ಅಂಜಲೈ ಅಮ್ಮಾಳ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಜಲೈ ಅಮ್ಮಾಳ್ ಅವರು ಕದಲೂರಿನ ಸಮಾಜ ಸೇವಕಿ ಮತ್ತು ಸಮಾಜ ಸುಧಾರಕಿಯಾಗಿದ್ದರು. ಅವರು ೧೯೨೧ ರಲ್ಲಿ ಅಸಹಕಾರ ಚಳುವಳಿ ಭಾಗವಹಿಸಿದರು. ಇವರು ಅಸಹಕಾರ ಚಳುವಳಿಯೊಂದಿಗೆ ತಮ್ಮ ರಾಜಕೀಯ ಚಟುವಟಿಕೆಯನ್ನು ಪ್ರಾರಂಭಿಸಿದರು. ನಂತರ ನೀಲ್ ಪ್ರತಿಮೆ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದರು. ಇವರ ಧೈರ್ಯ ಕಂಡು ಮಹಾತ್ಮ ಗಾಂಧಿಯವರು ಇವರನ್ನು ದಕ್ಷಿಣ ಭಾರತದ ಝಾನ್ನ್ಸಿ ರಾಣಿ ಎಂದು ಕರೆದರು. ಅವರು ಅಂಜಲೈ ಅಮ್ಮಾಳ್ ಅವರನ್ನು ಭೇಟಿ ಮಾಡಲು ಕದಲೂರಿಗೆ ಬಂದಾಗ, ಬ್ರಿಟಿಷ್ ಸರ್ಕಾರ ಅವರನ್ನು ಭೇಟಿಯಾಗುವುದನ್ನು ನಿಷೇಧಿಸಿತು. ಆದರೆ ಅಂಜಲೈ ಅಮ್ಮಾಳ್ ಬುರ್ಖಾ ಧರಿಸಿ ಅವರನ್ನು ಭೇಟಿಯಾಗುವಲ್ಲಿ ಯಶಸ್ವಿಯಾದರು. ಗಾಂಧಿಯವರಿಂದಲೇ ಲೀಲಾವತಿ ಎಂದು ಹೆಸರಿಸಲ್ಪಟ್ಟ ತಮ್ಮ ಒಂಬತ್ತು ವರ್ಷದ ಮಗಳನ್ನು ಅಮ್ಮಾಳ್ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ಅಂಜಲೈ ಅಮ್ಮಾಳ್ ಅವರ ಮೊಮ್ಮಗಳು ಮುಂಗೈ , “ನನ್ನ ಅಜ್ಜಿ, ಅಂಜಲೈ ಅಮ್ಮಾಳ್ ನಾಲ್ಕೂವರೆ ವರ್ಷಗಳಿಂದ ಜೈಲಿನಲ್ಲಿದ್ದರು ಮತ್ತು ಅವರು ಜೈಲಿನಲ್ಲಿಯೇ ತಮ್ಮ ಕೊನೆಯ ಮಗನಿಗೆ ಜನ್ಮ ನೀಡಿದರು. ಆಕೆಯ ಜೀವನ ಚರಿತ್ರೆಯನ್ನು ೮ನೇ ತರಗತಿಯ ಎರಡನೇ ಸೆಮಿಸ್ಟರ್ ತಮಿಳು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ನನ್ನ ಅಜ್ಜ, ಮುರುಗಪ್ಪ, ನನ್ನ ತಾಯಿಯ ಚಿಕ್ಕಮ್ಮ, ಲೀಲಾವತಿ ಮತ್ತು ಅವರ ಪತಿ ಜಮದಗ್ನಿ ಸಹ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು" ಎಂದು ವಿವರಿಸುತ್ತಾರೆ. ೧೯೩೧ ರಲ್ಲಿ, ಅವರು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ೧೯೩೧ರಲ್ಲಿ, ಅವರು ಮತ್ತೊಂದು ಹೋರಾಟದಲ್ಲಿ ಭಾಗವಹಿಸಿದರು, ಅದಕ್ಕಾಗಿ ಇವರನ್ನು ವೆಲ್ಲೂರ್ ಜೈಲಿಗೆ ಕಳುಹಿಸಲಾಯಿತು. ವೆಲ್ಲೂರು ಜೈಲಿಗೆ ಕಳುಹಿಸಿದಾಗ ಇವರು ಗರ್ಭಿಣಿಯಾಗಿದ್ದರು. ಇವರ ಹೆರಿಗೆಯ ಸಮಯದ ಹಿನ್ನೆಲೆಯಲ್ಲಿ ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇವರ ಮಗ ಹುಟ್ಟಿದ ಎರಡು ವಾರಗಳಲ್ಲಿ, ಇವರನ್ನು ವೆಲ್ಲೂರು ಜೈಲಿಗೆ ಕಳುಹಿಸಲಾಯಿತು. ಒಮ್ಮೆ ಗಾಂಧೀಜಿ ಕದಲೂರಿಗೆ ಬಂದರು, ಆದರೆ ಬ್ರಿಟಿಷ್ ಸರ್ಕಾರವು ಅಂಜಲೈ ಅಮ್ಮಾಳ್ ಅವರನ್ನು ಭೇಟಿ ಮಾಡುವುದನ್ನು ನಿಷೇಧಿಸಿತು. ಆದರೆ ಅಂಜಲೈ ಅಮ್ಮಾಳ್ ಅವರು ಬುರ್ಖಾ ಧರಿಸಿ ಕುದುರೆ ಗಾಡಿಯಲ್ಲಿ ಬಂದು ಗಾಂಧಿಯವರನ್ನು ಭೆಟಿ ಮಾಡಿದರು. ಇವರ ಧೈರ್ಯವನ್ನು ನೋಡಿ ಗಾಂಧಿಯವರು ಇವರನ್ನು ದಕ್ಷಿಣ ಭಾರತದ ಝಾನ್ಸಿ ರಾಣಿ ಎಂದು ಕರೆದರು. [೧] ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಅವರು ಮೂರು ಬಾರಿ ತಮಿಳುನಾಡು ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು.

ಉಲ್ಲೇಖಗಳು[ಬದಲಾಯಿಸಿ]

  1. "Honour first woman MLA". thehindu.com. 10 December 2014. Archived from the original on 17 May 2022.

ಬಾಹ್ಯ ಕೊಂಡಿಗಳು[ಬದಲಾಯಿಸಿ]