ್‌ವೇ ಇಟಲಿಯ ಸ್ಥಿರಾಸ್ತಿ ಅಭಿವೃದ್ಧಿದಾರ ರಫೆಲ್ಲೊ ಫೊಲೈರಿಯೊಂದಿಗೆ ಸಂಬಂಧ ಬೆಳೆಸಿದಳು.[][೫೩] ಅವನೊಂದಿಗಿನ ಸಂಬಂಧದ ಸಮಯದಲ್ಲಿ ಹ್ಯಾಥ್‌ವೇ ಧರ್ಮದತ್ತಿ ಫೊಲೈರಿ ಫೌಂಡೇಶನ್ ಪ್ರತಿಷ್ಠಾನದ ಅಭಿವೃದ್ಧಿ ಕಾರ್ಯದಲ್ಲಿ ಭಾಗವಹಿಸಿದಳು, ಪ್ರತಿಷ್ಠಾನದ ಹಣಕಾಸಿನ ದಾನಿ ಹಾಗೂ ಅದರ ನಿರ್ದೇಶಕರ ಮಂಡಳಿಯ ಸದಸ್ಯಳಾಗಿ ಸೇವೆಸಲ್ಲಿಸಿದಳು.[೫೪] 2003ರಲ್ಲಿ ಸ್ಥಾಪನೆಯಾದ ತೃತೀಯ ವಿಶ್ವದ ಮಕ್ಕಳಿಗೆ ಚುಚ್ಚುಮದ್ದು ಒದಗಿಸುವ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿದ ಮ್ಯಾನ್‌ಹ್ಯಾಟನ್-ಮೂಲದ ಧರ್ಮಸಂಸ್ಥೆಯು, ಲಾಬೇತರ ಸಂಸ್ಥೆಗಳಿಂದ ಅವಶ್ಯಕವಾದ ತೆರಿಗೆ ಪತ್ರಗಳನ್ನು ಒಪ್ಪಿಸಲು ವಿಫಲವಾದ್ದರಿಂದ 2008ರ ಜೂನ್‌ನಲ್ಲಿ IRSನಿಂದ ತನಿಖೆಗೊಳಗಾಯಿತು.[೫೫] ಇದು ಮತ್ತು ಆ ಸಂದರ್ಭದಲ್ಲಿ ನಡೆಯುತ್ತಿದ್ದ ಫೊಲೈರಿಯನ್ನು ಒಳಗೊಂಡ ಇತರ ಕಾನೂನು ವಿಷಯಗಳು ತನ್ನ ನಟನಾ ವೃತ್ತಿಜೀವನಕ್ಕೆ ಹಾನಿಕರವೆಂದು ಹೆದರಿದ ಹ್ಯಾಥ್‌ವೇ ಫೊಲೈರಿಯೊಂದಿಗಿನ ಸಂಬಂಧವನ್ನು 2008ರ ಜೂನ್‌ನಲ್ಲಿ ಕೊನೆಗೊಳಿಸಿದಳು.[೫೪] U.S.ನಲ್ಲಿನ ಕ್ಯಾಥೋಲಿಕ್‌ ಚರ್ಚಿನ ಆಸ್ತಿಯನ್ನು ಮರುಅಭಿವೃದ್ಧಿ ಕಾರ್ಯಕ್ಕಾಗಿ ಖರೀದಿ ಮಾಡುವ ಒಂದು ಯೋಜನೆಯಲ್ಲಿ ಹೂಡಿಕೆದಾರರಿಂದ ಲಕ್ಷಾಂತರ ಡಾಲರ್ ಸುಲಿಗೆ ಮಾಡಿ ಅಕ್ರಮವೆಸಗಿದ ಆರೋಪಗಳ ಮೇಲೆ ಜೂನ್ 2008ರಲ್ಲಿ ಫೊಲೈರಿಯನ್ನು ಬಂಧಿಸಲಾಯಿತು. ಹ್ಯಾಥ್‌ವೇ ಈ ಮೋಸದಿಂದ-ಪಡೆದ ಹಣದ ಬಗ್ಗೆ ಏನೂ ಅರಿಯದ ಫಲಾನುಭವಿ ಹಾಗೂ ಇದು ಫೊಲೈರಿಯ ಮೇಲಿಂದ ಮೇಲೆ ವಿಮಾನ ಯಾನ ಮಾಡುವ,ಖರೀದಿ ಅಮಲು ಮತ್ತು ಉತ್ಕೃಷ್ಟ ಭೋಜನದ ಐಷಾರಾಮಿ ಜೀವನಶೈಲಿಗೆ ಖರ್ಚು ಮಾಡಲಾಯಿತು ಎಂದು ಕೋರ್ಟ್ ಪತ್ರಗಳು ಹೇಳಿವೆ.[೫೬] ಫೊಲೈರಿಯ ಚಟುವಟಿಕೆಗಳ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿ FBI ಫೊಲೈರಿಯ ನ್ಯೂಯಾರ್ಕ್‌ ಸಿಟಿಯಲ್ಲಿನ ವಾಸದ ಕೊಠಡಿಯಲ್ಲಿದ್ದ ಹ್ಯಾಥ್‌ವೇಳ ಖಾಸಗಿ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡಿತು ಎಂದು ವರದಿಯಾಗಿದೆ; ಆದರೂ ಹ್ಯಾಥ್‌ವೇ ಆ ಘಟನೆಗಳಿಂದ ತಪ್ಪುಮಾಡಿದ ಬಗ್ಗೆ ಯಾವುದೇ ದೋಷಾರೋಪಕ್ಕೆ ಗುರಿಯಾಗಲಿಲ್ಲ.