ವಿಷಯಕ್ಕೆ ಹೋಗು

ಅಂಬೇಡ್ಕರ ಹೊಳವುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.


ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ

[ಬದಲಾಯಿಸಿ]

ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಕಲ್ಪನೆ ಹೇಗಿತ್ತು ಮತ್ತು ಅದರಿಂದ ಅವರು ಏನನ್ನು ನಿರೀಕ್ಷಿಸಿದ್ದರು ಅನ್ನುವುದರ ಬಗ್ಗೆ ಈ ಉಲ್ಲೇಖವು ಬಹಳಷ್ಟು ತಿಳಿಸು ತ್ತದೆ. ಕ್ರಾಂತಿಕಾರಕ ಬದಲಾವಣೆಗಳನ್ನು ಕೇವಲ ಕ್ರಾಂತಿಯ ಮೊಲಕವೇ ತರಬಲ್ಲೆವು ಮತ್ತು ಕ್ರಾಂತಿ ಎಂದರೆ ರಕ್ತಪಾತ ಅನ್ನುವುದು ಸಾಮಾನ್ಯ ತಿಳಿವಳಿಕೆ. ಅಲ್ಲದೆ ,ಕ್ರಾಂತಿಗಳು ಮತ್ತು ಪ್ರಜಾಪ್ರಭುತ್ವಗಳು ಪರಸ್ಪರ ಹೊಂದಣಿಕೆಯಾಗಲಾರವು ಎಂಬ ಗುಪ್ತ ಗುಮಾನಿಯೊ ಇದೆ. ಕ್ರಾಂತಿಯ ಬಗ್ಗೆಯ ಈ ಸಾಮಾನ್ಯ ಭಾವನೆಗಳು ತಾತ್ವಿಕವಾಗಿ ತಪ್ಪು ಎಂದು ಎತ್ತಿ ತೋರಿಸಬಹುದು. ಆ ವಿಷಯ ಬೇರೆ ಹಾಗೆಯೇ, ಪ್ರಜಾಪ್ರಭುತ್ವದ ಬಗ್ಗೆಯೂ ಕೆಲವು ಸಾಮಾನ್ಯ ಭಾವನೆಗಳಿವೆ. ಕ್ರಮಬದ್ದ ಚುನಾವಣೆಗಳು, ಅನೇಕ ರಾಜಕೀಯ ಪಕ್ಷಗಳು ಮತ್ತು ಪ್ರತಿ ವ್ಯಕ್ತಿಗೂ ಸಮಾನ ರಾಜಕೀಯ ಮೌಲ್ಯವನ್ನು ನೀಡುವ ಒಂದು ಪ್ರಾತಿನಿಧಿಕ ಸರ್ಕಾರದ ರೂಪ ಅದು ಎಂದು ಪರಿಗಣಿಸ ಲ್ಪಟ್ಟಿದ್ದೆ.

  • ಪ್ರಜಾಪ್ರಭುತ್ವದ ಎದ್ದು ಕಾಣುವ ಸ್ಥೂಲ ಸಂರಚನೆಯ ಮುಖ್ಯ ಶಿಲ್ಪಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿಗಣಿಸಲ್ಪಟ್ಟಿದ್ದರು. ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯ ವನ್ನಾಗಿ ಬದಲಾಯಿಸಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಗಳನ್ನು ಒಟ್ಟಿಗೆ ಸಾಧಿಸಬಲ್ಲದೆಂಬಂತೆ ಪ್ರಜಾಪ್ರಭುತ್ವವನ್ನು ಅವರು ಕಲ್ಪಿಸಿಕೊಂಡ್ಡಿದರು.
  • ಪ್ರಜಾಪ್ರಭುತ್ವವೆಂದರೆ ಸರ್ಕಾರದ ಒಂದು ರೂಪವೆಂದು ಅದು ಹುಟ್ಟಿದ ಪ್ರಾಚೀನತೆಯಿಂದ ಇಂದಿನ ಆಧುನಿಕತೆಯವರೆಗೂ ಕಲ್ಪಿಸಿಕೊಳ್ಳಲಾಗಿದೆ. ಆದರೆ ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವಾದರ ಭಾವನೆ ಎಂದು ಹೇಳಿದ್ದಾರೆ.
  • ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಸಮಾಜವನ್ನು ನಿರೀಕ್ಷಿಸುತ್ತದೆ. ರಾಜಕಾರಣಿಗಳು ಪ್ರಜಾಪ್ರಭುತ್ವವು ಮೂಲಭೂತವಾಗಿ ಸಮಾಜದ ಒಂದು ಸ್ವರೂಪ ಕೇವಲ ಸರ್ಕಾರದ ಮಾದರಿ ಅಲ್ಲ ಅನ್ನುವುದನ್ನು ಗ್ರಹಿಸಲ್ಲಿಲ್ಲ. ಇದು ಎರಡು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು ಒಂದು ಮನೋಭಾವ, ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ . ಎರಡನೆಯದು ಪೆಡಸಾದ ಸಾಮಾಜಿಕ ಅಡೆ-ತಡೆಗಳಿಂದ ಮುಕ್ತ ಸಮಾಜ.
  • ಸಾಮಾಜಿಕ ಪ್ರಜಾಪ್ರಭುತ್ವವ ಅನ್ನುವ ಪದ ಸಾಮಾನ್ಯವಾಗಿ ಆರ್ಥಿಕ ಸಂಸ್ಧೆಗಳು ಹಾಗೂ ಬಂಡವಾಳ ಕ್ರಮೇಣ ಸಮಾಜವಾದಕ್ಕೆ ಹೊರಳುತ್ತದೆಂಬ ಫೇಬಿಯನ್ ನಂಬಿಕೆ ಗಳನ್ನು ಒಳಗೊಂಡಿರುತ್ತದೆ.
  • ಆದರೆ ಅಂಬೇಡ್ಕರ ಅವರ ಪ್ರ್ರಕಾರ ಅದು ಶ್ರೇಣೀಕೃತವಲ್ಲದ, ವಿಂಗಡಣೆ ಮತ್ತು ಪ್ರತ್ಯೇಕಗಳಿಲ್ಲದ ಸಮಾಜ. ಅದು ಭಾರತಿಯ ಸಮಾಜ ಮತ್ತು ಅದರ ಜಾತಿಗಳ ವ್ಯವಸ್ಥೆಗೆ ತೀಕ್ಷ್ಣವಾಗಿ ಅನ್ವಯಿಸುತ್ತದೆ. ಅದು ಮೇಲ್ನೋಟಕ್ಕೆ ಫೇಬಿಯನ್ ಕಲ್ಪನೆಯ "ಸಾಮಾಜಿಕ ಪ್ರಜಾಪ್ರಭುತ್ವ"ದೊಂದಿಗೆ ಅನೇಕ ಅಂಶಗಳನ್ನು ಹಂಚಿಕೊಂಡಿದೆ, ಸಹಕಾರ ಮತ್ತು ಸಮುದಾಯ (ಭ್ರಾತೃತ್ವವನ್ನು ಸೂಚಿಸುತ್ತದೆ). ಸಮಾನತೆ (ಅವಕಾಶ ಮತ್ತು ಗಳಿಕೆಗಳೆರಡರಲ್ಲೂ) ಮತ್ತು ಸ್ವಾತಂತ್ರ್ಯ-ಹೀಗೆ ಆದರೆ, ಜೊತೆಗೆ ಅವರು ಸಂಪನ್ಮೂಲಗಳ ಹಂಚಿಕೆಯಲ್ಲಿ ವ್ಯಕ್ತಿಗಳ ಸಮಾನ ಮೌಲ್ಯವನ್ನು ವಿವರಿಸುವ 'ಆರ್ಥಿಕ ಪ್ರಜಾಪ್ರಭುತ್ವ' ಅನ್ನುವ ಪದವನ್ನು ಬಳಸಿದ್ದಾರೆ. ಹೀಗೆ ಅಂಬೇಡ್ಕರರ ಪ್ರಜಾಪ್ರಭುತ್ವ ವು ಮೂರು ಭಾಗಗಳನ್ನು ಹೊಂದಿದೆ: ಔಪಚಾರಿಕ ಪ್ರಜಾಪ್ರಭುತ್ವವಾಗಿ ರಾಜಕೀಯ ಪ್ರಜಾಪ್ರಭುತ್ವ, ಸಾಮಾಜಿಕ ಸಮಾನತೆಗೆ ಅನ್ವಯಿಸುವ ಸಾಮಾಜಿಕ ಪ್ರಜಾಪ್ರಭುತ್ವ, ಮತ್ತು ಸಮಾಜವಾದಿ ಆರ್ಥಿಕತೆಯುಳ್ಳ ಆರ್ಥಿಕ ಪ್ರಜಾಪ್ರಭುತ್ವ. ಇವು ಮೂರು ತಮ್ಮ ಆದರ್ಶ ಸಮಾಜದ ಸ್ವರೂಪವಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಗಳೊಂದಿಗೆ ಸಮೀಕೃತಗೊಳ್ಳುತ್ತವೆ.
