ಅರಾವಳಿ ಪರ್ವತಗಳು
ವಿಕಿಪೀಡಿಯ ಇಂದ
(ಅರಾವಳಿ ಶ್ರೇಣಿ ಇಂದ ಪುನರ್ನಿರ್ದೇಶಿತ)
ಅರಾವಳಿ ಪರ್ವತಗಳು ಭಾರತದ ಪಶ್ಚಿಮ ಭಾಗದಲ್ಲಿನ ಒಂದು ಪರ್ವತ ಶ್ರೇಣಿ. ರಾಜಸ್ಥಾನದಲ್ಲಿ ಈಶಾನ್ಯ ಭಾಗದಿಂದ ನೈಋತ್ಯದವರೆಗೆ ಸುಮಾರು ೩೦೦ ಮೈಲಿಗಳವರೆಗೆ ಅರಾವಳಿ ಪರ್ವತಗಳು ಹಬ್ಬಿವೆ. ಶ್ರೇಣಿಯ ಉತ್ತರದ ಅಂಚು ಬಿಡಿಬಿಡಿಯಾದ ಬೆಟ್ಟಗಳು ಮತ್ತು ಶಿಲಾಕೊರಕಲುಗಳಂತೆ ಇದ್ದು ಹರ್ಯಾಣಾ ರಾಜ್ಯದ ಮೂಲಕ ದೆಹಲಿಯ ಸಮೀಪದವರೆಗೆ ಹರಡಿದೆ. ಅರಾವಳಿ ಶ್ರೇಣಿಯ ಅತಿ ಎತ್ತರ ಶಿಖರವೆಂದರೆ ಮೌಂಟ್ ಆಬುವಿನ ಗುರು ಶಿಖರ. ೫೬೫೩ ಅಡಿ (೧೭೨೩ ಮೀ.) ಎತ್ತರವಿರುವ ಈ ಶಿಖರ ಅರಾವಳಿ ಶ್ರೇಣಿಯ ದಕ್ಷಿಣದ ತುದಿಯಲ್ಲಿದ್ದು ಗುಜರಾತ್ ರಾಜ್ಯದ ಗಡಿಗೆ ಹೊಂದಿಕೊಂಡಿದೆ. ಉದಯಪುರ ನಗರವು ಅರಾವಳಿ ಪರ್ವತಗಳ ದಕ್ಷಿಣದ ಮಗ್ಗುಲಲ್ಲಿ ಇದೆ.