ಸೃಷ್ಟಿ ಮತ್ತು ಕುರಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೃಷ್ಟಿ ಮತ್ತು ಕುರಾನ್[ಬದಲಾಯಿಸಿ]


ಪೀಠಿಕೆ[ಬದಲಾಯಿಸಿ]

  • ಪ್ರವಾದಿ ಮಹಮದ್(ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಮ್) (ಕ್ರಿ.ಶ.೫೭೦-೬೩೨), ಮುಖ್ಯ ದೇವ ದೂತ ಗೇಬ್ರಿಯಲ್ ರಿಂದ ಒಟ್ಟು ೨೬ ವರ್ಷಗಳ ಕಾಲ, ಮೊದಲ ಮೂರು ವರ್ಷದ ನಂತರ ಮೂರು ವರ್ಷ ಬಿಟ್ಟು, ದೇವ -ಸಂದೇಶ ಗಳನ್ನು ಕ್ರಿ. ಶ.೬೩೨ ರ ವರೆಗೂ ಎಂದರೆ ಅವರ ಮರಣಕಾಲದ ವರೆಗೂ ಪಡೆದರೆಂದು ಹೇಳುತ್ತಾರೆ. ೯೬ನೇ ಅಧ್ಯಾಯದ (ಸುರಾ) ಪ್ರಾರಂಭಿಕ ಪದ್ಯಗಳು ಮೊದಲ ಮೂರು ವರ್ಷದಲ್ಲಿ ಪಡೆದವುಗಳು. ಮಹಮ್ಮದರು ಕಿ.ಶ. ೬೨೨ರಲ್ಲಿ ಮೆಕ್ಕಾದಿಂದ ಮದೀನಾಕ್ಕೆ ಹೋಗಿದ್ದು, ಆ ದಿನದಿಂದ ಹಿಜಿರಾ ಶಕೆ ಪ್ರಾರಂಭವೆಂದು ಪರಿಗಣಿಸಿದರೆ ; ಹಿಜಿರಾಕ್ಕೆ ಮೊದಲು ೧೦ ವರ್ಷ, ಅದರ ನಂತರ ೧೩ವರ್ಷ ದೈವಿಕ ಸಂದೇಶಗಳನ್ನು ಪಡೆದರೆಂದು ಹೇಳಬಹುದು. ಗೇಬ್ರಿಯಲ್ ದೇವದೂತ ದೇವನ ಹತ್ತಿರದ ನಾಲ್ಕು ಮುಖ್ಯ ದೇವದೂತರಲ್ಲಿ ಒಬ್ಬ ದೇವದೂತ. ಹಳೆಯ ಬೈಬಲ್(ಒಡಂಬಡಿಕೆ) ಪ್ರಕಾರ ಗೇಬ್ರಿಯಲ್ ರಿಗೆ ದೇವರ ಸಂದೇಶಗಳನ್ನು ಮಾನವ ಪ್ರವಾದಿಗಳಿಗೆ ತಿಳಿಸುವುದೇ ಮುಖ್ಯ ಕೆಲಸ. ಹೀಗೆ ಪ್ರವಾದಿ ಮಹಮದ್ ಪಡೆದ ಸಂದೇಶಗಳ ಸಂಗ್ರಹವೇ ಕುರಾನ್. ಮಹಮ್ಮದ್ ರಿಗೆ ಓದಲೂ ಬರೆಯಲೂ ಬರುತ್ತಿರಲಿಲ್ಲ ವೆಂದು ಹೇಳುತ್ತಾರೆ. ( ಕ್ರೈಸ್ತ ವಿದ್ವಾಂಸರು ಇದನ್ನು ಒಪ್ಪುವುದಿಲ್ಲ - ಕಾರಣ ಹಳೆಯ ಬೈಬಲ್ಲಿನಲ್ಲಿರುವ ಅನೇಕ ವಿಚಾರಗಳು ಕುರಾನ್ ನಲ್ಲಿದೆ. ಮತ್ತೆ ಕೆಲವುಗಳಲ್ಲಿ ಸಾಮ್ಯವಿದೆ.) ಪ್ರವಾದಿ ಮಹಮ್ಮದ್ ಧ್ಯಾನಸ್ಥಿತಿ ಯಲ್ಲಿ ಹೇಳಿದುದನ್ನು ಅವರ ಜೊತೆಯಲ್ಲದ್ದವರು ಬಾಯಿಗೆ ಕಲಿತು ಹೇಳಿ ನಂತರ ಬರೆದಿಡುತ್ತಿದ್ದರೆಂದು ಹೇಳುತ್ತಾರೆ. ಕೆಲವು ವಾಕ್ಯಗಳು ಗೇಬ್ರಿಯಲ್ ಪ್ರವಾದಿ ಮಹಮ್ಮದರಿಗೆ ಹೇಳಿದಂತಿದೆ ; ಕಲವು ದೇವನೇ ನೇರವಾಗಿ ಪ್ರವಾದಿ ಮಹಮ್ಮದರಿಗೆ ಹೇಳಿದಂತಿದೆ. ಪ್ರವಾದಿ ಮಹಮ್ಮದರು ಆವೇಶ() ಸ್ಥಿತಿಯಲ್ಲಿ ಈ ಸಂದೇಶಗಳನ್ನು ದೇವದೂತನಿಂದ ಪಡೆದು ಅದನ್ನು ಅವರು ಹೇಳುತ್ತಿದ್ದರೆಂದು, ನಂತರ ಅವರ ಅನಯಾಯಿಗಳು ಅದನ್ನು ಹೇಳುತ್ತಿದ್ದರೆಂದೂ, ಮಹಮ್ಮದರು ಅದನ್ನು ಪುನಃ ಪನಃ ಹೇಳಿಸಿ ಸರಿಪಡಿಸುತ್ತಿದ್ದರೆಂದು ಹೇಳುತ್ತಾರೆ. ( ಕೆಲವೊಮ್ಮೆ ಪ್ರವಾದಿ ಮಹಮ್ಮದರಿಗಿಂತ ಹದಿನೈದು ವರ್ಷ ಹಿರಿಯಳಾದ ಅವರ ಪತ್ನಿಯೇ (ಖದೀಜಾ), ಅವರು ಆವೇಶ ಸ್ತಿತಿಯಲ್ಲಿ ಹೇಳಿದುದನ್ನು ಬರೆದಿಡುತ್ತಿದ್ದರೆಂದು ಹೇಳುತ್ತಾರೆ.).
  • ಆದರೆ ಈಗ ಸಿಕ್ಕಿರುವ ಕುರಾನಿನ ಅತ್ಯಂತ ಹಳೆಯ ಬರೆಹದ ಪ್ರತಿ ಮಹಮ್ಮದರ ಮರಣದ ೧೦೦ ವರ್ಷ ನಂತರದ್ದು. ಕುರಾನ್‌ನಲ್ಲಿ ಸೃಷ್ಟಿಯ ಕಾರ್ಯವಿವರಣೆ, ಬೈಬಲ್ಲನಂತೆ ಒಂದೇ ಕಡೆ ಇಲ್ಲ. ಅನೇಕ ಕಡೆ ಹರಡಿದೆ. ಅದು ಹಳೆಯ ಬೈಬಲ್ಲಿನ ವಿವರಣೆಯನ್ನೇ ಹೋಲುತ್ತದೆ.