ಅಂಬೇಡ್ಕರರ ಮೂರ್ತಿ
  • ಸಂವಿಧಾನವೆಂದರೆ ಪ್ರಜಾಪ್ರಭುತ್ವಗಳ ರಾಜಕೀಯ ಆಳ್ವಿಕೆಗಾಗಿ ರಚಿಸಲ್ಪಡುವ ಒಂದು ನಿಯಮಗಳ ಪುಸ್ತಕ. ಅದೃಷ್ಟವಶಾತ್ ಕರಡು ಸಮಿತಿಯ ಅದ್ಯಕ್ಷರಾಗಿದ್ದ ಅಂಬೇಡ್ಕರ ಅವರು ಸಹಜವಾಗಿ 'ಸಂವಿಧಾನ ಶಿಲ್ಪಿ' ಎನಿಸಿದರು. ಆದರೆ ಅವರ ದರ್ಶನ ಭಾರತದ ಸಂವಿಧಾನ ಪ್ರತಿಬಿಂಬಿಸುವುದಕ್ಕಿಂತಲೂ ಭಿನ್ನವಾಗಿತ್ತು ಅನ್ನುವುದನ್ನು ಗಮನಿಸಬೇಕು. ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ಅವರು ತೃಪ್ತರಾಗಿರಲಿಲ್ಲ. ಆರ್ಥಿಕ ಪ್ರಜಾಪ್ರಭುತ್ವವಿಲ್ಲದೆ ಅದಕ್ಕೆ ಉಳಿಗಾಲವಿಲ್ಲವೆಂದು ಅವರು ಅರಿತಿದ್ದರು. ರಾಜಕೀಯ ಪ್ರಜಾಪ್ರಭುತ್ವವು ಬಹುಮತವನ್ನು ತಿರುಚಿ ಬದಲಾಯಿಸಲು ಸಾದ್ಯವಿಲ್ಲದಂತೆ ಸಮಾಜದ ಆರ್ಥಿಕ ಚೌಕಟ್ಟನ್ನು ಸಂವಿಧಾನದೊಳಗೆ ಭದ್ರವಾಗಿ ಅಳವಡಿಸಬೇಕೆಂದು ಅವರು ಬಯಸಿದ್ದರು. 'ಲಿಬರಿಸಂ'ನಲ್ಲಿ ಇಂತ ಹೊಳಹುಗಳು ಅಪರೂಪ. ಅಂಬೇಡ್ಕರ ಅವರು ಮೂಲಭೂತವಾಗಿ ಒಬ್ಬ ಲಿಬರಲ್ (ಉದಾರವಾದಿ) ಆಗಿದ್ದರೂ, 'ಲಿಬರಿಸಂ'ನ ಚೌಕಟ್ಟನ್ನು ಎಂದಿನಂತೆ ಅನಾಯಾಸವಾಗಿ ಮೀರಿದ್ದರು.
  • ಖಾಸಗಿ ಉದ್ದಿಮೆಯ ಮೇಲೆ ಆಧರಿಸಿದ ಆರ್ಥಿಕ ವ್ಯವಸ್ಥೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ದವಾದದ್ದು ಎಂದು ಅವರು ಸ್ಪಷ್ಟವಾಗಿ ತಿಳಿದಿದ್ದರು. ಖಾಸಗಿ ಉದ್ದಿಮೆಯು ಅದರ ಮೂಲದಲ್ಲಿ ಸಂಪತ್ತು ಮತ್ತು ತನ್ಮೂಲಕ ಅಧಿಕಾರವನ್ನು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಿಸುತ್ತದೆ. ಇದು ಅನಿವಾರ್ಯವಾಗಿ ಬದುಕಿರಲು ದುಡಿಯಲೇಬೇಕಾದ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ. ಮಾಲಿಕ ತಪ್ಪು ಮಾಡಿದ್ದರೂ ಕೆಲಸಗಾರ ಪ್ರಶ್ನಿಸಲಾಗದು. ಪ್ರಶ್ನಿಸಿದರೆ ಅವನು ತನ್ನ ಕೆಲಸ ಕಳೆದುಕೊಳ್ಳಬಹುದು!
