ವಿಷಯಕ್ಕೆ ಹೋಗು

ಹೊಸ ಒಡಂಬಡಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಸ ಒಡಂಬಡಿಕೆ ಹೊಸ ಒಡಂಬಡಿಕೆ ಕ್ರೈಸ್ತರ ಧರ್ಮಗ್ರಂಥವಾದ ಬೈಬಲಿನ ಎರಡನೇ ಭಾಗವಾಗಿದೆ, ಮೊದಲನೆಯದು ಹಳೆಯ ಒಡಂಬಡಿಕೆಯಾಗಿದೆ ಎರಡನೆಯದು ಹೊಸ ಒಡಂಬಡಿಕೆ. ಈ ಭಾಗದಲ್ಲಿ ಯೇಸುವಿನ ಜೀವನ ,ಬೋಧನೆ ಮತ್ತು ಮೊದಲ ಶತಮಾನದ ಕ್ರೈ ಸ್ತ ಧರ್ಮದ ಸ್ಥಪನೆಯ ಬಗ್ಗೆ ಚರ್ಚಿಸುತ್ತದೆ. ಕ್ರೈಸ್ತರು ಹಳೆಯ ಮತ್ತು ಹೊಸ ಒಡಂಬಡಿಕೆಗಳನ್ನು ಪವಿತ್ರ ಗ್ರಂಥವೆಂದು ಪರಿಗಣಿಸುತ್ತಾರೆ..[]

ಯೇಸು ಕ್ರಿಸ್ತ ಏರ್ಪಡಿಸಿದ ಹೊಸ ಒಡಂಬಡಿಕೆ ಹಳೆಯ ಒಡಂಬಡಿಕೆಯ ಪುನಃಸ್ಥಾಪನೆ. ಅದು ಪ್ರಭುವಿಗೂ ಭಕ್ತನಿಗೂ ಆಂತರಿಕ ಸಂಬಂಧವನ್ನು ಏರ್ಪಡಿಸುತ್ತದೆ. ಕ್ರಿಸ್ತನ ಜೀವನ ಮತ್ತು ಮರಣವನ್ನು ಈ ಹೊಸ ಒಡಂಬಡಿಕೆಯ ಬೆಳಕಿನಲ್ಲಿ ಅರ್ಥಮಾಡಿಕೊಳ್ಳಬೇಕು. ಮಾನವ ದೇವರಾಜ್ಯವನ್ನು ತನ್ನ ಅಂತರಂಗದಲ್ಲೇ ಕಾಣಬಹುದು ಎಂಬುದೂ ಮಾನವನಿಗೂ ದೇವರಿಗೂ ಇರುವ ಸಂಬಂಧ ಪ್ರೀತಿಯದು ಎಂಬುದೂ ಅದರ ತಳಹದಿಯ ಭಾವನೆಗಳು. ನಿಬಂಧನೆ (ಹತ್ತು ಆಜ್ಞೆಗಳು) ಮೋಸೆಯ ಮೂಲಕ ಬಂದುದಾದರೆ, ಕಾರುಣ್ಯ ಮತ್ತು ಸತ್ಯ ಕ್ರೈಸ್ತನಿಂದ ಬಂದುವು (ಸೇಂಟ್ ಜಾನ್). ಹಿಂದೆ ಯೋಹಾನ ನೀರಿನಿಂದ ದೀಕ್ಷೆ ಕೊಟ್ಟರೆ ಈಗ ಕ್ರಿಸ್ತ ಪವಿತ್ರಾತ್ಮದಿಂದ ದೀಕ್ಷೆ ಕೊಡುತ್ತಾನೆ (ಸೇಂಟ್ ಜಾನ್). ಹಿಂದೆ ಪ್ರಭು ಪ್ರವಾದಿಗಳ ಮೂಲಕ ತನ್ನ ಸಂದೇಶವನ್ನು ಕೊಟ್ಟ. ಈಗ ಪ್ರಭು ದೇವಪುತ್ರನಾಗಿ ಅವತರಿಸಿ ಜನರ ಮಧ್ಯೆ ಬಾಳಿ ಅವರಿಗೆ ತನ್ನ ಸಂದೇಶವನ್ನು ತಿಳಿಸಿರುತ್ತಾನೆ. ಅನೇಕ ಕಾಲದಿಂದ ಯೆಹೂದ್ಯರು ನಿರೀಕ್ಷಿಸಿದ್ದ ಉದ್ದಾರಕ ಯೇಸು ಕ್ರಿಸ್ತನೇ ಎಂದು ಯೇಹಾನ ಸಾರುತ್ತಾನೆ. ಯೇಸು ಪರ್ವತ ಶಿಖರದಿಂದ ಮಾಡಿದ ಉಪದೇಶ ಹೊಸ ಒಡಂಬಡಿಕೆಯ ಸಾರ. ಪ್ರಭುಭೋಜನ ಹೊಸ ಒಪ್ಪಂದದ ಸಂಸ್ಕಾರ. ಈ ಸಂಸ್ಕಾರದಲ್ಲಿ ದ್ರಾಕ್ಷಾರಸ ಯೇಸುವಿನ ಪರಿತಾಪ ಮತ್ತು ಅವನ ರಕ್ತ ಹೊಸ ಒಪ್ಪಂದದ ಸಂಕೇತ. ಅನೇಕರಿಗಾಗಿ ಬಸಿದ ರಕ್ತ ನನ್ನ ಹೊಸ ಒಡಂಬಡಿಕೆಯ ಸಂಕೇತ-ಎಂಬ ಯೇಸುವಿನ ಹೇಳಿಕೆ ಸೇಂಟ್ ಮಾರ್ಕ್ ಮತ್ತು ಕೊರಿಂಥಿಯನ್ಸ್ ಎಂಬ ಹೊಸ ಒಡಂಬಡಿಕೆಯ ಪುಸ್ತಕಗಳಲ್ಲಿ ಉಲ್ಲೇಖಿತವಾಗಿದೆ.

ಹೊಸ ಒಡಂಬಡಿಕೆಯು ಮೂಲತಃ ಗ್ರೀಕ್ ಭಾಷೆಯಲ್ಲಿ ಬರೆಯಲ್ಪಟ್ಟ ಕ್ರಿಶ್ಚಿಯನ್ ಪಠ್ಯಗಳ ಸಂಗ್ರಹವಾಗಿದೆ. ಇಂದು ಬಹುತೇಕ ಎಲ್ಲಾ ಕ್ರಿಶ್ಚಿಯನ್ ಸಂಪ್ರದಾಯಗಳಲ್ಲಿ, ಹೊಸ ಒಡಂಬಡಿಕೆಯು 27 ಪುಸ್ತಕಗಳನ್ನು ಒಳಗೊಂಡಿದೆ: ನಾಲ್ಕು ಅಂಗೀಕೃತ ಸುವಾರ್ತೆಗಳು ( ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಮತ್ತು ಜಾನ್ ), ಅಪೊಸ್ತಲರ ಕೃತ್ಯಗಳು, ಪೌಲನು ಬರೆದ 13 ಪತ್ರಗಳು, ಎಂಟು ಕ್ಯಾಥೋಲಿಕ್ ಪತ್ರಗಳು ಮತ್ತು ಪ್ರಕಟನೆ ಪುಸ್ತಕ .

ಉಲ್ಲೇಖಗಳು

[ಬದಲಾಯಿಸಿ]
  1. "BBC – Religions – Christianity: The Bible". www.bbc.co.uk (in ಬ್ರಿಟಿಷ್ ಇಂಗ್ಲಿಷ್). Retrieved 2020-09-23.