ಒಂದನೇ ಹಂತ[ಬದಲಾಯಿಸಿ]


  • ೨ ಸುರ(ಅಧ್ಯಾಯ) ೭; ಪದ್ಯ ೫೪ : ಸ್ವರ್ಗಗಳನ್ನೂ ಮತ್ತು ಭೂಮಿಯನ್ನೂ ಆರು ದಿನಗಳಲ್ಲಿ ಸೃಷ್ಟಿಸಿದ ಆ ದೇವನು ನಿನ್ನ ಒಡೆಯ, (ಇಲ್ಲಿ ದಿನಗಳನ್ನು ಎನ್ನುವುದನ್ನು ಇತ್ತೀಚಿನ ಕುರ್ ಆನ್ ವಿದ್ವಾಂಸರು ಕೇವಲ ಕಾಲಸೂಚಿ -ಎಷ್ಟು ದಿನಗಳಾದರೂ ಆಗಬಹುದು ೫೦,೦೦೦ವರ್ಷಗಳೂ ಆಗಬಹುದು ಎಂದು ವಿಜ್ಞಾನಕ್ಕೆ ಹೊಂದಿಸಿ ಅರ್ಥ ಮಾಡುತ್ತಾರೆ)

ಎರಡನೇ ಹಂತ[ಬದಲಾಯಿಸಿ]


  • ಸು. ೭ ; ಪ. ೯ - ೧೨ : ದೇವರು ಪ್ರವಾದಿಗೆ ಕೇಳುತ್ತಾನೆ : ಹೇಳು, ಎರಡೇ ದಿನಗಳಲ್ಲಿ ಭೂಮಿಯನ್ನು ಸೃಷ್ಟಿಸಿದ ಆ ದೇವನಲ್ಲಿ ನಿನಗೆ ನಂಬುಗೆ ಇದೆಯಾ? ನೀನು ಅವನಿಗೆ ಸಮವೆಂದು ಭಾವಿಸುವೆಯಾ? ಅವನು ಲೋಕಗಳ ಒಡೆಯ. ಅವನು(ದೇವನು) ಬೆಟ್ಟಗಳನ್ನು ಗಟ್ಟಿಯಾಗಿ ನಿಲ್ಲಿಸಿದನು. ಅಗತ್ಯ ವಿರುವವರಿಗಾಗಿ ನಾಲ್ಕು ದಿನಗಳಲ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ ಜೋಡಿಸಿದನು. ಸ್ವರ್ಗವು (ಆಕಾಶವು) ಹೊಗೆಯ ರೂಪದಲ್ಲಿದ್ದಾಗ, ಅದರ ಕಡೆ ತಿರುಗಿ ಸ್ವರ್ಗ ಮತ್ತು ಭೂಮಿಗೆ ಹೇಳಿದನು, ಇಷ್ಟವಿದ್ದೊ-ಇಲ್ಲದೆಯೋ ಬನ್ನಿ! ಎಂದನು. ಅವು ಸಂತೋಷದಿಂದ ವಿಧೇಯರಾಗಿ ಬರುತ್ತೇವೆ ಎಂದವು. ನಂತರ ಅವುಗಳನ್ನು - ಏಳು ಸ್ವರ್ಗಗಳನ್ನೂ ಎರಡು ದಿನಗಳಲ್ಲಿ ವ್ಯವಸ್ಥೆ ಗೊಳಿಸಿದನು, ಮತ್ತು ಪ್ರತಿ ಲೋಕ(ಸ್ವರ್ಗ)ಕ್ಕೂ ಅವುಗಳ ಕರ್ತವ್ಯಗಳನ್ನು ಸಂದೇಶದ ಮೂಲಕ ನಿಗದಿಗೊಳಿಸಿದನು. ಮತ್ತು ಕೆಳಗಿನ ಲೋಕವನ್ನು ಬೆಳಕಿನ ವಸ್ತುಗಳಿಂದ ಅಲಂಕರಿಸಿದನು. ಸರ್ವಜ್ಞನಾದ ಸರ್ವಶಕ್ತನ ನಿಯಮ ಹೀಗಿದೆ.
  • ೩ ಸು.೨೧ ; ಪ ೩೦ : ಸಂಶಯಗ್ರಸ್ತರು ಆಕಾಶ ಭೂಮಿಗಳು ಸೇರಿದ್ದನ್ನೂ ನಾವು (ದೇವನು) ಅದನ್ನು ಬೇರೆ ಮಾಡಿದ್ದನ್ನೂ, ನೀರಿನಿಂದ ಎಲ್ಲಾ ಜೀವಿಗಳನ್ನು ಪಡೆದಿರುವುದನ್ನೂ (ಉಂಟುಮಾಡಿದ್ದನ್ನೂ) ಕಂಡಿಲ್ಲವೇ?

ಮೂರನೇ ಹಂತ[ಬದಲಾಯಿಸಿ]


  • ಸು. ೭೧ ; ಪ ೧೫-೧೬ : ದೇವನು ಏಳು ಲೋಕಗಳನ್ನು ಒಂದರ ಮೇಲೆ ಒಂದರಂತೆ ಸೃಷ್ಟಿಸಿದ್ದನ್ನು ಕಂಡಿಲ್ಲವೇ - ಬೆಳಕಿನ ಚಂದ್ರನನ್ನೂ ಸೂರ್ಯನ ದೀಪವನ್ನೂ ಸೃಷ್ಟಿಸಿದ್ದನ್ನು ನೋಡಿಲ್ಲವೇ?

