ಅಶ್ವತ್ಥಮರ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಶ್ವತ್ಥಮರ(ಅರಳಿ)
ಅಶ್ವತ್ಥಮರದ ಕಾಂಡ ಹಾಗೂ ಎಲೆಗಳು Note the distinctive leaf shape.
ಅಶ್ವತ್ಥಮರದ ಕಾಂಡ ಹಾಗೂ ಎಲೆಗಳು
Note the distinctive leaf shape.
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ತರಗತಿ: ಮ್ಯಾಗ್ನೋಲಿಪ್ಸೋಡ
ವರ್ಗ: ರೊಸಲ್ಸ್
ಕುಟುಂಬ: ಮೊರಾಸಿಯೆ
ಪ್ರಜಾತಿ: ಪೈಕಸ್
ಜಾತಿ: F. religiosa
ದ್ವಿಪದಿ ನಾಮ
ಪೈಕಸ್ ರಿಲಿಜಿಯೋಸ
L.

ಅಶ್ವತ್ಥಮರ (ಅರಳಿ)(Peepul Tree)ಭಾರತೀಯರಿಗೆಲ್ಲರಿಗೂ ಪವಿತ್ರವೆಂದು ಪರಿಗಣಿತವಾದ ಮರ.ಇದು ದಕ್ಷಿಣಎಷಿಯಾ ದಲ್ಲಿ ವ್ಯಾಪಕವಾಗಿರುವ ಮರ.ಇದು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ.ಭೋದಿವೃಕ್ಷ,ಪೀಪಲ್,ಅರಳಿ ಮುಂತಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಹೆಸರಿದೆ.ಈ ಮರದ ಕೆಳಗೆ ಕುಳಿತು ದ್ಯಾನ ನಿರತರಾಗಿರುವಾಗಲೇ ಗೌತಮಬುದ್ಧರಿಗೆ ಜ್ಞಾನೋದಯವಾಯಿತು ಎಂದು ಪ್ರತೀತಿ.

ಪರಿವಿಡಿ

[ಬದಲಾಯಿಸಿ] ಸಸ್ಯ ಶಾಸ್ತ್ರೀಯ ವರ್ಗೀಕರಣ

ಇದು ಮೊರಾಸಿಯೆ ಕುಟುಂಬದಲ್ಲಿದ್ದು ಪೈಕಸ್ ರಿಲಿಜಿಯೋಸ(Ficus religiosa)ಎಂಬ ಸಸ್ಯಶಾಸ್ತ್ರೀಯ ಹೆಸರಿದೆ.

[ಬದಲಾಯಿಸಿ] ಸಸ್ಯದ ಗುಣ ಲಕ್ಷಣಗಳು

ದೊಡ್ಡಪ್ರಮಾಣದ ಮರ.ಬಿಳಲುಗಳಿಲ್ಲದೆ ಮರ ತುಂಬಾ ಎಲೆಗಳಿರುತ್ತದೆ.ಹೊಳಪಿನ ಎಲೆಗಳು ಸ್ವಲ್ಪ ಗಾಳಿಗೂ ಅಲ್ಲಾಡುತ್ತಾ ಪರಪರ ಶಬ್ದ ಮಾಡುತ್ತಿರುತ್ತದೆ.ಎಲೆಗಳು ಪರ್ಯಾಯವಾಗಿದ್ದು,ಅಗಲ ಬುಡಹೊಂದಿ ಅಂಡವರ್ತುಲಾಕಾರವಾಗಿ ತೀಕ್ಷ್ಣಾಗ್ರ (Acuminate)ಹೊಂದಿರುತ್ತದೆ.ದಾರುವು ಕೆಳದರ್ಜೆಯದಾಗಿದ್ದು ಹೆಚ್ಚು ಉಪಯೋಗವಿಲ್ಲ.ಇದರ ಕಾಂಡದಿಂದ ಒಂದು ಬಗೆಯ ಅಂಟು ದೊರಕುತ್ತದೆ.

ಅಶ್ವತ್ಥಮರದ ಎಲೆ
ಅಶ್ವತ್ಥಮರದ ಎಲೆ

[ಬದಲಾಯಿಸಿ] ಉಪಯೋಗಗಳು

ದಾರುವು ಉಪಯೊಗಕ್ಕೆ ಬರುವುದಿಲ್ಲ.ಸೌದೆ ಹಾಗೂ ಇದ್ದಿಲಿಗೆ ಉಪಯೋಗವಾಗುತ್ತದೆ.ಇದರ ಸಮಿತ್ತುನ್ನು ಯಜ್ಞಯಾಗಾದಿಗಳಿಗೆ ಬಳಸುತ್ತಾರೆ.ಇದರ ಕಾಂಡದಿಂದ ದೊರೆಯುವ ಅಂಟು ಆಭರಣಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.ಎಳೆಯ ಎಲೆಗಳು ಮೇವಾಗಿ ಉಪಯೋಗವಾಗುತ್ತದೆ.ಇದರ ತೊಗಟೆಯಿಂದ ದೊರೆಯುವ ಸಸ್ಯಕ್ಷೀರ ಕ್ರಮೇಣ ಗಟ್ಟಿಯಾಗಿ ಕ್ಯಾಚೌ(Cautchoue)ಹಾಗೂ ರಾಳಇರುವುದು ಕಂಡುಬರುತ್ತದೆ.ಇದರ ಬೇರಿನ ತೊಗಟೆಯು [[ಆಯುರ್ವೇದ]ಔಷದದಲ್ಲಿ ಉಪಯೋಗಿಸಲ್ಪಡುತ್ತದೆ.

[ಬದಲಾಯಿಸಿ] ಆಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

ವೈಯಕ್ತಿಕ ಉಪಕರಣಗಳು