ಅಂದರು ಗಿಡ
ಗೋಚರ
ಅಂದರು ಗಿಡ ಇದು ಒಂದು ಔಷಧೀಯ ಸಸ್ಯ
ಡೊಡೊನಿಯ ವಿಸ್ಕೊಸ ಈ ಗಿಡದ ವೈಜ್ಞಾನಿಕ ಹೆಸರು. ಈ ಸಸ್ಯವು ಸ್ಯಾಪಿಂಡೇಸಿಯ ಕುಟುಂಬಕ್ಕೆ ಸೇರಿದೆ.
ಕನ್ನಡದ ಇತರ ಹೆಸರುಗಳು
[ಬದಲಾಯಿಸಿ]ಅಂಗಾರಕ, ಬಣದುರಬ, ಬಂಡಾರಿ, ಬಂಡುರ್ಗಿ, ಬಂದರಿಕೆ, ಬೊಂಡಾರೆ, ಬೊಂದರೆ, ವೊಲ್ಲಾರಿ, ಹಂಗರ, ಹಂಗರಲು, ಹಂಗರಿಕೆ.
ಇತರೆ ಹೆಸರುಗಳು
[ಬದಲಾಯಿಸಿ]ಪರಿಚಯ
[ಬದಲಾಯಿಸಿ]ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ. ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು ಬೆಳೆಯುತ್ತದೆ ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ. ಗಂಡು ಹೂಗಳಲ್ಲಿ ೫-೧೦ ಕೇಸರಗಳಿರುತ್ತದೆ. ಕಾಯಿಗಳಲ್ಲಿ ಚಿಕ್ಕಗರಿಯಂತಹ ಏಣುಗಳಿರುತ್ತದೆ.[೧]
ಇದರ ಉಪಯೋಗಗಳು
[ಬದಲಾಯಿಸಿ]- ಇದನ್ನು ಮೂಳೆ ಮುರಿದ ಜಾಗದಲ್ಲಿ ಪಟ್ಟು ಹಾಕಲು ಉಪಯೋಗಿಸುತ್ತಾರೆ.
- ಇದರ ಚೂರ್ಣವನ್ನು ಹಚ್ಚುವುದರಿಂದ ಗಾಯವಾಸಿಯಾಗುತ್ತದೆ ಹಾಗು ಗಾಯದ ಕಲೆ ಉಳಿಯುವುದಿಲ್ಲ.
- ಇದನ್ನು ಹಾವು ಕಚ್ಚಿದ ಜಾಗದಲ್ಲಿ ಹಚ್ಚುವುದರಿಂದ ಜೊತೆಗೆ ಸೇವಿಸುವುದರಿಂದ ವಿಷವು ಇಳಿಯುತ್ತದೆ.
- ಇದರ ಎಲೆಯ ಚೂರ್ಣವನ್ನು ಆಡಿನ ಹಾಲಿನಲ್ಲಿ ಸೇವನೆ ಮಾಡುವುದರಿಂದ ಸರ್ವವ್ಯಾಧಗಳು ಗುಣವಾಗುತ್ತದೆ.
- ಎಲೆಯೆ ಕಷಾಯದಿಂದ ಜ್ವರವು ಪರಿಹಾರವಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಕರ್ನಾಟಕದ ಔಷಧೀಯ ಸಸ್ಯಗಳು, ಡಾ. ಮಾಗಡಿ ಆರ್. ಗುರುದೇವ, ದಿವ್ಯಚಂದ್ರ ಪ್ರಕಾಶನ, ಕಾಳಿಕಾಸೌಧ, ಪೂರ್ಣಯ್ಯ ಛತ್ರದ ರಸ್ತೆ, ಬೆಂಗಳೂರು, ೫೬೦ ೦೫೩, ಮೂರನೆಯ ಮುದ್ರಣ:೨೦೧೦, ಪುಟ-೫೫