ನಾಲ್ಕನೇ ಹಂತ[ಬದಲಾಯಿಸಿ]


  • ಸು . ೧೪ ; ಪ ೩೯ : ನಿನಗಾಗಿ (ದೇವನು) ಸೂರ್ಯನನ್ನೂ ಚಂದ್ರನನ್ನೂ ಅವರವರ ವ್ಯವಸ್ಥಿತ ಪಥದಲ್ಲಿ ಸಂಚರಿಸುವಂತೆ ನಿಯಮಿಸಿದ್ದಾನೆ; ನಿನಗಾಗಿ ಹಗಲು ರಾತ್ರಿಗಳನ್ನು ವ್ಯವಸ್ಥೆಗಳಿಸಿದ್ದಾನೆ.

ಐದನೇ ಹಂತ[ಬದಲಾಯಿಸಿ]


೬ ಸು. ೫೦ ; ಪ. ೯-೧೧ : ನಾವು (ದೇವನು) ಆಕಾಶದಿಂದ ಆಶೀರ್ವಾದಿಸಿ ನೀರನ್ನು ಕಳಕ್ಕೆ ಕಳಿಸಿದೆವು. ನಾವು, ನಮ್ಮ ಸೇವಕರ ಬದುಕು-ಬಾಳುವೆಗಾಗಿ, ಅದರಿಂದ ತೋಟ, ಧಾನ್ಯ, ಬೆಳೆ, ಕೊಂಬೆಗಳಿಂದ ಕೂಡಿದ ಎತ್ತರದ ಪಾಮ್ ಮರಗಳು ಇವುಗಳನ್ನು ಉಂಟುಮಾಡಿದೆವು . ಹೀಗೆ ಬರಡುಭೂಮಿಗೆ ಜೀವ ತುಂಬಿದೆವು.

ಆರನೇ ಹಂತ[ಬದಲಾಯಿಸಿ]


  • ಸು. ೭೧ ; ಪ ೧೯-೨೦ : ದೇವನು ನಿಮಗಾಗಿ ತಿರುಗಾಡಲು ಭೂಮಿಯನ್ನು ಚಾಪೆಯಂತೆ ಮಾಢಿ, ಬೀದಿಗಳನ್ನೂ, ಕಣಿವೆ ದಾರಿಗಳನ್ನೂ ಮಾಡಿದ್ದಾನೆ.

ಏಳು, ಎಂಟು, ಒಂಭತ್ತ ನೇ ಹಂತ[ಬದಲಾಯಿಸಿ]


  • ೭ . ಸು. ೨೪ ; ಪ. ೪೫ : ದೇವನು ನೀರಿನಿಂದ ಎಲ್ಲಾ ಪ್ರಾಣಿಗಳನ್ನೂ ಸೃಷ್ಟಿಸಿದನು
  • ೮ . ಸು. ೧೬ (೮೬) ; ಪ೪ (೬-೭) : ದೇವನು ಚಕ್ಕ ಹನಿ ದ್ರವದಿಂದ ಗಂಡು ಹೆಣ್ಣು ಎಂಬ ಜೊತೆಗಳನ್ನು (ಜೀವಿಗಳನ್ನು ) ಸೃಷ್ಟಿಸಿದನು.
  • ೯ . ಸು. ೮೬ ; ಪ. ೬-೭ :ದೇವನು ಮನುಷ್ಯನನ್ನು , ಗಂಡು ಮತ್ತು ಹೆಣ್ಣಿನ ಲೈಂಗಿಕ ಅಂಗದಿಂದ ಸ್ರವಿಸಿದ ಚಿಕ್ಕ ಹನಿ ದ್ರವದಿಂದ ರೂಪಗೊಳಿಸಿದ್ದಾನೆ.