[೫೭] W ನಿಯತಕಾಲಿಕದ 2008ರ ಅಕ್ಟೋಬರ್‌ ಸಂಚಿಕೆಯಲ್ಲಿ, ಹ್ಯಾಥ್‌ವೇ ಮೊದಲ ಬಾರಿಗೆ ಫೊಲೈರಿಯ ಬಂಧನ ಮತ್ತು ಅವನೊಂದಿಗೆ ತನ್ನ ಸಂಬಂಧ ಮುರಿದುಹೋಗಿದ್ದನ್ನು ಕುರಿತು ಮಾತನಾಡಿದಳು. ಫೊಲೈರಿಯ ಬಂಧನದ ನಂತರ "ಒಂದು ವಾರದವರೆಗೆ ತಾನು ಆ ಆಘಾತದಲ್ಲೇ ಕಳೆದೆನು" ಹಾಗೂ ಅಂತಹ ಕಷ್ಟಕಾಲದಲ್ಲಿಯ‌ೂ ಕೆಲಸ ಮಾಡುವುದನ್ನು ಮುಂದುವರಿಸಿಕೊಂಡು ಹೋದ ತನ್ನ ಸಾಮರ್ಥ್ಯಕ್ಕೆ ಸ್ನೇಹಿತರ ಕೃಪೆಯೇ ಕಾರಣ ಎಂದು ಹೇಳಿಕೊಂಡಿದ್ದಾಳೆ.[೫೮] ಅದೇ ತಿಂಗಳಲ್ಲಿ ಹ್ಯಾಥ್‌ವೇ ಸ್ಯಾಟರ್ಡೆ ನೈಟ್ ಲೈವ್‌ ‌ನಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂದರ್ಭದಲ್ಲಿ ಅವಳ ಮೊದಲ ಏಕಪಾತ್ರಾಭಿನಯದ ನಾಟಕದ ಬಗೆಗಿನ ಅನುಭವವನ್ನು ಹೇಳಿಕೊಂಡು ತಮಾಷೆ ಮಾಡಿದಳು.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು
1999 ಗೆಟ್ ರಿಯಲ್‌ ಮೆಘಾನ್ ಗ್ರೀನ್ 1999-2000 (13 ಸಂಚಿಕೆಗಳು)
2001 ದ ಪ್ರಿನ್ಸೆಸ್ ಡೈರೀಸ್‌ ಮಿಯಾ ಥರ್ಮೋಪೋಲಿಸ್‌ ನಾಮನಿರ್ದೇಶಿತಗೊಂಡಿದ್ದು - ಅತ್ಯದ್ಭುತ ನಟನೆಗಾಗಿ MTV ಚಲನಚಿತ್ರ ಪ್ರಶಸ್ತಿ
ದ ಅದರ್ ಸೈಡ್ ಆಫ್ ಹೆವೆನ್‌ ಜೀನ್ ಸೇಬಿನ್
2002 ದ ಕ್ಯಾಟ್ ರಿಟರ್ನ್ಸ್‌ ಹರು ಧ್ವನಿ
ನಿಕೋಲಸ್ ನಿಕ್ಲೆಬಿ ಮ್ಯಾಡೆಲೈನ್ ಬ್ರೆ ಅತ್ಯುತ್ತಮ ಪಾತ್ರಕ್ಕಾಗಿ ನ್ಯಾಶನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿ
2004 ಎಲ್ಲಾ ಎನ್‌ಚಾನ್ಟೆಡ್‌ ಎಲ್ಲಾ ಆಫ್ ಫ್ರೆಲ್
The Princess Diaries 2: Royal Engagement ಮಿಯಾ ಥರ್ಮೋಪೋಲಿಸ್‌
2005 ಹುಡ್‌ವಿಂಕ್ಡ್‌! ರೆಡ್ ಪುಕೆಟ್ ಧ್ವನಿ
ಹ್ಯಾವೋಕ್‌ ಅಲಿಸನ್ ಲ್ಯಾಂಗ್ ಡೈರೆಕ್ಟ್-ಟು-ವೀಡಿಯೊ (ಅಮೆರಿಕ ಸಂಯುಕ್ತ ಸಂಸ್ಥಾನ)
ಬ್ರೋಕ್‌ಬ್ಯಾಕ್‌ ಮೌಂಟೈನ್‌ ಲ್ಯುರೀನ್ ನ್ಯೂಸಮ್ ಟ್ವಿಸ್ಟ್ ನಾಮನಿರ್ದೇಶಿತಗೊಂಡಿದ್ದು — ಅತ್ಯುತ್ತಮ ಸಮಗ್ರ ಪಾತ್ರವರ್ಗಕ್ಕಾಗಿ ಗೊಥಮ್ ಪ್ರಶಸ್ತಿ
ನಾಮನಿರ್ದೇಶಿತಗೊಂಡಿದ್ದು — ಚಲನಚಿತ್ರದ ಪಾತ್ರವೊಂದರಲ್ಲಿ ಮನೋಜ್ಞ ಅಭಿನಯಕ್ಕಾಗಿ ಚಲನಚಿತ್ರ ತಾರೆಯರ ಗಿಲ್ಡ್‌ ಪ್ರಶಸ್ತಿ
