ಅಲಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಲಕಾಪುರಿ ಇಂದ ಪುನರ್ನಿರ್ದೇಶಿತ)

ಹಿಂದೂ ಧರ್ಮದಲ್ಲಿ, ಕೆಲವೊಮ್ಮೆ ಅಲಕಾಪುರಿ ಎಂದೂ ಕರೆಯಲ್ಪಡುವ ಅಲಕೆ ಒಂದು ಪೌರಾಣಿಕ ನಗರ. ಇದು ಯಕ್ಷರ ರಾಜ ಮತ್ತು ಸಂಪತ್ತಿನ ಒಡೆಯನಾದ ಕುಬೇರನ ತವರು. ಯಕ್ಷರು ಕುಬೇರನ ಸೇವಕರು.[೧] ಮಹಾಭಾರತವು ಈ ನಗರವನ್ನು ಯಕ್ಷ ರಾಜ್ಯದ ರಾಜಧಾನಿ ಎಂದು ಉಲ್ಲೇಖಿಸುತ್ತದೆ. ತನ್ನ ವಾಸ್ತುಶಿಲ್ಪ, ಸಮೃದ್ಧತೆ, ಮತ್ತು ಒಟ್ಟಾರೆ ವೈಭವದಲ್ಲಿ ಈ ನಗರವು ದೇವತೆಗಳ ರಾಜನಾದ ಇಂದ್ರನ ರಾಜಧಾನಿಗೆ ಸರಿಸಮನಾಗಿದೆ. ಈ ನಗರವನ್ನು ಕಾಳಿದಾಸನ ಪ್ರಸಿದ್ಧ ಗೀತಾತ್ಮಕ ಕವಿತೆ ಮೇಘದೂತದಲ್ಲಿ ಉಲ್ಲೇಖಿಸಲಾಗಿದೆ.

ಅಲಕಾ ಹಿಂದೂ ಹುಡುಗಿಯರ ಒಂದು ಸಾಮಾನ್ಯ ಹೆಸರಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. (Kramrisch, Stella). 1994. The Presence of Siva, p.137
"https://kn.wikipedia.org/w/index.php?title=ಅಲಕೆ&oldid=803187" ಇಂದ ಪಡೆಯಲ್ಪಟ್ಟಿದೆ