ಟಿಪ್ಪಣಿ - ೧[ಬದಲಾಯಿಸಿ]


  • ಆದಮ - ಪ್ರಥಮ ಮಾನವನ ಸೃಷ್ಟಿ (ಸುರ ೨,೭,೧೫,೧೭,೨೦) : ಆದಮ್ ಮತ್ತು ಈವಳನ್ನು ದೇವನು ಮಣ್ಣಿನಿಂದ ಸೃಷ್ಟಿಸಿ ಆವರಿಗೆ ವಿಶೇಷ ಶಕ್ತಿಯನ್ನೂ ಜ್ಞಾನವನ್ನೂ ನೀಡಿದನು. ನಂತರ ಎಲ್ಲಾ ದೇವದೂತರಿಗೂ ಮಾನವನ ಕಾಲಿಗೆ ಬೀಳಲು (ನಮಸ್ಕರಿಸಲು) ಹೇಳಿದನು. ಇಬ್ಲೀಸ್ (ಸೈತಾನ)ನನ್ನು ಬಿಟ್ಟು ಉಳದವರೆಲ್ಲಾ ಮಾನವನಿಗೆ ನಮಸ್ಕರಿಸಿದರು. ದೇವನ ಆಜ್ಞೆಯನ್ನು ಮೀರಿದ್ದರಿಂದ ಇಬ್ಲೀಸ್ ಜಿನ್ನ್ ಸೈತಾನನಾಗಿ ಕೆಟ್ಟದ್ದನ್ನು ಮಾಡುತ್ತಿರುವನು. ಸ್ವರ್ಗದ ತೋಟದಲ್ಲಿರುವ ಆದಮ ಈವರಿಗೆ ದೇವನು ಈಡನ್ ತೋಟದಲ್ಲಿರುವ (ಒಳಿತು - ಕೆಡುಕುಗಳ) ಹಣ್ಣನ್ನು ತಿನ್ನಬಾರದೆಂದು ವಿಧಿಸಿದನು. ಆದರೆ ಇಬಲಿಸನು (ಸೈತಾನನು) ಆವರು ಆ ಹಣ್ಣನ್ನು ತಿನ್ನುವಂತೆ ಪ್ರಚೋದಿಸಿದನು. ಪರಿಣಾಮವಾಗಿ ಆವರು ಇಬ್ಬರೂ ಭೂಮಿಗೆ ಬಿದ್ದರು. ಆದಮನು ಸಿಲೋನಿನಲ್ಲೂ , ಈವಳು ಅರೇಬಿಯಾದ ಜಿದ್ದಾದಲ್ಲೂ ಬಿದ್ದರು. ಅಲ್ಲಾಹು ಅವರನ್ನು ಕ್ಷಮಿಸಿ ಆವರೂ ಅವರ ವಂಶದ ಮಾನವರೂ ತನಗೆ (ದೇವನಿಗೆ) ವಿಧೇಯರಾಗಿದ್ದಲ್ಲಿ ಮತ್ತು ಸೈತಾನನ ಮಾತು ಕೇಳದಿದ್ದರೆ, ಮುಂದೆ ಅವರಿಗೆ ಸದಾ ಮಾರ್ಗದರ್ಶನ ನೀಡುವುದಾಗಿ ತಿಳಿಸಿದನು; ಇಲ್ಲದಿದ್ದರೆ ನರಕಕ್ಕೆ ತಳ್ಳು ವುದಾಗಿ ಹೇಳಿದನು. ಆದಮ್ ಮತ್ತು ಈವರು ೨೦೦ ವರ್ಷಗಳ ನಂತರ ಅರಾಫತ್ ಪರ್ವತದ ಹತ್ತಿರ ಪುನಃ ಸಂಧಿಸಿ ಮಕ್ಕಳನ್ನು (೨೦ಜೊತೆ) ಪಡೆದು ವಂಶ ವೃದ್ಧಿಸಿದರು. ಆದಮನು ೪೦,೦೦೦ ಮೊಮ್ಮಕ್ಕಳನ್ನು ಪಡೆದಿದ್ದನೆಂದು ಹೇಳಲಾಗಿದೆ. ಆದಮನೇ ಮೊದಲ ಪ್ರವಾದಿ. ಆದಮನದು ಅವಿಧೇಯತೆಯ ಪಾಪ ಮಾತ್ರ, ಅದೂ ಕ್ಷಮಿಸಲ್ಪಟ್ಟಿದೆ. ದೈಹಿಕ ಸಂಪರ್ಕದ ಪಾಪವಿಲ್ಲ, (ಏಕೆಂದರೆ ಆವರನ್ನು ಸೃಷ್ಟಿಸಿದಾಗಲೇ ದೈಹಿಕ ಸಂಪರ್ಕದಿಂದ ಮಕ್ಕಳನ್ನು ಪಡೆಯಲು ಅನಮತಿ ಇರುತ್ತದೆ ? ) ; ಆ ಅವಿದೇಯತೆಯ ಪಾಪ ಆವನಿಗೆ ಮಾತ್ರ -( ಕ್ರಿಶ್ವಿಯನ್ ಧರ್ಮದ ಹಾಗೆ ಎಲ್ಲಾ ನಂತರದ ಮಾನವರಿಗೆ ಪಾಪ ಲೇಶ ಇರುವಂತೆ) ಅವನ ನಂತರದ ಮಾನವರಿಗಿಲ್ಲ.