2006 ದ ಡೆವಿಲ್ ವೇರ್ಸ್ ಪ್ರಾಡ ಆಂಡಿ ಸ್ಯಾಕ್ಸ್
2007 ಬಿಕಮಿಂಗ್ ಜಾನೆ ಜೇನ್‌ ಆಸ್ಟೆನ್‌
2008 ಗೆಟ್ ಸ್ಮಾರ್ಟ್‌ ಏಜೆಂಟ್ 99
ಪ್ಯಾಸೆಂಜರ್ಸ್ ಕ್ಲಾರೆ ಸಮ್ಮರ್ಸ್
ರಾಚೆಲ್ ಗೆಟ್ಟಿಂಗ್ ಮ್ಯಾರೀಡ್‌ ಕಿಮ್ ಆಸ್ಟಿನ್ ಚಿತ್ರ ವಿಮರ್ಶಕರ ಒಕ್ಕೂಟದಿಂದ ಅತ್ಯುತ್ತಮ ನಟಿ ಪ್ರಶಸ್ತಿ
ಬ್ರಾಡ್‌ಕಾಸ್ಟ್ ಚಿತ್ರ ವಿಮರ್ಶಕರ ಒಕ್ಕೂಟದದಿಂದ ಅತ್ಯುತ್ತಮ ನಟಿ ಪ್ರಶಸ್ತಿ ಡೌವ್ಟ್ ‌ಗಾಗಿ ಮೆರಿಲ್ ಸ್ಟ್ರೀಪ್‌‌‌‌ನ ಜೊತೆ ಸಹಯೋಗ
ಚಿಕಾಗೊ ಚಿತ್ರ ವಿಮರ್ಶಕರ ಒಕ್ಕೂಟದಿಂದ ಅತ್ಯುತ್ತಮ ನಟಿ ಪ್ರಶಸ್ತಿ
ದಲ್ಲಾಸ್-ಫೋರ್ಟ್ ವರ್ತ್ ಚಿತ್ರ ವಿಮರ್ಶಕರ ಒಕ್ಕೂಟದ ಅತ್ಯುತ್ತಮ ನಟಿ ಪ್ರಶಸ್ತಿ
ನ್ಯಾಷನಲ್ ಬೋರ್ಡ್ ಆಫ್ ರಿವ್ಯೂನಿಂದ ಅತ್ಯುತ್ತಮ ನಟಿ ಪ್ರಶಸ್ತಿ
ಪಾಮ್‌ ಸ್ಪ್ರಿಂಗ್ಸ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ — ಡೆಸರ್ಟ್‌ ಪಾಮ್‌ ಸಾಧನೆ ಪ್ರಶಸ್ತಿ‌
ಫೀಚರ್ ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಪ್ರಿಸ್ಮ್ ಪ್ರಶಸ್ತಿ
ಆಗ್ನೇಯ ಚಲನಚಿತ್ರ ವಿಮರ್ಶಕರ ಒಕ್ಕೂಟದ ಅತ್ಯುತ್ತಮ ನಟಿ ಪ್ರಶಸ್ತಿ
ನಾಮನಿರ್ದೇಶನ- ಅತ್ಯುತ್ತಮ ನಟಿಯಾಗಿ ಅಕಾಡೆಮಿ ಪ್ರಶಸ್ತಿ
ನಾಮನಿರ್ದೇಶನ — ಚಲನಚಿತ್ರಕಥೆಯ ಅತ್ಯುತ್ತಮ ನಟಿ- ಗೋಲ್ಡನ್ ಗ್ಲೋಬ್ ಪ್ರಶಸ್ತಿ
ನಾಮನಿರ್ದೇಶನ—ಅತ್ಯುತ್ತಮ ಸಮಗ್ರ ಪಾತ್ರವರ್ಗಕ್ಕಾಗಿ ಗೊಥಮ್ ಪ್ರಶಸ್ತಿ
ನಾಮನಿರ್ದೇಶನ - ಇಂಡಿಪೆಂಡೆಂಟ್ ಸ್ಪಿರಿಟ್ ಪ್ರಶಸ್ತಿ-ಅತ್ಯುತ್ತಮ ಪ್ರಮುಖ ನಟಿ
ನಾಮನಿರ್ದೇಶನ - ಲಂಡನ್ ಚಿತ್ರವಿಮರ್ಶಕರ ವಲಯದಿಂದ ಅತ್ಯುತ್ತಮ ನಟಿ ಪ್ರಶಸ್ತಿ
ನಾಮನಿರ್ದೇಶಿತ-ಆನ್‌ಲೈನ್ ಚಲನಚಿತ್ರ ವಿಮರ್ಶಕರ ಸಂಘದಿಂದ ಅತ್ಯುತ್ತಮ ನಟಿ ಪ್ರಶಸ್ತಿ
ನಾಮನಿರ್ದೇಶಿತ - ಅತ್ಯುತ್ತಮ ನಟಿ-ಚಲನಚಿತ್ರ ಕಥೆ ಸೆಟಲೈಟ್ ಪ್ರಶಸ್ತಿ
ನಾಮನಿರ್ದೇಶಿತ — ಚಲನಚಿತ್ರದ ಅತ್ಯದ್ಭುತ ನಟನೆಗಾಗಿ ನಟಿಗೆ ಮೀಸಲಾಗಿರುವ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ
2009 ಬ್ರೈಡ್ ವಾರ್ಸ್ ಎಮ್ಮ ಅಲೆನ್ ನಾಮನಿರ್ದೇಶನಗೊಂಡಿದ್ದು — ಅತ್ಯುತ್ತಮ ನಟನೆಗಾಗಿ MTV ಮ‌ೂವೀ ಪ್ರಶಸ್ತಿ