  • ಅವರು ಹೇಳುತ್ತಾರೆ: "ಖಾಸಗಿ ಉದ್ದಿಮೆ ಮತ್ತು ವ್ಯೆಯಕ್ತಿಕ ಲಾಭಗಳಿಕೆಯನ್ನು ಆಧರಿಸುವ ಸಾಮಾಜಿಕ ಅರ್ಥವ್ಯವಸ್ಥೆಯನ್ನು ಅಭ್ಯಾಸ ಮಾಡುವ ಯಾರಾದರೂ ಇದು ಹೇಗೆ ಪ್ರಜಾಪ್ರಭುತ್ವದ ಮೂಲಾಧಾರವಾದ 'ವ್ಯಕ್ತಿಗಳ ಹಕ್ಕು'ಗಳನ್ನು ಕಿತ್ತುಕೊಳ್ಳದಿದ್ದರೂ ಬಹಳ ಮಟ್ಟಿಗೆ ಮೊಟಕುಗೊಳಿಸುತ್ತದೆ ಅನ್ನುವುದನ್ನು ಮನಗಾಣುವರು. ಜೀವನೋಪಾಯಕ್ಕಾಗಿ ಎಷ್ಟ್ಟು ಜನ ತಮ್ಮ ಹಕ್ಕುಗಳನ್ನು ಬಿಟ್ಟುಕೊಡ ಬೇಕಾಗುವುದು? ಎಷ್ಟ್ಟು ಜನ ಖಾಸಗಿ ಮಾಲೀಕರಿಂದ ಆಳಿಸಿಕೊಳ್ಳಲು ಸಿದ್ದರಾಗಬೇಕು?"
  • ಆದ್ದರಿಂದ ಪ್ರಜಾಪ್ರಭುತ್ವವನ್ನು ಸಹಕಾರಗೊಳಿಸಲು ಉತ್ಪಾದನೆಯ ಸಾಧನಗಳು ಸಮಾಜದ ಒಡೆತನದಲ್ಲಿ ಇರಬೇಕೆಂದು ಅವರು ಬಯಸಿದರು. ಸಂವಿಧಾನ ರಚನಾಸಭೆ ಯಲ್ಲಿ ಜವಹರಲಾಲ್ ನೆಹರುರ ಅವರು ಮಂಡಿಸಿದ್ದ ಸಂವಿಧಾನದ ಉದೇಳನವನ್ನು ಕುರಿತು ಠರಾವಿನ ಬಗ್ಗೆ ಮಾತನಾಡುತ್ತ ೧೭ ಡಿಸೆಂಬರ್ ೧೯೪೬ರಲ್ಲಿ ಅವರು, ಠರಾವಿ ನಲ್ಲಿ ಪ್ರಸ್ತಾಪಿಸಿದ್ದಂತೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಖಾತ್ರಿಗೊಳಿಸಲು ಆರ್ಥಿಕ ವ್ಯವಸ್ಥೆಯಾಗಿರಬೇಕು ಎಂದು ಹೇಳಿದ್ದರು.
  • ಆರ್ಥಿಕ ವ್ಯವಸ್ಥೆ ಸಮಾಜವಾದಿ ಆರ್ಥಿಕ ವ್ಯವಸ್ಥೆಯಾಗದ ಹೊರತು ಸಾಮಾಜಿಕ , ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸುವಲ್ಲಿ ನಂಬಿಕೆ ಇಟ್ಟ ಯಾವುದೇ ಮುಂದಿನ ಸರ್ಕಾರಕ್ಕೆ ಇದು ಹೇಗೆ ಸಾಧ್ಯ ಅನ್ನುವುದು ನನಗೆ ಅರ್ಥವಾಗದು.
  • ವಾಸ್ತವವಾಗಿ ಸಂವಿಧಾನ ರಚನಾಸಭೆಯನ್ನು ತಾವು ರೂಪುಗೊಳಿಸಿದ್ದ 'ರಾಷ್ಟ್ರವೇ ನಿಯಂತ್ರಿಸುವ ಸಮಾಜವಾದ' ವ್ಯವಸ್ಥೆಗೆ ಅವರು ದನಿ ಕೊಡುತ್ತಿದ್ದರು. ಸಮಾಜವಾದಿ ಚೌಕಟ್ಟು ಆಥಿಕ ವ್ಯವಸ್ಥೆಯು 'ಸಂವಿಧಾನದ ಒಂದು ಭಾಗ'ವಾಗಿರಬೇಕೆಂದು ಅವರ ಪ್ರಸ್ತಾವನೆ ಇತ್ತು.