ಟಿಪ್ಪಣಿ -೨[ಬದಲಾಯಿಸಿ]


  • ಇಸ್ಲಾಂ ಎಂದರೆ (ದೇವರಿಗೆ) ಶರಣಾಗತಿ ; ಮುಸ್ಲಿಂ ಎಂದರೆ (ದೇವರಿಗೆ) ಶರಣಾದವನು. ಶರಣಾಗದವನು ಕುಫ್ರ -ಆವನೇ ಕಾಫಿರ, ದೇವನು ಮಾನವನಿಗಾಗಿ ಎಲ್ಲವನ್ನೂ ಸೃಷ್ಟಿಸಿದ್ದು ,ಅದನ್ನು ಅರಿಯದೇ ದೇವನಿಗೆ ಶರಣಾಗದವ ಕೃತಘ್ನ ಎಂದರೆ ಉಪಕಾರ ನೆನೆಯದವ ಕುಫ್ರ ಎಂದರೆ ಕೃತಘ್ನ ; ಆದ್ದರಿಂದ ಆದಮನೂ ಅವನ ನಂತರದವರೆಲ್ಲರೂ ಮುಸ್ಲಿಮರು ; ದೇವರನ್ನು (ಅಲ್ಲಾನನ್ನು) ಒಪ್ಪಿ ಶರಣಾದವರು. ಮಹಮ್ಮದನೇ ಕೊನೆಯ ಪ್ರವಾದಿ ; ಅವನಿಗೆ ಬಂದ ಸಂದೇಶಗಳೇ ಕೊನೆಯವು ಮತ್ತು ಅನುಸರಿಸ ಬೇಕಾದ್ದು ; ಮುಸ್ಲಿಮರ ಪ್ರಕಾರ ದೇವರ ಎಲ್ಲಾ ಹಿಂದಿನ ಸಂದೇಶಗಳೂ ರದ್ದಾಗಿವೆ. (ಅವರ ಪ್ರಕಾರ ಏಸುವೂ ಒಬ್ಬ ಪ್ರವಾದಿ, ದೇವರ ಮಗನಲ್ಲ ; ಶ್ರೀ ರಾಮ, ಕೃಷ್ಣರೂ ,ಅವತಾರಿಗಳಲ್ಲ, ಪ್ರವಾದಿಗಳು; ವೇದಮಂತ್ರಗಳನ್ನು ಸಂದೇಶ ಪಡೆದ ಋಷಿಗಳೂ ಹಳೆಯ ಪ್ರವಾದಿಗಳು. ಪ್ರವಾದಿ ಎಂದರೆ ಸೃಷ್ಟಿಕರ್ತ ದೇವನು ತನ್ನ ಸಂದೇಶಗಳನ್ನು ಜನರಿಗೆ ತಲುಪಿಸಲು ಆರಿಸಿಕೊಂಡ ವಿಶಿಷ್ಟ ವ್ಯಕ್ತಿತ್ವದ ಮಾನವರು ಅಷ್ಟೆ ! ಆದರೆ ಅವರು ಗುರು ನಾನಕರನ್ನಾಗಲಿ, ಶ್ರೀ ರಾಮಕೃಷ್ಣ ಪರಮ ಹಂಸರನ್ನಾಗಲೀ ಅಥವಾ ಬೇರೆ ಯಾವದೇ ಮಹಾಸಂತರನ್ನಾಗಲೀ ಪ್ರವಾದಿಗಳೆಂದು ಒಪ್ಪಲಾರರು. ಅಲ್ಲದೆ ದೇವರನ್ನು ಬೇರೆ ಹೆಸರಿನಿಂದ ಕರೆದರೂ ನಂಬಿದರೂ ಒಪ್ಪಲಾರರು. ಅವರದೃಷ್ಟಿ ಯಲ್ಲಿ ಅಲ್ಲಾನನ್ನು ಒಪ್ಪದವರಿಗೆ ಯಾವ ಶಿಕ್ಷೆ ಕೊಟ್ಟ ರೂ ತಪ್ಪಲ್ಲ. ಈಸ್ಲಾಂ ಧರ್ಮವನ್ನು ಜಗತ್ತಿನಾದ್ಯಂತ ಹರಡುವುದು ಅದರ ಗುರಿ. ಆದಕ್ಕಾಗಿ ಅವರು ಹೊಸ ಪ್ರವಾದಿಯ ಬರುವನ್ನು ಕಾಯಬೇಕೆಂದು ಒಬ್ಬ ಭವಿಷ್ಯ ವಾದಿಯ ಸಂತನ ವಾಣಿ ಇದೆ.. ಈ ಧರ್ಮದ ಅನೇಕರು ಅದನ್ನು ನಂಬುತ್ತಾರೆ .