ನಾಮನಿರ್ದೇಶನಗೊಂಡಿದ್ದು - ಅತ್ಯುತ್ತಮ ಸಾಹಸಕ್ಕಾಗಿ MTV ಮ‌ೂವಿ ಪ್ರಶಸ್ತಿ
2000 ವ್ಯಾಲೈಂಟೈನ್ಸ್‌ ಡೇ ಲಿಜ್ ನಿರ್ಮಾಣದ-ನಂತರದ್ದು
ಅಲಿಸ್ ಇನ್ ವಂಡರ್‌ಲ್ಯಾಂಡ್ ವೈಟ್ ಕ್ವೀನ್ ನಿರ್ಮಾಣದ-ನಂತರದ್ದು
ಲವ್ ಆಂಡ್ ಅದರ್ ಡ್ರಗ್ಸ್ ಮ್ಯಾಗಿ ಮರ್ಡೋಕ್ ನಿರ್ಮಾಣದ-ನಂತರದ್ದು
ದ ಫಿಯಾನ್ಸಿ ಲಿಂಡ್ಸೆ ಮಲೋನೆ ನಿರ್ಮಾಣ-ಪೂರ್ವ [೪೩]
2011 ಗೆಟ್ ಹ್ಯಾಪಿ: ದ ಲೈಫ್ ಆಫ್ ಜ್ಯೂಡಿ ಗಾರ್ಲ್ಯಾಂಡ್‌ ಜ್ಯೂಡಿ ಗಾರ್ಲ್ಯಾಂಡ್‌ ಅಭಿವೃದ್ಧಿಯಲ್ಲಿದೆ [೫೯]

ಆಕರಗಳು

[ಬದಲಾಯಿಸಿ]
  1. ಲೇಖಕರ ಹೆಸರು ಸ್ಪಷ್ಟವಾಗಿಲ್ಲ. "ಡ್ರೆಸ್ಡ್ ಫಾರ್ ಸಕ್ಸೆಸ್". ದಿ ಸಂಡೆ ಟೈಮ್ಸ್ ಸೆಪ್ಟೆಂಬರ್‌ 24, 2006 2006ರ ಅಕ್ಟೋಬರ‍್ 8ರಂದು ಮರುಸಂಪಾದಿಸಲಾಗಿದೆ.
  2. ೨.೦ ೨.೧ ದ ಪ್ರಿನ್ಸೆಸ್ ಡೈರೀಸ್‌ DVD ಕಾಮೆಂಟರಿ. ಚಲನಚಿತ್ರ ನಿರ್ಮಾಣದ ತೆರೆಮರೆಯ ದೃಶ್ಯಗಳು 2006ರ ಸೆಪ್ಟೆಂಬರ್ 19ರಂದು ಮರುಸಂಪಾದಿಸಲಾಗಿದೆ.
  3. "ಸೆಲೆಬ್ರಿಟ್ ಇಂಟರ್ವ್ಯೂ: ಆನ್ ಹ್ಯಾಥ್‌ವೇಸ್ ಗ್ರೋಯಿಂಗ್ ಪೈನ್ಸ್." Archived 2006-10-22 ವೇಬ್ಯಾಕ್ ಮೆಷಿನ್ ನಲ್ಲಿ. ಎಂಟರ್ಟೈನ್ಮೆಂಟ್ ಐವಿಲ್ಲೇಜ್. 2006ರ ಡಿಸೆಂಬರ‍್ 31ರಂದು ಮರುಸಂಪಾದಿಸಿದ್ದು.
  4. "ಆನ್ ಹ್ಯಾಥ್‌ವೇ." Archived 2008-12-17 ವೇಬ್ಯಾಕ್ ಮೆಷಿನ್ ನಲ್ಲಿ. movietome.com. 2006ರ ಅಕ್ಟೋಬರ‍್ 9ರಲ್ಲಿ ಮರುಸಂಪಾದಿಸಲಾಗಿದೆ.
  5. "ಆನ್ ಹ್ಯಾಥ್‌ವೇ." ಪೀಪಲ್‌ ನಿಯತಕಾಲಿಕ. 2008ರ ಅಕ್ಟೋಬರ್ 10ರಂದು ಮರುಸಂಪಾದಿಸಲಾಗಿದೆ.
  6. "Anne Hathaway". Internet Movie Database. Retrieved 2007-03-12.
  7. ೭.೦ ೭.೧ "ಗೆಟ್ ಸ್ಮಾರ್ಟ್‌." Archived 2008-09-07 ವೇಬ್ಯಾಕ್ ಮೆಷಿನ್ ನಲ್ಲಿ. Moviefone.com. ಸಂದರ್ಶನದಲ್ಲಿ 4:36ರಲ್ಲಿ. 2008ರ ಜೂನ್‌ 21ರಂದು ಮರುಸಂಪಾದಿಸಲಾಗಿದೆ.
  8. ೮.೦ ೮.೧ ೮.೨ ೮.೩ ೮.೪ "ಆನ್ ಹ್ಯಾಥ್‌ವೇ ಲರ್ನ್ಸ್ ಫ್ರಮ್ ಎ ಡಿಶ್‌ವಾಶರ್ಸ್ ಇನ್ 'ಪ್ರಾಡ'". ಅಸೋಸಿಯೆಟೆಡ್ ಪ್ರೆಸ್. ಜೂನ್ ‌27, 2006 2006ರ ಜೂನ್‌ 19ರಲ್ಲಿ ಮರುಸಂಪಾದಿಸಲಾಗಿದೆ.
