ಅರ್ಥ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಭಾಷೆಯು ಸೂಕ್ಷ್ಮವಾದ ಗುಣಿತಾಕ್ಷರ ಪ್ರಸ್ತಾರ (ಎಂದರೆ ಕಾಗುಣಿತದ ಬರವಣಿಗೆ ) ಉಳ್ಳದ್ದಾಗಿದೆ . ಅದ್ದರಿಂದ ಈ ಭಾಷೆಯನ್ನು ಬರೆಯುವಾಗ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ . ಉದಾಹರಣೆ ನೋಡಿರಿ :-

  • ಊಟ = ಭೋಜನ
  • ಊತ = ಬಾತುಕೊಳ್ಳುವಿಕೆ
  • ದನ = ಹಸು, ಗೋವು, ಆಕಳು, ಆವು
  • ಧನ = ಹಣ, ವಿತ್ತ, ಅರ್ಥ (ಕಾಸು = ಚಲಾವಣೆಯ ನಾಣ್ಯ )
  • ಅಸ್ತಿತ್ವ = ಇರುವಿಕೆ
  • ಅಸ್ಥಿ = ಮೂಳೆ, ಎಲುಬು
  • ಮಣ = ತೂಕದ ಒಂದು ಪ್ರಮಾಣ
  • ಮನ = ಮನಸ್ಸು
  • ಮಂಡಿ = ಮೊಣಕಾಲು ನಾನಾರ್ಥ: (ನಾಮಪದ) ಸಗಟು ವ್ಯಾಪಾರದ ಅಂಗಡಿ
  • ಮಂದಿ = ಜನ ಸಮೂಹ ನಾನಾರ್ಥ : (ನಾಮಪದ) ಅಗ್ಗ , ಸೋವಿ
  • ಎಡೆ = ಸ್ಥಳ, ಆಸ್ಪದ (ನಾನಾರ್ಥ (ನಾಮಪದ) ಹತ್ತಿರ, ನೈವೇದ್ಯ , ಊಟ. (ಕ್ರಿಯಾಪದ) ಸಿಪ್ಪೆಯನ್ನು ಸುಲಿ)
  • ಎದೆ = ಹೃದಯ, ವಕ್ಷ
  • ಕಪ್ಪ = ಕಾಣಿಕೆ , ಪೊಗದಿ , ಕಡಗ
  • ಕಬ್ಬ = ಕಾವ್ಯ
  • ಚೂಟ = ಚುರುಕು , ಲವಲವಿಕೆ
  • ಚೂಡ = ಶಿಖೆ, ಜುಟ್ಟು , ಶಿಖರ
  • ಕುಂಚ = ನವಿಲುಗರಿಯಿಂದ ಮಾಡಿದ ಕುಂಚಿಕೆ , ಚಾಮರ , ಚಿತ್ರಕಾರ ಬಳಸುವ ಕೂಡಲಿನ ಕುಚ್ಚು
  • ಕುಂಜ = ಲತಾಗೃಹ
  • ಪಲ್ಲವ = ಚಿಗುರು
  • ಪಲ್ಲವಿ = ಹಾಡಿನ ಆರಂಭದಲ್ಲಿದ್ದು ನುಡಿಗೊಂದು ಬಾರಿ ಪುನರಾವರ್ತನೆಗೊಳ್ಳುವ ಭಾಗ