[೧] [೨] [೩]

ನೋಡಿ[ಬದಲಾಯಿಸಿ]

ಸೃಷ್ಟಿ ಮತ್ತು ಪುರಾಣ; ಸೃಷ್ಟಿ ಸೆಮೆಟಿಕ್ ಪುರಾಣ; ಸೃಷ್ಟಿ ಮತ್ತು ಗ್ರೀಕ್ ಪುರಾಣ; ಸೃಷ್ಟಿ ಮತ್ತು ಮಹಾಭಾರತ; ಸೃಷ್ಟಿ ಮತ್ತು ಬೈಬಲ್; ಸೃಷ್ಟಿ ಮತ್ತು ಕುರಾನ್; ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತದಲ್ಲಿ; ಸೃಷ್ಟಿ ಮತ್ತು ವೇದ- ಪುರುಷ ಸೂಕ್ತ ಋಗ್ವೇದ ಯಜುರ್ವೇದ; ಸೃಷ್ಟಿ ಮತ್ತು ಯೋಗ ದರ್ಶನ; ಸೃಷ್ಟಿ ಮತ್ತು ಸಾಂಖ್ಯ ದರ್ಶನ; ಸೃಷ್ಟಿ ಮತ್ತು ವೇದಾಂತ ಅದ್ವೈತ; ಸೃಷ್ಟಿ ಮತ್ತು ಉಪನಿಷತ್; ಸೃಷ್ಟಿ ಮತ್ತು ವಿಜ್ಞಾನ; ಗ್ರೀಕ್ ಪುರಾಣ;ಗ್ರೀಕ್ ಪುರಾಣ ಕಥೆ

ಉಲ್ಲೇಖ[ಬದಲಾಯಿಸಿ]

  1. ದ ಬೈಬಲ್ , ದ ಕುರಾನ್ ಅನ್ಡ್ ದ ಸೈನ್ಸ್ -ಪ್ರಕಾಶಕರು : ಇಸ್ಲಾಮಿ ಸಾಹಿತ್ಯ ಪ್ರಾಕಶನ ಕುಂಬಾರ ಗಲಿ ಕಲುಪುರ್ ಟವರ್ ಅಹೆಮದಾಬಾದ್; ಮುದ್ರಕರು ಬಿಂದೂ ಪ್ರಿಂಟಂಗ್ ಪ್ರೆಸ್ ಮಿಲ್ ರೋಡ್ ಬರೋಡಾ.(ಕಾಪಿ ರೈಟ್ ಹಾಕಿಲ್ಲ)
  2. ಹಳೆಯ ಒಡಂಬಡಿಕೆ
  3. ಯೋಹಾನನ ಸುವಾರ್ತೆ.ಬೈಬಲ್