ಅಷ್ಟಾವರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಿಂಗಾಯತ ಧರ್ಮದಲ್ಲಿ ಇವನ್ನು ಕ್ರಿಯಾಪ್ರಧಾನವಾದ ಮೋಕ್ಷೋಪಾಯಗಳೆಂದು ಭಾವಿಸಲಾಗಿದೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷ, ಮಂತ್ರ-ಇವು ಬಹಿರಂಗ ಅಷ್ಟಾವರಣಗಳು. ಇವುಗಳಲ್ಲಿ ಮೊದಲ ಮೂರು ಪೂಜ್ಯವಾದುವು. ಅನಂತರದ ಮೂರು ಪೂಜಾಸಾಧನವಾದುವು. ಕೊನೆಯ ಎರಡು ಪೂಜಾಪರಿಣಾಮಗಳು. ಆಚಾರ, ಆನಂದ, ಅನುಭವ, ಆಪ್ಯಾಯನ, ಚಿದ್ರಸ, ಚಿದ್ಭಸ್ಮ, ಜ್ಞಾನಪ್ರಕಾಶ, ನಾದಮಂತ್ರ ಎಂಬಿವು ಅಂತರಂಗ ಅಷ್ಟಾವರಣಗಳೆನಿಸಿವೆ. ಬಹಿರಂಗ ಅಷ್ಟಾವರಣಗಳು ಸ್ಥೂಲದೇಹಕ್ಕೂ ಅಂತರಂಗ ಅಷ್ಟಾವರಣಗಳು ಸೂಕ್ಷ್ಮಶರೀರಕ್ಕೂ ಸಂಬಂಧಪಟ್ಟವುಗಳೆಂದು ಅನುಭಾವಿಗಳು ಹೇಳಿದ್ದಾರೆ.