  9. ಬಾರ್ಲೊ, ಹೆಲೆನ್ "ನೊ ಪ್ಲೈನ್ ಜಾನೆ." ದ ಕೊರಿಯರ್-ಮೈಲ್ . ಮಾರ್ಚ್‌ 31, 2007
  10. ೧೦.೦ ೧೦.೧ ೧೦.೨ "ಆನ್ ಹ್ಯಾಥ್‌ವೇ ವಿಶ್ಡ್ ಟು ಬಿ ಎ ನನ್." ದ ಹಿಮಾಲಯನ್ ಟೈಮ್ಸ್ . WebArchive.org ನಲ್ಲಿ ದಾಖಲಿಸಲಾಗಿದೆ. 2009ರ ಅಕ್ಟೋಬರ್ 19ರಂದು ಮರುಪರಿಷ್ಕರಿಸಲಾಗಿದೆ.
  11. ದ ಪ್ರಿನ್ಸೆಸ್ ಡೈರೀಸ್‌ ನಿರೂಪಣೆ - ಆನ್ ಹ್ಯಾಥ್‌ವೇ ಮತ್ತು ಜ್ಯೂಲಿ ಆಂಡ್ರಿವ್ಸ್‌ರೊಂದಿಗೆ
  12. ೧೨.೦ ೧೨.೧ ಮ್ಯಾಕ್‌ಕೀನ್ಲೆ, ಜೆಸ್ಸೆ " ಆನ್ ಎ ಫಾರ್ ಅಪ್ಲೋಂಬ್ ಆನ್‌ಸ್ಟೇಜ್, ಆಂಡ್ ಪೊಲಿಟಿಕಲ್ ಸೈನ್ಸ್ ಇನ್ ದ ವಿಂಗ್ಸ್." ದ ನ್ಯೂಯಾರ್ಕ್‌ ಟೈಮ್ಸ್ - 2002 ಫೆಬ್ರವರಿ 18, 2008ರ ಎಪ್ರಿಲ್ 4ರಲ್ಲಿ ಮರುಸಂಪಾದಿಸಿದೆ.
  13. ೧೩.೦ ೧೩.೧ "All-Access Anne". Jane. June 23, 2006. Archived from the original on ಜನವರಿ 25, 2010. Retrieved ಮಾರ್ಚ್ 9, 2010.
  14. ೧೪.೦ ೧೪.೧ "'Prada' star Anne Hathaway doesn't like it haute". Retrieved 2008-10-09.
  15. "ಬಾಕ್ಸ್ ಆಫೀಸ್ ಸ್ಟಟಿಸ್ಟಿಕ್ಸ್ ಫಾರ್ ದ ಪ್ರಿನ್ಸೆಸ್ ಡೈರೀಸ್‌ (2001)". BoxOfficeMojo.com. 2006ರ ಸೆಪ್ಟೆಂಬರ್‌ 19ರಂದು ಮರುಸಂಪಾದಿಸಲಾಗಿದೆ.
  16. ಫಾಲ್ಕ್, ಬೆನ್. "ದ ಪ್ರಿನ್ಸೆಸ್ ಡೈರೀಸ್‌. (2001)" BBC. ಡಿಸೆಂಬರ್ 11, 2001. 2006ರ ಸೆಪ್ಟೆಂಬರ್ 19ರಂದು ಮರುಸಂಪಾದಿಸಲಾಗಿದೆ.
  17. "ಕ್ರಿಶ್ಚಿಯನ್ ಮ‌ೂವೀಸ್: ಕಂಪಾರಿಜನ್ ಆಫ್ ಬಾಕ್ಸ್ ಆಫೀಸ್ ರಿಸೀಪ್ಟ್ಸ್." Archived 2009-12-16 ವೇಬ್ಯಾಕ್ ಮೆಷಿನ್ ನಲ್ಲಿ. Adherents.com. 2006ರ ಅಕ್ಟೋಬರ್ 5ರಂದು ಮರುಸಂಪಾದಿಸಲಾಗಿದೆ.
  18. "ಬಾಕ್ಸ್ ಆಫೀಸ್ ಸ್ಟಾಟಿಸ್ಟಿಕ್ಸ್ ಫಾರ್ ದ ದ ಅದರ್ ಸೈಡ್ ಆಫ್ ಹೆವೆನ್‌ (2001)". BoxOfficeMojo.com. 2006ರ ಅಕ್ಟೋಬರ್ 4ರಂದು ಮರುಸಂಪಾದಿಸಲಾಗಿದೆ.
  19. "ದ ಕ್ಯಾಟ್ ರಿಟರ್ನ್ಸ್‌ DVD ರಿವ್ಯೂ." Ultimate Disney.com. 2008ರ ಅಕ್ಟೋಬರ್ 23ರಂದು ಮರುಸಂಪಾದಿಸಲಾಗಿದೆ.
  20. ೨೦.೦ ೨೦.೧ "ಹ್ಯಾಥ್‌ವೇ ಟೂ ಸ್ವೀಟ್ ಟು ಬೀಟ್". ಲಾಸ್ ಏಂಜಲ್ಸ್‌ ಟೈಮ್ಸ್‌ ಜೂನ್‌ 12, 2004. 2006ರ ಅಕ್ಟೋಬರ‍್ 3ರಂದು ಮರುಸಂಪಾದಿಸಲಾಗಿದೆ.