  • ಮೂಲ ಮತ್ತು ಪ್ರಮುಖ ಉದ್ದಿಮೆಗಳ ಒಡೆತನ ಮತ್ತು ನಿರ್ವಹಣೆ ರಾಷ್ಟ್ರ್ದದ (ಸರ್ಕಾರದ )ಕೈಯಲ್ಲಿರಬೇಕು; ವಿಮೆಯು ರಾಷ್ಟ್ರ್ದದ ಏಕಸ್ವಾಮ್ಯದಲ್ಲಿರಬೇಕು; ಪ್ರತಿಯೊಬ್ಬ ವಯಸ್ಕನಿಗೂ ಅದು (ವಿಮಾಪಾಲಿಸಿ) ಕಡ್ಡಾಯವಾಗಿದ್ದು ಅವನ ವೇತನಕ್ಕೆ ಅನುಗುಣವಾಗಿ ಇರತಕ್ಕದ್ದು. ಕೃಷಿಯು ರಾಷ್ಟ್ರೀಕೃತ ಉದ್ದಿಮೆಯಾಗಿರಬೇಕು.
  • ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ಇಂತಹ ಉದ್ದಿಮೆ ವಿಮೆ ಮತ್ತು ಕೃಷಿ ಭೂಮಿಯನ್ನು ರಾಷ್ಟ್ರ್ದ(ಸರ್ಕಾರ )ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಡಿಬೆಂಚರುಗಳ ಮೂಲಕ ಪರಿಹಾರ ನೀಡಿ ರಾಷ್ಟ್ರ್ದ (ಸರ್ಕಾರ ),ಅವುಗಳಲ್ಲಿ ನಿರ್ಣಾಯಕ ಹಕ್ಕುಗಳನ್ನು ಪಡೆದುಕೊಳ್ಳಬೇಕು.
  • ಕೃಷಿಯನ್ನು ಸಾಮೂಹಿಕ ಉದ್ದಿಮೆಯಾಗಿ ಸಂಘಟಿಸಬೇಕು; ಸರ್ಕಾರ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಒಂದೇ ಪ್ರಮಾಣದ ಫಾರ್ಮಗಳನ್ನಾಗಿ ವಿಂಗಡಿಸಿ ಜಾತಿ ಜನಾಂಗಗಳ ಭೇದವಿಲ್ಲದಂತೆ ಹಳ್ಳಿಗರಿಗೆ ಗುತ್ತಿಗೆ ಮೇಲೆ ಸಾಮೂಹಿಕ ಕೃಷಿಗಾಗಿ ಬಿಟ್ಟುಕೊಡಬೇಕು, ತಾನು ಒದಗಿಸುವ ಭೂಮಿಗೆ ಬಾಡಿಗೆ, ಕೃಷಿ ಸಲಕರಣೆಗಳು, ಒಳಸುರಿ ಮತ್ತು ಸಾಲಕ್ಕೆ ಪ್ರತಿಯಾಗಿ ಅವರು ಸರ್ಕಾರಕ್ಕೆ ಹಣ ಪಾವತಿ ಮಾಡತಕ್ಕದ್ದು- ಹೀಗಿತ್ತು ಅವರ ಪ್ರಸ್ತಾವನೆ.
  • ತಮ್ಮ 'ರಾಷ್ಟ್ರಗಳನ್ನು ಮತ್ತು ಅಲ್ಪಸಂಖಾತರು' ಅನ್ನುವ ಪುಸ್ತಕದಲ್ಲಿ ಅವರು ಈ ಬಗ್ಗೆ ಈ ವ್ಯವಸ್ಥೆಯ ಬಗ್ಗೆ ಇನ್ನಷ್ಟು ವಿಷಾದವಾಗಿ ಹೇಳಿದ್ದಾರೆ. ಸಂವಿಧಾನದ ಕಾರ್ಯದ ನಿರ್ವಹಣೆಯ ೬೦ ವರ್ಷಗಳ ಲೆಕ್ಕ ತೆಗೆದರೆ ಈ ನಿರ್ದೆಶಕ ತತ್ವಗಳನ್ನು ನಿರ್ಭಯವಾಗಿ ತುಳಿದು ಆಡಳಿತದ ನೀತಿ ನಿರೂಪಣೆ ಮಾಡಿರುವುದನ್ನು ಕಾಣುತ್ತೇವೆ. ಉದಾಹರಣೆಗೆ, ಜಾಗತೀಕರಣಕ್ಕೆ ಸಂಬಂಧಿಸಿದ ಇಡೀ ನೀತಿ ನಿರೂಪಣೆಯು ಸಂಪೂರ್ಣವಾಗಿ ಈ ನಿರ್ದೇಶಕ ತತ್ವಗಳ ಉಲ್ಲಂಘನೆ ಎಂದು ಪರಿಗಣಿಸಬಹುದು.