ಅಪಾರ್ಟ್‌ಮಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತಗುರ್‌ಗ್ಞಾವ್‌ನಲ್ಲಿನ ಒಂದು ಅಪಾರ್ಟ್‌ಮಂಟ್ ಸಂಕೀರ್ಣ.

ಅಪಾರ್ಟ್‌ಮಂಟ್, ಅಥವಾ ಫ್ಲ್ಯಾಟ್, ಒಂದು ಕಟ್ಟಡದ ಒಂದು ಭಾಗವನ್ನು ಮಾತ್ರ ವ್ಯಾಪಿಸುವ ಒಂದು ಸರ್ವಾನುಕೂಲಸಹಿತವಾದ ಗೃಹ ಘಟಕ. ಅಂತಹ ಕಟ್ಟಡವನ್ನು ಅಪಾರ್ಟ್‌ಮಂಟ್ ಕಟ್ಟಡವೆಂದು ಕರೆಯಬಹುದು, ವಿಶೇಷವಾಗಿ ಅದು ಬಾಡಿಗೆಗಾಗಿ ಹಲವು ಅಪಾರ್ಟ್‌ಮಂಟ್‌ಗಳನ್ನು ಹೊಂದಿರುವಾಗ. ಅಪಾರ್ಟ್‌ಮಂಟ್‌ಗಳು ಒಬ್ಬ ಮಾಲೀಕನ ಒಡೆತನದಲ್ಲಿರಬಹುದು ಅಥವಾ ಬಾಡಿಗೆದಾರರು ಅವುಗಳನ್ನು ಬಾಡಿಗೆಗೆ ತೆಗೆದುಕೊಂಡಿರಬಹುದು.