  21. ವೆಸ್ತೋಫ್, ಜೆಫ್ರಿ "ನಿಕೋಲಸ್ ನಿಕ್ಲೆಬಿ (2002)" Archived 2009-01-22 ವೇಬ್ಯಾಕ್ ಮೆಷಿನ್ ನಲ್ಲಿ.. ನಾರ್ತ್‌ವೆಸ್ಟ್ ಹೆರಾಲ್ಡ್‌ . ದಿನಾಂಕವಿಲ್ಲದ ಪ್ರತಿ. 2006ರ ಸೆಪ್ಟೆಂಬರ್ 23ರಂದು ಮರುಸಂಪಾದಿಸಲಾಗಿದೆ.
  22. ವೈಸ್, ಜೆಫ್ "ನಿಕೋಲಸ್ ನಿಕ್ಲೆಬಿ " Archived 2008-12-17 ವೇಬ್ಯಾಕ್ ಮೆಷಿನ್ ನಲ್ಲಿ.. ಡೆಸೆರೆಟ್‌ ನ್ಯೂಸ್‌ ಜನವರಿ 23, 2003 2006ರ ಸೆಪ್ಟೆಂಬರ್ 23ರಲ್ಲಿ ಮರುಸಂಪಾದಿಸಲಾಗಿದೆ.
  23. "ಬಾಕ್ಸ್ ಆಫೀಸ್ ಸ್ಟಾಟಿಸ್ಟಿಕ್ಸ್ ಫಾರ್ ನಿಕೋಲಸ್ ನಿಕ್ಲೆಬಿ (2002)". ಗಲ್ಲಾಪೆಟ್ಟಿಗೆ ಮೊಜೊ. 2006ರ ಸೆಪ್ಟೆಂಬರ್ 23ರಲ್ಲಿ ಮರುಸಂಪಾದಿಸಲಾಗಿದೆ.
  24. ಎಲ್ಡರ್, ರೋಬರ್ಟ್. "ಮ‌ೂವಿ ರಿವ್ಯೂ: ಎಲ್ಲಾ ಎನ್‌ಚಾನ್ಟೆಡ್‌ ". ಚಿಕಾಗೋ ಟ್ರಿಬ್ಯೂನ್‌. 2006ರ ಸೆಪ್ಟೆಂಬರ್ 23ರಂದು ಮರುಸಂಪಾದಿಸಲಾಗಿದೆ.
  25. ನ್ಯೂಯಾರ್ಕ್‌ ಟೈಮ್ಸ್ . "ದ ರಿಲೀಸ್ ಆಫ್ ಎಲ್ಲಾ ಎನ್‌ಚಾನ್ಟೆಡ್‌ ". ಎಪ್ರಿಲ್‌ 9, 2004. 2006ರ ಸೆಪ್ಟೆಂಬರ್ 23ರಲ್ಲಿ ಮರುಸಂಪಾದಿಸಲಾಗಿದೆ.
  26. "ಆನ್ ಹ್ಯಾಥ್‌ವೇ: ಬಯೋಗ್ರಫಿ". TV ಗೈಡ್ . 2009ರ ಅಕ್ಟೋಬರ್ 19ರಂದು ಸೇರಿಸಲಾಗಿದೆ.
  27. "ದ ಪ್ರಿನ್ಸೆಸ್ ಡೈರೀಸ್‌ 2: ರೋಯಲ್ ಎಂಗೇಜ್‌ಮೆಂಟ್." BoxOfficeMojo.com. 2008 ಅಕ್ಟೋಬರ‍್ 10ರಂದು ಮರುಸಂಪಾದಿಸಲಾಗಿದೆ.
  28. ಎಪ್‌ಸ್ಟೈನ್, ಡ್ಯಾನಿಯೆಲ್ ರೋಬರ್ಟ್. "ಆನ್ ಹ್ಯಾಥ್‌ವೇ ಆಫ್ ಬ್ರೋಕ್‌ಬ್ಯಾಕ್‌ ಮೌಂಟೈನ್‌." Archived 2008-10-06 ವೇಬ್ಯಾಕ್ ಮೆಷಿನ್ ನಲ್ಲಿ. ugo.com. 2008ರ ಅಕ್ಟೋಬರ್ 10ರಂದು ಮರುಸಂಪಾದಿಸಲಾಗಿದೆ.
  29. "ಹ್ಯಾವೋಕ್‌ (2005)." Rottentomatoes.com. 2008 ಅಕ್ಟೋಬರ್ 10ರಲ್ಲಿ ಮರುಸಂಪಾದಿಸಲಾಗಿದೆ.
  30. "ಬ್ರೋಕ್‌ಬ್ಯಾಕ್‌ ಮೌಂಟೈನ್‌ (2005)." Rottentomatoes.com. 2008 ಅಕ್ಟೋಬರ್ 10ರಂದು ಮರುಸಂಪಾದಿಸಲಾಗಿದೆ.
  31. ೩೧.೦ ೩೧.೧ ಹೂಪರ್, ಬ್ಯಾರೆಟ್. "ಲಿಟಲ್ ಆನ್ ಪ್ರಿಂಪ್ಸ್ ಅಪ್ ಇನ್ ಪ್ರಾಡ." ಇನ್ಸೈಡ್ ಎಂಟರ್ಟೈನ್ಮೆಂಟ್ (ಜೂನ್‌ 2006), ಪುಟ. 37–44. 2006ರ ಸೆಪ್ಟೆಂಬರ್ 16ರಲ್ಲಿ ಮರುಸಂಪಾದಿಸಲಾಗಿದೆ.
