ಅ೦ತೂರಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರೀಶಿ ಕುಟುಂಬಕ್ಕೆ ಸೇರಿದ ಅಂತೂರಿಯಮ್ ಸುಂದರ ಎಲೆ ಹೂಗೊಂಚಲಿನ ಅಲ೦ಕಾರ ಸಸ್ಯ. ಬಾಲದಂತಿರುವ ಹೂಗೊಂಚಲು ಎಂಬುದು ಈ ಪದದ ಅರ್ಥ. ಇದರ ಹೂ ನಿಜವಾದ ಹೂವಲ್ಲ ಅದೊಂದು ಮಾರ್ಪಾಡಾದ ಎಲೆ. ಹೂನಾಲಿಗೆ ಎಂದು ಹೆಸರು ಪಡೆದಿರುವ ಈ ಭಾಗ ೩೦ ಸೆ.ಮೀ ಅಗಲವಿದ್ದು ದಂಟಿಗೆ ಅಂಟಿಕೊಂಡಿರುತ್ತದೆ. ಈ ನಾಲಗೆಯೊಂದಿಗೆ ಕ್ಯಾಂಡ್ಲ್ ಎಂಬ ಇನ್ನೊಂದು ಆಕರ್ಷಕ ಬಣ್ಣವಿರುವ ಭಾಗವಿದೆ. ಜಾತಿಯನ್ನನುಸರಿಸಿ ಇವುಗಳು ಬಿಳಿ, ಹಸಿರು, ಕೇಸರಿ. ಕೆಂಪು ಮೊದಲಾದ ಆಕರ್ಷಕ ಬಣ್ಣಗಳನ್ನು ಹೊಂದಿರುತ್ತದೆ. ಇದನ್ನು ಕತ್ತರಿಸಿ ಹೂದಾನಿಯಲ್ಲಿ ಇಟ್ಟರೆ ೨-೪ ವಾರಗಳವರೆಗೆ ಕೆಡುವುದಿಲ್ಲ.[೧]

ಅಂತೋರಿಯಂ ಬೀಜೋತ್ಪಾದನೆ[ಬದಲಾಯಿಸಿ]

ಅಂತೂರಿಯಮ್ ಸಸಿಗಳನ್ನು ಬೀಜದಿಂದ, ಕುಡಿ ಸಸಿಗಳಿಂದ ಮತ್ತು ಅಂಗಾಶ ಕಸಿ ವಿಧಾನಗಳಿಂದ ಉತ್ಪಾದಿಸಲಾಗುತ್ತದೆ. ಕೃತಕ ಪರಾಗ ಸ್ಪರ್ಶ ವಿವಿಧ ಬಣ್ಣದ ಹೂನಾಲಗೆಯನ್ನು ಬಿಡುವ ಸಸ್ಯಗಳನ್ನು ಉತ್ಪಾದಿಸಬಹುದು ಗಿಡಗಳಿಗೆ ಶೇಕಡ ೭೫ ರಷ್ಟು ಅವಶ್ಯಕತೆಯಿದೆ.

ಬೆಳೆಸುವ ವಿಧಾನ[ಬದಲಾಯಿಸಿ]

ಅಂತೂರಿಯಮ್ ಗಿಡಗಳನ್ನು ಕುಂಡಗಳಲ್ಲಿಯೂ, ನೆಲದ ಮೇಲೂ ಬೆಳೆಸುತ್ತಾರೆ. ಕುಂಡಗಳಲ್ಲಾಗಲೀ ನೆಲದ ಮೇಲಾಗಲಿ ಬೆಳೆಸುವಾಗ ಮಣ್ಣು ಸಡಿಲವಾಗಿದ್ದರೆ ಬೇರುಗಳಿಗೆ ಗಾಳಿಯಾಡಲು ಅವಕಾಶವಾಗುತ್ತದೆ. ಒಂದು ಗಿಡದಿಂದ ೧೦-೧೨ ಹೂವುಗಳು ದೊರೆಯುತ್ತದೆ. ಹೂವಿನ ಬೆಲೆ ಅದರ ನಾಲಿಗೆಯ ಆಕಾರ ಮತ್ತು ಗಾತ್ರ ಮತ್ತು ಬಣ್ಣಗಳನ್ನು ಹೊಂದಿಕೊಂಡಿರುತ್ತದೆ.

ಉಲ್ಲೇಖ[ಬದಲಾಯಿಸಿ]

  1. http://www.gardeningknowhow.com/houseplants/anthurium/anthurium-care.htm