  32. "ಆನ್ ಹ್ಯಾಥ್‌ವೇ - ಹ್ಯಾಥ್‌ವೇ 'ಸ್ಟಾರ್ವ್ಡ್' ಆನ್ ಡೆವಿಲ್ ವೇರ್ಸ್ ಪ್ರಾಡ." contactmusic.com. ಜೂನ್‌ 10, 2008
  33. "ದ ವಜಿನ ಮಿಸ್ಟೆರೀಸ್." Archived 2009-09-03 ವೇಬ್ಯಾಕ್ ಮೆಷಿನ್ ನಲ್ಲಿ. TMZ.com. ಜೂನ್‍ 18, 2007
  34. "Anne Hathaway Interview". Marie Claire. 2008-07-04. Archived from the original on 2008-08-29. Retrieved 2008-08-17.
  35. "ಮ‌ೂವಿ ಸ್ಟಾರ್ ಬಯೋಗ್ರಫಿ - ಆನ್ ಹ್ಯಾಥ್‌ವೇ". Archived 2010-09-08 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರೀಮಿಯರ್ . 2009ರ ಅಕ್ಟೋಬರ್ 19ರಂದು ಸೇರಿಸಲಾಗಿದೆ.
  36. "ಆನ್ ಹ್ಯಾಥ್‌ವೇ ಕನ್ಫರ್ಮ್ಡ್ ಆಸ್ ನ್ಯೂ ಅಂಬಾಸಡರ್ ಫಾರ್ ಲ್ಯಾಂಕೋಮ್." Archived 2008-08-20 ವೇಬ್ಯಾಕ್ ಮೆಷಿನ್ ನಲ್ಲಿ. sassybella.com. ಜನವರಿ 3, 2008
  37. ಟ್ಯೂಕ್ಸ್‌ಬರಿ, ಡ್ರೂ. "ಆನ್ ಹ್ಯಾಥ್‌ವೇ." Archived 2008-10-12 ವೇಬ್ಯಾಕ್ ಮೆಷಿನ್ ನಲ್ಲಿ. Metromix.com. ಸೆಪ್ಟೆಂಬರ್‌ 30, 2008.
  38. Naomi West (2009-01-09). "Anne Hathaway: Oscar contender who is the real deal". The Telegraph. Retrieved 2009-01-11.
  39. "ಆನ್ ಹ್ಯಾಥ್‌ವೇಸ್ "ಫೇವರಿಟ್ ವೆಡ್ಡಿಂಗ್ ಮೊಮೆಂಟ್?" Archived 2009-05-16 ವೇಬ್ಯಾಕ್ ಮೆಷಿನ್ ನಲ್ಲಿ.ವೆನ್ ಗೇ ಬ್ರದರ್ ಗಾಟ್ ಹಿಚ್ಡ್!" Archived 2009-05-16 ವೇಬ್ಯಾಕ್ ಮೆಷಿನ್ ನಲ್ಲಿ. Us ನಿಯತಕಾಲಿಕ . ಡಿಸೆಂಬರ್ 18, 2008.
  40. Snierson, Dan (2008-09-03). "Exclusive: Jodie Foster, Anne Hathaway to guest on 'The Simpsons'". Entertainment Weekly. Archived from the original on 2008-09-05. Retrieved 2008-09-04.
  41. "ಆನ್ ಹ್ಯಾಥ್‌ವೇ ಗೆಟ್ಸ್ ಆನಿಮೇಟೆಡ್ ಫಾರ್ 'ಫ್ಯಾಮಿಲಿ ಗೈ.'" Zap2It.com . ಮಾರ್ಚ್‌ 27, 2009.
  42. Isherwood, Charles (June 26, 2009). "I Love You, You're Perfect. You're a Girl?". New York Times. Retrieved 2009-07-04.
  43. ೪೩.೦ ೪೩.೧ "ಆನ್ ಹ್ಯಾಥ್‌ವೇ ಗೆಟ್ಸ್ ಎ ಫಿಯಾನ್ಸಿ. " TV ಗೈಡ್. ಅಕ್ಟೋಬರ್‌ 22, 2008. 2008ರ ಅಕ್ಟೋಬರ್ 24ರಲ್ಲಿ ಮರುಸಂಪಾದಿಸಲಾಗಿದೆ.
  44. "EXCLUSIVE: Spider-Man 4 Circling John Malkovich, Anne Hathaway". Movieline LLC. MoveLine. December 8, 2009. Archived from the original on ಅಕ್ಟೋಬರ್ 2, 2011. Retrieved December 12, 2009.
  45. "Spider-Man 4 Will Not Be Ready By May 5th 2011". CinemaBlend.com. January 5, 2010. Archived from the original on ಜನವರಿ 10, 2010. Retrieved January 9, 2010. {{cite web}}: External link in |publisher= (help)
  46. ರುಬಿನ್, ಕರ್ಟ್ನೆ. "ಆನ್ ಹ್ಯಾಥ್‌ವೇ ಸೇಸ್ ಶಿ ಬ್ಯಾಟ್ಲ್ಡ್ ಡಿಪ್ರೆಶನ್." People.com. ಫೆಬ್ರುವರಿ 6, 2007.
  47. Peters, Jenny (2008-09-16). "Anne Hathaway's New Image at the "Rachel Getting Married" Premiere". Fashion Wire Daily. Archived from the original on 2008-12-18. Retrieved 2008-10-13.
  48. "ಆನ್ ಹ್ಯಾಥ್‌ವೇ ಡಿಟೋಕ್ಸೆಸ್." ಫಿಮೇಲ್‌ಫರ್ಸ್ಟ್ . ಅಕ್ಟೋಬರ್‌ 2, 2008.
  49. ೪೯.೦ ೪೯.೧ ಚಿ, ಪಾಲ್. " Archived 2010-04-19 ವೇಬ್ಯಾಕ್ ಮೆಷಿನ್ ನಲ್ಲಿ.ಡೇವಿಡ್ ಲೆಟರ್‌ಮ್ಯಾನ್ ಗ್ರಿಲ್ಸ್ ಆನ್ ಹ್ಯಾಥ್‌ವೇ ಆನ್ ಎಕ್ಸ್-ಬಾಯ್‌ಫ್ರೆಂಡ್." Archived 2010-04-19 ವೇಬ್ಯಾಕ್ ಮೆಷಿನ್ ನಲ್ಲಿ. People.com . ಅಕ್ಟೋಬರ್‌ 12, 2008.
  50. ಮ್ಯಾಕ್‌ಇಂಟೀ, ಮೈಕೆಲ್ Z. "ಮಂಗಳವಾರ, ಸೆಪ್ಟೆಂಬರ್‌ 30, 2008 ಶೊ #2991." CBS.com. ಸೆಪ್ಟೆಂಬರ್‌ 30, 2008.
  51. "ಆನ್ ಹ್ಯಾಥ್‌ವೇಸ್ ನ್ಯೂ ಬಾಯ್‌ಫ್ರೆಂಡ್ ರಿವೀಲ್ಡ್" Archived 2012-01-18 ವೇಬ್ಯಾಕ್ ಮೆಷಿನ್ ನಲ್ಲಿ. ನವೆಂಬರ್‌ 5, 2008.
  52. ಡೌಗ್ಲಾಸ್, ಎಡ್ವರ್ಡ್. "ಆನ್ ಹ್ಯಾಥ್‌ವೇ ಈಸ್ ಬಿಕಮಿಂಗ್ ಜೇನ್." Archived 2008-12-19 ವೇಬ್ಯಾಕ್ ಮೆಷಿನ್ ನಲ್ಲಿ. comingsoon.net. ಆಗಸ್ಟ್‌ 7, 2007
  53. [60] ^ ಟಾಬರ್, ಮೈಕೆಲೆ. "ಆನ್ ಹ್ಯಾಥ್‌ವೇ ಸ್ಪ್ಲಿಟ್ಸ್ ಫ್ರಮ್ ರಫೆಲ್ಲೊ ಫೊಲೈರಿ." ಪೀಪಲ್‌ ನಿಯತಕಾಲಿಕೆ. ಜೂನ್‍ 18, 2008.
  54. ೫೪.೦ ೫೪.೧ ಕೋಲೆಮ್ಯಾನ್, ಮಾರ್ಕ್ ಮತ್ತು ಎಮಿಲಿ ಶೆರಿಡಾನ್. "ಡೆವಿಲ್ ವೇರ್ಸ್ ಪ್ರಾಡ ಸ್ಟಾರ್ ಆನ್ ಹ್ಯಾಥ್‌ವೇ ಸ್ಪ್ಲಿಟ್ಸ್ ಫ್ರಮ್ ಲಾಂಗ್-ಟೈಮ್ ಲವ್." ಡೈಲಿ ಮೇಲ್. ಜೂನ್‌ 17, 2008.
  55. "ಹ್ಯಾಥ್‌ವೇ ಬ್ಯೂ 'ಕಾಸ್' ಫಾರ್ ಅಲಾರ್ಮ್." Archived 2009-09-01 ವೇಬ್ಯಾಕ್ ಮೆಷಿನ್ ನಲ್ಲಿ. ನ್ಯೂಯಾರ್ಕ್‌ ಪೋಸ್ಟ್. ಜೂನ್‌ 9, 2008.
  56. "ಹ್ಯಾಥ್‌ವೇಸ್ ಎಕ್ಸ್ ಅರೆಸ್ಟೆಡ್ ಆನ್ ಫ್ರಾಡ್ ಚಾರ್ಜಸ್." Archived 2008-07-23 ವೇಬ್ಯಾಕ್ ಮೆಷಿನ್ ನಲ್ಲಿ. CNN.com . ಜೂನ್‌ 24, 2008.
  57. "ರಿಪೋರ್ಟ್: FBI ಸೀಸಸ್ ಆನ್ ಹ್ಯಾಥ್‌ವೇಸ್ ಜರ್ನಲ್ಸ್ ಇನ್ ರೈಡ್ ಆನ್ ಎಕ್ಸ್-‌ಬಾಯ್‌ಫ್ರೆಂಡ್ಸ್ ಅಪಾರ್ಟ್ಮೆಂಟ್." Fox News.com. ಜುಲೈ 24, 2008.
  58. ಸ್ಟೈನ್, ಡ್ಯಾನಿಯೆಲ್. "ಆನ್ ಹ್ಯಾಥ್‌ವೇಸ್ ಚಿಕ್ ರಿವೆಂಜ್." Archived 2013-06-07 ವೇಬ್ಯಾಕ್ ಮೆಷಿನ್ ನಲ್ಲಿ. ಅಕ್ಟೋಬರ್ 2008.
  59. ಸರ್ಜಿಯೆಂಟ್, ಜಿಲ್. "ಆನ್ ಹ್ಯಾಥ್‌ವೇ ಟು ಪ್ಲೇ ಜ್ಯೂಡಿ ಗಾರ್ಲ್ಯಾಂಡ್‌ ಆನ್ ಫಿಲ್ಮ್, ಸ್ಟೇಜ್." reuters.com. ಮಾರ್ಚ್‌ 23, 2009


ಹೊರಗಿನ ಕೊಂಡಿಗಳು

[ಬದಲಾಯಿಸಿ]